Tag: ಧೂಳು

  • ರೋಡ್ ಸರಿಪಡಿಸದಿದ್ರೆ ವೋಟ್ ಹಾಕಲ್ಲ- ರಾಜಕೀಯ ಪಕ್ಷಗಳಿಗೆ ಜನ ಚಾಲೆಂಜ್

    ರೋಡ್ ಸರಿಪಡಿಸದಿದ್ರೆ ವೋಟ್ ಹಾಕಲ್ಲ- ರಾಜಕೀಯ ಪಕ್ಷಗಳಿಗೆ ಜನ ಚಾಲೆಂಜ್

    ಬೆಂಗಳೂರು: ಇನ್ನೇನು ಕೆಲ ದಿನಗಳಲ್ಲೇ ರಾಜ್ಯದಲ್ಲಿ ಚುನಾವಣೆ ಬರಲಿದೆ. ಈಗಾಗಲೇ ರಾಜಕೀಯ ಪಕ್ಷಗಳು ಮುಂದಿನ ವಿಧಾನಸಭೆಯ ಚುನಾವಣಾ (Vidhanasabha Election) ತಯಾರಿಯಲ್ಲಿವೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಶಾಸಕರು, ಮುಖಂಡರು ಫುಲ್ ಆಕ್ಟೀವ್ ಆಗಿದ್ದಾರೆ. ಯಾವ ಕಡೆ ನೋಡಿದರೂ ಅಭಿವೃದ್ಧಿ ಕಾಮಗಾರಿಗಳು ಭರದಿಂದ ನಡೆಯುತ್ತಿದೆ. ಆದರೆ ಇಲ್ಲಿ ಮಾತ್ರ ರಸ್ತೆಗೆ ಟಾರ್ ತೋರಿಸಿ 2 ವರ್ಷಗಳೇ ಆಗಿದೆ. ಈ ಬಾರೀ ಯಾರಾದರೂ ವೋಟ್ ಹಾಕಿ ಅಂತಾ ಬನ್ನಿ ನೋಡೋಣ ಅಂತಾ ಜನ ರಾಜಕೀಯ ಪಕ್ಷಗಳಿಗೆ ಚಾಲೆಂಜ್ ಹಾಕಿದ್ದಾರೆ.

    ಹೌದು. 50 ಅಡಿಯ ರಸ್ತೆಯನ್ನ 80 ಅಡಿಗೆ ಅಗಲೀಕರಣ ಮಾಡಲು ಬಿಬಿಎಂಪಿ (BBMP) ಇದ್ದ ರಸ್ತೆಯ ಡಂಬರ್ ಅನ್ನ ತೆಗೆದುಹಾಕಿದ್ದು ಅಂದಿನಿಂದ ನಿತ್ಯ ವಾಹನ ಸವಾರರು ಜೆಲ್ಲಿಕಲ್ಲಿನ ರಸ್ತೆಯಲ್ಲೇ ಸಂಚಾರ ಮಾಡ್ತಿದ್ದಾರೆ. ರಸ್ತೆ ಆಗಲೀಕರಣದ ಹೆಸರಿನಲ್ಲಿ ರಸ್ತೆಯನ್ನ ಹಾಳು ಮಾಡಿದ್ದಾರೆ. ಇದರಿಂದ ರಸ್ತೆಯ ಪಕ್ಕದಲ್ಲಿರೋ ವಿಶ್ವೇಶ್ವರಯ್ಯ ಲೇಔಟ್ ಜನ ವಾಹನಗಳು ಹೋದಾಗೇಲ್ಲ ಹೇಳೋ ಧೂಳಿನಿಂದ ಸಾಕಾಗಿ ಹೋಗಿದ್ದಾರೆ. ಯಾವ ನಾಯಕರು ಈ ಕಡೆ ಬರೋದಿಲ್ಲ. ಇದ್ದ ರಸ್ತೆ ಹಾಳು ಮಾಡಿದ್ದಾರೆ. ಧೂಳಿನಿಂದ ಮನೆಯಲ್ಲಿ ಇರೋಕೆ ಆಗೋಲ್ಲ ಉಸಿರಾಟದ ಸಮಸ್ಯೆ ಸೇರಿದಂತೆ ಆರೋಗ್ಯದ ಸಮಸ್ಯೆಗಳು ಕಾಡುತ್ತಿದೆ ಎಂದು ಇಲ್ಲಿನ ಜನ ಹೇಳುತ್ತಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ರಂಗೇರಿದ ಚುನಾವಣಾ ಕಣ- ವಿಪಕ್ಷಗಳ ಆರೋಪಕ್ಕೆ ಸಿದ್ದರಾಮಯ್ಯ ಟಕ್ಕರ್

    ಇನ್ನೇನು ಚುನಾವಣೆ ಬಂತು, ನಾವೂ ಇಲ್ಲಿವರೆಗೆ ನಮ್ಮ ಶಾಸಕರು, ಮಾಜಿ ಶಾಸಕರು, ಕಾರ್ಪೋರೇಟರ್ ಗಳು, ಬಿಬಿಎಂಪಿ ಅಧಿಕಾರಿಗಳ ಬಳಿ ಹೋಗಿ ಹೋಗಿ ಸಾಕಾಗಿದೆ. ಈಗ ಮತ ಕೇಳಲು ಅವರು ಬರ್ತಾರಲ್ಲ ಧೈರ್ಯವಿದ್ರೇ ನಮ್ಮ ಲೇಔಟ್‍ಗೆ ಬಂದು ಮತ ಕೇಳಿ ನೋಡೋಣ ಅಂತಾ ಸ್ಥಳೀಯರು ಚಾಲೆಂಜ್ ಮಾಡ್ತಿದ್ದಾರೆ. ಇರೋ ರಸ್ತೆಯನ್ನೇ ಸರಿ ಮಾಡಿಸದೇ ಇರೋರು ಮುಂದೆ ಗೆದ್ದು ಯಾವ ಅಭಿವೃದ್ಧಿ ಮಾಡ್ತಾರೆ. ರಸ್ತೆ ಸರಿ ಮಾಡಿಸದೇ ಇದ್ರೇ ನಾವ್ಯಾರು ವೋಟ್ ಹಾಕಲ್ಲ ಅಂತಾ ಆಕ್ರೋಶಗೊಂಡಿದ್ದಾರೆ.

  • ಮೋಡಕ್ಕೆ ಮುತ್ತಿಕ್ಕಿ ಹೊರಟ ಧೂಳಿನ ಕಣ: ವಿಡಿಯೋ ನೋಡಿ

    ಮೋಡಕ್ಕೆ ಮುತ್ತಿಕ್ಕಿ ಹೊರಟ ಧೂಳಿನ ಕಣ: ವಿಡಿಯೋ ನೋಡಿ

    ಚಿಕ್ಕಮಗಳೂರು: ವಿಜ್ಞಾನ-ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಗಾಳಿ, ನೀರು, ಬೆಂಕಿ ಪ್ರಕೃತಿ ಮುಂದೆ ಮನುಷ್ಯ ಸೊನ್ನೆಯೇ. ಚಿಕ್ಕಮಗಳೂರಿನಲ್ಲಿ ಈಗ 28-30 ಡಿಗ್ರಿ ಸೆಲ್ಸಿಯಸ್‍ನಷ್ಟು ಉಷ್ಣಾಂಶ ದಾಖಲಾಗುತ್ತಿದೆ. ಈ ಬಿಸಿಲಿಗೆ ಜನ ಬಸವಳಿದಿದ್ದಾರೆ.

    ಬೀಸುತ್ತಿರುವ ಗಾಳಿ ಕೂಡ ಬೆಂಕಿಯನ್ನು ಉಗುಳುತ್ತಿದೆ. ಹೀಗಿರುವಾಗ ಕಾಫಿನಾಡ ರಣಬಿಸಿಲ ಮಧ್ಯೆಯೂ ನೋಡ ನೋಡ್ತಿದ್ದಂತೆ ಜಿಲ್ಲಾ ಆಟದ ಮೈದಾನದಲ್ಲಿ ಬಿಸಿದ ಬಿರುಗಾಳಿಗೆ ಧೂಳಿನ ಕಣ ಕೂಡ ಮೋಡಕ್ಕೆ ಮುತ್ತಿಕ್ಕಿ ಹೊರಟಂತೆ ಭಾಸವಾಗಿದೆ.

    ಕ್ಷಣಾರ್ಧದಲ್ಲಿ ಬೀಸಿದ ಬಿರುಗಾಳಿ ಜನ ಅತ್ತ ದೃಷ್ಟಿ ಹಾಯುಸುವಷ್ಟರಲ್ಲಿ ಮುಗಿಲೆತ್ತರಕ್ಕೆ ಬೆಳೆದು ನಿಂತಿದೆ. ಈ ದೃಶ್ಯವನ್ನು ಕಣ್ಣಾರೆ ಕಂಡ ಸ್ಥಳಿಯರು ಪ್ರಕೃತಿಯಲ್ಲಿನ ಸತ್ಯ ಕಂಡು ಆಶ್ಚರ್ಯಕ್ಕೀಡಾಗಿದ್ದಾರೆ. ಅಲ್ಲದೆ ಈ ಘಳಿಗೆಯನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಂಭ್ರಮಿಸಿದ್ದಾರೆ.

  • ಪ್ರತಕರ್ತರು ಪ್ರಶ್ನೆ ಕೇಳಿದ ಕೂಡಲೇ ಸಮಸ್ಯೆ ಚೆಕ್ ಮಾಡಲು ಬೈಕ್ ಏರಿದ ಸಚಿವ!

    ಪ್ರತಕರ್ತರು ಪ್ರಶ್ನೆ ಕೇಳಿದ ಕೂಡಲೇ ಸಮಸ್ಯೆ ಚೆಕ್ ಮಾಡಲು ಬೈಕ್ ಏರಿದ ಸಚಿವ!

    ಕೊಪ್ಪಳ: ನಗರದಲ್ಲಿನ ಧೂಳಿನ ಸಮಸ್ಯೆ ಅರಿಯಲು ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್ ಅವರು ಬೈಕ್ ಏರಿ ಪರಿಶೀಲನೆ ಮಾಡಿದ್ದಾರೆ.

    ಹೌದು, ಕೊಪ್ಪಳದ ಪ್ರಮುಖ ರಸ್ತೆಗಳಲ್ಲಿ ದಿನೇ-ದಿನೇ ಧೂಳು ಹೆಚ್ಚಾಗುತ್ತಿದ್ದು, ಸವಾರರು, ಚಾಲಕರು ಸೇರಿದಂತೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಸಚಿವರು ಅಧಿಕಾರಿಗಳು, ಸ್ಥಳೀಯ ಶಾಸಕರ ಜೊತೆಗೆ ಪರಿಶೀಲನೆ ನಡೆಸಿದ್ದಾರೆ.

    ನಗರದಲ್ಲಿ ಸಚಿವ ಆರ್.ಶಂಕರ್ ಅವರು ಇಂದು ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ರಸ್ತೆ ಸಮಸ್ಯೆಯ ಕುರಿತು ಪತ್ರಕರ್ತರು ಪ್ರಶ್ನಿಸುತ್ತಿದ್ದಂತೆ ಅಲ್ಲಿಂದ ಹೊರ ನಡೆದ ಸಚಿವ ಶಂಕರ್, ಅಲ್ಲಿಯೇ ಇದ್ದ ಪತ್ರಕರ್ತರೊಬ್ಬರ ಬೈಕ್ ಏರಿ, ಹೆಲ್ಮೆಟ್ ಹಾಕಿಕೊಳ್ಳದೇ ರೈಡ್ ಮಾಡಿದರು. ಕೊಪ್ಪಳ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೈಕ್ ಚಾಲನೆ ಮಾಡಿ, ಸಮಸ್ಯೆಯನ್ನು ಅರಿತರು.

    ಈ ವೇಳೆ ಸಚಿವ ಆರ್.ಶಂಕರ್ ಅವರಿಗೆ ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಅಧಿಕಾರಿಗಳು ಸಾಥ್ ನೀಡಿದರು. ಜಿಲ್ಲಾಧಿಕಾರಿ ಕಚೇರಿ ತಲುಪಿದ ಸಚಿವರು, ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ಗರಂ ಆದರು. ತಕ್ಷಣವೇ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಧೂಳಿಗೆ 7 ದುರ್ಮರಣ, 21 ಮಂದಿಗೆ ಗಾಯ!

    ಧೂಳಿಗೆ 7 ದುರ್ಮರಣ, 21 ಮಂದಿಗೆ ಗಾಯ!

    ಲಕ್ನೋ: ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಧೂಳಿನ ಬಿರುಗಾಳಿಗೆ ಏಳು ಮಂದಿ ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರದ ಅಧಿಕೃತ ವಕ್ತಾರರು ತಿಳಿಸಿದ್ದಾರೆ.

    ಕಳೆದ 24 ಗಂಟೆಗಳಲ್ಲಿ ಧೂಳಿನ ಬಿರುಗಾಳಿಯಿಂದ ಏಳು ಮಂದಿ ಮೃತಪಟ್ಟಿದ್ದಾರೆ. ಗೋಂಡಾ ಮತ್ತು ಸೀತಾಪುರದಲ್ಲಿ ಮೂರು ಮಂದಿ ಮೃತಪಟ್ಟಿದ್ದು, ಫೈಜಾಬಾದ್ ನಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ವಕ್ತಾರರು ಲಕ್ನೋದಲ್ಲಿ ಹೇಳಿದ್ದಾರೆ.

    ಇನ್ನು ಫೈಜಾಬಾದ್ ನಲ್ಲಿ 11 ಮಂದಿ ಹಾಗೂ ಸೀತಾಪುರದಲ್ಲಿ 10 ಮಂದಿ ಗಾಯಗೊಂಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಹಿತಿ ಪಡೆದಿದ್ದು, ಗಾಯಗೊಂಡವರಿಗೆ ಸರಿಯಾದ ಚಿಕಿತ್ಸೆಗೆ ಅವಕಾಶ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಅಷ್ಟೇ ಅಲ್ಲದೇ ಧೂಳಿನ ಬಿರುಗಾಳಿಯಿಂದ ಮೃತಪಟ್ಟವರಿಗೆ ಪರಿಹಾರ ಧನವನ್ನು ಪಾವತಿಸಬೇಕೆಂದು ಆದೇಶಿಸಿದ್ದಾರೆ.

    ಯೋಗಿ ಆದಿತ್ಯನಾಥ್ ಅವರು ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದು, ರಾಜ್ಯ ಸರ್ಕಾರವು ಧೂಳಿನ ಬಿರುಗಾಳಿ ಮತ್ತು ಇತರೆ ಸಂಬಂಧಿತ ಘಟನೆಗಳಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ ಎಲ್ಲಾ ಸಹಾಯವನ್ನು ವಿಸ್ತರಿಸಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.

  • ಬೆಂಗ್ಳೂರು ವಿಮಾನ ನಿಲ್ದಾಣದಲ್ಲಿ ಹೊಸ ರನ್ ವೇ ನಿರ್ಮಾಣಕ್ಕೆ ಸ್ಥಳೀಯರ ಆಕ್ಷೇಪ

    ಬೆಂಗ್ಳೂರು ವಿಮಾನ ನಿಲ್ದಾಣದಲ್ಲಿ ಹೊಸ ರನ್ ವೇ ನಿರ್ಮಾಣಕ್ಕೆ ಸ್ಥಳೀಯರ ಆಕ್ಷೇಪ

    ಬೆಂಗಳೂರು: ಕೆಂಪೇಗೌಡ ಅಂತರಾಷ್ಟೀಯ ವಿಮಾನ ನಿಲ್ದಾಣದದಲ್ಲಿ ಹೊಸದಾಗಿ ಮತ್ತೊಂದು ರನ್ ವೇ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅದು ವಿಮಾನ ನಿಲ್ದಾಣದ ಜಾಗದಲ್ಲೇ ನಡೆಯುತ್ತಿದ್ರೂ ಸ್ಥಳೀಯರು ಮಾತ್ರ ಈ ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

    ಹೊಸದಾಗಿ ನಾಲ್ಕು ಕಿಲೋ ಮೀಟರ್ ಉದ್ದದ ರನ್ ವೇ ನಿರ್ಮಾಣ ಕಾರ್ಯ ಭರದಿಂದ ಸಾಗ್ತಿದೆ. ಆದ್ರೆ ಈ ಕಾರ್ಯ ರನ್ ವೇ ಕಾಮಗಾರಿಯ ಪಕ್ಕದಲ್ಲೇ ಇರುವ ಮೈಲನಹಳ್ಳಿಯ ಜನರ ನಿದ್ದೆ ಕೆಡಿಸಿದೆ. ಇದಕ್ಕೆ ಕಾರಣ ಧೂಳು. ಕಾಮಗಾರಿ ನಡೆಯುವ ಸ್ಥಳದಿಂದ ವಿಪರೀತವಾಗಿ ಧೂಳು ಏಳುತ್ತಿದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮದ ಜೊತಗೆ ಕೃಷಿ ಚಟುವಟಿಕೆಗೂ ಸಮಸ್ಯೆ ಎದುರಾಗ್ತಿದೆ. ಬೆಳೆದ ಬೆಳೆಗಳ ಮೇಲೆ ಧೂಳು ಕೂರುತ್ತಿವೆ. ರೇಷ್ಮೆ ಸೊಪ್ಪಿನ ಮೇಲೆ ಧೂಳು ಕೂರುವುದರಿಂದ ಗಿಡದ ಬುಡಕ್ಕೆ ನೀರು ಬಿಡೋದ್ರ ಜೊತೆಗೆ ಸೊಪ್ಪಿಗೂ ಬಿಡುವಂತ ಪರಿಸ್ಥತಿ ಎದುರಾಗಿದೆ ಅಂತ ರೈತರು ತಮ್ಮ ಅಳಲನ್ನ ತೋಡಿಕೊಳ್ತಿದ್ದಾರೆ.


    2001ರಲ್ಲೂ ಸಹ ಮೊದಲು ರನ್ ವೇ ಮಾಡಿದಾಗ ಇದೇ ರೀತಿ ಧೂಳಿನ ಸಮಸ್ಯೆ ಎದುರಾಗಿತ್ತು. ಈಗ 200 ಮೀಟರ್ ಹತ್ತಿರದಲ್ಲಿ ರನ್ ವೇ ಕಾರ್ಯ ನಡೆಯುತ್ತಿದೆ. ಧೂಳಿನಿಂದಾಗಿ ನಮಗೆ ಹಾಗೂ ದನಕರುಗಳಿಗೂ ಸಮಸ್ಯೆ ಆಗ್ತಿದೆ. ಧೂಳನ್ನ ನಿಯಂತ್ರಿಸಿ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಎಲ್ಲಾ ಇಲಾಖೆಗಳಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜವಾಗಿಲ್ಲ ಅಂತಾ ಸ್ಥಳೀಯ ನಿವಾಸಿ ಶಶಿಕುಮಾರ್ ಹೇಳಿದ್ದಾರೆ.

    ಧೂಳಿನಿಂದ ರೇಷ್ಮೆ ಬೆಳೆಗೆ ಪೆಟ್ಟು ಬಿದ್ದಿದೆ. ಪರಿಹಾರಕ್ಕೆ ರೈತರು ಆಗ್ರಹಿಸಿದ್ದಾರೆ. ಅಲ್ಲದೆ ಧೂಳು ಹೆಚ್ಚಾಗ್ತಿದೆ ಅಂತ ಈಗಾಗ್ಲೇ ಎರಡು ಬಾರಿ ಕಾಮಗಾರಿಯನ್ನ ನಿಲ್ಲಿಸಿ ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆ ಮಾಡಿದಾಗ ನೀರು ಹಾಕಿಕೊಂಡು ಕೆಲಸ ಮಾಡ್ತಾರೆ. ತದನಂತರ ಮತ್ತೆ ಧೂಳು ಏಳುತ್ತಿದೆ. ಹೀಗಾಗಿ ಮತ್ತೆ ಹೀಗೆ ಮುಂದುವರೆದರೆ ಕಾಮಗಾರಿ ನಿಲ್ಲಿಸಿ ಪ್ರತಿಭಟಿಸೋದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.