Tag: ಧ್ರುವ ವಿಕ್ರಮ್

  • ವಿಜಯ್ ದೇವರಕೊಂಡಗೆ ವಿಲನ್‌ ಆದ ಚಿಯಾನ್ ವಿಕ್ರಮ್ ಪುತ್ರ

    ವಿಜಯ್ ದೇವರಕೊಂಡಗೆ ವಿಲನ್‌ ಆದ ಚಿಯಾನ್ ವಿಕ್ರಮ್ ಪುತ್ರ

    ‘ಫ್ಯಾಮಿಲಿ ಸ್ಟಾರ್’ (Family Star) ನಂತರ ವಿಜಯ್ ದೇವರಕೊಂಡ (Vijay Devarakonda)  ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ವಿಜಯ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೋಡಿಯಾಗಿ ನಟಿಸಲಿರುವ ಹೊಸ ಚಿತ್ರಕ್ಕೆ ಚಿಯಾನ್ ವಿಕ್ರಮ್ ಪುತ್ರ ಧ್ರುವ ವಿಲನ್ ಆಗಿ ಅಬ್ಬರಿಸಲಿದ್ದಾರೆ ಎಂಬ ಸುದ್ದಿ ಹಾರಿದಾಡುತ್ತಿದೆ.

    ‘ಶ್ಯಾಮ್ ಸಿಂಗ್ ರಾಯ್’ ಸಿನಿಮಾದ ನಿರ್ದೇಶಕ ರಾಹುಲ್  ಜೊತೆ ವಿಜಯ್ ಕೈಜೋಡಿಸಿದ್ದಾರೆ. ಹೊಸ ಪ್ರಾಜೆಕ್ಟ್‌ನಲ್ಲಿ ವಿಜಯ್‌ಗೆ ವಿಲನ್ ಆಗಿ ಧ್ರುವ ವಿಕ್ರಮ್ (Dhruv Vikram) ಠಕ್ಕರ್ ಕೊಡಲಿದ್ದಾರಂತೆ. ವಿಜಯ್ ಮತ್ತು ಧ್ರುವ ಡೆಡ್ಲಿ ಕಾಂಬಿನೇಷನ್ ಬಗ್ಗೆ ಈಗ ಟಾಲಿವುಡ್‌ನಲ್ಲಿ ಚರ್ಚೆ ಶುರುವಾಗಿದೆ. ಅಧಿಕೃತ ಮಾಹಿತಿ ಸಿಗುವವರೆಗೂ ಕಾಯಬೇಕಿದೆ.

    ಅಂದಹಾಗೆ, ಮೊದಲ ಬಾರಿಗೆ ವಿಜಯ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. 1854- 78ರ ಕಾಲಘಟ್ಟದ ಕಥೆ ಇದಾಗಿದ್ದು, ವಿಜಯ್ ತಂದೆ ಮತ್ತು ಮಗನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನಲ್ಲಿ ಸಿಕ್ತು ಗೋಲ್ಡನ್ ಚಾನ್ಸ್- ಸ್ಟಾರ್‌ ನಟನಿಗೆ ಕೀರ್ತಿ ಸುರೇಶ್‌ ನಾಯಕಿ

    ಈಗಾಗಲೇ ಚಿತ್ರದ ಪೋಸ್ಟರ್ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಈ ಚಿತ್ರವನ್ನು 120 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಡಬಲ್ ರೋಲ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ ಕಾರಣ, ವಿಜಯ್ ಪಾತ್ರಕ್ಕಾಗಿ ಸಕಲ ತಯಾರಿ ಮಾಡಿಕೊಳ್ತಿದ್ದಾರೆ.‌ ವಿಜಯ್‌ ಮತ್ತು ರಶ್ಮಿಕಾ ಎದುರು ಖಳನಟನಾಗಿ ಅಬ್ಬರಿಸಲಿರುವ ಧ್ರುವ ವಿಕ್ರಮ್‌ರನ್ನು ನೋಡಲು ಫ್ಯಾನ್ಸ್‌ ಕಾಯ್ತಿದ್ದಾರೆ.

  • ವಿಕ್ರಮ್ ಪುತ್ರನ ಜೊತೆ ಅನುಪಮಾ ಪರಮೇಶ್ವರನ್ ರೊಮ್ಯಾನ್ಸ್

    ವಿಕ್ರಮ್ ಪುತ್ರನ ಜೊತೆ ಅನುಪಮಾ ಪರಮೇಶ್ವರನ್ ರೊಮ್ಯಾನ್ಸ್

    ‘ಟಿಲ್ಲು ಸ್ಕ್ವೇರ್‌’ (Tillu Sqaure) ಸಿನಿಮಾದ ನಂತರ ಅನುಪಮಾ ಪರಮೇಶ್ವರನ್ (Anupama Parameshwaran) ಅದೃಷ್ಟ ಕೈಹಿಡಿದಿದೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ ಹವಾ ನಡುವೆ ಮಲಯಾಳಂ ಬೆಡಗಿ ಅನುಪಮಾ ಲಕ್ಕಿ ನಟಿಯಾಗಿದ್ದಾರೆ. ಸಾಲು ಸಾಲು ಚಿತ್ರಗಳಿಗೆ ಹೀರೋಯಿನ್ ಆಗಿ ಬುಕ್ ಆಗಿದ್ದಾರೆ. ವಿಕ್ರಮ್ ಪುತ್ರನ ಜೊತೆ ನಟಿಸಲು ಅನುಪಮಾಗೆ ಆಫರ್ ಸಿಕ್ಕಿದೆ.

    ಸ್ಟಾರ್ ನಟ ವಿಕ್ರಮ್ ಪುತ್ರ ಧ್ರುವ (Dhruv Vikram) ಜೊತೆ ನಟಿಸಲು ಅನುಪಮಾಗೆ ಅವಕಾಶ ಸಿಕ್ಕಿದೆ. ಈ ಚಿತ್ರಕ್ಕೆ ‘ಬೈಸನ್’ (Bison) ಎಂದು ಟೈಟಲ್ ಇಡಲಾಗಿದ್ದು, ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ. ಮಗನ ಸಿನಿಮಾಗೆ ಚಿಯಾನ್ ವಿಕ್ರಮ್ ಕ್ಲ್ಯಾಪ್ ಮಾಡಿ ಶುಭಹಾರೈಸಿದ್ದಾರೆ.

    ಧ್ರುವ ಮತ್ತು ಅನುಪಮಾಗೆ ಮರಿ ಸೆಲ್ವರಾಜ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇದೊಂದು ಥ್ರಿಲರ್ ಸಿನಿಮಾವಾಗಿದ್ದು, ವಿಭಿನ್ನ ಕಥೆಯನ್ನು ಹೇಳಲು ಹೊರಟಿದೆ ಚಿತ್ರತಂಡ.‌ ಇದನ್ನೂ ಓದಿ:ರೂಪೇಶ್ ಶೆಟ್ಟಿಯ ‘ಅಧಿಪತ್ರ’ ಚಿತ್ರದ ಆಡಿಯೋ ರೈಟ್ಸ್ ಲಹರಿ ಆಡಿಯೋ ಪಾಲು

    ಮೊದಲ ಬಾರಿಗೆ ಧ್ರುವ ಮತ್ತು ಅನುಪಮಾ ಜೋಡಿಯಾಗ್ತಿರೋದ್ರಿಂದ ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆಯಿದೆ.

  • ಯದ್ವಾ ತದ್ವಾ ಕಾರು ಚಲಾಯಿಸಿದ ಸ್ಟಾರ್ ನಟನ ಪುತ್ರ – ನಾಲ್ವರಿಗೆ ಗಂಭೀರ ಗಾಯ

    ಯದ್ವಾ ತದ್ವಾ ಕಾರು ಚಲಾಯಿಸಿದ ಸ್ಟಾರ್ ನಟನ ಪುತ್ರ – ನಾಲ್ವರಿಗೆ ಗಂಭೀರ ಗಾಯ

    ಚೆನ್ನೈ: ಕಾಲಿವುಡ್ ಸ್ಟಾರ್ ನಟ ವಿಕ್ರಮ್ ಪುತ್ರ ಧ್ರುವ ವಿಕ್ರಮ್ ಯದ್ವಾ ತದ್ವಾ ಕಾರು ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿ ನಾಲ್ವರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಚೆನ್ನೈ ನಗರದಲ್ಲಿ ನಡೆದಿದೆ.

    ಧ್ರುವ ವಿಕ್ರಮ್ ಚಾಲನೆ ಮಾಡುತ್ತಿದ್ದ ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮೂರು ಆಟೋ ರಿಕ್ಷಾಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ ಜಖಂಗೊಂಡಿದೆ. ಈ ವೇಳೆ ಆಟೋದಲ್ಲಿದ್ದ ವ್ಯಕ್ತಿ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಗೊಂಡವರನ್ನು ಸ್ಥಳೀಯ ರೋಯಾಪಟ್ಟ ಆಸ್ಪತೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ಚೆನ್ನೈನ ತೇನಂಪೇಟೆಯ ಬಳಿ ಇರುವ ಪೊಲೀಸ್ ಕಮೀಷನರ್ ಮನೆ ಬಳಿಯೇ ಘಟನೆ ನಡೆದಿದ್ದು, ಅಪಘಾತದ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಪೊಲೀಸರ ಜೊತೆಗೆ ಧ್ರುವ ವಿಕ್ರಮ್ ವಾಗ್ವಾದಕ್ಕಿಳಿದ್ದು, ಬಳಿಕ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಧ್ರುವ ವಿಕ್ರಮ್ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 279 (ನಿರ್ಲಕ್ಷ ಚಾಲನೆ), 337 ಅಡಿ ದೂರು ದಾಖಲಿಸಿದ್ದಾರೆ. ಸದ್ಯ ಧ್ರುವ ವಿಕ್ರಮ್ ಜಾಮೀನು ಪಡೆದು ಠಾಣೆಯಿಂದ ಬಿಡುಗಡೆಗೊಂಡಿದ್ದು, ಅಪಘಾತ ನಡೆದ ವೇಳೆ ಧ್ರುವ ತನ್ನ ಮೂವರು ಸ್ನೇಹಿತರೊಂದಿಗೆ ತೆರಳುತ್ತಿದ್ದ ಎಂದು ವರದಿಯಾಗಿದೆ.

    ಅಂದಹಾಗೇ ಧ್ರುವ ವಿಕ್ರಮ್ ತೆಲುಗಿನ `ಅರ್ಜುನ್ ರೆಡ್ಡಿ’ ಸಿನಿಮಾ ತಮಿಳು ರಿಮೇಕ್ ನಲ್ಲಿ ಮೊದಲ ಬಾರಿಗೆ ಕಾಲಿವುಡ್ ನಲ್ಲಿ ನಟರಾಗಿ ಪ್ರವೇಶ ಪಡೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews