Tag: ಧಾರ್ಮಿಕ ದತ್ತಿ ಇಲಾಖೆ

  • ‘ದೇವರ’ ಇಲಾಖೆಗೂ ಕೈ ಹಾಕಿದ ‘ಸೂಪರ್’ ಸಿಎಂ

    ‘ದೇವರ’ ಇಲಾಖೆಗೂ ಕೈ ಹಾಕಿದ ‘ಸೂಪರ್’ ಸಿಎಂ

    ಬೆಂಗಳೂರು: `ದೇವರ’ ಇಲಾಖೆಗೂ ಸಿಎಂ ಹಿರಿಯ ಸಹೋದರ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕೈ ಹಾಕಿದ್ದು, ಮುಜರಾಯಿ ಇಲಾಖೆ ವ್ಯವಹಾರದಲ್ಲೂ ಮಧ್ಯಪ್ರವೇಶ ಮಾಡಿದ್ದಾರೆ.

    ಮುಜರಾಯಿ ಇಲಾಖೆಯನ್ನು ಕಾಂಗ್ರೆಸ್ಸಿನ ಪರಮೇಶ್ವರ್ ನಾಯ್ಕ್ ಅವರು ನಿರ್ವಹಿಸುತ್ತಿದ್ದಾರೆ. ಆದರೆ ಈಗ ಕಲ್ಯಾಣ ಮಂಟಪ ಒಂದರ ಗುತ್ತಿಗೆಯನ್ನು ಶೃಂಗೇರಿ ಮಠಕ್ಕೆ ಕೊಡುವಂತೆ ರೇವಣ್ಣ ಅವರು ಪತ್ರ ಬರೆದಿದ್ದಾರೆ. ಈ ರೀತಿ ಪತ್ರ ಬರೆದು ಕಾನೂನು ಮೀರಿ ಕಲ್ಯಾಣ ಮಂಟಪ ಗುತ್ತಿಗೆ ನೀಡಲು ಹೊರಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ರೇವಣ್ಣ ಅವರು ಧಾರ್ಮಿಕ ದತ್ತಿ ಇಲಾಖೆಗೆ ಪತ್ರ ಬರೆದು, ಬೆಂಗಳೂರಿನ ಕಲ್ಯಾಣ ಮಂಟಪವನ್ನು ಶೃಂಗೇರಿ ಪೀಠಕ್ಕೆ ಗುತ್ತಿಗೆ ಆಧಾರದಲ್ಲಿ ನೀಡಲು ತಿಳಿಸಿದ್ದಾರೆ.

    ಈ ಬಗ್ಗೆ ಸಚಿವರಿಂದ ಪತ್ರ ಪಡೆದಿರುವ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಪತ್ರದಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ದುಡ್ಡಿಲ್ಲ. ಆದ್ದರಿಂದ ಪೀಠಕ್ಕೆ ವರ್ಗಾಯಿಸುವಂತೆ ತಿಳಿಸಿದ್ದಾರೆ. ಈ ಹಿಂದೆ ಸಚಿವರ ಮನೆಯ ನವೀಕರಣಕ್ಕೆ ಕೋಟಿ ಕೋಟಿ ಖರ್ಚು ಮಾಡಿದ್ದ ಸರ್ಕಾರ ಇಂದು ಸಾರ್ವಜನಿಕರ ಉಪಯೋಗಕ್ಕೆ ಬರುವ ಕಲ್ಯಾಣ ಮಂಟಪಕ್ಕೆ ಹಣ ಇಲ್ಲ ಎಂದು ಹೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಾರ್ವಜನಿಕರ ಉಪಯೋಗಕ್ಕೆ ಬರುವ ಈ ಯೋಜನೆಯನ್ನು ಪೀಠಕ್ಕೆ ವರ್ಗಾವಣೆ ಮಾಡುವ ಮೂಲಕ ಖಾಸಗೀಕರಣ ಗೊಳಿಸಿ ಹಣ ಮಾಡುವ ಉದ್ದೇಶ ಹೊಂದಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ.

    ಪತ್ರದಲ್ಲೇನಿದೆ:
    ಬಸವನಗುಡಿಯಲ್ಲಿರುವ ಮುಜರಾಯಿಗೆ ಸೇರಿದ ಕಾರಂಜಿ ಅಂಜನೇಯ ದೇಗುಲದ ಅವರಣದಲ್ಲಿ ಕಲ್ಯಾಣ ಮಂಟಪ ಇದೆ. ಈ ಕಲ್ಯಾಣ ಮಂಟಪ ನಿರ್ಮಾಣ ಹಂತದಲ್ಲಿದೆ. ಪರಿಷ್ಕೃತ ದರ ಐದುಕೋಟಿಯಷ್ಟು ಆಗಲಿದೆ. ಆದರೆ ದೇಗುಲದ ಖರ್ಚಿನಲ್ಲಿ ಕೇವಲ 66 ಲಕ್ಷ ಭರಿಸಲು ಸಾಧ್ಯವಿದೆ. ಉಳಿದ ಖರ್ಚನ್ನು ಭರಿಸಲು ಸಾಧ್ಯವಿಲ್ಲ. ಅನುದಾನದ ಕೊರತೆ ಇದೆ. ಈ ಕಾರಣಕ್ಕೆ ಲೋಕೋಪಯೋಗಿ ಸಚಿವರು ಈ ಕಲ್ಯಾಣ ಮಂಟಪದ ಗುತ್ತಿಗೆಯನ್ನು ಶೃಂಗೇರಿ ಪೀಠ ಕ್ಕೆ ವರ್ಗಾಯಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಸರ್ಕಾರ ಹಾಗೂ ಶೃಂಗೇರಿ ಪೀಠ ಎರಡು ನಿಭಾಯಿಸಿ ಕಲ್ಯಾಣ ಮಂಟಪದ ಲಾಭವನ್ನು ಸರ್ಕಾರ ಹಾಗೂ ಪೀಠ ಶೇ.50 ರಂತೆ ಹಂಚಿಕೊಳ್ಳುವ ಬಗ್ಗೆಯೂ ತಿಳಿಸಿದ್ದಾರೆ. ಹಾಗಾಗಿ ಈ ಮನವಿಯನ್ನು ಪರಿಗಣಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ರು ಸರ್ಕಾರದ ಪ್ರಧಾನ ಕಾರ್ಯದರ್ಶಿ ಗೆ ಪತ್ರ ಬರೆದಿದ್ದಾರೆ.

    ನಿಯಮ ಏನು ಹೇಳುತ್ತೆ?
    ನಗರದ ಮುಜರಾಯಿ ಇಲಾಖೆ ಸೇರಿದ ದೇವಾಲಯದ ಈ ಕಲ್ಯಾಣ ಮಂಟಪ ನಿರ್ಮಾಣವನ್ನು ಮಾಡಲಾಗುತ್ತಿದೆ. ಮುಜರಾಯಿಗೆ ಸೇರಿದ ಕಟ್ಟಡ, ಆಸ್ತಿಯನ್ನು ಸಾರ್ವಜನಿಕ ಹರಾಜಿನ ಮೂಲಕವೇ ಗುತ್ತಿಗೆ ನೀಡಬೇಕ್ಕು ಎನ್ನುವ ನಿಯಮವಿದೆ.

    ಈ ಹಿಂದೆ ಸಂಪಗಿರಾಮನಗರದ ದೇಗುಲದ ಜಾಗವನ್ನು ಗುತ್ತಿಗೆ ನೀಡುವ ವಿಚಾರದಲ್ಲಿ ತಗಾದೆಯಾದಾಗ ಮುಜರಾಯಿ ಇಲಾಖೆ ತನಗೆ ಸೇರಿದ ಜಾಗವನ್ನು ಗುತ್ತಿಗೆ ನೀಡುವಂತಿಲ್ಲ ಎಂದು ಹೇಳಿತ್ತು. ಕಾಯ್ದೆ ಹೀಗಿದ್ದರೂ ಧಾರ್ಮಿಕ ಇಲಾಖೆಯ ನಡೆ ಅಚ್ಚರಿ ಮೂಡಿಸಿದೆ. ಈ ಗುತ್ತಿಗೆ ನೀಡಲು ದೇವಾಲಯದ ಸಮಿತಿಯೇ ರೇವಣ್ಣ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದ್ದು, ಈ ಮನವಿ ಹಿನ್ನೆಲೆಯಲ್ಲಿ ಕಾನೂನು ಅಂಶಗಳನ್ನು ಪರಿಗಣನೆ ತೆಗೆದುಕೊಳ್ಳದ ಸಚಿವರು ನೇರ ಪತ್ರ ಬರೆದಿದ್ದಾರೆ.

    ಮುಜರಾಯಿ ಇಲಾಖೆ ಆಯುಕ್ತರು ಕೂಡ ಸಚಿವರ ಪತ್ರ ಬರುತ್ತಿದಂತೆ ನಿಯಮ ಮೀರಿ ಪತ್ರ ಬರೆದಿದ್ದಾರೆ. ಇತ್ತ ದೇವಸ್ಥಾನದ ಮುಂಭಾಗದಲ್ಲಿ “ಕಲ್ಯಾಣ ಮಂಟಪಕ್ಕಾಗಿ ದೇಣಿಗೆ ನೀಡಿ ರಸೀದಿ ಪಡೆದುಕೊಳ್ಳಿ” ಎಂದು ಬೋರ್ಡ್ ಹಾಕಲಾಗಿದೆ. ಹಾಗದರೆ ದೇವಾಲಯದ ಕಲ್ಯಾಣ ಮಂಟಪ ನಿರ್ಮಾಣ ಮಾಡುವಲ್ಲಿ ಜನ ಕೊಟ್ಟಿರುವ ದುಡ್ಡು ಎಲ್ಲಿಗೆ ಹೋಗುತ್ತೆ ಎಂಬ ಬಹುದೊಡ್ಡ ಅನುಮಾನವೂ ಮೂಡಿದೆ. ಇತ್ತ ಈ ಕುರಿತು ವರದಿ ಮಾಡಲು ತೆರಳಿದರೆ ದೇಗುಲದ ದೃಶ್ಯಾವಳಿ ತೆಗೆದುಕೊಳ್ಳಲು ಖಾಸಗಿ ವ್ಯಕ್ತಿಗಳು ಪಬ್ಲಿಕ್ ಟಿವಿ ಕ್ಯಾಮೆರಾಕ್ಕೆ ಅಡ್ಡಿ ಪಡಿಸಿದ್ದಾರೆ. ಅಲ್ಲದೇ ಕಲ್ಯಾಣ ಮಂಟಪ ಕಟ್ಟಲು ದುಡ್ಡಿಲ್ಲ ನೀವು ಹಣ ನೀಡುತ್ತೀರಾ ಎಂದು ಪಬ್ಲಿಕ್ ಟಿವಿ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದಾರೆ.

    ಸಚಿವರು ಏನು ಹೇಳಿದ್ರು:
    ಪಬ್ಲಿಕ್ ಟಿವಿ ನೇರ ಮುಜರಾಯಿ ಇಲಾಖೆ ಸಚಿವ ಪರಮೇಶ್ವರ್ ನಾಯಕ್ ರೊಂದಿಗೆ ಸಂಪರ್ಕ ಮಾಡಿದ್ದು, ಸಿಎಂ ಅವರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ರಾಜ್ಯದ ಮುಖ್ಯ ದೇವಾಲಯದ ಅಭಿವೃದ್ಧಿಗೆ ನಮ್ಮ ಇಲಾಖೆಯಿಂದ ಹಣ ನೀಡಲಾಗಿತ್ತು. ಆದ್ದರಿಂದ ಸಭೆಯಲ್ಲಿ ಲೋಕೋಪಯೋಗಿ ಸಚಿವರು ಭಾಗವಹಿಸಿದ್ದರು. ಸದ್ಯ ಭಕ್ತರ ಆಶಯದೊಂದಿಗೆ ದೇವಾಲಯದ ಅಭಿವೃದ್ಧಿ ಮಾಡಲಾಗಿದೆ ಅಷ್ಟೇ. ಆದರೆ ನಾವು ಯಾರಿಗೂ ಗುತ್ತಿಗೆ ನೀಡುತ್ತಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿದ್ದೇವೆ ಎಂದರು. ಕಲ್ಯಾಣ ಮಂಟಪದ ನಿರ್ಮಾಣಕ್ಕೆ ಹಣ ಇಲ್ಲವೇ ಎಂಬ ಪ್ರಶ್ನೆಗೆ ಗರಂ ಆದ ಸಚಿವರು ಕರೆ ಕಡಿತಗೊಳಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಇತಿಹಾಸ ಪ್ರಸಿದ್ಧ ಬಸವೇಶ್ವರ ದೇವರ ಅಗ್ನಿಕೊಂಡೋತ್ಸವ ರದ್ದು!

    ಇತಿಹಾಸ ಪ್ರಸಿದ್ಧ ಬಸವೇಶ್ವರ ದೇವರ ಅಗ್ನಿಕೊಂಡೋತ್ಸವ ರದ್ದು!

    ರಾಮನಗರ: ಗ್ರಾಮಸ್ಥರು ಹಾಗೂ ಧಾರ್ಮಿಕ ದತ್ತಿ ಜಟಾಪಟಿಗೆ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಇತಿಹಾಸ ಪ್ರಸಿದ್ದ ಬಸವೇಶ್ವರ ದೇವರ ಅಗ್ನಿಕೊಂಡೋತ್ಸವ ರದ್ದಾಗಿದೆ.

    ರಾಮನಗರದ ಅವ್ವೇರಹಳ್ಳಿ ಗ್ರಾಮದಲ್ಲಿ ನಡೆಯುವ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಬಸವೇಶ್ವರ ದೇವರ ಅಗ್ನಿಕೊಂಡೋತ್ಸವ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈ ದೇವಾಲಯವು ಮುಜರಾಯಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಅಗ್ನಿಕೊಂಡ ಹಾಯುವ ವೇಳೆ ಅರ್ಚಕ ವಿಜಯ್ ಕುಮಾರ್ ಬಿದ್ದು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅರ್ಚಕರು ಧಾರ್ಮಿಕ ದತ್ತಿ ಇಲಾಖೆಗೆ ದೊಡ್ಡದಾಗಿದ್ದ ಅಗ್ನಿಕೊಂಡದ ಉದ್ದವನ್ನು ಚಿಕ್ಕದಾಗಿ ಮಾಡುವಂತೆ ಮನವಿ ಮಾಡಿದ್ದರು.

    ಆದ್ದರಿಂದ ಧಾರ್ಮಿಕ ದತ್ತಿ ಇಲಾಖೆ ಈ ಬಾರಿ ಜಾತ್ರೆ ವೇಳೆ 60 ಅಡಿ ಉದ್ದದ ಅಗ್ನಿಕೊಂಡವನ್ನ 15 ಅಡಿಗೆ ಇಳಿಸಿದೆ. ಅಗ್ನಿಕೊಂಡದ ಎರಡು ಬದಿಯಲ್ಲಿ ಇಟ್ಟಿಗೆ ಇಟ್ಟು ಅದರ ಉದ್ದವನ್ನು ಕಡಿಮೆ ಮಾಡಲಾಗಿದೆ. ಆದರೆ ಈ ಕ್ರಮಕ್ಕೆ ಧಾರ್ಮಿಕ ದತ್ತಿ ಇಲಾಖೆ ವಿರುದ್ಧ ಗ್ರಾಮಸ್ಥರು, ಭಕ್ತರ ಆಕ್ರೋಶ ವ್ಯಕ್ತಪಡಿಸಿದ್ದು, ಇಲಾಖೆ ಸಿಬ್ಬಂದಿ ಹಾಗೂ ಭಕ್ತರ ನಡುವೆ ಮಾತಿ ಚಕಮಕಿ ನಡೆದಿದೆ. ಈ ಜಗಳದಿಂದ ಸದ್ಯ ಬಸವೇಶ್ವರ ದೇವರ ಅಗ್ನಿಕೊಂಡೋತ್ಸವವನ್ನು ರದ್ದುಗೊಳಿಸಲಾಗಿದೆ.

  • ಮಠಗಳನ್ನು ಸರ್ಕಾರದ ಸುಪರ್ದಿಗೆ ಪಡೆಯುವುದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವಿರೋಧ

    ಮಠಗಳನ್ನು ಸರ್ಕಾರದ ಸುಪರ್ದಿಗೆ ಪಡೆಯುವುದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವಿರೋಧ

    ಹಾಸನ: ಮಠಗಳನ್ನು ಸರ್ಕಾರದ ಸುರ್ಪದಿಗೆ ಪಡೆಯುವುದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರೋಧ ವ್ಯಕ್ತಪಡಿಸಿದ್ದಾರೆ.

    ಶ್ರವಣಬೆಳಗೊಳದಲ್ಲಿ ಮಾತನಾಡಿದ ಅವರು, ಧರ್ಮ ಬೇರೆ. ರಾಜಕಾರಣ ಬೇರೆ. ಎರಡನ್ನು ಒಟ್ಟಿಗೆ ನೋಡಬಾರದು ಎಂದಿದ್ದಾರೆ. ಈ ಬಗ್ಗೆ ನನಗೆ ಖಚಿತ ಮಾಹಿತಿ ಇಲ್ಲ. ಹಾಗೇನಾದ್ರು ಆದ್ರೆ ಅದಕ್ಕೆ ಸ್ಪಷ್ಟವಾಗಿ ವಿರೋಧಿಸುವುದು ನನ್ನ ಅಭಿಪ್ರಾಯ ಅಂತ ಹೇಳಿದ್ದಾರೆ.

    ಧರ್ಮಕ್ಕೆ ರಾಜಕಾರಣದ ಸೊಂಕು ತಗಲಬಾರದು. ಇದು ತಪ್ಪು. ಎಲ್ಲವನ್ನೂ ರಾಷ್ಟ್ರೀಕರಣ ಮಾಡಲು ಸಾಧ್ಯವಿಲ್ಲ. ಇದು ಒಪ್ಪತಕ್ಕುದ್ದಲ್ಲ. ಇದಕ್ಕೆ ವಿರೋಧಿಸುವ ಮತ್ತು ಪ್ರತಿಭಟನೆ ಮಾಡುವ ಕುರಿತು ಬೇರೆ ರೀತಿ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.


    ರಾಜ್ಯದ ಮಠ, ದೇವಸ್ಥಾನ, ಧಾರ್ಮಿಕ ಸಂಸ್ಥೆಗಳೇ ಸಿಎಂ ಸಿದ್ದರಾಮಯ್ಯ ಟಾರ್ಗೆಟ್ ಮಾಡುತ್ತಿದ್ದು, ಸರ್ಕಾರಕ್ಕೆ ಇನ್ನು 3 ತಿಂಗಳ ಅವಧಿ ಇರುವಾಗಲೇ ಆಪರೇಷನ್‍ಗೆ ಕೈ ಹಾಕಿಬಿಟ್ರಾ ಅನ್ನೋ ಮಾತುಗಳು ಕೇಳಿಬರುತ್ತಿವೆ. ಮಠಗಳು, ದೇವಸ್ಥಾನಗಳು, ಧಾರ್ಮಿಕ ಸಂಸ್ಥೆಗಳ ಮೇಲೆ ಸಿದ್ದರಾಮಯ್ಯ ಕಣ್ಣಿಟ್ಟಿದ್ದು, ಇವುಗಳನ್ನು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ತರಲು ಕರಡು ರಚನೆಗೆ ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಈ ಕುರಿತು ಸಾರ್ವಜನಿಕ ಅಭಿಪ್ರಾಯ, ಆಕ್ಷೇಪಣೆಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ ಎನ್ನಲಾಗಿದೆ.

    ಜ.29ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿ, 15 ದಿನದೊಳಗಾಗಿ ಸಾರ್ವಜನಿಕ ಅಭಿಪ್ರಾಯ, ಸಲಹೆ ನೀಡುವಂತೆ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ. ಧಾರ್ಮಿಕ ಸಂಸ್ಥೆಗಳನ್ನು ಧಾರ್ಮಿಕ ದತ್ತಿ ಕಾಯ್ದೆಗೆ ಒಳಪಡಿಸಬೇಕೆ? ಬೇಡವೇ.? ಒಳಪಡಿಸಬೇಕಿದ್ರೆ ಎಷ್ಟರಮಟ್ಟಿಗೆ ಒಳಪಡಿಸಬೇಕೆಂದು ಧಾರ್ಮಿಕ ದತ್ತಿ ಇಲಾಖೆ ಅಭಿಪ್ರಾಯ ಕೇಳಿದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.