Tag: ನಂದಮುರಿ ಬಾಲಕೃಷ್ಣ

  • ನಂದಮುರಿ ಬಾಲಕೃಷ್ಣ ನಟನೆಯ NBK108ನೇ ಚಿತ್ರಕ್ಕೆ ಚಾಲನೆ

    ನಂದಮುರಿ ಬಾಲಕೃಷ್ಣ ನಟನೆಯ NBK108ನೇ ಚಿತ್ರಕ್ಕೆ ಚಾಲನೆ

    ಗಾಡ್ ಆಫ್ ಮಾಸ್ ಎಂದೇ ಕರೆಸಿಕೊಳ್ಳೋ ತೆಲುಗು ನಟ ನಂದಮುರಿ ಬಾಲಕೃಷ್ಣ 108ನೇ ಸಿನಿಮಾ ಇಂದು ಅದ್ದೂರಿಯಾಗಿ ಸೆಟ್ಟೇರಿದೆ. ಬಾಲಕೃಷ್ಣ 108ನೇ ಚಿತ್ರಕ್ಕೆ ಅನಿಲ್ ರವಿಪುಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಇಬ್ಬರ ಕ್ರೇಜಿ ಕಾಂಬಿನೇಶನ್ ನಲ್ಲಿ  ಮೂಡಿ ಬರ್ತಿರುವ ಪ್ಯಾನ್ ಇಂಡಿಯಾ ಚಿತ್ರಕ್ಕೆ ಶೈನ್ ಸ್ಕ್ರೀನ್ಸ್ ಬ್ಯಾನರ್ ನಡಿ ಸಾಹು ಗರಪಟಿ ಮತ್ತು ಹರೀಶ್ ಪೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.

    NBK108ನೇ ಚಿತ್ರಕ್ಕೆ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಕ್ಲ್ಯಾಪ್ ಮಾಡಿದ್ದು, ನಿರ್ಮಾಪಕ ದಿಲ್ ರಾಜು ಕ್ಯಾಮೆರಾ ಚಾಲನೆ, ಲೆಜೆಂಡರಿ ನಿರ್ದೇಶಕ ಕೆ.ರಾಘವೇಂದ್ರ ರಾವ್ ಮುಹೂರ್ತ ಸೀನ್ ಗೆ ಆಕ್ಷನ್ ಕಟ್ ಹೇಳುವ ಮೂಲಕ ಅದ್ದೂರಿಯಾಗಿ ಚಾಲನೆ ನೀಡಲಾಯಿತು.    ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆ ಡೇಟ್ ಫಿಕ್ಸ್

    ಬಾಲಕೃಷ್ಣ ಅಭಿನಯದ 108ನೇ ಸಿನಿಮಾ ಇದಾಗಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಿ ಈ ಚಿತ್ರ ಮೂಡಿ ಬರ್ತಿದೆ. ಸದ್ಯದಲ್ಲೇ ಟೈಟಲ್ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ. ಇಂದಿನಿಂದಲೇ ಚಿತ್ರೀಕರಣ ಆರಂಭವಾಗಲಿದ್ದು, ಆಕ್ಷನ್ ಸೀನ್ ನೊಂದಿಗೆ ಚಿತ್ರೀಕರಣ ಆರಂಭವಾಗಲಿದೆ. ಆಕ್ಷನ್ ಸೀನ್ ಸೆರೆ ಹಿಡಿಯಲೆಂದೇ ರಾಜೀವನ್ ಅವರ ನೇತೃತ್ವದಲ್ಲಿ ದೊಡ್ಡ ಸೆಟ್ ಗಳನ್ನು ನಿರ್ಮಾಣ ಮಾಡಲಾಗಿದ್ದು, ಖ್ಯಾತ ಸಾಹಸ ನಿರ್ದೇಶಕ ವಿ. ವೆಂಕಟ್ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

    ಆಕ್ಷನ್ ಹಾಗೂ ಮಾಸ್ ಎಲಿಮೆಂಟ್ ಒಳಗೊಂಡ ಈ ಚಿತ್ರಕ್ಕೆ ಬಾಲಕೃಷ್ಣ ಅವರ ಮಾಸ್ ಇಮೇಜ್, ಸ್ಟಾರ್ ಡಂ ಎಲ್ಲವನ್ನು ಗಮನದಲ್ಲಿಟ್ಟುಕೊಂಡೇ ಅನಿಲ್ ರವಿಪುಡಿ ಪವರ್ ಫುಲ್ ಕಥೆ ಹೆಣೆದಿದ್ದಾರೆ. ಚಿತ್ರದಲ್ಲಿ ಕನ್ನಡದ ನಟಿ ಶ್ರೀಲೀಲಾ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಎಸ್. ತಮನ್ ಸಂಗೀತ ನಿರ್ದೇಶನವಿದೆ.  ಬಾಲಕೃಷ್ಣ, ಅನಿಲ್ ರವಿಪುಡಿ, ಎಸ್. ತಮನ್ ಈ ಮೂರು ಕಾಂಬಿನೇಶನ್ ಒಂದಾಗಿರೋ ಈ ಚಿತ್ರದ ಮೇಲೆ ಬಾಲಯ್ಯ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿ.ರಾಮ್ ಪ್ರಸಾದ್ ಕ್ಯಾಮೆರಾ ನಿರ್ದೇಶನ, ತಮ್ಮಿ ರಾಜು ಸಂಕಲನ ಚಿತ್ರಕ್ಕಿದೆ. ಸದ್ಯದಲೇ ಸಿನಿಮಾ ಟೈಟಲ್, ತಾರಾಬಳಗ ಎಲ್ಲದರ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.

    Live Tv
    [brid partner=56869869 player=32851 video=960834 autoplay=true]

  • ಬಾಲಯ್ಯ ಅಭಿನಯದ ‘ವೀರ ಸಿಂಹ ರೆಡ್ಡಿ’ ಚಿತ್ರದ ಮೊದಲ ಸಾಂಗ್ ರಿಲೀಸ್

    ಬಾಲಯ್ಯ ಅಭಿನಯದ ‘ವೀರ ಸಿಂಹ ರೆಡ್ಡಿ’ ಚಿತ್ರದ ಮೊದಲ ಸಾಂಗ್ ರಿಲೀಸ್

    ಟಸಿಂಹ ನಂದಮುರಿ ಬಾಲಕೃಷ್ಣ ಅಭಿನಯದ ಮಾಸ್ ಆಕ್ಷನ್ ಸಿನಿಮಾ ‘ವೀರ ಸಿಂಹ ರೆಡ್ಡಿ’ ಚಿತ್ರದ ಮೊದಲ ಸಾಂಗ್ ಇಂದು ಬಿಡುಗಡೆಯಾಗಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಡಿ ಗೋಪಿಚಂದ್ ಮಲಿನೇನಿ ನಿರ್ದೇಶಿಸಿರುವ ಸಿನಿಮಾವಿದು. ಚಿತ್ರದಲ್ಲಿ ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ಮಾಸ್ ಮಹರಾಜ ನಂದಮುರಿ ಬಾಲಕೃಷ್ಣ ಕಾಣಿಸಿಕೊಂಡಿದ್ದಾರೆ. ಬಾಲಯ್ಯ ಅಭಿಮಾನಿಗಳು ಈ ಸಿನಿಮಾ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ. ಬಾಲಯ್ಯ ಮಾಸ್ ಅಭಿಮಾನಿಗಳ ಮನತಣಿಸಲು ಚಿತ್ರತಂಡ ‘ಜೈ ಬಾಲಯ್ಯ’ ಮಾಸ್ ಸಾಂಗ್ ಇಂದು ಬಿಡುಗಡೆ ಮಾಡಿದೆ.

    ಹೈದ್ರಾಬಾದ್ ನಲ್ಲಿ ಕೊನೆಯ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸಿನಿಮಾ ತಂಡ ಚಿತ್ರದ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಹಾಡಿನ ಮೂಲಕ ಸಿನಿರಸಿಕರ ಮನಗೆಲ್ಲಲು ಹೊರಟಿದೆ. ಚಿತ್ರದ ಮಾಸ್ ನಂಬರ್ ಸಾಂಗ್ ‘ಜೈ ಬಾಲಯ್ಯ’ ಹಾಡಿನ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ ಮಾಡಿದೆ. ರಾಮ್ ಜೋಗಯ್ಯ ಶಾಸ್ತ್ರಿ ಸಾಹಿತ್ಯಕ್ಕೆ ಕರಿಮುಲ್ಲ ದನಿಯಾಗಿದ್ದು, ತಮನ್ ಎಸ್ ಮಾಸ್ ಮ್ಯೂಸಿಕ್ ಕಿಕ್ ನೀಡಿದೆ. ಬಾಲಯ್ಯ ಅಭಿಮಾನಿಗಳು ಹಾಡು ಕೇಳಿ ಥ್ರಿಲ್ ಆಗಿದ್ದು, ಬಿಡುಗಡೆಯಾದ ಒಂದೇ ಗಂಟೆಯಲ್ಲಿ ಆರು ಲಕ್ಷಕ್ಕೂ ಅಧಿಕ ವೀವ್ಸ್ ಪಡೆದಕೊಂಡಿದೆ. ಇದನ್ನೂ ಓದಿ: ಮತ್ತೆ ಕನ್ನಡಕ್ಕೆ ಬರಲಿದ್ದಾರೆ ಶಿಲ್ಪಾ ಶೆಟ್ಟಿ: ʻಕೆಡಿ’ಯಲ್ಲಿ ಲೇಡಿ ಪವರ್

    2023ರ ಸಂಕ್ರಾಂತಿ ಹಬ್ಬಕ್ಕೆ ‘ವೀರ ಸಿಂಹ ರೆಡ್ಡಿ’ ಸಿನಿಮಾ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ಚಿತ್ರದಲ್ಲಿ ಶೃತಿ ಹಾಸನ್ ನಾಯಕಿಯಾಗಿ ನಟಿಸಿದ್ದು, ಸ್ಯಾಂಡಲ್ ವುಡ್ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್, ವರಲಕ್ಷ್ಮೀ ಶರತ್ ಕುಮಾರ್ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಅದ್ದೂರಿ ಬ್ಯಾನರ್ ನಡಿ ಚಿತ್ರವನ್ನು ನವೀನ್ ಯಾರ್ನೇನಿ ಹಾಗೂ ವೈ.ರವಿ ಶಂಕರ್ ನಿರ್ಮಾಣ ಮಾಡಿದ್ದಾರೆ. ಸಾಯಿ ಮದೇವ್ ಸಂಭಾಷಣೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನವಿನ್ ನೂಲಿ ಸಂಕಲನ, ರಿಶಿ ಪುಂಜಾಬಿ ಕ್ಯಾಮೆರಾ ವರ್ಕ್, ರಾಮ್- ಲಕ್ಷ್ಮಣ್ ಹಾಗೂ ವೆಂಕಟ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪು ಅಂತಿಮ ದರ್ಶನ ಪಡೆದು ತೆರಳಿದ್ದ  ನಂದಮುರಿ ಬಾಲಕೃಷ್ಣ ಆಸ್ಪತ್ರೆಗೆ ದಾಖಲು

    ಅಪ್ಪು ಅಂತಿಮ ದರ್ಶನ ಪಡೆದು ತೆರಳಿದ್ದ ನಂದಮುರಿ ಬಾಲಕೃಷ್ಣ ಆಸ್ಪತ್ರೆಗೆ ದಾಖಲು

    ಹೈದರಾಬಾದ್: ನಟ ಪುನೀತ್ ರಾಜ್‍ಕುಮಾರ್ ಅಂತಿಮ ದರ್ಶನ ಪಡೆದು ತೆರಳಿದ್ದ ಟಾಲಿವುಡ್ ನಟ ನಂದಮುರಿ ಬಾಲಕೃಷ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಹೈದರಾಬಾದ್‍ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಆರು ತಿಂಗಳಿಂದ ಬಾಲಯ್ಯ ಅವರಿಗೆ ಭುಜದ ನೋವು ಅತಿಯಾಗಿ ಕಾಡುತ್ತಿತ್ತು. ಈ ಕಾರಣಕ್ಕೆ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿತ್ತು. ಆದರೆ ಆಪರೇಷನ್ ಮಾಡಿಸಿಕೊಂಡರೆ ಅವರು ವಿಶ್ರಾಂತಿ ಪಡೆಯಬೇಕು. ಹೀಗೆ ಮಾಡಿದರೆ, ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಬೇಕಾಗುತ್ತದೆ. ಹೀಗಾಗಿ ಅವರು ಇದನ್ನು ಮುಂದೂಡುತ್ತಲೇ ಬರುತ್ತಿದ್ದರು. ಇದನ್ನೂ ಓದಿ: ಪಂಜಾಬ್ ಲೋಕ್ ಕಾಂಗ್ರೆಸ್ -ಅಮರಿಂದರ್ ಸಿಂಗ್ ಹೊಸ ಪಕ್ಷ

    ಇಂದು ಬಾಲಕೃಷ್ಣ ಅವರಿಗೆ ತೀವ್ರವಾಗಿ ಭುಜದ ನೋವು ಬಂದಿತ್ತು. ಇದರಿಂದ ಅವರು ಕೈ ಎತ್ತಲೂ ಆಗದ ಪರಿಸ್ಥಿತಿ ಬಂದೊದಗಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಾಲ್ಕು ಗಂಟೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಡಾ. ಬಿಎನ್ ಪ್ರಸಾದ್ ಅವರು ಇದರ ನೇತೃತ್ವ ವಹಿಸಿಕೊಂಡಿದ್ದರು. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ

    Puneeth Rajkumar Special Vehicle 5

    ಈ ಆಪರೇಷನ್ ಯಶಸ್ವಿ ಆಗಿದೆ. ಬಾಲಕೃಷ್ಣ ಅವರು ಆಸ್ಪತ್ರೆಯಲ್ಲೇ ಇದ್ದಾರೆ. ಅವರು ಆರೋಗ್ಯಯುತವಾಗಿದ್ದಾರೆ. ಶೀಘ್ರದಲ್ಲೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ. ಅವರು ಕೆಲ ಕಾಲ ವಿಶ್ರಾಂತಿ ಪಡೆಯಬೇಕಿದೆ ಎಂದು ಹೇಳಿದ್ದಾರೆ.

    ಪುನೀತ್‍ರಾಜ್‍ಕುಮಾರ್ ಅವರು ನಿಧನವಾದ ವಿಚಾರವನ್ನು ತಿಳಿದು ಬೆಂಗಳೂರಿಗೆ ಬಂದು ಅಂತಿಮ ನಮನ ಸಲ್ಲಿಸಿದ್ದರು. ಪುನೀತ್ ಅವರ ಪಾರ್ಥಿವ ಶರೀರವನ್ನು ನೋಡುತ್ತಾ ಕಣ್ಣೀರಿಟ್ಟಿದ್ದರು.

  • ಭಾರತ ರತ್ನ ನಮ್ಮ ತಂದೆಯ ಕಾಲಿನ ಧೂಳಿಗೂ ಸಮವಿಲ್ಲ: ನಂದಮುರಿ ಬಾಲಕೃಷ್ಣ

    ಭಾರತ ರತ್ನ ನಮ್ಮ ತಂದೆಯ ಕಾಲಿನ ಧೂಳಿಗೂ ಸಮವಿಲ್ಲ: ನಂದಮುರಿ ಬಾಲಕೃಷ್ಣ

    ಹೈದರಾಬಾದ್: ಸದಾ ವಿವಾದಾತ್ಮಕ ಹೇಳಿಕೆ ನೀಡುವುದರ ಮೂಲಕವೇ ಟ್ರೋಲ್‍ಗೆ ಒಳಗಾಗುವ ತೆಲುಗು ಹಿರಿಯ ನಟ ಹಾಗೂ ರಾಜಕಾರಣಿ ನಂದಮುರಿ ಬಾಲಕೃಷ್ಣ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

    ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಯಾರೆಂದು ನನಗೆ ಗೊತ್ತಿಲ್ಲ. ಭಾರತ ರತ್ನ ನನ್ನ ತಂದೆ ಎನ್.ಟಿ.ರಾಮರಾವ್ ಅವರ ಕಾಲಿನ ಬೆರಳಿನ ಉಗುರಿಗೆ ಸಮ ಎಂದಿದ್ದಾರೆ. ಈ ಮೂಲಕ ಸಖತ್ ಟ್ರೋಲ್‍ಗೆ ಒಳಗಾಗಿದ್ದಾರೆ.

    ನನಗೆ ಎ.ಆರ್.ರೆಹಮಾನ್ ಯಾರೆಂದು ಗೊತ್ತಿಲ್ಲ, ನಾನು ಕೇರ್ ಮಾಡುವುದಿಲ್ಲ. ದಶಕಗಳ ಹಿಂದೆ ಅವರು ಹಿಟ್ ಹಾಡುಗಳನ್ನು ನೀಡಿ ಆಸ್ಕರ್ ಅವಾರ್ಡ್ ಪಡೆದಿರಬಹುದು. ಆದರೆ ಆಸ್ಕರ್ ಪ್ರಶಸ್ತಿ ಮಾತ್ರವಲ್ಲ ಭಾರತ ರತ್ನವನ್ನೂ ನಾನು ಗೌರವಿಸುವುದಿಲ್ಲ. ಭಾರತ ರತ್ನ ನಮ್ಮ ತಂದೆ ಎನ್.ಟಿ.ರಾಮ ರಾವ್ ಅವರ ಕಾಲ್ಬೆರಳಿನ ಉಗುರಿಗೂ ಸಮವಿಲ್ಲ. ಎಲ್ಲ ಪ್ರಶಸ್ತಿಗಳು ನನ್ನ ಪಾದಕ್ಕೆ ಸಮ ಎಂದು ಹೇಳಿದ್ದಾರೆ.

    ಟಾಲಿವುಡ್‍ಗೆ ನಮ್ಮ ಕುಟುಂಬ ನೀಡಿದ ಕೊಡುಗೆಯನ್ನು ಯಾವುದೇ ಪ್ರಶಸ್ತಿ ಸರಿದೂಗಿಸಲು ಸಾಧ್ಯವಿಲ್ಲ. ಪ್ರಶಸ್ತಿಗಳು ಮಾತ್ರ ಕೆಟ್ಟದ್ದನ್ನು ಅನುಭವಿಸಬೇಕು. ನನ್ನ ಕುಟುಂಬ ಅಥವಾ ನನ್ನ ತಂದೆ ಅಲ್ಲ ಎಂದು ಖಾರವಾಗಿ ಹೇಳಿದ್ದಾರೆ.

    ಎ.ಆರ್.ರೆಹಮಾನ್ ಅವರು 1993ರಲ್ಲಿ ಬಾಲಕೃಷ್ಣ ಅವರ ನಿಪ್ಪು ರವ್ವಾ ಸಿನಿಮಾಗೆ ಹಿನ್ನೆಲೆ ಸಂಗೀತ ಕಂಪೋಸ್ ಮಾಡಿದ್ದರು. ಬಾಲಕೃಷ್ಣ ಅವರ ಸಂದರ್ಶನದ ವೀಡಿಯೋ ನೋಡುತ್ತಿದ್ದಂತೆ ರೆಹಮಾನ್ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.