Tag: ಧ್ರುವನಾರಾಯಣ್

  • ಮಾಜಿ ಸಂಸದ ಧ್ರುವನಾರಾಯಣ್ ಪುತ್ರನಿಗೆ ನಂಜನಗೂಡು ಟಿಕೆಟ್

    ಮಾಜಿ ಸಂಸದ ಧ್ರುವನಾರಾಯಣ್ ಪುತ್ರನಿಗೆ ನಂಜನಗೂಡು ಟಿಕೆಟ್

    ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ಕಾಂಗ್ರೆಸ್‍ನಿಂದ ಮೊದಲ ಪಟ್ಟಿ ಬಿಡುಗಡೆಗೊಂಡಿದ್ದು, ಈ ಬಾರಿ ಧ್ರುವನಾರಾಯಣ್ ಪುತ್ರ ದರ್ಶನ್‍ಗೆ (Darshan DhruvaNarayan) ನಂಜನಗೂಡು (Nanjanagudu) ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಲಾಗಿದೆ.

    ರಾಜ್ಯ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಈಗಾಗಲೇ ಬಿಡುಗಡೆಗೊಂಡಿದೆ. ಮೈಸೂರಿನ 11 ಕ್ಷೇತ್ರಗಳಲ್ಲಿ 9 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಅದರಲ್ಲೂ ಮೈಸೂರಿನ ನಂಜನಗೂಡು ಕ್ಷೇತ್ರದ ಅಭ್ಯರ್ಥಿ ಯಾರು ಎನ್ನುವುದರ ಬಗ್ಗೆ ತೀವ್ರ ಕುತೂಹಲ ಮೂಡಿಸಿತ್ತು. ನಂಜನಗೂಡು ಕ್ಷೇತ್ರದ ಕಾಂಗ್ರೆಸ್ (Congress) ಟಿಕೆಟ್‍ಗೆ ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಮತ್ತು ಧ್ರುವನಾರಾಯಣ್ ನಡುವೆ ಫೈಟ್ ಸೃಷ್ಟಿಯಾಗಿತ್ತು. ಇಬ್ಬರಲ್ಲಿ ಯಾರ ಕೈ ಮೇಲಾಗುತ್ತದೋ ಎಂದು ಜನ ಕೂತೂಹಲದಿಂದ ನೋಡುತ್ತಿದ್ದ ಹೊತ್ತಿನಲ್ಲೇ ಧ್ರುವನಾರಾಯಣ್ (R.Dhruvanarayan) ಅವರು ಅಕಾಲಿಕವಾಗಿ ಮರಣ ಹೊಂದಿದ್ದರು. ಇವರ ಮರಣ ನಂತರ ಕ್ಷೇತ್ರದ ಟಿಕೆಟ್ ರೇಸ್‍ನ ವರಸೆಯೇ ಬದಲಾಗಿ ಬಿಟ್ಟಿತು.

    ಧ್ರುವನಾರಾಯಣ್ ಅವರ ಹಠಾತ್ ನಿಧನದ ಪರಿಣಾಮ ಕ್ಷೇತ್ರದಲ್ಲಿ ಧ್ರುವನಾರಾಯಣ್ ಕುಟುಂಬದ ಪರ ಅನುಕಂಪದ ಅಲೆ ದೊಡ್ಡ ಮಟ್ಟದಲ್ಲಿ ಎದ್ದಿತ್ತು. ಧ್ರುವನಾರಾಯಣ್ ಪುತ್ರ ದರ್ಶನ್‍ಗೆ ಟಿಕೆಟ್ ಕೊಡಬೇಕೆಂಬ ಕೂಗು ಬಹು ಜೋರಾಗಿಯೆ ಕೇಳಿ ಬಂದಿತ್ತು. ಯಾವಾಗ ಧ್ರುವನಾರಾಯಣ್ ಅವರ ಪುತ್ರನ ಪರ ಕೂಗು ಹೆಚ್ಚಾಯ್ತೋ, ಅನುಕಂಪದ ಅಲೆಯ ಅಬ್ಬರವೂ ಜೋರಾಯ್ತೋ ತಕ್ಷಣವೇ ಮಹದೇವಪ್ಪಗೆ ಭವಿಷ್ಯದ ಅಪಾಯ ಕಣ್ಮುಂದೆ ಬಂದಂತೆ ಕಂಡಿದೆ. ಅನುಕಂಪದ ಅಲೆ ಈ ಮಟ್ಟಕ್ಕೆ ಇರುವಾಗ ಅದನ್ನು ಧಿಕ್ಕರಿಸಿ ಟಿಕೆಟ್ ಪಡೆದರೆ ಅದು ಚುನಾವಣೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೆ ದಲಿತ ನಾಯಕ ಎನ್ನಿಸಿಕೊಂಡ ಧ್ರುವನಾರಾಯಣ್ ಅವರ ಕುಟುಂಬಕ್ಕೆ ಮಹದೇವಪ್ಪ ಅನ್ಯಾಯ ಮಾಡಿದರು ಎಂಬ ಆರೋಪ ಶಾಶ್ವತವಾಗಿ ಉಳಿದು ಬಿಡುವ ಸಾಧ್ಯತೆಯೂ ಹೆಚ್ಚಿರುತ್ತದೆ ಎಂದು ಮಹದೇವಪ್ಪ ಯೋಚಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಮೊದಲ ಪಟ್ಟಿ ರಿಲೀಸ್‌ – 124 ಕ್ಷೇತ್ರಗಳಿಗೆ ಅಭ್ಯರ್ಥಿ

    ಎಲ್ಲವನ್ನು ಅಳೆದು ತೂಗಿರುವ ಹೆಚ್.ಸಿ.ಮಹದೇವಪ್ಪ (HC Mahadevappa) ಏಕಾಏಕಿ ಮೈಸೂರಿನಲ್ಲಿನ ಧ್ರುವನಾರಾಯಣ್ ಅವರ ಮನೆಗೆ ಆಗಮಿಸಿ, ಧ್ರುವನಾರಾಯಣ್ ಅವರ ಪುತ್ರನಿಗೆ ಸಾಂತ್ವನ ಹೇಳಿ ತಮ್ಮ ನಿರ್ಧಾರ ಪ್ರಕಟಿಸಿದ್ದರು. ನಾನು ನಂಜನಗೂಡು ಕ್ಷೇತ್ರದ ಟಿಕೆಟ್ ರೇಸ್‍ನಿಂದ ಹಿಂದೆ ಸರಿಯುತ್ತಿದ್ದೇನೆ. ದರ್ಶನ್ ಧ್ರುವನಾರಾಯಣ್‍ಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದ್ದರು. ಇದನ್ನೂ ಓದಿ: ಗೊಂದಲಕ್ಕೆ ತೆರೆ- ವರುಣಾದಿಂದ ಸಿದ್ದರಾಮಯ್ಯ ಸ್ಪರ್ಧೆ

  • ಅನುಕಂಪದ ಅಲೆಯ ಅಬ್ಬರ – ಟಿಕೆಟ್ ರೇಸ್‌ನಿಂದ ಹಿಂದೆ ಸರಿದ ಹೆಚ್.ಸಿ.ಮಹದೇವಪ್ಪ

    ಅನುಕಂಪದ ಅಲೆಯ ಅಬ್ಬರ – ಟಿಕೆಟ್ ರೇಸ್‌ನಿಂದ ಹಿಂದೆ ಸರಿದ ಹೆಚ್.ಸಿ.ಮಹದೇವಪ್ಪ

    ಮೈಸೂರು: ನಂಜನಗೂಡು (Nanjanagud) ಕಾಂಗ್ರೆಸ್ (Congress) ಟಿಕೆಟ್ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅಕ್ಷರಶಃ ಧರ್ಮ ಸಂಕಟದಲ್ಲಿದ್ದರು. ಆದರೆ, ಈಗ ಇಡೀ ವಿಚಾರ ಸಿನಿಮೀಯಾ ರೀತಿ ಬದಲಾಗಿದೆ. ಡಾ.ಹೆಚ್.ಸಿ.ಮಹದೇವಪ್ಪ (H.C.Mahadevappa) ಅಚ್ಚರಿ ರೀತಿ ಕ್ಷೇತ್ರದ ಟಿಕೆಟ್ ರೇಸ್‌ನಿಂದ ಹಠಾತ್ ಆಗಿ ಹೊರ ನಡೆದಿದ್ದಾರೆ.

    ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಮತ್ತು ಧ್ರುವನಾರಾಯಣ್ ನಡುವೆ ಫೈಟ್ ಸೃಷ್ಟಿಯಾಗಿತ್ತು. ಇಬ್ಬರಲ್ಲಿ ಯಾರ ಕೈ ಮೇಲಾಗುತ್ತದೋ ಎಂದು ಜನ ಕೂತೂಹಲದಿಂದ ನೋಡುತ್ತಿದ್ದ ಹೊತ್ತಿನಲ್ಲೇ ಧ್ರುವನಾರಾಯಣ್ (R.Dhruvanarayan) ಅವರು ಅಕಾಲಿಕವಾಗಿ ಮರಣ ಹೊಂದಿದ್ದರು. ಇವರ ಮರಣ ನಂತರ ಕ್ಷೇತ್ರದ ಟಿಕೆಟ್ ರೇಸ್‌ನ ವರಸೆಯೇ ಬದಲಾಗಿ ಬಿಟ್ಟಿತು. ಇದನ್ನೂ ಓದಿ: ಪುಡಿ ರೌಡಿಗಳ ಜೊತೆ ಶಾಸಕರ ಮೀಟಿಂಗ್? – ಮತ್ತೊಂದು ವಿವಾದ ಮೈಮೇಲೆಳೆದುಕೊಂಡ ಸತೀಶ್ ರೆಡ್ಡಿ

    ಧ್ರುವನಾರಾಯಣ್ ಅವರ ಹಠಾತ್ ನಿಧನದ ಪರಿಣಾಮ ಕ್ಷೇತ್ರದಲ್ಲಿ ಧ್ರುವನಾರಾಯಣ್ ಕುಟುಂಬದ ಪರ ಅನುಕಂಪದ ಅಲೆ ದೊಡ್ಡ ಮಟ್ಟದಲ್ಲಿ ಎದ್ದಿದೆ. ಧ್ರುವನಾರಾಯಣ್ ಪುತ್ರ ದರ್ಶನ್‌ಗೆ ಟಿಕೆಟ್ ಕೊಡಬೇಕೆಂಬ ಕೂಗು ಬಹು ಜೋರಾಗಿಯೆ ಕೇಳಿ ಬರುತ್ತಿದೆ.

    ಯಾವಾಗ ಧ್ರುವನಾರಾಯಣ್ ಅವರ ಪುತ್ರನ ಪರ ಕೂಗು ಹೆಚ್ಚಾಯ್ತೋ, ಅನುಕಂಪದ ಅಲೆಯ ಅಬ್ಬರವೂ ಜೋರಾಯ್ತೋ ತಕ್ಷಣವೇ ಮಹದೇವಪ್ಪಗೆ ಭವಿಷ್ಯದ ಅಪಾಯ ಕಣ್ಮುಂದೆ ಬಂದಂತೆ ಕಾಣುತ್ತಿದೆ. ಅನುಕಂಪದ ಅಲೆ ಈ ಮಟ್ಟಕ್ಕೆ ಇರುವಾಗ ಅದನ್ನು ಧಿಕ್ಕರಿಸಿ ಟಿಕೆಟ್ ಪಡೆದರೆ ಅದು ಚುನಾವಣೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೆ ದಲಿತ ನಾಯಕ ಎನ್ನಿಸಿಕೊಂಡ ಧ್ರುವನಾರಾಯಣ್ ಅವರ ಕುಟುಂಬಕ್ಕೆ ಮಹದೇವಪ್ಪ ಅನ್ಯಾಯ ಮಾಡಿದರು ಎಂಬ ಆರೋಪ ಶಾಶ್ವತವಾಗಿ ಉಳಿದು ಬಿಡುವ ಸಾಧ್ಯತೆಯೂ ಹೆಚ್ಚಿರುತ್ತದೆ. ಇದನ್ನೂ ಓದಿ: ಚುನಾವಣೆ ಹೊತ್ತಲ್ಲೇ ಆಡಿಯೋ ಬಾಂಬ್- ರೇವಣ್ಣ, ಶಿವಲಿಂಗೇಗೌಡ ಮಾತುಕತೆ ಆಡಿಯೋ ವೈರಲ್

    ಎಲ್ಲವನ್ನೂ ಅಳೆದು ತೂಗಿರೋ ಹೆಚ್.ಸಿ.ಮಹದೇವಪ್ಪ ಏಕಾಏಕಿ ಮೈಸೂರಿನಲ್ಲಿನ ಧ್ರುವನಾರಾಯಣ್ ಅವರ ಮನೆಗೆ ಆಗಮಿಸಿ ಧ್ರುವನಾರಾಯಣ್ ಅವರ ಪುತ್ರನಿಗೆ ಸಾಂತ್ವನ ಹೇಳಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ನಾನು ನಂಜನಗೂಡು ಕ್ಷೇತ್ರದ ಟಿಕೆಟ್ ರೇಸ್‌ನಿಂದ ಹಿಂದೆ ಸರಿಯುತ್ತಿದ್ದೇನೆ. ದರ್ಶನ್ ಧ್ರುವನಾರಾಯಣ್‌ಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸುವ ಮೂಲಕ ಪ್ರಬುದ್ಧತೆ ಪ್ರದರ್ಶಿಸಿದ್ದಾರೆ.

    ಹೆಚ್.ಸಿ.ಮಹದೇವಪ್ಪರ ಈ ತೀರ್ಮಾನದಿಂದ ನಂಜನಗೂಡು ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಉಂಟಾಗಿದ್ದ ಗೊಂದಲ ಬಹುತೇಕ ಬಗೆಹರಿದಂತೆ ಕಾಣುತ್ತದೆ. ಆದರೆ ಈಗ ಪ್ರಶ್ನೆ ಇರೋದು ಮಹದೇವಪ್ಪ ಈಗ ಯಾವ ಕ್ಷೇತ್ರ ಹುಡುಕಿಕೊಳ್ಳುತ್ತಾರೆ ಎಂಬುದು. ಏಕೆಂದರೆ ಸ್ವಕ್ಷೇತ್ರವಾಗಿದ್ದ ಟಿ.ನರಸೀಪುರದಿಂದ ಮಗನನ್ನು ಕಣಕ್ಕೆ ಇಳಿಸೋಕೆ ಪ್ಲಾನ್ ಮಾಡಿರುವ ಕಾರಣ ಮಹದೇವಪ್ಪಗೆ ಸದ್ಯ ಹೊಸ ಕ್ಷೇತ್ರ ಹುಡುಕುವುದು ಅನಿವಾರ್ಯ. ಇದನ್ನೂ ಓದಿ: ಬಿಡಿಎದಿಂದ ಕರಗ ಮಂಟಪ ಅಭಿವೃದ್ಧಿಗೆ 6 ಕೋಟಿ ರೂ.: ಎಸ್.ಆರ್ ವಿಶ್ವನಾಥ್

  • ಪತ್ನಿಗೆ ಕ್ಯಾನ್ಸರ್ ಇದ್ರೂ ಲೆಕ್ಕಿಸದೆ ರಾಜಕೀಯದಲ್ಲಿ ತೊಡಗಿಸಿಕೊಂಡು ಮೆಚ್ಚುಗೆ ಗಳಿಸಿದ್ದರು: ಜಿ.ಟಿ ದೇವೇಗೌಡ

    ಪತ್ನಿಗೆ ಕ್ಯಾನ್ಸರ್ ಇದ್ರೂ ಲೆಕ್ಕಿಸದೆ ರಾಜಕೀಯದಲ್ಲಿ ತೊಡಗಿಸಿಕೊಂಡು ಮೆಚ್ಚುಗೆ ಗಳಿಸಿದ್ದರು: ಜಿ.ಟಿ ದೇವೇಗೌಡ

    ಬೆಂಗಳೂರು: ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಧ್ರುವನಾರಾಯಣ್ (R.Dhruvanarayan) ಅವರ ಸಾವಿಗೆ ಮಾಜಿ ಸಚಿವ ಜಿ.ಟಿ.ದೇವೇಗೌಡ (G.T.Devegowda) ಅವರು ಸಂತಾಪ ಸೂಚಿಸಿ ಅವರೊಂದಿಗಿನ ತಮ್ಮ ಸ್ನೇಹ ಮತ್ತು ಒಡನಾಟದ ಕುರಿತು ಮಾಹಿತಿಯನ್ನು ನೀಡಿದರು.

    ಪಬ್ಲಿಕ್ ಟಿವಿ (Public TV) ಜೊತೆ ಮಾತನಾಡಿದ ಅವರು, ನಾನು ಮತ್ತು ಧ್ರುವನಾರಾಯಣ್ ಅವರು 1980ರಲ್ಲಿ ರಾಜಶೇಖರ್ ಮೂರ್ತಿಯವರ ಪಾರ್ಲಿಮೆಂಟ್ ಚುನಾವಣೆ ಸಂದರ್ಭದಲ್ಲಿ ಸ್ನೇಹಿತರಾದೆವು. ಅವತ್ತಿನಿಂದ ಇವತ್ತಿನವರೆಗೂ ಕೂಡಾ ನಮ್ಮಿಬ್ಬರ ಸ್ನೇಹ ತುಂಬಾ ಗಟ್ಟಿಯಾಗಿತ್ತು. ಅವರು ಆರೋಗ್ಯವಂತರಾಗಿದ್ದರು. ಬೆಳಗ್ಗಿನಿಂದ ರಾತ್ರಿವರೆಗೂ ಕಾಯಕ ಕೆಲಸ ಮಾಡುತ್ತಿದ್ದರು. ಧ್ರುವನಾರಾಯಣ್ ಅವರ ಹೆಂಡತಿಗೆ ಬಹಳ ವರ್ಷಗಳಿಂದ ಕ್ಯಾನ್ಸರ್ (Cancer) ರೋಗ ಇದೆ. ಅದನ್ನು ಲೆಕ್ಕಿಸದೆ ಧ್ರುವನಾರಾಯಣ್ ಅವರು ಗುಲ್ಬರ್ಗ, ರಾಯಚೂರು, ಚಾಮರಾಜನಗರ, ಮೈಸೂರು ಎಂದು ರಾಜಕೀಯ ವಿಚಾರವಾಗಿ ಅಲ್ಲಿ ಇಲ್ಲಿ ಓಡಾಡುತ್ತಿದ್ದರು ಎಂದು ಮೆಚ್ಚುಗೆ ಸಲ್ಲಿಸಿದರು. ಇದನ್ನೂ ಓದಿ: ಧ್ರುವನಾರಾಯಣ್ ನಿಧನಕ್ಕೆ ಕಾರಣ ಬಿಚ್ಚಿಟ್ಟ ವೈದ್ಯ ಡಾ. ಮಂಜುನಾಥ್

    ಡಾ. ರೇವಣ್ಣ, ಅವರ ಕುಟುಂಬದ ಡಾಕ್ಟರ್ ಆಗಿದ್ದರು. ಸುದೀಪ್ ಎನ್ನುವವರು ಅವರ ಸ್ನೇಹಿತರಾಗಿದ್ದರು. ಅವರ ಜೊತೆ ಕುಳಿತುಕೊಂಡು ನಾವು ಯಾವಾಗಲೂ ರಾಜಕೀಯ ಚರ್ಚೆ ಮಾಡುತ್ತಿದ್ದೆವು. ವಿಜಯನಗರ (Vijayanagara) 4ನೇ ಹಂತದಲ್ಲಿ ಅವರ ಮನೆಯಿತ್ತು. ಫ್ರೀ ಇದ್ದಾಗೆಲ್ಲಾ ನಮ್ಮ ಮನೆಗೆ ಬರುತ್ತಿದ್ದರು. ಕಳೆದ ಎಂಟತ್ತು ದಿನಗಳಲ್ಲಿ ನಾವೆಲ್ಲರೂ ಭೇಟಿಯಾಗಿ ಜೊತೆಗೆ ಕಾಫಿ ಕುಡಿದಿದ್ದೆವು. ಸ್ನೇಹಕ್ಕೆ ಹಾಗೂ ಆತ್ಮೀಯತೆಗೆ ಧ್ರುವನಾರಾಯಣ್ ಅರ್ಹವಾದ ವ್ಯಕ್ತಿಯಾಗಿದ್ದರು. ನಂಬಿಕೆಗೆ ದ್ರೋಹವಿಲ್ಲ, ಮೋಸವಿಲ್ಲ. ದ್ವೇಷವಿಲ್ಲ. ಪ್ರೀತಿಯಿಂದ ರಾಜಕಾರಣ ಮಾಡುತ್ತಿದ್ದಂತಹ ಒಬ್ಬ ನಾಯಕನೆಂದರೆ ಅದು ಧ್ರುವನಾರಾಯಣ್ ಎಂದು ಹೇಳಿದರು. ಇದನ್ನೂ ಓದಿ: ಧ್ರುವನಾರಾಯಣ್ ನಿಧನಕ್ಕೆ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರಿಂದ ಸಂತಾಪ

    ಅದರ ಜೊತೆಗೆ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮನೆಗೆ ಬಂದಿದ್ದರು. ಅಲ್ಲದೇ ಚುನಾವಣೆ ಸೋತ ಬಳಿಕ ಮತ್ತೆ ನಮ್ಮ ಮನೆಗೆ ಬಂದು ನೀವೊಬ್ಬರು ನಮ್ಮ ಬೆಂಬಲಕ್ಕೆ ನಿಂತಿದ್ದರೆ ನಾನಿವತ್ತು ಗೆಲ್ಲುತ್ತಿದ್ದೆ. ಹೈಕಮಾಂಡ್ ನನ್ನ ಜೊತೆ ಚೆನ್ನಾಗಿದ್ದರು. ನನಗೆ ರಾಷ್ಟ್ರಮಟ್ಟದಲ್ಲಿ ಬೆಳೆಯುವ ಅವಕಾಶವಿತ್ತು. ಆದರೆ ಅದು ಕೈತಪ್ಪಿ ಹೋಯಿತು ಎಂದಿದ್ದರು.

    ನಾನಿನ್ನು ರಾಷ್ಟ್ರಮಟ್ಟಕ್ಕೆ ಹೋಗುವುದಿಲ್ಲ. ನಾವು ನೀವು ಸೇರಿಕೊಂಡು ಮುಂದೆ ರಾಜ್ಯಮಟ್ಟದಲ್ಲಿ ರಾಜಕೀಯ ಮಾಡೋಣ. ನಂಜನಗೂಡು (Nanjangud) ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುತ್ತೇನೆ. ಟಿಕೆಟ್ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಿದೆ. ಆದರೂ ಡಿ.ಕೆ.ಶಿವಕುಮಾರ್ (D.K.Shivakumar) ಹಾಗೂ ಖರ್ಗೆಯವರಿದ್ದಾರೆ. ಆದ್ದರಿಂದ ನನಗೇ ಟಿಕೆಟ್ ಸಿಗುತ್ತದೆ ಎಂದು ನುಡಿದಿದ್ದರು. ಇದನ್ನೂ ಓದಿ: ಧ್ರುವನಾರಾಯಣ್ ಕಾರ್ಯಾಧ್ಯಕ್ಷ ಅಲ್ಲ, ನನ್ನ ಕುಟುಂಬವಾಗಿದ್ದರು: ಕಣ್ಣೀರು ಹಾಕಿದ ಡಿಕೆಶಿ

    ಧ್ರುವನಾರಾಯಣ್ ಎಲ್ಲಿರುತ್ತಿದ್ದರೋ ಜನ ಅಲ್ಲಿರುತ್ತಿದ್ದರು. ಅವರು ಎಲ್ಲಾ ಜನರಿಗೆ ನೇರವಾಗಿ ಸ್ಪಂದಿಸುತ್ತಿದ್ದರು. ಜನಗಳ ಕಷ್ಟ ಸುಖಕ್ಕೆ ನೆರವಾಗುತ್ತಿದ್ದರು. ವರ್ಕಿಂಗ್ ಪ್ರೆಸಿಡೆಂಟ್ (Working President) ಆಗಿ ಅವರ ತರಹ ಊರೂರು ಸುತ್ತಿದವರು ಯಾರೂ ಇಲ್ಲ. ಸಭೆಗಳನ್ನು ನಡೆಸುತ್ತಿದ್ದರು, ಸಮಸ್ಯೆಗಳಿಗೆ ತಕ್ಕ ಉತ್ತರ ನೀಡುತ್ತಿದ್ದರು. ಅವರ ರಾಜಕೀಯದಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆ ಬರಲಿಲ್ಲ. ಅವರ ರಾಜಕೀಯದಲ್ಲಿ ಯಾವುದೇ ಒಂದು ಭ್ರಷ್ಟಾಚಾರದ (Corruption) ಆಪಾದನೆ ಇರಲಿಲ್ಲ ಎಂದರು.

    ಸರಳತೆ ಮತ್ತು ಸಜ್ಜನಿಕೆಗೆ ಹೆಸರಾಗಿರುವ ಧ್ರುವನಾರಾಯಣ್ ಅವರು ರಾಜ್ಯಕ್ಕೆ ಧ್ರುವ ತಾರೆಯಾಗಿದ್ದರು. ಕಾಂಗ್ರೆಸ್ (Congress) ಪಕ್ಷಕ್ಕೆ ಮಾತ್ರವಲ್ಲದೇ ರಾಜ್ಯಕ್ಕೂ ದೊಡ್ಡ ಆಸ್ತಿಯಾಗಿದ್ದರು. ಇವತ್ತಿನ ರಾಜಕೀಯದಲ್ಲಿ ಇಂತಹ ರಾಜಕಾರಣಿ ಸಿಗುವುದು ಅಪರೂಪ. ಇವರ ಸಾವು ತುಂಬಾ ಆಘಾತವನ್ನುಂಟುಮಾಡಿದೆ. ಇವರ ಅಭಿಮಾನಿಗಳಿಗೆ ಆ ದೇವರು ಈ ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ. ಇವರ ಕುಟುಂದವರು ಇವರದ್ದೇ ಮಾರ್ಗದಲ್ಲಿ ನಡೆದು ಅವರ ನಾಯಕತ್ವ ಗುಣಗಳನ್ನು ಉಳಿಸುವ ಶಕ್ತಿಯನ್ನು ಅವರ ಮಕ್ಕಳಿಗೆ ನೀಡಲಿ. ಅವರ ಪತ್ನಿಗೆ ಆರೋಗ್ಯ ಸ್ಥಿತಿಯನ್ನು ಕಾಪಾಡಲಿ. ಧ್ರುವನಾರಾಯಣ್ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೊಡಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್‌ ಇನ್ನಿಲ್ಲ

  • ಧ್ರುವನಾರಾಯಣ್ ನಿಧನಕ್ಕೆ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರಿಂದ ಸಂತಾಪ

    ಧ್ರುವನಾರಾಯಣ್ ನಿಧನಕ್ಕೆ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರಿಂದ ಸಂತಾಪ

    ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ (Dhruva Narayan) ನಿಧನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi), ರಣದೀಪ್ ಸಿಂಗ್ ಸುರ್ಜೇವಾಲಾ (Randeep Singh Surjewala), ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah)  ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

    ಧ್ರುವನಾರಾಯಣ ನಿಧನದಿಂದ ತೀವ್ರ ದುಃಖ ಮತ್ತು ನೋವಾಗಿದೆ. ಅವರು ಕೇವಲ ತಳಮಟ್ಟದ ರಾಜಕೀಯ ವ್ಯಕ್ತಿಯಾಗಿರಲಿಲ್ಲ, ಅತ್ಯುತ್ತಮ ವ್ಯಕ್ತಿಯಾಗಿದ್ದರು. ಅವರ ನಿಧನವು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ನಷ್ಟವಲ್ಲ. ನನಗೂ ವೈಯಕ್ತಿಕವಾಗಿ ದೊಡ್ಡ ನಷ್ಟವಾಗಿದೆ ಎಂದು ಧ್ರುವನಾರಾಯಣ್‌ ನಿಧನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದರು.

    ಕಾಂಗ್ರಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಮಾಜಿ ಸಂಸದ ಆರ್. ಧ್ರುವನಾರಾಯಣ್ ಹಠಾತ್ ನಿಧನದಿಂದ ದುಃಖವಾಗಿದೆ. ಕಷ್ಟಪಟ್ಟು ದುಡಿಯುವ ಮತ್ತು ತಳಮಟ್ಟದ ನಾಯಕ, NSUI ಮತ್ತು ಯೂತ್ ಕಾಂಗ್ರೆಸ್ ಮೂಲಕ ಬಂದ ಸಾಮಾಜಿಕ ನ್ಯಾಯದ ನಾಯಕರಾಗಿದ್ದರು. ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟವಾಗಿದ್ದು, ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ನನ್ನ ಆತ್ಮೀಯರಾದ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಾಜಿ ಸಂಸದ ಧ್ರುವನಾರಾಯಣ್ ಅವರ ಹಠಾತ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿಕೋರುತ್ತೇನೆ.

    ರಾಜಕೀಯ ನಾಯಕ ಮತ್ತು ಸಂಸದೀಯ ಪಟುವಾಗಿ ತನ್ನ ಶ್ರಮ, ಪ್ರಬುದ್ಧತೆ ಮತ್ತು ಬದ್ಧತೆಯಿಂದ ಅತ್ಯುನ್ನತ ಸ್ಥಾನಕ್ಕೇರುವ ಎಲ್ಲ ಲಕ್ಷಣಗಳನ್ನು ಹೊಂದಿದ್ದ ಧ್ರುವನಾರಾಯಣ್ ಅವರ ಬದುಕು ಅರ್ಧ ದಾರಿಯಲ್ಲಿಯೇ ಕೊನೆಗೊಂಡಿದ್ದು, ನಾಡಿಗೆ ಮತ್ತು ಜನತೆಗೆ ತುಂಬಲಾರದ ನಷ್ಟವಾಗಿದೆ. ಅವರ ಸಾಧನೆಯ ಬದುಕು ಶಾಶ್ವತವಾಗಿ ನಮ್ಮ ನೆನಪಲ್ಲಿರುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧ್ರುವನಾರಾಯಣ್‌ ನಿಧನ – ಪ್ರಜಾಧ್ವನಿ ಯಾತ್ರೆ ರದ್ದು

    ರಣದೀಪ್ ಸಿಂಗ್ ಸುರ್ಜೆವಾಲಾ ಮಾತನಾಡಿ, ಸದಾ ನಗುಮುಖದ ಗೆಳೆಯ, ಕಾಂಗ್ರೆಸ್‌ ನಾಯಕ ಧ್ರುವನಾರಾಯಣ್ ಅವರ ನಿಧನದ ನಷ್ಟವನ್ನು ಯಾವುದೇ ಪದಗಳಿಂದ ವಿವರಿಸಲು ಸಾಧ್ಯವಿಲ್ಲ. ಬಡವರ ಸೇವೆಗಾಗಿ ಸದಾ ದುಡಿಯುತ್ತಿದ್ದ ಅವರನ್ನು  ಶಾಶ್ವತವಾಗಿ ಕಳೆದುಕೊಳ್ಳುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಧ್ರುವನಾರಾಯಣ್ ಕಾರ್ಯಾಧ್ಯಕ್ಷ ಅಲ್ಲ, ನನ್ನ ಕುಟುಂಬವಾಗಿದ್ದರು: ಕಣ್ಣೀರು ಹಾಕಿದ ಡಿಕೆಶಿ

  • ಧ್ರುವನಾರಾಯಣ್ ಕಾರ್ಯಾಧ್ಯಕ್ಷ ಅಲ್ಲ, ನನ್ನ ಕುಟುಂಬವಾಗಿದ್ದರು: ಕಣ್ಣೀರು ಹಾಕಿದ ಡಿಕೆಶಿ

    ಧ್ರುವನಾರಾಯಣ್ ಕಾರ್ಯಾಧ್ಯಕ್ಷ ಅಲ್ಲ, ನನ್ನ ಕುಟುಂಬವಾಗಿದ್ದರು: ಕಣ್ಣೀರು ಹಾಕಿದ ಡಿಕೆಶಿ

    ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ (Dhruva Narayan) ನನ್ನ ಕಾರ್ಯಾಧ್ಯಕ್ಷ ಅಲ್ಲ. ನನ್ನ ಕುಟುಂಬವಾಗಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಕಂಬನಿ ಮಿಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ಬಗ್ಗೆ ನಮ್ಮ ಡಾಕ್ಟರ್ ಮಾಹಿತಿ ನೀಡಿದರು. ಧ್ರುವನಾರಾಯಣ್ ಅವರಿಗೆ ರಕ್ತದ ವಾಂತಿ ಆಗಿದೆ. ಆಮೇಲೆ ಉಸಿರಾಟ ಸಮಸ್ಯೆ ಆಗಿದೆ ಎಂದ ಅವರು, ಧ್ರುವ ನಾರಾಯಣ್ ನಿಧನದಿಂದಾಗಿ ಇಡೀ ಕಾಂಗ್ರೆಸ್ ಕುಟುಂಬಕ್ಕೆ ನಷ್ಟ ಆಗಿದೆ. ಸಂಭಾವಿ ರಾಜಕಾರಣಿ, ಮಾನವೀಯ, ಸ್ನೇಹ, ಪ್ರೀತಿ ಯಾರನ್ನು ನೋವಿಸಬಾರದು ಅಂತ ಗುಣ ಇತ್ತು. ಎಲ್ಲಾ ಸಮಾಜ, ವರ್ಗದವರು ಪ್ರೀತಿಯಿಂದ ನೋಡುತ್ತಿದ್ದರು. ಅನೇಕ ಬಾರಿ ನನಗೆ ಸಮಾಧಾನ ಮಾಡಿದ್ದರು. ನಮಗೆ ದೊಡ್ಡ ಶಕ್ತಿ ಆಗಿದ್ದರು. ಅವರು ನನ್ನ ಕಾರ್ಯಾಧ್ಯಕ್ಷ ಅಲ್ಲ. ನನ್ನ ಕುಟುಂಬವಾಗಿದ್ದರು. ನಮ್ಮ ಪಕ್ಷ ಕಾರ್ಯಕರ್ತರಿಗೆ ದೊಡ್ಡ ಆಸ್ತಿ ಆಗಿದ್ದರು. ಅವರ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು ಎಂದು ತಿಳಿಸಿದರು.

    ಸೋನಿಯಾ, ರಾಹುಲ್ ಗಾಂಧಿ (Rahul Gandhi), ಖರ್ಗೆ ಫೋನ್ ಮಾಡಿದ್ದರು. ಅವರಿಗೂ ನಂಬೋದಕ್ಕೆ ಆಗ್ತಿಲ್ಲ. ನಮ್ಮ ಹೃದಯ ಗೆದ್ದವರು. ನನ್ನ ಸ್ನೇಹಿತ, ಸಹೋದರರಾಗಿದ್ದರು. ಕಾಂಗ್ರೆಸ್ ಕಚೇರಿಯಲ್ಲಿ 11 ಗಂಟೆಗೆ ಶ್ರದ್ಧಾಂಜಲಿ ಸಭೆ ಇದೆ. ರಾಮನಗರ ಪ್ರಜಾಧ್ವನಿ ಕ್ಯಾನ್ಸಲ್ ಮಾಡಿದ್ದೇವೆ. ಸಂಜೆ ಒಳಗೆ ಅಂತ್ಯಸಂಸ್ಕಾರ ಮಾಡಿ ಅಂತ ನನ್ನ ಅಭಿಪ್ರಾಯ ಹೇಳಿದ್ದೇವೆ. ಇದರ ಬಗ್ಗೆ ಅ ಕುಟುಂಬದವರು ಮುಂದಿನ ನಿರ್ಧಾರ ಮಾಡ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಧ್ರುವನಾರಾಯಣ್‌ ನಿಧನ – ಪ್ರಜಾಧ್ವನಿ ಯಾತ್ರೆ ರದ್ದು

    ಕೋವಿಡ್ ಸಮಯದಲ್ಲಿ ರಾಜ್ಯ ಸುತ್ತಿ ಕೆಲಸ ಮಾಡಿದ್ದರು. ಆಕ್ಸಿಜನ್ ದುರಂತದಲ್ಲಿ ತೆಗೆದುಕೊಂಡ ಶ್ರಮ ಬದ್ಧತೆ ಅದನ್ನ ಮರೆಯಲು ಸಾಧ್ಯವಿಲ್ಲ. ದೇವರು ಇಂತಹ ಕ್ರೂರಿ ಆಗಿದ್ದಾನೆ. ದೇವರು ಇದ್ದಾನೋ ಇಲ್ಲವೋ ಅಂತ ಅನ್ನಿಸುತ್ತಿದೆ. ಭಗವಂತ ಅವರ ಕುಟುಂಬಕ್ಕೆ ಅವರ ಅಗಲಿಕೆ ಭರಿಸೋ ಶಕ್ತಿ ಕೊಡಲಿ. ಬಂಧನ, ಸ್ನೇಹ ಶಾಶ್ವತವಾಗಿ ಉಳಿಯುತ್ತದೆ. ಅವರ ಕುಟುಂಬದರು ಅಂತ್ಯ ಸಂಸ್ಕಾರದ ಬಗ್ಗೆ ಮಾಹಿತಿ ಕೊಡ್ತಾರೆ. ಶ್ರದ್ಧಾಂಜಲಿ ಸಭೆ ಮುಗಿಸಿ ಮೈಸೂರಿಗೆ ನಾನು ಹೋಗುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್‌ ಇನ್ನಿಲ್ಲ

  • ಧ್ರುವನಾರಾಯಣ್‌ ನಿಧನ – ಪ್ರಜಾಧ್ವನಿ ಯಾತ್ರೆ ರದ್ದು

    ಧ್ರುವನಾರಾಯಣ್‌ ನಿಧನ – ಪ್ರಜಾಧ್ವನಿ ಯಾತ್ರೆ ರದ್ದು

    ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್‌ (Dhruva Narayan) ಅವರ ನಿಧನದ ಹಿನ್ನೆಲೆಯಲ್ಲಿ ಇಂದು ರಾಮನಗರದಲ್ಲಿ  ನಡೆಯಬೇಕಿದ್ದ ಪ್ರಜಾಧ್ವನಿ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ (DK Shivakumar) ತಿಳಿಸಿದ್ದಾರೆ.

    ರಾಮನಗರದಲ್ಲಿ (Ramanagara) ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ನೇತೃತ್ವದಲ್ಲಿ ಇಂದು ರಾಮನಗರ ಕ್ಷೇತ್ರದ ಮೂರು ಕಡೆ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ರಾಮನಗರ ತಾಲೂಕಿನ ಮರಳವಾಡಿ, ಹಾರೋಹಳ್ಳಿ ಹಾಗೂ ರಾಮನಗರ ಜೂನಿಯರ್ ಕಾಲೇಜು ಮೈದಾನದಲ್ಲಿ ವೇದಿಕೆ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಆದರೆ ಧ್ರುವ ನಾರಾಯಣ್‌ ಅವರ ನಿಧನದಿಂದಾಗಿ ಪ್ರಜಾಧ್ವನಿ ಕಾರ್ಯಕ್ರಮ ಮುಂದೂಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ‌ ಶಿವಕುಮಾರ್, ಸಂಸದ ಡಿಕೆ‌‌ ಸುರೇಶ್‌ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ ಯಾತ್ರೆ ರದ್ದು ಮಾಡಲಾಗಿದೆ. ಇದನ್ನೂ ಓದಿ: ಡಿಸ್ಕೌಂಟ್ ಸಮಯ ವಿಸ್ತರಣೆಯಾದ್ರೂ, ಟ್ರಾಫಿಕ್ ಫೈನ್ ಕಟ್ಟೋಕೆ ಆಸಕ್ತಿ ತೋರದ ವಾಹನ ಸವಾರರು

    ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್‌ ಅವರು ಶನಿವಾರ ಹೃದಯಾಘಾತದಿಂದ (Heart Attack) ಮೈಸೂರಿನ (Mysuru) ಡಿಆರ್‌ಎಂಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ 2 ವರ್ಷದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಈ ಬಾರಿ ನಂಜನಗೂಡಿನಿಂದ ವಿಧಾನಸಭೆ ಚುನಾವಣೆ ಸ್ಪರ್ಧೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. 2 ಬಾರಿ ಶಾಸಕ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಇದನ್ನೂ ಓದಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್‌ ಇನ್ನಿಲ್ಲ

  • ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ ಖಚಿತ: ಧ್ರುವನಾರಾಯಣ್

    ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ ಖಚಿತ: ಧ್ರುವನಾರಾಯಣ್

    ಚಾಮರಾಜನಗರ: ಜೆಡಿಎಸ್ ನ ಮತ್ತೊಂದು ವಿಕೆಟ್ ಪತನವಾಗುವ ಸಾಧ್ಯತೆಯಿದೆ. ಹಾಸನದ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ ಬಹುತೇಕ ಖಚಿತವಾಗಿದೆಯಂತೆ.

    ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆ. ಈ ಬಗ್ಗೆ ಈಗಾಗಲೇ ಶಿವಲಿಂಗೇಗೌಡ ಅವರೊಂದಿಗೆ ಮಾತುಕತೆ ಕೂಡ ನಡೆದಿದೆ. ಅವರು ಜೆಡಿಎಸ್ ತೊರೆಯಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ.

    ಇತ್ತೀಚಿನ ಯಾವುದೇ ಜೆಡಿಎಸ್ ಕಾರ್ಯಕ್ರಮದಲ್ಲೂ ಅವರು ಭಾಗಿಯಾಗಿಲ್ಲ. ಅಲ್ಲದೇ ಮತ್ತೊಬ್ಬ ಜೆಡಿಎಸ್ ಶಾಸಕ ಎ.ಟಿ ರಾಮಸ್ವಾಮಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ನಂಗೆ ಗೊತ್ತಿಲ್ಲ ಅವರು ನನ್ನ ಜೊತೆಗೆ ಮಾತನಾಡಿಲ್ಲ ಅಂತಾ ತಿಳಿಸಿದರು. ಇದನ್ನೂ ಓದಿ: ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಜೆಪಿ ಬಳಿ ಯಾವುದೇ ಅಸ್ತ್ರ ಇಲ್ಲದೆ ಮತ್ತೆ ಹಿಜಬ್ ಸಂಘರ್ಷ ಹುಟ್ಟು ಹಾಕಿದೆ: ಧ್ರುವನಾರಾಯಣ್

    ಬಿಜೆಪಿ ಬಳಿ ಯಾವುದೇ ಅಸ್ತ್ರ ಇಲ್ಲದೆ ಮತ್ತೆ ಹಿಜಬ್ ಸಂಘರ್ಷ ಹುಟ್ಟು ಹಾಕಿದೆ: ಧ್ರುವನಾರಾಯಣ್

    ಚಾಮರಾಜನಗರ: ಬಿಜೆಪಿ ಬಳಿ ಯಾವುದೇ ಅಸ್ತ್ರ ಇಲ್ಲದೆ ಮತ್ತೆ ಹಿಜಬ್ ಸಂಘರ್ಷ ಹುಟ್ಟು ಹಾಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಆರೋಪಿಸಿದರು.

    ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಆಡಳಿತವಿದೆ. ಜನರಲ್ಲಿ ಸಾಮರಸ್ಯ ಮೂಡಿಸುವುದು ಸರ್ಕಾರದ ಕರ್ತವ್ಯವಾಗಿದೆ. ಕಾನೂನು ಸುವ್ಯವಸ್ಥೆ ಸರಿಯಾಗಿ ಕಾಪಾಡಬೇಕು. ಧರ್ಮ-ಧರ್ಮಗಳ ನಡುವೆ ಕಂದಕ ಮೂಡಿಸಬಾರದು. ಎಂಇಎಸ್ ಪುಂಡಾಟ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪುಡಾಂಟಿಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಕನ್ನಡಿಗರ ರಕ್ಷಣೆ ಸರ್ಕಾರದ ಜವಾಬ್ದಾರಿ. ಈ ಸರ್ಕಾರವೇನು ಮಲಗಿದಿಯಾ? ಗೃಹ ಸಚಿವರು ಏನ್ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ರೋಮಿಯೋನ ಭಾವನೆಗಳ ಕಥನ – ಡೈಲಾಗ್‍ನಲ್ಲಿ ಕಾಮಿಡಿ ಹೂರಣ 

    ಕರ್ನಾಟಕದಲ್ಲಿ ಕನ್ನಡಿಗರ ರಕ್ಷಣೆ ಇಲ್ಲ ಅಂದ್ರೆ ಹೇಗೆ? ಯಾರೂ ಗಲಾಟೆ ಮಾಡ್ತಾರೋ ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಐಟಿ, ಇಡಿ, ಸಿಬಿಐಗಳು ಬಿಜೆಪಿಯ ಅಂಗಸಂಸ್ಥೆಗಳಾಗಿದ್ದು, ಇವುಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳನ್ನು ಸದೆ ಬಡಿಯುವ ಕೆಲಸ ಆಗುತ್ತಿದೆ ಎಂದು ಕಿಡಿಕಾರಿದರು.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದನ್ನೆಲ್ಲ ಕಾನೂನಾತ್ಮಕವಾಗಿ ಎದುರಿಸುತ್ತಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಹುದ್ದೆಗೆ 2,500 ಕೋಟಿ ರೂ. ಕೊಡಬೇಕು. ಈಗಿನ ಮಂತ್ರಿಮಂಡಲದಲ್ಲಿ ಮಂತ್ರಿಯೊಬ್ಬರು 100 ಕೋಟಿ ರೂ. ಕೊಟ್ಟಿದ್ದಾರೆ. ಅಂದ್ರು ಮೊದಲು ಅವರಿಗೆ ನೋಟಿಸ್ ಕೊಡಬೇಕಿತ್ತು, ತನಿಖೆ ಮಾಡಬೇಕಿತ್ತು. ಈ ಬಗ್ಗೆ ಮಾತ್ರ ಯಾರೂ ಚಕಾರ ತೆಗೆಯುವುದಿಲ್ಲ. ಪ್ರಿಯಾಂಕಾ ಖರ್ಗೆ ಪಿಎಸ್‍ಐ ಪರೀಕ್ಷೆ ಅಕ್ರಮ ಬಯಲಿಗೆಳೆದರು ಅಂತ ಅವರಿಗೆ ನೋಟೀಸ್ ಕೊಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:  ಸ್ಕಿಡ್ ಆಗಿ ಕಮರಿಗೆ ಬಿದ್ದ ಸೈನಿಕರ ವಾಹನ: ಮೃತಪಟ್ಟ 7 ಯೋಧರು ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್‍ಗೆ ಸಪೋರ್ಟ್ ಮಾಡಿದವರ ಮನೆ ಮೇಲೆ ದಾಳಿ ಮಾಡ್ತಾರೆ. ಚುನಾವಣೆಯಲ್ಲಿ ಅವರನ್ನು ಬಗ್ಗು ಬಡಿಯುವ ಕೆಲಸವಾಯ್ತು. ಬಿಜೆಪಿ, ವಿರೋಧ ಪಕ್ಷದವರನ್ನ ಗುರಿಯಾಗಿಸಿಕೊಂಡು ಈ ರೀತಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಹೀಗೆಲ್ಲ ಮಾಡಿರಲಿಲ್ಲ ಇದೊಂದು ದೊಡ್ಡ ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  • ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಸಂಪೂರ್ಣ ವಿಫಲ: ಧ್ರುವನಾರಾಯಣ್

    ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಸಂಪೂರ್ಣ ವಿಫಲ: ಧ್ರುವನಾರಾಯಣ್

    ಶಿವಮೊಗ್ಗ: ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಆರೋಪಿಸಿದ್ದಾರೆ.

    ಶಿವಮೊಗ್ಗದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಭ್ರಷ್ಟಾಚಾರ ನಿಯಂತ್ರಣ ಮಾಡಲು ಪ್ರಯತ್ನ ಮಾಡಲಿಲ್ಲ. ಮುಖ್ಯಮಂತ್ರಿ ಆದ ನಂತರ ಪರಿಣಾಮಕಾರಿಯಾಗಿ ಕೆಲಸ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ; ಹಣ ಇದ್ದವರು ಮಾತ್ರ ಸಿಎಂ ಆಗ್ತಾರೆ ಅನ್ನೋದು ಇತಿಹಾಸದಲ್ಲೇ ಇಲ್ಲ – ಯತ್ನಾಳ್‍ಗೆ ಶ್ರೀರಾಮುಲು ತಿರುಗೇಟು

    ಇದೇ ವೇಳೆ ಬಸವರಾಜ್ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದರು. ಈ ಹಿಂದೆ ಬಸವರಾಜ್ ಬೊಮ್ಮಾಯಿ ಅವರು ಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದರು. ಆದರೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಸಂಪೂರ್ಣ ವಿಫಲರಾಗಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ; ವಿಜಯಪುರ ಹೆಚ್ಚು ಕಡಿಮೆ ಪಾಕಿಸ್ತಾನ ಇದ್ದಂಗೆ ಇದೆ: ಯತ್ನಾಳ್‌

  • ಬಿಜೆಪಿಯವರಿಗೆ ಆಡಳಿತ ನಡೆಸಲು ಬರಲ್ಲ: ಧ್ರುವನಾರಾಯಣ್

    ಬಿಜೆಪಿಯವರಿಗೆ ಆಡಳಿತ ನಡೆಸಲು ಬರಲ್ಲ: ಧ್ರುವನಾರಾಯಣ್

    ಮಂಡ್ಯ: ಬಿಜೆಪಿ ಅವರಿಗೆ ಆಡಳಿತ ನಡೆಸಲು ಬರುವುದಿಲ್ಲ. ಇದರಿಂದಲೇ ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣದಲ್ಲಿ ಗುಪ್ತಚರ ಇಲಾಖೆ ಏನು ಮಾಡುತ್ತಿದೆ. ಗುಪ್ತಚರ ಇಲಾಖೆ ಸತ್ತೋಗಿದಿಯಾ?, ಗೃಹ ಸಚಿವರ ಜಿಲ್ಲೆಯಲ್ಲೆ ಇಂತಹ ಘಟನೆ ನಡೆದಿದೆ. ಈ ಘಟನೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

    ಕಾನೂನು ಸುವ್ಯವಸ್ಥೆ ನಿರ್ವಹಣೆ ಮಾಡುವುದು ಸರ್ಕಾರದ ಕೆಲಸವಾಗಿದೆ. ಆದರೆ ಕೊಲೆಯಾದ ಹರ್ಷನ ಜೀವಕ್ಕೆ ಅಪಾಯ ಇತ್ತು ಎಂದು ಅವರ ತಂದೆಯೆ ಹೇಳಿದ್ದಾರೆ. ಇದು ಗೊತ್ತಿದ್ದರು ಪೊಲೀಸ್ ಇಲಾಖೆ ಏನು ಮಾಡುತ್ತಿತ್ತು. ಕಾನೂನು ಸುವ್ಯವಸ್ಥಿತ ನಿರ್ವಹಣೆ ಮಾಡಲು ಸಾಧ್ಯವಾಗದೆ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಗುಡುಗಿದರು.

    ಕೊಲೆಗಾರರ ವಿರುದ್ಧ ಉಗ್ರಕ್ರಮ ತೆಗೆದುಕೊಳ್ಳಬೇಕು. ಹಿಂದೂ, ಮುಸ್ಲಿಂ, ಕ್ರೈಸ್ತ ಯಾವ ಧರ್ಮದವರೆ ಆಗಲಿ ಅವರ ವಿರುದ್ಧ ಕ್ರಮ ಜರುಗಿಸಬೇಕು. ನಾವು ಯಾರ ಪರವು ವಕಾಲತ್ತು ವಹಿಸುವುದಿಲ್ಲ. ಮೊದಲು ಬಿಜೆಪಿಯವರು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಯಬೇಕು ಎಂದರು. ಇದನ್ನೂ ಓದಿ: ಯಾವುದೇ ದೇಶದ್ರೋಹಿಯನ್ನು ಬಿಡೋದಿಲ್ಲ, ಮಟ್ಟ ಹಾಕ್ತೀವಿ: ಆರ್. ಅಶೋಕ್

    ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಈಶ್ವರಪ್ಪರನ್ನು ಮಂತ್ರಿಮಂಡಳದಿಂದ ಮೊದಲು ವಜಾ ಮಾಡಬೇಕು. ಬಿಜೆಪಿಯವರು ಹೇಳೋದು ಒಂದು ನಡೆದುಕೊಳ್ಳುವುದು ಮತ್ತೊಂದು. ರಾಷ್ಟ್ರ ಧ್ವಜ ಅಪಮಾನ ಮಾಡಿದ್ದಾರೆ. ಬಿಜೆಪಿಯವರು ಹೇಳುವಂತೆ ನಡೆದರೆ ಸಚಿವ ಈಶ್ವರಪ್ಪನ್ನ ವಜಾ ಮಾಡಬೇಕಿತ್ತು ಎಂದು ಆಗ್ರಹಿಸಿದರು. ಇದನ್ನೂ ಓದಿ: ಹರ್ಷನ ಕೊಲೆ ರಾಜಕೀಯ ಪ್ರೇರಿತವೋ ಎಂಬ ಆಯಾಮದಲ್ಲಿ ತನಿಖೆ: ಆರಗ ಜ್ಞಾನೇಂದ್ರ