Tag: ಧ್ವಂಸ

  • ನ್ಯೂಯಾರ್ಕ್‌ನಲ್ಲಿ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನ ಧ್ವಂಸ

    ನ್ಯೂಯಾರ್ಕ್‌ನಲ್ಲಿ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನ ಧ್ವಂಸ

    ನ್ಯೂಯಾರ್ಕ್: ಮೆಲ್ವಿಲ್ಲೆಯಲ್ಲಿರುವ (Melville) ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನವನ್ನು (BAPS Swaminayaran Temple) ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.

    ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ (Indian Consulate General) ಅಮೆರಿಕಾದ ಕಾನೂನು ಅಧಿಕಾರಗಳ ಮುಂದೆ ವಿಷಯವನ್ನು ಪ್ರಸ್ತಾಪಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದೆ.ಇದನ್ನೂ ಓದಿ: ಉಡುಪಿ: ಇನ್ನೊಬ್ಬರ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೇ ತೆತ್ತ ಶಿಕ್ಷಕಿ ಅರ್ಚನಾ ಕಾಮತ್

    ಮೆಲ್ವಿಲ್ಲೆಯಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನ ಧ್ವಂಸಗೊಳಿಸಿರುವ ಸಂಬಂಧ ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಖಂಡಿಸಿದ್ದು, ಇದು ಸ್ವೀಕಾರವಲ್ಲ ಹಾಗೂ ಅಮೆರಿಕಾದ ಕಾನೂನು ಅಧಿಕಾರಿಗಳು ಹೇಯ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

    ಅಮೆರಿಕಾದ ಹಿಂದೂ ಸಂಸ್ಥೆಯು (Hindu American Foudation) ಬಿಎಪಿಎಸ್, ಹಿಂದೂ ದೇವಾಲಯದ ಧ್ವಂಸಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಅಮೆರಿಕಾದ ನ್ಯಾಯ ಇಲಾಖೆಗೆ ತಿಳಿಸಿದೆ.

    ಕ್ಯಾಲಿಫೋನಿರ್ಯಾ ಹಾಗೂ ಕೆನಡಾದ ದೇವಸ್ಥಾನಗಳ ಮೇಲೆ ಆದ ದಾಳಿ ಬಳಿಕ, ಅದೇ ರೀತಿಯಲ್ಲಿ ನ್ಯೂಯಾರ್ಕ್ ದೇವಸ್ಥಾನದ ಧ್ವಂಸ ನಡೆದಿದೆ ಎಂದು ಅಮೆರಿಕಾದ ಹಿಂದೂ ಸಂಸ್ಥೆಯು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದೆ.ಇದನ್ನೂ ಓದಿ: ಲೇಡಿ ಸೂಪರ್ ಸ್ಟಾರ್‌ಗೆ ತಮಿಳು ಡೈರೆಕ್ಟರ್ ಸುಂದರ್ ಸಿ. ಆ್ಯಕ್ಷನ್ ಕಟ್

  • ಪರೀಕ್ಷೆಯಲ್ಲಿ ಹೆಚ್ಚುವರಿ ಸಮಯ ನಿರಾಕರಿಸಿದ್ದಕ್ಕೆ ಶಾಲಾ ಕಟ್ಟಡವನ್ನೇ ಧ್ವಂಸಗೊಳಿಸಿದ ವಿದ್ಯಾರ್ಥಿಗಳು

    ಪರೀಕ್ಷೆಯಲ್ಲಿ ಹೆಚ್ಚುವರಿ ಸಮಯ ನಿರಾಕರಿಸಿದ್ದಕ್ಕೆ ಶಾಲಾ ಕಟ್ಟಡವನ್ನೇ ಧ್ವಂಸಗೊಳಿಸಿದ ವಿದ್ಯಾರ್ಥಿಗಳು

    ಇಂಫಾಲ: ಬೋರ್ಡ್ ಪರೀಕ್ಷೆಗೆ (Exam) ಹಾಜರಾಗಿದ್ದ ವಿದ್ಯಾರ್ಥಿಗಳು (Students) ಪರೀಕ್ಷೆ ಬರೆಯುತ್ತಿದ್ದ ವೇಳೆ ಹೆಚ್ಚುವರಿ ಸಮಯ ಕೇಳಿದ್ದು, ಇದನ್ನು ನಿರಾಕರಿಸಿದ್ದಕ್ಕೆ ಶಾಲೆಯ (School) ಕಟ್ಟಡವನ್ನೇ ಧ್ವಂಸಗೊಳಿಸಿರುವ (Vandalise) ಘಟನೆ ಮಣಿಪುರದ (Manipur) ತೌಬಲ್ (Thoubal) ಜಿಲ್ಲೆಯಲ್ಲಿ ನಡೆದಿದೆ.

    ಘಟನೆ ಯೈರಿಪೋಕ್‌ನ ಎಸಿಎಂಇ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದಿದೆ. ವರದಿಗಳ ಪ್ರಕಾರ, ಕೌನ್ಸಿಲ್ ಆಫ್ ಹೈಯರ್ ಸೆಕೆಂಡರಿ ಎಜುಕೇಶನ್ ಮಣಿಪುರ ನಡೆಸುತ್ತಿದ್ದ ಪರೀಕ್ಷೆ ವೇಳೆ 5 ನಿಮಿಷ ಬಾಕಿ ಉಳಿದಿದ್ದಾಗ ವಿದ್ಯಾರ್ಥಿಗಳು ಹೆಚ್ಚುವರಿ ಸಮಯ ನೀಡುವಂತೆ ಒತ್ತಾಯಿಸಿದ್ದಾರೆ. ಶಾಲೆಯ ಗಂಟೆ ಬಾರಿಸುತ್ತಿದ್ದಂತೆ ವಿದ್ಯಾರ್ಥಿಗಳು ಗಲಾಟೆ ಮಾಡಲು ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ಮಿತ್ರನ ತಲೆಯನ್ನೇ ಕಡಿದು, ಹೃದಯ ಕಿತ್ತು ಕೊನೆಗೆ ಪೊಲೀಸರಿಗೆ ಶರಣಾದ

    EXAM

    ಗಲಾಟೆ ಹಿಂಸಾಚಾರಕ್ಕೆ ತಿರುಗಿ, ವಿದ್ಯಾರ್ಥಿಗಳು ಕಲ್ಲುತೂರಾಟ ನಡೆಸಿದ್ದಾರೆ. ಕಂಪ್ಯೂಟರ್, ಪೀಠೋಪಕರಣಗಳು ಸೇರಿದಂತೆ ಶಾಲೆ ಆಸ್ತಿಯನ್ನು ಧ್ವಂಸಗೊಳಿಸಿದ್ದಾರೆ. ಈ ವೇಳೆ ಶಾಲೆಯಲ್ಲಿ ನಡೆಯುತ್ತಿರುವ ಅವ್ಯವಸ್ಥೆಯನ್ನು ಕಂಡು ಶಿಕ್ಷಕಿ ಸೇರಿದಂತೆ 15 ವಿದ್ಯಾರ್ಥಿಗಳು ಮೂರ್ಛೆ ಹೋಗಿದ್ದಾರೆ. ಅವರೆಲ್ಲರನ್ನೂ ಚಿಕಿತ್ಸೆಗೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಂಸಾಚಾರದಲ್ಲಿ ತೊಡಗಿದ್ದ 8 ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: 14ರ ಬಾಲಕಿಯನ್ನು ರೇಪ್ ಮಾಡಿ ಗರ್ಭಿಣಿಯಾಗಿಸಿದ ಮಲತಂದೆ

  • ಕಿಡಿಗೇಡಿಗಳಿಂದ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಪ್ರತಿಮೆ ಧ್ವಂಸ

    ಕಿಡಿಗೇಡಿಗಳಿಂದ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಪ್ರತಿಮೆ ಧ್ವಂಸ

    ಭೋಪಾಲ್: ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿರುವ ಘಟನೆ ಮಧ್ಯಪ್ರದೇಶದ ಜಬುವಾ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲಾ ಕೇಂದ್ರದಿಂದ 60 ಕಿ.ಮೀ ದೂರದಲ್ಲಿರುವ ತಾಂಡ್ಲಾ ಪಟ್ಟಣದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಈ ಕುರಿತಂತೆ ಪ್ರತಿಕ್ರಿಯಿಸಿದ ತಾಂಡ್ಲಾ ನಗರ ಪರಿಷತ್ತಿನ ಮುಖ್ಯ ಮುನ್ಸಿಪಲ್ ಅಧಿಕಾರಿ ಭರತ್ ಸಿಂಗ್ ಟ್ಯಾಂಕ್ ಅವರು, ಪ್ರಿಮೆಯ ಸಣ್ಣ ಭಾಗವನ್ನು ಹಾನಿ ಮಾಡಲಾಗಿದೆ. ಚಂದ್ರಶೇಖರ್ ಆಜಾದ್ ಅವರು ಹಿಡಿದುಕೊಂಡಿದ್ದ ಪಿಸ್ತೂಲಿನ ಭಾಗವನ್ನು ಧ್ವಂಸಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

    ಪೊಲೀಸರು ರಾತ್ರಿ ಹೊತ್ತು ಗಸ್ತು ತಿರುಗುತ್ತಿದ್ದ ವೇಳೆ ಪ್ರತಿಮೆಗೆ ಹಾನಿಯಾಗಿರುವುದನ್ನು ಗಮನಿಸಿದ್ದಾರೆ. ಇದೀಗ ಸಿಸಿಟಿವಿ ದೃಶ್ಯಗಳ ಮೂಲಕ ದುಷ್ಕರ್ಮಿಗಳನ್ನು ಗುರುತಿಸಲಾಗುತ್ತದೆ ಎಂದು ಸ್ಥಳೀಯ ಪೊಲೀಸ್ ಠಾಣೆ ಪ್ರಭಾರಿ ಕೌಶಲ್ಯ ಚೌಹಾಣ್ ಹೇಳಿದ್ದಾರೆ. ಇದನ್ನೂ ಓದಿ: ನೋ ಪಾರ್ಕಿಂಗ್ ಹಾವಳಿ ತಪ್ಪಿಸಲು ವ್ಹೀಲಿಂಗ್ ಕ್ಲಾಂಪ್ ಮೊರೆ- ಸ್ಥಳದಲ್ಲೇ ದಂಡ ವಸೂಲಿಗೆ ಪ್ಲಾನ್!

    ಈ ವಿಚಾರವಾಗಿ ಸ್ಥಳೀಯ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಚಂದ್ರಶೇಖರ್ ಆಜಾದ್ ಅವರ ಪ್ರತಿಮೆಯನ್ನು 2017ರಲ್ಲಿ ಅನಾವರಣಗೊಳಿಸಲಾಗಿದೆ. ಇದನ್ನೂ ಓದಿ: ರಾಜ್ಯಾದ್ಯಂತ ವರುಣನ ಅಬ್ಬರಕ್ಕೆ 11 ಜೀವಗಳು ಬಲಿ – ಕರಾವಳಿ, ಮಲೆನಾಡಿನಲ್ಲಿ ರೆಡ್ ಅಲರ್ಟ್

    Live Tv
    [brid partner=56869869 player=32851 video=960834 autoplay=true]

  • ಮಾಲೇಕಲ್ ತಿರುಪತಿಯಲ್ಲಿ ದುಷ್ಕರ್ಮಿಗಳಿಂದ ವಿಗ್ರಹ ಧ್ವಂಸ

    ಮಾಲೇಕಲ್ ತಿರುಪತಿಯಲ್ಲಿ ದುಷ್ಕರ್ಮಿಗಳಿಂದ ವಿಗ್ರಹ ಧ್ವಂಸ

    ಹಾಸನ: ಅರಸೀಕೆರೆ ಮಾಲೇಕಲ್ ತಿರುಪತಿಯಲ್ಲಿ ದುಷ್ಕರ್ಮಿಗಳು ವಿಗ್ರಹಗಳನ್ನು ಧ್ವಂಸ ಮಾಡಿದ್ದಾರೆ.

    ಹಾಸನ ಜಿಲ್ಲೆಯ ಅರಸೀಕೆರೆಯ ಮಾಲೇಕಲ್ ತಿರುಪತಿಯಲ್ಲಿ ದೇವಾಲಯದ ಕಲ್ಯಾಣಿ ಬಳಿ ವಿಗ್ರಹಗಳು ನಿರ್ಮಾಣವಾಗುತ್ತಿತ್ತು. ಈ ಮ್ಯೂಸಿಯಂ ಒಳಗಿದ್ದ 13 ವಿಗ್ರಹಗಳನ್ನು ಕಿಡಿಗೇಡಿಗಳನ್ನು ಧ್ವಂಸಗೊಳಿಸಿದ್ದಾರೆ. ಈ ಕೃತ್ಯವನ್ನು ಕಲ್ಯಾಣಿಯಲ್ಲಿ ಈಜಲು ಬಂದ ದುಷ್ಕರ್ಮಿಗಳಿಂದ ನಡೆದಿದೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ನಾವೆಲ್ಲಾ ಪೋಸ್ಟ್ ಮ್ಯಾನ್ ಕೆಲಸ ಮಾಡ್ತೇವೆ- ಬಿಜೆಪಿ ಕುರಿತು ನಟ ಜಗ್ಗೇಶ್ ಹೇಳಿದ್ದಿಷ್ಟು

    ವಿಗ್ರಹವನ್ನು ಯಾಕೆ ಮತ್ತು ಯಾರು ಧ್ವಂಸಗೊಳಿಸಿದರು ಎಂಬ ಕುರಿತು ಯಾವುದೇ ನಿಖರ ಮಾಹಿತಿ ತಿಳಿದುಬಂದಿಲ್ಲ. ಸೋಮವಾರ ಈ ಘಟನೆ ನಡೆದಿದ್ದು, ಈಗಾಗಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಈ ಕುರಿತು ದೇವಸ್ಥಾನ ಮುಜರಾಯಿ ಇಲಾಖೆಯೂ ಪರಿಶೀಲನೆ ನಡೆಸುತ್ತಿದೆ. ಶ್ರೀನಿವಾಸ ಕಲ್ಯಾಣಕ್ಕೆ ಸಂಬಂಧಿಸಿದಂತೆ ದಾನಿಗಳು ವಿಗ್ರಹ ಮಾಡಿಸುತ್ತಿದ್ದರು. ಇದನ್ನೂ ಓದಿ: ರಾಜಭವನದಲ್ಲಿ ಡಾ.ಅಂಬೇಡ್ಕರ್ ಪುತ್ಥಳಿ ಅನಾವರಣ – ನಾಡಿಗೆ ಸಾಮಾಜಿಕ ನ್ಯಾಯದ ಸಂದೇಶ ರವಾನಿಸಿದ ರಾಜಭವನ

  • ಹಿಂದುತ್ವದ ಹೆಸರು ಹೇಳಿಕೊಂಡು ಬಂದಿದೆ ಅಂತಲ್ಲ, ದೇಶದ ಸಂಸ್ಕೃತಿ ಉಳಿಸುವ ಸರ್ಕಾರ: ಸಚಿವ ನಾಗೇಶ್

    ಹಿಂದುತ್ವದ ಹೆಸರು ಹೇಳಿಕೊಂಡು ಬಂದಿದೆ ಅಂತಲ್ಲ, ದೇಶದ ಸಂಸ್ಕೃತಿ ಉಳಿಸುವ ಸರ್ಕಾರ: ಸಚಿವ ನಾಗೇಶ್

    ಯಾದಗಿರಿ: ಹಿಂದುತ್ವದ ಹೆಸರು ಹೇಳಿಕೊಂಡು ಸರ್ಕಾರ ಅಧಿಕಾರಕ್ಕೆ ಬಂದಿದೆ ಅಂತಲ್ಲ, ಈ ದೇಶದ ಸಂಸ್ಕೃತಿ ಉಳಿಸುವ ಸರ್ಕಾರ ನಮ್ಮದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

    ನಗರದ ಸ್ವಪ್ನ ಕಾಲೇಜು ಮೈದಾನದಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಹಿಂದೂ ದೇವಸ್ಥಾನಗಳ ತೆರವು ವಿಚಾರವಾಗಿ ಮಾತನಾಡಿದರು. ಇದು ಸುಪ್ರೀಂ ಕೋರ್ಟ್ ನ ಆದೇಶವಾಗಿದೆ. ಮೈಸೂರುನಲ್ಲಿ ದೇವಾಲಯ ತೆರವು ಮಾಡಿದ ಘಟನೆ ನಂತರ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಧ್ಯ ಪ್ರವೇಶಿಸಿ, ತೆರವುಗೊಳಿಸಬಾರದೆಂದು ಸೂಚನೆ ಕೊಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಗೈಡ್ ಲೈನ್ಸ್ ಆಧಾರದ ಮೇಲೆ ಜಿಲ್ಲಾಧಿಕಾರಿ ದೇವಸ್ಥಾನ ತೆರವುಗೊಳಿಸಿದ್ದಾರೆ. ಮೈಸೂರು ಹೊರತು ಮತ್ತೆ ಎಲ್ಲಿಯೂ ದೇವಸ್ಥಾನ ತೆರವು ನಡೆದಿಲ್ಲ ಎಂದರು. ಇದನ್ನೂ ಓದಿ: ಮಾಸ್ಕ್ ಹಾಕದ ವಿದ್ಯಾರ್ಥಿಗಳ ಮೇಲೆ ಸಚಿವ ನಾಗೇಶ್ ಗರಂ

    ಯಾದಗಿರಿಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೂನ್ಯ ಸ್ಥಾನದಲ್ಲಿದೆ, ವೈರಲ್ ಫೀವರ್ ಮಕ್ಕಳಿಗೆ ಜಾಸ್ತಿ ಆಗಿರಬಹುದು. ಮಳೆಗಾಲದ ವಾತಾವರಣದ ಬದಲಾವಣೆಯಿಂದ ಮಕ್ಕಳಿಗೆ ಜ್ವರ ಕಾಣಿಸಿಕೊಳ್ಳುತ್ತಿದೆ. ಡೆಂಘೀ ಜ್ವರ ಹಾಗೂ ಚಿಕನ್ ಗುನ್ಯಾ ಹೊಸದೇನಲ್ಲ, ಅದಕ್ಕೆ ಚಿಕಿತ್ಸೆ ಇದೆ, ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಕೆಲಸ ಆಗಿದೆ ಎಂದರು.

  • ನಿಧಿ ಆಸೆಗೆ ಕಿಡಿಗೇಡಿಗಳಿಂದ ಪ್ರಾಚೀನ ಶಿವನ ದೇವಾಲಯ ಧ್ವಂಸ

    ನಿಧಿ ಆಸೆಗೆ ಕಿಡಿಗೇಡಿಗಳಿಂದ ಪ್ರಾಚೀನ ಶಿವನ ದೇವಾಲಯ ಧ್ವಂಸ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಹಾರ್ನೋಡ ಗ್ರಾಮದಲ್ಲಿ ನಿಧಿಯ ಆಸೆಗಾಗಿ ಪ್ರಾಚೀನ ಕಾಲದ ಶಿವನ ದೇವಾಲಯದ ಮೂರ್ತಿಗಳನ್ನು ಧ್ವಂಸ ಮಾಡಿದ ಘಟನೆ ನಡೆದಿದೆ.

    ದೇವಸ್ಥಾನವು ಪ್ರಾಚೀನ ಕಾಲದ್ದಾಗಿದ್ದು, ಸುಂದರ ಕಲ್ಲಿನ ಕೆತ್ತನೆ, ಶಿವನ ಲಿಂಗ ವಿಶೇಷವಾಗಿದೆ. ಇಡೀ ದೇವಸ್ಥಾನ ಕಲ್ಲಿನಿಂದ ನಿರ್ಮಾಣವಾಗಿದೆ. ದೇವಸ್ಥಾನ ದಟ್ಟ ಅರಣ್ಯದಲ್ಲಿ ಇರುವುದರಿಂದ ಈ ಭಾಗದಲ್ಲಿ ಸಾರ್ವಜನಿಕರ ಓಡಾಟ ಹೆಚ್ಚಿಲ್ಲ. ಇದರ ಲಾಭ ಪಡೆದ ನಿಧಿ ಕಳ್ಳರು, ಈಶ್ವರ ಲಿಂಗ ಪೀಡವನ್ನು ಕಿತ್ತು ಹಾಳು ಮಾಡಿ ತಳಭಾಗದಲ್ಲಿ ಅಗೆದಿದ್ದಾರೆ. ಈಶ್ವರ ಲಿಂಗಕ್ಕೂ ಘಾಸಿ ಮಾಡಿದ್ದು, ಲಿಂಗವೂ ಎರಡು ತುಂಡಾಗಿದೆ. ಇಲ್ಲಿನ ಕೆಲವು ಮೂರ್ತಿಗಳಿಗೂ ಹಾನಿಮಾಡಿದ್ದಾರೆ. ಇದನ್ನೂ ಓದಿ: ಕಬಿನಿ ಫಾರೆಸ್ಟ್‌ನಲ್ಲಿ  ಗಣೇಶ್, ರಾಜೂಗೌಡ ಫ್ಯಾಮಿಲಿ ಟ್ರಿಪ್

    ಘಟನೆ ನಡೆದಿರುವುದು ಇದೀಗ ಸ್ಥಳೀಯ ಜನರಿಗೆ ತಿಳಿದಿದ್ದು, ಸ್ಥಳಕ್ಕೆ ಸ್ಥಳೀಯ ಬಿಜೆಪಿ ಮುಖಂಡ ಸುಧಾಕರ್ ರೆಡ್ಡಿ ಆಗಮಿಸಿ ವೀಕ್ಷಿಸಿದ್ದಾರೆ. ಸಂಬಂಧಪಟ್ಟ ಇಲಾಖೆಗೂ ಮಾಹಿತಿ ನೀಡಿದ್ದಾರೆ. ಇಲ್ಲಿನ ದೇವಸ್ಥಾನಗಳ ಬಗ್ಗೆ ಅಧ್ಯಯನ ನೆಡೆಯಬೇಕು, ಈ ರೀತಿಯ ಪುರಾತನ ದೇವಸ್ಥಾನವನ್ನು ಪುರಾತತ್ವ ಇಲಾಖೆ ರಕ್ಷಣೆ ಮಾಡಿ, ಜನರಿಗೆ ಇತಿಹಾಸದ ಮಹತ್ವ ಅರಿಯಲು ಇಂತಹ ಪ್ರದೇಶವನ್ನು ಪ್ರವಾಸಿ ಸ್ಥಳವಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿದ್ದಾರೆ.

  • ಪಕ್ಕದ ಮನೆಯವ್ರಿಂದ್ಲೇ ಹರಿಕಥೆ ಕಲಾವಿದನ ಮನೆ ಧ್ವಂಸ

    ಪಕ್ಕದ ಮನೆಯವ್ರಿಂದ್ಲೇ ಹರಿಕಥೆ ಕಲಾವಿದನ ಮನೆ ಧ್ವಂಸ

    ಮೈಸೂರು: ಹರಿಕಥೆ ಕಲಾವಿದರೊಬ್ಬರ ಮನೆಯನ್ನು ಪಕ್ಕದ ಮನೆಯವರೇ ಧ್ವಂಸಗೊಳಿಸಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಮಲ್ಲುಪುರ ಗ್ರಾಮದಲ್ಲಿ ನಡೆದಿದೆ.

    ಹರಿಕಥೆ ಕಲಾವಿದ ಸಚಿನ್ ಮನೆಯನ್ನು ಪಕ್ಕದ ಮನೆಯ ನಿವಾಸಿ ಸುರೇಶ್ ಧ್ವಂಸಗೊಳಿಸಿದ್ದಾರೆ. ಈ ಎರಡೂ ಮನೆಯ ಸದಸ್ಯರ ಮಧ್ಯೆ ಮೋರಿ ವಿಚಾರವಾಗಿ ಜಗಳ ನಡೆದಿತ್ತು. ಈ ಹಿನ್ನೆಲೆಯಲ್ಲಿ ವೈಯಕ್ತಿಕ ದ್ವೇಷಕ್ಕೆ ಮನೆ ಧ್ವಂಸ ಮಾಡಿರುವ ಆರೋಪ ಕೇಳಿಬಂದಿದೆ.

    ದ್ವೇಷದ ಹಿನ್ನೆಲೆ ಮನೆಯ ಮೇಲ್ಛಾವಣಿ ಮೇಲೆ ಕಲ್ಲು ಎಸೆದಿದ್ದಾರೆ. ಮನೆಯ ಪೀಠೋಪಕರಣ, ಟಿವಿ, ಫ್ರಿಡ್ಜ್ ಹಾಗೂ ವಾಷಿಂಗ್ ಮಿಶಿನ್ ಸೇರಿ ಹಲವು ವಸ್ತುಗಳು ಧ್ವಂಸಗೊಳಿಸಲಾಗಿದೆ. ಸಚಿನ್ ಮನೆಯವರು ಇಲ್ಲದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

    ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಿಧಿಗಾಗಿ ಇತಿಹಾಸ ಪ್ರಸಿದ್ಧ ನವಬೃಂದಾವನ ಧ್ವಂಸ

    ನಿಧಿಗಾಗಿ ಇತಿಹಾಸ ಪ್ರಸಿದ್ಧ ನವಬೃಂದಾವನ ಧ್ವಂಸ

    ಕೊಪ್ಪಳ: ಕೆಲ ಕಿಡಿಗೇಡಿಗಳು ನಿಧಿಗಾಗಿ ಐತಿಹಾಸಿಕ ಪ್ರಸಿದ್ಧ ನವಬೃಂದಾವನವನ್ನು ಧ್ವಂಸಗೊಳಿಸಿದ ಘಟನೆ ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿ ನಡೆದಿದೆ.

    ಆನೆಗುಂದಿ ಸಮೀಪವಿರುವ ನವಬೃಂದಾವನ ಗಡ್ಡೆ ತುಂಗಭದ್ರಾ ನದಿಯ ಮಧ್ಯದಲ್ಲಿದೆ. ಇಲ್ಲಿ ವ್ಯಾಸರಾಜರು ಸೇರಿದಂತೆ ಒಟ್ಟು ಒಂಬತ್ತು ಯತಿಗಳ ಸಮಾಧಿಗಳು ಇವೆ. ದುಷ್ಕರ್ಮಿಗಳು ನಿಧಿಯ ಆಸೆಗಾಗಿ ಬುಧವಾರ ರಾತ್ರಿ ನವಬೃಂದಾವನವನ್ನು ಅಗೆದು ಹಾಕಿದ್ದಾರೆ. ಸಮಾಧಿಯ ಕೆಳಭಾಗವನ್ನು ಸಹ ಸಂಪೂರ್ಣ ಅಗೆದಿದ್ದರಿಂದ ನಿಧಿಗಾಗಿ ಹೀಗೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಗಾವತಿಯ ತಹಶೀಲ್ದಾರ್ ವೀರೇಶ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

    ನವಬೃಂದಾವನದಲ್ಲಿ ಪ್ರತಿವರ್ಷ ರಾಘವೇಂದ್ರ ಮಠದವರಿಂದ ಮತ್ತು ಉತ್ತಾರಾಧಿ ಮಠದಿಂದ ಅದ್ಧೂರಿಯಾಗಿ ಆರಾಧನೆ ಕಾರ್ಯಕ್ರಮ ಜರಗುತ್ತದೆ. ನವಬೃಂದಾವನ ಮಾಲೀಕತ್ವಕ್ಕಾಗಿ ಈ ಎರಡು ಮಠದವರು ಸುಪ್ರೀಂಕೊರ್ಟ್ ಮೆಟ್ಟಿಲೇರಿದ್ದು, ಯಾರ ಪರವೂ ತೀರ್ಪು ಬಂದಿಲ್ಲ.

  • ಹಂಪಿಯಲ್ಲಿ ಸ್ಮಾರಕ ಧ್ವಂಸ – ವಿಜಯನಗರ, ಮೈಸೂರು ಮಹಾರಾಜರಿಂದ ಪ್ರತಿಭಟನೆ

    ಹಂಪಿಯಲ್ಲಿ ಸ್ಮಾರಕ ಧ್ವಂಸ – ವಿಜಯನಗರ, ಮೈಸೂರು ಮಹಾರಾಜರಿಂದ ಪ್ರತಿಭಟನೆ

    ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿಯ ಸ್ಮಾರಕಗಳನ್ನು ಧ್ವಂಸಗೊಳಿಸಿರುವುದನ್ನು ಖಂಡಿಸಿ ಹಂಪಿಯಲ್ಲಿಂದು ವಿಜಯನಗರ ಹಾಗೂ ಮೈಸೂರು ಮಹಾರಾಜರು ಪ್ರತಿಭಟನೆ ನಡೆಸಿದ್ದಾರೆ.

    ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ ಮೈಸೂರಿನ ಯುವರಾಜ ಯದುವೀರ್ ಹಾಗೂ ವಿಜಯನಗರದ ಕೃಷ್ಣದೇವರಾಜರು ಪ್ರತಿಭಟನೆಯಲ್ಲಿ ಭಾಗವಹಿಸಿ ಸ್ಮಾರಕ ಧ್ವಂಸಗೊಳಿಸಿರುವುದನ್ನು ಖಂಡಿಸಿದ್ದಾರೆ. ಕಮಲಾಪುರದ ಪುರಾತತ್ವ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಮಹಾರಾಜರು ಹಾಗೂ ನೂರಾರು ಸ್ಥಳೀಯರು, ಹಂಪಿಯಲ್ಲಿ ಸ್ಮಾರಕಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

    ಈ ವೇಳೆ ಮಾತನಾಡಿದ ಮೈಸೂರಿನ ಯುವರಾಜ ಯದುವೀರ್ ಅವರು ಹಂಪಿಯನ್ನು ಉಳಿಸುವ ಕೆಲಸವನ್ನು ನಾವೆಲ್ಲ ಮಾಡಬೇಕಾಗಿದೆ. ಪುರಾತತ್ವ ಇಲಾಖೆ ಈ ಬಗ್ಗೆ ಇನ್ನಷ್ಟು ಕಾರ್ಯಪ್ರವೃತ್ತರಾಗಬೇಕು, ನಮ್ಮ ಮೈಸೂರಿನಲ್ಲಿಯೂ ಸ್ಮಾರಕಗಳಿಗೆ ಧಕ್ಕೆಯಾಗುತ್ತಿವೆ. ಸ್ಮಾರಕಗಳನ್ನು ಉಳಿಸಲು ಜನರ ಸಹಭಾಗಿತ್ವ ಪ್ರಮುಖವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕಿಡಿಗೇಡಿಗಳ ಅಟ್ಟಹಾಸ – ಹಂಪಿಯ ಐತಿಹಾಸಿಕ ಸ್ಮಾರಕಗಳನ್ನ ಕೆಡವಿದ ವಿಡಿಯೋ ವೈರಲ್..!

    ಯದುವೀರ್ ಅವರು ಭಾನುವಾರ ಐತಿಹಾಸಿಕ ಹಂಪಿಗೆ ಭೇಟಿ ನೀಡಿ ಪ್ರಸಿದ್ಧ ಸ್ಮಾರಕಗಳನ್ನು ವೀಕ್ಷಣೆ ಮಾಡಿದ್ದರು. ಕಮಲಾಪುರ ಹಾಗೂ ತಳವಾರಘಟ್ಟ ರಸ್ತೆ ಮೂಲಕ ಆಗಮಿಸಿದ ಯದುವೀರ್ ಗೆಜ್ಜಲ ಮಂಟಪ, ಕುದುರೆ ಗೊಂಬೆ ಮಂಟಪ, ವಿಠಲ ಬಜಾರ್, ಪುಷ್ಕರಣಿ, ಪ್ರಸಿದ್ಧ ವಿಜಯವಿಠಲ ದೇವಸ್ಥಾನದಲ್ಲಿ ಕಲ್ಲಿನ ರಥ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಒಡೆಯರ್ ನೋಡಿ ಪ್ರವಾಸಿಗರು ಅವರ ಜೊತೆ ಫೋಟೋ, ಸೆಲ್ಫಿ ತಗೆದುಕೊಂಡಿದ್ದಾರೆ. ಇದನ್ನೂ ಓದಿ: ಕಿಡಿಗೇಡಿಗಳಿಂದ ಸ್ಮಾರಕ ಧ್ವಂಸ – ಎಸ್‍ಪಿಯಿಂದ ಸ್ಥಳ ಪರಿಶೀಲನೆ

    ಇದಾದ ಬಳಿಕ ಯದುವೀರ್ ಅವರು ಸಂಗೀತ ಮಂಟಪಕ್ಕೆ ತೆರಳಿ, ಸಪ್ತಸ್ವರ ಕಂಬಗಳಿಂದ ನಾದ ಆಲಿಸಿ ಖುಷಿಪಟ್ಟರು. ನಂತರ ತುಂಗಭದ್ರಾ ನದಿ ತೀರದಲ್ಲಿರುವ ಪುರಂದರ ಮಂಟಪ ವೀಕ್ಷಣೆ ಮಾಡಿದ್ದಾರೆ. ಯದುವೀರ್ ಅವರ ಜೊತೆ ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಸಿ.ಎಸ್.ವಾಸುದೇವನ್ ಮತ್ತಿತರರು ಇದ್ದರು. ಯದುವೀರ್ ಅವರು ಹಂಪಿಗೆ ಆಗಾಗ ಭೇಟಿ ನೀಡುತ್ತಾರೆ. ಈ ಬಾರಿಯೂ ಹಂಪಿ ಪ್ರಸಿದ್ಧ ಸ್ಮಾರಕ ಸೇರಿದಂತೆ ಪ್ರಕೃತಿ ಸೊಬಗನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪದ್ಮಾವತ್ ಚಿತ್ರದ ಹಾಡಿಗೆ ನೃತ್ಯ ಮಾಡಿದ್ದಕ್ಕೆ ಶಾಲೆಯ ಚೇರ್, ಸ್ಪೀಕರ್ ಧ್ವಂಸ

    ಪದ್ಮಾವತ್ ಚಿತ್ರದ ಹಾಡಿಗೆ ನೃತ್ಯ ಮಾಡಿದ್ದಕ್ಕೆ ಶಾಲೆಯ ಚೇರ್, ಸ್ಪೀಕರ್ ಧ್ವಂಸ

    ಭೋಪಾಲ್: ಶಾಲೆಯ ವಾರ್ಷಿಕೋತ್ಸವದಲ್ಲಿ ಪದ್ಮಾವತ್ ಚಿತ್ರದ ಗೂಮರ್ ಹಾಡಿಗೆ ನೃತ್ಯ ಮಾಡಿದ್ದಕ್ಕೆ ಶ್ರೀ ರಜ್‍ಪೂತ್ ಕರ್ಣಿ ಸೇನಾ ಕಾರ್ಯಕರ್ತರು ಶಾಲಾ ಆಸ್ತಿಯನ್ನು ಧ್ವಂಸ ಮಾಡಿದ ಘಟನೆ ಮಧ್ಯ ಪ್ರದೇಶದ ರತ್ಲಂನಲ್ಲಿ ನಡೆದಿದೆ.

    ಸೆಂಟ್ ಪೌಲ್ ಕಾನ್ವೆಂಟ್ ನಲ್ಲಿ ಈ ಘಟನೆ ನಡೆದಿದ್ದು, 1 ರಿಂದ 5ನೇ ತರಗತಿಯ ಮಕ್ಕಳು ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದರು. ಕಾರ್ಯಕ್ರಮ ನಡೆಯುವಾಗ ಕರ್ಣಿ ಸೇನಾ ಕಾರ್ಯಕರ್ತರು ಪ್ಲಾಸ್ಟಿಕ್ ಚೇರ್ ಮುರಿದಿದ್ದಾರೆ ಅಷ್ಟೇ ಅಲ್ಲದೇ ಸ್ಪೀಕರ್ ಒಡೆದು ಹಾಕಿದ್ದಾರೆ. ಈ ಘಟನೆಯಲ್ಲಿ ಓರ್ವ ವಿದ್ಯಾರ್ಥಿಗೆ ಗಾಯವಾಗಿದೆ.

    ಶಾಲೆಯ ಆಡಳಿತ ಮಂಡಳಿ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ ಹಾಗೂ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

    ಸದ್ಯ ಪದ್ಮಾವತಿ ಚಿತ್ರ ಪದ್ಮಾವತ್ ಆಗಿ ಬದಲಾಗಿದ್ದು, ಯು/ಎ ಸರ್ಟಿಫಿಕೆಟ್ ದೊರೆತಿದೆ. ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಚಿತ್ರದಲ್ಲಿ ಇಬ್ಬರೂ ನಾಯಕರಿದ್ದು, ಶಾಹಿದ್ ಕಪೂರ್ ರಾಣಾ ರತನ್ ಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ನಟ ರಣ್‍ವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿ ಆಗಿ ಬಣ್ಣ ಹಚ್ಚಿದ್ದಾರೆ. ಪದ್ಮಾವತ್ ಚಿತ್ರ ಇದೇ ತಿಂಗಳು 25 ರಂದು ಬಿಡುಗಡೆಯಾಗಲಿದೆ.

    https://www.youtube.com/watch?v=1kqJYqGraLg