Tag: ಧೃತಿ ಪುನೀತ್‌ ರಾಜ್‌ಕುಮಾರ್‌

  • ನ್ಯೂಯಾರ್ಕ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಅಣ್ಣಾವ್ರ ಮೊಮ್ಮಕ್ಕಳು

    ನ್ಯೂಯಾರ್ಕ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಅಣ್ಣಾವ್ರ ಮೊಮ್ಮಕ್ಕಳು

    ಟ ಪುನೀತ್ ರಾಜ್‌ಕುಮಾರ್ ಪುತ್ರಿ ಧೃತಿ (Drithi Puneeth Rajkumar) ವಿದೇಶದಲ್ಲಿ ಪದವಿ ಪಡೆದ ಖುಷಿಯಲ್ಲಿದ್ದಾರೆ. ಈ ಹಿನ್ನೆಲೆ ಸಹೋದರಿ ವಂದಿತಾ ಮತ್ತು ದೊಡ್ಡಪ್ಪನ ಮಗ ವಿನಯ್ (Vinay Rajkumar) ಜೊತೆ ಲಂಚ್ ಮಾಡಿದ್ದಾರೆ. ನ್ಯೂಯಾರ್ಕ್‌ನಲ್ಲಿರುವ ಸುಂದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಧೃತಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಹೃತಿಕ್ ರೋಷನ್‌ಗೆ ಪೃಥ್ವಿರಾಜ್ ಸುಕುಮಾರನ್ ಆ್ಯಕ್ಷನ್ ಕಟ್?

    ಇದೀಗ ತಂಗಿ ವಂದಿತಾ ಹಾಗೂ ದೊಡ್ಡಪ್ಪನ ಮಗ ವಿನಯ್ ರಾಜ್‌ಕುಮಾರ್‌ಗೆ ಜೊತೆಗೆ ನ್ಯೂಯಾರ್ಕ್ನ ಪ್ರವಾಸಿ ತಾಣವಾದ ಸೆಂಟ್ರಲ್ ಪಾರ್ಕ್‌ಗೆ ಧೃತಿ ಭೇಟಿ ಕೊಟ್ಟಿದ್ದಾರೆ. ಸೆಂಟ್ರಲ್ ಪಾರ್ಕ್‌ನಲ್ಲಿ ಮೂವರೂ ಒಂದೊಳ್ಳೆಯ ಊಟ ಸವಿದಿದ್ದಾರೆ. ಸೆಂಟ್ರಲ್ ಪಾರ್ಕ್‌ನಲ್ಲಿ ಲಂಚ್ ಎಂದು ಇನ್ಸ್ಟಾಗ್ರಾಂನಲ್ಲಿ ಅಡಿಬರಹ ನೀಡಿದ್ದಾರೆ. ಇದನ್ನೂ ಓದಿ: ಗೆಳೆಯನ ಜೊತೆ ರಂಜನಿ ರಾಘವನ್ ಲಾಂಗ್ ಡ್ರೈವ್

     

    View this post on Instagram

     

    A post shared by Drithi (@drithirajkumar)

    ಪುನೀತ್ ರಾಜ್‌ಕುಮಾರ್ ಹಿರಿಯ ಪುತ್ರಿ ಧೃತಿ ಕೆಲ ವರ್ಷಗಳಿಂದ ನ್ಯೂಯಾರ್ಕ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ ಶಿಕ್ಷಣ ಸಂಸ್ಥೆಯಲ್ಲಿ ಧೃತಿ ಶಿಕ್ಷಣ ಪೂರ್ಣಗೊಳಿಸಿ ಡಿಸೈನರ್ ಪದವಿ ಪಡೆದಿದರು. ಇತ್ತೀಚೆಗೆ ನಡೆಯ ಧೃತಿ ಗ್ರ್ಯಾಡ್ಯುಯೇಷನ್ ಸಮಾರಂಭಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್, ಸಹೋದರಿ ವಂದಿತಾ, ಸಹೋದರ ವಿನಯ್ ಕೂಡ ಭಾಗಿಯಾಗಿ ವಿಶ್ ಮಾಡಿದ್ದರು.

    ‘ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್’ ಶಿಕ್ಷಣ ಸಂಸ್ಥೆಯಲ್ಲಿ ಫ್ಯಾಷನ್ ಡಿಸೈನ್, ಇಂಟೀರಿಯರ್ ಡಿಸೈನ್, ಗ್ರಾಫಿಕ್ಸ್ ಡಿಸೈನ್ ಸೇರಿದಂತೆ ಹಲವು ಕೋರ್ಸ್‌ಗಳಿವೆ.

    ಪುನೀತ್ ಪತ್ನಿ ಅಶ್ವಿನಿ ಮತ್ತು ಪ್ರಕೃತಿ ಬನವಾಸಿ ಬರಹದಲ್ಲಿ ಅಪ್ಪು ಜೀವನ ಚರಿತ್ರೆ ಬರಲಿದೆ. ಇತ್ತೀಚೆಗೆ ಪುಸ್ತಕದ ಲುಕ್ ಕೂಡ ರಿಲೀಸ್ ಮಾಡಿದ್ದರು. ಸದ್ಯದಲ್ಲೇ ಬಿಡುಗಡೆಯ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ.