Tag: ನಂದಮೂರಿ ಬಾಲಕೃಷ್ಣ

  • ತೆಲುಗಿನ ಚೊಚ್ಚಲ ಚಿತ್ರದ ಮುಹೂರ್ತದಲ್ಲಿ ಕಾಣಲಿಲ್ಲ ದುನಿಯಾ ವಿಜಯ್

    ತೆಲುಗಿನ ಚೊಚ್ಚಲ ಚಿತ್ರದ ಮುಹೂರ್ತದಲ್ಲಿ ಕಾಣಲಿಲ್ಲ ದುನಿಯಾ ವಿಜಯ್

    ತೆಲುಗಿನ ಹೆಸರಾಂತ ನಟ ನಂದಮೂರಿ ಬಾಲಕೃಷ್ಣ ಅವರ ಚಿತ್ರದಲ್ಲಿ ದುನಿಯಾ ವಿಜಯ್ ನಟಿಸಲಿದ್ದಾರೆ ಎನ್ನುವ ಸುದ್ದಿ ಅವರ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿತ್ತು. ಒಂದು ಕಡೆ ದುನಿಯಾ ವಿಜಯ್ ಅವರ ಸಲಗ ಚಿತ್ರದ ಯಶಸ್ಸು ಮತ್ತೊಂದು ಕಡೆ ಬಾಲಯ್ಯ ಸಿನಿಮಾ, ಹೀಗಾಗಿ ವಿಜಯ್ ಅಭಿಮಾನಿಗಳು ಹಿರಿಹಿರಿ ಹಿಗ್ಗಿದ್ದರು. ಇದನ್ನು ಓದಿ : ಪಾರ್ವತಮ್ಮ ರಾಜ್ ಕುಮಾರ್ ಮತ್ತು ಬೆಳ್ಳಿ ಬಟ್ಟಲು ಸ್ಟೋರಿ ಹೇಳಿದ ರಂಗಾಯಣ ರಘು


    ಶುಕ್ರವಾರ ಎನ್.ಬಿ.ಕೆ 107 ಚಿತ್ರಕ್ಕೆ ಮುಹೂರ್ತವಾಗಿದೆ. ನಾಯಕ ಬಾಲಯ್ಯ, ನಾಯಕಿ ಶ್ರುತಿ ಹಾಸನ್ ಈ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಆದರೆ, ದುನಿಯಾ ವಿಜಯ್ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
    ದುನಿಯಾ ವಿಜಯ್ ಅವರಿಗೆ ಟಾಲಿವುಡ್ ನಲ್ಲಿ ಇದು ಮೊದಲ ಸಿನಿಮಾ. ಹಾಗಾಗಿ ಮುಹೂರ್ತ ಸಮಾರಂಭಕ್ಕೆ ಅವರನ್ನು ಕರೆಯಿಸಿ, ತೆಲುಗು ಸಿನಿಮಾ ರಂಗಕ್ಕೆ ವಿಜಯ್ ಅವರನ್ನು ಪರಿಚಯಿಸುತ್ತಾರೆ ಎನ್ನುವುದು ಅವರ ಅಭಿಮಾನಿಗಳ ನಂಬಿಕೆ ಆಗಿತ್ತು. ಅದು ಹುಸಿಯಾಗಿದೆ. ಇದನ್ನೂ ಓದಿ : ರಾಮ್ ಪೋತಿನೇನಿ ಸಿನಿಮಾಗೆ ಅಖಂಡ ಡೈರೆಕ್ಟರ್ ನಿರ್ದೇಶನ


    ಈ ಸಿನಿಮಾದಲ್ಲಿ ವಿಜಯ್ ಅವರಿಗೆ ಬೇರೆ ರೀತಿಯ ಗೆಟಪ್ ನೀಡಲಾಗಿದೆ. ಅಲ್ಲದೇ, ಅದೊಂದು ರೀತಿಯಲ್ಲಿ ನೆಗೆಟಿವ್ ಪಾತ್ರವಾಗಿದ್ದರಿಂದ ವಿಜಯ್ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಎಲ್ಲ ಗುಟ್ಟುಗಳು ಮುಹೂರ್ತದಲ್ಲಿ ರಟ್ಟಾಗಬಾರದು ಎನ್ನುವ ಉದ್ದೇಶವೂ ಮುಹೂರ್ತದಿನದಂದು ಹೋಗದೇ ಇರುವುದಕ್ಕೆ ಕಾರಣ ಎನ್ನಲಾಗುತ್ತಿದೆ.
    ಶುಕ್ರವಾರವಷ್ಟೇ ಸಿನಿಮಾಗೆ ಮುಹೂರ್ತವಾಗಿದೆ. ಶೂಟಿಂಗ್ ಕೂಡ ಶುರು ಮಾಡಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ದುನಿಯಾ ವಿಜಯ್, ಬಾಲಯ್ಯನ ತಂಡ ಸೇರಲಿದ್ದಾರೆ.

  • ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟ ನಟ ಬಾಲಣ್ಣ, ಪ್ರಭುದೇವ್

    ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟ ನಟ ಬಾಲಣ್ಣ, ಪ್ರಭುದೇವ್

    ಬೆಂಗಳೂರು: ಕನ್ನಡ ಚಿತ್ರರಂಗದ ಯುವರತ್ನ, ನಟ ಪುನೀತ್ ರಾಜ್‍ಕುಮಾರ್ ಅವರ ನಿಧನಕ್ಕೆ ಕಲಾವಿದರು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಕಂಠೀರವ ಸ್ಟೇಡಿಯಂಗೆ ಜನಸಾಗರವೇ ಹರಿದು ಬರುತ್ತಿದೆ.

    ಪುನೀತ್ ರಾಜ್‍ಕುಮಾರ್ ಅವರ ಪಾರ್ಥವ ಶರೀರವನ್ನು ನೋಡುತ್ತಿದ್ದಂತೆ ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರು ಕಣ್ಣೀರು ಹಾಕಿದ್ದಾರೆ. ಅಂತಿಮ ದರ್ಶನ ಪಡೆದ ಬಳಿಕ ಶಿವರಾಜ್ ಕುಮಾರ್ ಅವರಿಗೆ ಧೈರ್ಯ ತುಂಬಿದ್ದಾರೆ ಹಾಗೂ ರಾಜ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಇದನ್ನೂ ಓದಿ:   ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

    ಇತ್ತ ಬಾಲಿವುಡ್ ನಟ ಪ್ರಭುದೇವ್ ಅವರು ಕೂಡ ಇಂದು ಬೆಂಗಳೂರಿಗೆ ಆಗಮಿಸಿ ಅಪ್ಪು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದದು ದುಃಖಿತರಾಗಿದ್ದಾರೆ. ಮಧ್ಯರಾತ್ರಿಯಿಂದಲೂ ಅಪ್ಪು ಅಭಿಮಾನಿಗಳ ಸಾಗರ ಕರಗಿಲ್ಲ. ಅಭಿಮಾನಿಗಳ ಜೊತೆ ಸೆಲೆಟಬ್ರಿಗಳು ಕೂಡ ನೆಚ್ಚಿನ ನಟನ ಅಂತಿಮ ದರ್ಶನ ಪಡೆದು ಕಣ್ಣೀರಾಗುತ್ತಿದ್ದಾರೆ. ಇದನ್ನೂ ಓದಿ: ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ

    ಈಗಾಗಲೇ ಅಪ್ಪು ಮೊದಲ ಮಗಳು ಅಮೆರಿಕಾದಿಂದ ಹೊರಟಿದ್ದು, ಸಂಜೆಯ ವೇಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಹೀಗಾಗಿ ನಟನ ಅಂತ್ಯಕ್ರಿಯೆಯನ್ನು ಇಂದು ಸಂಜೆ 5.30ರ ಸುಮಾರಿಗೆ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಅಭಿಮಾನಿಗಳಿಗೆ ಇಂದು ಮಧ್ಯಾಹ್ನ 3 ಗಂಟೆಯವರಿಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನಂತರ ಕಂಠೀರವ ಸ್ಟುಡಿಯೋದವರೆಗೂ ಮೆರವಣಿಗೆ ನಡೆಸಲಾಗುತ್ತದೆ. ಹೀಗಾಗಿ ಕುಟುಂಬಸ್ಥರು 3 ಗಂಟೆಯ ಬಳಿಕ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಬರದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

    ಪುನೀತ್ ಪುತ್ರಿ ಧ್ರುತಿ ನ್ಯೂಯಾರ್ಕ್‍ನಿಂದ ದೆಹಲಿಗೆ ಆಗಮಿಸಿ ಅಲ್ಲಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಸಂಜೆ 4.15ಕ್ಕೆ ಆಗಮಿಸಲಿದ್ದಾರೆ. ಧ್ರುತಿ ಅವರು ಬಂದ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಪುನೀತ್ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಇನ್ನೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೇವಲ ಆಪ್ತವಲಯಕ್ಕಷ್ಟೇ ಅವಕಾಶ ಕಲ್ಪಿಸಿಕೊಡಲಾಗಿದೆ. ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

     

    ಪುನೀತ್ ಒಬ್ಬ ಒಳ್ಳೆ ಮನುಷ್ಯನಾಗಿದ್ದರು. ಅವರ ಅಗಲಿಕೆ ಆತಂಕವನ್ನುಂಟು ಮಾಡಿದೆ. ಅವರು ನನ್ನ ಸಂಬಂಧ ಅಣ್ಣ, ತಮ್ಮನ ಸಂಬಂಧವಾಗಿದೆ. ಒಂದೇ ತಾಯಿ ಮಕ್ಕಳಂತೆ ಇದ್ದೆವು. ಸಹೋದರಂತೆ ಬದುಕಿದ್ದೇವು. ನನ್ನ ಸಹೋದರ ಸಾವು ನನಗೆ ಆಘಾತವನ್ನುಂಟು ಮಾಡಿದೆ. ದೇವರು ಅನ್ಯಾಯವನ್ನು ಮಾಡಿದ್ದಾನೆ. ಅವರು ಅನಾಥಾಶ್ರಮ, ಶಾಲೆ ನಿರ್ಮಾಣ ಮಾಡಿ ಸಾಮಾಜಿ ಕಾರ್ಯವನ್ನು ಬದುಕಿದ್ದಾಗ ಮಾಡಿದ್ದಾರೆ. ಅವರ ನಿಧನದ ನಂತ್ರ ಅವರು ಕಣ್ಣನ್ನು ಧಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ ಎಂದು ಹೇಳುತ್ತಾ ಪುನೀತ್ ಜೊತೆಗಿನ ಒಡನಾಟವನ್ನು ಸ್ಮರಿಸಿದ್ದಾರೆ.

  • 20 ಲಕ್ಷ ರೂಪಾಯಿ ಮೌಲ್ಯದ ಕೊರೊನಾ ಔಷಧಿ ನೀಡಿದ ನಟ ಬಾಲಕೃಷ್ಣ

    20 ಲಕ್ಷ ರೂಪಾಯಿ ಮೌಲ್ಯದ ಕೊರೊನಾ ಔಷಧಿ ನೀಡಿದ ನಟ ಬಾಲಕೃಷ್ಣ

    ಹೈದರಾಬಾದ್: ಕೊರೊನಾ ಕರಾಳ ಪರಿಸ್ಥಿತಿಯಲ್ಲಿ ಬಾಲಿವುಡ್ ನಟ ಸೋನು ಸೂದ್ ಸೇರಿದಂತೆ ಹಲವು ಕಲಾವಿದರು ಜನರ ಜೀವ ಉಳಿಸಲು ಮುಂದಾಗಿದ್ದಾರೆ. ಕೆಲವರು ತಮ್ಮ ಕೈಲಾದಷ್ಟು ದೇಣಿಗೆ ನೀಡಿದ್ದಾರೆ. ಇದೀಗ ಟಾಲಿವುಡ್ ನಟ ಲೆಜೆಂಡ್ ಬಾಲಕೃಷ್ಣ ಕೂಡ ಜನರಿಗೆ ಸಹಾಯ ಮಾಡಿದ್ದಾರೆ.

    ತೆಲುಗಿನ ನಟ ನಂದಮೂರಿ ಬಾಲಕೃಷ್ಣ ರಾಜಕಾರಣಿ ಕೂಡ ಹೌದು. ಆಂಧ್ರಪ್ರದೇಶದ ಹಿಂದೂಪುರ ಕ್ಷೇತ್ರದ ಶಾಸಕರಾಗಿರುವ ನಂದಮೂರಿ ಬಾಲಕೃಷ್ಣ ಇದೀಗ ತಮ್ಮ ಕ್ಷೇತ್ರದ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ತಮ್ಮ ಹಿಂದೂಪುರ ಕ್ಷೇತ್ರದ ಜನರಿಗೆ ನಂದಮೂರಿ ಬಾಲಕೃಷ್ಣ 20 ಲಕ್ಷ ರೂಪಾಯಿ ಮೌಲ್ಯದ ಕೋವಿಡ್-19 ಔಷಧಿಗಳನ್ನು ನೀಡಿದ್ದಾರೆ.

    ತಮ್ಮ ಕ್ಷೇತ್ರದಲ್ಲಿ ಸೋಂಕಿಗೆ ಒಳಗಾಗಿರುವ ರೋಗಿಗಳಿಗೆ ಔಷಧಿ ಕಿಟ್‍ಗಳನ್ನು ಇಂದು ಬೆಳಗ್ಗೆ ನಂದಮೂರಿ ಬಾಲಕೃಷ್ಣ ಬೆಂಬಲಿಗರು ಹಾಗೂ ತೆಲುಗು ದೇಸಂ ಪಕ್ಷದ ಕಾರ್ಯಕರ್ತರು ವಿತರಿಸಿದ್ದಾರೆ.