Tag: ಧ್ರವ ಕಲ್ಯಾಣ

  • ಭಜರಂಗಿ ಸಮ್ಮುಖದಲ್ಲಿ ಧ್ರುವ-ಪ್ರೇರಣಾ ಆರತಕ್ಷತೆ

    ಭಜರಂಗಿ ಸಮ್ಮುಖದಲ್ಲಿ ಧ್ರುವ-ಪ್ರೇರಣಾ ಆರತಕ್ಷತೆ

    ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಭಜರಂಗಿ ಸಮ್ಮುಖದಲ್ಲಿಯೇ ಆರತಕ್ಷತೆ ನಡೆಯುತ್ತಿದೆ.

    ನಟ ಧ್ರುವ ಸರ್ಜಾ ಹನುಮನ ಭಕ್ತ ಆಗಿರುವದರಿಂದ ವೇದಿಕೆ ಮಧ್ಯಭಾಗದಲ್ಲಿ ವಾಯುಪುತ್ರ ಆಂಜನೇಯ ಮೂರ್ತಿ ಸ್ಥಾಪನೆ ಮಾಡಲಾಗಿದೆ. ವೇದಿಕೆ ಕಾರ್ನೇಷಿಯಾ, ಆರ್ಕೆಡ್, ಬಿಳಿ ಮತ್ತು ಕೆಂಪು ಗುಲಾಬಿಗಳಿಂದ ಅಲಂಕೃತಗೊಳಿಸಲಾಗಿದೆ. ವಧು ಪ್ರೇರಣಾ ಸಬ್ಯಸಾಚಿ ವೆಡ್ಡಿಂಗ್ ಕಲೆಕ್ಷನ್ ಬಾಟಲ್ ಗ್ರೀನ್ ಲೆಹೆಂಗಾದಲ್ಲಿ ಮಿಂಚುತ್ತಿದ್ದಾರೆ. ಇತ್ತ ಧ್ರುವ ಸರ್ಜಾ ಇಟಲಿಯಿಂದ ತರಲಾಗಿರುವ ವೆಸ್ಟ್ ಕೋಟ್ ಮತ್ತು ಬ್ಲೇಸರ್ ಧರಿಸಿದ್ದಾರೆ.

    ಆರತಕ್ಷತೆ ಕಾರ್ಯಕ್ರಮಕ್ಕೆ ಚಂದನವನದ ತಾರೆಯರು ಸೇರಿದಂತೆ ರಾಜಕಾರಣಿಗಳು ಆಗಮಿಸಿ ವಧು-ವರರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಸಚಿವ ಆರ್.ಅಶೋಕ್, ನಿರ್ಮಾಪಕ ಕೆ.ಮಂಜು, ಲಹರಿ ಸಂಸ್ಥೆಯ ಲಹರಿ ವೇಲು, ಸಾರಾ ಗೋವಿಂದ್ ಸೇರಿದಂತೆ ಹಲವು ಗಣ್ಯರು ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.