Tag: ಧೀರಜ್‌ ಪ್ರಸಾದ್‌

  • ಸಿಎಂ ಆಪರೇಷನ್ ಹಸ್ತ ಸಕ್ಸಸ್ – ಶ್ರೀನಿವಾಸ್ ಪ್ರಸಾದ್ ಅಳಿಯ ಧೀರಜ್ ಕಾಂಗ್ರೆಸ್ ಸೇರ್ಪಡೆ

    ಸಿಎಂ ಆಪರೇಷನ್ ಹಸ್ತ ಸಕ್ಸಸ್ – ಶ್ರೀನಿವಾಸ್ ಪ್ರಸಾದ್ ಅಳಿಯ ಧೀರಜ್ ಕಾಂಗ್ರೆಸ್ ಸೇರ್ಪಡೆ

    ಮೈಸೂರು: ಕೊನೆಗೂ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಆಪರೇಷನ್ ಹಸ್ತ ಸಕ್ಸಸ್ ಆಗಿದ್ದು, ಬಿಜೆಪಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ (V Srinivas Prasad) ಅವರ ಅಳಿಯ ಧೀರಜ್ ಪ್ರಸಾದ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

    ಬೆಂಗಳೂರಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಧೀರಜ್ (Dheeraj Prasad) ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಈ ವೇಳೆ ಡಿಕೆಶಿ ಅವರಿಗೆ ಹೂಗುಚ್ಛ ನೀಡಿ, ಹಾರ ಹಾಕಿ ಸನ್ಮಾನಿಸಿದ್ದಾರೆ. ಧೀರಜ್ ಬಿಜೆಪಿ ರಾಜ್ಯ ಯುವ ಮೋರ್ಚ ಉಪಾಧ್ಯಕ್ಷರಾಗಿದ್ದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಶಾಕ್‌ – ‘ಕೈ’ ನಾಯಕನ ಸೊಸೆ ಬಿಜೆಪಿ ಸೇರ್ಪಡೆ

    ತಮ್ಮ ಅಳಿಯನಿಗೆ ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವ ಶ್ರೀನಿವಾಸ್ ಪ್ರಸಾದ್ ಪ್ರಯತ್ನ ವಿಫಲವಾಗಿದೆ. ಹೀಗಾಗಿ ಪಕ್ಷದ ನಡೆಗೆ ಪ್ರಸಾದ್ ಬೇಸರಗೊಂಡಿದ್ದಾರೆ. ಮೈಸೂರು, ಚಾಮರಾಜನಗರ ಕ್ಷೇತ್ರಗಳನ್ನು ಗೆಲ್ಲಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್, ಇದನ್ನೇ ಬಂಡವಾಳ ಮಾಡಿಕೊಂಡಿದೆ ಎನ್ನಲಾಗಿದೆ. ಇದನ್ನೂ ಓದಿ: ಚುನಾವಣೆ ಬಂದ್ರೆ ಸಾಕು ಆಸ್ಪತ್ರೆ ಸೇರ್ತಾರೆ: ಹೆಚ್‌ಡಿಕೆ ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ‘ಕೈ’ ಶಾಸಕ ಅನುಮಾನ

    ಪ್ರಸಾದ್‌ ಕಟ್ಟಪ್ಪಣೆ: ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್‌ಗೆ ಬೆಂಬಲ ಕೊಡುವ ವಿಚಾರದಲ್ಲಿ ಸದ್ಯಕ್ಕೆ ಗೌಪ್ಯತೆ ಕಾಪಾಡಿ. 15 ದಿನ ಸುಮ್ಮನ್ನಿರಿ, ಮತದಾನದ ಕೊನೆ ವಾರದಲ್ಲಿ ನನ್ನ ನಿರ್ಧಾರವನ್ನ ನಮ್ಮ ಅಭಿಮಾನಿಗಳಿಗೆ ಖಚಿತವಾಗಿ ಹೇಳುತ್ತೇನೆ ಎಂದು ಪ್ರಸಾದ್ ಗುಟ್ಟು ಬಿಟ್ಟು ಕೊಡದಂತೆ ಕಾಂಗ್ರೆಸ್ ನಾಯಕರಿಗೆ ಕಟ್ಟಪಣೆ ಮಾಡಿದ್ದಾರೆ. ಶ್ರೀನಿವಾಸ ಪ್ರಸಾದ್ ಮಾತು ಕೇಳಿ ಕಾಂಗ್ರೆಸ್ ನಾಯಕರು ಖುಷಿಯಾಗಿದ್ದಾರೆ. ಪ್ರಸಾದ್ ಜೊತೆ ನಡೆದ ಎಲ್ಲಾ ಮಾತುಕತೆಗಳನ್ನ ಸ್ಥಳೀಯ ನಾಯಕರು ಸಿಎಂ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಆಫರ್‌ ನೀಡಿದ್ರಾ ಸಿಎಂ? ಮೈಸೂರು ಕ್ಷೇತ್ರದಲ್ಲಿ ತಾವೇ ಖುದ್ದು ಅಖಾಡಕ್ಕಿಳಿದಿದ್ದ ಸಿಎಂ ಕುಟುಂಬದವರೆಲ್ಲ ಪಕ್ಷ ಸೇರ್ಪಡೆಯಾಗಲಿ ಎಂದು ಆಹ್ವಾನ ನೀಡಿದರು. ಕುಟುಂಬದಲ್ಲಿ ಯಾರೆ ಸೇರ್ಪಡೆಯಾದರು ಎಲ್ಲರಿಗೂ ಪಕ್ಷದಲ್ಲಿ ಸ್ಥಾನಮಾನ ಕೊಡುವುದಾಗಿ ಭರವಸೆಯನ್ನೂ ನೀಡಿದ್ದರು. ಇದೀಗ ಧೀರಜ್ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಶೀಘ್ರದಲ್ಲೇ ಶ್ರೀನಿವಾಸ್ ಪ್ರಸಾದ್ ಸಹ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.