Tag: ನಂದಿನಿ ಉತ್ಪನ್ನ

  • ಸೋಮವಾರದಿಂದಲೇ ನಂದಿನಿ ಉತ್ಪನ್ನಗಳ ದರ ಇಳಿಕೆ; ಯಾವುದಕ್ಕೆ ಎಷ್ಟು ದರ? – ಇಲ್ಲಿದೆ ಪಟ್ಟಿ

    ಸೋಮವಾರದಿಂದಲೇ ನಂದಿನಿ ಉತ್ಪನ್ನಗಳ ದರ ಇಳಿಕೆ; ಯಾವುದಕ್ಕೆ ಎಷ್ಟು ದರ? – ಇಲ್ಲಿದೆ ಪಟ್ಟಿ

    – ನಂದಿನಿ ತುಪ್ಪ, ಬೆಣ್ಣೆ, ಚೀಸ್‌, ಕುರುಕು ತಿಂಡಿ ಬೆಲೆ ಇಳಿಕೆ

    ಬೆಂಗಳೂರು: ಕೆಎಂಎಫ್ (KMF) ಗ್ರಾಹಕರಿಗೆ ನವರಾತ್ರಿ ಸಿಹಿಸುದ್ದಿ ಸಿಕ್ಕಿದೆ. ಸೋಮವಾರದಿಂದಲೇ ನಂದಿನಿ ಉತ್ಪನ್ನಗಳ (Nandini Products) ದರ ಇಳಿಕೆಯಾಗಲಿದ್ದು, ಉತ್ಪನ್ನಗಳ ಹೊಸ ದರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

    ನೂತನ ಜಿಎಸ್‌ಟಿ ಇಳಿಕೆಯ ಹಿನ್ನಲೆಯಲ್ಲಿ ಕೆಲ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಜಿಎಸ್‌ಟಿ ದರ ಶೇ.12 ರಿಂದ 5 ಕ್ಕೆ ಇಳಿಕೆ ಮತ್ತು ಕೆಲ ಉತ್ಪನ್ನಗಳ 5 ರಿಂದ 0 ಗೆ ತರಲಾಗಿದೆ. ಹೀಗಾಗಿ, ಸೆ.22 ರಿಂದ ನಂದಿನಿ ಉತ್ಪನ್ನಗಳ ಇಳಿಕೆಗೆ ಕೆಎಂಎಫ್ ನಿರ್ಧರಿಸಿದೆ. ಇದನ್ನೂ ಓದಿ: ಗ್ರಾಹಕರಿಗೆ ಗುಡ್‌ನ್ಯೂಸ್‌- ನಂದಿನಿಯ ಕೆಲ ಉತ್ಪನ್ನಗಳ ಬೆಲೆ ಸೋಮವಾರದಿಂದ ಇಳಿಕೆ

    ತುಪ್ಪ, ಬೆಣ್ಣೆ, ಚೀಸ್ ಸೇರಿ ವಿವಿಧ ಉತ್ಪನ್ನ ದರ ಇಳಿಕೆಯಾಗಿದೆ. ಪನ್ನಿರ್ ಮತ್ತು ಯುಹೆಚ್‌ಟಿ ಮಿಲ್ಕ್ (ಗುಡ್ ಲೈಫ್) ಬೆಲೆ ಕೂಡ ಕಡಿಮೆಯಾಗಿದೆ. ಶೇ.5 ರಷ್ಟು ಇದ್ದ ಜಿಎಸ್ಟಿ ಶೂನ್ಯಕ್ಕೆ ಕೇಂದ್ರ ಸರ್ಕಾರ ತಂದಿದೆ. ಬೆಣ್ಣೆ, ತುಪ್ಪ, ಚೀಸ್ ಮೇಲೆ ಶೇ.12 ರಷ್ಟಿದ್ದ ಜಿಎಸ್‌ಟಿ ಸೋಮವಾರದಿಂದ ಶೇ.5 ಕ್ಕೆ ಇಳಿಕೆಯಾಗಿದೆ.

    ಸೋಮವಾರದಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಈಗಾಗಲೇ ಜಿಎಸ್‌ಟಿ ಕಡಿಮೆ ಮಾಡಿರುವ ಉತ್ಪನ್ನಗಳ ದರ ನಿಗದಿಗೆ ಕಾರ್ಯಾರಂಭ ಮಾಡಲಾಗಿದೆ. ದರ ಇಳಿಕೆ ಬಗ್ಗೆ ಕೆಎಂಎಫ್ ಮಾಹಿತಿ ಹಂಚಿಕೊಂಡಿದೆ.

    ನಂದಿನಿ ತುಪ್ಪ, ಬೆಣ್ಣೆ, ಚೀಸ್, ಕುರುಕು ತಿಂಡಿ ಮೇಲೆ 12 ರಿಂದ 5% ಗೆ ಇಳಿಕೆಯಾಗಿದೆ. ಕುಕ್ಕಿಸ್, ಚಾಕಲೇಟ್, ಐಸ್ಕ್ರೀಮ್ ಮೇಲೆ 18 ರಿಂದ 5%ಕ್ಕೆ ಹಾಗೂ ಪನ್ನೀರ್ 5 ರಿಂದ 0% ಗೆ ಇಳಿಕೆ ಕಂಡಿದೆ.

    ಯಾವ್ಯಾವ ಉತ್ಪನ್ನಗಳ ದರ ಇಳಿಕೆ?
    ತುಪ್ಪ- ( 1000- ಮಿ.ಲಿ)
    650 – ಹಳೆ ದರ
    610 – ಈಗಿನ ದರ

    ಬೆಣ್ಣೆ- 500 ಗ್ರಾಂ

    ಹಳೆ ದರ – 305
    ಹೊಸ ದರ – 286

    ಪನ್ನೀರ್ – 1000 ಗ್ರಾಂ

    ಹಳೆ ದರ – 425
    ಹೊಸ – 408

    ಗುಡ್ ಲೈಫ್ ಹಾಲು -1000 (ಮಿ.ಲೀ)

    ಹಳೆ ದರ – 70
    ಹೊಸ ದರ – 68

    ಸಂಸ್ಕರಿಸಿದ ಚೀಸ್

    ಹಳೆ ದರ – 530
    ಹೊಸ ದರ – 497

    ಐಸ್‌ಕ್ರೀಮ್ ಫ್ಯಾಮಿಲಿ ಪ್ಯಾಕ್ (5000 ಮಿ.ಲೀ)
    ಹಳೆ ದರ – 645
    ಹೊಸ ದರ – 574

    ಐಸ್‌ಕ್ರೀಮ್ ವೆನಿಲಾ ಟಬ್ (1000 ಮಿ.ಲೀ)
    ಹಳೆ ದರ – 200
    ಹೊಸ ದರ – 178

    ಐಸ್‌ಕ್ರೀಮ್ ಚಾಕಲೇಟ್ ಸಂಡೇ
    ಹಳೆ ದರ – 115
    ಹೊಸ ದರ – 102

    ಐಸ್‌ಕ್ರೀಮ್ ಮ್ಯಾಂಗೋ ನ್ಯಾಚುರಲ್ಸ್
    ಹಳೆ ದರ – 35
    ಹೊಸ ದರ – 31

    ಖಾರಾ ಉತ್ಪನ್ನಗಳು
    ಹಳೆ ದರ – 60
    ಹೊಸ ದರ – 56

    ಮಫಿನ್‌ಗಳು
    ಹಳೆ ದರ – 50
    ಹೊಸ ದರ – 45

    ನಂದಿನಿ ನೀರು (1000 ಮಿ.ಲೀ)
    ಹಳೆ ದರ – 20
    ಹೊಸ ದರ – 18

    ಜಾಮೂನು ಮಿಶ್ರಣ
    ಹಳೆ ದರ – 80
    ಹೊಸ ದರ – 71

    ಬಾದಾಮ್ ಹಾಲಿನ ಪುಡಿ – (200 ಗ್ರಾಂ)
    ಹಳೆ ದರ – 120
    ಹೊಸ ದರ – 107

    ಕುಕೀಸ್ (100 ಗ್ರಾಂ)
    ಹಳೆ ದರ – 35
    ಹೊಸ ದರ – 31

    ರೈಸ್ ಕ್ರಿಪಿ ಮಿಲ್ಕ್ ಚಾಕೋ (80 ಗ್ರಾಂ)
    ಹಳೆ ದರ – 65
    ಹೊಸ ದರ – 58

    ಕೇಕ್‌ಗಳು (200 ಗ್ರಾಂ)
    ಹಳೆ ದರ – 110
    ಹೊಸ ದರ – 98

    ಬೌನ್ಸ್ (200 ಮಿ.ಲೀ)
    ಹಳೆ ದರ – 15
    ಹೊಸ ದರ – 15

  • ನಂದಿನಿ ಜಾಹೀರಾತಿಗೆ ಯಾವುದೇ ಸಂಭಾವನೆ ಪಡೆಯಲ್ಲ: ನಟ ಶಿವರಾಜ್ ಕುಮಾರ್

    ನಂದಿನಿ ಜಾಹೀರಾತಿಗೆ ಯಾವುದೇ ಸಂಭಾವನೆ ಪಡೆಯಲ್ಲ: ನಟ ಶಿವರಾಜ್ ಕುಮಾರ್

    ರೈತರ ಜೀವನಾಡಿ ಆಗಿರುವ ಕೆ.ಎಮ್.ಎಫ್ ನಂದಿನಿ ಉತ್ಪನ್ನಗಳಿಗೆ (Nandini Product) ನೂತನ ರಾಯಭಾರಿಯಾಗಿ ನಟ ಶಿವರಾಜ್ ಕುಮಾರ್ (Shivaraj Kumar) ಆಯ್ಕೆಯಾಗಿದ್ದಾರೆ. ಈ ಕುರಿತು ಮಾತನಾಡಿದ ಶಿವರಾಜ್ ಕುಮಾರ್, ‘ನಂದಿನಿ ಜಾಹೀರಾತಿಗಾಗಿ ನಾನು ಯಾವುದೇ ಸಂಭಾವನೆ ಪಡೆಯುವುದಿಲ್ಲ. ಇದು ನಮ್ಮ ಕರ್ತವ್ಯ. ದೊಡ್ಡ ತ್ಯಾಗ ಏನಲ್ಲ’ ಎಂದಿದ್ದಾರೆ.

    ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿರುವ ಶಿವರಾಜ್ ಕುಮಾರ್, ‘ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳಬೇಕು. ಖುಷಿಯಾಗುತ್ತೆ. ಸರ್ಕಾರ ನಮ್ಮ‌ಕುಟುಂಬಕ್ಕೆ ಗೌರವ ನೀಡಿ ನೀಡಿದ್ದಕ್ಕೆ. ಇದು ರೈತರಿಗೆ ಸಂಬಂಧಿಸಿದ ವಿಚಾರ. ನಂದಿನಿ ಎಂಬ ಭರವಸೆಗೆ ಭಾರತಾದ್ಯಂತ ಬೇಡಿಕೆಯಿದೆ. ಈ ಬೇಡಿಕೆಗೆ ಜೆನ್ಯೂನ್ ಆಗಿ ನಮ್ಮ ಸಹಕಾರ ಇರುತ್ತೆ. ಬರೀ ಬಂದು ಫೋಟೋ ಕೊಡೋದು ಚಿತ್ರಿಕರಣ ಮಾಡೋದಲ್ಲ. ಸಮಯ ಇದ್ದಾಗ ಪ್ರಚಾರವೂ ಮಾಡುವೆ.’ ಎಂದಿದ್ದಾರೆ.

    ಅಲ್ಲದೇ,  ನಂದಿನಿ ಉತ್ಪನ್ನವನ್ನೇ ನಮ್ಮ ಮನೆಯಲ್ಲಿ ಬಳಕೆ ಮಾಡ್ತೇವೆ. ನಮ್ಮ ಮನೆಯ ಹತ್ತಿರದಲ್ಲೇ ನಂದಿನಿ ಪಾರ್ಲರ್ ಇದೆ. KMF ಹಾಲಿನ ಪ್ರಚಾರಕ್ಕೆ ಆ್ಯಡ್ ಶೂಟಿಂಗ್ ಸದ್ಯ ಪ್ಲ್ಯಾನ್ ನಡೆಯುತ್ತಿದೆ ಎಂದು ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ರಿಸೆಪ್ಷನ್ ಸಂಭ್ರಮದಲ್ಲಿ ‘ಕಾಮಿಡಿ ಕಿಲಾಡಿಗಳು’ ಸಂಜು ಬಸಯ್ಯ- ಪಲ್ಲವಿ ಜೋಡಿ

    ಕೆಎಂಎಫ್ ಗೂ ಡಾ.ರಾಜ್ ಕುಟುಂಬಕ್ಕೂ ಹತ್ತಿರದ ನಂಟಿದೆ. 1996ರಲ್ಲಿ ಡಾ.ರಾಜ್ ಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಿ (Ambassador) ಒಪ್ಪಿಕೊಂಡರು. ಉಚಿತವಾಗಿಯೇ ಅದನ್ನು ಮಾಡಿಕೊಂಡು ಬಂದರು. ಡಾ.ರಾಜ್ ಕುಮಾರ್ (Raj Kumar) ಕಾಣಿಸಿಕೊಂಡ ಏಕೈಕ ಜಾಹೀರಾತು ಅದಾಗಿತ್ತು. ಡಾ.ರಾಜ್ ಕುಮಾರ್ ಮರಣಾನಂತರ ಆ ಜವಾಬ್ದಾರಿಯನ್ನು ಪುನೀತ್ ರಾಜ್ ಕುಮಾರ್ (Puneeth) ಮುಂದುವರೆಸಿಕೊಂಡು ಹೋಗುತ್ತಿದ್ದರು.

     

    ಪುನೀತ್ ನಿಧನಾನಂತರ ಮತ್ತೆ ಡಾ.ರಾಜ್ ಕುಟುಂಬಕ್ಕೆ ಆ ಸೇವೆ ಹುಡುಕಿಕೊಂಡು ಹೋಗಿದೆ. ಶಿವರಾಜ್ ಕುಮಾರ್ ಕೂಡ ನಂದಿನಿ ಉತ್ಪನ್ನಗಳ ರಾಯಭಾರಿಯಾಗಿ ತಂದೆ ಮತ್ತು ಸಹೋದರನ ಕೆಲಸವನ್ನು ಮುಂದುರೆಸಿಕೊಂಡು ಹೋಗಲಿದ್ದಾರೆ. 1996ರಿಂದ ಡಾ.ರಾಜ್ ಕುಮಾರ್ ರಾಯಭಾರಿಯಾಗಿದ್ದರೆ, 2009ರಲ್ಲಿ ಪುನೀತ್ ನೇಮಕವಾಗಿದ್ದರು. 2023ರಿಂದ ಆ ಜವಾಬ್ದಾರಿಯನ್ನು ಶಿವಣ್ಣ ವಹಿಸಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಂದಿನಿ ಉತ್ಪನ್ನಗಳಿಗೆ ಶಿವಣ್ಣ ರಾಯಭಾರಿ: ತಂದೆ-ತಮ್ಮನ ಹಾದಿಯಲ್ಲಿ ಸೆಂಚುರಿಸ್ಟಾರ್

    ನಂದಿನಿ ಉತ್ಪನ್ನಗಳಿಗೆ ಶಿವಣ್ಣ ರಾಯಭಾರಿ: ತಂದೆ-ತಮ್ಮನ ಹಾದಿಯಲ್ಲಿ ಸೆಂಚುರಿಸ್ಟಾರ್

    ರ್ನಾಟಕದ ಹೆಮ್ಮೆಯ ಪ್ರತೀಕ ನಂದಿನಿ ಹಾಲು ಉತ್ಪನ್ನಗಳಿಗೆ (Nandini Product) ರಾಯಭಾರಿಯಾಗಿ ಸ್ಯಾಂಡಲ್ ವುಡ್ ನ ಹೆಸರಾಂತ ನಟ ಶಿವರಾಜ್ ಕುಮಾರ್ ಆಯ್ಕೆಯಾಗಿದ್ದಾರೆ. ಇಂದು ಶಿವರಾಜ್ ಕುಮಾರ್ ಜೊತೆ ಕೆಎಂಎಫ್ ಅಧಿಕಾರಿಗಳು ಮಾತುಕತೆ ನಡೆಸಿ, ಶಿವರಾಜ್ ಕುಮಾರ್ (Shivaraj Kumar) ಅವರನ್ನು ಒಪ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸೇರಿದಂತೆ ಹಲವರು ಹಾಜರಿದ್ದರು.


    ಕೆಎಂಎಫ್ (KMF) ಗೂ ಡಾ.ರಾಜ್ ಕುಟುಂಬಕ್ಕೂ ಹತ್ತಿರದ ನಂಟಿದೆ. 1996ರಲ್ಲಿ ಡಾ.ರಾಜ್ ಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಿ (Ambassador) ಒಪ್ಪಿಕೊಂಡರು. ಉಚಿತವಾಗಿಯೇ ಅದನ್ನು ಮಾಡಿಕೊಂಡು ಬಂದರು. ಡಾ.ರಾಜ್ ಕುಮಾರ್ ಕಾಣಿಸಿಕೊಂಡ ಏಕೈಕ ಜಾಹೀರಾತು ಅದಾಗಿತ್ತು. ಡಾ.ರಾಜ್ ಕುಮಾರ್ ಮರಣಾನಂತರ ಆ ಜವಾಬ್ದಾರಿಯನ್ನು ಪುನೀತ್ ರಾಜ್ ಕುಮಾರ್ (Puneeth) ಮುಂದುವರೆಸಿಕೊಂಡು ಹೋಗುತ್ತಿದ್ದರು.


    ಪುನೀತ್ ನಿಧನಾನಂತರ ಮತ್ತೆ ಡಾ.ರಾಜ್ (Raj Kumar) ಕುಟುಂಬಕ್ಕೆ ಆ ಸೇವೆ ಹುಡುಕಿಕೊಂಡು ಹೋಗಿದೆ. ಶಿವರಾಜ್ ಕುಮಾರ್ ಕೂಡ ನಂದಿನಿ ಉತ್ಪನ್ನಗಳ ರಾಯಭಾರಿಯಾಗಿ ತಂದೆ ಮತ್ತು ಸಹೋದರನ ಕೆಲಸವನ್ನು ಮುಂದುರೆಸಿಕೊಂಡು ಹೋಗಲಿದ್ದಾರೆ. 1996ರಿಂದ ಡಾ.ರಾಜ್ ಕುಮಾರ್ ರಾಯಭಾರಿಯಾಗಿದ್ದರೆ, 2009ರಲ್ಲಿ ಪುನೀತ್ ನೇಮಕವಾಗಿದ್ದರು. 2023ರಿಂದ ಆ ಜವಾಬ್ದಾರಿಯನ್ನು ಶಿವಣ್ಣ ವಹಿಸಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Amul Vs Nandini: ಅಮುಲ್‌ಗೆ KMF ಸೆಡ್ಡು – ಆನ್‌ಲೈನ್‌ನಲ್ಲೂ ನಂದಿನಿ ಉತ್ಪನ್ನ ಸೇಲ್

    Amul Vs Nandini: ಅಮುಲ್‌ಗೆ KMF ಸೆಡ್ಡು – ಆನ್‌ಲೈನ್‌ನಲ್ಲೂ ನಂದಿನಿ ಉತ್ಪನ್ನ ಸೇಲ್

    ಬೆಂಗಳೂರು: ಕೆಎಂಎಫ್ (KMF), ಅಮುಲ್ (Amul) ನಡುವಿನ ಸಮರ ತಣ್ಣಗಾಗುವಂತೆ ಕಾಣುತ್ತಿಲ್ಲ. ವಿರೋಧದ ಮಧ್ಯೆಯೂ ಆನ್‌ಲೈನ್‌ನಲ್ಲಿ (KMF Online Products) ಉತ್ಪನ್ನಗಳ ಮಾರಾಟಕ್ಕೆ ಮುಂದಾದ ಅಮುಲ್‌ಗೆ ಈಗ ಕೆಎಂಫ್ ಸೆಡ್ಡು ಹೊಡೆದಿದೆ.

    ಆನ್‌ಲೈನ್‌ನಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಹೆಚ್ಚಿಸಿದೆ. ಸದ್ಯಕ್ಕೆ ಸರಿಸುಮಾರು 2 ಲಕ್ಷ ಲೀಟರ್ ನಂದಿನಿ ಹಾಲು ಆನ್‌ಲೈನ್ ಮೂಲಕ ಸೇಲ್ ಆಗುತ್ತಿದೆ. ಇದರ ಪ್ರಮಾಣ ಇನ್ನಷ್ಟು ಹೆಚ್ಚಿಸುವ ಗುರಿಯನ್ನು ಕೆಎಂಎಫ್ ಹೊಂದಿದೆ. ಅಪಾರ್ಟ್ಮೆಂಟ್‌ಗಳು ಹಾಗೂ ಹೊರರಾಜ್ಯದವರನ್ನೇ ಕೆಎಂಎಫ್ ಟಾರ್ಗೆಟ್ ಮಾಡಿಕೊಂಡಿದೆ ಎನ್ನಲಾಗಿದೆ. ಇದನ್ನೂ ಓದಿ: ಅಮುಲ್ ದೇಶದ ಬ್ರ್ಯಾಂಡ್‌, ಭಾರತದಲ್ಲೇ ಮಾರಾಟ ಮಾಡಿದ್ರೆ ಏನು ತೊಂದ್ರೆ – ಸಿ.ಟಿ ರವಿ ಪ್ರಶ್ನೆ

    ಏನಿದು ವಿವಾದ?
    ಅಮುಲ್ ಕುಟುಂಬ ಬೆಂಗಳೂರು (Bengaluru) ನಗರಕ್ಕೆ ಹಾಲು ಮತ್ತು ಮೊಸರಿನ ರೂಪದಲ್ಲಿ ಹೊಸ ತಾಜಾತನವನ್ನು ತರುತ್ತಿದೆ. ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದ್ದು, ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಮಾಡಬಹುದು ಎಂದು ಅಮುಲ್ ಕನ್ನಡ ಏಪ್ರಿಲ್ 5 ರಂದು ಟ್ವೀಟ್ ಮಾಡಿತ್ತು. ಈ ಟ್ವೀಟ್ ಮಾಡಿದ ಬೆನ್ನಲ್ಲೇ ಕನ್ನಡಿಗರು, ರಾಜಕೀಯ ನಾಯಕರು ಅಮುಲ್ ಮತ್ತು ಬಿಜೆಪಿ ವಿರುದ್ಧ ಟೀಕೆ ಮಾಡಲು ಆರಂಭಿಸಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ನಂದಿನಿ ಬ್ರ್ಯಾಂಡ್ ಬಗ್ಗೆ‌ ಹರಿದಾಡುತ್ತಿರುವ ಸುದ್ದಿ ಸುಳ್ಳು: KMF ಸ್ಪಷ್ಟನೆ

    ಅಮುಲ್ ಪರ ವಾದವೇನು?
    ನಂದಿನಿ ಕೇವಲ ಕರ್ನಾಟಕದಲ್ಲಿ ಮಾತ್ರ ಹಾಲನ್ನು ಮಾರಾಟ ಮಾಡುತ್ತಿಲ್ಲ. ಉಳಿದ ರಾಜ್ಯಗಳಲ್ಲೂ ಹಾಲನ್ನು ಮಾರಾಟ ಮಾಡುತ್ತಿದೆ. ಹೀಗಿರುವಾಗ ಅಮುಲ್ ಬೇಡ ಎಂದು ಹೇಳಲು ಒಕ್ಕೂಟ ವ್ಯವಸ್ಥೆಯಲ್ಲಿ ಯಾವ ಅಧಿಕಾರವಿದೆ. ಯಾವುದು ಬೇಕೋ ಅದನ್ನು ಗ್ರಾಹಕ ಖರೀದಿಸುತ್ತಾನೆ.

  • ವೇದಿಕೆಯಲ್ಲಿ ನಂದಿನಿ ವೆನಿಲ್ಲಾ ಫ್ಲೇವರ್ ಹಾಲು ಕುಡಿದ ಸಿದ್ದರಾಮಯ್ಯ

    ವೇದಿಕೆಯಲ್ಲಿ ನಂದಿನಿ ವೆನಿಲ್ಲಾ ಫ್ಲೇವರ್ ಹಾಲು ಕುಡಿದ ಸಿದ್ದರಾಮಯ್ಯ

    ಮೈಸೂರು: ಇಲ್ಲಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ (Chamundeshwari Constituency) ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವೇದಿಕೆಯಲ್ಲಿ ನಂದಿನಿ ವೆನಿಲ್ಲಾ ಫ್ಲೇವರ್ ಹಾಲು ಕುಡಿದು `ನಂದಿನಿ’ ಉತ್ಪನ್ನಕ್ಕೆ (Nandini Products) ಬೆಂಬಲ ಸೂಚಿಸಿದ್ದಾರೆ.

    ಮೈಸೂರು (Mysuru) ಹೊರವಲಯದ ಕೇರ್ಗಳ್ಳಿ ಗ್ರಾಮದ ಖಾಸಗಿ ಭವನದಲ್ಲಿ ಸಭೆ ನಡೆಯುವಾಗ ಆಪ್ತರೊಂದಿಗೆ ವೇದಿಕೆಯಲ್ಲಿ ಕುಳಿತಿದ್ದ ಸಿದ್ದರಾಮಯ್ಯ ನಂದಿನಿ ವೆನಿಲ್ಲಾ ಫ್ಲೇವರ್ ಬಾಟಲಿ ಹಾಲು ಕುಡಿದು, ಬಳಿಕ ಬಾಟಲಿ ತೋರಿಸಿ `ನಂದಿನಿ’ ಉತ್ಪನ್ನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

    ನಂತರ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಮುಖಂಡರನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಎಲ್ಲರ ಅಭಿಪ್ರಾಯಪಡೆದು, ಎದುರಾಳಿಯನ್ನು ಎದುರಿಸುವ ಶಕ್ತಿ ಇರುವ ಅಭ್ಯರ್ಥಿಗೆ ಟಿಕೆಟ್ ನೀಡಿದ್ದೇವೆ. ಪಕ್ಷದಲ್ಲಿ ಎಲ್ಲರೂ ಸಮರ್ಥರಿದ್ದಾರೆ, ಆದ್ರೆ ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ. ಆ ಕಾರಣಕ್ಕೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದೇಗೌಡರಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ವರುಣಾದಲ್ಲಿ ಬಿಗ್‌ ಫೈಟ್‌: ಸಿದ್ದು v/s ಸೋಮಣ್ಣ – ಯಾರ ಕೈ ಹಿಡೀತಾರೆ ವರುಣಾ ಮತದಾರ?

    ಈಬಾರಿ ಚುನಾವಣೆಯನ್ನ ಪ್ರತಿಯೊಬ್ಬರು ಗಂಭೀರವಾಗಿ ತೆಗೆದುಕೊಳ್ಳಬೇಕು. ಕಳೆದಬಾರಿ ಜಿ.ಟಿ ದೇವೇಗೌಡ (GT Devegowda) ಅವರು ನನ್ನನ್ನ ಸೋಲಿಸಿದ್ರು. ನನ್ನನ್ನ ಸೋಲಿಸಿ ಬಹಳ ಒಳ್ಳಯ ಕೆಲಸ ಮಾಡಿದ್ರು, ಏಕೆಂದರೆ ಬಿಜೆಪಿ ಮಾತ್ರ ಅಧಿಕಾರಕ್ಕೆ ಬರಬಾರದು. ಅವರು ಮನುಷ್ಯ-ಮನುಷ್ಯರ ನಡುವೆ ಎತ್ತಿಕಟ್ತಾರೆ, ದೇಶದಲ್ಲಿ ಅಶಾಂತಿ ಉಂಟಾಗುತ್ತೆ, ಆ ಕಾರಣಕ್ಕೆ ಬಿಜೆಪಿ ಮಾತ್ರ ಅಧಿಕಾರಕ್ಕೆ ಬರಬಾರದು ಎಂದು ಗುಡುಗಿದರು. ಇದನ್ನೂ ಓದಿ: ವರುಣಾ ಕ್ಷೇತ್ರದಲ್ಲಿ ಜನ ಅಬ್ಬೆಪಾರಿಗಳಾಗಿದ್ದಾರೆ : ಪ್ರತಾಪ್ ಸಿಂಹ

    ಯಾರಾದ್ರೂ ರಕ್ತಕೊಡಿ ಎಂದು ಕೇಳುವಾಗ ಜಾತಿ ನೋಡಲ್ಲ, ಮುಸ್ಲಿಂ ಆದರೂ ಸರಿ ಕೊಡಿ ಅಂತೀವಿ. ಆದ್ರೆ ಬಿಜೆಪಿಯವರು ಭೇದ ಭಾವ ಮಾಡೋದ್ರಲ್ಲಿ ಮುಂಚೂಣಿಯಲ್ಲಿದ್ದಾರೆ. ಆ ಕಾರಣಕ್ಕೆ ನಾವು ಕಳೆದಬಾರಿ ಜೆಡಿಎಸ್‌ಗೆ ಅಧಿಕಾರ ನೀಡಿದ್ದೆವು. ಆ ಸಂದರ್ಭದಲ್ಲಿ ಕುಮಾರಸ್ವಾಮಿ ಸಿಎಂ ಆದ್ರು, ಜಿ.ಟಿ ದೇವೇಗೌಡ ಶಿಕ್ಷಣ ಸಚಿವರಾದರು. ಅವರಿಬ್ಬರ ನಡುವೆ ಹೊಂದಾಣಿಕೆ ಇಲ್ಲದಿದ್ದಾಗ ನನ್ನ ಬಳಿ ಬಂದು, ಕಾಂಗ್ರೆಸ್‌ಗೆ ಬರ್ತೀನಿ ಅಂದಿದ್ರು. ಅವನೇ ಬಂದ, ಅವನೇ ಹೋದ, ಈವಾಗ ಜೆಡಿಎಸ್ ನಿಂದ ಅರ್ಜಿ ಹಾಕಿದ್ದಾನೆ. ಕುಮಾರಸ್ವಾಮಿ ಎಷ್ಟೇ `ಪಂಚರತ್ನ ಯಾತ್ರೆ’ ಮಾಡಿದ್ರೂ ಅಧಿಕಾರಕ್ಕೆ ಬರಲ್ಲ, ಇನ್ನೊಬ್ಬರ ಹೆಗಲಮೇಲೆ ಕುಳಿತೇ ಅಧಿಕಾರ ಮಾಡಬೇಕು ಎಂದು ಕುಟುಕಿದ್ದಾರೆ.

  • `ನಂದಿನಿ’ ನಮ್ಮವಳು – ನಮ್ಮ ಹಾಲು ನಮ್ಮ ಬದುಕು; ನಂದಿನಿ ಉಳಿಸಿ ಎಂದ ಡಿಕೆಶಿ

    `ನಂದಿನಿ’ ನಮ್ಮವಳು – ನಮ್ಮ ಹಾಲು ನಮ್ಮ ಬದುಕು; ನಂದಿನಿ ಉಳಿಸಿ ಎಂದ ಡಿಕೆಶಿ

    ಹಾಸನ: `ನಂದಿನಿ’ (Nandini Milk) ನಮ್ಮವಳು, ನಮ್ಮ ಹಾಲು ನಮ್ಮ ಬದುಕು. ಎಲ್ಲ ಹಾಲಿನ ಉತ್ಪನ್ನಗಳ ಬೆಲೆ ಜಾಸ್ತಿಯಾಗಿವೆ. ಆದರೆ ರೈತರಿಗೆ ಯಾವ ತರಹದ ಸಹಾಯ ಆಗಿಲ್ಲ. ರೈತರಿಗೆ (Farmers) ಹಾಲು ಉತ್ಪಾದನೆ ಮಾಡಲು ಸರ್ಕಾರ ಸಹಾಯ ಮಾಡಿಲ್ಲ. ಇದರಿಂದ ನಮ್ಮ ಹಸುಗಳ ಹಾಲನ್ನೇ ನಾವು ಮಾರಾಟ ಮಾಡೋಕೆ ಆಗದ ಪರಿಸ್ಥಿತಿ ಬಂದೊದಗಿದೆ. ಹಾಗಾಗಿ ನಂದಿನಿ ಉತ್ಪನ್ನವನ್ನ ಉಳಿಸಿಕೊಳ್ಳಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಕರೆ ನೀಡಿದ್ದಾರೆ.

    ಹಾಸನದ (Hassan) ಹೇಮಾವತಿ ಪ್ರತಿಮೆ ಬಳಿಯ ನಂದಿನಿ ಹಾಲಿನ ಕೇಂದ್ರದಲ್ಲಿಂದು ಸುಮಾರು ಎರಡೂವರೆ ಸಾವಿರ ರೂ. ಮೌಲ್ಯದ ನಂದಿನಿ ಉತ್ಪನ್ನಗಳನ್ನ ಖರೀದಿಸಿದರು. ಹಾಲು, ತುಪ್ಪ, ಮಜ್ಜಿಗೆ, ಮೈಸೂರು ಪಾಕ್ ಸೇರಿ ಹತ್ತಾರು ಉತ್ಪನ್ನ ಖರೀದಿ ಮಾಡಿ ಬೆಂಬಲಿಗರು ಹಾಗೂ ಕಾರ್ಯಕರ್ತರಿಗೆ ಹಂಚಿದರು. ಈ ಮೂಲಕ ಅಮುಲ್ ಉತ್ಪನ್ನಕ್ಕೆ ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ದೇವೇಗೌಡರ ಕುಟುಂಬದವ್ರನ್ನ ಪ್ರಶ್ನೆ ಮಾಡಿದ್ರೆ ಯಾರೂ ಉಳಿಯಲ್ಲ – ಸಿದ್ದರಾಮಯ್ಯ 

    ಈ ವೇಳೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ರೈತರ ಬದುಕಿನ ಪ್ರಶ್ನೆ ಇದು. ಸುಮಾರು 70 ಲಕ್ಷ ರೈತರು ಹಾಲು ಉತ್ಪಾದನೆ ಮಾಡಿ ನಂದಿನಿಗೆ ಹಾಕುತ್ತಿದ್ದೇವೆ. ಅಮೂಲ್ ಗುಜರಾತ್ ರೈತರದ್ದು, ನಮ್ಮದೇನು ತಕರಾರಿಲ್ಲ. ಆದರೆ ನಮ್ಮ ಉತ್ಪನ್ನವನ್ನ ಹಿಂದಕ್ಕೆ ತಳ್ಳಿ, ಅಮುಲ್ ಮುಂದೆ ತರುವ ಸರ್ಕಾರದ ನಿರ್ಧಾರ ಸರಿಯಲ್ಲ. ಈ ನಂದಿನಿ ನಮ್ಮವಳು, ನಮ್ಮ ಹಾಲು ನಮ್ಮ ಬದುಕು. ಅದಕ್ಕಾಗಿ ನಾವೇ ಪ್ರೋತ್ಸಾಹ ಕೊಟ್ಟು ಹಾಲು ಉತ್ಪಾದನೆ ಮಾಡಲು ಹೊರಟಿದ್ದು, ನಂದಿನಿ ಹಾಲು, ಹಾಲಿನ ಉತ್ಪನ್ನಗಳು ಪೇಡ, ಬಿಸ್ಕೆಟ್, ಚಾಕ್‌ಲೇಟ್ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮುಲ್‍ಗೆ ವಿರೋಧ – ನಂದಿನಿ ಉತ್ಪನ್ನ ಖರೀದಿಸಿ ಹಂಚಿದ ಡಿಕೆಶಿ

     

    ಪುನೀತ್‌ಗೆ ಮುತ್ತುಕೊಟ್ಟಿದ್ದು ನಾಟಕನಾ?
    ದಿವಂಗತ ಡಾ. ಪುನೀತ್ ರಾಜ್‌ಕುಮಾರ್ ಅವರು ನಂದಿನಿ ಹಾಲಿನ ಉತ್ಪನ್ನಕ್ಕೆ ಬ್ರ್ಯಾಂಡ್‌ ಅಂಬಾಸಿಡರ್ ಆಗಿದ್ದರು. ರೈತರು, ರೈತ ಮಹಿಳೆಯರು ಬದುಕಬೇಕು ಅಂತಾ ದೊಡ್ಡ ನಟರು ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಗಳೇ ನೀವೂ ಅವರ ಬಗ್ಗೆ ಗೌರವದ ಮಾತುಗಳನ್ನಾಡಿದ್ದೀರಿ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಅವರನ್ನ ನೆನಪಿಸಿಕೊಳ್ಳುತ್ತಿದ್ದೀರಿ. ಪುನೀತ್ ರಾಜ್‌ಕುಮಾರ್‌ಗೆ ಮುತ್ತು ಕೊಟ್ರಿ ಇದು ಸುಳ್ಳು, ನಾಟಕನಾ? ಎಂದು ಪ್ರಶ್ನಿಸಿದ್ದಾರೆ.