Tag: ನಂದಿನಿ ಹಾಲು

  • ಹಾಲಿನ ದರ ಏರಿಕೆ ಬಗ್ಗೆ ನನಗೆ ಗೊತ್ತಿಲ್ಲ: ಸಿಎಂ ಸಿದ್ದರಾಮಯ್ಯ

    ಹಾಲಿನ ದರ ಏರಿಕೆ ಬಗ್ಗೆ ನನಗೆ ಗೊತ್ತಿಲ್ಲ: ಸಿಎಂ ಸಿದ್ದರಾಮಯ್ಯ

    ಬೆಂಗಳೂರು: KMF ನಿಂದ ಹಾಲಿನ ದರ ಏರಿಕೆ (Nandini Milk Price Hike) ಮಾಡಿರುವ ವಿಚಾರ ನನ್ನ ಗಮನಕ್ಕೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.

    ಕೆಎಂಎಫ್‌ನಿಂದ ಹಾಲಿನ ದರ ಏರಿಕೆ ವಿಚಾರವಾಗಿ ಗೃಹ ಕಚೇರಿ ಕೃಷ್ಣದಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ, ಹಾಲಿನ ದರ ಏರಿಕೆ ಬಗ್ಗೆ ನನಗೆ ಗೊತ್ತಿಲ್ಲ. KMF ಅವರ ಜೊತೆ ಮಾತಾಡ್ತೀನಿ‌. ಹಾಲಿನ ದರ ಹೆಚ್ಚಳ ಮಾಡೋದು ಸರ್ಕಾರ ಅಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಗ್ರಾಹಕರಿಗೆ ಕೆಎಂಎಫ್‌ ಶಾಕ್‌ – ನಂದಿನಿ ಹಾಲಿನ ದರ ಹೆಚ್ಚಳ – ಯಾವುದಕ್ಕೆ ಎಷ್ಟು?

    ಕೆಎಂಎಫ್‌ನವರು ಬೇರೆ ರಾಜ್ಯದ ದರ ನೋಡಿಕೊಂಡು ದರ ಹೆಚ್ಚಳ ಮಾಡ್ತಾರೆ. ಬೇರೆ ರಾಜ್ಯದ ದರಕ್ಕೆ ಹೋಲಿಗೆ ಮಾಡಿದರೆ ನಮ್ಮಲ್ಲಿ ಕಡಿಮೆ ಇದೆ. ಆದರೂ ದರ ಏರಿಕೆ ಮಾಡಿರೋ ಬಗ್ಗೆ ನನಗೆ ಗೊತ್ತಿಲ್ಲ. ನಾನು KMF ಅಧ್ಯಕ್ಷರ ಜೊತೆ ಮಾತಾಡ್ತೀನಿ ಎಂದು ಮಾಹಿತಿ ನೀಡಿದರು.

    ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದ (KMF) ನಂದಿನಿ ಹಾಲಿನ ದರ ಹೆಚ್ಚಿಸಲಾಗಿದೆ. ಹಾಲಿನ ದರ ಪ್ರತಿ ಲೀಟರ್‌ಗೆ 2.10 ರೂ. ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ.

  • ಗ್ರಾಹಕರಿಗೆ ಕೆಎಂಎಫ್‌ ಶಾಕ್‌ – ನಂದಿನಿ ಹಾಲಿನ ದರ ಹೆಚ್ಚಳ – ಯಾವುದಕ್ಕೆ ಎಷ್ಟು?

    ಗ್ರಾಹಕರಿಗೆ ಕೆಎಂಎಫ್‌ ಶಾಕ್‌ – ನಂದಿನಿ ಹಾಲಿನ ದರ ಹೆಚ್ಚಳ – ಯಾವುದಕ್ಕೆ ಎಷ್ಟು?

    ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು (KMF) ನಂದಿನಿ ಹಾಲಿನ ದರ ಹೆಚ್ಚಿಸಿದೆ (Nandini Milk Price Hike). ಪ್ರತಿ ಲೀಟರ್‌ ಹಾಲಿನ ದರ 2 ರೂ. ಹೆಚ್ಚಿಸಿದೆ ಎಂದು ಅಧ್ಯಕ್ಷ ಭೀಮನಾಯ್ಕ್ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ಲೀಟರ್‌ ಪ್ಯಾಕೆಟ್‌ ಹಾಲಿನ ದರವನ್ನ 2 ರೂ. ಹಾಗೂ ಅರ್ಧ ಲೀಟರ್‌ ಹಾಲಿನ ದರ 22 ರೂ. ನಿಂದ 24 ರೂ.ಗೆ ಹೆಚ್ಚಿಸಲಾಗಿದೆ. ಆದ್ರೆ ಗ್ರಾಹಕರಿಗೆ ಸಿಗುತ್ತಿದ್ದ 1,000 ಎಂಎಲ್‌ (1 ಲೀಟರ್)‌ ಪ್ಯಾಕೆಟ್‌ ಹಾಲು ಇನ್ಮುಂದೆ 1,050 ಎಂಎಲ್‌ ಹಾಗೂ ಅರ್ಧ ಲೀಟರ್‌ ಪ್ಯಾಕೆಟ್‌ ಹಾಲು 550 ಎಂಎಲ್‌ ಹೆಚ್ಚುವರಿ ಸಿಗಲಿದೆ. ಪರಿಷ್ಕೃತ ದರ ನಾಳೆಯಿಂದ (ಜೂ.26) ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

    ಯಾವುದಕ್ಕೆ ಎಷ್ಟು ದರ ಹೆಚ್ಚಳ?
    ಟೋನ್ಡ್‌ ಹಾಲು
    550 ಎಂಎಲ್‌ – 24 ರೂ.
    1050 ಎಂಎಲ್‌ – 44 ರೂ.

    ಹೋಮೋಜಿನೈಸ್ಡ್‌ ಟೋನ್ಡ್‌ ಹಾಲು
    550 ಎಂಎಲ್‌ – 24 ರೂ.
    1050 ಎಂಎಲ್‌ – 45 ರೂ.

    ಹೋಮೋಜಿನೈಸ್ಡ್‌ ಹಸುವಿನ ಹಾಲು
    550 ಎಂಎಲ್‌ – 26 ರೂ.
    1050 ಎಂಎಲ್‌ – 48 ರೂ.

    ಸ್ಪೆಷಲ್‌ ಹಾಲು
    550 ಎಂಎಲ್‌ – 27 ರೂ.
    1050 ಎಂಎಲ್‌ – 50 ರೂ.

    ಶುಭಂ ಹಾಲು
    550 ಎಂಎಲ್‌ – 27 ರೂ.
    1050 ಎಂಎಲ್‌ – 50 ರೂ.

    ಸಮೃದ್ಧಿ ಹಾಲು
    550 ಎಂಎಲ್‌ – 28 ರೂ.
    1050 ಎಂಎಲ್‌ – 53 ರೂ.

    ಹೋಮೋಜಿನೈಸ್ಡ್‌ ಶುಭಂ ಹಾಲು
    550 ಎಂಎಲ್‌ – 27 ರೂ.
    1050 ಎಂಎಲ್‌ – 51 ರೂ.

    ಸತೃಪ್ತಿ ಹಾಲು
    550 ಎಂಎಲ್‌ – 30 ರೂ.
    1050 ಎಂಎಲ್‌ – 57 ರೂ.

    ಶುಭಂ ಗೋಲ್ಡ್‌ ಹಾಲು
    550 ಎಂಎಲ್‌ – 28 ರೂ.
    1050 ಎಂಎಲ್‌ – 51 ರೂ.

    ಡಬಲ್‌ ಟೋನ್ಡ್‌ ಹಾಲು
    550 ಎಂಎಲ್‌ – 23 ರೂ.
    1050 ಎಂಎಲ್‌ – 43 ರೂ.

  • ಮಂಗಳವಾರದಿಂದ ನಂದಿನಿ ಹಾಲು, ಮೊಸರಿನ ದರದಲ್ಲಿ 3 ರೂ. ಹೆಚ್ಚಳ

    ಮಂಗಳವಾರದಿಂದ ನಂದಿನಿ ಹಾಲು, ಮೊಸರಿನ ದರದಲ್ಲಿ 3 ರೂ. ಹೆಚ್ಚಳ

    – ಹೋಟೆಲ್‍ನಲ್ಲಿ ತಿಂಡಿ ತಿನಿಸು ಕೂಡ ದುಬಾರಿ

    ಬೆಂಗಳೂರು: ಮಂಗಳವಾರ ದುನಿಯಾ ಬದಲಾಗಲಿದೆ. ದರ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಸಾಮಾನ್ಯ ಜನತೆಗೆ ಮತ್ತೆ ಹಲವು ರೂಪಗಳಲ್ಲಿ ಬರೆ ಎಳೆಯಲಾಗುತ್ತದೆ. ಜೊತೆಗೆ ಒಂದಿಷ್ಟು ರೂಲ್ಸ್ ಅಂಡ್ ರೆಗ್ಯುಲೆಷನ್ಸ್ ಕೂಡ ಬದಲಾಗ್ತಿವೆ. ಜೊತೆಗೆ ಒಂದಿಷ್ಟು ರಿಲೀಫ್‍ಗಳು ಕೂಡ ಇರಲಿವೆ.
    ಹಾಲಿನ ದರ ಏರಿಕೆ: ಎಲ್ಲಾ ಮಾದರಿಯ ನಂದಿನಿ ಹಾಲಿನ (Nandini Milk) ಬೆಲೆ ಲೀಟರ್ ಗೆ 3 ರೂ. ಹೆಚ್ಚಳವಾಗಲಿದೆ. ನಂದಿನಿ ಮೊಸರಿನ ಬೆಲೆ 3 ರೂ., ನಂದಿನಿ ಮಜ್ಜಿಗೆ (200 ಎಂಎಲ್) ಬೆಲೆಯಲ್ಲಿ 1 ರೂ. ಹೆಚ್ಚಳವಾಗಲಿದೆ. ಇತ್ತ ಹೋಟೆಲ್ ತಿನಿಸಿನ ಬೆಲೆಯಲ್ಲಿಯೂ ಏರಿಕೆಯಾಗುವ ಸಂಭವವಿದೆ. ಕಾಫಿ-ಟೀ ಬೆಲೆ 2ರಿಂದ 3 ರೂ. ಹಾಗೂ ಬೆಲೆಯಲ್ಲಿ 10ರೂ.ವರೆಗೂ ಹೆಚ್ಚಳವಾಗುವ ಸಾಧ್ಯತೆಗಳಿವೆ.
    ದಶಪಥ ಸವಾರರೇ ಗಮನಿಸಿ: ನಾಳೆಯಿಂದ ದ್ವಿಚಕ್ರ ವಾಹನ ಸಂಚಾರಕ್ಕೂ ಅವಕಾಶವಿಲ್ಲ. ಆಟೋ, ಟ್ರ್ಯಾಕ್ಟರ್, ಹೈಡ್ರಾಲಿಕ್ ಟ್ರಾಲಿಗೂ ನಿರ್ಬಂಧ ಹೇರಲಾಗಿದೆ. ನಿಧಾನಗತಿಯ ವಾಹನಗಳ ಸಂಚಾರಕ್ಕೆ ನಿಷೇಧಿಸಲಾಗಿದೆ.  ಇದನ್ನೂ ಓದಿ: ಮತ್ತೆ ಟೊಮೆಟೋ ದರ ಭಾರೀ ಏರಿಕೆ – ಗ್ರಾಹಕರು ಕಂಗಾಲು
    ಆಗಸ್ಟ್ ನಲ್ಲಿಯೇ ಗ್ಯಾರಂಟಿ ಭಾಗ್ಯ: ರಾಜ್ಯದ ಜನತೆಗೆ ಗೃಹಜ್ಯೋತಿ ಯೋಜನೆ ಸಿಗಲಿದೆ. 200 ಯೂನಿಟ್ ಒಳಗೆ ಕರೆಂಟ್ ಬಳಸುವವರಿಗೆ ಜೀರೋ ಬಿಲ್ ನೀಡಲಾಗುವುದು. ಕಳೆದ ವರ್ಷದ ಸರಾಸರಿ ಬಳಕೆಯನ್ನು ಇದು ಆಧರಿಸಿರುತ್ತದೆ. ಇದೇ ತಿಂಗಳು ಮನೆಯೊಡತಿ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಹಾಕಲಾಗುತ್ತದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Nandini Milk: ನಂದಿನಿ ಹಾಲಿನ ದರ 3 ರೂ. ಹೆಚ್ಚಳ

    Nandini Milk: ನಂದಿನಿ ಹಾಲಿನ ದರ 3 ರೂ. ಹೆಚ್ಚಳ

    ಬೆಂಗಳೂರು: ನಂದಿನಿ ಹಾಲಿನ (Nandini Milk) ದರವನ್ನು ಪ್ರತಿ ಲೀಟರ್‌ಗೆ 3 ರೂ. ಹೆಚ್ಚಳ ಮಾಡುವ ಕೆಎಂಎಫ್‌ (KMF) ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.

    ಶುಕ್ರವಾರ ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್‌ ಅಧ್ಯಕ್ಷರ ಸಭೆ ನಡೆಸಲಾಯಿತು. ಈ ವೇಳೆ ಹಾಲಿನ ದರ ಹೆಚ್ಚಳಕ್ಕೆ ಸರ್ಕಾರ ಒಪ್ಪಿಕೊಂಡಿದೆ. ಆಗಸ್ಟ್ 1 ರಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಶಾಸಕತ್ವ ಅಸಿಂಧು ಕೋರಿ ಅರ್ಜಿ – ಜು.28 ಕ್ಕೆ ಹೈಕೋರ್ಟ್‌ನಿಂದ ವಿಚಾರಣೆ

    KMF ಪ್ರತಿ ಲೀಟರ್‌ ಹಾಲಿನ ದರದಲ್ಲಿ 5 ರೂ. ಹೆಚ್ಚಳ ಮಾಡುವಂತೆ ಪ್ರಸ್ತಾವ ಸಲ್ಲಿಸಿತ್ತು. ಕೊನೆಗೆ ಸರ್ಕಾರ 3 ರೂ. ಹೆಚ್ಚಳಕ್ಕೆ ಒಪ್ಪಿಗೆ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಹೆಚ್‌.ಡಿ.ರೇವಣ್ಣ, 5 ರೂ. ದರ ಏರಿಕೆಗೆ ಪ್ರಸ್ತಾಪವಿತ್ತು. 3 ರೂ. ದರ ಹೆಚ್ಚಳಕ್ಕೆ ಸಿಎಂ ಒಪ್ಪಿಗೆ ನೀಡಿದ್ದಾರೆ. ರೈತರಿಂದ ಖರೀದಿ ಮಾಡುವ ಹಾಲಿಗೆ ಪ್ರತಿ ಲೀಟರ್‌ಗೆ 3 ರೂ. ದರ ಹೆಚ್ಚಳವಾದಂತಾಗಿದೆ ಎಂದು ತಿಳಿಸಿದ್ದಾರೆ.

    ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್‌ ಪ್ರಸಾದ್‌, ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ಸಲ್ಮಾ ಫಾಹಿಂ, ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಜಗದೀಶ್‌, ಕೆಎಂಎಫ್ ನಿರ್ದೇಶಕ ಹೆಚ್.ಡಿ.ರೇವಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮಾಲೂರು ಶಾಸಕ ನಂಜೇಗೌಡ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಕುರುಡನ ಹೆಗಲ ಮೇಲೆ ಕುಂಟನ ಸವಾರಿಯಂತಿದೆ ಜೆಡಿಎಸ್‌-ಬಿಜೆಪಿ ಹೊಂದಾಣಿಕೆ: ಕಾಲೆಳೆದ ಕಾಂಗ್ರೆಸ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೇರಳದಲ್ಲಿ ಕರ್ನಾಟಕದ ನಂದಿನಿ ಹಾಲು ಮಾರಾಟಕ್ಕೆ ಕೇರಳ ಹಾಲು ಒಕ್ಕೂಟ ವಿರೋಧ

    ಕೇರಳದಲ್ಲಿ ಕರ್ನಾಟಕದ ನಂದಿನಿ ಹಾಲು ಮಾರಾಟಕ್ಕೆ ಕೇರಳ ಹಾಲು ಒಕ್ಕೂಟ ವಿರೋಧ

    ತಿರುವನಂತಪುರಂ: ಕೇರಳದಲ್ಲಿ (Kerala) ಕರ್ನಾಟಕದ ನಂದಿನಿ ಹಾಲು (Nandini Milk) ಉತ್ಪನ್ನಗಳ ಮಾರಾಟಕ್ಕೆ ಮಿಲ್ಮ ಎಂದೇ ಹೆಸರಾಗಿರುವ ಕೇರಳ ಹಾಲು ಒಕ್ಕೂಟ (Kerala Milk Federation) ವಿರೋಧ ವ್ಯಕ್ತಪಡಿಸಿದೆ.

    ಮಿಲ್ಮಾ (Milma) ಮಲಬಾರ್ ವಲಯ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಎಸ್.ಮಣಿ ಮಾತನಾಡಿ, ಭಾರತೀಯ ರಾಷ್ಟ್ರೀಯ ಸಹಕಾರಿ ಡೈರಿ ಫೆಡರೇಶನ್‌ನ ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗುಜರಾತ್‍ಗೆ Biparjoy Cyclone ಕಂಟಕ – 150 ಕಿ.ಮೀ ವೇಗದಲ್ಲಿ ಗಾಳಿ ಮಳೆ

    ದೇಶದಲ್ಲಿರುವ ಹಾಲು ಒಕ್ಕೂಟಗಳು ಇಷ್ಟು ದಿನ ಅನುಸರಿಸಿಕೊಂಡು ಬಂದಿರುವ ಕೆಲವು ನಿಯಮಗಳನ್ನು ಮುರಿಯುವುದು ನೈತಿಕವಾಗಿ ಸರಿಯಲ್ಲ. ಕರ್ನಾಟಕ ಕಾರ್ಪೊರೇಟ್ ಹಾಲು ಉತ್ಪಾದಕರು ಕೇರಳದಲ್ಲಿ ತನ್ನ ಮಳಿಗೆಗಳನ್ನು ತೆರೆಯುವ ನಿರ್ಧಾರದ ವಿರುದ್ಧ ಪತ್ರವನ್ನು ನೀಡಿದ್ದರೂ, ಅವರು ಅದನ್ನು ನಿರ್ಲಕ್ಷಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಾದ ಅಮುಲ್-ನಂದಿನಿ ಸಮಸ್ಯೆಗೂ ಮುನ್ನವೇ ಕರ್ನಾಟಕ ಕಾರ್ಪೊರೇಟ್ ಹಾಲು ಉತ್ಪಾದಕರು ಕೇರಳದಲ್ಲಿ ವ್ಯಾಪಾರ ಮಾಡಲು ನಿರ್ಧರಿಸಿದ್ದರು. ಕರ್ನಾಟಕದಲ್ಲಿ ಉದ್ಯಮ ಆರಂಭಿಸುವ ಅಮುಲ್ ನಿರ್ಧಾರ ತಪ್ಪು. ಆದರೆ ಅದನ್ನು ವಿರೋಧಿಸುವ ನೈತಿಕ ಹಕ್ಕು ನಂದಿನಿ ಅವರಿಗೆ ಇಲ್ಲ ಎಂದು ಮಣಿ ಹೇಳಿದ್ದಾರೆ. ಇದನ್ನೂ ಓದಿ: ಮೋದಿ, ಬಿಜೆಪಿ ನಾಯಕರು ಬಡವರಿಗೆ ಆಹಾರ ಧಾನ್ಯ ನಿರಾಕರಿಸುವಷ್ಟು ಕುರುಡರಾಗಬಹುದೇ?: ಸುರ್ಜೆವಾಲ ವಾಗ್ದಾಳಿ

    ಹಾಲು ಒಕ್ಕೂಟಗಳು ಕೇವಲ ವಾಣಿಜ್ಯ ಹಿತಾಸಕ್ತಿಗಳಿಗಾಗಿ ಮಾತ್ರವಲ್ಲದೆ ತಮ್ಮ ರಾಜ್ಯದಲ್ಲಿ ಹೈನುಗಾರಿಕೆ ಮಾಡುವವರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು. ಒಂದು ರಾಜ್ಯದ ಸಹಕಾರಿ ಸಂಸ್ಥೆಯು ಮತ್ತೊಂದು ರಾಜ್ಯದ ಸಹಕಾರಿ ಸಂಸ್ಥೆಯ ಮಾರುಕಟ್ಟೆಯಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವುದು ಸಹಕಾರದ ತತ್ವಗಳು ಮತ್ತು ಮೂಲಭೂತ ಮೌಲ್ಯಗಳಿಗೆ ವಿರುದ್ಧ ಎಂದು ಎಚ್ಚರಿಸಿದ್ದಾರೆ.

    ಮಿಲ್ಮಾ ಮುಖ್ಯವಾಗಿ ಕರ್ನಾಟಕದ ನಂದಿನಿ ಮತ್ತು ತಮಿಳುನಾಡಿನ ಆವಿನ್ ಮೇಲೆ ಹಬ್ಬದ ಋತುಗಳಲ್ಲಿ ಮತ್ತು ಕೇರಳದಲ್ಲಿ ಕಡಿಮೆ ಹಾಲು ಉತ್ಪಾದನೆ ಸಂದರ್ಭದಲ್ಲಿ ಅವಲಂಬಿತವಾಗಿದೆ. ಹೀಗಾಗಿ ನಂದಿನಿಯ ಉತ್ತಮ ಗ್ರಾಹಕರಾಗಿರುವ ಮಿಲ್ಮಾ ಸಂಸ್ಥೆಗೆ ಹೆಚ್ಚಿನ ಹಾಲು ಮಾರಾಟ ಮಾಡಿ ತೊಂದರೆ ನೀಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯ ಕೋಚಿಂಗ್ ಸೆಂಟರ್‌ನಲ್ಲಿ ಭಾರೀ ಬೆಂಕಿ – ಕಿಟಕಿಯಿಂದ ಹಾರಿ ಜೀವ ಉಳಿಸಿಕೊಂಡ ವಿದ್ಯಾರ್ಥಿಗಳು

    ಕಳೆದ ಆರು ತಿಂಗಳ ಅಂಕಿ ಅಂಶಗಳ ಪ್ರಕಾರ, ನಮ್ಮ ಉತ್ಪನ್ನ ಮಾರಾಟದಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ನಂದಿನಿಯ ಆಗಮನವು ಕೇರಳ ಮಾರುಕಟ್ಟೆಯಲ್ಲಿರುವ ಇತರ ಉತ್ಪನ್ನಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.

    ಮಲಪ್ಪುರಂ ಜಿಲ್ಲೆಯ ಮಂಚೇರಿ ಮತ್ತು ತಿರೂರ್, ಎರ್ನಾಕುಲಂ ಜಿಲ್ಲೆಯ ಕೊಚ್ಚಿ, ಪತ್ತನಂತಿಟ್ಟ ಜಿಲ್ಲೆಯ ಪಂದಳಂನಲ್ಲಿ ನಂದಿನಿ ತಮ್ಮ ಮಳಿಗೆಗಳನ್ನು ತೆರೆದಿದೆ. ಕೇರಳದ ಪ್ರಮುಖ ನಗರಗಳ ಸೂಪರ್ ಮಾರ್ಕೆಟ್‌ಗಳಲ್ಲೂ ನಂದಿನಿ ಉತ್ಪನ್ನಗಳು ದೊರೆಯುತ್ತವೆ.

  • ಸಾಮಾಜಿಕ ಜಾಲತಾಣದಲ್ಲಿ ನಂದಿನಿ ಬ್ರ್ಯಾಂಡ್ ಬಗ್ಗೆ‌ ಹರಿದಾಡುತ್ತಿರುವ ಸುದ್ದಿ ಸುಳ್ಳು: KMF ಸ್ಪಷ್ಟನೆ

    ಸಾಮಾಜಿಕ ಜಾಲತಾಣದಲ್ಲಿ ನಂದಿನಿ ಬ್ರ್ಯಾಂಡ್ ಬಗ್ಗೆ‌ ಹರಿದಾಡುತ್ತಿರುವ ಸುದ್ದಿ ಸುಳ್ಳು: KMF ಸ್ಪಷ್ಟನೆ

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಂದಿನಿ (Nandini Milk) ಬ್ರ್ಯಾಂಡ್‌ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ಕುರಿತು ಕೆಎಂಎಫ್‌ ಸ್ಪಷ್ಟನೆ ಕೊಟ್ಟಿದೆ. ಸೋಷಿಯಲ್‌ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ ಎಂದು ಕೆಎಂಎಫ್‌ (KMF) ತಿಳಿಸಿದೆ.

    ನಂದಿನಿ ಬ್ರ್ಯಾಂಡ್‌ ಹಾಲು ಇನ್ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಾಗುವುದಿಲ್ಲ ಅನ್ನೋ ಬಗ್ಗೆ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. ಇದೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ಅಂತಹ ಯಾವುದೇ ಬೆಳವಣಿಗೆಗಳು ಕೆಎಂಎಫ್‌ನಲ್ಲಿ ನಡೆದಿರುವುದಿಲ್ಲವೆಂದು ತಿಳಿಸಲು ಬಯಸುತ್ತೇವೆ. ಯಾವುದೇ ಸಹಕಾರ ಸಂಸ್ಥೆ ಅಥವಾ ಉತ್ಪಾದನಾ ಮಹಾಮಂಡಳಗಳೊಂದಿಗೆ ನಾವು ಒಡಂಬಡಿಕೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಅಮುಲ್ ದೇಶದ ಬ್ರ್ಯಾಂಡ್‌, ಭಾರತದಲ್ಲೇ ಮಾರಾಟ ಮಾಡಿದ್ರೆ ಏನು ತೊಂದ್ರೆ – ಸಿ.ಟಿ ರವಿ ಪ್ರಶ್ನೆ

    ದೇಶದ ಅನೇಕ ನಗರಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಲಭ್ಯವಾಗುತ್ತಿವೆ. ನಂದಿನಿ ಹಾಲು ಇತರೆ ಹಾಲಿನ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡುತ್ತಾ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ. ಗ್ರಾಹಕರು ಎಂದಿನಂತೆ “ನಂದಿನಿ” ಬ್ರ್ಯಾಂಡ್‌ನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕೊಂಡು ಪ್ರೋತ್ಸಾಹಿಸಲು ನಾವು ಮನವಿ ಮಾಡುತ್ತೇವೆ ಎಂದು ಹೇಳಿದೆ.

    ಇಂತಹ ಸಂಸ್ಥೆಯ ಬಗ್ಗೆ ಸದ್ಯ ಹರಿದಾಡುತ್ತಿರೋ ಸುದ್ದಿಗಳು ಸುಳ್ಳಾಗಿದ್ದು, ಗ್ರಾಹಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತವು ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: KMFಗೆ ಬೊಮ್ಮಣ್ಣ ಕೈ ಹಾಕಿದ್ರೆ ರಕ್ತ ಕ್ರಾಂತಿಯಾಗುತ್ತೆ: ಸಿಎಂ ಇಬ್ರಾಹಿಂ ಎಚ್ಚರಿಕೆ

  • ಕೆಎಂಎಫ್ ಹಾಲು ಪೂರೈಕೆದಾರರಿಂದ ಮುಷ್ಕರ – ನಂದಿನಿ ಬೂತ್‌ಗಳಲ್ಲಿ ಹಾಲು, ಮೊಸರು ಸಿಗದೇ ಜನ ವಾಪಸ್

    ಕೆಎಂಎಫ್ ಹಾಲು ಪೂರೈಕೆದಾರರಿಂದ ಮುಷ್ಕರ – ನಂದಿನಿ ಬೂತ್‌ಗಳಲ್ಲಿ ಹಾಲು, ಮೊಸರು ಸಿಗದೇ ಜನ ವಾಪಸ್

    ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೆಎಂಎಫ್ (KMF) ಹಾಲು ಪೂರೈಕೆದಾರರು ಮುಷ್ಕರ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಕಳೆದ 2 ದಿನಗಳಿಂದ ನಂದಿನಿ ಹಾಲು (Nandini Milk) ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ನಂದಿನಿ ಬೂತ್‌ಗಳಲ್ಲಿ ಹಾಲು, ಮೊಸರು ಸಿಗದೇ ಜನರು ವಾಪಸ್‌ ಹೋಗುತ್ತಿದ್ದಾರೆ.

    ಹಾಲು ಪೂರೈಕೆದಾರರಿಗೆ ಹೆಚ್ಚಿನ ಹಣ ನಿಗದಿ ಮಾಡುವಂತೆ ಒತ್ತಾಯಿಸಿ ನಂದಿನಿ ಹಾಲು ಪೂರೈಕೆ ಮಾಡುವ ಲಾರಿ ಮಾಲೀಕರು ಹಾಗೂ ಚಾಲಕರು ಪ್ರತಿಭಟನೆ (Protest) ನಡೆಸುತ್ತಿದ್ದಾರೆ. ಹಲವು ಬೇಡಿಕೆಗೆ ಒತ್ತಾಯಿಸಿ ಕಳೆದ 2 ದಿನಗಳಿಂದ ಲಾರಿ ಮಾಲೀಕರು ಬಮೂಲ್ ಹಾಲು ವಿತರಣೆ ನಿಲ್ಲಿಸಿದ್ದು, ಇದರಿಂದ ನಗರದ ಹಲವೆಡೆ ನಂದಿನಿ ಹಾಲು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.

    ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿದೆ. ಒಂದು ಟ್ರಿಪ್‌ಗೆ ಬಮೂಲ್ 1,000-1,200 ರೂಪಾಯಿ ನೀಡಲಾಗುತ್ತಿದೆ. ಆದರೆ ಕಿ.ಮೀ ಆಧಾರದ ಮೇಲೆ ಪಾವತಿ ಹಣವನ್ನು ಹೆಚ್ಚು ಮಾಡುವಂತೆ ಒತ್ತಾಯಿಸಲಾಗಿದೆ. ಈ ಸಂಬಂಧ ಬಮೂಲ್‌ಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಆದರೂ ಟ್ರಿಪ್ ಹಣ ಹೆಚ್ಚಿಗೆ ಮಾಡಿಲ್ಲ. ಈ ಕಾರಣಕ್ಕಾಗಿ ನಮ್ಮ ಬೇಡಿಕೆ ಈಡೇರಿಕೆ ತನಕ ಗಾಡಿ ತೆಗೆಯಲ್ಲ ಎಂದು ಮಾಲೀಕರು ಪಟ್ಟು ಹಿಡಿದಿದ್ದಾರೆ.

    ಈ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನದಿಂದ ನಂದಿನಿ ಹಾಲನ್ನು ಸರಬರಾಜು ಮಾಡುವುದನ್ನು ಡಿಸ್ಟಿಬ್ಯೂಟರ್ಸ್ ಸ್ಥಗಿತಗೊಳಿಸಿದ್ದಾರೆ. ಕೆಎಂಎಫ್ ಮುಂದೆ ಹಾಲಿನ ಲಾರಿಗಳನ್ನ ನಿಲ್ಲಿಸಿ ಪ್ರತಿಭಟನೆ ಮಾಡುತ್ತಿದ್ದು, 250ಕ್ಕೂ ಹೆಚ್ಚು ಲಾರಿ ಮಾಲೀಕರು ಹಾಗೂ ಚಾಲಕರು ಕೆಎಂಎಫ್‌ ಹಾಲು ಸರಬರಾಜು ಮಾಡುವುದನ್ನು ನಿಲ್ಲಿಸಿದ್ದಾರೆ. ಇದನ್ನೂ ಓದಿ: ಬಾಡಿಗೆ ಮನೆಗೆ ಅಡ್ವಾನ್ಸ್ ಕೊಡೋ ಮುನ್ನ ಹುಷಾರ್ – ಹಣದ ಜೊತೆಗೆ ಓನರ್ ಎಸ್ಕೇಪ್

    ಹಾಲು ಪೂರೈಕೆದಾರರ ಮುಷ್ಕರದ ಹಿನ್ನೆಲೆಯಲ್ಲಿ ಪ್ರತಿದಿನ ಬೆಳಗ್ಗೆ 25 ಕ್ರೇಟ್ (ಒಂದು ಕ್ರೇಟ್ ನಲ್ಲಿ 12 ಲೀಟರ್) ಬರುತ್ತಿದ್ದ ಹಾಲು, ಸದ್ಯ ಬೆಳಗ್ಗೆ ಸಮಯದಲ್ಲಿ 20 ಕ್ರೇಟ್ ಮಾತ್ರ ಸರಬರಾಜು ಮಾಡಲಾಗುತ್ತಿದೆ. ಮಧ್ಯಾಹ್ನವೂ ಹಾಲು ಪೂರೈಕೆಯಾಗುತ್ತಿಲ್ಲ. ಸಂಜೆ ಹೊತ್ತಲ್ಲಿ ಗ್ರಾಹಕರಿಗೆ ಹಾಲು ಮೊಸರು ಸಿಗುತ್ತಿಲ್ಲ. ಬೆಳಗ್ಗೆ ಹೊತ್ತಲ್ಲೇ ಎರಡೆರಡು ಪ್ಯಾಕೆಟ್ ತೊಗೊಂಡು ಸ್ಟಾಕ್‌ ಅನ್ನು ಗ್ರಾಹಕರು ಇಟ್ಟುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: `ಕಬ್ಬನ್ ಪಾರ್ಕ್ ಉಳಿಸಿ’ ಸಿಎಂಗೆ ಪತ್ರ ಬರೆದು ಮನವಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಂದಿನಿ ಹಾಲಿನ ದರ ಏರಿಕೆ ಬಹುತೇಕ ಖಚಿತ – ಸಿಎಂ ಸಭೆಯಲ್ಲಿ ಏನಾಯ್ತು?

    ನಂದಿನಿ ಹಾಲಿನ ದರ ಏರಿಕೆ ಬಹುತೇಕ ಖಚಿತ – ಸಿಎಂ ಸಭೆಯಲ್ಲಿ ಏನಾಯ್ತು?

    ಬೆಂಗಳೂರು: ಇನ್ನೆರಡು ದಿನದಲ್ಲಿ ಕೆಎಂಎಫ್(KMF) ನಂದಿನಿ ಹಾಲಿನ( Nandini Milk) ಬೆಲೆ ಏರಿಸುವುದು ಬಹುತೇಕ ಖಚಿತವಾಗಿದೆ.

    ಸಂಜೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಲೆ ಏರಿಕೆ ವಿಚಾರ ಚರ್ಚೆಗೆ ಬಂದಿದೆ. ಮೊನ್ನೆ ನಂದಿನಿ ಹಾಲಿನ ಬೆಲೆ ಹೆಚ್ಚಳವನ್ನು ತಡೆದಿದ್ದ ಮುಖ್ಯಮಂತ್ರಿ ಬೊಮ್ಮಾಯಿ, ಇಂದು ಗ್ರಾಹಕರಿಗೆ ಹೊರೆ ಆಗದ ರೀತಿ, ರೈತರಿಗೂ ತೊಂದರೆ ಆಗದ ರೀತಿಯಲ್ಲಿ ಇನ್ನೆರಡು ದಿನದಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳುವಂತೆ ಕೆಎಂಎಫ್‍ಗೆ ಸೂಚನೆ ನೀಡಿದ್ದಾರೆ. ಹಿಂದೆ ನಿರ್ಧರಿಸಿದ್ದ ದರ ಹೆಚ್ಚಳ ಬೇಡ. ಕಡಿಮೆ ಮಾಡಿ ಎಂದು ಕೆಎಂಎಫ್‍ಗೆ ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಮಂಗಳಮುಖಿ ಪಾಸ್ – ಛಲ ಬಿಡದೆ ಸಾಧಿಸಿದ ಪೂಜಾ

    ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಯಾವ ಕಾರಣಕ್ಕೆ ಏರಿಕೆ ಮಾಡಬೇಕು ಎಂದು ಮಾಹಿತಿ ಪಡೆದಿದ್ದೇನೆ. ಸೋರಿಕೆ ತಡೆಗಟ್ಟಲು ಕೂಡಾ ಮಾರ್ಗದರ್ಶನ ಕೊಟ್ಟಿದ್ದೇನೆ. ಈಗಾಗಲೇ ಮಾಡಿರುವ 3 ರೂ.‌ ದರ ಹೆಚ್ಚಳ ಬೇಡ ಎಂದು ಸೂಚಿಸಿದ್ದೇನೆ. ಕೆಎಂಎಫ್‌ನವರು ಏನು ತೀರ್ಮಾನ ತೆಗೆದುಕೊಂಡು ಬರುತ್ತಾರೆ ಎಂಬುದನ್ನು ನೋಡಿಕೊಂಡು ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

    ಪ್ರೋತ್ಸಾಹ ಧನ ಕೊಡುತ್ತಿರುವ ಕಾರಣ ಮತ್ತು ರೈತರ ಹಿತಚಿಂತನೆ ಕಾರಣಕ್ಕೆ ಸರ್ಕಾರ ಕೆಎಂಎಫ್ ನಿರ್ಧಾರದಲ್ಲಿ ಮಧ್ಯಪ್ರವೇಶ ಮಾಡುತ್ತಿದೆ. ಹಾಲಿನ ದರ ಕಾಲ ಕಾಲಕ್ಕೆ ಬದಲಾವಣೆ ಆಗುತ್ತಿರುತ್ತದೆ. ಕೆಎಂಎಫ್‌ನವರು ಎರಡು ದಿನ ಸಮಯ ತಗೊಂಡಿದ್ದು ಸದ್ಯಕ್ಕೆ ಹಾಲಿನ ದರ ಹೆಚ್ಚಳ ಇಲ್ಲ. ಯಾವ್ಯಾವ ರಾಜ್ಯದಲ್ಲಿ ಎಷ್ಟು ದರ ಇದೆ ಎಂಬ ಮಾಹಿತಿ ಕೇಳಿದ್ದೇವೆ. ಕೆಎಂಎಫ್ ಸರ್ಕಾರದ ಅಂಗವಾಗಿರುವ ಕಾರಣ ರೈತರ ಹಿತರಕ್ಷಣೆ ಸರ್ಕಾರದ ಕರ್ತವ್ಯ. ರೈತರಿಗೂ ಸಮಸ್ಯೆಯಾಗಬಾರದು, ಗ್ರಾಹಕರಿಗೂ ತೊಂದರೆಯಾಗಬಾರದು. ಕೆಎಂಎಫ್ ಆಡಳಿತ ಮಂಡಳಿಗೆ ಕೆಲವು ಸಲಹೆ ಸೂಚನೆಗಳನ್ನು ಕೊಟ್ಟಿದ್ದೇನೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ನ.20ರ ನಂತರ ಹಾಲಿನ ಬೆಲೆ ಏರಿಕೆ ನಿರ್ಧಾರ: ಸಿಎಂ ಬೊಮ್ಮಾಯಿ

    ನ.20ರ ನಂತರ ಹಾಲಿನ ಬೆಲೆ ಏರಿಕೆ ನಿರ್ಧಾರ: ಸಿಎಂ ಬೊಮ್ಮಾಯಿ

    ಕಲಬುರಗಿ: ನಂದಿನಿ ಹಾಲು ಮತ್ತು ಮೊಸರಿನ(Milk and Curd) ದರ ಏರಿಕೆಯ ಬಗ್ಗೆ ನ.20ರ ನಂತರ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.

    ಹಾಲಿನ ದರ 3 ರೂಪಾಯಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನ.20 ರ ನಂತರ ಹಾಲು ಒಕ್ಕೂಟದ ಮಹಾಮಂಡಳ ಅಧ್ಯಕ್ಷರು ಮತ್ತು ಅಧಿಕಾರಿಗಳ ಸಭೆ ಕರೆದು ನಿರ್ಣಯ ಕೈಗೊಳ್ಳಲಾಗುತ್ತದೆ. ಜನರಿಗೆ ಭಾರ ಆಗದಂತೆ, ರೈತರಿಗೆ ಅನುಕೂಲವಾಗುವಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

    ಇಂದು ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್‌ ನಂದಿನಿ ಹಾಲು ಮತ್ತು ಮೊಸರಿನ ದರ 3 ರೂ. ಏರಿಕೆ ಮಾಡಲು ಕೆಎಂಎಫ್‌ ಮುಂದಾಗಿತ್ತು.  ಇದನ್ನೂ ಓದಿ: ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್‌’ ಸ್ಫೂರ್ತಿ – ರೋಚಕ ಸತ್ಯ ಬಯಲು

    ಸದ್ಯ ರೈತರಿಂದ ಪ್ರತಿ ಲೀಟರ್ ಹಾಲನ್ನು ಕೆಎಂಎಫ್‌(KMF) ಸರಾಸರಿ 29 ರೂ.ಗೆ ಖರೀದಿ ಮಾಡುತ್ತಿತ್ತು. ಅಷ್ಟೇ ಅಲ್ಲದೇ ಸರ್ಕಾರದಿಂದ‌ ಪ್ರತಿ ಲೀಟರ್‌ಗೆ 5 ರೂ. ಸಹಾಯಧನ ಕೂಡ ರೈತರಿಗೆ ನೀಡಲಾಗುತ್ತಿದೆ. ಈಗ ಏರಿಕೆ ಮಾಡಿದ ಹಣವನ್ನು ರೈತರಿಗೆ ನೀಡುವ ಪ್ಲ್ಯಾನ್‌ ಮಾಡಲಾಗಿದೆ.

    ಹವಾಮಾನ ವೈಪರೀತ್ಯ ಕಾರಣದಿಂದ ಮೇವು ಸಿಗುತ್ತಿಲ್ಲ. ಮೇವಿನ ಬೆಲೆ ಭಾರೀ ಏರಿಕೆಯಾಗಿದೆ. ಇದರ ಜೊತೆ ಹಸುವಿಗೆ ಚರ್ಮ ಗಂಟು ರೋಗ ಬಾಧಿಸುತ್ತಿದೆ. ಅಷ್ಟೇ ಅಲ್ಲದೇ ಸಾಗಾಣಿಕೆ, ವಿದ್ಯುತ್, ಪ್ಯಾಕಿಂಗ್ ಇತ್ಯಾದಿ ವೆಚ್ಚ ಶೇ.25 – 35 ರಷ್ಟು ಹೆಚ್ಚಳವಾಗಿದೆ. ಈ ಕಾರಣಕ್ಕೆ ಹಾಲು ಮತ್ತು ಮೊಸರಿನ ಬೆಲೆಯನ್ನು ಏರಿಕೆ ಮಾಡಲು ಕೆಎಂಎಫ್‌ ಮುಂದಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ರೈತರಿಂದ ಖರೀದಿಸುವ ಹಾಲಿನ ದರ ಹೆಚ್ಚಿಸಿದ ಶಿಮುಲ್

    ರೈತರಿಂದ ಖರೀದಿಸುವ ಹಾಲಿನ ದರ ಹೆಚ್ಚಿಸಿದ ಶಿಮುಲ್

    ಶಿವಮೊಗ್ಗ: ಜಿಲ್ಲಾ ಹಾಲು ಒಕ್ಕೂಟವು ಮಹಾಶಿವರಾತ್ರಿ ಕೊಡುಗೆಯಾಗಿ ಮಾರ್ಚ್ 01 ರಿಂದ ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳಾದ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಲೀಟರ್‍ಗೆ 2.50 ರೂ. ಹೆಚ್ಚಿಸಲಾಗಿದೆ ಎಂದು ಶಿಮುಲ್ ಅಧ್ಯಕ್ಷ ಶ್ರೀಪಾದ್ ರಾವ್ ತಿಳಿಸಿದರು.

    ಶಿಮುಲ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕೂಟವು ತನ್ನ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ ಕಾಲ ಕಾಲಕ್ಕೆ ದರ ಪರಿಷ್ಕರಿಸುತ್ತಾ ಬಂದಿದೆ. ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಪ್ರಗತಿಯಾಗಿದ್ದು, ಫೆ.28 ರಂದು ನಡೆದ ಒಕ್ಕೂಟದ 416ನೇ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ಇದನ್ನೂ ಓದಿ: ರಷ್ಯಾದಿಂದ ಶೆಲ್, ರಾಕೆಟ್ ದಾಳಿ – ಉಕ್ರೇನ್‍ನಿಂದ 4 ಲಕ್ಷ ಮಂದಿ ಮಹಾವಲಸೆ?

    ಪ್ರಸ್ತುತ ದರ ಲೀಟರ್ ಒಂದಕ್ಕೆ ರೂ. 25.63 ಇದ್ದು ಇದನ್ನು ಪ್ರತಿ ಲೀಟರ್‍ಗೆ ರೂ. 27.86ಕ್ಕೆ (ಫ್ಯಾಟ್ 3.5% ಎಸ್‍ಎಫ್‍ಎನ್ 8.50 ಇರುವ ಹಾಲು) ಹೆಚ್ಚಿಸಲಾಗಿದೆ. ಈ ಪರಿಷ್ಕೃತ ದರವು ಮಾ.1 ರಿಂದ ಜಾರಿಗೆ ಬರಲಿದೆ. ಹೆಚ್ಚು ಹಾಲಿನ ಉತ್ಪಾದನೆ ಮತ್ತು ಹೆಚ್ಚು ಮಾರಾಟದ ಉದ್ದೇಶದಿಂದ ಹಾಗೂ ರೈತರಿಗೆ ಉತ್ತಮ ಆದಾಯ ನೀಡುವ ದೃಷ್ಟಿಯಿಂದ ಒಕ್ಕೂಟ ದರ ಹೆಚ್ಚಳದ ತೀರ್ಮಾನ ಕೈಗೊಂಡಿದೆ ಎಂದರು.

    ಒಕ್ಕೂಟದ ವ್ಯಾಪ್ತಿಯಲ್ಲಿ 1.65 ಲಕ್ಷ ರೈತರಿದ್ದು 1360 ಸೊಸೈಟಿಗಳಿವೆ. ಪ್ರತಿ ದಿನ ಗುಣಮಟ್ಟದ ಹಾಲನ್ನು ರೈತರಿಂದ ಸ್ವೀಕರಿಸಲಾಗುತ್ತಿದೆ. ಈಗ ಹೆಚ್ಚಿಸಿರುವ ದರದಿಂದ ಶಿಮುಲ್ ಪ್ರತಿ ತಿಂಗಳು ರೂ. 4.6 ಕೋಟಿ ಹೆಚ್ಚುವರಿ ಹಣ ಪಾವತಿಸಬೇಕಿದೆ.

    ಜನವರಿ ಮಾಹೆಯಲ್ಲಿ ಒಕ್ಕೂಟಕ್ಕೆ ರೂ. 5.5 ಕೋಟಿ, ಫೆಬ್ರವರಿಯಲ್ಲಿ 1.75 ಕೋಟಿ ಲಾಭ ಆಗಿದೆ. ಮಾರ್ಚ್ ಅಂತ್ಯಕ್ಕೆ 2022ನೇ ಸಾಲಿಗೆ ಅಂದಾಜು ರೂ. 65 ರಿಂದ 70 ಕೋಟಿ ನಿವ್ವಳ ಲಾಭವಾಗಲಿದೆ. ನಂದಿನಿ ಹಾಲು ಮತ್ತು ಉತ್ಪನ್ನಗಳು ಅತ್ಯುತ್ತಮ ಗುಣಮಟ್ಟದಿಂದ ಕೂಡಿದ್ದು, ಗುಣಮಟ್ಟದಲ್ಲಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ನಂದಿನಿ ಹಾಲಿಗೆ ಹೊರ ರಾಜ್ಯಗಳಿಂದ ಸಹ ಬೇಡಿಕೆ ಹೆಚ್ಚುತ್ತಿದೆ. ಇದೀಗ ದೆಹಲಿ, ಕೇರಳ, ತೆಲಂಗಾಣಗಳಿಗೆ ನಮ್ಮ ಹಾಲು ಹೋಗುತ್ತಿದೆ. ನಂದಿನಿ ಹಾಲನ್ನು ಪ್ರತಿ ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಸಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಷ್ಯಾದಿಂದ ಶೆಲ್, ರಾಕೆಟ್ ದಾಳಿ – ಉಕ್ರೇನ್‍ನಿಂದ 4 ಲಕ್ಷ ಮಂದಿ ಮಹಾವಲಸೆ?

    ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ಹಾಲು ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರುಗಳು, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಸವರಾಜಪ್ಪ ಹಾಜರಿದ್ದರು.