ಬೆಂಗಳೂರು: ನಂದಿನಿ ನಮ್ಮ ಸಂಸ್ಥೆ, ನಮ್ಮ ಮೆಟ್ರೋದಲ್ಲಿ ಮಳಿಗೆ ಹಾಕುವುದಕ್ಕೆ ನಂದಿನಿಗೆ (Nandini Milk) ಅವಕಾಶ ಕೊಡೋದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದರು.
ನಮ್ಮ ಮೆಟ್ರೋ ಮಳಿಗೆಯಲ್ಲಿ ಅಮುಲ್‌ಗೆ ಜಾಗ ಕೊಟ್ಟು ನಂದಿನಿಗೆ ಜಾಗ ಕೊಡದ ವಿಚಾರದ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಮೆಟ್ರೋದಲ್ಲಿ ಮಳಿಗೆ ಹಾಕಲು ನಾವು ಟೆಂಡರ್ ಕರೆದಿದ್ದೆವು. ನಂದಿನಿ ಅವರು ಭಾಗಿಯಾಗಿರಲಿಲ್ಲ. ಅಮುಲ್ ಅವರು ಟೆಂಡರ್‌ನಲ್ಲಿ ಭಾಗವಹಿಸಿದ್ರು. ಅವರಿಗೆ ಅವಕಾಶ ಕೊಟ್ಟಿದ್ದೇವೆ. ನಂದಿನಿ ಅವರು ಹಾಕಿದ್ರು. ಅವರಿಗೂ ಅವಕಾಶ ಕೊಡ್ತೀವಿ ಎಂದರು. ಇದನ್ನೂ ಓದಿ: ಅಮೂಲ್‌ಗೆ ಮಣೆಹಾಕಿದ್ದ BMRCLಗೆ ಮುಖಭಂಗ- ಮೆಟ್ರೋ ನಿಲ್ದಾಣಗಳಲ್ಲಿ 20 ನಂದಿನಿ ಮಳಿಗೆ ತೆರೆಯಲು ಅವಕಾಶ
ಅಮುಲ್ ಅವರು 10 ಕಡೆ ಕೇಳಿದ್ರು. ನಾವು ಎರಡು ಕಡೆ ಅವಕಾಶ ಕೊಟ್ಟಿದ್ದೇವೆ. ನಂದಿನಿ ನಮ್ಮ ಸಂಸ್ಥೆ ಅವರು ಮುಂದೆ ಬಂದರೆ ಅವರಿಗೂ ಕೊಡ್ತೀವಿ. ಅದು ನಮ್ಮ ಸಂಸ್ಥೆ. ಕಡಿಮೆ ದರಕ್ಕೂ ಬೇಕಾದ್ರು ಕೊಡ್ತೀವಿ. ವಿರೋಧ ಮಾಡೋರು ಪ್ರಚಾರಕ್ಕೆ ಮಾಡ್ತಿದ್ದಾರೆ, ಮಾಡಲಿ ಎಂದು ಟಾಂಗ್ ಕೊಟ್ಟರು.
ಕರ್ನಾಟಕದ ಬ್ರ್ಯಾಂಡ್ ನಂದಿನಿಯನ್ನು ಕಡೆಗಣಿಸಿ, ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ (Amul) ಮಳಿಗೆಗಳನ್ನು ತೆರೆಯಲು ನಮ್ಮ ಮೆಟ್ರೋ (Namma Metro) ಮುಂದಾಗಿತ್ತು. ಈ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮೆಟ್ರೋ ನಿಲ್ದಾಣದಲ್ಲಿ 20 ನಂದಿನಿ ಮಳಿಗೆಗಳನ್ನು ರಿಯಾಯಿತಿ ದರದಲ್ಲಿ ತೆರೆಯಲು BMRCL ಒಪ್ಪಿದೆ. ಇದನ್ನೂ ಓದಿ: ಬೆಂಗಳೂರಿನ 10 ಮೆಟ್ರೋ ಸ್ಟೇಷನ್‌ನಲ್ಲಿ ಅಮುಲ್‌ಗೆ ಪ್ರಮೋಷನ್ – ಕನ್ನಡಿಗರು ಕೆಂಡ
ಬೆಂಗಳೂರು: ಕಳೆದ ಒಂದು ವರ್ಷದಲ್ಲಿ ನಂದಿನಿ ಹಾಲಿನ ದರ ಮೂರು ಬಾರಿ ಹೆಚ್ಚಾಗಿದ್ದು, ಇದರ ಬೆನ್ನಲ್ಲೇ ಹಾಲುಗಳ್ಳರ ಕಾಟ ಕೂಡ ಹೆಚ್ಚಾಗಿದೆ. ಪಾಕೆಟ್ ಗಟ್ಟಲೆ ನಂದಿನಿ ಹಾಲು (Nandini Milk) ಕದಿಯುವುದನ್ನೇ ಬಿಸಿನೆಸ್ ಮಾಡಿಕೊಂಡಿರುವ ಕಳ್ಳರು ಬೆಳಗಿನ ಜಾವ ಸ್ಕೂಟರ್‌ನಲ್ಲಿ ಬಂದು ಹಾಲು ಕದ್ದು ಎಸ್ಕೇಪ್ ಆಗಿದ್ದಾರೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ (Kamakshipalya police station) ವ್ಯಾಪ್ತಿಯ ನಂದಿನಿ ಬೂತ್ ಒಂದರಲ್ಲಿ ಹಾಲಿನ ಪ್ಯಾಕೆಟ್‌ಗಳನ್ನು ಕಳ್ಳತನ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಾಲುಗಳ್ಳರ ಕಾಟಕ್ಕೆ ಅಂಗಡಿ ಮಾಲೀಕ ಗಿರಿಗೌಡ ಹೈರಾಣಾಗಿದ್ದಾರೆ. ಇದನ್ನೂ ಓದಿ: RCB | ಪಾಟಿದಾರ್ ಕ್ಯಾಪ್ಟನ್ಸಿ ಬಗ್ಗೆ ಅಸಮಾಧಾನ – ಡಿಕೆಗೆ ಕೊಹ್ಲಿ ದೂರು?
ಬೆಳಗಿನ ಜಾವ ಹಾಲಿನ ಕ್ರೇಟ್ ಇಳಿಸಿದ ಬಳಿಕ ಎಂಟ್ರಿ ಕೊಡುವ ಕಳ್ಳರು ಬೆಳಗಿನ ಜಾವ 4 ಗಂಟೆಯಿಂದ 5 ಗಂಟೆ ಸಮಯದಲ್ಲಿ ಹಾಲು ಕದ್ದು ಎಸ್ಕೇಪ್ ಆಗುತ್ತಾರೆ. ಇದೇ ತಿಂಗಳ 4ರಂದು ಬೆಳಗಿನ ಜಾವ 4.11ಕ್ಕೆ 2 ಸ್ಕೂಟರ್‌ಗಳಲ್ಲಿ ಬಂದಿದ್ದ ಕಳ್ಳರು ನಾಲ್ಕೈದು ಲೀಟರ್ ಹಾಲು ಕದ್ದು ಪರಾರಿಯಾಗಿದ್ದರು. ಇದನ್ನೂ ಓದಿ: ಡಿಸಿಗೆ ಪ್ರಮೋದಾದೇವಿ ಪತ್ರ – ಜಾಗ ನೀಡಿದ್ರೆ 4500 ಜನರ ಇಡೀ ಗ್ರಾಮವೇ ಖಾಲಿ!
ನಿನ್ನೆ ಹಳೇ ದರಕ್ಕೆ ಪ್ರಿಂಟ್ ಮಾಡಿ ಹಾಲನ್ನ ನಂದಿನಿ ಬೂತ್‌ಗಳಿಗೆ ಸಪ್ಲೈ ಮಾಡಲಾಗಿದೆ. ಮಧ್ಯಾಹ್ನ ಬರುವ ಹಾಲಿನಲ್ಲಿ ಏರಿಕೆ ಆಗಿರುವ ದರ ಜಾರಿಯಾಗಲಿದೆ. ಏನೇ ಆದರೂ ಹಾಲಿನ ದರ ಏರಿಕೆಯಿಂದ ಸಾರ್ವಜನಿಕರಿಗೆ ಭಾರೀ ಸಮಸ್ಯೆ ಆಗಲಿದೆ.
ಮಧ್ಯಾಹ್ನದಿಂದ ಪರಿಷ್ಕೃತ ಹಾಲಿನ ದರ ಜಾರಿಯಾಗಲಿದೆ. ಹಾಲು ಎಷ್ಟು ರೇಟ್ ಆಗಿದೆ ಅಂತಾ ಜನ ಕೇಳಿ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಒಂದು ದಿನಕ್ಕೆ ಎರಡು ಬಾರಿ ನಂದಿನಿ ಬೂತ್‌ಗಳಿಗೆ ಮತ್ತು ಅಂಗಡಿಗಳಿಗೆ ಹಾಲು ಸಪ್ಲೈ ಆಗಲಿದೆ. ಇದನ್ನೂ ಓದಿ: ದರ ಏರಿಕೆ ಜೊತೆಗೆ ಹೆಚ್ಚುವರಿ ಹಾಲು ಕಡಿತ?
ಬೆಳಗ್ಗೆ ಬಂದಿರುವ ಹಾಲಿನ ಪ್ಯಾಕೆಟ್‌ಗಳಲ್ಲಿ ಪರಿಷ್ಕೃತ ದರ ಜಾರಿ ಆಗಿಲ್ಲ. ಮಧ್ಯಾಹ್ನ ಬರುವ ಹಾಲಿನ ಪ್ಯಾಕೆಟ್‌ನಲ್ಲಿ ಪರಿಷ್ಕೃತ ದರ ಮುದ್ರಣ ಆಗಲಿದೆ.
ಬೆಂಗಳೂರು: ಐ ಲವ್ ಯು ನಂದಿನಿ ಅಂತಾ ಜಾಹೀರಾತು ಕೊಡ್ತಾ ಇದ್ರು. ಈಗ ಐ ಹೇಟ್ ಯು ನಂದಿನಿ ಅಂತಾ ಜಾಹೀರಾತು ಕೊಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ವ್ಯಂಗ್ಯವಾಡಿದರು.
ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹಾಲಿನ ದರ, ವಿದ್ಯುತ್ ದರ ಏರಿಕೆ ಕುರಿತು ಮಾತನಾಡಿದ ಅವರು, ಕಾಕಾಪಾಟೀಲ್‌ಗೂ ಫ್ರೀ, ಮಹದೇವಪ್ಪನಿಗೂ ಫ್ರೀ, ನಿನ್ ಹೆಂಡ್ತಿಗೂ ಫ್ರೀ ನನ್ ಹೆಂಡ್ತಿಗೂ ಫ್ರೀ ಅಂತಾ ಸಿದ್ದರಾಮಯ್ಯ (Siddaramaiah) ಅವರು ಹೇಳುತ್ತಿದ್ದರು. ಈಗ ನಿನ್ ಹೆಂಡ್ತಿಗೂ ಟ್ಯಾಕ್ಸ್, ನನ್ ಹೆಂಡ್ತಿಗೂ ಟ್ಯಾಕ್ಸ್ ಅನ್ನಬೇಕು ಎಂದು ಟೀಕಿಸಿದರು. ಇದನ್ನೂ ಓದಿ: ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿಯ ಕಪಿಮುಷ್ಟಿಯಲ್ಲಿದೆ: ಹೆಚ್‌ಡಿಕೆ
ಸಿದ್ದರಾಮಯ್ಯ ಬಜೆಟ್ ಮೋಸದ ಬಜೆಟ್, ಇದು ಸುಳ್ಳು, ಮುಂದೆ ಮಾರಿಹಬ್ಬ ಇದೆ ಎಂದು ಹೇಳಿದ್ದೆ. ತೆರಿಗೆ ಹಾಕುವಂತದ್ದೇ ಬಜೆಟ್, ಏನೇನು ತೆರಿಗೆ ಮಾಡುತ್ತೇವೆ, ಏನು ತೆರಿಗೆ ಹಾಕುತ್ತೇವೆ ಎಂದು ಹೇಳಲಿಲ್ಲ. ಮೋಸ ಮಾಡುವುದರಲ್ಲಿ ದೇಶದಲ್ಲಿ ಸಿದ್ದರಾಮಯ್ಯ ನಂಬರ್ 1. ಏನೇನು ತೆರಿಗೆ ಹಾಕುತ್ತೇವೆ ಎನ್ನುವುದನ್ನು ಬಚ್ಚಿಟ್ಟರು. ಈಗ ರಾಜ್ಯದ ಜನರಿಗೆ ಮಾರಿಹಬ್ಬ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ರೈತರ ಹೆಸರಿನಲ್ಲಿ ಹಾಲಿನ ದರ ಏರಿಸಿ ಜನರಿಗೆ ಬರೆ: ಬೊಮ್ಮಾಯಿ
ಯುಗಾದಿ ಹಬ್ಬಕ್ಕೆ ಸರ್ಕಾರ ಶಾಕ್ ನೀಡಿದೆ. ಮತ್ತೊಂದೆಡೆ ಡಿಕೆಶಿ ನೀರಿನ ದರ ಏರಿಕೆ ಮಾಡಲು ಹೊರಟಿದ್ದಾರೆ. ನೀರಿನ ದರ ಏರಿಕೆಯ ಮತ್ತೊಂದು ದೆವ್ವ ಬಾಗಿಲಿಗೆ ಬಂದು ನಿಂತಿದೆ. ಚುನಾವಣೆಗೂ ಮುಂಚೆ ಕಾಂಗ್ರೆಸ್ (Congress) ಜನರೇ ದೇವರು ಎಂದು ಹೇಳಿದ್ದರು. ಈಗ ಎಲ್ಲರಿಗೂ ಟ್ಯಾಕ್ಸ್. ಮುಂದೆ ಗ್ರೀನ್ ಟ್ಯಾಕ್ಸ್ ಹಾಕುತ್ತಾರೆ. ಗಾಳಿ ಒಂದು ಬಿಟ್ಟು ಎಲ್ಲಾ ತೆರಿಗೆ ಹಾಕಿದ್ದಾರೆ. ಬ್ರಾಂಡ್ ಬೆಂಗಳೂರು ಹೋಗಿ ದುಬಾರಿ ಬೆಂಗಳೂರು ಬಂತು. ಮುಂದೆ ಜನರಿಗೆ ಬೆಲೆ ಏರಿಕೆಯ ಮತ್ತಷ್ಟು ತ್ರಿಬಲ್ ಧಮಾಕಾ ಆಗಲಿದೆ ಎಂದರು. ಇದನ್ನೂ ಓದಿ: ಮಂಗಳೂರು ಏರ್‌ಪೋರ್ಟ್‌ಗೆ ಹೆಚ್ಚುವರಿ ಭೂಸ್ವಾಧೀನಕ್ಕೆ ತುರ್ತು ಕ್ರಮ ಜರುಗಿಸಲು ಆಗ್ರಹ
ರಾಜಣ್ಣ (Rajanna) ಅವರ ನೋಟಿನ ಪ್ರಿಂಟಿಂಗ್ ಮೆಷಿನ್ ಇಟ್ಟುಕೊಂಡಿಲ್ಲ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಇದೆಲ್ಲಾ ಅವರ ದುರಹಂಕಾರದ ಪರಮಾವಧಿ ಎಂದು ಆಕ್ರೋಶ ಹೊರಹಾಕಿದರು.
ಬೆಂಗಳೂರು: ಬಸ್, ಮೆಟ್ರೋ ದರ ಏರಿಕೆ ಬಳಿಕ ಇದೀಗ ರಾಜ್ಯದಲ್ಲಿ ಹಾಲಿನ ದರ ಏರಿಕೆ (Milk Price Hike) ಮಾಡುವ ಮೂಲಕ ರಾಜ್ಯದ ಜನತೆಗೆ ದೊಡ್ಡ ಶಾಕ್ ಕೊಟ್ಟಿದೆ. ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ರಾಜ್ಯದ ಜನತೆಗೆ ದರ ಏರಿಕೆಯ ಬಿಸಿ ಮುಟ್ಟಿಸಿದೆ.
ಪ್ರತಿ ಲೀಟರ್ ನಂದಿನಿ ಹಾಲಿನ (Nandini Milk) ದರ 4 ರೂ. ಹೆಚ್ಚಳ ಮಾಡಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಏಪ್ರಿಲ್ 1ರಿಂದ ನೂತನ ದರ ಜಾರಿ ಆಗಲಿದೆ.
ಅಲ್ಲದೆ ಈ ಹಿಂದೆ ಅರ್ಧ ಲೀಟರ್ ಪ್ಯಾಕೆಟ್ ಹಾಲಿಗೆ 50ml ಹೆಚ್ಚುವರಿ ಹಾಲು, 2 ರೂಪಾಯಿ ಹೆಚ್ಚುವರಿ ಹಣವನ್ನ ವಾಪಸ್ ಪಡೆಯಲು ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. ಇನ್ನು ಕ್ಯಾಬಿನೆಟ್ ತೀರ್ಮಾನದಿಂದಾಗಿ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಕೊಡ್ತಿದ್ದ 31 ರೂಪಾಯಿ 68 ಪೈಸೆ ಹಣ ಇನ್ನು ಮುಂದೆ 35 ರೂಪಾಯಿ 68 ಪೈಸೆ ಹಣ ಕೊಡಬೇಕಾಗುತ್ತೆ.
ಯಾವ ಹಾಲಿನ ದರ ಎಷ್ಟಾಗಬಹುದು?
– ನೀಲಿ ಪ್ಯಾಕೆಟ್ ಹಾಲು – 44 ರೂ ನಿಂದ 48 ರೂ
– ಆರೆಂಜ್ ಪ್ಯಾಕೆಟ್ ಹಾಲು – 54 ರೂ. ನಿಂದ 58 ರೂ.
– ಸಮೃದ್ಧಿ ಹಾಲಿನ ಪ್ಯಾಕೆಟ್ 56 ರೂ. ನಿಂದ 60 ರೂ.
– ಗ್ರೀನ್ ಸ್ಪೇಷಲ್ 54 ರೂ. ನಿಂದ 58 ರೂ.
– ನಾರ್ಮಲ್ ಗ್ರೀನ್ 52 ರೂ. ನಿಂದ 56 ರೂ.
6-8 ರೂ. ಹಾಲಿನ ದರ ಹೆಚ್ಚಳಕ್ಕೆ ಒಕ್ಕೂಟಗಳು ಪ್ರಸ್ತಾಪಿಸಿದ್ದವು. ಆದರೆ ಸೋಮವಾರ ನಡೆದ ಸಭೆಯಲ್ಲಿ ಸಿಎಂ ಈ ದರಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಹಾಲಿನ ದರ ಹೆಚ್ಚಳ ಹಣ ಕೇವಲ ರೈತರಿಗಷ್ಟೇ ಇರಲಿ ಎಂದಿದ್ದರು. ಆದರೆ ಸಭೆಯ ಬಳಿಕ 5 ರೂ.ಯಾದರೂ ಹೆಚ್ಚಳ ಮಾಡಿ, ಅದರಲ್ಲಿ 3 ರೂ. ರೈತರಿಗೆ, 2 ರೂ. ಒಕ್ಕೂಟಗಳಿಗೆ ಇರಲಿ ಎಂದು ಪ್ರಸ್ತಾಪಿಸಿದ್ದರು. ಆದ್ರೆ ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ 4 ರೂ. ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದೆ.
ನವದೆಹಲಿ: ರಾಷ್ಟ್ರ ರಾಜಧಾನಿಗೆ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿಯ (KMF) ನಂದಿನಿ ಹಾಲು ಲಗ್ಗೆಯಿಟ್ಟಿದೆ. ಆರಂಭಿಕ ಹಂತದಲ್ಲಿ 2.5 ಲಕ್ಷ ಲೀಟರ್ ಹಾಲನ್ನು ದೆಹಲಿಗೆ ಪೂರೈಸುವ ಯೋಜನೆ ರೂಪಿಸಲಾಗಿದೆ. ಮುಂದಿನ 6 ತಿಂಗಳ ಒಳಗೆ ಪ್ರತಿನಿತ್ಯ 5 ಲಕ್ಷ ಲೀಟರ್ ಹಾಲು (Nandini Milk) ಮಾರಾಟ ಮಾಡಲು ಕೆಎಂಎಫ್ ನಿರ್ಧರಿಸಿದೆ.
ದೇಶದ ಹಾಲು ಉತ್ಪಾದನೆಯಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ದೆಹಲಿ ನಗರದಲ್ಲಿ ಕೆ.ಎಂ.ಎಫ್ ಮತ್ತು ಮಂಡ್ಯ ಹಾಲು ಒಕ್ಕೂಟಗಳು ಸೇರಿಕೊಂಡು ವಿವಿಧ ಶ್ರೇಣಿಯ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ದೆಹಲಿಯ ನಿವಾಸಿಗಳಿಂದ ನಂದಿನಿ ಉತ್ಪನ್ನಗಳಿಗೆ ಅತ್ಯುತ್ತಮ ಸ್ಪಂದನೆ ದೊರೆಯಲಿದೆ ಎಂಬ ವಿಶ್ವಾಸ ನನಗಿದೆ.… pic.twitter.com/tRNe3RoN3Y
ಹೌದು. ದೆಹಲಿಯಲ್ಲಿ ಕೆಎಂಎಫ್ ಮತ್ತು ಮಂಡ್ಯ ಹಾಲು ಒಕ್ಕೂಟಗಳು ಜಂಟಿಯಾಗಿ ವಿವಿಧ ಶ್ರೇಣಿಯ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಸಿಎಂ ಸಿದ್ದರಾಮಯ್ಯ (Siddaramaiah) ಅವರು ನಂದಿನಿ ಹಾಲಿನ ಉತ್ಪನ್ನಗಳನ್ನು ದೆಹಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಅಲ್ಲದೇ ದೆಹಲಿಯ ನಿವಾಸಿಗಳಿಂದ ನಂದಿನಿ ಉತ್ಪನ್ನಗಳಿಗೆ ಅತ್ಯುತ್ತಮ ಸ್ಪಂದನೆ ದೊರೆಯಲಿದೆ ಎಂಬ ವಿಶ್ವಾಸ ನನಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಸಿಎಂ, ದೇಶದ ಹಾಲು ಉತ್ಪಾದನೆಯಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇಡೀ ದೇಶದಲ್ಲಿ ರೈತರ ಉಪಕಸುಬು ಪಶುಸಂಗೋಪನೆ. ಗುಜರಾತ್ ನಲ್ಲಿ ಕುರಿಯನ್ ಅವರು ಹಾಲು ಉತ್ಪಾದಕರ ಸಂಘವನ್ನು ಪ್ರಾರಂಭ ಮಾಡಿದರು. ಹಿಂದೆ ನಾನೂ ಕೂಡ ಪಶುಸಂಗೋಪನಾ ಸಚಿವನಾಗಿದ್ದೆ, ಒಂದು ವರ್ಷ ಕಾಲ ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷನೂ ಆಗಿದ್ದೆ. ಪಶುಸಂಗೋಪನಾ ಸಚಿವನಾಗಿದ್ದಾಗಲೇ ಹಾಲು ಉತ್ಪಾದಕರಿಗೆ ಶೋಷಣೆಯಾಗುತ್ತಿದ್ದುದ್ದನ್ನು ಮನಗಂಡು ಶಾಶ್ವತ ಮಾರುಕಟ್ಟೆ ಕಲ್ಪಿಸಲು ಹಾಲು ಉತ್ಪಾದಕರ ಸಂಘಗಳನ್ನು ರಚಿಸಿದ್ದೆ ಎಂದು ಹೇಳಿದರು.
ರಾಜ್ಯದಲ್ಲಿ ಪ್ರತಿದಿನ 92 ರಿಂದ 93 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ರೈತರಿಂದ ಲೀ.ಗೆ 32 ರೂ. ಗಳಿಗೆ ಹಾಲು ಖರೀದಿಸಲಾಗುತ್ತಿದ್ದು, ರಾಜ್ಯ ಸರ್ಕಾರ ಕ್ಷೀರಧಾರೆ ಯೋಜನೆಯಡಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರಿಗೆ 5 ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲದಲ್ಲಿ 2 ರೂ. ಇದ್ದ ಪ್ರೋತ್ಸಾಹಧನ, ನಂತರ 3 ರೂ. ಆಯಿತು. ನಾನು ಮುಖ್ಯಮಂತ್ರಿಯಾದ ನಂತರ ಇದನ್ನು 5 ರೂ.ಗಳಿಗೆ ಹೆಚ್ಚಿಸಿದ್ದೆ. ಪ್ರೋತ್ಸಾಹಧನಕ್ಕಾಗಿ ಪ್ರತಿ ದಿನ 5 ಕೋಟಿ ರೂ.ಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ ಎಂದು ಶ್ಲಾಘಿಸಿದರು.
ರಾಜ್ಯದಲ್ಲಿ ಒಟ್ಟು 16 ಹಾಲು ಒಕ್ಕೂಟಗಳಿದ್ದು, ಅಂದಾಜು 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಆಂಧ್ರಪ್ರದೇಶ, ಮಹಾರಾಷ್ಟ್ರಕ್ಕೆ ನಿತ್ಯ ತಲಾ 2.5 ಲಕ್ಷ ಲೀ.ಟರ್ ಹಾಲು ಪೂರೈಕೆಯಾಗುತ್ತಿದೆ. ಇದೀಗ ಆರಂಭಿಕ ಹಂತದಲ್ಲಿ 2.5 ಲಕ್ಷ ಲೀಟರ್ ಹಾಲು ನವದೆಹಲಿಗೆ ಪೂರೈಸುವ ಯೋಜನೆ ರೂಪಿಸಲಾಗಿದೆ. ಇನ್ನು ಆರು ತಿಂಗಳೊಳಗೆ 5 ಲಕ್ಷ ಲೀಟರ್‌ಗೆ ಏರಿಸುವ ಗುರಿ ನಮ್ಮದಾಗಿದೆ ಎಂದು ಸಿಎಂ ತಿಳಿಸಿದರು.
ದೆಹಲಿಯಲ್ಲಿ ಯಾವ – ಯಾವ ಪ್ರಮಾಣದ ಹಾಲು ಲಭ್ಯ * ಹಸುವಿನ ಹಾಲು: ಪ್ರಮುಖ ಉತ್ಪನ್ನವು 100 ಮಿಲಿ (10 ರೂ.), 500 ಮಿಲಿ (28 ರೂ.), 1 ಲೀಟರ್ (56 ರೂ.), ಮತ್ತು 6 ಲೀಟರ್ (336 ರೂ.) ಮಾದರಿಗಳು ಲಭ್ಯವಿದೆ. * ಪೂರ್ಣ ಕೆನೆ ಹಾಲು (ಸಮೃದ್ಧಿ): ಇದರ ಬೆಲೆ 500 ಮಿಲಿ (33 ರೂ.), 1 ಲೀಟರ್ (67 ರೂ.) ಹಾಗೂ 6 ಲೀಟರ್ (402) ಮಾದರಿಗಳಿವೆ. * ಟೋನ್ಡ್ ಹಾಲು (ಶುಭಂ): 500 ಮಿಲಿ (30 ರೂ. ) ಮತ್ತು 1 ಲೀಟರ್ (61 ರೂ.) ಮಾದರಿ. * ತಿಳಿ ಹಾಲು (ಸಂಪೂರ್ಣ): 500 ಮಿಲಿ (27 ರೂ.) ಮತ್ತು 1 ಲೀಟರ್ (55 ರೂ.) ಪ್ರಮಾಣದ ಹಾಲಿನ ಪ್ಯಾಕೆಟ್ ಲಭ್ಯವಿರಲಿದೆ. ಇದರೊಂದಿಗೆ ಹಾಲಿನ ಇತರ ಉತ್ಪನ್ನಗಳು ಸಿಗಲಿವೆ.
ಬೆಂಗಳೂರು: ರಾಜ್ಯದ ಹೆಮ್ಮೆಯ ಉತ್ಪನ್ನ ನಂದಿನಿ (Nandini Milk) ಇದೀಗ ರಾಷ್ಟ್ರ ರಾಜಧಾನಿ ದೆಹಲಿಗೆ ಮತ್ತೊಮ್ಮೆ ಎಂಟ್ರಿ ಕೊಡಲು ತಯಾರಿ ನಡೆಸಿದೆ. ನವೆಂಬರ್ 21ರಿಂದ ದೆಹಲಿಯಲ್ಲಿ (Delhi) ನಂದಿನ ಹಾಲಿನ ಉತ್ಪನ್ನಗಳು ಲಭ್ಯ ಆಗಲಿವೆ.
ದೆಹಲಿಯಲ್ಲಿ ಕೆಎಂಎಫ್ ಔಟ್‍ಲೆಟ್‍ಗೆ ಸಿಎಂ ಸಿದ್ದರಾಮಯ್ಯ (Siddaramaiah) ಚಾಲನೆ ಕೊಡಲಿದ್ದಾರೆ. ಆರಂಭಿಕ ಹಂತದಲ್ಲಿ ನಿತ್ಯ 1 ಲಕ್ಷ ಲೀಟರ್ ಹಾಲನ್ನು ದೆಹಲಿಗೆ ಪೂರೈಸಲು ಕೆಎಂಎಫ್ ಮುಂದಾಗಿದೆ. ಹಸುವಿನ ಹಾಲು ಪೂರೈಸುವಂತೆ ಕೆಎಂಎಫ್‍ಗೆ ದೆಹಲಿ ಸರ್ಕಾರ ಮನವಿ ಮಾಡಿತ್ತು. ಈ ಸಂಬಂಧ ಕಳೆದ ನಾಲ್ಕೈದು ತಿಂಗಳಿಂದ ದೆಹಲಿ ಸರ್ಕಾರದ ಜೊತೆ ಕೆಎಂಎಫ್ ಮಾತುಕತೆ ನಡೆಸುತ್ತಿತ್ತು.
29 ವರ್ಷದ ಹಿಂದೆಯೇ ದೆಹಲಿಗೆ ಕೆಎಂಎಫ್ ಹಾಲನ್ನು ಪೂರೈಸುತ್ತಿತ್ತು. ಇದು ಕಾರಣಾಂತರಗಳಿಂದ ನಂತರದ ದಿನಗಳಲ್ಲಿ ಸ್ಥಗಿತಗೊಂಡಿತ್ತು.
ಇದೀಗ ದೆಹಲಿಯಲ್ಲಿ ಚಾಲ್ತಿಯಲ್ಲಿರುವ ಅಮೂಲ್, ಮದರ್ ಡೈರಿಗೆ ಕೆಎಂಎಫ್ ಪೈಪೋಟಿ ನೀಡಲಿದೆ. ಈಗಾಗಲೇ ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಕೇರಳಕ್ಕೆ ಕೆಎಂಎಫ್ ಉತ್ಪನ್ನಗಳನ್ನು ಪೂರೈಸುತ್ತಿದೆ.
ರಾಯಚೂರು: ನಂದಿನಿ ಹಾಲಿನ ದರ ಹೆಚ್ಚಳ (Nandini Milk Price Hike) ಮಾಡಿರುವ ಕೆಎಂಎಫ್ (KMF) ಗ್ರಾಹಕರಿಗೆ ಬೆಲೆ ಏರಿಕೆ ಜೊತೆಗೆ ಮತ್ತೊಂದು ಶಾಕ್ ನೀಡಿದೆ. ತಾನೇ ಹೊರಡಿಸಿದ್ದ ಪರಿಷ್ಕೃತ ದರ ಪಟ್ಟಿಯನ್ನ ಕೈಬಿಟ್ಟು ಹಾಲಿನ ಪ್ಯಾಕೆಟ್ ಮೇಲೆ ಹೆಚ್ಚುವರಿ ಬೆಲೆ ಮುದ್ರಿಸಿ ಮಾರಾಟಕ್ಕೆ ಮುಂದಾಗಿದ್ದು, ಇದರ ವಿರುದ್ಧ ರಾಯಚೂರಿನಲ್ಲಿ ಗ್ರಾಹಕರು ಸಿಡಿದೆದ್ದಿದ್ದಾರೆ. ಸರ್ಕಾರದ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಎಂಆರ್‌ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಹಾಲು ಮಾರಾಟ – ಗ್ರಾಹಕರು ದೂರು ನೀಡಿದ್ರೆ ಲೈಸನ್ಸ್ ರದ್ದು?
ಇತ್ತೀಚೆಗಷ್ಟೇ ಕೆಎಂಎಫ್ ನಂದಿನ ಹಾಲಿನ (KMF Nandini Milk) ದರ ಹೆಚ್ಚಿಸಿ ಪರಿಷ್ಕೃತ ದರದ ಪಟ್ಟಿಯನ್ನ ಬಿಡುಗಡೆ ಮಾಡಿತ್ತು. ಪ್ರತಿ ಲೀಟರ್ ಹಾಗೂ ಅರ್ಥ ಲೀಟರ್ ಹಾಲಿನ ಪ್ಯಾಕೆಟ್‌ನಲ್ಲಿ 50 ಎಂಎಲ್ ಹಾಲಿನ ಪ್ರಮಾಣ ಹೆಚ್ಚಿಸಿ 2 ರೂ. ಹೆಚ್ಚಳ ಮಾಡಿರುವುದಾಗಿ ಘೋಷಣೆ ಮಾಡಿತ್ತು. ಆದ್ರೆ ಶುಭಂ ಗೋಲ್ಡ್ ಹಾಲಿನ ದರವನ್ನು ತಾನೇ ಘೋಷಿಸಿದಂತೆ 2 ರೂ. ಹೆಚ್ಚಳ ಮಾಡುವ ಬದಲು ಅರ್ಧ ಲೀಟರ್‌ಗೆ 3 ರೂ. ಹಾಗೂ 1 ಲೀಟರ್‌ಗೆ 4 ರೂ. ಹೆಚ್ಚಳ ಮಾಡಿದೆ. ಈಗ ಬಂದಿರುವ ಹೊಸ ಪ್ಯಾಕೆಟ್‌ನಲ್ಲಿ ದುಬಾರಿ ಬೆಲೆ ಮುದ್ರಿತವಾಗಿದೆ. ಈ ಮೊದಲು ಅರ್ಧ ಲೀಟರ್‌ಗೆ 26 ರೂ. ಇದ್ದ ಶುಭಂ ಗೋಲ್ಡ್ ಹಾಲು 28 ರೂ. ಬದಲು 29 ರೂ. ಆಗಿದೆ. 1 ಲೀಟರ್‌ಗೆ 49 ರೂ. ಇದ್ದ ಹಾಲು 51 ರೂ. ಬದಲು 53 ರೂಪಾಯಿ ಆಗಿದೆ. ಹೀಗಾಗಿ ಸರ್ಕಾರ ಹೇಳುವುದೊಂದು ಮಾಡಿರುವುದು ಒಂದು ಅಂತ ಗ್ರಾಹಕರು ಆಕ್ರೋಶ ಹೊರಹಾಕಿದ್ದಾರೆ.
ಕೆಎಂಎಫ್ ಹೆಚ್ಚಳ ಮಾಡಿದ್ದ ದರ ಯಾವುದಕ್ಕೆ ಎಷ್ಟು? ಟೋನ್ಡ್ ಹಾಲು
550 ಎಂಎಲ್ – 24 ರೂ.
1050 ಎಂಎಲ್ – 44 ರೂ.
ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ (Nandini Milk) ದರ ಏರಿಕೆಯಾಗಿದ್ದು, ಜನರು ಅಸಮಾಧಾನ ಹೊರಹಾಕಿದ್ದಾರೆ. ಇದರ ಮಧ್ಯೆಯೇ ನಂದಿನಿ ಉತ್ಪನ್ನ ಮಾರಾಟ ವರ್ತಕರು ಹಾಲಿನ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಈ ಬಗ್ಗೆ ನಂದಿನಿ ಮಾರಾಟ ವರ್ತಕರಿಗೆ ಕೆಎಂಎಫ್ (KMF) ಎಚ್ಚರಿಕೆ ನೀಡಿದೆ.
ಹೌದು, ಮೊನ್ನೆ ವರಿಗೆ 22 ರೂ. ಇದ್ದ 500 ಎಂಎಲ್ ನಂದಿನಿ ಈಗ 550 ಎಂಎಲ್ ಪ್ಯಾಕೇಟ್ ಆಗಿ 24 ರೂ. ಆಗಿದೆ. ಇದೇ ರೀತಿ ಪ್ರತಿ ಪ್ಯಾಕೇಟ್‌ಗೆ 50 ಎಂಎಲ್ ಅಧಿಕ ಹಾಲು ನೀಡಿ 2 ರೂ. ಹೆಚ್ಚು ಮಾಡಿದೆ. ಇದಕ್ಕೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಅಂಬುಲೆನ್ಸ್, ಬೈಕ್ ಮಧ್ಯೆ ಅಪಘಾತ – ಮೂವರು ಸವಾರರು ದುರ್ಮರಣ
ಇನ್ನು ನಂದಿನಿ ಹಾಲನ್ನು ಅಧಿಕೃತ ಸ್ಟೋರ್‌ಗಳಲ್ಲಿ ಮಾತ್ರವಲ್ಲದೇ ಇತರ ಅಂಗಡಿಗಳಲ್ಲೂ ಮಾರಾಟ ಮಾಡಲಾಗುತ್ತದೆ. ಬೆಳಗಿನ ಸಮಯದಲ್ಲಿ ಬಿಟ್ಟು ಉಳಿದ ಸಮಯದಲ್ಲಿ ಕೆಲ ನಂದಿನಿ ಡೀಲರ್ಸ್ಗಳು ಮಾತ್ರವಲ್ಲದೇ ಉಳಿದ ಅನೇಕ ಕಡೆ ಎಂಆರ್‌ಪಿಗಿಂತ ಹೆಚ್ಚಿನ ಬೆಲೆ ಪಡೆಯುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬರುತ್ತಿವೆ. ಇದಕ್ಕೆ ಕಡಿವಾಣ ಹಾಕಿ ಗ್ರಾಹಕರಿಂದ ಹೆಚ್ಚಿನ ಹಣ ಪಡೆಯುವುದನ್ನು ನಿಲ್ಲಿಸಲು ಕೆಎಂಎಫ್ ಮುಂದಾಗಿದೆ.
ರಾಯಚೂರು: ಕೆಎಂಎಫ್ ನಂದಿನಿ ಹಾಲಿನ ದರ (KMF Nandini Milk Price) ಹೆಚ್ಚಳ ಮಾಡಿದ್ದು, ಇಂದಿನಿಂದಲೇ ಹೊಸ ದರ ಅನ್ವಯವಾಗುತ್ತಿದೆ. ಆದರೆ ರಾಯಚೂರಿನಲ್ಲಿ ಹಳೆಯ ದರದ ಪ್ಯಾಕೆಟ್‌ಗಳನ್ನ ಹೊಸ ದರದಲ್ಲಿ ಮಾರಾಟ ಮಾಡುತ್ತಿದ್ದು, ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಚ್ಚುವರಿ 50 M.L ಹಾಲು ಇಲ್ಲದಿದ್ದರೂ ಪ್ರತಿ ಅರ್ಧ ಲೀಟರ್ ಹಾಗೂ ಒಂದು ಲೀಟರ್ ಪ್ಯಾಕೆಟ್‌ಗೆ ಹೆಚ್ಚುವರಿ 2 ರೂ. ಪಡೆಯಲಾಗುತ್ತಿದೆ. ಕೆಎಂಎಫ್ ಹೊರಡಿಸಿರುವ ಆದೇಶದಲ್ಲಿ ಜೂನ್ 26 ರಿಂದಲೇ ಹೊಸ ದರ ಅನ್ವಯವಾಗುತ್ತದೆ ಅಂತ ನಮೂದಿಸಿರುವುದರಿಂದ ಹೊಸ ದರದಲ್ಲಿ ಮಾರಾಟ ಮಾಡುತ್ತಿರುವುದಾಗಿ ವ್ಯಾಪಾರಿಗಳು ಹೇಳುತ್ತಿದ್ದಾರೆ.
ಈ ಮಧ್ಯೆ ಕೆಎಂಎಫ್ ಅಧಿಕಾರಿಗಳು ಸೋಮವಾರ ರಾತ್ರಿ ಬಂದ ಹಾಲನ್ನು ಹಳೆದರಕ್ಕೆ ಮಾರಾಟ ಮಾಡಬೇಕು. ಇಂದು ಸಂಜೆ ಬರುವ ಹಾಲಿನ ಪ್ಯಾಕೆಟ್ ಅನ್ನ ಹೊಸ ದರಕ್ಕೆ ಮಾರಾಟ ಮಾಡಬೇಕು ಅಂತ ವ್ಯಾಪಾರಿಗಳಿಗೆ ಸೂಚಿಸಿರುವುದು ಇದೀಗ ವ್ಯಾಪಾರಿಗಳು ಹಾಗೂ ಗ್ರಾಹಕರು ಗೊಂದಲಕ್ಕೆ ಸಿಲುಕುವಂತಾಗಿದೆ.