Tag: ನಂದಿನಿ ಹಾಲು

  • ಹಾಲಿನ ದರ ಲೀ.3 ರೂ. ಏರಿಕೆಗೆ ಕರ್ನಾಟಕ ಹಾಲು ಒಕ್ಕೂಟ ಚಿಂತನೆ?

    ಹಾಲಿನ ದರ ಲೀ.3 ರೂ. ಏರಿಕೆಗೆ ಕರ್ನಾಟಕ ಹಾಲು ಒಕ್ಕೂಟ ಚಿಂತನೆ?

    ಬೆಂಗಳೂರು: ಹಾಲಿನ ದರ ಲೀಟರ್‌ಗೆ 3 ರೂ. ಏರಿಕೆ ಮಾಡಲು ಕರ್ನಾಟಕ ಹಾಲು ಒಕ್ಕೂಟ ಚಿಂತನೆ ಮಾಡಿದೆ ಎಂಬ ಸುದ್ದಿ ಮೂಲಗಳಿಂದ ವರದಿಯಾಗಿದೆ.

    ಪ್ರತಿ ಲೀಟರ್‌ಗೆ 3 ರೂ. ಏರಿಸಲು ನಿರ್ಧಾರ ಮಾಡಲಾಗಿದ್ದು, ಸದ್ಯ ಲೀಟರ್‌ಗೆ 37 ರೂ. ಇದ್ದು, ಅದನ್ನು 40 ರೂ.ಗೆ ಏರಿಕೆ ಮಾಡಲು ಚಿಂತನೆ ನಡೆಸಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: ಪೊಲೀಸರನ್ನು ನೋಡಿ ಮಾಸ್ಕ್ ಹಾಕಬೇಡಿ – ಬೈಕ್ ಸವಾರಗೆ ಮನವಿ ಮಾಡಿದ ಪೇದೆ

    ಕರ್ನಾಟಕ ಹಾಲು ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (2020-21) ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ದರ ಏರಿಕೆ ಬಗ್ಗೆ ಪ್ರಸ್ತಾಪಿಸಿದ್ದರು. ದೇಶದ ಇತರೆ ಜಿಲ್ಲೆಗಳಿಗೆ ಹೋಲಿಸಿದ್ರೆ, ನಂದಿನಿ ಹಾಲಿನ ದರ ರಾಜ್ಯದಲ್ಲಿ ಅತಿ ಕಡಿಮೆ ಇದೆ. ಹಾಗಾಗಿ ಪ್ರತಿ ಲೀಟರ್‌ಗೆ 3 ರೂ. ಏರಿಕೆ ಮಾಡುವಂತೆ ಕೆಎಂಎಫ್ ಅಧ್ಯಕ್ಷರನ್ನು ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮನವಿ ಮಾಡಿದ್ದರು. ಈ ಹಿನ್ನಲೆ, ಹಾಲಿನ ದರ ಏರಿಕೆ ಮಾಡುವ ಕುರಿತು ಸಿಎಂ ಜೊತೆ ಮುಂದಿನ ವಾರ ಚರ್ಚಿಸಿ, ಶಿಫಾರಸ್ಸು ಮಾಡಲು ಬಾಲಚಂದ್ರ ಜಾರಕಿಹೊಳಿ ಮುಂದಾಗಿದ್ದಾರೆ. ಇದನ್ನೂ ಓದಿ: ಕೋವಿಡ್ ಗೆದ್ದ ಒಂದು ತಿಂಗಳ ಮಗು – ಆಸ್ಪತ್ರೆಯಿಂದ ಡಿಸ್ಚಾರ್ಜ್

    ಸಿಎಂ ರಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ರೆ, ರೈತರಿಗೆ ಲಾಭಾಂಶದ ಹಣ ಕೂಡ ಸಿಗಲಿದ್ದು, ಮುಂದಿನ ತಿಂಗಳು ಕೆಎಂಎಫ್‍ನ ಶಿಫಾರಸ್ಸನ್ನು ಸಿಎಂ ಬಹುತೇಕ ಒಪ್ಪುವ ಸಾಧ್ಯತೆ ಇದೆ. ಮುಖ್ಯಮಂತ್ರಿಗಳಿಂದ ದರ ಏರಿಕೆಗೆ ಅನುಮತಿ ಸಿಕ್ಕಿದ್ರೆ, ಅಧಿಕೃತ ದರ ಏರಿಕೆಯ ಬಗ್ಗೆ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

  • ಲಾಕ್‍ಡೌನ್ ನಡುವೆ ವಿದೇಶಕ್ಕೆ ರಫ್ತಾಗ್ತಿದೆ ನಂದಿನಿ ಹಾಲು

    ಲಾಕ್‍ಡೌನ್ ನಡುವೆ ವಿದೇಶಕ್ಕೆ ರಫ್ತಾಗ್ತಿದೆ ನಂದಿನಿ ಹಾಲು

    – ನೆರೆಯ ತೆಲಂಗಾಣ, ಆಂಧ್ರಕ್ಕೂ ಹಾಲು ಪೂರೈಕೆ

    ಚಾಮರಾಜನಗರ: ಕಳೆದ ಮೂರು ವರ್ಷಗಳ ಹಿಂದಷ್ಟೇ ಪ್ರಾರಂಭವಾದ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ ಇದೀಗ ವಿದೇಶಕ್ಕೂ ಹಾಲು ಸರಬರಾಜು ಮಾಡುವ ಮೂಲಕ ಗಣನೀಯ ಸಾಧನೆ ಮಾಡಿದೆ.

    ಲಾಕ್‍ಡೌನ್ ನಡುವೆಯೂ ಚಾಮುಲ್ ನಿಂದ ಭೂತಾನ್ ಗೆ ಹಾಲು ರಫ್ತು ಮಾಡಲಾಗುತ್ತಿದ್ದು, ಪ್ರತಿ ತಿಂಗಳು 2 ರಿಂದ 3 ಲಕ್ಷ ಲೀಟರ್ ಗುಡ್ ಲೈಫ್ ಗೋಲ್ಡ್ ಹೆಸರಿನ ಹಾಲನ್ನು ರಫ್ತು ಮಾಡಲಾಗುತ್ತಿದೆ. ವಿದೇಶವಷ್ಟೇ ಅಲ್ಲ, ಭಾರತೀಯ ಸೇನೆಯ ಅಸ್ಸಾಂ ರೈಫಲ್ಸ್, ನೆರೆಯ ಆಂಧ್ರ ಹಾಗೂ ತೆಲಂಗಾಣ ಸರ್ಕಾರಗಳಿಗೂ ನಂದಿನಿ ಹಾಲು ಪೂರೈಕೆ ಮಾಡುತ್ತಿರುವುದು ಚಾಮುಲ್ ನ ಹೆಗ್ಗಳಿಕೆಯಾಗಿದೆ.

    ಅಸ್ಸಾಂ ರೈಫಲ್ಸ್ ಗೆ ಪ್ರತಿ ತಿಂಗಳು 4 ಲಕ್ಷ ಲೀಟರ್ ಗುಡ್ ಲೈಫ್ ಗೋಲ್ಡ್ ಹಾಲು ಸರಬರಾಜು ಮಾಡಲಾಗುತ್ತಿದೆ. ವಿಜಯವಜ್ರ ಹೆಸರಿನಲ್ಲಿ ಆಂಧ್ರ ಪ್ರದೇಶ ಸರ್ಕಾರಕ್ಕೆ ಪ್ರತಿ ತಿಂಗಳು 12 ಲಕ್ಷ ಲೀಟರ್ ಯು.ಎಚ್.ಟಿ ನಂದಿನಿ ಹಾಲು ಪೂರೈಸಲಾಗುತ್ತಿದೆ. ಆಂಧ್ರ ಪ್ರದೇಶ ಸರ್ಕಾರ ಅಲ್ಲಿನ ಅಂಗನವಾಡಿ ಮಕ್ಕಳು, ಶಾಲಾ ಮಕ್ಕಳು, ಗರ್ಭಿಣಿಯರಿಗೆ ವಿಜಯವಜ್ರ ಹೆಸರಿನ ಯು.ಎಚ್.ಟಿ ಹಾಲನ್ನು ನೀಡುತ್ತಿದ್ದು, ಚಾಮುಲ್ ನಲ್ಲಿ ವಿಜಯವಜ್ರ ಹಾಲು ತಯಾರಾಗುತ್ತಿದೆ.

    ಚಾಮುಲ್ ನಿಂದ ತೆಲಂಗಾಣಗೆ ಪ್ರತಿ ತಿಂಗಳು 4 ಲಕ್ಷ ಲೀಟರ್ ನಂದಿನಿ ಯು.ಎಚ್.ಟಿ ನಂದಿನಿ ಹಾಲನ್ನು ಸರಬರಾಜು ಮಾಡಲಾಗುತ್ತಿದೆ. ತೆಲಂಗಾಣ ಸರ್ಕಾರ ಅಂಗನವಾಡಿ ಮಕ್ಕಳು, ಶಾಲಾ ಮಕ್ಕಳು, ಗರ್ಭಿಣಿಯರಿಗೆ ನಂದಿನಿ ಯು.ಎಚ್.ಟಿ ಹಾಲು ನೀಡುತ್ತಿದೆ. ಚಾಮುಲ್ ನಲ್ಲಿ ನಂದಿನಿ ಗುಡ್ ಲೈಫ್, ನಂದಿನಿ ಗುಡ್ ಲೈಫ್ ಗೋಲ್ಡ್, ನಂದಿನಿ ಸ್ಲಿಮ್, ನಂದಿನಿ ಸ್ಮಾರ್ಟ್, ನಂದಿನಿ ಸುರಕ್ಷಾ, ವಿಜಯವಜ್ರ ಹೆಸರಿನ ಹಾಲು ತಯಾರಿಸಲಾಗುತ್ತಿದೆ.

    ಆರು ಲೇಯರ್ ನ ಟೆಟ್ರಾ ಪ್ಯಾಕೆಟ್ ಗಳಲ್ಲಿ ಪ್ಯಾಕ್ ಮಾಡುವುದರಿಂದ ಇದು ಆರು ತಿಂಗಳ ಕಾಲ ಕೆಡುವುದಿಲ್ಲ. ಅಲ್ಲದೆ ಫ್ರಿಡ್ಜ್ ಅವಶ್ಯಕತೆ ಇಲ್ಲ ಎನ್ನುತ್ತಾರೆ ಚಾಮುಲ್ ಅಧಿಕಾರಿಗಳು.

  • ನಂದಿನಿ ಹಾಲಿನ ದರ ಏರಿಕೆ – ಈಗ ಯಾವ ಹಾಲಿನ ದರ ಎಷ್ಟಿದೆ? ಎಷ್ಟು ಏರಿಕೆ ಆಗುತ್ತೆ?

    ನಂದಿನಿ ಹಾಲಿನ ದರ ಏರಿಕೆ – ಈಗ ಯಾವ ಹಾಲಿನ ದರ ಎಷ್ಟಿದೆ? ಎಷ್ಟು ಏರಿಕೆ ಆಗುತ್ತೆ?

    ಬೆಂಗಳೂರು: ಈರುಳ್ಳಿ, ತರಕಾರಿ, ಗ್ಯಾಸ್, ಪೆಟ್ರೋಲ್ ಆಯ್ತು ಈಗ ಹಾಲು, ಮೊಸರು, ತುಪ್ಪದ ಬೆಲೆ ಏರಿಕೆಯಾಗಿದೆ. ಹೊಸ ವರ್ಷದಂದು ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಿದ್ದು, ಹಾಲು ಮೊಸರಿನ ದರ ಫೆಬ್ರವರಿ ಒಂದರಿಂದಲ್ಲೇ ಏರಿಕೆ ಆಗಲಿದೆ. ನಷ್ಟದ ನೆಪವೊಡ್ಡಿ ರೈತರಿಗೆ ಲಾಭ ನೀಡುತ್ತೇವೆ ಎಂಬ ಉದ್ದೇಶದಿಂದ ಕೆ.ಎಂ.ಎಫ್ ಹಾಲಿನ ದರ ಹೆಚ್ಚಳಕ್ಕೆ ಮುಂದಾಗಿದೆ.

    ಪ್ರಸ್ತುತ ಪ್ರತಿ ಲೀಟರ್ ದರ ಎಷ್ಟಿದೆ?
    ನೀಲಿ ಪ್ಯಾಕೆಟ್ – 35 ರೂ.
    ಹಸಿರು ಪ್ಯಾಕೆಟ್ – 40 ರೂ.
    ಸ್ಪೆಷಲ್ ಪ್ಯಾಕೆಟ್ – 41 ರೂ.
    ಶುಭಂ ಪ್ಯಾಕೆಟ್- 41 ರೂ.

    ಫೆ. 1 ರಿಂದ 2 ರೂ ದರ ಏರಿಕೆ
    ನೀಲಿ ಪ್ಯಾಕೆಟ್ – 37 ರೂ.
    ಹಸಿರು ಪ್ಯಾಕೆಟ್ – 42 ರೂ.
    ಸ್ಪೇಷಲ್ ಪ್ಯಾಕೆಟ್ – 43 ರೂ.
    ಶುಭಂ ಪ್ಯಾಕೆಟ್ – 43 ರೂ.

    ಹಾಲು ಸೇರಿದಂತೆ ಹಾಲಿನ ಉತ್ಪನಗಳ ದರ ಪರಿಷ್ಕರಣೆಗೆ ಕೆಎಂಎಫ್ ಮುಖ್ಯಮಂತ್ರಿಗಳ ಗಮನಕ್ಕೆ ತಂದಿತ್ತು. ಇವತ್ತು ಅವರ ಮೌಖಿಕ ಅನುಮೋದನೆ ನೀಡಿದ್ದಾರೆ. 2 ರೂ. ಏರಿಕೆಯಿಂದ ಬರುವ ಹಣದಲ್ಲಿ ಒಂದು ರೂ. ರೈತರಿಗೆ ಉಳಿದ ಒಂದು ರೂ ಆಯಾ ಜಿಲ್ಲಾ ಹಾಲು ಒಕ್ಕೂಟಗಳಿಗೆ ನೀಡಲಾಗುತ್ತೆ. ಒಂದು ರೂ. ನಲ್ಲಿ 40 ಪೈಸೆ ಹಸುಗಳಿಗೆ ಇನ್ಶುರೆನ್ಸ್, 40 ಪೈಸೆ ಹಾಲು ಮಾರಾಟಗಾರರ ಏಜೆಂಟ್ ಗಳಿಗೆ ಕಮಿಷನ್ ನೀಡಲಿದ್ದು, ಉಳಿದ 20 ಪೈಸೆ ಒಕ್ಕೂಟಗಳ ಸೆಕ್ರೇಟರಿಗಳಿಗೆ ಕಮಿಷನ್ ನೀಡಲು ಕೆಎಂಎಫ್ ನಿರ್ಧಾರ ಮಾಡಿದೆ.

    ರೈತರಿಗೆ ಅನುಕೂಲವಾಗೋ ನಿಟ್ಟಿನಲ್ಲಿ ದರವನ್ನು ವಿಗಂಡನೆ ಮಾಡಿದ್ದೇವೆ. 2 ರೂ. ಗಳಲ್ಲಿ 1 ರೂ. 40 ಪೈಸೆ ರೈತರಿಗೆ ಸಲ್ಲುತ್ತದೆ. ಕಳೆದ ಮೂರು ವರ್ಷಗಳಿಂದ ನಂದಿನಿ ಹಾಲಿನ ದರವನ್ನು ಏರಿಕೆ ಮಾಡಿಲ್ಲ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

    ನಂದಿನಿ ಹಾಲಿನದರ ಏರಕೆ ಮಾಡಿರೋದ್ದನ್ನು ರೈತ ಮುಖಂಡ ಕೊಡಿಹಳ್ಳಿ ಚಂದ್ರಶೇಖರ್ ಸ್ವಾಗತಿಸಿದ್ದಾರೆ. ಹಾಲಿನದರ 100 ರೂ ಮಾಡಿದ್ರು ಗ್ರಾಹಕರು ಹೊರೆ ಎಂದು ಪರಿಗಣಿಸಬಾರದು. ರೈತರಿಗೆ ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಾಗಿ ಲಾಭವೇ ಇಲ್ಲದಂತಾಗಿದೆ. ಕೇಂದ್ರ ಸರ್ಕಾರದ ನೌಕರರಿಗೆ ಶೇ.23 ರಷ್ಟು ವೇತನ ಹೆಚ್ಚಿಸಿದ್ರು. ಇದರಿಂದ ದೇಶದ ಖಜಾನೆಗೆ ತೊಂದರೆಯಾಗಿದೆ. ಈ ಬಗ್ಗೆ ಜನ ಕೇಳುವುದಿಲ್ಲ. ಹಾಲು ತರಕಾರಿ ಹಣ್ಣು ಹಂಪಲು ದರ ಏರಿಕೆಯಾದರೆ ಜನ ಕೇಳುತ್ತಾರೆ. ಇದರಿಂದ ಗ್ರಾಹಕರಿಗೇನು ಅಷ್ಟು ಹೊರೆಯಾಗಲ್ಲ. ಇನ್ನೂ ಹೆಚ್ಚಿನ ಅನುದಾನ ರೈತರಿಗೆ ನೀಡಬೇಕು ಅಂತಾ ಚಂದ್ರಶೇಖರ್ ಹೇಳಿದ್ದಾರೆ.

  • ನಂದಿನಿ ಹಾಲು, ಮೊಸರಿನ ಬೆಲೆ ಏರಿಕೆ – ರೈತರಿಗೆ ಸ್ವೀಟ್ ಗ್ರಾಹಕರಿಗೆ ಶಾಕ್ ಕೊಟ್ಟ ಸರ್ಕಾರ

    ನಂದಿನಿ ಹಾಲು, ಮೊಸರಿನ ಬೆಲೆ ಏರಿಕೆ – ರೈತರಿಗೆ ಸ್ವೀಟ್ ಗ್ರಾಹಕರಿಗೆ ಶಾಕ್ ಕೊಟ್ಟ ಸರ್ಕಾರ

    ಬೆಂಗಳೂರು: ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಮಾಡಲು ಕರ್ನಾಟಕ ಹಾಲು ಒಕ್ಕೂಟ (ಕೆ.ಎಂ.ಎಫ್) ನಿರ್ಧಾರ ಮಾಡಿದೆ.

    ಪ್ರತಿ ಲೀಟರಿಗೆ ಎರಡು ರೂ. ಏರಿಕೆ ಮಾಡಲು ಕೆ.ಎಂ.ಎಫ್ ನಿರ್ಧಾರ ಮಾಡಿದೆ. ಹೊಸ ದರ ಫೆಬ್ರವರಿ 1 ರಿಂದ ಜಾರಿಯಾಗಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಇದರೊಂದಿಗೆ 2 ರೂ. ದರ ಏರಿಕೆಯಿಂದ ಬರುವ ಹಣದಲ್ಲಿ 1 ರೂ. ರೈತರಿಗೆ ನೀಡಲು ಸರ್ಕಾರ ತೀರ್ಮಾನ ಮಾಡಿದ್ದು, ರಾಜ್ಯ ರೈತರಿಗೆ ಶುಭ ಸುದ್ದಿ ಕೊಟ್ಟಿದೆ.

    ಬೆಲೆ ಏರಿಕೆ ಇಂದ ಬರುವ 2 ರೂ. ಲಾಭದಲ್ಲಿ 1 ರೂ. ರೈತರಿಗೆ ಕೊಟ್ಟು, ಉಳಿದ ಒಂದು ರೂ. ಅನ್ನು ಆಯಾ ಜಿಲ್ಲಾ ಹಾಲು ಒಕ್ಕೂಟಗಳಿಗೆ ನೀಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ದರ ಏರಿಕೆಯಿಂದ ಲಭಿಸಿದ 1 ರೂಪಾಯಿಯಲ್ಲಿ 40 ಪೈಸೆ ಹಸುಗಳಿಗೆ ಇನ್ಶುರೆನ್ಸ್, 40 ಪೈಸೆ ಹಾಲು ಮಾರಾಟಗಾರರ ಏಜೆಂಟ್‍ಗಳಿಗೆ ಕಮಿಷನ್ ಮತ್ತು ಉಳಿದ 20 ಪೈಸೆ ಒಕ್ಕೂಟಗಳ ಸೆಕ್ರೇಟರಿಗಳಿಗೆ ಕಮಿಷನ್ ನೀಡಲು ಕೆ.ಎಂ.ಎಫ್ ನಿರ್ಧಾರ ಮಾಡಿದೆ ಎನ್ನಲಾಗಿದೆ.

    ಬೆಲೆ ಏರಿಕೆ ವಿಚಾರವಾಗಿ ಇತ್ತೀಚೆಗೆ ಕೆ.ಎಂ.ಎಫ್ ಸಭೆ ನಡೆಸಿದ್ದು, ಈ ಸಭೆಯಲ್ಲಿ ನಂದಿನಿ ಹಾಲು ಮತ್ತು ಮೊಸರಿನ ಬೆಲೆಯನ್ನು ಮೂರು ರೂ. ಜಾಸ್ತಿ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿತ್ತು. ಆದರೆ ಮೂರು ರೂ. ಹೆಚ್ಚಳ ಮಾಡಲು ಒಪ್ಪದ ಸರ್ಕಾರ ಎರಡು ರೂ. ಏರಿಕೆ ಮಾಡಲು ಹಸಿರು ನಿಶಾನೆ ತೋರಿದೆ.

  • ಶೀಘ್ರವೇ ನಂದಿನಿ ಹಾಲಿನ ದರ ಏರಿಕೆ

    ಶೀಘ್ರವೇ ನಂದಿನಿ ಹಾಲಿನ ದರ ಏರಿಕೆ

    ಬೆಂಗಳೂರು: ಕೆಲವೇ ದಿನಗಳಲ್ಲಿ ನಂದಿನಿ ಹಾಲು-ಮೊಸರು ದರದಲ್ಲಿ 2 ರೂ. ಏರಿಯಾಗುವ ಸಾಧ್ಯತೆ ಇದೆ. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಇವತ್ತು ಸಭೆ ನಡೆಸಿದ್ದು, ದರ ಹೆಚ್ಚಳಕ್ಕೆ ಒಮ್ಮತದ ಒಪ್ಪಿಗೆ ಸಿಕ್ಕಿದೆ. ಇನ್ನೆರಡು ದಿನಗಳಲ್ಲಿ ಸಿಎಂ ಒಪ್ಪಿಗೆ ಪಡೆದು ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

    ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮೊದಲೇ ತತ್ತರಿಸಿರೋ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ನಷ್ಟದ ನೆಪವೊಡ್ಡಿ, ರೈತರಿಗೆ ಲಾಭ ನೀಡುತ್ತೇವೆ ಎಂಬ ಉದ್ದೇಶದಿಂದ ಹಾಲಿನ ದರ ಹೆಚ್ಚಳಕ್ಕೆ ಕೆಎಂಎಫ್ ಮುಂದಾಗಿದೆ.

    ಖಾಸಗಿ ಡೈರಿ ಹಾಲಿನ ದರಕ್ಕೆ ಹೊಲಿಕೆ ಮಾಡಿದರೆ ನಂದಿನಿ ದರ ಕಡಿಮೆ ಇದೆ. ಮೂರು ವರ್ಷಗಳಿಂದ ಹಾಲಿನ ದರ ಏರಿಕೆಯಾಗಿಲ್ಲ. ಈಗಾಗಿ ಎಲ್ಲಾ ಒಕ್ಕೂಟದವರು ಹಾಲಿನ ದರ ಏರಿಕೆ ಮಾಡುವಂತೆ ತಿಳಿಸಿದ್ದಾರೆ. ನಂದಿನ ಹಾಲು, ಮೊಸರು ಸೇರಿದಂತೆ ನಂದಿನಿ ಹಾಲಿನ ಉತ್ಪನ್ನಗಳ ಹಾಲಿನ ದರ ಏರಿಕೆಯಾಗುವುದು ಬಹುತೇಕ ಖಚಿತ ಎಂಬ ಮಾಹಿತಿ ಲಭಿಸಿದೆ.

    ದರ ಏರಿಕೆ ಕುರಿತು ಕೆಎಂಎಫ್ ಇಂದು ಡೈರಿ ಸರ್ಕಲ್ ನಲ್ಲಿರುವ ಕೆಎಂಎಫ್ ಕಚೇರಿಯಲ್ಲಿ ಹಾಲು ಮಹಾಮಂಡಲದ ನಿರ್ದೇಶಕರ ಸಭೆ ನಡೆಯಿತು. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಲ್ಲಾ ನಿರ್ದೇಶಕರು ಹಾಲಿನ ದರ ಹೆಚ್ಚಳಕ್ಕೆ ಅಧ್ಯಕ್ಷರಿಗೆ ಒಪ್ಪಿಗೆ ಸೂಚಿಸಿದ್ದಾರೆ. ದರ ಹೆಚ್ಚಳದಲ್ಲಿ ಎಷ್ಟು ಹೆಚ್ಚಳ ಮಾಡಬೇಕು ಎಂಬುದರ ಬಗ್ಗೆ ಅಧ್ಯಕ್ಷರಿಗೆ ನಿರ್ಣಯ ಮಾಡಲು ತಿಳಿಸಿದ್ದಾರೆ.

    ಈ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಇನ್ನೆರೆಡು ದಿನಗಳಲ್ಲಿ ಅಂತಿಮ ಚರ್ಚೆ ಮಾಡಿದ ಬಳಿಕ ನಿಖರ ದರ ಹೆಚ್ಚಳದ ಬಗ್ಗೆ ತಿಳಿಸುವುದಾಗಿ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

  • ಏಪ್ರಿಲ್ ಒಂದರಿಂದ ನಂದಿನಿ ಹಾಲು, ಮೊಸರು ದುಬಾರಿ

    ಏಪ್ರಿಲ್ ಒಂದರಿಂದ ನಂದಿನಿ ಹಾಲು, ಮೊಸರು ದುಬಾರಿ

    ಬೆಂಗಳೂರು: ಏಪ್ರಿಲ್ ಒಂದರಿಂದ ನಂದಿನಿ ಹಾಲು, ಮೊಸರು ದುಬಾರಿಯಾಗಲಿದೆ. ಪ್ರತಿ ಲೀಟರ್ ಹಾಲು, ಮೊಸರಿಗೆ ಎರಡು ರೂಪಾಯಿ ಏರಿಕೆಯಾಗಿದೆ.

    ಬೆಂಗಳೂರಿನ ಕೆಎಂಎಫ್ ಕಚೇರಿಯಲ್ಲಿ ನಡೆದ ಸಭೆ ದರ ಏರಿಕೆಯ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಈ ಏರಿಕೆಗೆ ಸರ್ಕಾರ ಅಸ್ತು ಎಂದಿದೆ. ಒಂದು ಲೀಟರ್ ಹಾಲಿಗೆ 34 ರೂ. ಇತ್ತು. ಈಗ 36 ರೂ. ಆಗಿದೆ. 38 ರೂ. ಇದ್ದ ಮೊಸರಿನ ದರ 40 ರೂ. ಏರಿಕೆಯಾಗಿದೆ.

    2016ರ ಜನವರಿಯಲ್ಲಿ ಪ್ರತಿ ಲೀಟರ್ ಹಾಲಿನ ಬೆಲೆ 4 ರೂ. ಏರಿಕೆಯಾಗಿದ್ದರೆ, ಮೊಸರಿನ ಬೆಲೆ 2 ರೂ. ಏರಿಕೆಯಾಗಿತ್ತು.

    ಇದನ್ನೂ ಓದಿ: ಯುಗಾದಿ ಬೆನ್ನಲ್ಲೆ ಕರೆಂಟ್ ಶಾಕ್- ಏಪ್ರಿಲ್ 1ರಿಂದ ವಿದ್ಯುತ್ ದರ ಹೆಚ್ಚಳ