Tag: ಧಾರ್ಮಿಕ ಸ್ವಾತಂತ್ರ್ಯ

  • ಮತಾಂತರ ಮಾಡಿದ್ರೆ 10 ವರ್ಷ ಜೈಲು – ಹಿಮಾಚಲ ಪ್ರದೇಶದಲ್ಲಿ ಸಾಮೂಹಿಕ ಮತಾಂತರ ನಿಷೇಧ

    ಮತಾಂತರ ಮಾಡಿದ್ರೆ 10 ವರ್ಷ ಜೈಲು – ಹಿಮಾಚಲ ಪ್ರದೇಶದಲ್ಲಿ ಸಾಮೂಹಿಕ ಮತಾಂತರ ನಿಷೇಧ

    ಶಿಮ್ಲಾ: ಹಿಮಾಚಲ ಪ್ರದೇಶದ ಸರ್ಕಾರವು ರಾಜ್ಯದಲ್ಲಿ ಸಾಮೂಹಿಕ ಮತಾಂತರವನ್ನು ನಿಷೇಧಿಸಿದ್ದು, ಬಲವಂತದಿಂದ ಮತಾಂತರ ಮಾಡುವವರಿಗೆ 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.

    ಪ್ರಸಕ್ತ ವರ್ಷದ ಅಂತ್ಯಕ್ಕೆ ಹಿಮಾಚಲ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ಸರ್ಕಾರ ಈ ಕಾನೂನು ಕ್ರಮವನ್ನು ಜರುಗಿಸಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ತಮಿಳುನಾಡು ಸಚಿವರ ಕಾರಿಗೆ ಚಪ್ಪಲಿ ಎಸೆತ – 5 ಬಿಜೆಪಿ ಕಾರ್ಯಕರ್ತರ ಬಂಧನ

    ಜೈ ರಾಮ್ ಠಾಕೂರ್ ನೇತೃತ್ವದ ಸರ್ಕಾರ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಮತಾಂತರ ನಿಷೇಧ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಯಿತು. ಇಲ್ಲಿ ಸಾಮೂಹಿಕ ಮತಾಂತರ ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಿತು. ಅಲ್ಲದೇ 2019ರ ಕಾನೂನಿನ ಅನ್ವಯ ಯಾವುದೇ ಧರ್ಮಕ್ಕೆ ಮತಾಂತರ ಮಾಡುವವರಿಗೆ ಗರಿಷ್ಠ 10 ವರ್ಷಗಳ ಕಾಲ ಶಿಕ್ಷೆ ವಿಧಿಸುವುದಾಗಿ ನಿರ್ಧರಿಸಿತು. ಇದೇ ವೇಳೆ ಹಿಮಾಚಲ ಪ್ರದೇಶ ಧಾರ್ಮಿಕ ಸ್ವಾತಂತ್ರ‍್ಯ (ತಿದ್ದುಪಡಿ) ಮಸೂದೆ-2022 ಅನ್ನು ಧ್ವನಿ ಮತದೊಂದಿಗೆ ಸರ್ವಾನುಮತದಿಂದ ಅಂಗೀಕರಿಲ್ಪಟ್ಟಿತು.

    ಇತ್ತೀಚೆಗೆ ಇಬ್ಬರು ಅಥವಾ ಅದಕ್ಕಿಂತಲೂ ಹೆಚ್ಚಿನವರನ್ನು ಏಕಕಾಲದಲ್ಲಿ ಮತಾಂತರಗೊಳಿಸುತ್ತಿದ್ದಾರೆ. ಅದಕ್ಕಾಗಿ ಮತಾಂತರ ಶಿಕ್ಷೆಯ ಪ್ರಮಾಣವನ್ನು 7 ರಿಂದ 10 ವರ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಮಸೂದೆಯಲ್ಲಿ ಸಭೆಯಲ್ಲಿ ಠಾಕೂರ್ ಉಲ್ಲೇಖಿಸಿದರು. ಇದನ್ನೂ ಓದಿ: ಒಡಿಶಾ ಸರ್ಕಾರದಿಂದ ನವ ವಿವಾಹಿತರಿಗೆ ಕಾಂಡೋಮ್, ಪ್ರೆಗ್ನೆನ್ಸಿ ಟೂಲ್ ಹೊಂದಿದ `ವೆಡ್ಡಿಂಗ್ ಕಿಟ್’ ಗಿಫ್ಟ್

    ಜೈ ರಾಮ್ ಠಾಕೂರ್ ನೇತೃತ್ವದ ಸರ್ಕಾರವು ಶುಕ್ರವಾರ ಹಿಮಾಚಲ ಪ್ರದೇಶ ಧರ್ಮದ ಸ್ವಾತಂತ್ರ‍್ಯ (ತಿದ್ದುಪಡಿ) ಮಸೂದೆ, 2022 ಅನ್ನು ಪರಿಚಯಿಸಿತು. ಇದು 18 ತಿಂಗಳುಗಳ ಹಿಂದಷ್ಟೇ ಜಾರಿಗೆ ಬಂದ ಹಿಮಾಚಲ ಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ -2019ರ ಹೆಚ್ಚು ಕಟ್ಟುನಿಟ್ಟಾದ ವಿಧೇಯಕವಾಗಿದೆ.

    2019ರ ಮಸೂದೆಯನ್ನು ಡಿಸೆಂಬರ್ 21, 2020 ರಂದು ಅಂದರೆ ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟ 15 ತಿಂಗಳ ನಂತರ ಅಧಿಸೂಚನೆ ಹೊರಡಿಸಲಾಗಿತ್ತು. 2019ರ ಕಾಯ್ದೆಯು 2006ರ ಕಾನೂನನ್ನು ಬದಲಿಸಿದೆ. ಆದರೆ, ಈ ಕಾಯ್ದೆ ಕಡಿಮೆ ಶಿಕ್ಷೆಯನ್ನು ಸೂಚಿಸಿದೆ. ಇನ್ನೊಂದೆಡೆ, ಶುಕ್ರವಾರ ಮಂಡಿಸಲಾಗಿರುವ ತಿದ್ದುಪಡಿ ಮಸೂದೆಯು ಬಲವಂತದ ಮತಾಂತರದ ಶಿಕ್ಷೆಯನ್ನು ಗರಿಷ್ಠ 7 ವರ್ಷಗಳಿಂದ ಗರಿಷ್ಠ 10 ವರ್ಷಗಳಿಗೆ ಹೆಚ್ಚಿಸಲು ಪ್ರಸ್ತಾಪಿಸುತ್ತದೆ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ನಿಮ್ಮ ಸ್ಪೂರ್ತಿದಾಯಕ ಸಾಧನೆಯೊಂದಿಗೆ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕಾಲಿಡುತ್ತಿರುವುದು ವಿಶೇಷ: ಮೋದಿ

    2019ರ ಕಾಯ್ದೆಯೂ ಸಾಮೂಹಿಕ ಮತಾಂತರವನ್ನು ತಡೆಯುವ ಅವಕಾಶಗಳನ್ನು ಹೊಂದಿಲ್ಲ. ಅದಕ್ಕಾಗಿ ಪರಿಣಾಮಕಾರಿ ನಿಬಂಧನೆಗಳನ್ನು ಮಾಡಲಾಗುತ್ತಿದೆ ಎಂದು ಅವರು ಪ್ರಸ್ತಾಪಿಸಿದರು.

    ಬಿಜೆಪಿಯು ಮತಾಂತರ-ವಿರೋಧಿ ಕಾನೂನುಗಳ ಧ್ವನಿಯನ್ನು ಬೆಂಬಲಿಸುತ್ತಿದ್ದು, ಅನೇಕ ಪಕ್ಷ-ಆಡಳಿತ ರಾಜ್ಯಗಳು ಇದೇ ರೀತಿಯ ಕಾನೂನು ಕ್ರಮಗಳನ್ನು ಪರಿಚಯಿಸಿವೆ ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹದಗೆಟ್ಟಿದೆ: ಅಮೆರಿಕ

    ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹದಗೆಟ್ಟಿದೆ: ಅಮೆರಿಕ

    ವಾಷಿಂಗ್ಟನ್: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಯು ಗಮನಾರ್ಹವಾಗಿ ಹದಗೆಟ್ಟಿದೆ ಎಂದು ಯುನೈಟೆಡ್ ಸ್ಟೇಟ್ಸ್ ಸಮಿತಿಯೊಂದು ಹೇಳಿದೆ.

    ಸೋಮವಾರ ಬಿಡುಗಡೆಯಾದ ತನ್ನ ವಾರ್ಷಿಕ ವರದಿಯಲ್ಲಿ, ಯುಸ್‌ ಕಮಿಷನ್ ಆನ್ ಇಂಟರ್‌ ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (USCIRF) ಭಾರತವನ್ನು ʼನಿರ್ದಿಷ್ಟ ಕಾಳಜಿಯ ದೇಶಗಳʼ ಯುಎಸ್‌ ಪಟ್ಟಿಯಲ್ಲಿ ಇರಿಸಲು ರಾಜ್ಯ ಇಲಾಖೆಯನ್ನು ಸತತ ಮೂರನೇ ವರ್ಷ ಒತ್ತಾಯಿಸಲಾಗಿದೆ. ಇದನ್ನೂ ಓದಿ: ಬಾಬರಿ ಮಸೀದಿ ಕೆಡವಿದಾಗ ನೀವು ಓಡಿಹೋಗಿದ್ದಿರಿ: ಬಿಜೆಪಿಗೆ ಉದ್ಧವ್‌ ಠಾಕ್ರೆ ತರಾಟೆ

    ಧಾರ್ಮಿಕ ಆಚರಣೆಗಳ ವಿರುದ್ಧ ಆರೋಪಗಳನ್ನು ಮಾಡಿ ಉದ್ದೇಶಿತ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಭಾರತವು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಗಳಲ್ಲಿ ತೊಡಗಿದೆ ಎಂದು ಸ್ವತಂತ್ರ ಉಭಯಪಕ್ಷೀಯ ಸಮಿತಿಯು ಆರೋಪಿಸಿದೆ.

    ಭಾರತ ಸರ್ಕಾರವು ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್‌ರು, ದಲಿತರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಹಿಂದೂ-ರಾಷ್ಟ್ರೀಯವಾದಿ ಕಾರ್ಯಸೂಚಿಯನ್ನು ಉತ್ತೇಜಿಸುವ ನೀತಿಗಳ ಪ್ರಚಾರ ಮತ್ತು ಜಾರಿಯನ್ನು ಹೆಚ್ಚಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಅಕ್ರಮ ಧ್ವನಿವರ್ಧಕಗಳನ್ನು ತೆಗೆದು ಹಾಕಿ : ಯುಪಿ ಸರ್ಕಾರ ಆದೇಶ

    Hubballi Riot

    ಸರ್ಕಾರವು ಅಸ್ತಿತ್ವದಲ್ಲಿರುವ, ಹೊಸ ಕಾನೂನುಗಳು ಮತ್ತು ದೇಶದ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ರಚನಾತ್ಮಕ ಬದಲಾವಣೆಗಳ ಮೂಲಕ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಹಿಂದೂ ರಾಜ್ಯದ ತನ್ನ ಸೈದ್ಧಾಂತಿಕ ದೃಷ್ಟಿಕೋನವನ್ನು ವ್ಯವಸ್ಥಿತಗೊಳಿಸುವುದನ್ನು ಮುಂದುವರೆಸಿದೆ ಎಂದು ಆರೋಪಿಸಿದೆ.

    ಹಿಂದೂಯೇತರರ ವಿರುದ್ಧ ಮತಾಂತರ ನಿಷೇಧ ಕಾನೂನುಗಳ ನಿರಂತರ ಜಾರಿ ಸೇರಿದಂತೆ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಮತಾಂತರ ಚಟುವಟಿಕೆಗಳಲ್ಲಿ ಆರೋಪಿತರಾದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಕೆಲ ಗುಂಪುಗಳು ರಾಷ್ಟ್ರವ್ಯಾಪಿ ಬೆದರಿಕೆ ಮತ್ತು ಹಿಂಸಾಚಾರದ ಪ್ರವೃತ್ತಿ ನಡೆಸುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆಗೆ ಸಂಚು – ಮೂವರು ಅರೆಸ್ಟ್

    ಭಾರತದ ಮುಸ್ಲಿಂ ಅಲ್ಪಸಂಖ್ಯಾತರು ಬಲಪಂಥೀಯ ಹಿಂದೂ ಗುಂಪುಗಳಿಂದ ಗುಂಪು ಹಿಂಸಾಚಾರ ಮತ್ತು ದಾಳಿಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

  • ಮತಾಂತರ ನಿಷೇಧ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನಾ ಮಸೂದೆಯನ್ನು ಹಿಂಪಡೆಯಿರಿ: SDPI

    ಮತಾಂತರ ನಿಷೇಧ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನಾ ಮಸೂದೆಯನ್ನು ಹಿಂಪಡೆಯಿರಿ: SDPI

    ಕೊಪ್ಪಳ: ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೊಳಿಸಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆಯು ಸಂವಿಧಾನದ ಆರ್ಟಿಕಲ್ 25 ಪ್ರತಿಪಾದಿಸುವ, ಭಾರತೀಯ ಜನತೆಯ ಧಾರ್ಮಿಕ ಹಕ್ಕು ಮತ್ತು ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ ಹಾಗೂ ಪ್ರತಿಯೊಬ್ಬ ಭಾರತೀಯನ ಧಾರ್ಮಿಕ ಸ್ವಾತಂತ್ರ್ಯವನ್ನು ಅತಿಕ್ರಮಿಸುವ ಹುನ್ನಾರವಾಗಿದೆ ಎಂದು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ – ಕೊಪ್ಪಳ ಜಿಲ್ಲಾ ಅಧ್ಯಕ್ಷರು ಹುಜಾರ್ ಆಹೆಮದ್ ಆರೋಪಿಸಿದ್ದಾರೆ.

    ಈ ಬಗ್ಗೆ ಪತಿಭಟನೆ ನಡೆಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಸ್‍ಡಿಪಿಐ, ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಎನ್ನುವ ಆಕರ್ಷಕ ಹಣೆ ಪಟ್ಟಿ ಹೊಂದಿರುವ ಸದರಿ ಮಸೂದೆಯು, ಅಪ್ರಾಪ್ತ, ಅಸ್ವಸ್ಥ ಚಿತ್ತ, ಮಹಿಳೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರನ್ನು ಮತಾಂತರ ಮಾಡಿದರೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎನ್ನುವ ಮೂಲಕ ದಲಿತ ಸಮುದಾಯವನ್ನು ಮಾನಸಿಕ ಅಸ್ವಸ್ಥರು, ಎನ್ನುವ ಮೂಲಕ ತುಂಬಾ ಅವಮಾನಕರವಾಗಿ ಬಿಂಬಿಸಲಾಗಿದೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ಕಾನೂನು ಹೋರಾಟಕ್ಕೆ SDPI ನಿರ್ಧಾರ

    ಅಕ್ರಮ ಮತಾಂತರ ನಡೆದಿದೆ ಎಂಬ ಆರೋಪವನ್ನು ಮಾಡಿ ಮತಾಂತರಗೊಂಡವರ ಬಂಧುಗಳು, ಸ್ನೇಹಿತರು ಹಾಗೂ ಪರಿಚಿತರ ಪೈಕಿ ಯಾರು ಬೇಕಾದರು ದೂರು ನೀಡಬಹುದು ಮತ್ತು ಆರೋಪ ಮಾಡಿದವರ ಮೇಲೆ ಅದನ್ನು ಸಾಬೀತು ಪಡಿಸುವ ಹೊಣೆಯೂ ಇರುವುದಿಲ್ಲ. ತಾನು ನಿರ್ದೂಷಿ ಎಂದು ಸಾಬೀತುಪಡಿಸುವ ಹೊಣೆ ಆರೋಪಕ್ಕೆ ಗುರಿಯಾದವರದೇ ಆಗಿರುತ್ತದೆ ಎನ್ನುವ ಮೂಲಕ ವೈಯಕ್ತಿಕ ದ್ವೇಷ, ಷಡ್ಯಂತ್ರ ಮತ್ತು ಅನ್ಯ ಕೋಮಿನವರ ನಾಶಕ್ಕೆ ಹಾಗೂ ಅವರನ್ನು ದುರುದ್ದೇಶಪೂರ್ವಕವಾಗಿ ತೊಂದರೆಗೆ ಸಿಲುಕಿಸುವ ಕೋಮುವಾದಿ ಧೋರಣೆಗೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ

    ಕೋಮು ಆಧಾರಿತ ಗಲಭೆಗಳಿಗೆ ಮತ್ತು ಅಶಾಂತಿಯ ವಾತಾವರಣಕ್ಕೆ ರಾಜ್ಯವನ್ನು ದೂಡಿ, ಇದನ್ನೇ ಬಂಡವಾಳ ಮಾಡಿಕೊಂಡು ಚುನಾವಣೆಯಲ್ಲಿ ರಾಜಕೀಯ ಲಾಭಗಳಿಸುವುದು.ದಲಿತ, ಆದಿವಾಸಿ, ಅಲೆಮಾರಿ ಸಮುದಾಯಗಳು ಜಾತಿ ತಾರತಮ್ಯದಿಂದ ಮುಕ್ತಿ ಪಡೆಯದೆ ಮತ್ತದೇ ಜಾತಿವಾದದ ಕಪಿ ಮುಷ್ಟಿಯಲ್ಲಿ ನರಳಿ ಸಾಯುವಂತೆ ಮಾಡುವುದು. ಧರ್ಮ ನಿರಪೇಕ್ಷತೆಯನ್ನು ಪ್ರೋತ್ಸಾಹಿಸುವ ಅಂತರ್ ಧರ್ಮೀಯ ಮದುವೆಗಳನ್ನು ನಿರ್ಬಂಧಿಸುವುದು. ಮಹಿಳೆಯರ ಹಕ್ಕುಗಳನ್ನು ಕಸಿಯುವುದು. ಧಾರ್ಮಿಕ ಅಲ್ಪಸಂಖ್ಯಾತರ ಸಂಸ್ಥೆಗಳ ಮೇಲೆ ದಾಳಿಗೆ ಪ್ರಚೋಧಿಸುವುದು, ಸದರಿ ಕಾಯ್ದೆಯ ಮೂಲಕ ಕಾನೂನನ್ನು ದುರ್ಬಳಕೆ ಮಾಡಿಕೊಂಡು ತೊಂದರೆ ಮಾಡುವುದು. ಅವರ ಆಸ್ತಿಗಳನ್ನು ಲಪಟಾಯಿಸಿ, ಆ ಮೂಲಕ ಅವರ ಸೇವಾ ಚಟುವಟಿಕೆಗಳನ್ನು ನಿಲ್ಲಿಸುವಂತೆ ಮಾಡುವುದು. ಮಾನವ ಹಕ್ಕುಗಳ ಪ್ರತಿಪಾದಕರು, ಚಳುವಳಿಗರಾರರು, ಹೋರಾಟಗಾರರು ಸಾಹಿತಿಗಳನ್ನು ದಿಕ್ಕು ತಪ್ಪಿಸಿ, ಅವರ ಆದ್ಯತೆಗಳ ದಾರಿ ಬದಲಿಸಿ, ಭಾವನಾತ್ಮಕ ಇಂತಹ ಜಟಾಪಟಿಗಳಲ್ಲೇ ಮುಳುಗಿಸಿ ಅಗತ್ಯವಾದ ವಿಚಾರಗಳ ಸುತ್ತ ಹೋರಾಟಗಳು ನಡೆಯದಂತೆ ಈ ಕಾಯ್ದೆಯ ಮೂಲಕ ಹುನ್ನಾರ ನಡೆಸಲಾಗುತ್ತಿದೆ.

    ಧಾರ್ಮಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಸೇವಾಕಾರ್ಯಗಳನ್ನೂ ಅವಿರತವಾಗಿ ನಡೆಸಿಕೊಂಡು ಬರುತ್ತಿರುವ ಹಲವು ಧಾರ್ಮಿಕ ಸಂಸ್ಥೆಗಳ ಮೇಲೆ ಈ ರೀತಿಯ ಭಯೋತ್ಪಾದನಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ಸೇವಾ ಸಂಸ್ಥೆಗಳು ನಾಡಿನ ಶೋಷಿತ ಸಮುದಾಯಗಳಿಗೆ ನೀಡುತ್ತಿದ್ದ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತಿತರ ಸೇವೆಗಳನ್ನು ತಡೆಗಟ್ಟಿ ಶೋಷಣೆ ಮಾಡಲು ಹೊರಟಿದೆ. ಸದರಿ, ಮತಾಂತರ ನಿಷೇಧ ಕಾಯ್ದೆಯ ಮೂಲಕ ಸರ್ಕಾರವು, ಸಮಾಜದಲ್ಲಿ ಅಕ್ಷರಶಃ ಆತಂಕ, ಭಯ, ದಾಳಿಯ ವಾತಾವರಣ ಸೃಷ್ಟಿಸಿ ಧಾರ್ಮಿಕ ಹಕ್ಕಿನ ಸ್ವಾತಂತ್ರ್ಯವನ್ನು ಧಮನಿಸಿ ತನ್ನ ಕೋಮುವಾದಿ ಅಜೆಂಡಾವನ್ನು ಮೆರೆಯಲು ಹೊರಟಿದೆ. ಆದ್ದರಿಂದ ಸಂವಿಧಾನದ ಆಶಯಗಳನ್ನು ಕಾಪಾಡಬೇಕಾದ ಮಹತ್ವದ ಅಧಿಕಾರ ಹೊಂದಿರುವ ರಾಜ್ಯಪಾಲರು, ಯಾವ ಕಾರಣಕ್ಕೂ ಈ ಮತಾಂತರ ನಿಷೇದ ಕಾಯ್ದೆ ಎಂಬ ಈ ಸರ್ಕಾರಿ ಪ್ರಾಯೋಜಿತ ಭಯೋತ್ಪಾದಕ ಮಸೂದೆಗೆ ಅನುಮತಿ ನೀಡಬಾರದೆಂದು ಎಸ್‍ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಮ್ ಮನಿಯಾರ್ ಒತ್ತಾಯಿಸಿದ್ದಾರೆ.

  • ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯದ ವರದಿಯನ್ನು ತಿರಸ್ಕರಿಸಿದ ಭಾರತ

    ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯದ ವರದಿಯನ್ನು ತಿರಸ್ಕರಿಸಿದ ಭಾರತ

    ನವದೆಹಲಿ: ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕದ ಸ್ಟೇಟ್ ವಿಭಾಗ ವರದಿಯೊಂದನ್ನು ಭಾರತ ತಿರಸ್ಕರಿಸಿದೆ.

    ಕೆಲ ಬಿಜೆಪಿ ನಾಯಕರು ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಭಾಷಣಗಳನ್ನು ಮಾಡಿದ್ದಾರೆ. ಅಲ್ಪಸಂಖ್ಯಾತರ ಮೇಲೆ ಹಿಂದೂ ಗುಂಪುಗಳ ಜನಸಮೂಹ ದಾಳಿಗಳು ವರ್ಷಪೂರ್ತಿ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

    ಯುಎಸ್ ಸ್ಟೇಟ್ ವಿಭಾಗವು ತನ್ನ ವೆಬ್‍ಸೈಟ್‍ನಲ್ಲಿ ಲಭ್ಯವಿರುವ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ 2018ರಲ್ಲಿ ಭಾರತದ ಧಾರ್ಮಿಕ ಸ್ವಾತಂತ್ರ್ಯದ ಕುರಿತು ವರದಿ ಮಾಡಿದೆ. ಅದರಲ್ಲಿ ಗೋ ಹತ್ಯೆ ದಾಳಿ, ಕೊಲೆಗಳು, ಜನಸಮೂಹ ಹಿಂಸೆ ಮತ್ತು ಬೆದರಿಕೆಗಳ ಬಗ್ಗೆ ಉಲ್ಲೇಖಿಸಲಾಗಿದೆ. ಅಲ್ಲದೆ ಬಿಜೆಪಿ ರಾಜಕೀಯ ಪಕ್ಷಪಾತದಿಂದ ಕೂಡಿದೆ. ಅಲ್ಪಸಂಖ್ಯಾತರ ಬಗ್ಗೆ ಕೆಲ ಬಿಜೆಪಿ ನಾಯಕರು ಅವಹೇಳನಾಕಾರಿ ಹೇಳಿಕೆ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

    ಈ ವರದಿ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಪ್ರತಿಕ್ರಿಯಿಸಿ, ಭಾರತ ಜಾತ್ಯಾತೀತ ದೇಶ. ಇಲ್ಲಿ ಅಲ್ಪಸಂಖ್ಯಾತರಿಗೂ ಸೇರಿಸಿ ಎಲ್ಲಾ ಸಮುದಾಯದವರಿಗೂ ಸಂವಿಧಾನಾತ್ಮವಾಗಿ ಮೂಲಭೂತ ಹಕ್ಕುಗಳುನ್ನು ನೀಡಲಾಗಿದೆ. ದೇಶದಲ್ಲಿನ ನಾಗರಿಕ ಹಕ್ಕುಗಳ ಸ್ಥಿತಿ ಕುರಿತಾಗಿ ಪ್ರಕಟಿಸಿರುವ ಈ ವಿದೇಶಿ ವರದಿಯಲ್ಲಿ ಭಾರತಕ್ಕೆ ಯಾವುದೇ ವಿಶ್ವಾಸಾರ್ಹತೆ ಅಂಶಗಳು ಕಾಣುತ್ತಿಲ್ಲ ಎಂದು ಹೇಳಿದರು.

    ಭಾರತವು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದೆ. ಇಲ್ಲಿನ ಸಂವಿಧಾನವು ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆ, ಪ್ರಜಾಪ್ರಭುತ್ವ ಆಡಳಿತ ಮತ್ತು ಕಾನೂನಿನ ನಿಯಮವು ಮೂಲಭೂತ ಹಕ್ಕುಗಳನ್ನು ಉತ್ತೇಜಿಸುತ್ತದೆ ಮತ್ತು ರಕ್ಷಿಸುತ್ತದೆ ಎನ್ನುವ ಮೂಲಕ ಯುಎಸ್ ವರದಿಯನ್ನು ತಿರಸ್ಕರಿಸಿದೆ.

    ಬಿಜೆಪಿ ಮಾಧ್ಯಮ ಮುಖ್ಯಸ್ಥ ಹಾಗೂ ಸಂಸದ ಅನಿಲ್ ಬಲೂನಿ ಅವರು ಕೂಡ ಈ ವರದಿಯನ್ನು ಖಂಡಿಸಿದ್ದಾರೆ. ಅಲ್ಲದೆ ಈ ವರದಿಯಲ್ಲಿ ಬಿಜೆಪಿ ಹಾಗೂ ನರೇಂದ್ರ ಮೋದಿ ಸರ್ಕಾರ ವಿರುದ್ಧ ಪಕ್ಷಪಾತ ಮಾಡಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]