Tag: ಧ್ವಜಾರೋಹಣ

  • ವಿಡಿಯೋ: ಸ್ವಾತಂತ್ರ್ಯ ದಿನಾಚರಣೆಯಂದು ಕೋತಿಗಳಿಂದ ಧ್ವಜಾರೋಹಣ!

    ವಿಡಿಯೋ: ಸ್ವಾತಂತ್ರ್ಯ ದಿನಾಚರಣೆಯಂದು ಕೋತಿಗಳಿಂದ ಧ್ವಜಾರೋಹಣ!

    ಚಂಡೀಗಢ್: ಮಂಗಳವಾರ ದೇಶದಾದ್ಯಂತ 71 ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿಯೇ ಆಚರಿಸಲಾಗಿತ್ತು. ಅಂತೆಯೇ ಹರ್ಯಾಣದ ಶಾಲೆಯೊಂದರಲ್ಲಿ ಧ್ವಜಾರೋಹಣಕ್ಕೆ ಸಿದ್ಧಗೊಳಿಸಿದ್ದ ಬಾವುಟವನ್ನು ಕೋತಿಗಳು ಹಾರಿಸುವ ಮೂಲಕ ಅಚ್ಚರಿ ಮೂಡಿಸಿವೆ.

    ಹೌದು. ಹರ್ಯಾಣದ ಅಂಬಲ ಎಂಬಲ್ಲಿರೋ ಶಾಲೆಯಲ್ಲಿ ರಾಷ್ಟ್ರಧ್ವಜವನ್ನು ಕಟ್ಟು ಕಂಬದ ತುದಿಗೇರಿಸಿ ಧ್ವಜಾರೋಹಣಕ್ಕೆ ಸಿದ್ಧತೆ ನಡೆಸಲಾಗಿತ್ತು. ಅಂತೆಯೇ ವಿದ್ಯಾರ್ಥಿಗಳು ಕಾರ್ಯಕ್ರಮದಲಲಿ ಭಾಗವಹಿಸಿ, ಇನ್ನೇನು ಧ್ವಜಾರೋಹಣ ಮಾಡಬೇಕೆನ್ನುವಷ್ಟರಲ್ಲಿ ಶಾಲೆಯ ಕಟ್ಟಡದಲ್ಲಿ ಕುಳಿತಿದ್ದ ಕೋತಿಗಳು ಹಾರಿ ಬಂದು ರಾಷ್ಟ್ರಧ್ವಜಕ್ಕೆ ಕಟ್ಟಿದ ಹಗ್ಗವನ್ನು ಎಳೆಯುವ ಮೂಲಕ ಅವುಗಳೇ ಧ್ವಜಾರೋಹಣ ನೆರವೇರಿಸಿವೆ. ಈ ದೃಶ್ಯ ನರೆದಿದ್ದವರಿಗೆ ಅಚ್ಚರಿ ಮೂಡಿಸಿವೆ. ಕೂಡಲೇ ಧ್ವಜಾರೋಹಣಕ್ಕೆ ಸಾಕ್ಷಿಯಾದವರು ಹರ್ಷೋದ್ಗಾರದಿಂದ ಚಪ್ಪಾಳೆ ಹೊಡೆದಿದ್ದಾರೆ.

    ಈ ದೃಶ್ಯವನ್ನು ತಮ್ಮ ಮೊಬೈಲ್ ಮೂಲಕ ವಿಡಿಯೋ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣಕ್ಕೆ ಹರಿಯ ಬಿಟ್ಟಿದ್ದಾರೆ.

    https://www.youtube.com/watch?v=1HMCb6wx_R4

  • ಬೆಳಗಾವಿ: ಧ್ವಜಾರೋಹಣ ವೇಳೆ ಸಂಸದ ಪ್ರಕಾಶ್ ಹುಕ್ಕೇರಿ, ಎಂಎಲ್‍ಸಿ ಮಧ್ಯೆ ಮಾತಿನ ಚಕಮಕಿ

    ಬೆಳಗಾವಿ: ಧ್ವಜಾರೋಹಣ ವೇಳೆ ಸಂಸದ ಪ್ರಕಾಶ್ ಹುಕ್ಕೇರಿ, ಎಂಎಲ್‍ಸಿ ಮಧ್ಯೆ ಮಾತಿನ ಚಕಮಕಿ

    ಬೆಳಗಾವಿ: ಇಂದು ದೇಶದ್ಯಾಂತ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಜಿಲ್ಲೆಯ ಚಿಕ್ಕೋಡಿಯಲ್ಲಿ ಸಾರ್ವಜನಿಕ ಧ್ವಜಾರೋಹಣದ ವೇಳೆ ಸಂಸದ ಪ್ರಕಾಶ್ ಹುಕ್ಕೇರಿ ಮತ್ತು ಎಂಎಲ್‍ಸಿ ಮಧ್ಯೆ ಮಾತಿನ ಚಕಮಕಿ ನಡೆದಿದೆ.

    ಚಿಕ್ಕೋಡಿ ಪಟ್ಟಣದ ಆರ್‍ಡಿ ಕಾಲೆಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಕಾರ್ಯಕ್ರಮಕ್ಕೆ ಸಂಸದ ಪ್ರಕಾಶ್ ಹುಕ್ಕೇರಿ ತಡವಾಗಿ ಆಗಮಿಸಿದ್ದರು. ಇದರಿಂದ ಕೆಂಡಾಮಂಡಲರಾದ ಎಂಎಲ್‍ಸಿ ಮಹಾಂತೇಶ ಕವಟಗಿಮಠ ಅವರು ತಹಶಿಲ್ದಾರ್ ಚಿದಂಬರ್ ಕುಲಕರ್ಣಿ ಮತ್ತು ಉಪವಿಭಾಗಾಧಿಕಾರಿ ಗೀತಾ ಕೌಲಗಿ ಅವರನ್ನು ತರಾಟೆಗೆ ತೆಗೆದುಕೊಂಡರು.

    ಅಲ್ಲದೇ ಇದೇ ಸಂದರ್ಭದಲ್ಲಿ ಆಗಮಿಸಿದ ಸಂಸದ ಪ್ರಕಾಶ ಹುಕ್ಕೆರಿ ಜೊತೆಯೂ ಮಹಾಂತೇಶ ಕವಟಗಿಮಠ ಮಾತಿನ ಚಕಮಕಿ ತಾರಕಕ್ಕೇರಿತು. ಸರ್ಕಾರಿ ಕಾರ್ಯಕ್ರಮವನ್ನ ಖಾಸಗಿಯಾಗಿ ಸಂಸದರು ಬಳಕೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆಂದು ಮಹಾಂತೇಶ ಕವಟಗಿಮಠ ಆರೋಪಿಸಿದ್ರು.