Tag: ನಂದಮೂರಿ ಹರಿಕೃಷ್ಣ

  • ವೇದಿಕೆ ಮೇಲೆಯೇ ಗಳಗಳನೇ ಅತ್ತ ಜೂ. ಎನ್‍ಟಿಆರ್

    ವೇದಿಕೆ ಮೇಲೆಯೇ ಗಳಗಳನೇ ಅತ್ತ ಜೂ. ಎನ್‍ಟಿಆರ್

    ಹೈದರಾಬಾದ್: ಕೆಲವು ದಿನಗಳ ಹಿಂದೆಯಷ್ಟೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ತನ್ನ ತಂದೆ ನಟ ಹರಿಕೃಷ್ಣ ಅವರನ್ನು ನೆನೆದು ನಟ ಜೂನಿಯರ್ ಎನ್‍ಟಿಆರ್ ಸಾವಿರಾರು ಜನರ ಮುಂದೆ ವೇದಿಕೆಯಲ್ಲೇ ಕಣ್ಣೀರು ಹಾಕಿದ್ದಾರೆ.

    ಜೂನಿಯರ್ ಎನ್‍ಟಿಆರ್ ಅಭಿನಯದ ‘ಅರವಿಂದ ಸಮೇತ ವೀರ ರಾಘವ’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾಗ ತಮ್ಮ ತಂದೆ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ.

    ಎನ್‍ಟಿಆರ್ ಹೇಳಿದ್ದೇನು?
    ಚಿತ್ರಕಥೆಗಾರ ತ್ರಿವಿಕ್ರಂ ಶ್ರೀನಿವಾಸ್ ಅವರ ಜೊತೆ ಸಿನಿಮಾ ಮಾಡಬೇಕು ಎನ್ನುವುದು ಕೆಲವು ವರ್ಷಗಳ ಕನಸು ನನ್ನದು. ನಾವಿಬ್ಬರು ತುಂಬಾ ಹತ್ತಿರದ ಸ್ನೇಹಿತರು. ಆದರು ನಾವು ಒಟ್ಟಿಗೆ ಸಿನಿಮಾ ಮಾಡಲು ಸಾಧ್ಯವಾಗಿಲ್ಲ. ಯಾಕೆ ಒಟ್ಟಿಗೆ ಇದ್ದರು ಸಿನಿಮಾ ಮಾಡಲು ಆಗುತ್ತಿಲ್ಲ ಎಂದು ತುಂಬಾ ಬಾರಿ ಯೋಚನೆ ಮಾಡಿದ್ದೇನೆ. ಅವರ ಜೊತೆ ಸಿನಿಮಾ ಮಾಡಲು ನಿರ್ಧರಿಸಿದ ನಂತರವೇ ನನ್ನ ಜೀವನದಲ್ಲಿ ದುರಂತವೊಂದು ನಡೆದಿದೆ ಎಂದು ಘಟನೆಯನ್ನು ನೆನೆದು ಕಣ್ಣೀರು ಹಾಕಿದ್ದಾರೆ.

    ‘ನಾನು ಇಲ್ಲಿವರೆಗೂ 27 ಸಿನಿಮಾಗಳನ್ನ ಮಾಡಿದ್ದೇನೆ. ಆದರೆ ನಾನು ಮಾಡಿದ ಯಾವ ಸಿನಿಮಾದಲ್ಲೂ ತಂದೆ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ದೃಶ್ಯ ಇರಲಿಲ್ಲ. ಆದರೆ ಈ ಸಿನಿಮಾದಲ್ಲಿ ಅಂತಹ ದೃಶ್ಯ ಇದೆ. ವಿಪರ್ಯಾಸವೆಂದರೆ ಈ ಸಿನಿಮಾದ ಚಿತ್ರೀಕರಣ ಮುಗಿದ ಬೆನ್ನಲ್ಲೇ ನಮ್ಮ ತಂದೆ ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದೆ ಎಂದು ಎನ್‍ಟಿಆರ್ ಅವರು ಕಣ್ಣೀರಿಟ್ಟಿದ್ದಾರೆ.

    ಮನುಷ್ಯ ಬದುಕಿದ್ದಾಗ ಅವರ ಬೆಲೆ ನಮಗೆ ಗೊತ್ತಾಗಲ್ಲ. ಆದರೆ ಅವರು ಹೋದ ಮೇಲೆ, ನಮ್ಮ ಮಧ್ಯೆ ಇಲ್ಲವೆಂದರೆ ಅವರ ಬೆಲೆ ಗೊತ್ತಾಗುತ್ತದೆ. ನಾವು ಅಂದುಕೊಳ್ಳೋದು ಬೇರೆ ದೇವರು ಭಯಸೋದು ಬೇರೆ. ನಮ್ಮ ತಂದೆ ಯಾವಾಗಲು ಹೇಳುತ್ತಿದ್ದರು ಅಭಿಮಾನಿಗಳು ಜಾಗೃತ, ಅವರು ನಮಗಾಗಿ ತುಂಬಾ ತ್ಯಾಗ ಮಾಡುತ್ತಾರೆ. ಹೀಗಾಗಿ ಅವರನ್ನು ಜಾಗೃತೆಯಿಂದ ನೋಡಿಕೊಳ್ಳಿ ಎಂದು ಬದುಕಿದ್ದವರೆಗೂ ಹೇಳುತ್ತಲೇ ಇದ್ದರು ಅಂತ ಭಾವುಕರಾಗಿ ತ್ರಿವಿಕ್ರಂ ಅವರನ್ನು ಅಪ್ಪಿಕೊಂಡು ಅತ್ತಿದ್ದಾರೆ.

    ನಮ್ಮ ತಂದೆ ಈ ಸಿನಿಮಾ ನೋಡುವುದಕ್ಕಾದರೂ ಬದುಕಿದ್ದರೆ ಚೆನ್ನಾಗಿರುತ್ತಿತ್ತು. ಇಂದು ಅವರು ನಮ್ಮ ಮಧ್ಯೆ ಇಲ್ಲದೆ ಇದ್ದರು, ನಮ್ಮ- ನಿಮ್ಮ ಮನಸ್ಸಿನಲ್ಲಿ ಸದಾ ಇದ್ದಾರೆ. ನಮ್ಮ ತಂದೆ ಕೊಟ್ಟಿದ್ದ ಮಾತನ್ನೆ ನಿಮಗೂ ಕೊಡುತ್ತಿದ್ದೇನೆ. ನಮ್ಮ ಜೀವನವೇ ನಿಮಗೆ ಅಂಕಿತ ಎಂದು ಗಳಗಳನೇ ಅತ್ತು ವೇದಿಕೆಯಿಂದ ಹೋಗಿದ್ದಾರೆ. ಬಳಿಕ ವಾಪಸ್ ಬಂದು ನನ್ನ ತಂದೆಗೆ ನಾನು ಹೇಳುವುದಕ್ಕೆ ಆಗಲಿಲ್ಲ. ನಿಮಗೆ ಹೇಳುತ್ತಿದ್ದೇನೆ, ಜಾಗೃತೆಯಿಂದ ಮನೆಗೆ ಹೋಗಿ. ನಿಮ್ಮ ಕುಟುಂಬದವರು ನಿಮಗಾಗಿ ಕಾಯುತ್ತಿರುತ್ತಾರೆ. ಆದ್ದರಿಂದ ಜಾಗೃತರಾಗಿ ಹೋಗಿ. ಏಕೆಂದರೆ ನೀವು ನಡು ರಸ್ತೆಯಲ್ಲಿ ನಿಂತಾಗ ಮೊದಲು ಬರುವುದು ನಿಮ್ಮ ಕುಟುಂಬ ಆನಂತರ ನಾವು ಎಂದು ಹೇಳಿ ಕಣ್ಣೀರು ಹಾಕುತ್ತಾ ಹೊರಟರು.

    ಜ್ಯೂನಿಯರ್ ಎನ್‍ಟಿಆರ್ ಅವರ ತಂದೆ ನಂದಮೂರಿ ಹರಿಕೃಷ್ಣ ಅವರು ಕಳೆದ ಆಗಸ್ಟ್ 29 ರಂದು ರಸ್ತೆ ಅಪಘಾತಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಂದಮೂರಿ ಹರಿಕೃಷ್ಣ ಮೃತ ದೇಹದ ಜೊತೆ ಸೆಲ್ಫಿ: ಸಿಬ್ಬಂದಿ ವಜಾ

    ನಂದಮೂರಿ ಹರಿಕೃಷ್ಣ ಮೃತ ದೇಹದ ಜೊತೆ ಸೆಲ್ಫಿ: ಸಿಬ್ಬಂದಿ ವಜಾ

    ಹೈದರಾಬಾದ್: ನಟ ಹಾಗೂ ರಾಜಕಾರಣಿ ನಂದಮೂರಿ ಹರಿಕೃಷ್ಣ ಅವರ ಮೃತ ದೇಹದ ಜೊತೆ ನಾಲ್ಕು ಜನ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಈ ಕುರಿತು ಭಾರೀ ಟೀಕೆ ಕೇಳಿ ಬರುತ್ತಿದ್ದಂತೆ ಆಸ್ಪತ್ರೆ ಆಡಳಿತ ಮಂಡಳಿ ನಾಲ್ವರನ್ನು ಕೆಲಸದಿಂದ ವಜಾಗೊಳಿಸಿದೆ.

    ನಂದಮೂರಿ ಹರಿಕೃಷ್ಣ ಮೃತ ದೇಹದ ಜೊತೆಗಿನ ಸೆಲ್ಫಿ ಫೋಟೋ ನೋಡಿದ್ದ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಅಮಾನವೀಯವಾಗಿ ನಡೆದುಕೊಂಡ ಆಸ್ಪತ್ರೆಯ ಅವರನ್ನು ಕೆಲಸದಿಂದ ತೆಗೆದು ಹಾಕುವಂತೆ ಒತ್ತಾಯಿಸಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಆಡಳಿತ ಮಂಡಳಿ ಅವರನ್ನು ವಜಾಗೊಳಿಸಿ, ಸಾರ್ವಜನಿಕರಲ್ಲಿ ಕ್ಷಮೆ ಕೇಳಿದೆ.

    ನಡೆದದ್ದು ಏನು?
    ಆಗಸ್ಟ್ 29ರಂದು ತೆಲಂಗಾಣದ ನಲ್ಗೊಂಡ ಬಳಿ ಬೀಕರ ಅಪಘಾತ ಸಂಭವಿಸಿ, ನಂದಮೂರಿ ಹರಿಕೃಷ್ಣ ಗಂಭೀರ ಗಾಯಗೊಂಡಿದ್ದರು. ಅವರನ್ನು ಹೈದರಾಬಾದ್ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

    ಮೃತದೇಹ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವೇಳೆ ಒಬ್ಬ ಪುರುಷ ಹಾಗೂ ಮೂವರು ಮಹಿಳಾ ಸಿಬ್ಬಂದಿ ಮೃತ ದೇಹದೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ನೆಟ್ಟಿಗರು ಕಿಡಿಕಾರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಯವಿಟ್ಟು ನೈಟ್ ಜರ್ನಿ ವೇಳೆ ಸ್ವಲ್ಪ ಹುಷಾರಾಗಿರಿ ಎಂದು ಹೇಳಿ ನಂದಮೂರಿ ನಿಧನಕ್ಕೆ ಹ್ಯಾಟ್ರಿಕ್ ಹೀರೋ ಸಂತಾಪ

    ದಯವಿಟ್ಟು ನೈಟ್ ಜರ್ನಿ ವೇಳೆ ಸ್ವಲ್ಪ ಹುಷಾರಾಗಿರಿ ಎಂದು ಹೇಳಿ ನಂದಮೂರಿ ನಿಧನಕ್ಕೆ ಹ್ಯಾಟ್ರಿಕ್ ಹೀರೋ ಸಂತಾಪ

    ಬೆಂಗಳೂರು: ದಯವಿಟ್ಟು ನೈಟ್ ಜರ್ನಿ ವೇಳೆ ಸ್ವಲ್ಪ ಹುಷಾರಾಗಿರಿ ಎಂದು ಹೇಳುತ್ತಾ ನಟ ನಂದಮೂರಿ ಹರಿಕೃಷ್ಣ ನಿಧನಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಂತಾಪ ಸೂಚಿಸಿದ್ದಾರೆ.

    ನನ್ನ ಮನಸ್ಸಿಗೆ ತುಂಬ ನೋವಾಗುತ್ತಿದೆ. ನನ್ನ ದೊಡ್ಡ ಮಗಳು ಮದುವೆಗೆ ಕರಿಯಬೇಕಾದರೆ ಎಷ್ಟು ಖುಷಿಯಿಂದ ಮಾತನಾಡಿದ್ದರು. ಹೈದರಾಬಾದ್ ಕಾರ್ಯಕ್ರಮದಲ್ಲಿ ನಾನು ಅವರನ್ನು ಭೇಟಿ ಕೂಡ ಮಾಡಿದೆ. ಅದೇ ರೋಡಲ್ಲಿ ಈ ಹಿಂದೆಯೂ ಕೂಡ ಅಪಘಾತ ಆಗಿತ್ತು. ಇದರ ಮೂಲಕ ನಾನು ಅವರ ಫ್ಯಾಮಿಲಿಗೆ ಕೇಳೋದ್ ಒಂದೇ ದಯವಿಟ್ಟು ನೈಟ್ ಜರ್ನಿ ಬೇಡ, ಸ್ವಲ್ಪ ಹುಷಾರಾಗಿರಿ ಎಂದು ಹೇಳುತ್ತಾ ಶಿವರಾಜ್‍ಕುಮಾರ್ ಸಂತಾಪ ಸೂಚಿಸಿದರು. ಇದನ್ನು ಓದಿ: ತೆಲಂಗಾಣದ ನಲ್ಗೊಂಡ ಬಳಿ ಅಪಘಾತ – ಜ್ಯೂನಿಯರ್ NTR ತಂದೆ ನಂದಮೂರಿ ಹರಿಕೃಷ್ಣ ದುರ್ಮರಣ

    ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ನಟ ದಿವಂಗತ ನಂದಮೂರಿ ತಾರಕ ರಾಮಾರಾವ್ ಹಿರಿಯ ಪುತ್ರ ನಟ ನಂದಮೂರಿ ಹರಿಕೃಷ್ಣ ಅವರು ಚಲಿಸುತ್ತಿದ್ದ ಕಾರು ಇಂದು ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅನ್ನೇಪರ್ತಿ ಬಳಿ ಅಪಘಾತಕ್ಕೀಡಾಗಿತ್ತು. ಅಪಘಾತದಲ್ಲಿ ಹರಿಕೃಷ್ಣ ಅವರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಕಾಮಿನೇನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಇದನ್ನು ಓದಿ: ಎನ್‍ಟಿಆರ್ ಕುಟುಂಬಕ್ಕೆ ನಲ್ಗೊಂಡ ಮಾರ್ಗ ಶಾಪವೇ?

    ಹರಿಕೃಷ್ಣ ಅವರು ಅಭಿಮಾನಿಯ ಪುತ್ರನ ಮದುವೆಗೆ ತೆರಳುತ್ತಿದ್ದರು. ಬೆಳಗ್ಗೆ 4.30ರ ಸುಮಾರಿನಲ್ಲಿ ಹೈದರಾಬಾದ್ ನಿಂದ ಆಂಧ್ರಪ್ರದೇಶದ ನೆಲ್ಲೂರಿಗೆ ತಾವೇ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಹರಿಕೃಷ್ಣ ಅವರು ಬಾಲನಟನಾಗಿ ಹಾಗೂ ನಟನಾಗಿ 13 ಚಿತ್ರಗಳಲ್ಲಿ ನಟಿಸಿದ್ದು, ಶ್ರಾವಣಮಾಸಂ ಅವರ ಕೊನೆಯ ಚಿತ್ರವಾಗಿತ್ತು. ಇದನ್ನು ಓದಿ: ಡ್ರೈವರಿಂದ ಸ್ಟಾರ್ ವರೆಗೂ ಎಲ್ಲರನ್ನೂ ಒಂದೇ ರೀತಿಯಾಗಿ ನೋಡ್ತಿದ್ರು: ಹರಿಕೃಷ್ಣ ಬಗ್ಗೆ ರವಿಶಂಕರ್ ಮಾತು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=2283Fb13–Y

  • ತೆಲಂಗಾಣದ ನಲ್ಗೊಂಡ ಬಳಿ ಅಪಘಾತ – ಜ್ಯೂನಿಯರ್ NTR ತಂದೆ ನಂದಮೂರಿ ಹರಿಕೃಷ್ಣ ದುರ್ಮರಣ

    ತೆಲಂಗಾಣದ ನಲ್ಗೊಂಡ ಬಳಿ ಅಪಘಾತ – ಜ್ಯೂನಿಯರ್ NTR ತಂದೆ ನಂದಮೂರಿ ಹರಿಕೃಷ್ಣ ದುರ್ಮರಣ

    ಹೈದರಾಬಾದ್: ತೆಲಂಗಾಣದ ನಲ್ಗೊಂಡ ಬಳಿ ಬೀಕರ ಅಪಘಾತ ಸಂಭವಿಸಿದ್ದು, ಜ್ಯೂನಿಯರ್ ಎನ್ ಟಿಆರ್ ಅವರ ತಂದೆ ನಂದಮೂರಿ ಹರಿಕೃಷ್ಣ(61) ಮೃತಪಟ್ಟಿದ್ದಾರೆ.

    ನಂದಮೂರಿ ಹರಿಕೃಷ್ಣ ಪರಿಚಯರಸ್ಥರ ಮದುವೆಗೆಂದು ನೆಲ್ಲೂರು ಜಿಲ್ಲೆಯ ಕಾವಲಿಗೆ ಹೋಗಿದ್ದರು. ಮದುವೆ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿ ಹೊಡೆದಿದೆ.

    ಕಾರ್ ಪಲ್ಟಿ ಹೊಡೆದ ಪರಿಣಾಮ ಹರಿಕೃಷ್ಣ ಅವರ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹರಿಕೃಷ್ಣ ಪುತ್ರ ಜ್ಯೂನಿಯರ್ ಎನ್ ಟಿಆರ್ ಮತ್ತು ಕಲ್ಯಾಣ ಕುಮಾರ್ ಆಸ್ಪತ್ರೆಗೆ ಧಾವಿಸಿದ್ದಾರೆ. ಹರಿಕೃಷ್ಣ ಅವರು ಪ್ರಸ್ತುತ ಈಗಿನ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಾಮೈದ ಆಗಿದ್ದಾರೆ. ಆದ್ದರಿಂದ ಚಂದ್ರಬಾಬು ನಾಯ್ಡು ಈ ದಿನದ ಎಲ್ಲ ಕಾರ್ಯಕ್ರಮವನ್ನು ರದ್ದು ಮಾಡಿ ಹೈದರಾಬಾದ್ ನತ್ತ ಧಾವಿಸಿದ್ದಾರೆ.

    ನಂದಮೂರಿ ಹರಿಕೃಷ್ಣ ಅವರು ಎನ್‍ಟಿ ರಾಮ್ ರಾವ್ ಅವರ ಹಿರಿಯ ಪುತ್ರನಾಗಿದ್ದು, ತೆಲುಗಿನ ಸೀತಯ್ಯ ಸೇರಿದಂತೆ ಹತ್ತಾರು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ನಿರ್ಮಾಪಕರೂ ಕೂಡ ಆಗಿದ್ದು, ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv