Tag: ಧೀರೇನ್

  • ಹೆಸರು ಬದಲಿಸಿಕೊಂಡ ಅಣ್ಣಾವ್ರ ಮೊಮ್ಮಗ ಧೀರೇನ್

    ಹೆಸರು ಬದಲಿಸಿಕೊಂಡ ಅಣ್ಣಾವ್ರ ಮೊಮ್ಮಗ ಧೀರೇನ್

    ರನಟ ರಾಜ್‌ಕುಮಾರ್ (Rajkumar) ಮೊಮ್ಮಗ ಧೀರೇನ್ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ನನ್ನ ಹೆಸರಿಗೆ ತಾತನ ಹೆಸರು ಸೇರಿಸಿಕೊಂಡು ಈ ಲೆಗ್ಗಸಿಯನ್ನು ಗೌರವಿಸುತ್ತೇನೆ ಎಂದು ಧೀರೇನ್ ತಿಳಿಸಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆ ಎಂಬ ಭರವಸೆಯಿದೆ: ರಚಿತಾ ರಾಮ್

    Dheeren ramkumar,

    ರಾಜ್‌ಕುಮಾರ್ ಪುತ್ರಿ ಪೂರ್ಣಿಮಾ ಮತ್ತು ರಾಮ್ ಕುಮಾರ್ (Ram Kumar) ದಂಪತಿ ಪುತ್ರ ಧೀರೇನ್ ಹೆಸರು ಬದಲಾವಣೆ ಬಗ್ಗೆ ತಿಳಿಸಿದ್ದಾರೆ. ನನ್ನ ಹೆಸರಿನ ಮುಂದೆ ನನ್ನ ತಾತ ರಾಜ್‌ಕುಮಾರ್ ಅವರ ಹೆಸರನ್ನು ಸೇರಿಸಿಕೊಳ್ಳುವ ಮೂಲಕ ನಾನು ಡಾ. ರಾಜ್‌ಕುಮಾರ್ ಕುಟುಂಬದ ಲೆಗ್ಗಸಿಗೆ ಗೌರವ ಸೂಚಿಸುತ್ತಿದ್ದೇನೆ. ಡಾ.ರಾಜ್‌ಕುಮಾರ್ ಮೊಮ್ಮಗನಾಗಿರುವ ನಾನು ಅವರ ಹೆಸರನ್ನು ನನ್ನ ಹೆಸರಿನ ಮುಂದೆ ಸೇರಿಸಿಕೊಂಡು ಈ ಮೂಲಕ ಅವರ ಮನೆತನಕ್ಕೆ ಗೌರವ ಸೂಚಿಸುತ್ತಿದ್ದೇನೆ ಎಂದಿದ್ದಾರೆ.

    ಕಾನೂನಿನ ಪ್ರಕಾರ, ಹೆಸರನ್ನು ಬದಲಾಯಿಸಿಕೊಂಡು ಧೀರೇನ್ ರಾಮ್‌ಕುಮಾರ್ ಅವರು ಈಗ ಧೀರೇನ್ ಆರ್ ರಾಜ್‌ಕುಮಾರ್ (Dheeren R Rajkumar) ಆಗಿದ್ದಾರೆ.

    ಇದೀಗ ಕೆಆರ್‌ಜಿ ಬ್ಯಾನರ್‌ನ ಹೊಸ ಸಿನಿಮಾದಲ್ಲಿ ಧೀರೇನ್ ಆರ್ ರಾಜ್‌ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

    ಕಳೆದ ವರ್ಷ ‘ಶಿವ 143’ (Shiva 143) ಸಿನಿಮಾದಲ್ಲಿ ಧೀರೇನ್ ಹೀರೋ ಆಗಿ ಪಾದಾರ್ಪಣೆ ಮಾಡಿದ್ದರು. ಚಿತ್ರಕ್ಕೆ ಮಾನ್ವಿತಾ ಕಾಮತ್ (Manvita Kamat) ನಾಯಕಿಯಾಗಿ ನಟಿಸಿದ್ದರು.

  • ದಾರಿತಪ್ಪಿದ ಮಗನಿಗೆ ಜೋಡಿಯಾದ ಕೆಂಡಸಂಪಿಗೆ!

    ದಾರಿತಪ್ಪಿದ ಮಗನಿಗೆ ಜೋಡಿಯಾದ ಕೆಂಡಸಂಪಿಗೆ!

    ರಾಜ್ ಕುಮಾರ್ ಕುಟುಂಬದ ಕುಡಿಯೊಂದು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರೋದರ ಬಗ್ಗೆ ಈ ಹಿಂದೆಯೇ ಸುದ್ದಿಯಾಗಿತ್ತು. ಪೂರ್ಣಿಮಾ ಮತ್ತು ರಾಮ್‍ಕುಮಾರ್ ಪುತ್ರ ಧೀರೇನ್ ದಾರಿತಪ್ಪಿದ ಮಗ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಡೋದು ಪಕ್ಕಾ ಆಗಿದೆ. ಆದರೆ ದಾರಿತಪ್ಪಿದ ಮಗನಿಗೆ ನಾಯಕಿ ಯಾರೆಂಬುದು ಮಾತ್ರ ಪ್ರಶ್ನೆಯಾಗುಳಿದಿತ್ತು. ಈಗ ಕೆಂಡಸಂಪಿಗೆಯ ಹುಡುಗಿ ಮಾನ್ವಿತಾ ಕಾಮತ್ ಧೀರೇನ್ ನಾಯಕಿಯಾಗಿ ನಿಕ್ಕಿಯಾಗಿದ್ದಾರೆ!

    ಇತ್ತೀಚೆಗಷ್ಟೇ ತಾರಕಾಸುರ ಚಿತ್ರದಲ್ಲಿ ನಟಿಸಿದ್ದ ಮಾನ್ವಿತಾ ಮರಾಠಿ ಚಿತ್ರರಂಗಕ್ಕೂ ಹಾರಿದ್ದಾರೆ. ಕನ್ನಡದಲ್ಲಿಯೂ ಅವರು ಬ್ಯುಸಿಯಾಗಿದ್ದಾರೆ. ಹೀಗಿರೋವಾಗಲೇ ದಾರಿ ತಪ್ಪಿದ ಮಗನಿಗೂ ಅವರು ಜೋಡಿಯಾಗಿದ್ದಾರೆ. ಈ ಚಿತ್ರದಲ್ಲಿಯೂ ಕೂಡಾ ಮಾನ್ವಿತಾ ಮುದ್ದಾದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ರ್‍ಯಾಂಬೋ 2 ಖ್ಯಾತಿಯ ಅನಿಲ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಈ ಕಥೆಗೆ ತಕ್ಕುದಾಗಿ ಧೀರೇನ್ ಕೂಡಾ ಈಗಾಗಲೇ ಸಾಕಷ್ಟು ತರಬೇತಿ ಪಡೆದು ರೆಡಿಯಾಗಿದ್ದಾರೆ. ಹೀರೋಗೆ ಬೇಕಾದ ಎಲ್ಲ ಗುಣ ಲಕ್ಷಣಗಳನ್ನೂ ಹೊಂದಿರುವ ಧೀರೇನ್ ಈ ಚಿತ್ರದ ಮೂಲಕ ನಾಯಕನಾಗಿ ನೆಲೆ ನಿಲ್ಲುವ ಭರವಸೆಯೊಂದಿಗೇ ಅದ್ಧೂರಿಯಾಗಿ ಪಾದಾರ್ಪಣೆ ಮಾಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv