Tag: ಧ್ರುವನಾರಾಯಣ್

  • ಈಶ್ವರಪ್ಪ, ಮುತಾಲಿಕ್ ದೇಶದ ತಾಲಿಬಾನಿಗಳು: ಧ್ರುವನಾರಾಯಣ್

    ಈಶ್ವರಪ್ಪ, ಮುತಾಲಿಕ್ ದೇಶದ ತಾಲಿಬಾನಿಗಳು: ಧ್ರುವನಾರಾಯಣ್

    ಚಾಮರಾಜನಗರ: ಸಚಿವ ಈಶ್ವರಪ್ಪ, ಪ್ರಮೋದ್ ಮುತಾಲಿಕ್ ಇವರೆಲ್ಲರೂ ದೇಶದ ತಾಲಿಬಾನಿಗಳು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ವಾಗ್ದಾಳಿ ನಡೆಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕು. ಅವರು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 326 ದೇಶದ್ರೋಹ ಪ್ರಕರಣ ದಾಖಲಾಗಿದೆ. ಸರ್ಕಾರದ ವಿರುದ್ಧ ಮಾತಾಡಿದರೆ ದೇಶದ್ರೋಹ ಪ್ರಕರಣ ದಾಖಲಿಸುತ್ತಾರೆ. ಬಿಜೆಪಿಯವರು ಸ್ವಯಂ ಘೋಷಿತ ಹುಸಿ ದೇಶ ಭಕ್ತರು ಎಂದು ಟೀಕಿಸಿದರು. ಇದನ್ನೂ ಓದಿ: ಕಲಾಪ ಹಾಳು ಮಾಡುತ್ತಿರುವವರನ್ನು ಸದನದಿಂದ ಹೊರಹಾಕಿ: ಹೆಚ್‍ಡಿಕೆ

    ಬಿಜೆಪಿ ಅವರು ವಿಧಾನಸಭೆಯಲ್ಲಿ ನಿಮ್ಮಪ್ಪ ಎನ್ನುವ ಪದ ಉಪಯೋಗಿಸಿದ್ದಾರೆ. ಜೈಲಿಗೆ ಹೋಗಿದಿರಿ ಅಂತಿರಿ. ನಿಮ್ಮ ಪಕ್ಷದವರು ಜೈಲಿಗೆ ಹೋಗಿಲ್ವಾ? ಅಮಿತ್ ಶಾ ಎರಡು ವರ್ಷ ಜೈಲಿನಲ್ಲಿ ಇರಲಿಲ್ವಾ. ಡಿಕೆಶಿ ಒಬ್ರೇನೆ ಜೈಲಿನಲ್ಲಿದ್ರಾ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೈವಾನ್ ಕಂಪನಿಗಳಿಗೆ ನಿರಾಣಿ ಆಹ್ವಾನ

    ಕೊಳಚೆ ಬಾಯಲ್ಲಿ ಸುಗಂಧ ಬರಲ್ಲ ದುರ್ವಾಸನೆಯೇ ಯಾವಾಗಲೂ ಬರೋದು ಎಂದು ಬಿಜೆಪಿಯನ್ನು ಕುಟುಕಿದ ಅವರು, ಈಶ್ವರಪ್ಪ ರಾಜೀನಾಮೆ ಕೊಡೋವರೆಗು ಕಾಂಗ್ರೆಸ್ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.

  • ಸಿ.ಟಿ ರವಿಯನ್ನ ಲೂಟಿ ರವಿ ಅಂತ ಹೇಳ್ತಾರೆ: ಧ್ರುವನಾರಾಯಣ್

    ಸಿ.ಟಿ ರವಿಯನ್ನ ಲೂಟಿ ರವಿ ಅಂತ ಹೇಳ್ತಾರೆ: ಧ್ರುವನಾರಾಯಣ್

    ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿಯನ್ನು ಲೂಟಿ ರವಿ ಅಂತ ಹೇಳುತ್ತಾರೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಧ್ರುವನಾರಾಯಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ೪ ಬಾರಿ ಶಾಸಕರಾಗಿ, ೨ ಬಾರಿ ಮಂತ್ರಿಗಳಾದ್ರೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಧರ್ಮ-ವ್ಯಕ್ತಿಗಳನ್ನು ಗುರಿಯಾಗಿಸಿ ಹೇಳಿಕೆ ಕೊಡೊದೇ ಅವರ ಕಾಯಕ ಸಿ.ಟಿ ರವಿ ಒಬ್ಬ ವಿಕೃತ ಮನಸ್ಸುಳ್ಳ ಮನುಷ್ಯ ಎಂದು ಸಿಡಿದರು. ಇದನ್ನೂ ಓದಿ: ಟೋಲ್ ಆದಾಯ ಮುಂದಿನ 3 ವರ್ಷಗಳಲ್ಲಿ 1.40 ಲಕ್ಷ ಕೋಟಿ ರೂ.ಗೆ ಏರಿಕೆ

    ಕಾಂಗ್ರೆಸ್ ಪಕ್ಷ ಬೆಂಕಿ ಹಚ್ಚುವ ಮನಸ್ಥಿತಿಯ ಪಕ್ಷ ಅಂತ ಸಿ.ಟಿ ರವಿಯವರ ಹೇಳಿಕೆ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಅವರು, ನಿಮಗೆ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಬಿಜೆಪಿ ಅಂದರೆ ಬೆಂಕಿ ಹಚ್ಚುವ ಜನರ ಪಕ್ಷ ಅಂತ ಹೇಳಬೇಕಾಗುತ್ತೆ. ಯಡಿಯೂರಪ್ಪ ಸಿಎಂ ಆಗಿ ೪ ತಿಂಗಳ ಒಳಗೆ ೪೩ ಕೇಸ್ ವಾಪಸ್ ಪಡೆದರು. ೪೩ ಕೇಸಲ್ಲಿ ಮೊದಲನೇ ಪ್ರಕರಣವೇ ಸಿಟಿ ರವಿ ಅವರದ್ದು. ಬಿಜೆಪಿ ಶಾಸಕರ ಬೆಂಕಿ, ದೌರ್ಜನ್ಯ ಕೇಸ್‌ನ್ನ ವಿತ್ ಡ್ರಾ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: MES ಗಲಭೆಗೆ ಕಾಂಗ್ರೆಸ್, ಬಿಜೆಪಿ ಕೈವಾಡ ಇಲ್ಲ, ಇದು ಪುಂಡ ಪೋಕರಿಗಳ ಕೆಲಸ: ಪ್ರಹ್ಲಾದ್ ಜೋಶಿ

    ಇದರಲ್ಲೇ ಗೊತ್ತಾಗುತ್ತೆ ಯಾರು ಕೇಸಲ್ಲಿ ಸಿಕ್ಕಿಹಾಕಿಕೊಂಡಿದ್ದರು, ಯಾರ ಕೇಸನ್ನ ವಿತ್ ಡ್ರಾ ಮಾಡಿದ್ರು ಅನ್ನೋದು? ಕೇಂದ್ರ ಗ್ರಹ ಸಚಿವ ಅಮಿತ್ ಷಾ ಎರಡು ವರ್ಷ ಜೈಲಲ್ಲಿದ್ದರು. ನಮ್ಮ ರಾಜ್ಯದಲ್ಲಿ ಸಿಎಂ, ಸಚಿವರು ಜೈಲು ಸೇರಿದ್ದರು. ನಿಮ್ಮ ಮನೆಯಲ್ಲಿಯೇ ವಾತಾವರಣ ಕೊಳೆತು ನಾರುತ್ತಿದೆ. ಕಾಂಗ್ರೆಸ್, ಡಿ.ಕೆ ಶಿವಕುಮಾರ್ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಸಿಡಿದರು.

  • ಧ್ರುವನಾರಾಯಣ್‍ಗಾಗಿ ಎಂಎಲ್‍ಸಿ ಸ್ಥಾನ ಬಿಟ್ಟು ಕೊಡಲು ಸಿದ್ಧ: ಧರ್ಮಸೇನಾ

    ಧ್ರುವನಾರಾಯಣ್‍ಗಾಗಿ ಎಂಎಲ್‍ಸಿ ಸ್ಥಾನ ಬಿಟ್ಟು ಕೊಡಲು ಸಿದ್ಧ: ಧರ್ಮಸೇನಾ

    ಮೈಸೂರು: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಂದು ಬಿಜೆಪಿ ಬಹುಮತ ಪಡೆಯುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆಯಾಗುತ್ತಿದೆ. ಶುಕ್ರವಾರದಂದು ಹಾಸನದಲ್ಲಿ ಗೆಲುವು ಸಾಧಿಸಿರುವ ಪ್ರಜ್ವಲ್ ರೇವಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದಿದ್ದರು. ಇದೀಗ ಪರಿಷತ್ ಸದಸ್ಯ ಧರ್ಮಸೇನಾ ಅವರು ಚಾಮರಾಜನಗರದ ಮಾಜಿ ಸಂಸದ ಧ್ರುವನಾರಾಯಣ್ ಅವರಿಗಾಗಿ ತನ್ನ ಸ್ಥಾನವನ್ನು ಬಿಟ್ಟು ಕೊಡಲು ನಾನು ಸಿದ್ಧ ಎಂದು ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧ್ರುವನಾರಾಯಣ್ ಅವರು, ಅಲ್ಪ ಮತಗಳಿಂದ ಸೋಲನ್ನ ಅನುಭವಿಸಿದ್ದಾರೆ. ಇದು ಸೋಲಲ್ಲ, ಹೋರಾಡಿ ಗೆದ್ದದ್ದು. ಧ್ರುವನಾರಾಯಣ್ ದೇಶದ ಉತ್ತಮ ಸಂಸದರು. ಧ್ರುವನಾರಾಯಣ್ ಅವರ ನಾಯಕತ್ವದ ಅವಶ್ಯಕತೆ ಇದೆ. ಇಂತಹ ವ್ಯಕ್ತಿಗಾಗಿ ನಾನು ನನ್ನ ಸ್ಥಾನ ನೀಡಲು ಸಿದ್ಧ. ಇದು ನನ್ನ ವೈಯಕ್ತಿಕವಾದ ನಿರ್ಧಾರ. ಈ ವಿಚಾರ ಇನ್ನು ಯಾರಿಗೂ ಹೇಳಿಲ್ಲ, ಆದರೆ ಈಗ ಮಾಧ್ಯಮದ ಮುಂದೆ ಹೇಳಿದ್ದೇನೆ ಎಂದು ತಿಳಿಸಿದರು.

    ನನ್ನ ಅವಶ್ಯಕತೆ ಇರಬಹುದು, ಆದರೆ ಅದಕ್ಕಿಂತ ಹೆಚ್ಚು ಧ್ರುವನಾರಾಯಣ್ ಅವರ ಅವಶ್ಯಕತೆಯಿದೆ. ನನ್ನ ಹುದ್ದೆ ಕೂಡ, ಮೈಸೂರು ಚಾಮರಾಜನಗರದ ಜನ ಆರಿಸುವಂತದ್ದು. ಇದು ಎರಡು ಜಿಲ್ಲೆಗಳ ಜನರಿಂದ ಆಯ್ಕೆಯಾಗುವಂತ ದೊಡ್ಡ ಸ್ಥಾನ. ಈ ವಿಚಾರದಲ್ಲಿ ಯಾವುದೇ ದುರುದ್ದೇಶ ಇಲ್ಲ. ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡಲು ಧ್ರುವನಾರಾಯಣ್ ತರಹದ ನಾಯಕರು ಬೇಕು. ಸಂಕಷ್ಟದ ಸಮಯದಲ್ಲಿ ನಾನು ನೆರವಾಗಬೇಕೆಂದು ಈ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

    ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ 5,68,537 ಮತಗಳನ್ನು ಪಡೆದು 1,817 ಮತಗಳ ಅಂತರದಲ್ಲಿ ಧ್ರುವನಾರಾಯಣ ಅವರನ್ನು ಸೋಲಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಆರ್. ಧ್ರುವನಾರಾಯಣ್ 5,66,720 ಮತಗಳನ್ನು ಗಳಿಸಿದ್ದರೆ, ಬಿಎಸ್‍ಪಿ ಅಭ್ಯರ್ಥಿ ಡಾ.ಶಿವಕುಮಾರ್ 87,208 ಮತಗಳನ್ನು ಪಡೆದಿದ್ದಾರೆ.