Tag: ಧೃತಿ

  • ವಿದೇಶದಲ್ಲಿ ಪದವಿ ಪಡೆದ ಪುನೀತ್ ರಾಜ್‌ಕುಮಾರ್ ಪುತ್ರಿ ಧೃತಿ

    ವಿದೇಶದಲ್ಲಿ ಪದವಿ ಪಡೆದ ಪುನೀತ್ ರಾಜ್‌ಕುಮಾರ್ ಪುತ್ರಿ ಧೃತಿ

    ವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಪುತ್ರಿ ಧೃತಿ ಫಾರಿನ್‌ಲ್ಲಿ ಓದಿ ಪದವಿ ಪಡೆದಿದ್ದಾರೆ. ಪದವಿ ಪಡೆದ ಫೋಟೋವನ್ನು ಧೃತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 10 ಲಕ್ಷದ ಡೈಮಂಡ್ ರಿಂಗ್, 9 ಲಕ್ಷ ಮೌಲ್ಯದ ವಾಚ್- ‘ಭಜರಂಗಿ’ ನಟಿ ಬ್ಯಾಗ್ ಕದ್ದ ಆರೋಪಿ ಅರೆಸ್ಟ್

    ಪುನೀತ್ ರಾಜ್‌ಕುಮಾರ್ ಹಿರಿಯ ಪುತ್ರಿ ಧೃತಿ ಕೆಲ ವರ್ಷಗಳಿಂದ ನ್ಯೂಯಾರ್ಕ್‌ನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದರು. ‘ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್’ ಶಿಕ್ಷಣ ಸಂಸ್ಥೆಯಲ್ಲಿ ಧೃತಿ ಶಿಕ್ಷಣ ಪೂರ್ಣಗೊಳಿಸಿ ಡಿಸೈನರ್ ಪದವಿ ಪಡೆದಿದ್ದಾರೆ. ಪುನೀತ್ ಸಹೋದರಿಯ ಮಗಳು ಧನ್ಯಾ ರಾಮ್‌ಕುಮಾರ್ ಅವರು ಮನೆ ಮಗಳ ಸಾಧನೆಗೆ ಅವರ ಫೋಟೋ ಶೇರ್ ಮಾಡಿ ವಿಶ್ ಮಾಡಿದ್ದಾರೆ. ಫ್ಯಾನ್ಸ್ ಕೂಡ ಶುಭಹಾರೈಸಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ಗಿಂತ ತೆಲುಗಿನಲ್ಲೇ ಹೆಚ್ಚಾಯ್ತು ಜಾನ್ವಿ ಕಪೂರ್‌ಗೆ ಡಿಮ್ಯಾಂಡ್- ಫ್ಯಾನ್ಸ್‌ಗೆ ಗುಡ್ ನ್ಯೂಸ್

     

    View this post on Instagram

     

    A post shared by Drithi (@drithirajkumar)

    ‘ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್’ ಶಿಕ್ಷಣ ಸಂಸ್ಥೆಯಲ್ಲಿ ಫ್ಯಾಷನ್ ಡಿಸೈನ್, ಇಂಟೀರಿಯರ್ ಡಿಸೈನ್, ಗ್ರಾಫಿಕ್ಸ್ ಡಿಸೈನ್ ಸೇರಿದಂತೆ ಹಲವು ಕೋರ್ಸ್‌ಗಳಿವೆ.

    ಪುನೀತ್ ಪತ್ನಿ ಅಶ್ವಿನಿ ಮತ್ತು ಪ್ರಕೃತಿ ಬನವಾಸಿ ಬರಹದಲ್ಲಿ ಅಪ್ಪು ಜೀವನ ಚರಿತ್ರೆ ಬರಲಿದೆ. ಇತ್ತೀಚೆಗೆ ಪುಸ್ತಕದ ಲುಕ್ ಕೂಡ ರಿಲೀಸ್ ಮಾಡಿದ್ದರು. ಸದ್ಯದಲ್ಲೇ ಬಿಡುಗಡೆಯ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ.

  • ಅಮೆರಿಕಗೆ ತೆರಳಿದ ಅಪ್ಪು ಮಗಳು ಧೃತಿ

    ಅಮೆರಿಕಗೆ ತೆರಳಿದ ಅಪ್ಪು ಮಗಳು ಧೃತಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ಪುತ್ರಿ ಧೃತಿ ಅಮೆರಿಕಗೆ ತೆರಳಿದ್ದಾರೆ.

    ಅಪ್ಪು ನಿಧನರಾದ ಹಿನ್ನೆಲೆಯಲ್ಲಿ ಧೃತಿ ತಂದೆ ಅಂತಿಮ ದರ್ಶನಕ್ಕೆ ನ್ಯೂಯಾರ್ಕ್‍ನಿಂದ ಬೆಂಗಳೂರಿಗೆ ಬಂದಿದ್ದರು. ಇದೀಗ ಕಾರ್ಯಗಳು ಮುಗಿಯುತ್ತಿದ್ದಂತೆ 15 ದಿನಗಳ ನಂತರ ನ್ಯೂಯಾರ್ಕ್ ಹೊರಟಿದ್ದಾರೆ.

    DHRUTHI

    ತಂದೆಯ ಕಾರ್ಯವನ್ನು ಮುಗಿಸಿದ ಧೃತಿವಿದ್ಯಾಭ್ಯಾಸ ಮಾಡಲೇಂದು ನ್ಯೂಯಾರ್ಕ್‍ಗೆ ಹೊರಟಿದ್ದಾರೆ. ಮಗಳನ್ನು ಕಳುಹಿಸಿಕೊಡಲು ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಧೃತಿ ಸ್ಕಾಲರ್ ಶಿಪ್ ನೆರವಿನಿಂದ ನ್ಯೂಯಾರ್ಕ್‍ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದನ್ನೂ ಓದಿ:  ತಂದೆ ಅಂತಿಮ ದರ್ಶನ ಪಡೆದ ಪುತ್ರಿ ಧೃತಿ

    ಪುನೀತ್ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಧೃತಿ ವಿಮಾನದ ಮೂಲಕ ದೆಹಲಿಗೆ ಬಂದಿಳಿದಿದ್ದರು. ಬಳಿಕ ಅಲ್ಲಿಂದ ವಿಶೇಷ ವಿಮಾನದ ಮೂಲಕ ಅಕ್ಟೋಬರ್ 30ರಂದು ಸಂಜೆ 4:15ರ ಸುಮಾರಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅಲ್ಲಿಂದ ಪೊಲೀಸ್ ಭದ್ರತೆಯಲ್ಲಿಯೇ ನೇರವಾಗಿ ತಮ್ಮ ನಿವಾಸ ಸದಾಶಿವ ನಗರಕ್ಕೆ ತೆರಳಿ ಅಲ್ಲಿಂದ ಕಂಠೀರವ ಸ್ಟೇಡಿಯಂಗೆ ಬಂದು ಅಪ್ಪನಿಗೆ ಅಂತಿಮ ನಮನ ಸಲ್ಲಿಸಿದ್ದರು. ಇದನ್ನೂ ಓದಿ: ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

  • ತಂದೆ ಅಂತಿಮ ದರ್ಶನ ಪಡೆದ ಪುತ್ರಿ ಧೃತಿ

    ತಂದೆ ಅಂತಿಮ ದರ್ಶನ ಪಡೆದ ಪುತ್ರಿ ಧೃತಿ

    ಬೆಂಗಳೂರು: ಕೊನೆಗೂ ತಂದೆ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನವನ್ನು ಪುತ್ರಿ ಧೃತಿ ಪಡೆದರು.

    ಪುನೀತ್ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಧೃತಿ ಕೂಡಲೇ ಅಮೆರಿಕಾದಿಂದ ತವರಿನತ್ತ ಹೊರಟಿದ್ದಾರೆ. ವಿಶೇಷ ವಿಮಾನದ ಮೂಲಕ ಇಂದು ಮಧ್ಯಾಹ್ನ ದೆಹಲಿಗೆ ಬಂದಿಳಿದ ಧೃತಿ ಅಲ್ಲಿಂದ ಮತ್ತೆ ವಿಶೇಷ ವಿಮಾನದ ಮೂಲಕ ಸಂಜೆ 4.15ರ ಸುಮಾರಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಇದನ್ನೂ ಓದಿ: ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

    ಅಲ್ಲಿಂದ ಪೊಲೀಸ್ ಭದ್ರತೆಯಲ್ಲಿಯೇ ನೇರವಾಗಿ ತಮ್ಮ ನಿವಾಸ ಸದಾಶಿವ ನಗರಕ್ಕೆ ತೆರಳಿ ಅಲ್ಲಿಂದ ಕಂಠೀರವ ಸ್ಟೇಡಿಯಂಗೆ ಬಂದು ಅಪ್ಪನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ರಾಜ್‍ಕುಮಾರ್ ಮಕ್ಕಳ ಜೊತೆ ನಾನು ಆ್ಯಕ್ಟಿಂಗ್ ಮಾಡ್ಬೇಕುಂತ ಅಮ್ಮನಿಗೆ ಆಸೆ ಇತ್ತು: ರಚಿತಾ ರಾಮ್

    ಈಗಾಗಲೇ ಕತ್ತಲಾವರಿಸಿದ್ದರಿಂದ ಪುನೀತ್ ಅಂತ್ಯ ಕ್ರಿಯೆ ನಾಳೆ ನಡೆಯಲಿದೆ. ಈ ಸಂಬಂಧ ಮಾತನಾಡಿದ ಸಿಎಂ, 5.30 ನಂತರ ಅಂತ್ಯಕ್ರಿಯೆ ಮಾಡಲು ಸಾಧ್ಯವಿಲ್ಲ. ಯಾಕಂದರೆ ಜಾಗ ತುಂಬಾ ಕಿರಿದಾಗಿದ್ದು, ಕತ್ತಲಾದರೆ ಕಷ್ಟ ಸಾಧ್ಯ. ಹೀಗಾಗಿ ಪುನೀತ್ ಅವರ ಸಹೋದರ ಶಿವರಾಜ್‍ಕುಮಾರ್ ಅವರ ಬಳಿ ಹಾಗೂ ಕುಟುಂಬದ ಜೊತೆಗೆ ಚರ್ಚೆ ಮಾಡಿ ನಾಳೆ ಅಂತ್ಯಕ್ರಿಯೆ ನಡೆಸಲು ತೀರ್ಮಾನ ಮಾಡಲಾಗಿದೆ. ನಾಳೆವರೆಗೂ ಅಭಿಮಾನಿಗಳಿಗೆ ಬರಲು ಅವಕಾಶ ನೀಡಲಾಗಿದೆ. ದಯವಿಟ್ಟು ನೀವು ಸಹಕರಿಸಿ ಎಂದು ಮನವಿ ಮಾಡಿಕೊಂಡರು.

  • ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

    ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

    – ಬಿಕ್ಕಿ ಬಿಕ್ಕಿ ಅತ್ತ ಎರಡನೇ ಮಗಳು

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡಿರುವ ಅಭಿಮಾನಿಗಳು, ಸ್ಯಾಂಡಲ್‍ವುಡ್ ಸೇರಿದಂತೆ ಇಡೀ ಕುಟುಂಬವೇ ಕಣ್ಣೀರಿಡುತ್ತಿದೆ.

    ಅಪ್ಪು ಅವರ ಸದಾಶಿವನಗದರ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ದೊಡ್ಮನೆಯ ಕಿರಿಯ ಪುತ್ರ ಇನ್ನಿಲ್ಲ ಎನ್ನುವ ಆಘಾತದ ಸುದ್ದಿ ಬರುತ್ತಲೇ ಪುನೀತ್ ರಾಜ್‍ಕುಮಾರ್ ಅವರ ಇಡೀ ಕುಟುಂಬ ಕಣ್ಣೀರ ಮಡುವಿನಲ್ಲಿ ಮುಳುಗಿದೆ. ಪುನೀತ್ ಅವರ ನಿವಾಸ, ಕಂಠೀರವ ಸ್ಟೇಡಿಯಂ ಮುಂದೆ ಅಪ್ಪು ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ.

    ಜಿಮ್ ಮಾಡುವ ವೇಳೆ ಸುಸ್ತಾಗಿ ಎದೆ ನೋವು ಕಾಣಿಸಿಕೊಂಡಿದ್ದರಿಂದ ಕುಟುಂಬ, ವೈದ್ಯರ ಸಲಹೆ ಮೇರೆಗೆ ನಿನ್ನೆ 11 ಗಂಟೆಯ ಸುಮಾರಿಗೆ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟೊತ್ತಿಗಾಗಲೇ ವಿಧಿ ತನ್ನ ಆಟ ಮುಗಿಸಿತ್ತು. ಪುನೀತ್ ಇನ್ನಿಲ್ಲ ಎನ್ನವ ಸುದ್ದಿ ಬರುತ್ತಲೇ ಇಡಿ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ. ಪತಿ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಅಶ್ವಿನಿ ಕಣ್ಣೀರುಡುತ್ತಲೇ ಮೌನಕ್ಕೆ ಶರಣಾಗಿದ್ದಾರೆ. ಇತ್ತ ಮಗಳು ಕೂಡ ಬಿಕ್ಕಿಬಿಕ್ಕಿ ಅಳುತ್ತಿದ್ದು, ಹಿರಿಯ ಮಗಳು ಧೃತಿ ಅಮೆರಿಕಾದಲ್ಲಿ ವಾಸವಾಗಿದ್ದಾರೆ. ಇದೀಗ ಅಂತ್ಯಕ್ರಿಯೆ ನಡೆಸಲು ಇವರ ಬರುವಿಕೆಗಾಗಿ ಕಾಯುತ್ತಿದ್ದಾರೆ.  ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

    ಪುನೀತ್ ಅವರ ನಿಧನದ ಸುದ್ದಿ ತಿಳಿದ ಸ್ನೇಹಿತರು, ಚಿತ್ರರಂಗದ ಕಲಾವಿದರು, ಗಣ್ಯರು ಆಸ್ಪತ್ರೆಗೆ ದೌಡಾಯಿಸಿದ್ದರು. ಇಂದು ಪುನೀತ್ ಅವರ ಪಾರ್ಥಿವ ಶರೀರವನ್ನು ಅಭಿಮಾನಿಗಳ ದರ್ಶನಕ್ಕೆಂದು ಕಂಠೀರವ ಸ್ಟೇಡಿಯಂನಲ್ಲಿ ಇರಿಸಲಾಗಿದೆ. ನಾಳೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗುತ್ತದ್ದು, ರಾಜ್ಯದ ಮೂಲೇ ಮೂಲೆಗಳಿಂದ ಅಭಿಮಾನಿ ಬರುತ್ತಿದ್ದಾರೆ. ಇದನ್ನೂ ಓದಿ:   ಚಿಕ್ಕಮಗಳೂರಿನ ನೇಚರ್, ಕಾಫಿ ಅಂದ್ರೆ ಪುನೀತ್‍ಗೆ ತುಂಬಾ ಇಷ್ಟ: ಭರತ್