Tag: ಧ್ಯಾನ

  • ಗವಿ ಮಠದ ಆವರಣದಲ್ಲಿ ನಾಗದೇವರ ಮುಂದೆ ಧ್ಯಾನಕ್ಕೆ ಕುಳಿತ ಮುಸ್ಲಿಂ ಮಹಿಳೆ

    ಗವಿ ಮಠದ ಆವರಣದಲ್ಲಿ ನಾಗದೇವರ ಮುಂದೆ ಧ್ಯಾನಕ್ಕೆ ಕುಳಿತ ಮುಸ್ಲಿಂ ಮಹಿಳೆ

    ಕೊಪ್ಪಳ: ಇಲ್ಲಿನ ಗವಿ ಮಠ (Gavi Math) ವಿಶೇಷ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ಮುಸ್ಲಿಂ ಮಹಿಳೆಯೊಬ್ಬರು (Muslim Woman) ಗವಿ ಮಠದ ಆವರಣದಲ್ಲಿ ನಾಗದೇವರ ಮುಂದೆ ಧ್ಯಾನಕ್ಕೆ ಕುಳಿತು ಗಮನಸೆಳೆದಿದ್ದಾರೆ.

    ಕೊಪ್ಪಳ (Koppal) ಜಿಲ್ಲೆ ಯಲಬುರ್ಗಾ ತಾಲೂಕಿನ ಕುದರಿ ಮೋತಿ ನಿವಾಸಿ ಹಸೀನಾ ಬೇಗಂ ನಾಗ ದೇವರ ಮುಂದೆ ಧ್ಯಾನಕ್ಕೆ ಕುಳಿತ ಮಹಿಳೆ. ಹಸೀನಾ ಬೇಗಂ ಕಳೆದ ಎಂಟು ದಿನಗಳಿಂದ ಗವಿ ಮಠಕ್ಕೆ ಬಂದು ದ್ಯಾನ ಮಾಡುತ್ತಿದ್ದಾರೆ. ಗವಿ ಮಠದಲ್ಲಿ ನಿರಂತರ ಒಂದು ಗಂಟೆಗಳ ಕಾಲ ಧ್ಯಾನದಲ್ಲಿ ತೊಡಗಿದ್ದಾರೆ. 90%ನಷ್ಟು ಹಿಂದೂ ಧರ್ಮದವರು ಗವಿ ಮಠಕ್ಕೆ ಬರುತ್ತಾರೆ. ಆದರೆ ಆವರಣದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಧ್ಯಾನ ಮಾಡುತ್ತಿರುವುದು ವಿಶೇಷವಾಗಿದೆ. ಇದನ್ನೂ ಓದಿ: ಅಂಗಡಿ ಬಳಿ ಕುಳಿತವನ ಮೇಲೆ ಡೆಡ್ಲಿ ಅಟ್ಯಾಕ್ – ಚಿಕಿತ್ಸೆ ಫಲಿಸದೇ ಯುವಕ ಸಾವು

    ಹಸೀನಾ ಬೇಗಂ ಮಾನಸಿಕ ನೆಮ್ಮದಿಗಾಗಿ ಇಲ್ಲಿ ಧ್ಯಾನ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಗವಿ ಮಠದ ಶ್ರೀಗಳು ನಿತ್ಯ ಸಂಜೆ ಸಮಯದಲ್ಲಿ ಕುಳಿತುಕೊಳ್ಳುವ ಜಾಗದ ಮುಂದೆಯೆ ಹಸೀನಾ ಧ್ಯಾನಕ್ಕೆ ಕುಳಿತುಕೊಳ್ಳುತ್ತಾರೆ. ಒಟ್ಟು 11 ಧ್ಯಾನ ಮಾಡೋದಾಗಿ ಬೇಡಿಕೊಂಡಿರೋ ಹಸಿನಾ ಬೇಗಂ, ನಾಗದೇವರ ಮುಂದೆ ನಿತ್ಯ ಒಂದು ಗಂಟೆಗಳ ಕಾಲ ಧ್ಯಾನ ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಧಾನಗರಿ ಜಲಾಶಯದಿಂದ 4 ಗೇಟ್‌ಗಳ ಮೂಲಕ ನೀರು ಬಿಡುಗಡೆ – ದೂದ್‌ಗಂಗಾ ನದಿ ತೀರದಲ್ಲಿ ಹೈಅಲರ್ಟ್

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಹಸೀನಾ ಬೇಗಂ, ನನ್ನ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ಇಲ್ಲಿ ಧ್ಯಾನಕ್ಕೆ ಕೂರುತ್ತೇನೆ ಎಂದು ಗವಿಮಠದ ಶ್ರೀಗಳನ್ನು ಕೇಳಿದ್ದೆ. ನಿನ್ನ ಮನಸ್ಸಿಗೆ ನೆಮ್ಮದಿ ಸಿಗುವುದಾದರೆ ಕೂರು ಎಂದು ಹೇಳಿದ್ದರು. ನಾನು 2013ರಿಂದ ಮಠಕ್ಕೆ ಬರುತ್ತಿದ್ದೇನೆ. ನನಗೆ ಸಮಯ ಸಿಕ್ಕಾಗೆಲ್ಲ ಇಲ್ಲಿಗೆ ಬಂದು 10 ನಿಮಿಷ ಕುಳಿತುಕೊಂಡು ಹೋಗುತ್ತೇನೆ. ನನಗೆ ಕಷ್ಟ ಇತ್ತು, ಅದಕ್ಕೆ ಇಲ್ಲಿಗೆ ಬಂದಿದ್ದೇನೆ. ಎಂಟು ದಿನಗಳ ಹಿಂದೆ ನನಗೆ ನಿಲ್ಲಲು ಆಗುತ್ತಿರಲಿಲ್ಲ. ನಾನು ಇಲ್ಲಿಗೆ ಬಂದ ವೇಳೆ ಜೋರು ಮಳೆ ಬರುತ್ತಿತ್ತು. ಆ ಮಳೆಯಲ್ಲೇ ಧ್ಯಾನಕ್ಕೆ ಕುಳಿತುಕೊಂಡೆ. ಇವತ್ತು ನನ್ನ ಮನಸ್ಸಿಗೆ ನೆಮ್ಮದಿ ಅನಿಸಿದೆ. ಹಿಂದೂ-ಮುಸ್ಲಿಂ ಅನ್ನೋದು ನನ್ನಲಿಲ್ಲ. ಇದು ನಮ್ಮ ಮಠ. ನನಗೆ ಬಹಳ ನೋವಾಗಿತ್ತು. ಶ್ರೀಗಳು ಕೂರುವ ಜಾಗದ ಎದುರಿನ ಜಾಗ ನನಗೆ ಬಹಳ ಇಷ್ಟ ಆಯಿತು. ಅದಕ್ಕೆ ಅಲ್ಲೇ ಧ್ಯಾನಕ್ಕೆ ಕುಳಿತೆ. ಪ್ರತಿನಿತ್ಯ ಒಂದು ಗಂಟೆ ಧ್ಯಾನಕ್ಕೆ ಕುಳಿತುಕೊಳ್ಳುತ್ತೇನೆ. ಸೋಮವಾರದ ತನಕ ಧ್ಯಾನ ಮುಂದುವರೆಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಅಸಲಿ ಮುಖ್ಯಮಂತ್ರಿ ನೋಡಲು ಸ್ಕ್ಯಾನ್‌ ಮಾಡಿ: ನಿಖಿಲ್‌ ಕುಮಾರಸ್ವಾಮಿ ಸ್ಕ್ಯಾನರ್‌ನಲ್ಲಿರೋ ಫೋಟೊ ಯಾರದ್ದು?

  • ದೇವರಲ್ಲಿ ನಂಬಿಕೆ ಇದ್ರೆ ಮನೆಯಲ್ಲೇ ಧ್ಯಾನ ಮಾಡಿ- ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

    ದೇವರಲ್ಲಿ ನಂಬಿಕೆ ಇದ್ರೆ ಮನೆಯಲ್ಲೇ ಧ್ಯಾನ ಮಾಡಿ- ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

    ನವದೆಹಲಿ: ಕನ್ಯಾಕುಮಾರಿಯ ಧ್ಯಾನ ಮಂದಿರದಲ್ಲಿ ಜೂನ್ 1ರವರೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಧ್ಯಾನಸ್ಥರಾಗಿರುವುದಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಶುಕ್ರವಾರ ತೀವ್ರವಾಗಿ ಟೀಕಿಸಿದ್ದಾರೆ. ಅವರಿಗೆ ದೇವರಲ್ಲಿ ಅಷ್ಟೊಂದು ನಂಬಿಕೆ ಇದ್ದರೆ ಆ ಧ್ಯಾನವನ್ನು ಮನೆಯಲ್ಲೇ ಮಾಡಬಹುದು ಎಂದು ವಾಗ್ದಾಳಿ ನಡೆಸಿದರು.

    ಮೋದಿಯವರು ಕನ್ಯಾಕುಮಾರಿಗೆ (Kanniyakumari) ಹೋಗಿ ನಾಟಕ ಮಾಡುತ್ತಿದ್ದಾರೆ. ಅವರು ಧ್ಯಾನ ಮಾಡುವ ವೇಳೆ ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯದಲ್ಲಿ ಇರಿಸಬೇಕು. ಇದರಿಂದ ಸಾರ್ವಜನಿಕರ ಸಾಕಷ್ಟು ಹಣ ಪೋಲಾಗುತ್ತದೆ. ನಿಮ್ಮ ‘ಶೋ’ ದೇಶಕ್ಕೆ ಹಾನಿ ಮಾಡುತ್ತದೆ. ದೇವರಲ್ಲಿ ನಂಬಿಕೆ ಇದ್ದರೆ ಮನೆಯಲ್ಲೇ ಮಾಡಬಹುದು ಎಂದು ಖರ್ಗೆ ಹೇಳಿದರು.

    ಪ್ರಧಾನಿ ಮೋದಿಯವರು ಏನೇ ಹೇಳಿದರೂ ದೇಶದ ಜನತೆ ಅವರ ನಾಯಕತ್ವವನ್ನು ಒಪ್ಪದ ನಿರ್ಧಾರಕ್ಕೆ ಬಂದಿದ್ದಾರೆ. ಹಣದುಬ್ಬರ ಮತ್ತು ನಿರುದ್ಯೋಗ ಈ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದಂತಹ ವಿಷಯಗಳು ಜನರ ಮನಸ್ಸಿನಲ್ಲಿವೆ. ಬಿಜೆಪಿ ಆಂಧ್ರದಲ್ಲಿ ಕೆಲವು ಸ್ಥಾನಗಳನ್ನು ಗೆಲ್ಲಬಹುದು. ಆದರೆ ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಗೆಲ್ಲುತ್ತದೆ. ಉತ್ತರಪ್ರದೇಶದಲ್ಲಿಯೂ ಮೈತ್ರಿಯಿಂದಾಗಿ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಪ್ರಧಾನಿ ಹುದ್ದೆಗೆ ನನ್ನ ಆಯ್ಕೆ ರಾಹುಲ್‌ ಗಾಂಧಿ – ಬೆಂಬಲಿಸಿದ ಮಲ್ಲಿಕಾರ್ಜುನ ಖರ್ಗೆ

  • ಕನ್ಯಾಕುಮಾರಿ ತಲುಪಿದ ಪ್ರಧಾನಿ ನರೇಂದ್ರ ಮೋದಿ

    ಕನ್ಯಾಕುಮಾರಿ ತಲುಪಿದ ಪ್ರಧಾನಿ ನರೇಂದ್ರ ಮೋದಿ

    ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಇಂದು ಕನ್ಯಾಕುಮಾರಿಗೆ (Kanniyakumari) ಬಂದಿಳಿದಿದ್ದಾರೆ.

    ಇಂದು ಸಂಜೆಯಿಂದ ಜೂನ್ 1 ರ ಸಂಜೆಯವರೆಗೆ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ ಧ್ಯಾನ ಮಂಟಪದಲ್ಲಿ ಪ್ರಧಾನಿಯವರು ಹಗಲು-ರಾತ್ರಿ ಧ್ಯಾನ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಹೆಲಿಕಾಪ್ಟರ್ ಮೂಲಕ ಕನ್ಯಾಕುಮಾರಿಗೆ ಮೋದಿ ಆಮಿಸಿದ್ದಾರೆ.

    ಈಗಾಗಲೇ ತಿರುನಲ್ವೇಲಿ ಡಿಐಜಿಗೆ ಭದ್ರತೆಯ ಉಸ್ತುವಾರಿ ನೀಡಲಾಗಿದೆ. ಈ ಸ್ಥಳದ ಭದ್ರತೆಗೆ 2000 ಪೊಲೀಸರನ್ನು ನಿಯೋಜಿಸಲಾಗಿದೆ. ಮೋದಿಯವರು ಧ್ಯಾನ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅಂದರೆ 2019ರಲ್ಲಿ ಲೋಕಸಭಾ ಚುನಾವಣೆ ಮುಗಿದ ಬಳಿಕ ಮೋದಿ ಕೇದಾರನಾಥದಲ್ಲಿ ಧ್ಯಾನ ಮಾಡಿದ್ದರು.

    1892ರ ಡಿಸೆಂಬರ್ 23, 24, 25 ಸ್ವಾಮಿ ವಿವೇಕಾನಂದರು ಇದೇ ಜಾಗದಲ್ಲಿ ಧ್ಯಾನಕ್ಕೆ ಕೂತಿದ್ದರು. ಈ ಕಾರಣಕ್ಕೆ 1970ರಲ್ಲಿ ಇದೇ ಜಾಗದಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಲಾಗಿತ್ತು. ಇದನ್ನೂ ಓದಿ: ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಧ್ಯಾನ; 33 ವರ್ಷಗಳ ಹಿಂದಿನ ಫೋಟೊ ವೈರಲ್‌

  • ಕನ್ಯಾಕುಮಾರಿಯಲ್ಲಿನ ಮೋದಿ ಧ್ಯಾನಕ್ಕೆ ದೀದಿ ಕಟು ಟೀಕೆ

    ಕನ್ಯಾಕುಮಾರಿಯಲ್ಲಿನ ಮೋದಿ ಧ್ಯಾನಕ್ಕೆ ದೀದಿ ಕಟು ಟೀಕೆ

    – ದೇವರಾಗಿದ್ರೆ ಯಾಕೆ ಧ್ಯಾನ ಮಾಡಬೇಕು?

    ಕೋಲ್ಕತ್ತಾ: ಜೂನ್ 4 ರ ಚುನಾವಣಾ ಫಲಿತಾಂಶಕ್ಕೂ (Loksabha Elections 2024) ಮುನ್ನ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಧ್ಯಾನ ಮಾಡಲು ತಮಿಳುನಾಡಿನ ಕನ್ಯಾಕುಮಾರಿಗೆ ಭೇಟಿ ನೀಡುವ ಕುರಿತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಕಟುವಾಗಿ ಟೀಕಿಸಿದ್ದಾರೆ.

    ಯಾರು ಬೇಕಾದರು ಹೋಗಿ ಧ್ಯಾನ ಮಾಡಬಹುದು. ಆದರೆ ಧ್ಯಾನ ಮಾಡುವಾಗ ಕ್ಯಾಮೆರಾ ತೆಗೆದುಕೊಂಡು ಹೋಗುತ್ತಾರೆಯೇ ಎಂದು ದೀದಿ ಪ್ರಶ್ನಿಸಿದ್ದಾರೆ. ಅಲ್ಲದೇ ಚುನಾವಣೆಗೆ 48 ಗಂಟೆಗಳ ಮೊದಲು ಎಸಿ ರೂಮಿನಲ್ಲಿ ಹೋಗಿ ಕೂರುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಚುನಾವಣೆ ಮುಗಿಯುತ್ತಿದ್ದಂತೆ 2 ದಿನ ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡಲಿದ್ದಾರೆ ಮೋದಿ

    ಲೋಕಸಭಾ ಚುನಾವಣಾ ಪ್ರಚಾರದ ನಂತರ ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರಿಗೆ ಗೌರವಾರ್ಥವಾಗಿ ನಿರ್ಮಿಸಲಾದ ಸ್ಮಾರಕವಾದ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಪ್ರಧಾನಿ ಮೋದಿ ಧ್ಯಾನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾನು ಕೂಡ ಕನ್ಯಾಕುಮಾರಿಗೆ ಭೇಟಿ ನೀಡುವ ಪ್ಲಾನ್‌ ಮಾಡಿದ್ದೆ. ಆದರೆ ಮೋದಿಯವರು ಅಲ್ಲಿಗೆ ಭೇಟಿ ನೀಡುವ ಕುರಿತು ತಿಳಿದುಕೊಂಡೆ ಎಂದರು.

    ಮೋದಿ ಭೇಟಿಯ ಕುರಿತು ಯಾಕೆ ಯಾರೂ ಬಾಯಿಬಿಡುತ್ತಿಲ್ಲ ಎಂದು ನನಗೆ ತಿಳಿದಿಲ್ಲ. ಸ್ವಾಮಿ ವಿವೇಕಾನಂದರು ಅಲ್ಲಿ ಧ್ಯಾನ ಮಾಡಿದ್ದರು. ಆದರೆ ಈಗ ಪ್ರಧಾನಿ ಅಲ್ಲಿಗೆ ಹೋಗಿ ಧ್ಯಾನ ಮಾಡುತ್ತಿದ್ದಾರೆ. ಇದು ನಿಜಕ್ಕೂ ನನಗೆ ತುಂಬಾ ಬೇಸರ ತಂದಿದೆ ಎಂದು ಬ್ಯಾನರ್ಜಿ ಹೇಳಿದರು.

    ಉದ್ದೇಶವೊಂದರ ಸಲುವಾಗಿ ಪರಮಾತ್ಮ ನನ್ನನ್ನು ಕಳುಹಿಸಿದ್ದಾನೆ ಎಂದು ಈ ಹಿಂದೆ ಮೋದಿ ಹೇಳಿದ್ದರು. ಈ ಹೇಳಿಕೆಗೂ ಬ್ಯಾನರ್ಜಿ ಪ್ರಧಾನಿಯವರನ್ನು ಗೇಲಿ ಮಾಡಿದರು. ಅವರು (ಮೋದಿ) ದೇವರಾಗಿದ್ದರೆ ಯಾಕೆ ಧ್ಯಾನ ಮಾಡಬೇಕು..?. ಇತರರು ಅವರಿಗಾಗಿ ಧ್ಯಾನ ಮಾಡಬೇಕಲ್ವ ಎಂದು ಹೇಳಿದರು.

    ಇದೇ ವೇಳೆ ಎಚ್ಚರಿಕೆ ನೀಡಿದ ಬ್ಯಾನರ್ಜಿ, ಕನ್ಯಾಕುಮಾರಿಯಲ್ಲಿ ಮೋದಿ ಅವರ ಧ್ಯಾನವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಿದರೆ ಅದು ಮಾದರಿ ನೀತಿ ಸಂಹಿತೆ (MCC) ಉಲ್ಲಂಘನೆಯಾಗುತ್ತದೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದರು.

  • ಚುನಾವಣೆ ಮುಗಿಯುತ್ತಿದ್ದಂತೆ 2 ದಿನ ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡಲಿದ್ದಾರೆ ಮೋದಿ

    ಚುನಾವಣೆ ಮುಗಿಯುತ್ತಿದ್ದಂತೆ 2 ದಿನ ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡಲಿದ್ದಾರೆ ಮೋದಿ

    ನವದೆಹಲಿ: ಲೋಕಸಭಾ ಚುನಾವಣಾ (Lok Sabha Election) ಪ್ರಚಾರ ಮುಗಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಎರಡು ದಿನ ಧ್ಯಾನ (Meditation) ಮಾಡಲಿದ್ದಾರೆ.

    ಸ್ವಾಮಿ ವಿವೇಕಾನಂದರು (Swami Vivekanand) ಧ್ಯಾನ ಮಾಡಿದ್ದ ಕನ್ಯಾಕುಮಾರಿಯ ಧ್ಯಾನ ಮಂದಿರದಲ್ಲಿ ಮೋದಿ ಮೇ‌ 30ರ ಸಂಜೆಯಿಂದ ಜೂನ್ 1ರ ಸಂಜೆವರೆಗೆ ಧ್ಯಾನ ಮಾಡಲಿದ್ದಾರೆ.

    ತಿರುನಲ್ವೇಲಿ ಡಿಐಜಿಗೆ ಭದ್ರತೆಯ ಉಸ್ತುವಾರಿ ನೀಡಲಾಗಿದ್ದು ಈಗಾಗಲೇ ಸ್ಥಳದಲ್ಲಿ ಮೋದಿಗೆ ಭದ್ರತೆ  ನೀಡುವ ಎಸ್‌ಪಿಜಿ ತಂಡ ಬಿಡುಬಿಟ್ಟಿದೆ. ಈ ಸ್ಥಳದ ಭದ್ರತೆಗೆ 2000 ಪೊಲೀಸರನ್ನು ನಿಯೋಜಿಸಲಾಗುತ್ತದೆ.

    ಜೂನ್ 30ರ ಸಂಜೆ 4.45ಕ್ಕೆ ಪ್ರಧಾನಿ ಮೋದಿ ಧ್ಯಾನ ಕೇಂದ್ರಕ್ಕೆ ಆಗಮಿಸಲಿದ್ದಾರೆ. 2019ರಲ್ಲಿ ಲೋಕಸಭಾ ಚುನಾವಣೆ ಮುಗಿದ ಬಳಿಕ ಮೋದಿ ಕೇದಾರನಾಥದಲ್ಲಿ ಧ್ಯಾನ ಮಾಡಿದ್ದರು. ಇದನ್ನೂ ಓದಿ: ಹಣ ಕದಿಯುವುದರಲ್ಲಿ ಯಾರ ಪಾಲು ಇದೆಯೋ ಅವರು ಸಿಕ್ಕಿಬೀಳುತ್ತಾರೆ: ವಿಪಕ್ಷಗಳಿಗೆ ಮೋದಿ ಟಾಂಗ್‌

    1892ರ ಡಿಸೆಂಬರ್ 23, 24, 25 ಸ್ವಾಮಿ ವಿವೇಕಾನಂದರು ಇದೇ ಜಾಗದಲ್ಲಿ ಧ್ಯಾನಕ್ಕೆ ಕೂತಿದ್ದರು. ಈ ಕಾರಣಕ್ಕೆ 1970ರಲ್ಲಿ ಇದೇ ಜಾಗದಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಲಾಗಿತ್ತು.

     

  • ಪದವಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಧ್ಯಾನ – ಯುಜಿಸಿಯಿಂದ ಪತ್ರ

    ಪದವಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಧ್ಯಾನ – ಯುಜಿಸಿಯಿಂದ ಪತ್ರ

    ಬೆಂಗಳೂರು: ಕರ್ನಾಟಕ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಧ್ಯಾನ (Meditation) ಮಾಡಿಸುವ ಮಹತ್ವದ ನಿರ್ಧಾರ ತೆಗೆದುಕೊಂಡು ಬೆನ್ನಲ್ಲೇ ದೇಶದಾದ್ಯಂತ ಧ್ಯಾನ ಮಾಡಿಸುವ ಮಹತ್ವದ ನಿರ್ಧಾರಕ್ಕೆ ಕೇಂದ್ರ ಸರ್ಕಾರ (Central Government) ಬಂದಿದೆ.

    ಇನ್ಮುಂದೆ ದೇಶದ ವಿಶ್ವವಿದ್ಯಾಲಯಗಳು, ಪದವಿ ಕಾಲೇಜುಗಳಲ್ಲಿ ಧ್ಯಾನ ಮಾಡಿಸುವಂತೆ ಯುಜಿಸಿ ಎಲ್ಲಾ ವಿಶ್ವವಿದ್ಯಾಲಯಗಳು, ಪದವಿ ಕಾಲೇಜುಗಳು, ವಿದ್ಯಾಸಂಸ್ಥೆಗಳಿಗೆ ಸೂಚನೆ ನೀಡಿದೆ. ಇದನ್ನೂ ಓದಿ: ಕದ್ರಿ ದೇಗುಲಕ್ಕೆ IRCಯಿಂದ ಬೆದರಿಕೆ ಪತ್ರ – ದೇಗುಲದ ಮಂಡಳಿಯಿಂದ ದೂರು

    ಯುಜಿಸಿ ಕಾರ್ಯದರ್ಶಿ ಪ್ರೊ. ರಜನೀಶ್ ಜೈನ್‌ರಿಂದ ವಿಶ್ವವಿದ್ಯಾಲಯಗಳು, ಎಲ್ಲಾ ವಿದ್ಯಾಸಂಸ್ಥೆಗಳಿಗೆ ಪತ್ರ ಬರೆಯಲಾಗಿದೆ. 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ನೆನಪಿನಲ್ಲಿ ಈ ಮಹತ್ವದ ನಿರ್ಧಾರವನ್ನ ಕೇಂದ್ರ ಸರ್ಕಾರ ಮಾಡಿದೆ.

    ಧ್ಯಾನ ಮಾಡಿಸುವ ನಿಟ್ಟಿನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಜೊತೆ ಕೇಂದ್ರ ಸಂಸ್ಕೃತಿ‌ ಇಲಾಖೆ ಒಪ್ಪಂದ ಮಾಡಿಕೊಂಡಿದೆ. ಬೆಂಗಳೂರಿನ ಅರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ ವಿಶ್ವವಿದ್ಯಾಲಯಗಳು, ಪದವಿ ಕಾಲೇಜುಗಳಲ್ಲಿ ಹರ್ ಘರ್ ಧ್ಯಾನ್ ಅಭಿಯಾನ ನಡೆಸಲು ನಿರ್ಧಾರ ಮಾಡಲಾಗಿದೆ. ಇದನ್ನೂ ಓದಿ: ಹಾಸನ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಎ.ಎಚ್ ಲಕ್ಷ್ಮಣ್ ನೇಮಕ

    ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಅಭಿವೃದ್ಧಿಪಡಿಸಿರೋ ಧ್ಯಾನದ ಮಾದರಿಗಳನ್ನು ಅಳವಡಿಸಿಕೊಳ್ಳಲು‌ ಯುಜಿಸಿ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಈ ಅಭಿಯಾನಕ್ಕೆ ಯಾವುದೇ ವಿಶ್ವವಿದ್ಯಾಲಯಗಳು, ಕಾಲೇಜುಗಳು ಶುಲ್ಕ ಭರಿಸುವಂತೆ ಇಲ್ಲ. ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಜೊತೆ ವಿಶ್ವವಿದ್ಯಾಲಯಗಳು, ಕಾಲೇಜುಗಳು ಸಂಪರ್ಕ ಇಟ್ಟುಕೊಂಡು ಅಭಿಯಾನ ನಡೆಸುವಂತೆ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯರಿಂದ `ಧ್ಯಾನ’ ಭಂಗ- ಬಿ.ಸಿ ನಾಗೇಶ್ ತೀವ್ರ ವಾಗ್ದಾಳಿ

    ಸಿದ್ದರಾಮಯ್ಯರಿಂದ `ಧ್ಯಾನ’ ಭಂಗ- ಬಿ.ಸಿ ನಾಗೇಶ್ ತೀವ್ರ ವಾಗ್ದಾಳಿ

    ಬೆಂಗಳೂರು: ಶಾಲಾ, ಕಾಲೇಜುಗಳಲ್ಲಿ (School College) ಪ್ರತಿನಿತ್ಯ 10 ನಿಮಿಷ ಧ್ಯಾನ (Meditation) ಮಾಡಬೇಕೆನ್ನುವ ಶಿಕ್ಷಣ ಸಚಿವರ (Education Minister) ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಸಚಿವ ಬಿ.ಸಿ ನಾಗೇಶ್ (BC Nagesh) ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ವಿದ್ಯಾರ್ಥಿಗಳಲ್ಲಿ (Students) ಏಕಾಗ್ರತೆ, ಸಕಾರಾತ್ಮಕತೆ ಹೆಚ್ಚಿಸುವ ಸಲುವಾಗಿ ಶಾಲೆ, ಕಾಲೇಜುಗಳಲ್ಲಿ ಪ್ರತಿ ನಿತ್ಯ 10 ನಿಮಿಷ ಧ್ಯಾನ ಮಾಡಿಸಲು ಆದೇಶ ಹೊರಡಿಸುವಂತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಚಿವ ಬಿ.ಸಿ ನಾಗೇಶ್ (BC Nagesh) ಪತ್ರ ಬರೆದಿದ್ದಾರೆ. ಇದರಿಂದ ಸಚಿವ ನಾಗೇಶ್ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿ.ಸಿ ನಾಗೇಶ್ ಅವರು ಸರಣಿ ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಭಾರತ-ಜಿಂಬಾಬ್ವೆ ಪಂದ್ಯ ಮಳೆಯಿಂದ ರದ್ದಾದರೆ ಯಾರಿಗೆ ಅವಕಾಶ? – ಸೆಮಿಸ್ ಲೆಕ್ಕಾಚಾರ ಹೀಗಿದೆ

    ಟ್ವೀಟ್‌ನಲ್ಲಿ ಏನಿದೆ?
    ಧ್ಯಾನವನ್ನೂ ರಾಜಕೀಯ (Politics) ಅಜೆಂಡಾ, ಗಿಮಿಕ್ ಎನ್ನಲು ಟಿಪ್ಪು (Tippu Sultan) ಆರಾಧಕರಿಂದ ಮಾತ್ರ ಸಾಧ್ಯ. ಈ ಮೊದಲು ಕಾಂಗ್ರೆಸ್ ನಾಯಕರು ಯೋಗಾಚರಣೆ ವಿರೋಧಿಸಿದ್ದರು. ಈಗ ಧ್ಯಾನಕ್ಕೆ ಅಡ್ಡಿಪಡಿಸಲು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ಧ್ಯಾನದಿಂದ ಯಾವ ಕೆಡಕು ಇದೆ ಎಂಬುದನ್ನು ವಿವರಿಸುವಿರಾ? ಇದನ್ನೂ ಓದಿ: ಕಾಂಗ್ರೆಸ್‍ನವರಿಗೆ ಧ್ಯಾನ ಅಂದ್ರೆ ಸೋನಿಯಾ, ರಾಹುಲ್ ಗಾಂಧಿಯೇ ಆಗಿದೆ: ಪ್ರಹ್ಲಾದ್ ಜೋಶಿ

    ಮಾನಸಿಕ, ದೈಹಿಕ ಆರೋಗ್ಯ, ಏಕಾಗ್ರತೆ, ವ್ಯಕ್ತಿತ್ವ ವಿಕಸನಕ್ಕಾಗಿ ಶಾಲಾ ಮಕ್ಕಳು 10 ನಿಮಿಷ ಧ್ಯಾನ ಮಾಡುವ ಉತ್ತಮ ಆಲೋಚನೆಯಲ್ಲೂ ನಿಮ್ಮಂತವರು ಗೊಂದಲ ಸೃಷ್ಟಿಸಲು ಯತ್ನಿಸುತ್ತಿರುವುದು ದುರಾದೃಷ್ಟಕರ. ಮಕ್ಕಳು ಧ್ಯಾನ ಮಾಡುವುದು ಗಿಮಿಕ್ ಹೇಗೆ ಆಗುತ್ತದೆ ಎಂಬುದನ್ನು ಜನತೆಗೆ ಸ್ವಲ್ಪ ವಿವರಿಸುವಿರಾ? ಇದನ್ನೂ ಓದಿ: ಯಶ್ ಅಭಿಮಾನಿಗಳಿಗೆ ಮತ್ತೆ ನಿರಾಸೆ: ‘ಬ್ರಹ್ಮಾಸ್ತ್ರ’ದಲ್ಲಿ ನಟಿಸುತ್ತಿಲ್ಲ ರಾಕಿಂಗ್ ಸ್ಟಾರ್

    ಶಿಕ್ಷಣ ಕ್ಷೇತ್ರದ ಸುಧಾರಣೆ, ಬದಲಾವಣೆ, ಏಳಿಗೆ ಮತ್ತು ಅಭಿವೃದ್ಧಿಯೇ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಬಿಜೆಪಿ ಸರ್ಕಾರ ಕೋವಿಡ್-19 ಸಂದರ್ಭದಲ್ಲಿ ಇಡೀ ದೇಶದಲ್ಲೇ ಮೊದಲು ನಮ್ಮ ರಾಜ್ಯದಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಭೌತಿಕ ತರಗತಿಗಳನ್ನು ಆರಂಭಿಸಿತು. ಕೋವಿಡ್-19 ಕಾರಣ ಎರಡು ವರ್ಷಗಳ ಕಾಲ ಭೌತಿಕ ತರಗತಿಗಳಿಲ್ಲದೇ ಮಕ್ಕಳ ಕಲಿಕೆಯಲ್ಲಿ ಉಂಟಾದ ಹಿನ್ನಡೆ ಸರಿದೂಗಿಸಲು ದೇಶದಲ್ಲೇ ಮೊದಲು `ಕಲಿಕಾ ಚೇತರಿಕೆ’ ಕಾರ್ಯಕ್ರಮವನ್ನು ಇಡೀ ದೇಶಕ್ಕೆ ಮಾದರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ದಾಖಲೆಯ 15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.

    21ನೇ ಶತಮಾನದ ಅಗತ್ಯಗಳಿಗೆ ಪೂರಕವಾಗಿರುವ `ರಾಷ್ಟ್ರೀಯ ಶಿಕ್ಷಣ ನೀತಿ-2020′ ಅನುಷ್ಠಾನಗೊಳಿಸಲಾಗುತ್ತಿದೆ. ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ನೀಗಿಸಲು 8,100 ಕೊಠಡಿ ನಿರ್ಮಿಸಲಾಗುತ್ತಿದೆ. ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ/ಬಾಳೆಹಣ್ಣು/ಚಿಕ್ಕಿ ನೀಡಲಾಗುತ್ತಿದೆ.

    ಶಿಕ್ಷಣದ ಗುಣಮಟ್ಟ ಕಾಪಾಡಿಕೊಳ್ಳಲು ಶೈಕ್ಷಣಿಕ ವರ್ಷದ ಆರಂಭದಲ್ಲೇ 30 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರು/ಉಪನ್ಯಾಸಕರ ಸೇವೆ ಪಡೆಯಲಾಗಿದೆ. ದೈಹಿಕ ಶಿಕ್ಷಕರು ಸೇರಿದಂತೆ 2,500 ಪ್ರೌಢಶಾಲಾ ಶಿಕ್ಷಕರು ಮತ್ತು 778 ಪಿಯು ಕಾಲೇಜು ಉಪನ್ಯಾಸಕರ ನೇಮಕ ಪ್ರಕ್ರಿಯೆಯನ್ನು ಮುಂಬರುವ ದಿನಗಳಲ್ಲಿ ಆರಂಭಿಸಲಾಗುತ್ತಿದೆ. ಸಂಶೋಧಕರು, ವೈದ್ಯರು, ವಿಜ್ಞಾನಿಗಳ ಪ್ರಕಾರ, ಯೋಗ ಮತ್ತು ಧ್ಯಾನ ಮಾಡುವುದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಅತ್ಯಂತ ಉಪಯುಕ್ತ. ಆದರೆ, ನೀವು ಮಾತ್ರ ಧ್ಯಾನ, ಯೋಗ ಮಾಡಿದರೆ ಮಕ್ಕಳು ಕುಗ್ಗಿ ಹೋಗುತ್ತಾರೆ ಎನ್ನುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ತಿರುಗೇಟು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಾಲಾ-ಕಾಲೇಜುಗಳಲ್ಲಿ ಇನ್ಮುಂದೆ 10 ನಿಮಿಷ ಧ್ಯಾನ: ಬಿ.ಸಿ. ನಾಗೇಶ್ ಪತ್ರ

    ಶಾಲಾ-ಕಾಲೇಜುಗಳಲ್ಲಿ ಇನ್ಮುಂದೆ 10 ನಿಮಿಷ ಧ್ಯಾನ: ಬಿ.ಸಿ. ನಾಗೇಶ್ ಪತ್ರ

    ಬೆಂಗಳೂರು: ಶಾಲಾ-ಕಾಲೇಜು (School-College) ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸಲು, ಆರೋಗ್ಯ ವೃದ್ಧಿ, ಒತ್ತಡ ಮುಕ್ತವಾಗಿಸಲು ಶಿಕ್ಷಣ ಇಲಾಖೆ ಧ್ಯಾನದ (Meditation) ಮೊರೆ ಹೋಗಿದೆ. ಇನ್ನು ಮುಂದೆ ಶಾಲಾ-ಕಾಲೇಜುಗಳಲ್ಲಿ 10 ನಿಮಿಷ ವಿದ್ಯಾರ್ಥಿಗಳಿಗೆ ಧ್ಯಾನ ಮಾಡಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

    ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (B.C. Nagesh), ಧ್ಯಾನ ಮಾಡುವ ಸಂಬಂಧ ಆದೇಶ ಹೊರಡಿಸಲು ಸೂಚನೆ ನೀಡಿದ್ದಾರೆ. ನಿತ್ಯ ಶಾಲಾ-ಕಾಲೇಜುಗಳಲ್ಲಿ 10 ನಿಮಿಷ ವಿದ್ಯಾರ್ಥಿಗಳು ಕಡ್ಡಾಯವಾಗಿ ಧ್ಯಾನ ಮಾಡಬೇಕು. ಇದಕ್ಕಾಗಿ ಸಮಯ ನಿಗದಿ ಮಾಡುವಂತೆ ಸೂಚನೆ ನೀಡಿದ್ದಾರೆ.

    ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಂಘದವರು ಶಾಲಾ-ಕಾಲೇಜುಗಳಲ್ಲಿ ಧ್ಯಾನ ಮಾಡಿಸುವಂತೆ ಬಿ.ಸಿ. ನಾಗೇಶ್ ಅವರಿಗೆ ಪತ್ರ ಬರೆದಿದ್ದರು. ಮಕ್ಕಳ ಏಕಾಗ್ರತೆ, ಆರೋಗ್ಯ ವೃದ್ಧಿ, ಒತ್ತಡ ನಿವಾರಣೆ ದೃಷ್ಟಿಯಿಂದ ಸಚಿವರು ಧ್ಯಾನ ಮಾಡಿಸುವ ಮನವಿಗೆ ಸ್ಪಂದನೆ ನೀಡಿದ್ದಾರೆ.  ಇದನ್ನೂ ಓದಿ: ಮಾಜಿ ಸಂಸದರಾದ ಮುದ್ದಹನುಮೇಗೌಡ, ನಟ ಶಶಿಕುಮಾರ್‌ ಬಿಜೆಪಿ ಸೇರ್ಪಡೆ

    ಬಿ.ಸಿ. ನಾಗೇಶ್ ಅವರು ಪತ್ರದ ಮೇಲೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಆದೇಶ ಹೊರಡಿಸಲಿದ್ದು, ಶೀಘ್ರವೇ ಶಾಲಾ-ಕಾಲೇಜುಗಳಲ್ಲಿ ಧ್ಯಾನದ ಮಾಡುವ ಆದೇಶ ಅಧಿಕೃತವಾಗಲಿದೆ. ಇದನ್ನೂ ಓದಿ: ಧರ್ಮಸ್ಥಳದ ಧರ್ಮಾಧಿಕಾರಿಗಳ ಭೇಟಿ ಮಾಡಿ ಆಶೀರ್ವಾದ ಪಡೆದ ರಿಷಬ್ ಶೆಟ್ಟಿ ದಂಪತಿ

    Live Tv
    [brid partner=56869869 player=32851 video=960834 autoplay=true]

  • ಕೊರೊನಾದಿಂದ ಮನೆಯವರು ಬರದೆ ಖಿನ್ನತೆ – ಕೈದಿಗಳಿಗೆ ಯೋಗ, ಧ್ಯಾನ ತರಬೇತಿ

    ಕೊರೊನಾದಿಂದ ಮನೆಯವರು ಬರದೆ ಖಿನ್ನತೆ – ಕೈದಿಗಳಿಗೆ ಯೋಗ, ಧ್ಯಾನ ತರಬೇತಿ

    ಬೆಂಗಳೂರು: ಸದಾ ಒಂದಿಲ್ಲೊಂದು ನೆಗೆಟಿವ್ ಸುದ್ದಿಯಲ್ಲಿರುತ್ತಿದ್ದ ಸೆಂಟ್ರಲ್ ಜೈಲಿನಲ್ಲೀಗ ಪಾಸಿಟಿವ್ ಸುದ್ದಿಯೊಂದು ವರದಿಯಾಗಿದೆ. ಗಾಂಜಾ, ಚಾಕು ಚೂರಿ ಹೊಡೆದಾಟ ಅಂತಿದ್ದ ಜೈಲಿನಲ್ಲೀಗ ಧ್ಯಾನ, ಯೋಗದ ತರಬೇತಿ ಶುರುವಾಗಿದೆ.

    ಹೌದು. ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಯೋಗ, ಧ್ಯಾನ ತರಬೇತಿಯನ್ನ ನೀಡಲಾಗುತ್ತಿದೆ. ಕೋವಿಡ್ ಸಮಯದಲ್ಲಿ ಮಾನಸಿಕ ಖಿನ್ನತೆಗೆ ಕೈದಿಗಳು ಒಳಗಾಗಿದ್ದಾರೆ. ನಿಮ್ಹಾನ್ಸ್ ಆಸ್ಪತ್ರೆಯ ತಜ್ಞರು ಬಿಡುಗಡೆ ಮಾಡಿರುವ ಸಮೀಕ್ಷೆಯಲ್ಲಿ ಕೈದಿಗಳು ಖಿನ್ನತೆಗೆ ಒಳಗಾಗುತ್ತಿರೋ ಅಂಶ ಬೆಳಕಿಗೆ ಬಂದಿತ್ತು.

    ಕೊರೊನಾದಿಂದ ಮನೆಯವರು ಬಾರದೆ ಕೈದಿಗಳು ಮಾನಸಿಕವಾಗಿ ನೊಂದಿದ್ರು. ಈ ಹಿನ್ನಲೆಯಲ್ಲಿ ಅವರನ್ನು ಇದರಿಂದ ಹೊರ ತರಬೇಕಾದ್ರೆ ಯೋಗ, ಧ್ಯಾನ ಮಾಡಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಹಾಗಾಗಿ ಮೊದಲು ಜೈಲು ಸಿಬ್ಬಂದಿಗೆ ಯೋಗ, ಧ್ಯಾನದ ತರಬೇತಿ ನೀಡಲಾಗಿತ್ತು. ಕೈದಿಗಳ ಮನಪರಿವರ್ತನೆಗೆ ಸಿಬ್ಬಂದಿಗೆ ರವಿ ಶಂಕರ್ ಗುರೂಜಿ ಆಶ್ರಮದಿಂದ ತರಬೇತಿ ನೀಡಲಾಗಿತ್ತು.

    ಈಗ ಜೈಲಿನ ಸಿಬ್ಬಂದಿಯಿಂದ ಕೈದಿಗಳಿಗೆ ಯೋಗ, ಧ್ಯಾನದ ಬಗ್ಗೆ ಟ್ರೈನಿಂಗ್ ಶುರುವಾಗಿದೆ. ಸೂರ್ಯ ನಮಸ್ಕಾರ, ಯೋಗ, ಧ್ಯಾನ, ಗೂರೂಜಿ ಪುಸ್ತಕಗಳ ಬಗ್ಗೆ ಪ್ರವಚನ ಕೂಡ ಮಾಡಲಾಗ್ತಿದೆ. ಕೇವಲ ಯೋಗ ಅಷ್ಟೇ ಅಲ್ಲದೇ ಕೈದಿಗಳ ಮನಪರಿವರ್ತನೆಗೆ ಅಧಿಕಾರಿಗಳಿಂದ ವಿಶೇಷ ತರಗತಿಯನ್ನ ನೀಡಲಾಗ್ತಿದ್ದು, ಪ್ರತಿ ನಿತ್ಯ 6.30 ರಿಂದ 8.30 ರವರೆಗೂ ಅವರಿಗೆ ಯೋಗ ತರಬೇತಿಯನ್ನ ನೀಡಲಾಗುತ್ತಿದೆ. ಒಂದು ವೇಳೆ ಸಿಬ್ಬಂದಿಯ ನಿರ್ಲಕ್ಷ್ಯ ಕಂಡು ಬಂದ್ರೆ ಶಿಸ್ತುಕ್ರಮದ ಎಚ್ಚರಿಕೆ ಕೂಡ ನೀಡಲಾಗಿದೆ.

  • ವೈಷ್ಣವಿ ಧ್ಯಾನ ನೋಡಿ ಕೈ ಮುಗಿದು ನಕ್ಕ ಮನೆಮಂದಿ!

    ವೈಷ್ಣವಿ ಧ್ಯಾನ ನೋಡಿ ಕೈ ಮುಗಿದು ನಕ್ಕ ಮನೆಮಂದಿ!

    – ವೈಶು ಕಾಲಿಗೆ ನಮಸ್ಕರಿಸಿದ ರಾಜೀವ್

    ಬೆಂಗಳೂರು: ಪ್ರತಿದಿನ ಬೆಳಗ್ಗೆ ಆಗುತ್ತಿದ್ದಂತೆಯೇ ದೊಡ್ಮನೆ ಮಂದಿ ವಾಕಿಂಗ್, ಜಾಗಿಂಗ್ ಅಂತಾ ಬ್ಯುಸಿಯಾಗುತ್ತಾರೆ. ಅದರಲ್ಲೂ ವೈಷ್ಣವಿ ಡಿಫರೆಂಟ್ ಆಗಿ ಯೋಗ, ಧ್ಯಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

    ಆದ್ರೆ ಇಷ್ಟು ದಿನ ವೈಷ್ಣವಿ ಪ್ರತಿನಿತ್ಯ ಧ್ಯಾನ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡಿದ್ದ ಮನೆಮಂದಿಗೆ ವೈಷ್ಣವಿಯ ಕಳ್ಳಾಟ ಬಹಿರಂಗಗೊಂಡಿದೆ.

    ಹೌದು ನಿನ್ನೆ ಲಿವಿಂಗ್ ಏರಿಯಾದ ಬಳಿ ಕುಳಿತುಕೊಂಡಿದ್ದ ವೈಷ್ಣವಿ ಇದ್ದಕ್ಕಿದಂತೆ ಧ್ಯಾನ ಮಾಡಲು ಶುರುಮಾಡುತ್ತಾರೆ. ಇದನ್ನು ನೋಡಿ ಪ್ರಿಯಾಂಕ, ಶಮಂತ್‍ಗೆ ಈ ರೀತಿಯ ಜಗಳ, ಗದ್ದಲದ ಮಧ್ಯೆ ಇವರು ಹೇಗೆ ಧ್ಯಾನ ಮಾಡುತ್ತಾರೆ ಎಂದು ಕೇಳುತ್ತಾರೆ. ಆಗ ಶಮಂತ್ ಮೊದಲಿಗೆ ಅವರು ಎಷ್ಟೇ ಗಲಾಟೆ ಇದ್ದರೂ ಏಕಾಗ್ರತೆ ಹೊಂದಿರುತ್ತಾರೆ. ಆದ್ರೆ ನಿಜವಾಗಿಯೂ ಅವರು ನಿದ್ದೆಯೇ ಮಾಡುತ್ತಾರೋ ಧ್ಯಾನವೇ ಮಾಡುತ್ತಾರೋ ಗೊತ್ತಿಲ್ಲ. ಮುಖ ಯಾವಗಲೂ ಹಸನ್ಮುಖಿಯಾಗಿಯೇ ಇರುತ್ತದೆ ಎನ್ನುತ್ತಾರೆ.

    ಬಳಿಕ ಬಿಗ್‍ಬಾಸ್ ಈ ವೈಷ್ಣವಿಯವರು ಧ್ಯಾನದ ಹೆಸರಿನಲ್ಲಿ ನಿದ್ದೆ ಮಾಡುತ್ತಿದ್ದಾರೆ. ಬೇಕಾದರೆ ಅವರ ಮುಖದ ಹಾವ-ಭಾವ ನೋಡಿ ಬಿಗ್‍ಬಾಸ್, ತೂಗಡಿಸುತ್ತಿದ್ದಾರೆ ಎಂದು ಹೇಳುತ್ತಾರೆ.

    ನಂತರ ವೈಷ್ಣವಿ ನಿದ್ದೆ ಮಾಡುತ್ತಿರುವುದನ್ನು ಕಂಡು ಎಂತಾ ನಾಟಕ ಎಂದು ಮನೆಮಂದಿಯೆಲ್ಲಾ ರೇಗಿಸುತ್ತಾರೆ. ಈ ವೇಳೆ ಶಮಂತ್, ರಾಜೀವ್ ಎದ್ದು ಬಂದು ವೈಷ್ಣವಿಗೆ ನಮಸ್ಕಾರ ಮಾಡಿ, ನಮಗೂ ಹೇಳಿದ್ದರೆ ಇಷ್ಟು ದಿನ ನಾವು ಹೀಗೆ ಮಾಡುತ್ತಿದ್ವಿ ಎಂದರೆ, ರಾಜೀವ್ ದೇವರೇ ಈ ರೀತಿಯ ಮೆಡಿಟೇಷನ್ ನಮಗೂ ಕಲಿಸಪ್ಪಾ ಎಂದಿದ್ದಾರೆ.

    ಈ ವೇಳೆ ಮಂಜು ಬಿಗ್‍ಬಾಸ್ ಈ ಯಮ್ಮ ಮೋಸ ಮಾಡ್ತಿದ್ದಾಳೆ. ರಾತ್ರಿಯೆಲ್ಲಾ ಈ ಯಮ್ಮಾ ಅದೇ ಮಾಡುವುದು, ಬೆಳಗ್ಗೆ ಎದ್ದು ಯೋಗದ ಹೆಸರಿನಲ್ಲಿ ಮತ್ತೆ ನಿದ್ದೆ ಮಾಡಿ ನಿಮಗೆ ಯಾಮಾರಿಸುತ್ತಿದ್ದಾಳೆ ನೋಡಿಕೊಳ್ಳಿ ಅಂತಾರೆ. ಈ ವೇಳೆ ವೈಷ್ಣವಿ ಮನೆಯವರ ಮಾತನ್ನು ಕೇಳಿ ನಗುತ್ತಾರೆ.