Tag: ಧೂಮಪಾನ

  • ಬ್ರಿಟನ್‌ನಲ್ಲಿ ಸಿಗರೇಟ್ ಬ್ಯಾನ್ ಮಾಡಲಿದ್ದಾರಾ ರಿಷಿ ಸುನಾಕ್?

    ಬ್ರಿಟನ್‌ನಲ್ಲಿ ಸಿಗರೇಟ್ ಬ್ಯಾನ್ ಮಾಡಲಿದ್ದಾರಾ ರಿಷಿ ಸುನಾಕ್?

    ಲಂಡನ್: ಮುಂದಿನ ದಿನಗಳಲ್ಲಿ ಸಿಗರೇಟ್ (Cigarette) ಖರೀದಿಸುವುದನ್ನು ನಿಷೇಧಿಸುವ ಕ್ರಮಗಳನ್ನು ಪರಿಚಯಿಸಲು ಬ್ರಿಟನ್ (Britain) ಪ್ರಧಾನಿ ರಿಷಿ (Rishi Sunak) ಸುನಾಕ್ ಯೋಜಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

    2009ರ ಜನವರಿ 1 ಹಾಗೂ ಅದರ ನಂತರ ಜನಿಸಿದವರು ಯಾರೇ ಆದರೂ ತಂಬಾಕು ಖರೀದಿ ಮಾಡಕೂಡದು ಎಂದು ಕಳೆದ ವರ್ಷ ನ್ಯೂಜಿಲೆಂಡ್ ಘೋಷಿಸಿತ್ತು. ಅದರಂತೆಯೇ ಈಗ ಸುನಾಕ್ ಧೂಮಪಾನವನ್ನು (Smoking) ನಿಷೇಧಿಸುವ ಕ್ರಮಗಳನ್ನು ಜಾರಿಗೆ ತರಲು ಯೋಜಿಸಿದ್ದಾರೆ ಎಂದು ವರದಿಯಾಗಿದೆ.

    2030ರ ವೇಳೆಗೆ ಧೂಮಪಾನವನ್ನು ತ್ಯಜಿಸುವ ನಮ್ಮ ಗುರಿಯನ್ನು ಸಾಧಿಸಲು ನಾವು ಹೆಚ್ಚಿನ ಜನರನ್ನು ಪ್ರೋತ್ಸಾಹಿಸುತ್ತಿದ್ದೆವೆ. ಅದಕ್ಕಾಗಿ ನಾವು ಈಗಾಗಲೇ ಧೂಮಪಾನ ಮಾಡುವವರ ಸಂಖ್ಯೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಬ್ರಿಟಿಷ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಈ ಕ್ರಮಗಳಲ್ಲಿ ಉಚಿತ ವೇಪ್ ಕಿಟ್‌ಗಳು, ಗರ್ಭಿಣಿಯರು ಧೂಮಪಾನ ತೊರೆಯುವಂತೆ ಪ್ರೋತ್ಸಾಹಿಸಲು ವೋಚರ್ ಯೋಜನೆ ಹಾಗೂ ಸಿಗರೇಟ್ ಪ್ಯಾಕ್‌ಗಳಲ್ಲಿ ಕಡ್ಡಾಯವಾಗಿ ಎಚ್ಚರಿಕೆಯ ಸೂಚನೆಗಳನ್ನು ನೀಡುವುದನ್ನು ಸೇರಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೈತ್ರಿ ಅಧಿಕೃತಗೊಂಡರೂ ಸೀಟು ಹಂಚಿಕೆ ಕಗ್ಗಂಟು – ದೋಸ್ತಿಗಳ ಲೆಕ್ಕಾಚಾರ ಏನು?

    ಪರಿಗಣನೆಯಲ್ಲಿರುವ ಈ ನೀತಿಗಳು ಮುಂದಿನ ವರ್ಷದ ನಿರೀಕ್ಷಿತ ಚುನಾವಣೆಗೂ ಮುನ್ನ ಸುನಾಕ್ ತಂಡದ ಹೊಸ ಗ್ರಾಹಕ ಕೇಂದ್ರಿತ ಯೋಜನೆಯ ಭಾಗವಾಗಿರಲಿದೆ ಎಂದು ವರದಿಗಳು ಹೇಳಿವೆ.

    ಚಿಲ್ಲರೆ ವ್ಯಾಪಾರಿಗಳು ಮಕ್ಕಳಿಗೆ ಉಚಿತ ವೇಪ್‌ಗಳ ಮಾದರಿಗಳನ್ನು ನೀಡುವುದನ್ನು ಅನುಮತಿಸುವ ಕೆಲ ಸಡಿಲಿಕೆಗಳನ್ನು ಮುಚ್ಚುವುದಾಗಿ ತಿಳಿಸಿವೆ. ಜುಲೈನಲ್ಲಿ ಇಂಗ್ಲೆಂಡ್ ಹಾಗೂ ವೇಲ್ಸ್‌ನ ಕೌನ್ಸಿಲ್‌ಗಳು ಪರಿಸರ ಹಾಗೂ ಜನರ ಆರೋಗ್ಯದ ಆಧಾರದ ಮೇಲೆ 2024ರ ವೇಳೆಗೆ ಏಕಬಳಕೆಯ ವೇಪ್‌ಗಳ ಮಾರಾಟವನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಕರೆ ನೀಡಿವೆ. ಇದನ್ನೂ ಓದಿ: ಚೈತ್ರಾ& ಗ್ಯಾಂಗ್‍ನ ಸಿಸಿಬಿ ಕಸ್ಟಡಿ ಅಂತ್ಯ- ಮತ್ತೆ ಕಸ್ಟಡಿಗಾ?, ಪರಪ್ಪನ ಅಗ್ರಹಾರಕ್ಕಾ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್ ಬಾಸ್ ಶೋನಲ್ಲೇ ‘ಧಮ್’ ಹೊಡೆದ ಸಲ್ಮಾನ್ ಖಾನ್

    ಬಿಗ್ ಬಾಸ್ ಶೋನಲ್ಲೇ ‘ಧಮ್’ ಹೊಡೆದ ಸಲ್ಮಾನ್ ಖಾನ್

    ಟಿಟಿ (OTT)ಗಾಗಿ ನಡೆಯುತ್ತಿರುವ ಹಿಂದಿಯ ಬಿಗ್ ಬಾಸ್ ಶೋನಲ್ಲಿ ಎಡವಟ್ಟೊಂದು ನಡೆದಿದೆ. ಈ ಶೋ ಅನ್ನು ನಿರೂಪಿಸುತ್ತಿರುವಾಗಲೇ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸಿಗರೇಟು ಸೇವನೆ (Smoking) ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಆರೋಪಕ್ಕೆ ಪುಷ್ಠಿ ನೀಡುವಂತೆ ಅವರ ಕೈಯಲ್ಲಿ ಸಿಗರೇಟು ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ವಾರಾಂತ್ಯಕ್ಕೆ ಸಲ್ಮಾನ್ ಖಾನ್ (Salman Khan) ಬಿಗ್ ಬಾಸ್ ಮನೆಗೆ ಬಂದು, ಸ್ಪರ್ಧಾಳುಗಳ ಜೊತೆ ಮಾತನಾಡುತ್ತಾರೆ. ಸಾಕಷ್ಟು ಸಲ ಸ್ಪರ್ಧಿಗಳ ಕಾಲೆಳೆಯುತ್ತಾರೆ. ಒಂದೊಂದು ಬಾರಿ ಕೋಪವನ್ನೂ ಮಾಡಿಕೊಳ್ಳುತ್ತಾರೆ. ಮೊನ್ನೆಯಷ್ಟೇ ಲಿಪ್ ಲಾಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗರಂ ಆಗಿದ್ದ ಸಲ್ಮಾನ್, ‘ಇದೊಂದು ಫ್ಯಾಮಿಲಿ ಶೋ. ಎಲ್ಲೆ ಮೀರದಂತೆ ನಡೆದುಕೊಳ್ಳಿ’ ಎಂದು ಕಿವಿಮಾತು ಹೇಳಿದ್ದರು. ಅದಾದ ಎರಡೇ ವಾರಕ್ಕೆ ಸಿಗರೇಟು ಹಿಡಿದುಕೊಂಡಿರುವ ಸಲ್ಮಾನ್ ಫೋಟೋ ವೈರಲ್ ಆಗಿದೆ.

    ಸಲ್ಮಾನ್ ಗೆ ಟಾಂಗ್ ಕೊಟ್ಟಿದ್ದ ನಟಿ

    ಬಿಗ್ ಬಾಸ್ ನಲ್ಲಿ ನಡೆದ ಲಿಪ್ ಲಾಕ್ ಘಟನೆಯು ಪರ ವಿರೋಧದ ಮಾತುಗಳಿಗೆ ಕಾರಣವಾಗುತ್ತಿದೆ. ಈ ಶೋ ಅನ್ನು ನಡೆಸಿಕೊಡುತ್ತಿರುವ ಸಲ್ಮಾನ್ ಖಾನ್ ಲಿಪ್ ಲಾಕ್ ಮಾಡಿಕೊಂಡಿದ್ದ ನಟಿ ಆಕಾಂಕ್ಷಾ ಪುರಿ ಮತ್ತು ಮಾಡೆಲ್ ಜದ್ ಹದೀದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದು ಫ್ಯಾಮಿಲಿ ಶೋ ಅಸಭ್ಯವಾಗಿ ನಡೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದ್ದರು.

    ಸಲ್ಮಾನ್ ಖಾನ್ ಆಡಿದ ಮಾತಿಗೆ ಬಿಗ್ ಬಾಸ್ ಮನೆಯಿಂದ ಆಚೆ ಬಂದಿರುವ ಆಕಾಂಕ್ಷ ಪುರಿ ತಿರುಗೇಟು ನೀಡಿದ್ದಾರೆ. ಅಸಭ್ಯದ ಬಗ್ಗೆ ಮಾತನಾಡುವ ನೀವು, ಆ ದೃಶ್ಯವನ್ನು ಪ್ರಸಾರ ಮಾಡಿದವರ ವಿರುದ್ಧ ಯಾಕೆ ಮಾತನಾಡುತ್ತಿಲ್ಲ ಎಂದಿದ್ದಾರೆ. ಫ್ಯಾಮಿಲಿ ಶೋ ಎನ್ನುವ ಎಚ್ಚರಿಕೆಯ ನಡುವೆಯೂ ಅದನ್ನು ಪ್ರಸಾರ ಮಾಡಬಾರದಿತ್ತು ಎಂದು ಸಲ್ಮಾನ್ ಮಾತಿಗೆ ತಿರುಗೇಟು ನೀಡಿದ್ದಾರೆ.

    ಬಿಗ್ ಬಾಸ್ ಶೋನಲ್ಲಿ ನಟಿ ಆಕಾಂಕ್ಷಾ ಪುರಿ ಮತ್ತು ಮಾಡೆಲ್ ಜದ್ ಹದೀದ್ (Jad Hadid) ಲಿಪ್ ಲಾಕ್ ಮಾಡಿಕೊಂಡ ವಿಚಾರ ಭಾರೀ ಸದ್ದು ಮಾಡಿತ್ತು. ಮೂವತ್ತು ಸೆಕೆಂಡ್ ಗಳ ಕಾಲ ಇಬ್ಬರೂ ಲಿಪ್ ಲಾಕ್ (Lip Lock) ಮಾಡಿಕೊಂಡಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು. ಈ ವಿಚಾರವಾಗಿ ಸಲ್ಮಾನ್ ಖಾನ್ ಕೂಡ ಬೇಸರ ವ್ಯಕ್ತಪಡಿಸಿದ್ದರು. ಇದೊಂದು ಫ್ಯಾಮಿಲಿ ಶೋ ಎಲ್ಲೆ ಮೀರದಂತೆ ನಡೆದುಕೊಳ್ಳಿ ಎಂದು ಕಿವಿಮಾತು ಹೇಳಿದ್ದರು.

    ಲಿಪ್ ಲಾಕ್ ನನಗೆ ಬೇಸರವಿಲ್ಲ ಎಂದ ಆಕಾಂಕ್ಷಾ

    ಲಿಪ್ ಲಾಕ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಿಗ್ ಬಾಸ್ (Bigg Boss)  ಮನೆಯಿಂದ ಆಕಾಂಕ್ಷಾ ಪುರಿ (Akanksha Puri) ಹೊರ ಬಂದಿದ್ದರು. ದೊಡ್ಮನೆಯಲ್ಲಿ ಚೆನ್ನಾಗಿ ಆಟ ಆಡದೇ ಇರುವ ಕಾರಣಕ್ಕಾಗಿ ಅವರನ್ನು ಎಲಿಮಿನೇಟ್ ಮಾಡಲಾಗಿತ್ತು. ಬಿಗ್ ಬಾಸ್ ಮನೆಯಿಂದ ಆಕಾಂಕ್ಷಾ ಆಚೆ ಬರುತ್ತಿದ್ದಂತೆಯೇ ಲಿಪ್ ಲಾಪ್ ಬಗ್ಗೆಯೇ ಮಾಧ್ಯಮಗಳು ಪ್ರಶ್ನೆ ಮಾಡಿದ್ದವು.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಆಕಾಂಕ್ಷಾ, ‘ಲಿಪ್ ಲಾಕ್ ಮಾಡಿಕೊಂಡಿದ್ದಕ್ಕೆ ನನಗೆ ಯಾವುದೇ ಬೇಸರವಿಲ್ಲ. ಅದೊಂದು ಟಾಸ್ಕ್ ಆಗಿತ್ತು. ಅದನ್ನು ಟಾಸ್ಕ್ ಅಂದುಕೊಂಡೆ ನಾನು ಅದಕ್ಕೆ ಸಮ್ಮತಿಸಿದ್ದೆ ಮತ್ತು ಮಾಡಿದ್ದೆ. ಈ ಕುರಿತು ಯಾವುದೇ ಬೇಸರ ನನಗಿಲ್ಲ’ ಎಂದಿದ್ದರು.

     

    ಲಿಪ್ ಲಾಕ್ ಮಾಡಬೇಕು ಎನ್ನುವುದು ಟಾಸ್ಕ್ ಅಲ್ಲದೇ ಇದ್ದರೂ, ಮನೆಯಲ್ಲಿದ್ದವರು ಪ್ರಚೋದಿಸಿದರು ಎನ್ನುವ ಕಾರಣಕ್ಕಾಗಿ ನಡೆದ ಘಟನೆ ಅದಾಗಿದ್ದರೂ ಆಕಾಂಕ್ಷಾ ಮಾತ್ರ ಅದೊಂದು ಟಾಸ್ಕ್ ಎಂದು ಸಮರ್ಥಿಸಿದ್ದರು. ಆ ಟಾಸ್ಕ್ ಅನ್ನು ನಾನು ಮಾಡಲೇಬೇಕಿತ್ತು ಎಂದು ಹೇಳಿಕೊಂಡಿದ್ದರು.  ಜನ ಏನೇ ಅಂದರೂ, ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿದರು ನಾನು ನನ್ನ ಕೆಲಸ ಮಾಡಿದ್ದೇನೆ ಎಂದಿದ್ದಾರೆ ಆಕಾಂಕ್ಷಾ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧಮ್ ಹೊಡೆದು ಕೊರೊನಾಗೆ ತುತ್ತಾಗದಿರಿ

    ಧಮ್ ಹೊಡೆದು ಕೊರೊನಾಗೆ ತುತ್ತಾಗದಿರಿ

    ದ್ಯ ಎಲ್ಲೆಡೆ ಕೇಳಿ ಬರುತ್ತಿರುವ ಮಾತು ಕೊರೊನಾ ವೈರಸ್ ಮಾತ್ರ. ವಿಶ್ವವ್ಯಾಪಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್‍ಗೆ ಘಟಾನುಘಟಿ ರಾಷ್ಟ್ರಗಳು ತತ್ತರಿಸಿ ಹೋಗಿವೆ. ಭಾರತ ಕೂಡ ಕೊರೊನಾ ವೈರಸ್ ಹಾವಳಿಗೆ ತುತ್ತಾಗಿದ್ದು, ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಂದಿಗೆ ಕೊರೊನಾ ಸೋಂಕು ಬಹುಬೇಗ ತಗಲುತ್ತದೆ. ಅದರಲ್ಲೂ ಧೂಮಪಾನ ಪ್ರಿಯರಿಗೆ ಕೊರೊನಾ ವೈರಸ್ ತಟ್ಟುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನಗಳು ತಿಳಿಸಿವೆ.

    ಆಗಾಗ ಬಾಯಿ, ಮೂಗು, ಕಣ್ಣು ಮುಟ್ಟಬೇಡಿ ಇದರಿಂದ ಕೊರೊನಾ ವೈರಸ್ ಬಹುಬೇಗ ಹರಡುತ್ತದೆ ಎಂದು ವೈದ್ಯರು, ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ. ಆದರೆ ಧೂಮಪಾನ ಮಾಡುವಾಗ ಕೈ ಬಾಯಿಗೆ ತಾಗುತ್ತದೆ, ಬಾಯಿ ಮೂಲಕ ವೈರಸ್ ದೇಹವನ್ನು ಸೇರಿ ಶ್ವಾಸಕೋಶಕ್ಕೆ ಹಾನಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

    ಧೂಮಪಾನ ಮಾಡಿದ್ದರಿಂದ ಶ್ವಾಸಕೋಶಕ್ಕೆ ಮೊದಲೇ ಹಾನಿಯಾಗಿರುತ್ತದೆ. ಈಗ ಕೊರೊನಾ ವೈರಸ್ ತಗಲಿದರೆ ಉಸಿರಾಟದ ತೊಂದರೆ ಜಾಸ್ತಿಯಾಗುತ್ತದೆ. ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ತಮವಾಗಿರಬೇಕು. ಆದರೆ ಧೂಮಪಾನಿಗಳ ಶ್ವಾಸಕೋಶ ಮೊದಲೇ ಹಾನಿಯಾಗಿತ್ತದೆ ಹೀಗಾಗಿ ಸೋಂಕು ಕಾಣಿಸಿಕೊಂಡರೆ ಅವರ ದೇಹದಲ್ಲಿ ಸೋಂಕನ್ನು ಎದರಿಸುವ ಶಕ್ತಿ ತೀರ ಕಡಿಮೆ ಇರುತ್ತದೆ. ಪರಿಸ್ಥಿತಿ ಮತ್ತಷ್ಟು ಗಂಭೀರವಾದರೆ ಶ್ವಾಸನಾಳದಲ್ಲಿ ದ್ರವ ತುಂಬಿಕೊಂಡು, ಆಮ್ಲಜನಕ ಸರಿಯಾಗಿ ದೊರೆಯದೆ ನ್ಯೋಮೋನಿಯಾ ಉಂಟಾಗಿ ಉಸಿರಾಡಲು ಕಷ್ಟವಾಗಿ ಸಾವಿಡೀಡಾಗುವ ಸಾಧ್ಯತೆ ಹೆಚ್ಚಾಗಿದೆ.

    ಧೂಮಪಾನ ಮಾಡುವವರು ಹೆಚ್ಚಾಗಿ ಆರೋಗ್ಯ ಸಮಸ್ಯೆ ಎದರಿಸುತ್ತಾರೆ ಎಂದು ಅಧ್ಯಯನ ವರದಿಗಳು ತಿಳಿಸಿವೆ. ಅದರಲ್ಲೂ ಕ್ಯಾನ್ಸರ್, ಹೃದಯ ಸಮಸ್ಯೆ ಮತ್ತಿತರ ಗಂಭೀರ ಸಮಸ್ಯೆ ಎದರಿಸುವ ರೋಗಿಗಳಲ್ಲಿ ಶೇ. 51ರಷ್ಟು ಧೂಮಪಾನಿಗಳ, ಶೇ. 17ರಷ್ಟು ಮಂದಿ ಧೂಮಪಾನಿಗಳು ಎಳೆದು ಬಿಟ್ಟ ಹೊಗೆ ಸೇವಿಸುವವರು(ಪ್ಯಾಸಿವ್ ಸ್ಮೋಕರ್ಸ್) ಆಗಿರುತ್ತಾರೆ ಎಂದು ತಿಳಿಸಲಾಗಿದೆ.

    ಇತ್ತ ಇ ಸಿಗರೇಟ್ ಸೇದುವ ಮಂದಿಯಲ್ಲೂ ರೋಗ ನಿರೋಧಕ ಶಕ್ತಿ ಕುಗ್ಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಶ್ವಾಸಕೋಶ ಮಾತ್ರವಲ್ಲ ಇದು ದೇಹದ ಜೀನ್‍ಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಇದು ದೇಹದಲ್ಲಿ 60ಕ್ಕೂ ಹೆಚ್ಚು ಜೀನ್‍ಗಳಿಗೆ ಹಾನಿ ಮಾಡುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ದೇಹದಲ್ಲಿ ಕಡಿಮೆಯಾಗಿ ರೋಗಗಳಿಗೆ ಬಹುಬೇಗ ಧೂಮಪಾನಿಗಳು ತುತ್ತಾಗುತ್ತಾರೆ.

  • ಧೂಮಪಾನ ಮಾಡದ ಸಿಬ್ಬಂದಿಗೆ ಬಂಪರ್ ಆಫರ್ ನೀಡಿದ ಐಟಿ ಕಂಪನಿ

    ಧೂಮಪಾನ ಮಾಡದ ಸಿಬ್ಬಂದಿಗೆ ಬಂಪರ್ ಆಫರ್ ನೀಡಿದ ಐಟಿ ಕಂಪನಿ

    ಟೋಕಿಯೋ: ಧೂಮಪಾನ ಆರೋಗ್ಯಕ್ಕೆ ಹಾನಿಕರ ಅಂತ ಪ್ರತಿ ಸಿಗರೇಟು ಪ್ಯಾಕ್ ಮೇಲೂ ಬರೆದಿರುತ್ತೆ. ಆದರೂ ಜನರು ಅದನ್ನು ಸೇದುವುದನ್ನು ಬಿಡಲ್ಲ. ಕೇವಲ ಆರೋಗ್ಯಕ್ಕಷ್ಟೇ ಅಲ್ಲ ಕೆಲಸಕ್ಕೂ ಧೂಮಪಾನ ಹಾನಿಕರ ಎಂದು ಸಾಫ್ಟ್‌ವೇರ್ ಕಂಪನಿಯೊಂದು ಸಿಗರೇಟ್ ಸೇದದ ಸಿಬ್ಬಂದಿಗೆ ಬಂಪರ್ ಆಫರ್ ನೀಡಿದೆ.

    ಹೌದು ಜಪಾನ್ ಮೂಲದ ಸಾಫ್ಟ್‌ವೇರ್ ಕಂಪನಿ ಹೊಸ ಉಪಾಯ ಮಾಡಿದೆ. ಧೂಮಪಾನ ಮಾಡದ ಸಿಬ್ಬಂದಿಗೆ ವೇತನ ಸಹಿತ 6 ರಜೆಗಳನ್ನು ಹೆಚ್ಚು ತೆಗೆದುಕೊಳ್ಳುವ ಭರ್ಜರಿ ಆಫರ್ ನೀಡಿದೆ. ಧೂಮಪಾನ ಕೇವಲ ಆರೋಗ್ಯಕ್ಕಷ್ಟೇ ಅಲ್ಲ ಕೆಲಸಕ್ಕೂ ಹಾನಿಕಾರಕವಾಗಿದೆ. ಅದಕ್ಕೆ ಈ ನಿರ್ಧಾರ ಮಾಡಿದ್ದೇವೆ ಎಂದು ಕಂಪನಿ ತಿಳಿಸಿದೆ.

    ಕಂಪನಿಯ ಓರ್ವ ಸಿಬ್ಬಂದಿ 1 ಸಿಗರೇಟು ಸೇದಿ ರೆಸ್ಟ್ ಮಾಡಿ ಬರಲು ಕನಿಷ್ಠ ಹದಿನೈದು ನಿಮಿಷ ತೆಗೆದುಕೊಳ್ಳುತ್ತಾರೆ. ಹೀಗೆ ಕಂಪನಿಯಲ್ಲಿ ಸುಮಾರು 42 ಮಂದಿ ಇದ್ದಾರೆ. ಎಲ್ಲರೂ 15 ನಿಮಿಷ ಸಮಯ ತೆಗೆದುಕೊಂಡರೆ ಕೆಲಸಕ್ಕೆ ಅಡ್ಡಿಯಾಗುತ್ತದೆ. ಸಮಯ ಹಾಳಾಗುತ್ತದೆ. ಇದರಿಂದ ಕೆಲಸದ ವಾತಾವರಣದ ಮೇಲೂ ಪರಿಣಾಮ ಬೀರುತ್ತದೆ ಎಂದು ಮನಗಂಡ ಕಂಪನಿ ವೇತನ ಸಹಿತ ರಜೆ ಉಪಾಯವನ್ನು ಪ್ರಯೋಗಿಸಿದೆ.

    ಈ ಬಗ್ಗೆ ಕಂಪನಿ ಸಿಇಒ ಮಾತನಾಡಿ, ಈ ಉಪಾಯವು ಸಿಬ್ಬಂದಿ ಧೂಮಪಾನ ಬಿಡುವುದಕ್ಕೆ ಸಹಾಯ ಮಾಡುತ್ತದೆ. ಅವರನ್ನು ಧೂಪಪಾನ ಬಿಟ್ಟು ಆರೋಗ್ಯವಾಗಿರಲು ಪ್ರೋತ್ಸಾಹಿಸುತ್ತದೆ. ಅಲ್ಲದೆ ಈಗಾಗಲೇ 42ರಲ್ಲಿ 4 ಮಂದಿ ಸಿಗರೇಟ್ ಸೇದುವುದನ್ನು ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.

  • ಆಸ್ಪತ್ರೆ ಆವರಣದಲ್ಲಿ ಸಿಗರೇಟ್ ಸೇದಿದ ಎಸ್‍ಪಿ ಮುಖಂಡ

    ಆಸ್ಪತ್ರೆ ಆವರಣದಲ್ಲಿ ಸಿಗರೇಟ್ ಸೇದಿದ ಎಸ್‍ಪಿ ಮುಖಂಡ

    ಲಕ್ನೋ: ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಇದನ್ನು ಸಾರ್ವಜನಿಕ ಸ್ಥಳಗಳಲ್ಲಿ ಬರೆಯಲಾಗುತ್ತದೆ. ಆದರೆ ಇದನ್ನು ಮರೆತು ಸಮಾಜವಾದಿ ಪಕ್ಷದ ಮುಖಂಡ, ಶಾಸಕ ಹಾಜಿ ಇಕ್ರಮ್ ಖುರೇಷಿ ಜಿಲ್ಲಾಸ್ಪತ್ರೆಯ ಆವರಣದಲ್ಲೇ ಸಿಗರೇಟ್ ಸೇದಿದ್ದಾರೆ.

    ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಜನ್ಮದಿನದ ನಿಮಿತ್ತ ಸಮಾಜವಾದಿ ಪಕ್ಷದ ಎಸ್‍ಪಿ ಶಾಸಕರು ಮೊರಾದಾಬಾದ್ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲು ಬಂದಿದ್ದರು. ಈ ವೇಳೆ ಶಾಸಕ ಹಾಜಿ ಇಕ್ರಮ್ ಖುರೇಷಿ ಆಸ್ಪತ್ರೆಯ ಆವರಣದಲ್ಲಿ ಸಿಗರೇಟ್ ಸೇದಿದ್ದಾರೆ. ಈ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ವಿಶೇಷವೆಂದರೆ, ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ಹಾಜಿ ಇಕ್ರಮ್ ಖುರೇಷಿ ತಪ್ಪನ್ನು ಸ್ವೀಕರಿಸುವ ಬದಲು, ಅಸಂಬದ್ಧ ಉತ್ತರವನ್ನು ನೀಡಿದ್ದಾರೆ. ಯಾರೋ ಕಿಡಿಗೇಡಿಗಳು ತನ್ನ ಹೆಸರು ಹಾಳು ಮಾಡಲು ಹೀಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಶಾಸಕರು ಆಸ್ಪತ್ರೆಯ ಆವರಣದಲ್ಲಿ ಸಿಗರೇಟ್ ಸೇದಿದ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೆಲ ನೆಟ್ಟಿಗರು ತಮ್ಮದೆಯಾದ ಮಾಡಿದ್ದಾರೆ.

  • ಹೌದು, ನಾನು ಸಿಗರೇಟ್ ಸೇದುತ್ತೀನಿ, ಕುಡಿಯುತ್ತೀನಿ – ಟ್ರೋಲಿಗರಿಗೆ ನಟಿ ಖಡಕ್ ಉತ್ತರ

    ಹೌದು, ನಾನು ಸಿಗರೇಟ್ ಸೇದುತ್ತೀನಿ, ಕುಡಿಯುತ್ತೀನಿ – ಟ್ರೋಲಿಗರಿಗೆ ನಟಿ ಖಡಕ್ ಉತ್ತರ

    ನವದೆಹಲಿ: ಇತ್ತೀಚೆಗೆ ನಟಿಯೊಬ್ಬರು ಧೂಮಪಾನ ಮತ್ತು ಮದ್ಯಪಾನ ಮಾಡುತ್ತಿರುವ ಫೋಟೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಈ ಫೋಟೋ ನೋಡುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದರು. ಈಗ ಟ್ರೋಲ್ ಮಾಡುತ್ತಿದ್ದವರಿಗೆ “ಧೂಮಪಾನ, ಮದ್ಯಪಾನ ಮಾಡುವುದರಿಂದ ನಾನು ಕೆಟ್ಟ ತಾಯಿ ಹೇಗಾಗುತ್ತೇನೆ” ಎಂದು ಖಡಕ್ ಉತ್ತರವನ್ನು ಕೊಟ್ಟಿದ್ದಾರೆ.

    ನಟಿ ಶ್ವೇತಾ ಸಾಲ್ವೆ ಇತ್ತೀಚೆಗೆ ತನ್ನ ಕುಟುಂಬ ಮತ್ತು ಸ್ನೇಹಿತರ ಜೊತೆ ಗೋವಾಗೆ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ಬಿಕಿನಿ ತೊಟ್ಟು ಧೂಮಪಾನ ಮಾಡುತ್ತಿರುವ ಫೋಟೋವನ್ನು ಶ್ವೇತಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಆ ಫೋಟೋ ಸಾಮಾಜಿಕ ಜಾಲತಾಣಗಲ್ಲಿ ಟ್ರೋಲ್ ಆಗಿತ್ತು.

    “ನೆಟ್ಟಿಗರು ಈ ರೀತಿ ಮಾಡಲು ನಿಮಗೆ ನಾಚಿಕೆಯಾಗಲ್ಲವೇ? ನೀವು ಒಳ್ಳೆಯ ತಾಯಿ ಅಲ್ಲವೇ ಅಲ್ಲ. ನಿಮ್ಮ ಮಕ್ಕಳಿಗೂ ಈ ಅಭ್ಯಾಸ ಬರಲ್ಲವೇ?” ಎಂದು ಅಸಭ್ಯವಾಗಿ ಕಮೆಂಟ್ ಮಾಡಿದ್ದರು. ನೆಟ್ಟಿಗರ ಕಮೆಂಟ್ ನೋಡಿ ಶ್ವೇತಾ ಸಾಲ್ವೇ ಇನ್ ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕುವ ಮೂಲಕ ಎಲ್ಲರಿಗೂ ಟಾಂಗ್ ಕೊಟ್ಟಂತೆ ಉತ್ತರ ಕೊಟ್ಟಿದ್ದಾರೆ.

    ಶ್ವೇತಾ ಸಾಲ್ವೇ ಪೋಸ್ಟ್: 
    “ಹೌದು ನಾನು ಕುಡಿಯುತ್ತೇನೆ, ಧೂಮಪಾನ ಮಾಡುತ್ತೇನೆ. ನಾನು ಪ್ರಾಮಾಣಿಕವಾಗಿ ಇರುತ್ತೇನೆ. ಬೇರೆಯವರನ್ನು ನಾನು ಈ ರೀತಿ ಪ್ರಶ್ನೆ ಮಾಡಲ್ಲ. ಆದ್ದರಿಂದ ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ನೀವು ಈ ರೀತಿ ಪ್ರಶ್ನೆ ಮಾಡಬಾರದು. ಕೇವಲ ಮದ್ಯ, ಸಿಗರೇಟ್ ಸೇದುವುದರಿಂದ ನಾನು ಕೆಟ್ಟ ತಾಯಿ ಹೇಗಾಗುತ್ತೇನೆ? ನನ್ನ ಪೋಷಕರು ನನ್ನನ್ನು ಜವಾಬ್ದಾರಿಯುತವಾಗಿ ಬೆಳೆಸಿದ್ದಾರೆ. ಸಮಾಜದಲ್ಲಿ ಒಳ್ಳೆಯದು, ಕೆಟ್ಟದ್ದನ್ನು ತಿಳಿಸಿ ಕೊಟ್ಟಿದ್ದಾರೆ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

    ನಾನು ಜೀವನವನ್ನು ವ್ಯರ್ಥ ಮಾಡಿಕೊಳ್ಳುವುದನ್ನು ನೀವು ನೋಡಿದ್ದೀರಾ? ನಾನು ಉದ್ಯೋಗ ಮಾಡದೆ ಕುಳಿತಿರುವುದನ್ನು ನೋಡಿದ್ದೀರಾ? ನಾನು ಅನೇಕ ಕೆಲಸಗಳನ್ನು ಮಾಡುತ್ತೇನೆ, ನಾನೊಬ್ಬ ನಟಿ, ಡ್ಯಾನ್ಸರ್ ಮತ್ತು ಉದ್ಯಮಿ ಕೂಡ ಆಗಿದ್ದೀನಿ. ನನ್ನ ವರ್ತನೆ ಇಷ್ಟವಾಗದಿದ್ದರೆ ಅನ್‍ಫಾಲೋ ಆಗಬಹುದು” ಎಂದು ಬರೆದು ಮದ್ಯಪಾನ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

    ಶ್ವೇತಾ ಸಾಲ್ವೇ ಅವರು ತನ್ನ ಗೆಳೆಯ ಹರ್ಮಿತ್ ಸೇಥಿ ಅವರನ್ನು 2012ರಲ್ಲಿ ಮದುವೆಯಾಗಿದ್ದಾರೆ. ಈಗ ಈ ದಂಪತಿಗೆ ಎರಡು ವರ್ಷದ ಮಗಳಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/BpeibrvnamJ/?utm_source=ig_embed

  • ಪುಟ್ಟ ಮಕ್ಕಳಿಗೆ ಬೀಡಿ, ಸಿಗರೇಟು ಸೇದಿಸಿ ವಿಕೃತಿ ಮೆರೆದ ಕಿಡಿಗೇಡಿಗಳು

    ಪುಟ್ಟ ಮಕ್ಕಳಿಗೆ ಬೀಡಿ, ಸಿಗರೇಟು ಸೇದಿಸಿ ವಿಕೃತಿ ಮೆರೆದ ಕಿಡಿಗೇಡಿಗಳು

    ತುಮಕೂರು: ಅಪ್ರಾಪ್ತ ಮಕ್ಕಳಿಗೆ ಚಾಕ್ಲೇಟ್ ಆಸೆ ತೋರಿಸಿ ಬಲವಂತವಾಗಿ ಬೀಡಿ ಸೇದಿಸಿ ಅದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಕಿಡಿಗೇಡಿಗಳು ವಿಕೃತಿ ಮರೆದಿದ್ದಾರೆ.

    ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಕೆ. ಮೇಲನಹಳ್ಳಿ ಈ ಘಟನೆ ನಡೆದಿದೆ. ಗ್ರಾಮದ ಶಿವಣ್ಣ, ಚಿಕ್ಕಣ್ಣ, ಬೀರಲಿಂಗಪ್ಪ, ಚೇತನ್, ಕೀರ್ತನ್, ಕನಕದಾಸ್ ಎಂಬುವರು ಮಕ್ಕಳಿಗೆ ಬಲವಂತವಾಗಿ ಬೀಡಿ ಸೇದಿಸಿದ್ದಾರೆ. ಕಿಡಿಗೇಡಿಗಳ ಗುಂಪು ಗ್ರಾಮದ ಅಂಗನವಾಡಿ ಮಕ್ಕಳಿಗೆ ಚಾಕ್ಲೇಟ್ ಕೊಡಿಸುತ್ತೇವೆಂದು ಆಸೆ ತೋರಿಸಿ, ಅದಕ್ಕೂ ಮೊದಲು ನೀವು ಬೀಡಿ ಸೇದಿ ತೋರಿಸಬೇಕೆಂದು ಕಿರುಕುಳ ನೀಡಿದ್ದಾರೆ.

    ಧೂಮಪಾನ ಮಾಡದ ಮಕ್ಕಳು ಬೀಡಿ ಸೇದಲಾಗದೆ ಈ ಕಿಡಿಗೇಡಿಗಳ ಕೈಗೆ ಸಿಲುಕಿ ನರಳಿದ್ದಾರೆ. ಮಕ್ಕಳನ್ನು ಅನೈತಿಕ ಚಟುವಟಿಕೆಗೆ ದೂಡುವ ಗುಂಪಿನ ವಿರುದ್ಧ ಗ್ರಾಮಸ್ಥರು ತುರುವೇಕೆರೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಆರೋಪಿಗಳನ್ನ ಶಿಕ್ಷೆಗೆ ಗುರಿಪಡಿಸಿಲ್ಲ. ಈ ಬಗ್ಗೆ ಮಕ್ಕಳ ರಕ್ಷಣಾಧಿಕಾರಿಗಳ ಗಮನಕ್ಕೂ ಬಂದರೂ ಕಿಡಿಗೇಡಿಗಳ ಕೃತ್ಯ ನಿಂತಿಲ್ಲ. ದೂರು ನೀಡಿದ ಬಳಿಕವೂ ಮಕ್ಕಳಿಗೆ ಬೀಡಿ ಸೇದಿಸುತ್ತಿದ್ದಾರೆ ಎಂದು ಮತ್ತೆ ದೂರಿದ್ದಾರೆ.

  • ನ್ಯೂಯಾರ್ಕ್‍ನಲ್ಲಿ ಪಾಕ್ ನಟಿ ಜೊತೆ ಧಮ್ ಎಳೆದ ರಣ್‍ಬೀರ್ ಕಪೂರ್!

    ನ್ಯೂಯಾರ್ಕ್‍ನಲ್ಲಿ ಪಾಕ್ ನಟಿ ಜೊತೆ ಧಮ್ ಎಳೆದ ರಣ್‍ಬೀರ್ ಕಪೂರ್!

    ಮುಂಬೈ: ಮಾರ್ಚ್ ತಿಂಗಳಲ್ಲಿ ದುಬೈನಲ್ಲಿ ನಡೆದ ಗ್ಲೊಬಲ್ ಟೀಚರ್ಸ್ ಪ್ರೈಸ್‍ನ ಕಾರ್ಯಕ್ರಮದಲ್ಲಿ ರಣ್‍ಬೀರ್ ಕಪೂರ್ ಮತ್ತು ಪಾಕಿಸ್ತಾನ ನಟಿ ಮಹಿರಾ ಖಾನ್ ಜೊತೆಯಲ್ಲಿ ಕಾಣಿಸಿಕೊಂಡಿದ್ದು ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿತ್ತು. ಆದರೆ ಈಗ ಇಬ್ಬರು ಧೂಮಪಾನ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ರಣ್‍ಬೀರ್ ಕಪೂರ್ ಮತ್ತು ನಟಿ ಮಹಿರಾ ಖಾನ್ ನ್ಯೂಯಾರ್ಕ್‍ನ ಬೀದಿಯಲ್ಲಿ ಜೊತೆಯಾಗಿ ಧೂಮಪಾನ ಮಾಡಿದ್ದಾರೆ. ಮಹಿರಾ ಖಾನ್ ಇತ್ತೀಚಿಗೆ ಶಾರೂಖ್ ಖಾನ್ ನಟನೆಯ ‘ರಾಯಿಸ್’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಫೋಟೋದಲ್ಲಿ ಮಹಿರಾ ಬ್ಯಾಕ್‍ಲೆಸ್ ಇರುವ ಬಿಳಿ ಡ್ರೆಸ್ ಅಲ್ಲಿ ಕಾಣಿಸಿಕೊಂಡಿದ್ದು ರಣ್‍ಬೀರ್ ಕಪೂರ್ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ.

    ಡೇಟಿಂಗ್ ಮಾಡುತ್ತಿದ್ದೀರಾ ಎನ್ನುವ ಸುದ್ದಿಯನ್ನು ರಣ್‍ಬೀರ್ ಹಾಗೂ ಮಹಿರಾ ನಿರಾಕರಿಸಿದ್ದಾರೆ. ಈ ಇಬ್ಬರು ಕಲಾವಿದರು ಜೊತೆಯಾಗಿ ದುಬೈ ಹೋಗಿದ್ದ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ರಣ್‍ಬೀರ್ ನಾನು ಸಿಂಗಲ್ ಎಂದು ಹೇಳಿಕೊಂಡಿದ್ದಾರೆ.

    ಈ ಗಾಸಿಪ್‍ಗಳ ಬಗ್ಗೆ ಮಹಿರಾ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕುವ ಮೂಲಕ ಉತ್ತರ ಕೊಟ್ಟಿದ್ದಾರೆ. ಮಹಿರಾ ಹಾಕಿದ ಫೋಟೋದಲ್ಲಿ ‘ಮೊದಲ ಬಾರಿ ಇಲ್ಲ, ಎರಡನೇ ಬಾರಿಯೂ ಇಲ್ಲ’ ಎನ್ನುವ ಫೋಟೋವೊಂದನ್ನು ಹಾಕಿದ್ದರು.