Tag: ಧೋತಿ

  • ಕಾಶಿಯಲ್ಲಿ ಪೊಲೀಸರಿಗೆ ಧೋತಿ-ಕುರ್ತಾ ಸಮವಸ್ತ್ರ ಕಡ್ಡಾಯ!

    ಕಾಶಿಯಲ್ಲಿ ಪೊಲೀಸರಿಗೆ ಧೋತಿ-ಕುರ್ತಾ ಸಮವಸ್ತ್ರ ಕಡ್ಡಾಯ!

    ವಾರಾಣಸಿ: ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇಗುಲದಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಹೊಸ ಸಮವಸ್ತ್ರ ನೀತಿಯನ್ನು ಜಾರಿಗೊಳಿಸಲಾಗಿದೆ.

    ಕಾಶಿ ವಿಶ್ವನಾಥ ದೇಗುಲದ ಗರ್ಭಗುಡಿಯ ಸಮೀಪ ಕಾರ್ಯ ನಿರ್ವಹಿಸುವ ಪೊಲೀಸರು ಕಡ್ಡಾಯವಾಗಿ ಧೋತಿ-ಕುರ್ತಾ ಧರಿಸಬೇಕೆಂಬ ನಿಯಮವನ್ನು ಜಾರಿಗೆ ಮಾಡಿ ಪೊಲೀಸ್ ಇಲಾಖೆ ಆದೇಶ ನೀಡಿದೆ.

    ಈ ಕುರಿತು ಮಾಹಿತಿ ನೀಡಿರುವ ವಾರಾಣಾಸಿಯ ಜ್ಞಾನವಾಪಿ ಎಸ್ಪಿ ಶೈಲೇಂದ್ರ ಕುಮಾರ್ ರೈ, ಈ ವಸ್ತ್ರ ಸಂಹಿತೆ ನಿಯಮ ದೇವಾಲಯದ ಗರ್ಭಗುಡಿಯ ಬಳಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಮಾತ್ರ ಅನ್ವಯವಾಗುತ್ತದೆ. ಇನ್ನುಳಿದ ಪೊಲೀಸರು ತಮ್ಮ ಸಾಮಾನ್ಯ ಸಮವಸ್ತ್ರ ಧರಿಸಿ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಪೊಲೀಸರು ಬೆಲ್ಟ್ ಧರಿಸಿ, ಇಲಾಖೆ ಸಮವಸ್ತ್ರದಲ್ಲಿಯೇ ಗರ್ಭಗುಡಿ ಬಳಿ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಸದ್ಯ ಪೊಲೀಸ್ ಇಲಾಖೆಯ ಈ ಹೊಸ ನಿಯಮವನ್ನು ದೇವಾಲಯದ ಆಡಳಿತ ಮಂಡಳಿ ಸ್ವಾಗತಿಸಿದೆ.

    ಈ ನಿಯಮ ಸೋಮವಾರದಿಂದಲೇ ಜಾರಿಯಾಗಿದ್ದು, ಧೋತಿ-ಕುರ್ತಾ ಧರಿಸಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರನ್ನು ಕಂಡ ಭಕ್ತರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

  • ಧೋತಿ ಧರಿಸಿ ಬಂದ ನಿರ್ದೇಶಕನಿಗೆ ಎಂಟ್ರಿ ನೀಡದ ಮಾಲ್ ಸಿಬ್ಬಂದಿ

    ಧೋತಿ ಧರಿಸಿ ಬಂದ ನಿರ್ದೇಶಕನಿಗೆ ಎಂಟ್ರಿ ನೀಡದ ಮಾಲ್ ಸಿಬ್ಬಂದಿ

    ಕೋಲ್ಕತ್ತಾ: ಬಂಗಾಲಿ ಸಿನಿಮಾ ನಿರ್ದೇಶಕರೊಬ್ಬರು ಧೋತಿ ಧರಿಸಿದ್ದ ಕಾರಣ ಮಾಲ್ ಸಿಬ್ಬಂದಿ ಪ್ರವೇಶ ಕಲ್ಪಿಸಿದೇ ಉದ್ಧಟತನ ತೋರಿಸಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

    ನಿರ್ದೇಶಕ ಆಶೀಶ್ ಅವಿಕುಂತ್ ಶನಿವಾರ ಸಂಜೆ ನಗರದ ಕ್ವಿಸ್ಟ್ ಮಾಲ್‍ಗೆ ತೆರಳಿದ್ದರು. ಈ ವೇಳೆ ಮಾಲ್ ಸಿಬ್ಬಂದಿ ಆಶೀಶ್ ಅವರಿಗೆ ಪ್ರವೇಶ ಕೊಡದೇ ಸತಾಯಿಸಿದ್ದಾರೆ. ಮಾಲ್ ಒಳಗಡೆ ಧೋತಿ ಮತ್ತು ಲುಂಗಿ ಧರಿಸಿದ ವ್ಯಕ್ತಿಗಳಿಗೆ ಪ್ರವೇಶವಿಲ್ಲ ಎಂದು ಹೇಳಿದ್ದಾರೆ. ಇದನ್ನು ವಿರೋಧಿಸಿ ಮಾಲ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದು, ಆಶೀಶ್ ಮಾಲ್ ಸಿಬ್ಬಂದಿಯೊಂದಿಗೆ ಇಂಗ್ಲಿಷ್ ಮಾತನಾಡಿದಾಗ ಅವ್ರಿಗೆ ಪ್ರವೇಶ ಕಲ್ಪಿಸಲಾಗಿದೆ.

    ಆಶೀಶ್ ಈ ಘಟನೆಯನ್ನು ಖಂಡಿಸಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದು, ಮಾಲ್‍ಗಳ ಪ್ರವೇಶಕ್ಕೆ ನಿರಾಕರಿಸುವುದು ಇದೇ ಮೊದಲೇನಲ್ಲ. ಆದರೆ ಮೊಟ್ಟ ಮೊದಲ ಬಾರಿಗೆ ಧೋತಿ ಧರಿಸಿ ಬಂದ ಕಾರಣ ನೀಡಿ ಪ್ರವೇಶ ನಿರಾಕರಿಸಿದ್ದಾರೆ. ನಾನು ಕಳೆದ 26 ವರ್ಷಗಳಿಂದಲೂ ಧೋತಿ ಧರಿಸುತ್ತಾ ಬಂದಿದ್ದೇನೆ. ಭದ್ರತೆಯ ಕಾರಣ ನೀಡಿ, ಧೋತಿ ಮತ್ತು ಲುಂಗಿ ಧರಿಸಿದ್ದವರನ್ನು ಒಳಗಡೆ ಬಿಡಲ್ಲ ಎಂದು ಹೇಳಿದ್ದಾರೆ. ನಂತರ ನಾನು ಇಂಗ್ಲಿಷ್ ನಲ್ಲಿ ಮಾತನಾಡುವುದನ್ನು ಕಂಡ ಸಿಬ್ಬಂದಿ ಮಾಲ್‍ಗೆ ಪ್ರವೇಶ ನೀಡಿದರು. ಆದರೆ ಈ ಕೃತ್ಯವನ್ನು ಪ್ರತಿಭಟಿಸುವ ಸಲುವಾಗಿ ಮಾಲ್ ಅನ್ನು ಪ್ರವೇಶಿಸದೆ ಹಿಂದಿರುಗಿದೆ ಎಂದು ಹೇಳಿಕೊಂಡಿದ್ದಾರೆ.

     

    ಇದು ಹೊಸ ರೀತಿಯ ನಿಯಮವಾಗಿದ್ದು, ಖಾಸಗಿ ಹೋಟೆಲ್ ಹಾಗೂ ಕ್ಲಬ್‍ಗಳು ಧರಿಸುವ ಬಟ್ಟೆ ಕುರಿತು ಆಕ್ಷೇಪಿಸಿ ಪ್ರವೇಶ ನಿರಾಕರಿಸಿದ್ದು ವರ್ಣಬೇಧ ಮತ್ತು ಭಾರತೀಯ ಸಂಸ್ಕೃತಿ ಬಗೆಗಿನ ಉದಾಸೀನವನ್ನು ತೋರಿಸುತ್ತದೆ ಎಂದು ಹಲವಾರು ಕಿಡಿಕಾರಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗಿದ್ದು. ಪೋಸ್ಟ್ ಕುರಿತು ವ್ಯಾಪಕ ಪ್ರತಿಕ್ರಿಯೆಗಳು ಬಂದಿವೆ ಹಾಗು ಮಾಲ್‍ನ ಮ್ಯಾನೇಜ್‍ಮೆಂಟ್ ವಿರುದ್ಧ ಹಲವು ಟೀಕೆಗಳು ವ್ಯಕ್ತವಾಗಿವೆ.

     

    https://www.youtube.com/watch?v=JfXmZujzUJk