Tag: ನಂದಿನಿ ಲೇ ಔಟ್

  • ಬೆಂಗ್ಳೂರಲ್ಲಿ ತಾಯಿ, ಮಗಳು, ಪತಿಯಿಂದ್ಲೇ ಹನಿಟ್ರ್ಯಾಪ್!

    ಬೆಂಗ್ಳೂರಲ್ಲಿ ತಾಯಿ, ಮಗಳು, ಪತಿಯಿಂದ್ಲೇ ಹನಿಟ್ರ್ಯಾಪ್!

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ಪ್ರಕರಣ ಬಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಂದಿನಿ ಲೇಔಟ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಬಂಧಿತರನ್ನು ತಾಯಿ ಬೇಬಿರಾಣಿ, ಪುತ್ರಿ ಪ್ರೀತಿ, ಗಂಡ ಪಟೇಲ್ ಬಾಬು ಮತ್ತು ಪಟೇಲ್ ಬಾಬು ಸಹೋದರ ಪ್ರಸಾದ್ ಅಂತಾ ಗುರುತಿಸಲಾಗಿದೆ. ಇಲ್ಲಿ ತಾಯಿ ಮತ್ತು ಮಗಳೇ ಪ್ರಮುಖ ಆರೋಪಿಗಳಾಗಿದ್ದಾರೆ.

    ಕೃಷ್ಣದಾಸ್ ಎಂಬಾತನ ಹನಿಟ್ರ್ಯಾಪ್ ಮಾಡಿದ್ದ ಆರೋಪಿಗಳು, ಬ್ಲಾಕ್ ಮೇಲ್ ಮಾಡಿ ಬರೊಬ್ಬರಿ 73 ಲಕ್ಷ 55 ಸಾವಿರ ಹಣ ಪೀಕಿದ್ರು. ಬಳಿಕ ಜಡ್ಜ್ ಹೆಸರಿನಲ್ಲಿ 65 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಗಾಬರಿಯಾದ ಕೃಷ್ಣದಾಸ್, ಪೊಲೀಸರಿಗೆ ದೂರು ನೀಡಿದ್ರು.

    ದೂರು ಸ್ವೀಕರಿಸಿದ ನಂದಿನಿಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹನಿಟ್ರ್ಯಾಪ್ ಜಾಲವನ್ನು ಬೇಧಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಈ ಹನಿಟ್ರ್ಯಾಪ್ ನಡೆದಿದೆ ಅಂತ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಟ್ಟ ಹಣ ವಾಪಾಸ್ ಕೇಳಿದ್ದಕ್ಕೆ ಬಾರ್ ಮಾಲೀಕನಿಗೆ ಚಾಕು ಇರಿತ!

    ಕೊಟ್ಟ ಹಣ ವಾಪಾಸ್ ಕೇಳಿದ್ದಕ್ಕೆ ಬಾರ್ ಮಾಲೀಕನಿಗೆ ಚಾಕು ಇರಿತ!

    ಬೆಂಗಳೂರು: ಕೊಟ್ಟ ಹಣ ವಾಪಸ್ಸು ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಬಾರ್ ಮಾಲೀಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಬೆಂಗಳೂರಿನ ನಂದಿನಿ ಲೇಔಟ್‍ನಲ್ಲಿ ನಡೆದಿದೆ.

    ಇಲ್ಲಿನ ರಾಜ್ ಕುಮಾರ್ ಸಮಾಧಿ ಬಳಿಯ ಕಾವೇರಿ ಬಾರ್ ಓನರ್ ಲಕ್ಕಣ್ಣ ಚಾಕು ಇರಿತಕ್ಕೆ ಒಳಗಾದವರು. ಎರಡು ವರ್ಷಗಳ ಹಿಂದೆ ಬಾರ್ ಮಾಲೀಕ ಲಕ್ಕಣ್ಣ, ನವೀನ್ ಎಂಬವರಿಗೆ 7 ಲಕ್ಷ ರೂ. ಹಣ ನೀಡಿದ್ರು. ಆದ್ರೆ ಇಲ್ಲಿಯವರೆಗೆ ನವೀನ್ ಹಣ ವಾಪಸ್ಸು ಕೊಟ್ಟಿರಲಿಲ್ಲ.

    ಇದೇ ವಿಚಾರವಾಗಿ ಗುರುವಾರ ರಾತ್ರಿ ಕಾವೇರಿ ಬಾರ್ ಬಳಿ ಇಬ್ಬರ ಮಧ್ಯೆ ವಾಗ್ವಾದ ನಡೆದು ಈ ವೇಳೆ ನವೀನ್, ಲಕ್ಕಣ್ಣಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

    ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರೆದಿದೆ.