Tag: ಧಾರ್

  • ಹಿಜಬ್‌ ಧರಿಸುವುದು ಇಸ್ಲಾಂ ಧರ್ಮದಲ್ಲಿ ಅತ್ಯಗತ್ಯ: ಹಿರಿಯ ವಕೀಲ ಎ.ಎಂ.ಧಾರ್‌

    ಹಿಜಬ್‌ ಧರಿಸುವುದು ಇಸ್ಲಾಂ ಧರ್ಮದಲ್ಲಿ ಅತ್ಯಗತ್ಯ: ಹಿರಿಯ ವಕೀಲ ಎ.ಎಂ.ಧಾರ್‌

    ನವದೆಹಲಿ: ಹಿಜಬ್‌ಗೆ ವಿಚಾರವಾಗಿ ಕರ್ನಾಟಕ ಹೈಕೋರ್ಟ್‌ ಕೆಟ್ಟದಾಗಿ ತೀರ್ಪು ನೀಡಿದೆ. ಇಸ್ಲಾಂ ಧರ್ಮದಲ್ಲಿ ಹಿಜಬ್‌ ಧರಿಸುವುದು ಅಗತ್ಯವಾಗಿದೆ ಎಂದು ಹಿರಿಯ ವಕೀಲ ಎಎಂ ಧಾರ್‌ ಅಭಿಪ್ರಾಯಪಟ್ಟಿದ್ದಾರೆ.

    ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು. ಅಂತಿಮವಾಗಿ ನ್ಯಾಯವು ಮೇಲುಗೈ ಸಾಧಿಸುವ ಭರವಸೆ ಇದೆ ಎಂದು ವಕೀಲ ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್‌- ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ವಿದ್ಯಾರ್ಥಿನಿ

    ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಬ್‌ ಅನ್ನು ನಿಷೇಧಿಸುವ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿತು.

    ಹಿಜಬ್‌ ಧರಿಸುವುದು ಇಸ್ಲಾಂ ಧರ್ಮದ ಅಗತ್ಯ ಆಚರಣೆಯಲ್ಲ ಎಂದು ಕರ್ನಾಟಕ ಹೈಕೋರ್ಟ್‌ ತೀರ್ಪು ನೀಡಿದ್ದು, ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದೆ. ಇದನ್ನು ಪ್ರಶ್ನಿಸಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯೊಬ್ಬರು ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ನಾವು ಕುರಾನ್ ಫಾಲೋ ಮಾಡುತ್ತೇವೆ, ನಮ್ಮ ನಿಲುವಿನಲ್ಲಿ ಕಾಂಪ್ರಮೈಸ್ ಇಲ್ಲ: ಆಲಿಯಾ ಅಸ್ಸಾದಿ

  • ಹಾಲು ಕೇಳಿದ್ದಕ್ಕೆ ಒಂದು ವರ್ಷದ ಮಗುವಿನ ಕತ್ತು ಸೀಳಿ ಕೊಂದ ತಾಯಿ!

    ಹಾಲು ಕೇಳಿದ್ದಕ್ಕೆ ಒಂದು ವರ್ಷದ ಮಗುವಿನ ಕತ್ತು ಸೀಳಿ ಕೊಂದ ತಾಯಿ!

    ಭೋಪಾಲ್: ತಾಯಿಯೊಬ್ಬಳು ಕುಡಿಯಲು ಹಾಲು ಕೇಳಿ ಹಠ ಮಾಡಿದ್ದ ಒಂದು ವರ್ಷದ ಮಗುವಿನ ಕತ್ತನ್ನು ಸೀಳಿ ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ಮಧ್ಯಪ್ರದೇಶದ ಧಾರ್ ಎಂಬಲ್ಲಿ ನಡೆದಿದೆ.

    ಘಟನೆ ಸಂಬಂಧ ಪೊಲೀಸರು ಆರೋಪಿ ತಾಯಿಯನ್ನು ಗುರುವಾರ ವಶಕ್ಕೆ ಪಡೆದಿದ್ದಾರೆ. ಮಹಿಳೆ ತನ್ನ ಮಗುವನ್ನು ಕೊಲೆ ಮಾಡಿದ ವೇಳೆ ಮನೆಯಲ್ಲಿ ಯಾರು ಇರಲಿಲ್ಲ ಎಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.

    ತಾಯಿ ಅಡುಗೆ ಮಾಡುವಾಗ ಒಂದು ವರ್ಷದ ಮಗು ಹಾಲು ಬೇಕೆಂದು ಹಠ ಮಾಡಿದೆ. ಈ ವೇಳೆ ಅಳುತ್ತಿರುವ ಮಗುವಿನ ಶಬ್ಧ ಆಕೆಗೆ ಕಿರಿಕಿರಿಯುಂಟು ಮಾಡಿದೆ. ತಾಳ್ಮೆ ಕಳೆದುಕೊಂಡ ತಾಯಿ ಹರಿತವಾದ ವಸ್ತುವಿನಿಂದ ಮಗುವಿನ ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ಘಟನೆ ನಂತರ ಮನೆಯ ಬಾಗಿಲನ್ನು ಹೊರಗಡೆಯಿಂದ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋಗಿ ಕುಳಿತುಕೊಂಡಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಸಿ.ಬಿ.ಸಿಂಗ್ ತಿಳಿಸಿದ್ದಾರೆ.

    ತುಂಬಾ ಸಮಯದವರೆಗೆ ಅಳುತ್ತಿದ್ದ ಮಗು ಇದ್ದಕ್ಕಿದಂತೆ ಸುಮ್ಮನಾಗಿದ್ದರಿಂದ ಅನುಮಾನಗೊಂಡ ನೆರಮನೆಯ ಸಂಬಂಧಿಕರು ಮನೆಯ ಬಾಗಿಲು ತೆರೆದು ನೋಡಿದ್ದಾರೆ. ಮನೆಯಲ್ಲಿ ಒಂದು ವರ್ಷದ ಕಂದಮ್ಮ ರಕ್ತದ ಮಡುವಿನಲ್ಲಿ ಬಿದ್ದಿದೆ. ಸದ್ಯ ಪೊಲೀಸರು ಕ್ರೂರಿ ತಾಯಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.