Tag: ನಂದಿನಿ ಮಳಿಗೆ

  • ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ನಂದಿನಿ ಮಳಿಗೆ ಲೋಕಾರ್ಪಣೆ ಮಾಡಿದ ಸಿಎಂ

    ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ನಂದಿನಿ ಮಳಿಗೆ ಲೋಕಾರ್ಪಣೆ ಮಾಡಿದ ಸಿಎಂ

    ಬೆಂಗಳೂರು: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ (Majestic Metro Station) ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ನಂದಿನಿ ಮಳಿಗೆಯನ್ನು ಲೋಕಾರ್ಪಣೆ ಮಾಡಿದರು.

    ಪ್ರಾರಂಭಿಕವಾಗಿ ಮೂರು ಮೆಟ್ರೋ ಸ್ಟೇಷನ್‌ಗಳಲ್ಲಿ ನಂದಿನಿ ಮಳಿಗೆಗಳು (Nandini Outlet) ನಿರ್ಮಾಣ ಆಗಿದ್ದು, ಬಳಿಕ 10 ಮೆಟ್ರೋ ನಿಲ್ದಾಣದಲ್ಲಿ ನಿರ್ಮಾಣ ಆಗಲಿದೆ. ಅದರಂತೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ನಂದಿನಿ ಮಳಿಗೆ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಸೆಂಟ್ರಲ್ ಕಾಲೇಜ್ ಮೆಟ್ರೋ ನಿಲ್ದಾಣ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆ ಆರಂಭವಾಗಲಿದೆ.

    ನಂದಿನಿ ಮಳಿಗೆ ಉದ್ಘಾಟನೆ ವೇಳೆ ಸಚಿವ ದಿನೇಶ್ ಗುಂಡೂರಾವ್, ಬೆಂಗಳೂರು ಡೈರಿ ಅಧ್ಯಕ್ಷ ಡಿ.ಕೆ.ಸುರೇಶ್, ಕೆಎಂಎಫ್ ಎಂಡಿ ಶಿವಸ್ವಾಮಿ ಉಪಸ್ಥಿತರಿದ್ದರು.ಇದನ್ನೂ ಓದಿ: ಗಾಝಾ ನಗರವನ್ನು ನಾಶ ಮಾಡ್ತೇವೆ – ಹಮಾಸ್‍ಗೆ ಇಸ್ರೇಲ್ ವಾರ್ನಿಂಗ್

  • ನಮ್ಮ ಮೆಟ್ರೋ ಸ್ಟೇಷನ್‌ಗಳಲ್ಲಿ ನಂದಿನಿ ಮಳಿಗೆ ತೆರೆಯಲು ದಿನಾಂಕ ಫಿಕ್ಸ್‌

    ನಮ್ಮ ಮೆಟ್ರೋ ಸ್ಟೇಷನ್‌ಗಳಲ್ಲಿ ನಂದಿನಿ ಮಳಿಗೆ ತೆರೆಯಲು ದಿನಾಂಕ ಫಿಕ್ಸ್‌

    ಬೆಂಗಳೂರು: ನಮ್ಮ ಮೆಟ್ರೋಗಳಲ್ಲಿ (Namma Metro) ನಂದಿನಿ ಮಳಿಗೆ (Nandini Shop) ಓಪನ್‌ಗೆ ದಿನಾಂಕ ನಿಗದಿ ಆಗಿದೆ. ಪ್ರಾರಂಭಿಕವಾಗಿ ಮೂರು ಮೆಟ್ರೋ ಸ್ಟೇಷನ್‌ಗಳಲ್ಲಿ ನಂದಿನಿ ಮಳಿಗೆಗಳು ನಿರ್ಮಾಣ ಆಗಿದೆ. ಈ ತಿಂಗಳ ಅಂತ್ಯದಲ್ಲಿ ನಮ್ಮ ಮೆಟ್ರೋಗಳಲ್ಲಿ ನಂದಿನಿ ಮಳಿಗೆಗಳು ಓಪನ್ ಆಗಲಿವೆ. ಕೆಎಂಎಫ್, ಬಿಎಂಆರ್‌ಸಿಎಲ್‌ ಮಳಿಗೆಗಳ ಓಪನ್‌ಗೆ ಸಿದ್ಧತೆ ಮಾಡಿವೆ.

    ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆಗಳ ಓಪನ್‌ಗೆ ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಅವಕಾಶ ನೀಡಿದ್ದರು. 10 ಮೆಟ್ರೋ ನಿಲ್ದಾಣಗಳಲ್ಲಿ ಓಪನ್ ಮಾಡ್ತೇವೆ ಎಂದಿದ್ದರು. ಈಗ ಪ್ರಾರಂಭಿಕವಾಗಿ 3 ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆಗಳ ನಿರ್ಮಾಣ ಸಿದ್ಧವಾಗಿದೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ, ಸೆಂಟ್ರಲ್ ಕಾಲೇಜ್ ಮೆಟ್ರೋ ನಿಲ್ದಾಣ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆ ನಿರ್ಮಾಣ ಆಗಿದೆ. ಇದನ್ನೂ ಓದಿ: ಸಚಿವ ಬೈರತಿ ಸುರೇಶ್ ಪಿಎಸ್ ಮನೆ ಮೇಲೆ ʻಲೋಕಾʼ ದಾಳಿ – ಭಾರೀ ಪ್ರಮಾಣದ ಆಸ್ತಿ ದಾಖಲೆ ವಶಕ್ಕೆ

    ಇನ್ನೂ ಈ ತಿಂಗಳ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ನಂದಿನಿ ಮಳಿಗೆಯು ಸಾರ್ವಜನಿಕರ ಸೇವೆಗೆ ಸಿಗಲಿದೆ. ಈ ಬಗ್ಗೆ ಕೆಎಂಎಫ್ ಎಂಡಿ ಶಿವಸ್ವಾಮಿ ಈಗಾಗಲೇ 3 ಮೆಟ್ರೋ ನಿಲ್ದಾಣಗಳಲ್ಲಿ ಸೇವೆಗೆ ಸಿದ್ಧವಾಗ್ತಿವೆ. ಮುಂದಿನ ವಾರದಲ್ಲಿ ಉದ್ಘಾಟನೆ ಮಾಡೋದಕ್ಕೆ ಪ್ಲ್ಯಾನ್ ಮಾಡುತ್ತಿದ್ದೇವೆ. ಎಲ್ಲಾ ರೀತಿಯ ನಂದಿನಿ ಉತ್ಪನ್ನಗಳು ಇಲ್ಲಿ ಸಿಗಲಿವೆ. 3 ಮೆಟ್ರೋ ಸ್ಟೇಷನ್‌ಗಳನ್ನ ಹೊರತುಪಡಿಸಿ ಉಳಿದ ಕಡೆಗಳಲ್ಲೂ ಮಳಿಗೆ ತೆರೆಯಲು ಪ್ಲ್ಯಾನ್ ಮಾಡಲಾಗ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಮುಂದಿನ ಉಪರಾಷ್ಟ್ರಪತಿ ಆಯ್ಕೆ – ಮೋದಿ ವಿದೇಶಿ ಪ್ರವಾಸದ ಬಳಿಕ ಅಂತಿಮ ನಿರ್ಧಾರ

    ಒಟ್ಟಾರೆ ನಮ್ಮ‌ ಮೆಟ್ರೋ ನಿಲ್ದಾಣದಲ್ಲಿ ಈ ತಿಂಗಳ ಅಂತ್ಯಕ್ಕೆ ನಂದಿನಿ ಮಳಿಗೆಗಳ ಓಪನ್ ಆಗ್ತಿದ್ದು, ಉಳಿದ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆ ಯಾವಾಗಿನಿಂದ ಓಪನ್ ಆಗಲಿವೆ. ಬೇರೆ ಬ್ರ್ಯಾಂಡ್‌ಗಳಿಗೆ ಮಣೆ ಹಾಕದೇ ನಂದಿನಿಗೆ ಹೆಚ್ಚು ಉತ್ತೇಜನ ನೀಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.