Tag: ನಂದಗೋಕುಲ

  • ನಂದ-ಗೋಕುಲದಲ್ಲಿ ಧಾರಾವಾಹಿಯಲ್ಲಿ ಹೊಸ ಪ್ರಯತ್ನ

    ನಂದ-ಗೋಕುಲದಲ್ಲಿ ಧಾರಾವಾಹಿಯಲ್ಲಿ ಹೊಸ ಪ್ರಯತ್ನ

    ತ್ತೀಚೆಗಷ್ಟೇ ಕೃಷ್ಣಜನ್ಮಾಷ್ಟಮಿ ಸಂಭ್ರಮ ಮುಗಿದಿದೆ. ಆದರೆ ಅದರ ಸದ್ದು, ಕೃಷ್ಣನ ಮುದ್ದು ಮುಗಿಯುವಂತದ್ದಲ್ಲ. ಕಲರ್ಸ್ ಕನ್ನಡದ ‘ನಂದಗೋಕುಲ’ (Nandagokula Serial) ಕತೆಯಲ್ಲಿ ಕೃಷ್ಣನನ್ನ ಆರಾಧಿಸಲು ಒಂದು ಹೊಸ ಪ್ರಯತ್ನ ಮಾಡಲಾಗಿದೆ. ಟಿವಿ ಮಾಧ್ಯಮ ಎಲ್ಲರ ಮನೆಯನ್ನು ತಲುಪುವ ಮೊದಲು ಕನ್ನಡಿಗರ ಮನಸ್ಸಲ್ಲಿ ಉಚ್ಛ ಸ್ಥಾನದಲ್ಲಿದ್ದದ್ದು ‘ಹರಿಕತೆ’. ಸಂಗೀತದ ತಿಳುವಳಿಕೆ, ಪುರಾಣಗಳ ಜ್ಞಾನ, ಕತೆ ಹೇಳುವ ವಿಶಿಷ್ಟ ಕಲೆ. ಈ ಕಲೆಯನ್ನ ಗೌರವಿಸುವ ನಿಟ್ಟಿನಲ್ಲಿ, ಇದೀಗ ನಂದನ-ಗೋಕುಲದಲ್ಲಿ ಗೋಕುಲಾಷ್ಟಮಿಯ ನೆಪದಲ್ಲಿ ಹರಿಕತೆಯನ್ನ ಮಾಡಲಾಗುತ್ತಿದೆ.

    ನಂದಗೋಕುಲ ಕಿರುತೆರೆಯ ವಲಯದಲ್ಲಿ ವಿಭಿನ್ನ ಕಥಾ ಹಂದರ ಹೊಂದಿರುವ ಹೊಸ ರೀತಿಯ ಕತೆ, ಮನೆ-ಮನಸ್ಸುಗಳನ್ನ ತಾಕಿರುವ ಪ್ರತಿಯೊಬ್ಬ ಅಪ್ಪನ ಕತೆ. ವಿಶೇಷವಾದ ಮನ ಮುಟ್ಟುವ ಪಾತ್ರಗಳಿಗೆ ಹೆಸರಾದ ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಗಿರಿಜಾ ಹರಿಕತೆ ಮಾಡಲಿದ್ದಾರೆ. ಸೊಸೆ ಮೀನಾಳಿಗೆ ಮನೆಯಲ್ಲಿ ಒಂದು ಹಾರ್ಮೋನಿಯಂ ಸಿಗುತ್ತದೆ. ಇದು ಯಾರದ್ದು ಎಂದು ವಿಚಾರಿಸಿದಾಗ ಗಿರಿಜಾ ಮೂವತ್ತು ವರ್ಷಗಳ ಹಿಂದೆ ಹರಿಕತೆಯನ್ನು ಮಾಡುತ್ತಿದ್ದ ವಿಷಯ ತಿಳಿಯುತ್ತದೆ. ಅಣ್ಣಂದಿರು ಅವಳ ಮದುವೆಯನ್ನು ತಿರಸ್ಕರಿಸಿದ ಕಾರಣಕ್ಕೆ ದುಃಖದಲ್ಲಿ ಗಿರಿಜಾ ತನ್ನ ಈ ಇಷ್ಟದ ಕಲೆಯನ್ನ ತ್ಯಜಿಸಿದ್ದಾಳೆ ಎನ್ನುವ ವಿಷಯ ತಿಳಿದ ಮೀನಾ ಅತ್ತೆಯಿಂದ ಮತ್ತೆ ಹರಿಕತೆ ಮಾಡಿಸಬೇಕು ಎಂದು ನಿರ್ಧರಿಸುತ್ತಾಳೆ. ಕೃಷ್ಣಜನ್ಮಾಷ್ಟಮಿಯ ದಿನ ಮೀನಾ ಗಿರಿಜಾಳ ಬಳಿ ಒತ್ತಾಯ ಮಾಡಿ ಹರಿಕತೆ ಮಾಡಿಸುತ್ತಾಳೆ ಎಂಬಂತೆ ಕತೆ ಸಾಗುತ್ತದೆ. ಇದನ್ನೂ ಓದಿ: ರಣ್ವೀರ್ ಸಿಂಗ್ ಸಿನಿಮಾ ಸೆಟ್ಟಲ್ಲಿ ನೂರಕ್ಕೂ ಹೆಚ್ಚು ತಂತ್ರಜ್ಞರಿಗೆ ಫುಡ್ ಪಾಯ್ಸನ್!

    ಇದರಲ್ಲಿ ಇನ್ನೂ ವಿಶೇಷವೆಂದರೆ, ಗಿರಿಜಾ ಪಾತ್ರಧಾರಿ ಅಮೃತಾ ನಾಯ್ಡು ಬಹು ಪ್ರಖ್ಯಾತ ಹರಿಕತೆ ಕಲಾವಿದ ಗುರುರಾಜ ನಾಯ್ಡು ಅವರ ಮೊಮ್ಮಗಳು. ರಕ್ತದಲ್ಲಿಯೇ ಈ ವಿಶಿಷ್ಟ ಕಲೆಯನ್ನ ಹೊಂದಿರುವ ಅಮೃತಾ ಅವರು ಪ್ರಸ್ತುತಪಡಿಸಲಿರುವ ಹರಿಕತೆ ಬಹಳ ಚಂದದಲ್ಲಿ ಮೂಡಿಬಂದಿರುತ್ತದೆ. ಪಾರಂಪರ್ಯದಿಂದಲೂ ಹರಿಕತೆ ಮಾಡುತ್ತ ಬಂದಿರುವ ಕುಟುಂಬದ ಕುಡಿ, ಇಡೀ ಕರ್ನಾಟಕದ ಜನತೆಗೆ ಶ್ರೀಕೃಷ್ಣನ ಲೀಲೆಯ ಕತೆಯನ್ನ ಉಣಬಡಿಸಲಿದ್ದಾರೆ. ಈ ವಿಶೇಷ ಕಾರ್ಯಕ್ರಮವನ್ನು ತಪ್ಪದೇ ವೀಕ್ಷಿಸಿ, ಸೋಮವಾರದಿಂದ ಶುಕ್ರವಾರ ರಾತ್ರಿ 9 ಗಂಟೆಗೆ, ನಂದಗೋಕುಲ ನಿಮ್ಮ ನೆಚ್ಚಿನ ಕಲರ್ಸ್ ಕನ್ನಡ ವಾಹಿನಿಯಲ್ಲಿ.

  • ನಂದಗೋಕುಲ ಧಾರಾವಾಹಿಯಲ್ಲಿ ಹೈಡ್ರಾಮಾ..!

    ನಂದಗೋಕುಲ ಧಾರಾವಾಹಿಯಲ್ಲಿ ಹೈಡ್ರಾಮಾ..!

    ಲರ್ಸ್ ಕನ್ನಡ ವಾಹಿನಿ ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ ಮನಮಿಡಿಯುವ ಕಥೆಗಳ ಮೂಲಕ ಜನಪ್ರಿಯವಾಗಿದೆ. ಅಂತಹ ಜನ ಮೆಚ್ಚಿದ ಧಾರಾವಾಹಿಯಲ್ಲಿ `ನಂದಗೋಕುಲ’ ಸೀರಿಯಲ್ ಕೂಡಾ ಒಂದು. `ಮಕ್ಕಳನ್ನು ಹೀರೋ ಮಾಡೋಕೆ ಹೋರಾಡೋ ಪ್ರತಿಯೊಬ್ಬ ಅಪ್ಪನ ಕಥೆ’ಯನ್ನು ಹೇಳುವ `ನಂದಗೋಕುಲ’ ರಾತ್ರಿ 9ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು ಹೊಸ ತಿರುವುಗಳೊಂದಿಗೆ ಪ್ರೇಕ್ಷಕರ ಮನವನ್ನು ಗೆಲ್ಲುತ್ತಿದೆ.

    ನಂದಕುಮಾರ್ ಒಬ್ಬ ಕಟ್ಟುನಿಟ್ಟಾದ ನಡವಳಿಕೆಯ ಆತ್ಮವಿಶ್ವಾಸದಿಂದ ಕೂಡಿದ ವ್ಯಕ್ತಿ, `ಗಿರಿಜಾ ಸ್ಟೋರ್ಸ್’ ಎಂಬ ದಿನಸಿ ಅಂಗಡಿ ನಡೆಸುವ ನಂದನಿಗೆ ತನ್ನ ಕುಟುಂಬವೆಂದರೆ ಪ್ರಾಣ. ಆದರೆ ಎದುರು ಮನೆಯಲ್ಲೇ ಇರುವ ಸೂರ್ಯಕಾಂತ್ ಮತ್ತು ಚಂದ್ರಕಾಂತ್ ಕುಟುಂಬವೆಂದರೆ ನಂದಕುಮಾರ್‌ಗೆ ಕೆಂಡದಂಥ ಕೋಪ, ವೈಷಮ್ಯ. ತನ್ನ ಹೆಂಡತಿ ಗಿರಿಜಾಳ ಸಹೋದರರೇ ಇವರಿಬ್ಬರೂ! ಈ ದ್ವೇಷಕ್ಕೆ ಕಾರಣ ನಂದಕುಮಾರ್ ಹಾಗೂ ಗಿರಿಜಾ 25 ವರ್ಷಗಳ ಹಿಂದೆ ಓಡಿಹೋಗಿ ಮದುವೆಯಾಗಿದ್ದು, ಈ ಎರಡೂ ಕುಟುಂಬಗಳ ನಡುವೆ ಅಂದಿನಿಂದಲೂ ಆಕ್ರೋಶ. ಇದನ್ನೂ ಓದಿ: 77 ಲಕ್ಷ ವಂಚನೆ – ಆಲಿಯಾ ಭಟ್‌ ಮಾಜಿ ಆಪ್ತ ಕಾರ್ಯದರ್ಶಿ ಬೆಂಗಳೂರಿನಲ್ಲಿ ಅರೆಸ್ಟ್‌

    ನಂದಕುಮಾರ್ ಮತ್ತು ಗಿರಿಜಾರ ಮಕ್ಕಳಾದ ಧನ್ಯಾ, ಮಾಧವ, ಕೇಶವ, ವಲ್ಲಭ ಮತ್ತು ಅನನ್ಯಾ ತಂದೆಯ ಕಟ್ಟುನಿಟ್ಟಾದ ನಿರೀಕ್ಷೆಗಳ ನಡುವೆ ಬೆಳೆದವರು. ತನ್ನ ಮಕ್ಕಳು ತನ್ನಂತೆ ಪ್ರೀತಿಸಿ ಮದುವೆಯಾದರೆ ನೋವನುಭವಿಸಬೇಕಾಗುತ್ತದೆ. ನೆಮ್ಮದಿಯೂ ಇರುವುದಿಲ್ಲ ಎಂದು ನಿರ್ಧರಿಸಿ ಮಕ್ಕಳಿಂದ `ನೀವ್ಯಾರೂ ಪ್ರೀತಿಸಿ ಮದ್ವೆ ಆಗೊಲ್ಲ ಅಂತ ನನಗೆ ಮಾತು ಕೊಡಿ!’ ಎಂದು ನಂದಕುಮಾರ್ ಭಾಷೆ ತೆಗೆದುಕೊಂಡಿರುತ್ತಾನೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ನಯಾ ಲುಕ್.. ಬ್ಯೂಟಿಫುಲ್..!

    ಆದರೆ ಎರಡನೇ ಮಗ ಕೇಶವ, ಮೀನಾಳನ್ನು ಪ್ರೀತಿಸುತ್ತಾನೆ. ಇವರಿಬ್ಬರ ಪ್ರೀತಿಯ ವಿಷಯ ತಿಳಿದ ಮೀನಾಳ ತಂದೆ ಬೇರೊಬ್ಬ ಹುಡುಗನ ಜೊತೆ ಮದುವೆ ಫಿಕ್ಸ್ ಮಾಡುತ್ತಾನೆ. ಇತ್ತ ನಂದಕುಮಾರ್‌ಗೂ ಮಗ ಕೇಶವನ ಪ್ರೀತಿಯ ವಿಷಯ ಗೊತ್ತಾಗುತ್ತದೆ. ದೊಡ್ಡ ಮಗ ಮಾಧವನಿಗೆ ಹೆಣ್ಣು ನೋಡುತ್ತಿದ್ದಾಗ ಕೇಶವನಿಗೂ ಮದುವೆ ಮಾಡಿಸುವ ಯೋಚನೆಯಲ್ಲಿ ಒಂದೇ ಮನೆಯ ಅಕ್ಕ ತಂಗಿಯರನ್ನು ನೋಡಿ ಮದುವೆ ಕೂಡಾ ಫಿಕ್ಸ್ ಆಗುತ್ತದೆ.

    ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮೀನಾಳ ಮದುವೆ ಇನ್ನೊಬ್ಬ ಹುಡುಗನ ಜೊತೆ ನೆರವೇರುತ್ತಿರುತ್ತದೆ. ಆಗ ನಂದಕುಮಾರ್‌ನ ಮೂರನೇ ಮಗ ವಲ್ಲಭ ತನ್ನ ಅಣ್ಣನ ಪ್ರೀತಿಯನ್ನು ಒಂದು ಮಾಡಲು ನಿರ್ಧರಿಸುತ್ತಾನೆ. ಬೇಸರದಲ್ಲಿಯೇ ಮದುವೆ ಮಂಟಪಕ್ಕೆ ಹೋಗಲು ಸಜ್ಜಾಗಿರೋ ಮೀನಾಳನ್ನು ಯಾರ ಕಣ್ಣಿಗೂ ಬೀಳದಂತೆ ಅಲ್ಲಿಂದ ಕರೆದೊಯ್ಯುತ್ತಾನೆ. ಇದನ್ನೂ ಓದಿ: `ನಾನು ಪಾರ್ಟ್ ಟೈಂ ನಟಿ’ ಎಂದ ಕೇಂದ್ರ ಮಾಜಿ ಸಚಿವೆ ಸ್ಮೃತಿ ಇರಾನಿ..? ಫುಲ್‌ಟೈಂ ಏನ್ ಗೊತ್ತಾ?

    ವಲ್ಲಭನಿಗೆ ಕೇಶವನ ಮದುವೆ ಮೀನಾಳ ಜೊತೆ ಮಾಡಿಸಬೇಕಿದೆ. ವಲ್ಲಭ ಅಣ್ಣನ ಮದುವೆಯನ್ನು ಮಾಡಿಸಲು ಯಶಸ್ವಿಯಾಗುತ್ತಾನಾ? ತನ್ನ ಮಕ್ಕಳು ತಾನು ಹಾಕಿದ ಗೆರೆ ದಾಟಲ್ಲ ಎಂದು ಭಾವಿಸಿರುವ ನಂದಕುಮಾರ್‌ಗೆ ತನ್ನ ಮಗ ಕೇಶವ ಪ್ರೀತಿಸಿ ಮದುವೆಯಾದರೆ ಆಗುವ ಆಘಾತವೇನು? ಅಪ್ಪಿತಪ್ಪಿ ಮದುವೆಯಾದಲ್ಲಿ ಆ ಮದುವೆಯನ್ನು ಒಪ್ಪಲು ಸಾಧ್ಯವೇ? ವರ್ಷಾನುಗಟ್ಟಲೆಯಿಂದ ಬೆಳೆಸಿಕೊಂಡು ಬಂದ ಪರಂಪರೆಯನ್ನು ಉಳಿಸಿಕೊಳ್ಳುವ ಸವಾಲನ್ನು ನಂದಕುಮಾರ್ ಹೇಗೆ ಎದುರಿಸುತ್ತಾನೆ?

    `ನಂದ ಗೋಕುಲ’ದಂಥ ಕುಟುಂಬ ತಮ್ಮದಿರಬೇಕು. ಎಲ್ಲರೂ ಜೊತೆಯಾಗಿ ಸಂತೋಷದಿಂದ ಬಾಳಿ ಬದುಕಬೇಕು ಎಂಬ ಕನಸು ಕಾಣುತ್ತಿರುವ ನಂದಕುಮಾರ್ ಕನಸು ತನ್ನ ಮಕ್ಕಳ ಆಯ್ಕೆಯಿಂದ ಏರುಪೇರಾಗುತ್ತದೆಯೇ? ಚೆಂದದ ಮನಸ್ಸುಗಳು ಸೇರಿದ ತುಂಬಿದ ಮನೆ ಜೇನಿನ ಗೂಡಾಗಿ ಇರುತ್ತದೆಯೇ? ಭೂಮಿಗೆ ಒಟ್ಟಿಗೆ ಬಂದವರು ಒಗ್ಗಟ್ಟಾಗಿರುವರೇ? ಭಿನ್ನ ಅಭಿರುಚಿ ಇದ್ದವರು ಒಂದೇ ಸೂರಿನಡಿ ಇರಬಲ್ಲರೇ? ಒಂದೇ ಮನಸ್ಸಿನ ಮಂದಿ ಮನಸ್ಸು ಮುರಿದು ಹೋಗುವಂತ ಸ್ಥಿತಿಗೆ ಬಂದರೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇದೇ ವಾರ `ನಂದಗೋಕುಲ’ ಧಾರಾವಾಹಿಯಲ್ಲಿ ಉತ್ತರ ಸಿಗಲಿದೆ. ಇದನ್ನೂ ಓದಿ: ನಯನತಾರಾಗೆ ನೋಟಿಸ್ : 5 ಕೋಟಿ ರೂಪಾಯಿಗೆ ಡಿಮಾಂಡ್

    `ಬಣ್ಣ ಟಾಕೀಸ್’ ನಿರ್ಮಿಸುತ್ತಿರುವ `ನಂದ ಗೋಕುಲ’ ಧಾರಾವಾಹಿಯ ತಾರಾಗಣದಲ್ಲಿ ಅರವಿಂದ್ ರಾವ್, ಅಮೃತಾ ನಾಯ್ಡು, ರವಿ ಚೇತನ್, ರಘು ಮಂಡ್ಯ, ಅಭಿಷೇಕ್ ದಾಸ್, ಯಶವಂತ್, ವಿಜಯ್ ಚಂದ್ರ, ಊರ್ಜಿತ ವಲ್ತಾಜೆ, ಅರ್ಚನಾ ಗಾಯಕ್ವಾಡ್, ನವ್ಯಾ, ಮೇಘಾ, ಕೃಷ್ಣಪ್ರಿಯ, ಶೈಲಜಾ ಮುಂತಾದವರು ಇದ್ದಾರೆ.