Tag: ಧೀರೆನ್‌ ರಾಜ್‌ಕುಮಾರ್‌

  • ಚಿತ್ರರಂಗದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿಗೆ ಬೇಡಿಕೆ- ನಟಿಗೆ ಬಿಗ್ ಚಾನ್ಸ್

    ಚಿತ್ರರಂಗದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿಗೆ ಬೇಡಿಕೆ- ನಟಿಗೆ ಬಿಗ್ ಚಾನ್ಸ್

    ‘ಟಗರು ಪಲ್ಯ’ (Tagaru Palya) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದ ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಪುತ್ರಿ ಅಮೃತಾಗೆ ಬಿಗ್ ಚಾನ್ಸ್‌ವೊಂದು ಸಿಕ್ಕಿದೆ. ಮೊದಲ ಸಿನಿಮಾದಲ್ಲೇ ಗಮನ ಸೆಳೆದಿದ್ದ ನಟಿ ಈಗ ಧೀರೆನ್ ರಾಜ್‌ಕುಮಾರ್‌ಗೆ (Dheeren Rajkumar) ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ:ಆಪರೇಷನ್ ಸಿಂಧೂರ: ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸುವ ನಮ್ಮ ಸೈನಿಕರಿಗೆ ಥ್ಯಾಂಕ್ಯೂ ಎಂದ ರಶ್ಮಿಕಾ ಮಂದಣ್ಣ

    ಚಿತ್ರರಂಗದಲ್ಲಿ ಅಮೃತಾಗೆ ಬೇಡಿಕೆ ಹೆಚ್ಚಾಗಿದೆ. ‘ಟಗರು ಪಲ್ಯ’ ಚಿತ್ರದ ಬಳಿಕ ‘ಅರಸು’ ಖ್ಯಾತಿಯ ನಿರ್ದೇಶಕ ಮಹೇಶ್ ಬಾಬು ನಿರ್ದೇಶನದ ‘ಅಮ್ಮು’ ಚಿತ್ರಕ್ಕೆ ಆಯ್ಕೆಯಾಗಿದ್ದರು. ಈ ಬೆನ್ನಲ್ಲೇ ದೊಡ್ಮನೆ ಕುಡಿ ಧೀರೆನ್‌ಗೆ ಹೀರೋಯಿನ್ ಆಗಿ ನಟಿಸುವ ಅವಕಾಶ ಸಿಕ್ಕಿದೆ. ಧೀರೆನ್ ನಟನೆಯ ‘ಪಬ್ಬಾರ್’ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ. ಮೇ 7ರಂದು ಅದ್ಧೂರಿಯಾಗಿ ಸಿನಿಮಾಗೆ ಚಾಲನೆ ನೀಡಲಾಗಿದೆ. ಇದನ್ನೂ ಓದಿ: 12 ವರ್ಷಗಳ ಪ್ರೀತಿ- ಮೇ 9ರಂದು ಚೈತ್ರಾ ಕುಂದಾಪುರ ಮದುವೆ

    ಸಂದೀಪ್ ಸುಂಕದ್ ನಿರ್ದೇಶನದ, ಧೀರೆನ್ ಮತ್ತು ಅಮೃತಾ ನಟನೆಯ ಚಿತ್ರಕ್ಕೆ ‘ಪಬ್ಬಾರ್’ ಎಂಬ ವಿಭಿನ್ನ ಟೈಟಲ್ ಇಡಲಾಗಿದೆ. ಇದೊಂದು ಕ್ರೈಮ್ ಹಾಗೂ ಥ್ರಿಲ್ಲರ್ ಒಳಗೊಂಡಿರುವ ಚಿತ್ರವಾಗಿದೆ. ಹಿಮಾಚಲ ಪ್ರದೇಶದ ಶಿಮ್ಲಾ ಬಳಿಯ ಪಬ್ಬಾರ್ ನದಿ ಕಣಿವೆ ಇದೆ. ಚಿತ್ರದ ಕಥೆಗೂ ಈ ಜಾಗಕ್ಕೂ ಲಿಂಕ್ ಇದೆ. ಆ ಜಾಗವೇ ಚಿತ್ರದ ಕಥೆಯ ಕೇಂದ್ರಬಿಂದು. ಮೊದಲಿಗೆ ಮಡಿಕೇರಿಯಲ್ಲಿ ಚಿತ್ರೀಕರಣ ಆರಂಭಿಸಿ ಬಳಿಕ ಪಬ್ಬರ್ ಕಣಿವೆಗೆ ಹೋಗಿ ದೃಶ್ಯಗಳನ್ನು ಸೆರೆ ಹಿಡಿಯಲು ಚಿತ್ರತಂಡ ತೀರ್ಮಾನಿಸಿದೆ. ಮೇ 15ರಿಂದ ಶೂಟಿಂಗ್ ಶುರುವಾಗಲಿದೆ.

    ಸ್ಟೈಲ್ ಗುರು ರಕ್ಷಿತ್ ಜೊತೆ ಅಮ್ಮು ಚಿತ್ರ, ಧೀರೆನ್ ಜೊತೆ ‘ಪಬ್ಬರ್’ ಈ ಎರಡು ಸಿನಿಮಾಗಳ ಮೂಲಕ ಅಮೃತಾ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈ 2 ಚಿತ್ರಗಳು ಅವರ ಕೈ ಹಿಡಿಯುತ್ತಾ? ಎಂದು ಕಾದುನೋಡಬೇಕಿದೆ.