Tag: ಧ್ವಜ

  • ಪಾಕ್ ಧ್ವಜವನ್ನು ಅಪ್ಪಿಕೊಂಡು ಟ್ರೋಲ್ ಆದ ರಾಖಿ ಸಾವಂತ್

    ಪಾಕ್ ಧ್ವಜವನ್ನು ಅಪ್ಪಿಕೊಂಡು ಟ್ರೋಲ್ ಆದ ರಾಖಿ ಸಾವಂತ್

    ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಪಾಕಿಸ್ತಾನದ ಧ್ವಜವನ್ನು ಅಪ್ಪಿಕೊಂಡಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಟ್ರೋಲ್‍ಗೊಳಗಾಗಿದ್ದಾರೆ.

    ರಾಖಿ ಸಾವಂತ್ ಪಾಕಿಸ್ತಾನದ ಧ್ವಜ ಹಿಡಿದುಕೊಂಡಿರುವ ಫೋಟೋ ಹಾಕಿ ಅದಕ್ಕೆ, “ನನಗೆ ಭಾರತ ಅಂದರೆ ಇಷ್ಟ ಹಾಗೂ ನಾನು ಭಾರತ ದೇಶ ಪ್ರೀತಿಸುತ್ತೇನೆ. ಆದರೆ ಇದು ನನ್ನ ಸಿನಿಮಾ ‘ದಾರಾ 370’ ಚಿತ್ರದ ಪಾತ್ರ ಅಷ್ಟೇ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    I love my india ???????? but its my character in the film ???? dhara 370

    A post shared by Rakhi Sawant (@rakhisawant2511) on

    ನಾನು ಜನರಿಗೆ ಒಂದು ವಿಷಯ ಹೇಳಲು ಇಷ್ಟಪಡುತ್ತೇನೆ. ನನಗೆ ಪಾಕಿಸ್ತಾನದ ಯುವತಿಯಾಗಿ ತೋರಿಸಿದ್ದಾರೆ. ಪಾಕಿಸ್ತಾನದ ಜನರು ಎದೆಯಲ್ಲೂ ಹೃದಯ ಇರುತ್ತದೆ. ಅವರು ತುಂಬಾ ಒಳ್ಳೆಯವರು. ಪಾಕಿಸ್ತಾನದಲ್ಲಿ ಎಲ್ಲರೂ ಕೆಟ್ಟವರಾಗಿ ಇರಲು ಸಾಧ್ಯವಿಲ್ಲ. ಕೆಲವರು ಮಕ್ಕಳಿಂದ ಜಿಹಾದ್ ಮಾಡಿಸುತ್ತಾರೆ. ಅವರು ತಮ್ಮ ದೇಶ ಹಾಗೂ ಅಲ್ಲಾನ ವಿರುದ್ಧವಾಗಿ ಈ ರೀತಿ ಕೆಲಸ ಮಾಡುತ್ತಾರೆ. ನಾನು ಪಾಕಿಸ್ತಾನವನ್ನು ಹಾಗೂ ಅಲ್ಲಿನ ಜನರನ್ನು ಗೌರವಿಸುತ್ತೇನೆ ಎಂದು ರಾಖಿ ವಿಡಿಯೋವೊಂದರಲ್ಲಿ ಹೇಳಿದ್ದಾರೆ.

     

    View this post on Instagram

     

    A post shared by Rakhi Sawant (@rakhisawant2511) on

    ಸದ್ಯ ರಾಖಿ ಸಾವಂತ್ ಫೋಟೋ ಹಾಗೂ ವಿಡಿಯೋ ನೋಡಿ ಜನರು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಅಲ್ಲದೆ, “ನೀನು ಪಾಕಿಸ್ತಾನದ ಪ್ರಜೆ ಆಗಲು ಸೂಕ್ತ. ಮಿಸ್. ರಾಖಿ ಸಾವಂತ್ ಅಲ್ಲ ನೀನು ‘ಪಾಕಿಸ್ತಾನಿ’ ಸಾವಂತ್ ಎಂದು ಕಮೆಂಟ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಮತ್ತೆ ಕೆಲವರು ಹಣಕ್ಕಾಗಿ ನೀನು ನಮ್ಮ ವೈರಿ ರಾಷ್ಟ್ರ ಪಾಕಿಸ್ತಾನದ ಧ್ವಜವನ್ನು ಅಪ್ಪಿಕೊಂಡಿದ್ದೀಯಾ?. ಇದು ಸರಿಯಲ್ಲ ರಾಖಿ ಎಂದು ಕಮೆಂಟ್ ಮಾಡಿದರೆ. ಮತ್ತೆ ಕೆಲವರು ಪಾಕಿಸ್ತಾನದ ಧ್ವಜ ಹಿಡಿದುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಕ್ಕೆ ನಿನ್ನನ್ನು ಅನ್‍ಫಾಲೋ ಮಾಡುತ್ತಿದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ.

     

    View this post on Instagram

     

    A post shared by Rakhi Sawant (@rakhisawant2511) on

  • 80 ಅಡಿಯ ಬೃಹತ್ ಕನ್ನಡ ಧ್ವಜವನ್ನು ಹಾರಿಸಿದ ಡಾ. ರಾಜ್ ಅಭಿಮಾನಿ ಬಳಗ

    80 ಅಡಿಯ ಬೃಹತ್ ಕನ್ನಡ ಧ್ವಜವನ್ನು ಹಾರಿಸಿದ ಡಾ. ರಾಜ್ ಅಭಿಮಾನಿ ಬಳಗ

    ಬೆಂಗಳೂರು: 80 ಅಡಿಯ ಬೃಹತ್ತಾದ ಕನ್ನಡ ಧ್ವಜವನ್ನು ಬೆಟ್ಟದ ತುತ್ತ ತುದಿಯಲ್ಲಿ ಹಾರಿಸುವ ಮೂಲಕ ಯುವಕರ ತಂಡ ನಾಡಪ್ರೇಮ ಮೆರೆದಿದ್ದಾರೆ.

    ಮಾಗಡಿ ತಾಲೂಕಿನ ಕುದೂರು ಬಳಿ ಇರುವ ಐತಿಹಾಸಿಕ ಭೈರವದುರ್ಗ ಬೆಟ್ಟದ ತುತ್ತತುದಿಯಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿ ಬಳಗ ಸತತ ಹನ್ನೇರಡು ವರ್ಷಗಳಿಂದ ಬೃಹತ್ತಾದ ಕನ್ನಡದ ಬಾವುಟವನ್ನು ಹಾರಿಸುತ್ತಿದ್ದಾರೆ.

    ವರನಟ ಡಾ. ರಾಜ್ ಕುಮಾರ್ ಸೇರಿದಂತೆ ಕನ್ನಡದ ಕಟ್ಟಾಳುಗಳಿಗೆ ಜಯಘೋಷಗಳನ್ನು ಕೂಗುವುದರ ಮೂಲಕ ಯುವಕರ ತಂಡ ಬೆಟ್ಟದ ತುತ್ತ ತುದಿಯಲ್ಲಿ ಕನ್ನಡ ಬಾವುಟವನ್ನು ಹಾರಿಸಿ ಕನ್ನಡ ಅಭಿಮಾನವನ್ನು ಮೆರೆದಿದ್ದಾರೆ. ಭೈರವದುರ್ಗ ಬೆಟ್ಟದ ತಪ್ಪಲಿನಿಂದ ಕನ್ನಡ ಬಾವುಟ ಹಾಗೂ ಧ್ವಜ ಸ್ತಂಭವನ್ನು ಗ್ರಾಮಸ್ಥರು ಹೆಗಲ ಮೇಲೆ ಎತ್ತಿಕೊಂಡು ಹೋಗಿ ಬೆಟ್ಟದ ಮೇಲೆ ಸ್ಥಾಪಿಸಿ ತಮ್ಮ ಕನ್ನಡ ಅಭಿಮಾನವನ್ನು ಮೆರೆದರು.

    ಡಾ. ರಾಜ್ ಅಭಿಮಾನಿಗಳು ಪ್ರತಿ ವರ್ಷದಂತೆ ಈ ವರ್ಷವೂ ಸಹ ಗಿಡಗಳನ್ನು ನೆಟ್ಟು, ಗಿಡಗಳಿಗೆ ನೀರು ಎರೆಯುವ ಮೂಲಕ ಪರಿಸರ ಪ್ರಜ್ಞೆಯ ಜೊತೆಗೆ ಬೆಟ್ಟದ ತುದಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 800 ಅಡಿ ಉದ್ದದ ರಾಷ್ಟ್ರಧ್ವಜ ಹಿಡಿದು ವಿದ್ಯಾರ್ಥಿಗಳ ಮೆರವಣಿಗೆ

    800 ಅಡಿ ಉದ್ದದ ರಾಷ್ಟ್ರಧ್ವಜ ಹಿಡಿದು ವಿದ್ಯಾರ್ಥಿಗಳ ಮೆರವಣಿಗೆ

    ಚಿಕ್ಕಮಗಳೂರು: ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಜಿಲ್ಲೆಯ ವಿದ್ಯಾರ್ಥಿಗಳು ಸುಮಾರು 800 ಅಡಿ ಉದ್ದದ ಧ್ವಜವನ್ನು ಹಿಡಿದು ನಗರದಾದ್ಯಂತ ಮೆರವಣಿಗೆ ನಡೆಸಿದ್ದಾರೆ.

    ಇಂದು ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು 800 ಅಡಿ ಉದ್ದದ ಧ್ವಜವನ್ನ ಮೆರವಣಿಗೆ ಮಾಡಿದ್ದಾರೆ. ನಗರದ ಹನುಮಂತಪ್ಪ ವೃತ್ತದಿಂದ ಮೆರವಣೆಗೆ ಹೊರಟ ವಿದ್ಯಾರ್ಥಿಗಳು ಎಂ.ಜಿ.ರಸ್ತೆ ಹಾಗೂ ಐ.ಜಿ. ರಸ್ತೆ ಮೂಲಕ ಸಾಗಿ ಕುವೆಂಪು ಕಲಾಮಂದಿರದವರೆಗೂ ಮೆರವಣಿಗೆ ನಡೆಸಿದ್ದಾರೆ.

    ಮೆರವಣಿಗೆಯುದ್ದಕ್ಕೂ ಸೈನಿಕರ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳು, ಮೆರವಣಿಗೆಯ ಬಳಿಕ ಕುವೆಂಪು ಕಲಾಮಂದಿರದಲ್ಲಿ ಮಾಜಿ ಸೈನಿಕರಿಗೆ ಸನ್ಮಾನ ಮಾಡಿದ್ದಾರೆ. ಸಮಾರಂಭದಲ್ಲಿ ಸೈನಿಕರು ತಮ್ಮ ವೃತ್ತಿ ಜೀವನದ ರೋಚಕ ಮಾಹಿತಿಗಳನ್ನು ವಿದ್ಯಾರ್ಥಿಗಳ ಬಳಿ ಹಂಚಿಕೊಂಡಿದ್ದಾರೆ.

  • ಪಾಕ್ ಧ್ವಜ ಹಾರಾಟ ಕೇಸ್- ಗೌರಿ ಹತ್ಯೆಯ ಆರೋಪಿ ವಾಗ್ಮೋರೆ ಖುಲಾಸೆ

    ಪಾಕ್ ಧ್ವಜ ಹಾರಾಟ ಕೇಸ್- ಗೌರಿ ಹತ್ಯೆಯ ಆರೋಪಿ ವಾಗ್ಮೋರೆ ಖುಲಾಸೆ

    ವಿಜಯಪುರ: ಜಿಲ್ಲೆಯ ಸಿಂಧಗಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಪಾಕ್ ಧ್ವಜ ಹಾರಿಸಿದ ಪ್ರಕರಣದಲ್ಲಿ ಪರಶುರಾಮ ವಾಗ್ಮೋರೆ ಸೇರಿದಂತೆ ಆರು ಆರೋಪಿಗಳು ಖುಲಾಸೆಗೊಂಡಿದ್ದಾರೆ.

    2012ರ ಜನವರಿ 1 ರಂದು ಸಿಂಧಗಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಲಾಗಿತ್ತು. ಈ ಪ್ರಕರಣದಲ್ಲಿ ಗೌರಿ ಲಂಕೇಶ್ ಹತ್ಯೆಯ ಪ್ರಮುಖ ಆರೋಪಿ ಪರಶುರಾಮ ಆರೋಪಿ ಸೇರಿ ಒಟ್ಟು 7 ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಬರೋಬ್ಬರಿ 6 ವರ್ಷಗಳ ಸುದೀರ್ಘ ವಿಚಾರಣೆ ನಂತರ ಇಂದು ಪರಶುರಾಮ ವಾಗ್ಮೋರೆ ಸೇರಿದಂತೆ 6 ಆರೋಪಿಗಳಿಗೆ ವಿಜಯಪುರದ 1ನೇ ಹೆಚ್ಚುವರಿ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ.

    ತಾಂತ್ರಿಕ ದೋಷದಿಂದ ಆರೋಪ ಸಾಬೀತು ಮಾಡಲು ಸಾಧ್ಯವಾಗದೆ ಕೇಸ್ ಖುಲಾಸೆ ಆಗಿದೆ. ಅಲ್ಲದೇ ಪ್ರಕರಣದ ಮತ್ತೋರ್ವ ಆರೋಪಿ ಅಪ್ರಾಪ್ತ ಆಗಿದ್ದಾನೆ ಎಂದು ವಕೀಲರಾದ ಲಗಳಿ ಮಾಧ್ಯಮಗಳಿಗೆ ಸ್ಪಷ್ಟ ಪಡಿಸಿದರು.

    ಗೌರಿ ಹತ್ಯೆ ಪ್ರಕರಣದ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ವಾಗ್ಮೋರೆ ಮೌನ ವಹಿಸಿದ್ದ, ಅಲ್ಲದೇ ಮಾಧ್ಯಮಗಳ ಕ್ಯಾಮೆರಾ ಕಂಡು ಮುಖ ಮುಚ್ಚಿಕೊಳ್ಳಲು ಯತ್ನಿಸಿದ್ದ. ವಿಷಯ ಎಲ್ಲರಿಗೂ ಗೊತ್ತಿರೋದೆ ಎಂದಾಗ ಕ್ಯಾಮೆರಾಗಳಿಗೆ ಮುಖ ದರ್ಶನ ಮಾಡಿದ್ದಾನೆ. ಅಲ್ಲದೇ ಸಾಕು ಹೋಗ್ರಿ ಎಂದು ಕ್ಯಾಮೆರಾ ಮೇನ್ ಗಳಿಗೆ ವಾಗ್ಮೋರೆ ಆವಾಜ್ ಹಾಕಿದ್ದಾನೆ.

    ತಾಯಿ ಜಾನಕಿಬಾಯಿಯವರು ಚಿತ್ರಿಕರಣಕ್ಕೆ ಅಡ್ಡಿ ಪಡೆಸಿದ್ದಲ್ಲದೇ, ಕಲ್ಲು ತೆಗೆದುಕೊಂಡು ಕ್ಯಾಮೆರಾಗೆ ಹೊಡೆಯೋಕೆ ಮುಂದಾಗಿದ್ದರು. ವಿನಾಕಾರಣ ಮಗನ ವಿಡಿಯೋ ಮಾಡಬೇಡಿ, ಅವನಿಗೆ ಟೆನ್ಷನ್ ಕೊಡಬೇಡಿ ಎಂದು ಮನವಿ ಮಾಡಿಕೊಂಡರು.

  • ಸಿನಿ ಅಂಗಳಕ್ಕೆ ಮೂರು ಚಿತ್ರಗಳ ಎಂಟ್ರಿ-ತೆರೆ ಕಾಣ್ತಿರೋ ಸಿನಿಮಾಗಳ ಸ್ಪೆಷಾಲಿಟಿ ಏನು?

    ಸಿನಿ ಅಂಗಳಕ್ಕೆ ಮೂರು ಚಿತ್ರಗಳ ಎಂಟ್ರಿ-ತೆರೆ ಕಾಣ್ತಿರೋ ಸಿನಿಮಾಗಳ ಸ್ಪೆಷಾಲಿಟಿ ಏನು?

    ಬೆಂಗಳೂರು: ಶುಕ್ರವಾರ ಅಂದರೆ ಅದು ಸಿನಿ ಅಭಿಮಾನಿಗಳಿಗೆ ಮತ್ತು ಬಣ್ಣದ ಲೋಕದ ಮಂದಿಗೆ ಸಖತ್ ಸ್ಪೆಷಲ್ ದಿನ. ಜನ ಹೊಸ ಸಿನಿಮಾ ನೋಡೋ ಖುಷಿಯಲ್ಲಿದ್ರೆ, ಇನ್ನು ಸಿನಿಮಾ ಮಾಡಿದವರು ರೆಸ್ಪಾನ್ಸ್ ಹೇಗಿರುತ್ತೆ ಅಂತ ಕಾಯೋ ದಿನ. ಈ ಶುಭ ಶುಕ್ರವಾರ ಹೆಬ್ಬೆಟ್ಟು ರಾಮಕ್ಕ, ಧ್ವಜ ಚಿತ್ರಗಳ ಜೊತೆ ಕಾನೂರಾಯಣ ತೆರೆಕಾಣ್ತಿವೆ. ಈ 3 ಸಿನಿಮಾಗಳ ವಿವರ ಮಾಹಿತಿ ಇಲ್ಲಿದೆ.

    ಹೆಬ್ಬೆಟ್ ರಾಮಕ್ಕ: ಈಗಾಗಲೇ ರಾಷ್ಟ್ರಪ್ರಶಸ್ತಿ ಪಡೆದು ಸೈ ಅನ್ನಿಸಿಕೊಂಡಿರೋ ಹೆಬ್ಬೆಟ್ಟು ರಾಮಕ್ಕ ಚಿತ್ರಮಂದಿರಕ್ಕೆ ಎಂಟ್ರಿ ಕೊಡೋಕೆ ಸಕಲ ಸಿದ್ಧತೆಗಳನ್ನು ಪೂರೈಸಿಕೊಂಡಿದೆ. ಚಿತ್ರಕ್ಕೆ ಎನ್. ಆರ್ ನಂಜುಂಡೇಗೌಡ್ರು ಆ್ಯಕ್ಷನ್ ಕಟ್ ಹೇಳಿದ್ದು ತಾರಾ, ದೇವರಾಜ್ ಜೊತೆಯಾಗಿ ಸ್ಕ್ರೀನ್‍ಶೇರ್ ಮಾಡಿದ್ದಾರೆ. ಹಳ್ಳಿಯ ಮುಗ್ಧ ಹೆಂಗಸು ರಾಜಕೀಯಕ್ಕೆ ಬಂದ್ರೆ ಏನಾಗುತ್ತೆ..? ಸದ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಲಿದೆ ಹೆಬ್ಬೆಟ್ ರಾಮಕ್ಕ.

    ಧ್ವಜ: ಹೆಬ್ಬೆಟ್ಟು ರಾಮಕ್ಕನ ಜೊತೆ ಧ್ವಜ ಹಿಡಿದು ಪ್ರಿಯಾಮಣಿ ಬರ್ತಿದ್ದಾರೆ. ಪ್ರಿಯಾಮಣಿಗೆ ರವಿ ಅವರು ನಾಯಕನಾಗಿ ಸಾಥ್ ಕೊಟ್ಟಿದ್ದು, ಅಶೋಕ್ ಕಶ್ಯಪ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ. ಧ್ವಜ ಕೂಡ ರಾಜಕೀಯ ಹಿನ್ನೆಲೆಯ ಸಿನಿಮಾ ಆಗಿದ್ದು, ಮಂಜುಮಾಂಡವ್ಯ ಸಂಭಾಷಣೆ ಬರೆದಿದ್ದಾರೆ. ತಬಲನಾಣಿ, ಟಿ.ಎನ್ ಸೀತಾರಾಮ್, ವೀಣಾಸುಂದರ್ ಸೇರಿದಂತೆ ಹಲವರು ಈ ಚಿತ್ರಕ್ಕೆ ಬಣ್ಣಹಚ್ಚಿದ್ದಾರೆ.

    ಕಾನೂರಾಯಣ: 20 ಲಕ್ಷ ಹೆಣ್ಣುಮಕ್ಕಳು ಒಟ್ಟಾಗಿ ಸೇರಿ ನಿರ್ಮಾಣ ಮಾಡಿರೋ ಟಿ.ಎಸ್.ನಾಗಾಭರಣ ನಿರ್ದೇಶನದ ಕಾನೂರಾಯಣ ಕೂಡ ಈ ಶುಕ್ರವಾರ ರಿಲೀಸ್ ಆಗ್ತಿದೆ. ಸೋನುಗೌಡ, ಅಶೋಕ್, ದೊಡ್ಡಣ್ಣ, ಕರಿಸುಬ್ಬು, ಸುಂದರ್ ರಾಜ್, ಗಿರಿಜಾ ಲೋಕೇಶ್ ಸೇರಿದಂತೆ ಹಲವು ಕಲಾವಿದ್ರು ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. 120ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದ್ದು, ಮಹಿಳಾ ಸಬಲೀಕರಣದ ಸತ್ವವನ್ನ ಹೇಳಲು ಚಿತ್ರತಂಡ ಹೊರಟಿದೆ.

    ಮೂರು ಸಿನಿಮಾಗಳು ತಮ್ಮದೇ ಆದ ಶೈಲಿಯಲ್ಲಿ ಸಿನಿರಸಿಕರಿಗೆ ಮನರಂಜನೆಯ ಜೊತೆ ಒಂದೊಳ್ಳೆ ಮೆಸೇಜ್ ಕೊಡಲು ಸಜ್ಜಾಗಿವೆ. ಕುಟುಂಬ ಸಮೇತ ಕುಳಿತು ನೋಡಬಹುದಾದ ಸಿನಿಮಾಗಳು ಆಗಿರೋದ್ರಿಂದ ನೀವು ಫ್ಯಾಮಿಲಿ ಜೊತೆ ಚಿತ್ರಮಂದಿರಕ್ಕೆ ಹೋಗೋಕೆ ಪ್ರಾಬ್ಲಮ್ ಇಲ್ಲಾ.

    https://youtu.be/8cDNy_ATxOA

  • ಕುಂದಾನಗರಿಯಲ್ಲಿ ದೇಶದ ಅತಿ ಎತ್ತರದ ರಾಷ್ಟ್ರಧ್ವಜ ಸ್ತಂಭ ಲೋಕಾರ್ಪಣೆ

    ಕುಂದಾನಗರಿಯಲ್ಲಿ ದೇಶದ ಅತಿ ಎತ್ತರದ ರಾಷ್ಟ್ರಧ್ವಜ ಸ್ತಂಭ ಲೋಕಾರ್ಪಣೆ

    ಬೆಳಗಾವಿ: ಕುಂದಾ ನಗರಿ ಬೆಳಗಾವಿಯಲ್ಲಿ ಇದೀಗ ದೇಶದಲ್ಲಿಯೇ ಅತೀ ಎತ್ತರದ ಧ್ವಜ ಹಾರುವ ಮೂಲಕ ಎಲ್ಲರ ಗಮನ ಸೆಳೆದಿದೆ.

    ಬೆಳಗಾವಿಯ ಕೋಟೆ ಕೆರೆ ಆವರಣದಲ್ಲಿ ಇಂದು ಎತ್ತರದ ರಾಷ್ಟ್ರಧ್ವಜವನ್ನು ಲೋಕಾರ್ಪಣೆ ಮಾಡಲಾಯಿತು. ಈ ವೇಳೆ ಸಚಿವ ರಮೇಶ್ ಜಾರಕಿಹೊಳಿ, ಶಾಸಕ ಫಿರೋಜ್ ಸೇಠ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ದೇಶಾಭಿಮಾನ, ರಾಷ್ಟ್ರ ಧ್ವಜದ ಬಗ್ಗೆ ಗೌರವ ಹೆಚ್ಚಿಸಲು 1.65 ಕೋಟಿ ವೆಚ್ಚದಲ್ಲಿ ಬೃಹತ್ ರಾಷ್ಟ್ರಧ್ವಜ ನಿರ್ಮಿಸಲಾಗಿದೆ. ರಾಜಸ್ತಾನದ ವಾಘಾ ಬಾರ್ಡರ್ ನಲ್ಲಿ 355 ಅಡಿ ಎತ್ತರದ ರಾಷ್ಟ್ರಧ್ವಜ ಸ್ತಂಭವಿದ್ದು, ಇದೀಗ ಬೆಳಗಾವಿಯಲ್ಲಿ 360 ಅಡಿ ಎತ್ತರ ಸ್ತಂಭವನ್ನು ನಿರ್ಮಿಸಲಾಗಿದೆ.

    ಇನ್ನುಮುಂದೆ ದಿನದ 24 ಗಂಟೆಯು ಈ ರಾಷ್ಟ್ರಧ್ವಜ ಆಕಾಶದಲ್ಲಿ ಹಾರಾಡಲಿದೆ. ರಾತ್ರಿಯ ವೇಳೆಯಲ್ಲಿಯೂ ಸಾರ್ವಜನಿಕರ ವೀಕ್ಷಣೆಗಾಗಿ ಫೋಕಸ್ ಲೈಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮುಖ್ಯಮಂತ್ರಿಯವರ 100ಕೋಟಿ ರೂ. ವಿಶೇಷ ಅನುದಾನದಲ್ಲಿ ಈ ಧ್ವಜಸ್ತಂಭ ನಿರ್ಮಾಣವಾಗಿದ್ದು, ಬೇಸ್ ಪ್ಲೇಟ್ ನಿಂದ 110 ಮೀ ಎತ್ತರವನ್ನು ಸ್ತಂಭ ಹೊಂದಿದೆ. ಪುಣೆ ಮೂಲದ ಬಜಾಜ್ ಸಂಸ್ಥೆ ರಾಷ್ಟ್ರಧ್ವಜ ನಿರ್ಮಾಣ ಹಾಗೂ ರಾಷ್ಟ್ರಧ್ವಜ ಸ್ತಂಭ ನಿರ್ಮಾಣದ ಗುತ್ತಿಗೆ ಪಡೆದು ಪೂರ್ಣಗೊಳಿಸಿದೆ. ಒಟ್ಟಿನಲ್ಲಿ ಈ ರಾಷ್ಟ್ರಧ್ವಜ ಇದೀಗ ಬೆಳಗಾವಿಯ ಹೆಮ್ಮೆಯಾಗಿ ರೂಪಗೊಂಡಿದೆ ಅಂತ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

  • ಯಾರನ್ನು ಕೇಳಿ ಧ್ವಜ ವಿನ್ಯಾಸಕ್ಕೆ ಮುಂದಾಗಿದ್ದೀರಿ: ರಾಜ್ಯ ಸರ್ಕಾರದ ವಿರುದ್ಧ ವಾಟಾಳ್ ಗರಂ

    ಯಾರನ್ನು ಕೇಳಿ ಧ್ವಜ ವಿನ್ಯಾಸಕ್ಕೆ ಮುಂದಾಗಿದ್ದೀರಿ: ರಾಜ್ಯ ಸರ್ಕಾರದ ವಿರುದ್ಧ ವಾಟಾಳ್ ಗರಂ

    ಬೆಂಗಳೂರು: ಒಂದು ಭಾವುಟ ಇರುವಾಗ, ಪಾಟೀಲ್ ಪುಟ್ಟಪ್ಪ ಹೇಳಿದ್ದಾರೆ ಎನ್ನುವ ಕಾರಣಕ್ಕೆ ಧ್ವಜ ವಿನ್ಯಾಸಕ್ಕೆ ಯಾರನ್ನು ಕೇಳಿ ಮುಂದಾಗಿದ್ದೀರಿ ಎಂದು ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    ಸುದ್ದಿಗೋಷ್ಠಿಯನ್ನು ಆಯೋಜಿಸಿ ಮಾತನಾಡಿದ ಅವರು, ನಾನು ರಾಮಮೂರ್ತಿ ಸೇರಿ ಬಾವುಟ ಮೊದಲು ಹಾರಿಸಿದ್ದೇವೆ. ಹಳದಿ, ಕೆಂಪು ಬಣ್ಣದ ಧ್ವಜಕ್ಕೆ ನಾನು ಮತ್ತು ರಾಮಮೂರ್ತಿ ಕಾರಣ. ನಾನು ಹೋರಾಟಗಾರನಾಗಿದ್ದು, ನನ್ನ ಒಂದು ಮಾತನ್ನು ಕೇಳಿಲ್ಲ ಎಂದು ಪ್ರಶ್ನಿಸಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಮೊದಲು ಯಾವ ಬಾವುಟ ವಿನ್ಯಾಸ ಮಾಡೋದಕ್ಕೆ ಹೊರಟಿದ್ದೀರಿ?. ಅದು ಯಾವ ಬಣ್ಣ, ಸಮಿತಿಯ ಅಜೆಂಡಾ ಏನು ಎನ್ನುವುದನ್ನು ಮೊದಲು ಬಹಿರಂಗಪಡಿಸಿ. ಸಾಹಿತಿಗಳು ಯಾರೂ ಬೇಕಾಗಿಲ್ಲ. ಈ ಇತಿಹಾಸ ಯಾವ ಸಾಹಿತಿಗಳಿಗೂ ಗೊತ್ತಿಲ್ಲ, ಯಾವ ಕಾರಣಕ್ಕೂ ಬಾವುಟದ ಒಂದು ಗೆರೆಯನ್ನು ಬದಲಾಯಿಸಲು ಬಿಡಲ್ಲ. ಮೊದಲು ನೇಮಿಸಿದ ಸಮಿತಿಯನ್ನು ರದ್ದು ಮಾಡಿ ಎಂದು ಅವರು ಹೇಳಿದರು.

    ರಾಷ್ಟ್ರ ಧ್ವಜಕ್ಕೆ ವಿರೋಧವಿಲ್ಲ. ಆದರೆ ಇದು ಕನ್ನಡಿಗರ ಧ್ವಜ, ಜುಲೈ 29 ರಂದು ಕನ್ನಡ ಭಾವುಟ ಸಮ್ಮೇಳನ ಹಾಗೂ ರಾಜ್ಯಾದ್ಯಂತ ಕನ್ನಡ ಧ್ವಜದ ಬೃಹತ್ ಮರವಣಿಗೆ ಮಾಡಲಿದ್ದೇವೆ. ಬಾವುಟದ ವಿಚಾರದಲ್ಲಿ ಕನ್ನಡಿಗರನ್ನು ತಡೆಯಬೇಡಿ ಎಂದು ಅವರು ರಾಜ್ಯ ಸರ್ಕಾರ ಹಾಗೂ ವಿರೋಧ ಪಕ್ಷದವರಲ್ಲಿ ಕೇಳಿಕೊಂಡರು.

    ಬಿಜೆಪಿಯವರಿಗೆ ಧ್ವಜದ ಬಗ್ಗೆ ಮಾತಾನಾಡಲು ಯಾವುದೇ ನೈತಿಕತೆ ಇಲ್ಲ. ಬಿಜೆಪಿಯವರಿಗೆ ತಾಕತ್ತು ಇದ್ದರೆ ಮಹದಾಯಿ ವಿಚಾರ ನೋಡಿಕೊಳ್ಳಲಿ. ಧ್ವಜದ ವಿಚಾರ ಮಾತನಾಡುವುದು ಬೇಡ ಎಂದು ವಾಟಾಳ್ ವಾಗ್ದಾಳಿ ನಡೆಸಿದರು.

    ಇದನ್ನೂ ಓದಿ: ಪ್ರತ್ಯೇಕ ನಾಡ ಧ್ವಜ ಚರ್ಚೆ: ಕಾಂಗ್ರೆಸ್, ಬಿಜೆಪಿ ಹೇಳಿದ್ದೇನು? ಡಿವಿಎಸ್ ಹೊರಡಿಸಿದ ಸುತ್ತೋಲೆ ಏನಾಯ್ತು?