Tag: ಧ್ರುವ ಸರ್ಜಾ ಬರ್ತ್‌ ಡೇ

  • ಧ್ರುವ ಹುಟ್ಟುಹಬ್ಬದ ದಿನ ನಿರ್ಮಾಪಕ ಉಮಾಪತಿಗೌಡ ಹೊಸ ಸಿನಿಮಾ ಅನೌನ್ಸ್!

    ಧ್ರುವ ಹುಟ್ಟುಹಬ್ಬದ ದಿನ ನಿರ್ಮಾಪಕ ಉಮಾಪತಿಗೌಡ ಹೊಸ ಸಿನಿಮಾ ಅನೌನ್ಸ್!

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕೆಆರ್ ರಸ್ತೆಯ ತಮ್ಮ ನಿವಾಸದ ಮುಂದೆ ನಟ ಧ್ರುವ ಸರ್ಜಾ ಅದ್ಧೂರಿಯಾಗಿ ಬರ್ತ್‌ಡೇ (Dhruva Sarja Birthday) ಆಚರಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು (Dhruva Sarja Fans) ರಕ್ತದಾನ, ಅನ್ನದಾನ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ದಾನದಂತಹ ವಿವಿಧ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದರು.

    ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ದೂರದ ಊರಿನಿಂದ ಅಭಿಮಾನಿಗಳು, ಆಪ್ತರು ಹಾಗೂ ಕುಟುಂಬಸ್ಥರು ಆಗಮಿಸಿ ಶುಭ ಹಾರೈಸಿದ್ದಾರೆ. ಇದೇ ವೇಳೆ ಆಗಮಿಸಿದ ನಿರ್ಮಾಪಕ ಉಮಾಪತಿ ಗೌಡ (Umapathy) ಧ್ರುವ ಸರ್ಜಾಗೆ ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಾರೆ. ಬಳಿಕ ಮಾತನಾಡಿದ ಅವರು. ಧ್ರುವ ಸರ್ಜಾ ಅವರು ನಾಯಕರಾಗಿ ತಮ್ಮ ಬ್ಯಾನರ್ ನಲ್ಲಿ ಮುಂದಿನ ದಿನಗಳಲ್ಲಿ ಸಿನಿಮಾ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಈ ಮಾತು ಕೇಳಿದ ಅಭಿಮಾನಿಗಳು ಖುಷಿಯಿಂದ ಕೇಕೆ ಹಾಕಿ ಕುಣಿದಾಡಿದ್ದಾರೆ. ಇದನ್ನೂ ಓದಿ: ನಂಬಿಕೆ, ಜಾನಪದದ ಮಿಶ್ರಣವೇ ಕಾಂತಾರ ಚಾಪ್ಟರ್-1: ಅಣ್ಣಾಮಲೈ ಶ್ಲಾಘನೆ

    ನಿರ್ಮಾಪಕ ಉಮಾಪತಿ ಗೌಡ ಈ ಹಿಂದೆ ಸುದೀಪ್ ಹಾಗೂ ದರ್ಶನ್ ಅವರಿಗೆ ಸಿನಿಮಾ ಮಾಡಿರುವ ನಿರ್ಮಾಪಕರು. ಇದೀಗ ಧ್ರುವ ಸರ್ಜಾ ಅವರ ಜೊತೆಗೆ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸದ್ಯ ಧ್ರುವ ಕೆಡಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸೀತಾ ಪಯಣ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಬಳಿಕ ಉಮಾಪತಿಗೌಡ ಅವರ ಚಿತ್ರದಲ್ಲಿ ನಟಿಸುವ ಪ್ಲ್ಯಾನ್ ಕೂಡಾ ನಡೆಯುತ್ತಿದೆ. ಇದನ್ನೂ ಓದಿ: ರಾಕೇಶ್ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ, ಆದ್ರೆ ಜನರಿಗೆ ಆತನ ಮೇಲಿರುವ ಪ್ರೀತಿಯನ್ನ ನೋಡ್ತಿದ್ದೀನಿ: ಗುಲ್ಶನ್ ದೇವಯ್ಯ