ಉಡುಪಿ: ಅಲ್ಲಾಹ್ ಒಬ್ಬನೇ ದೇವರನ್ನುವವರಿಗೆ ನವರಾತ್ರಿ ಉತ್ಸವದಲ್ಲಿ ಏನು ಕೆಲಸ ಎಂದು ಶ್ರೀರಾಮಸೇನೆ (SriRamasena) ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಪ್ರಶ್ನಿಸಿದ್ದಾರೆ.
ದೇಶಾದ್ಯಂತ ನಡೆಯುತ್ತಿರುವ ಧಾರ್ಮಿಕ ಸಂಘರ್ಷಕ್ಕೆ ಸಂಬಂಧಿಸಿದಂತೆ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು, ದಾಂಡಿಯಾ ಪೆಂಡಾಲ್‌ಗೆ (Dhadia Pendal) ಮುಸ್ಲಿಂ ಯುವಕರಿಗೆ (Muslim Youth) ನಿರ್ಬಂಧ ಹೇರಬೇಕು ಎಂದಿದ್ದಾರೆ. ಇದನ್ನೂ ಓದಿ: ನವರಾತ್ರಿ ಪೂಜಾ ಕೈಂಕರ್ಯಗಳು ಸಂಪನ್ನ- ನಾಳೆ ಆಯುಧಗಳಿಗೆ ಪೂಜೆ
ದಾಂಡಿಯಾ ಹಿಂದೂಗಳ ಧಾರ್ಮಿಕ ಸಂಪ್ರದಾಯ. ವಿಕೃತಿ ಮೆರೆಯಲು ಹಾಗೂ ಹಿಂದೂ ಹುಡುಗಿಯರನ್ನು ಪಟಾಯಿಸುವ ಉದ್ದೇಶಕ್ಕೆ ಬರುತ್ತಾರೆ. ಲವ್ ಜಿಹಾದ್ (Love Jihad) ಮಾಡಲು ದಾಂಡಿಯಾ ಪೆಂಡಾಲ್‌ಗೆ ಬರುತ್ತಾರೆ. ನಮ್ಮ ಸಮಾಜ ಅವರನ್ನ ಸಂಪೂರ್ಣವಾಗಿ ಬಹಿಷ್ಕಾರ ಮಾಡಬೇಕು. ಹಿಂದೂ ಶ್ರದ್ಧಾಕೇಂದ್ರ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನ್ಯ ಧರ್ಮೀಯರು, ದುರುದ್ದೇಶದಿಂದ ಬಂದರೆ ಅವರನ್ನು ಸೇರಿಸಿಕೊಳ್ಳಬಾರದು ಎಂದು ಮುತಾಲಿಕ್ ಹೇಳಿದರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ರಾಜ್ಯದಲ್ಲಿ ಮೈಕ್ ದಂಗಲ್ ಬಳಿಕ ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಸಲು ಪೊಲೀಸರ ಅನುಮತಿ ಕಡ್ಡಾಯ ಮಾಡಲಾಗಿದೆ. ಅದರಂತೆ, ಕೊಟ್ಟ ಗಡುವಿನಲ್ಲಿ ಧಾರ್ಮಿಕ ಕೇಂದ್ರಗಳು ಅನುಮತಿ ಪಡೆದಿವೆ.
ವಿಶೇಷವೆಂದರೆ ಮೈಕ್ ಅನುಮತಿ ಪಡೆದ ಧಾರ್ಮಿಕ ಕೇಂದ್ರಗಳ ಪಟ್ಟಿಯಲ್ಲಿ ದೇಗುಲಗಳೇ ಅತಿ ಕಡಿಮೆ ಇವೆ. ಮೈಕ್ ಅನುಮತಿ ಪಡೆಯೋದ್ರದಲ್ಲಿ ದೇಗುಲಗಳು ಹಿಂದುಳಿದಿದ್ದು, ಮಸೀದಿ, ಚರ್ಚ್‌ಗಳು ಹೆಚ್ಚಿನ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಂಡಿವೆ. ಬೆಂಗಳೂರಲ್ಲಿ ಸಲ್ಲಿಕೆ ಆಗಿದ್ದ 1,530 ಅರ್ಜಿಗಳ ಪೈಕಿ 797 ಅರ್ಜಿಗಳು ಮಸೀದಿಗಳಿಂದಲೇ ಸಲ್ಲಿಕೆಯಾಗಿವೆ. ಒಟ್ಟು ಅರ್ಜಿಗಳ ಪೈಕಿ 10 ಅರ್ಜಿಗಳು ರದ್ದಾಗಿದ್ದು, 79 ಅರ್ಜಿಗಳು ಇನ್ನೂ ಪರಿಶೀಲನೆ ಹಂತದಲ್ಲಿದೆ. ಇದನ್ನೂ ಓದಿ: ಬರಗೂರು ಸಮಿತಿಯ ಪರಿಷ್ಕೃತ ಪಠ್ಯಪುಸ್ತಕದ ಗುಣಮಟ್ಟ ಸರಿಯಿಲ್ಲ: NCERT
ನಗರದಲ್ಲಿ ಒಟ್ಟು 308 ದೇಗುಲಗಳು ಅರ್ಜಿ ಸಲ್ಲಿಸಿದ್ದು, 295 ದೇಗುಲಗಳು ಅನುಮತಿ ಪಡೆದುಕೊಂಡಿದೆ. ಹಾಗೆಯೇ 797 ಮಸೀದಿಗಳಿಂದ ಅರ್ಜಿ ಸಲ್ಲಿಕೆಯಾಗಿದ್ದು, 762 ಮಸೀದಿಗಳು ಅನುಮತಿ ಪಡೆದಿವೆ. 358 ಚರ್ಚ್‌ಗಳಿಂದ ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ 320 ಚರ್ಚ್‌ಗಳಿಗೆ ಮೈಕ್‌ಗಳನ್ನು ಬಳಸಲು ಅನುಮತಿ ನೀಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಧ್ವನಿವರ್ಧಕ ಬಳಕೆಯಲ್ಲಿ ನಿಯಮ ಉಲ್ಲಂಘನೆಯಾದರೆ, ಡಿವೈಎಸ್‌ಪಿ ದರ್ಜೆಯಿಂದ ಮೇಲ್ಪಟ್ಟು ರಾಜ್ಯ ಪೊಲೀಸ್ ಮಹಾನಿರ್ದೇಶಕರ ದರ್ಜೆವರೆಗೂ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಕ್ರಮ ಕೈಗೊಳ್ಳುವ ಅಧಿಕಾರ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈಗಾಗಲೇ ಧ್ವನಿವರ್ಧಕಗಳ ಬಳಕೆಗೆ 15 ದಿನಗಳ ಒಳಗಾಗಿ ಕಡ್ಡಾಯವಾಗಿ ಅನುಮತಿ ಪಡೆಯುವಂತೆ ಸೂಚಿಸಿದೆ. ಎಲ್ಲ ಧಾರ್ಮಿಕ ಕೇಂದ್ರಗಳು ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳಲ್ಲೂ ಧ್ವನಿವರ್ಧಕ ಬಳಸುವುದಕ್ಕೂ ಅನುಮತಿ ಕಡ್ಡಾಯಗೊಳಿಸಿದೆ. ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಹಾಗೂ ಬೆಳಗ್ಗೆ 6 ರಿಂದ ರಾತ್ರಿ 10ರ ವರೆಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿರುವ ಮಿತಿಯಲ್ಲೇ ಮೈಕ್‌ಗಳ ಶಬ್ಧ ಪ್ರಮಾಣ ಇರಬೇಕು. ವಸತಿ ಪ್ರದೇಶಗಳಲ್ಲಿ ರಾತ್ರಿ 10ರ ಬಳಿಕ ವಾಹನಗಳ ಹಾರ್ನ್ ಗಳಿಗೂ ನಿರ್ಬಂಧವಿರಬೇಕು ಎಂದು ಆದೇಶಿಸಿದೆ.
ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಗಳ ಬಳಕೆಗೆ ಲಿಖಿತ ಅನುಮತಿ ಪಡೆದಿರಬೇಕು ಈ ಮಾರ್ಗಸೂಚಿ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸೂಚಿಸಿದೆ.
ಅನುಮತಿ ನೀಡಲು 2 ಹಂತದ ಸಮಿತಿ: ಧ್ವನಿವರ್ಧಕಗಳಿಗೆ ಅನುಮತಿ ಕೊಡಲು 2 ಹಂತದಲ್ಲಿ ಸರ್ಕಾರ ಸಮಿತಿ ರಚನೆ ಮಾಡಲಿದೆ. ಕಮಿಷನರೇಟ್ ಜಿಲ್ಲೆಗಳಲ್ಲಿ ಮೊದಲ ಸಮಿತಿ ರಚಿಸಬೇಕು. ಈ ಸಮಿತಿಯಲ್ಲಿ ಎಸಿಪಿ, ಸ್ಥಳೀಯ ಸಂಸ್ಥೆಯ ಕಾರ್ಯಕಾರಿ ಇಂಜಿನಿಯರ್ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಒಬ್ಬರು ಸದಸ್ಯರಿರುತ್ತಾರೆ. ಉಳಿದ ಜಿಲ್ಲೆಗಳಲ್ಲಿ 2ನೇ ಸಮಿತಿ ರಚಿಸಬೇಕು. ಇದರಲ್ಲಿ ಡಿವೈಎಸ್ಪಿ, ತಹಸಿಲ್ದಾರ್ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಒಬ್ಬರು ಸದಸ್ಯರಿರುತ್ತಾರೆ. ಎಲ್ಲ ಪರಿಶೀಲಿಸಿ ಈ ಸಮಿತಿಗಳು ಧ್ವನಿವರ್ಧಕಗಳಿಗೆ ಅನುಮತಿ ಕೊಡಲಿವೆ.
ಸಾರ್ವಜನಿಕ ಸ್ಥಳಗಳಲ್ಲಿ 10 ರಿಂದ 75 ಡೆಸಿಬಲ್, ಖಾಸಗಿ ಸ್ಥಳಗಳಲ್ಲಿ ಸ್ವಂತ ಸೌಂಡ್ ಸಿಸ್ಟಂಗಳ ಬಳಕೆಗೆ 5 ಡಿಸಿಬಲ್ ಶಬ್ಧ ಮಿತಿ ಇರಬೇಕು. ಹೊರತಾಗಿ ರಾತ್ರಿ 10ರ ಬಳಿಕ ಡ್ರಂ, ಟ್ರಂಪೆಟ್, ಟಂ-ಟಂ, ಇತರೆ ಶಬ್ಧ ಉಂಟು ಮಾಡುವ ಸಾಧನಗಳ ಬಳಕೆಯನ್ನೂ ನಿಷೇಧಿಸಲಾಗಿದೆ ಎಂದು ಆದೇಶ ಪ್ರತಿ ಹೇಳಿದೆ.
ಸದ್ಯ ಸರ್ಕಾರದ ಮಾರ್ಗಸೂಚಿಯಲ್ಲಿ ಅನುಮತಿ ಕೊಡಲು 2 ಹಂತದ ಸಮಿತಿಗಳ ರಚನೆ ಹೊರತುಪಡಿಸಿದರೆ ಹೊಸ ಟಫ್ ರೂಲ್ಸ್‌ಗಳು ಇಲ್ಲ. ಉಳಿದಂತೆ 2005ರ ಸುಪ್ರೀಂ ಕೋರ್ಟ್ ಆದೇಶ, 1986ರ ಪರಿಸರ ಸಂರಕ್ಷಣೆ ಕಾಯ್ದೆ ಹಾಗೂ 2002 ರ ಕರ್ನಾಟಕ ಸರ್ಕಾರದ ಆದೇಶಗಳ ಪಾಲನೆಗೆ ತಾಕೀತು ಮಾಡಿದೆ.
ಶಬ್ಧ ಪ್ರಮಾಣ ಎಲ್ಲಿ ಎಷ್ಟಿರಬೇಕು?
ಸಾರ್ವಜನಿಕ ಸ್ಥಳ- 10 ರಿಂದ 75 ಡೆಸಿಬಲ್
ಖಾಸಗಿ ಸ್ಥಳ – 5 ಡೆಸಿಬಲ್ (ಸ್ವಂತ ಸೌಂಡ್ ಸಿಸ್ಟಂಗಳ ಬಳಕೆ)
ಕೈಗಾರಿಕಾ ಪ್ರದೇಶ – ಹಗಲು 75 ಡೆಸಿಬಲ್, ರಾತ್ರಿ 70 ಡೆಸಿಬಲ್
ವಾಣಿಜ್ಯ ಚಟುವಟಿಕೆ ಪ್ರದೇಶ – ಹಗಲು 65 ಡೆಸಿಬಲ್, ರಾತ್ರಿ 60 ಡೆಸಿಬಲ್
ಜನವಸತಿ ಪ್ರದೇಶ – ಹಗಲು 55 ಡೆಸಿಬಲ್, ರಾತ್ರಿ 45 ಡೆಸಿಬಲ್
ಸೈಲೆಂಟ್ ಝೋನ್ (ನಿಶ್ಯಬ್ಧ ವಲಯ) ಹಗಲು 50 ಡೆಸಿಬಲ್, ರಾತ್ರಿ 40 ಡೆಸಿಬಲ್
ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ್ ಮುಸ್ಲಿಂ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ ಧಾರ್ಮಿಕ ಟೋಪಿಯನ್ನು ಧರಿಸಲು ನಿರಾಕರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಜೆಪಿ ಫೈರ್ ಬ್ರಾಂಡ್ ಸಿಎಂ ಯೋಗಿ ಅದಿತ್ಯನಾಥ್ ಅವರು ಸಂತ ಕಬೀರ್ ಅವರ ಸ್ಮಾರಕ ಭವನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸ್ಮಾರಕದ ಉಸ್ತುವಾರಿ ವಹಿಸಿದ್ದ ಧಾರ್ಮಿಕ ಮುಖಂಡರು ಯೋಗಿ ಅವರಿಗೆ ಟೋಪಿ ಧರಿಸಲು ಮುಂದಾಗಿದ್ದರು. ಆದರೆ ಈ ವೇಳೆ ಯೋಗಿ ಅವರು ಟೋಪಿ ಧರಿಸಲು ನಿರಾಕರಿಸಿ ಬಳಿಕ ಅಲ್ಲಿಂದ ತೆರಳಿದ್ದರು.
ಸದ್ಯ ಸಿಎಂ ಯೋಗಿ ಅದಿತ್ಯನಾಥ್ ಧಾರ್ಮಿಕ ಟೋಪಿ ಧರಿಸಲು ನಿರಾಕರಿಸಿರುವ ದೃಶ್ಯಗಳು ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂತ ಕಬೀರ್ ಅವರ 500 ನೇ ಪುಣ್ಯಸ್ಮರಣೆ ಪ್ರಯುಕ್ತ ಪ್ರಧಾನಿ ಮೋದಿ ಅವರು ಗುರುವಾರ ಭೇಟಿ ನೀಡಿದ್ದರು. ಪ್ರಧಾನಿ ಆಗಮನ ಹಿನ್ನೆಲೆ ಸಿಎಂ ಯೋಗಿ ಅದಿತ್ಯನಾಥ್ ಬುಧವಾರ ಸಿದ್ಧತೆಗಳ ಪರಿಶೀಲನೆಗೆ ತೆರಳಿದ್ದರು.
ಇದೇ ಮೊದಲಲ್ಲ: 2019 ರ ಲೋಕಾಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಆದರೆ ಪ್ರಧಾನಿ ಮೋದಿ ಸೇರಿದಂತೆ, ಸಿಎಂ ಯೋಗಿ ಅದಿತ್ಯನಾಥ್ ಈ ಹಿಂದೆಯೂ ಧಾರ್ಮಿಕ ಟೋಪಿ ಧರಿಸಲು ನಿರಾಕರಿಸಿದ್ದರು. ಸದ್ಯ ಯೋಗಿ ಅದಿತ್ಯನಾಥ್ ಅವರ ನಡೆಯನ್ನು ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಮುಖಂಡರು ಟೀಕಿಸಿ ವಾಗ್ದಾಳಿ ನಡೆಸಿದ್ದಾರೆ. ಆದರೆ ಇತ್ತೀಚೆಗೆ ಎಐಸಿಸಿ ರಾಹುಲ್ ಗಾಂಧಿ ಅವರು ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರು ನೀಡಿದ ಟೋಪಿಯನ್ನು ಧರಿಸಲು ರಾಹುಲ್ ಗಾಂಧಿ ನಿರಾಕರಿಸಿದ್ದರು. ಈ ವೇಳೆ ಬಿಜೆಪಿ ಕೆಲ ನಾಯಕರು ಸಹ ರಾಹುಲ್ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದರು.
Sant Kabir Nagar: Prime Minister Narendra Modi offers 'chadar' at Sant Kabir's Mazar in Maghar pic.twitter.com/kKJo4hwNwL