ಪರಶುರಾಮ ಸೇರಿದಂತೆ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿರುವ, ಬಹುಭಾಷಾ ತಾರೆ (Actress) ಮಹಾಲಕ್ಷ್ಮಿ (Mahalakshmi) ಮತ್ತೆ ಬಣ್ಣದ ಪ್ರಪಂಚಕ್ಕೆ ವಾಪಸ್ಸಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ದಕ್ಷಿಣದ ಅಷ್ಟೂ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದ ಮಹಾಲಕ್ಷ್ಮಿ 80ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ಬೇಡಿಕೆಯಲ್ಲಿರುವಾಗಲೇ ಚಿತ್ರೋದ್ಯಮದಿಂದ ದೂರ ಸರಿದರು.
ಚಿತ್ರೋದ್ಯಮದಿಂದ ದೂರವಾದ ನಂತರ ಮಹಾಲಕ್ಷ್ಮಿ ಏನು ಮಾಡುತ್ತಿದ್ದರು ಎಂದು ಗೊತ್ತಾಗಿದ್ದೆ ಹಲವು ವರ್ಷಗಳ ನಂತರ. ಅವರು ಸನ್ಯಾಸಿಯಾದರು ಎಂದು ಹೇಳಲಾಗುತ್ತಿತ್ತು. ಅದಕ್ಕೆ ಸಾಕ್ಷಿಯಾಗಿ ಹಲವು ಫೋಟೋಗಳು ಕೂಡ ಹರಿದಾಡಿದವು. ಆನಂತರ ಅದು ಸುಳ್ಳು ಎಂದು ಬಿಂಬಿಸುವ ಪ್ರಯತ್ನ ಕೂಡ ನಡೆಯಿತು. ಇದನ್ನೂ ಓದಿ:ಮದುವೆ ಮುನ್ನ ಅಭಿಮಾನಿಗಳಿಗೆ ಹರ್ಷಿಕಾ-ಭುವನ್ ಕೊಟ್ಟರು ಗುಡ್ ನ್ಯೂಸ್
ಇದೀಗ ಮತ್ತೆ ಮಹಾಲಕ್ಷ್ಮಿ ಸುದ್ದಿಗೆ ಸಿಕ್ಕಿದ್ದಾರೆ. ಅವರು ಮತ್ತೆ ಬಣ್ಣದ ಪ್ರಪಂಚಕ್ಕೆ ಕಾಲಿಡುತ್ತಿದ್ದಾರೆ ಎನ್ನುವುದು ಸದ್ಯದ ವರ್ತಮಾನ. ಕನ್ನಡದ ಮನರಂಜನಾ ವಾಹಿನಿಯೊಂದು ಅವರನ್ನು ಸಂಪರ್ಕ ಮಾಡಿದ್ದು, ಧಾರಾವಾಹಿಯೊಂದರ (Serial) ಪ್ರಮುಖ ಪಾತ್ರ ಮಾಡಲು ಕೇಳಿದೆಯಂತೆ. ಅದಕ್ಕೆ ಮಹಾಲಕ್ಷ್ಮಿ ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಮಹಾಲಕ್ಷ್ಮಿ ಈ ಹಿಂದೆ ಬಣ್ಣದ ಪ್ರಪಂಚಕ್ಕೆ ಎರಡನೇ ಬಾರಿ ಕಾಲಿಟ್ಟಾಗಲೂ ಕನ್ನಡ ಚಿತ್ರೋದ್ಯಮವನ್ನೆ ಆರಿಸಿಕೊಂಡಿದ್ದಾರೆ. ಇದೀಗ ಮತ್ತೆ ಕನ್ನಡ ಕಿರುತೆರೆಯ ಮೂಲಕ ನಟನೆಯತ್ತ (Acting) ಮುಖ ಮಾಡುತ್ತಿದ್ದಾರೆ. ಅವರು ನಟಿಸಲಿರುವ ಧಾರಾವಾಹಿ ಯಾವುದು? ಯಾವ ಚಾನೆಲ್ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್.
ಜೊತೆ ಜೊತೆಯಲಿ ಧಾರಾವಾಹಿಯಿಂದ ನಟ ಅನಿರುದ್ಧ (Aniruddha) ಹೊರ ಬರುತ್ತಿದ್ದಂತೆಯೇ ಅಭಿಮಾನಿಗಳು ಮುಂದಿನ ಪ್ರಾಜೆಕ್ಟ್ ಏನು ಎಂದು ಕೇಳಿದ್ದರು. ಎಸ್.ನಾರಾಯಣ್ ಮತ್ತು ಅನಿರುದ್ಧ ಕಾಂಬಿನೇಷನ್ ನಲ್ಲಿ ‘ಸೂರ್ಯವಂಶ’ ಧಾರಾವಾಹಿ ಬರುತ್ತದೆ ಎಂದಾಗ ಕುತೂಹಲದಿಂದ ಕಾದರು. ಆದರೆ, ಆ ಧಾರಾವಾಹಿ ಬರಲೇ ಇಲ್ಲ. ಅನಿರುದ್ಧ ಅಭಿಮಾನಿಗಳಿಗೆ ಮತ್ತೆ ನಿರಾಸೆ ಆಯಿತು.
ನಿರಾಸೆಗೊಂಡ ಅಭಿಮಾನಿಗಳಿಗಾಗಿ ಅನಿರುದ್ಧ ಬಿಗ್ ಸರ್ ಪ್ರೈಸ್ ನೀಡುವುದಾಗಿ ತಿಳಿಸಿದ್ದಾರೆ. ‘ಇನ್ನು ಕೇವಲ ಎರಡೇ ಎರಡು ದಿನ ವೇಟ್ ಮಾಡಿ, ನಿಮಗಾಗಿ ಬಿಗ್ ಸರ್ ಪ್ರೈಸ್ ಕಾದಿದೆ’ ಎಂದು ಅವರು ಹೇಳಿಕೊಂಡಿದ್ದಾರೆ. ಆ ಸರ್ ಪ್ರೈಸ್ ಏನು ಎನ್ನುವ ಕುರಿತು ಅವರು ಸಣ್ಣ ಸುಳಿವೂ ಕೂಡ ನೀಡಿಲ್ಲ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳು ಕಾಯುವಂತಾಗಿದೆ. ಇದನ್ನೂ ಓದಿ:ಅಪಘಾತದಿಂದ ಚೇತರಿಸಿಕೊಂಡ್ರಾ ಸಾಯಿ ಧರಂ ತೇಜ್- ನಟ ಹೇಳೋದೇನು?
ಜೊತೆ ಜೊತೆಯಲಿ ಧಾರಾವಾಹಿಯಿಂದ (Serial) ಅನಿರುದ್ಧ ಆಚೆ ಬಂದ ನಂತರ ಮತ್ತೆ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾಹಿತಿ ಇತ್ತು. ಸಿನಿಮಾ (Movie) ರಂಗದಲ್ಲೇ ಅವರು ನಟರಾಗಿ ಸಕ್ರೀಯರಾಗಲಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೇ, ಡಾಕ್ಯುಮೆಂಟರಿ ನಿರ್ದೇಶನವನ್ನೂ ಮುಂದುವರೆಸುತ್ತಾರೆ ಎನ್ನಲಾಗಿತ್ತು. ಈ ಎರಡರಲ್ಲಿ ಯಾವುದಾದರೂ ಒಂದು ಸರ್ ಪ್ರೈಸ್ ರೀತಿಯಲ್ಲಿ ಹೇಳಬಹುದು ಎನ್ನುವ ಚರ್ಚೆ ಕೂಡ ಮಾಡಲಾಗುತ್ತಿದೆ.
ಸೂರ್ಯವಂಶ (Suryavamsa) ಧಾರಾವಾಹಿಯ ಹಲವು ಸಂಚಿಕೆಗಳನ್ನು ಚಿತ್ರೀಕರಿಸಲಾಗಿದೆ. ಆದರೆ, ಅದು ಅರ್ಧಕ್ಕೆ ನಿಲ್ಲುವುದಕ್ಕೆ ಈವರೆಗೂ ಕಾರಣ ಸಿಕ್ಕಿಲ್ಲ. ಈ ಧಾರಾವಾಹಿಯ ಕುರಿತಾಗಿ ಅನಿರುದ್ಧ ಅಪ್ ಡೇಟ್ ನೀಡಬಹುದು ಎಂದೂ ಅಂದಾಜಿಸಲಾಗಿದೆ. ಅದು ಏನು ಎನ್ನುವುದು ತಿಳಿಯಬೇಕು ಅಂದರೆ ಇನ್ನೆರಡು ದಿನ ಕಳೆಯಲೇಬೇಕು.
ಅಸಲಿ ರಾಮಾಯಣ (Ramayana) ಮತ್ತೆ ಮೆರವಣಿಗೆ ಹೊರಡಲಿದೆ. ಕೆಲವೇ ದಿನಗಳಲ್ಲಿ ರಮಾನಂದ್ ಸಾಗರ್ ನಿರ್ದೇಶನದ ರಾಮಾಯಣವನ್ನು ಜಗತ್ತಿನ ಭಾರತಿಯೆಲ್ಲರೂ ನೋಡಲಿದ್ದಾರೆ. ಮೂವತ್ತಾರು ವರ್ಷಗಳ ಹಿಂದೆ ನಿರ್ಮಾಣವಾದ ರಾಮಾಯಣ ಈಗಲೂ ಜನರ ಮನದಲ್ಲಿ ತಳಿರು ತೋರಣ. ಇದೇ ಹೊತ್ತಲ್ಲಿ ಆದಿಪುರುಷ್ (Adipurush) ನಿರ್ಮಾಣವಾಗಿ ಎಲ್ಲರಿಂದ ಟೀಕೆಗೆ ಒಳಪಟ್ಟಿದೆ. ನಮ್ಮ ರಾಮ, ಸೀತೆ, ರಾವಣ ಹೇಗಿರಬೇಕು ಎನ್ನುವುದನ್ನು ಪ್ರಭಾಸ್‌ಗೆ ತೋರಿಸಲು ಮರು ಪ್ರಸಾರ ಆಗುತ್ತಿದೆ ಎನ್ನುವ ಮಾತಿದೆ.
ರಾಮಾಯಣ. ಹೀಗಂದರೆ ಸಾಕು ಈಗಲೂ ಆ ದಿನಗಳು ನೆನಪಾಗುತ್ತವೆ. ಸುಮಾರು ಮೂವತ್ತಾರು ವರ್ಷಗಳ ಹಿಂದೆ ಭಾರತಿಯರ ಪಾಲಿಗೆ ದೈವಸ್ವರೂಪಿಯಂತೆ ಕಾಣಿಸಿದ ರಮಾನಂದ್ ಸಾಗರ್ ನಿರ್ದೇಶನದ ಆ ಮಹಾ ಧಾರಾವಾಹಿ (Serial). 1987ರಲ್ಲಿ ಅಂದಿನ ದೂರದರ್ಶನದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ ಪ್ರಸಾರವಾಗುತ್ತಿತ್ತು. ಆಗ ಈಗಿನಷ್ಟು ಟಿವಿ ಮತ್ತು ಚಾನೆಲ್‌ಗಳು ಇರಲಿಲ್ಲ. ಒಂದು ಮನೆಯಲ್ಲಿ ಟಿವಿ ಇದ್ದರೆ ಅವರು ಶ್ರೀಮಂತರು ಎಂದು ಭಾವಿಸುವ ದಿನಮಾನ ಅವು. ಕಪ್ಪು ಬಿಳುಪು ಹಾಗೂ ಕಲರ್ ಟಿವಿಗಳಲ್ಲಿ ರಾಮಾಯಣ ನೋಡಲು ಜನರು ಮುಗಿ ಬೀಳುತ್ತಿದ್ದರು. ಬರೀ ಕತೆ ನೋಡಲು ಅಲ್ಲ, ಅಲ್ಲಿಯ ಶ್ರೀರಾಮಚಂದ್ರ ಹಾಗೂ ಸೀತಾದೇವಿಯನ್ನು ಕಣ್ಣು ತುಂಬಿಕೊಂಡು ಕೈ ಮುಗಿಯುತ್ತಿದ್ದರು.
ಭಾನುವಾರ ಬೆಳಿಗ್ಗೆ ಹತ್ತು ಗಂಟಗೆ ದೇಶದ ಬೀದಿ ಬೀದಿಗಳು ಭಣಗುಡುತ್ತಿದ್ದವು. ಮುಂಜಾನೆದ್ದು ಹೆಂಗಸರು ಮನೆ ಮಂದಿಗೆಲ್ಲ ತಿಂಡಿ ವ್ಯವಸ್ಥೆ ಮಾಡಿ, ಒಂಬತ್ತೂವರೆಗೆ ಟಿವಿ ಮುಂದೆ ಹಾಜರಾಗುತ್ತಿದ್ದರು. ಕೆಲವರು ಟಿವಿ ಪರದೆಗೆ ಪೂಜೆ ಮಾಡುತ್ತಿದ್ದರು. ಹೂವಿನ ಹಾರ ಹಾಕಿ, ದೀಪ ಬೆಳಗಿ, ಆರತಿ ಎತ್ತಿ ಶ್ರೀರಾಮ ಹಾಗೂ ಸೀತಾದೇವಿಯನ್ನು ಬರಮಾಡಿಕೊಳ್ಳುತ್ತಿದ್ದರು. ಅದು ಆ ರಾಮಾಯಣಕ್ಕೆ ಇದ್ದ ಗತ್ತು ಹಾಗೂ ಗೌರವ. ರಾಮಾಯಣ ಪ್ರಸಾರ ಆಗುತ್ತಿದ್ದ ಹೊತ್ತಿಗೆ ವಿದ್ಯುತ್ ಕೂಡ ತೆಗೆಯುತ್ತಿರಲಿಲ್ಲ. ಅಕಸ್ಮಾತ್ ತೆಗೆದರೆ ಮುಗಿಯಿತು. ಕೆಲವು ಕಡೆ ವಿದ್ಯುತ್ ಸರಬರಾಜು ಕಚೇರಿಗೆ ಮುತ್ತಿಗೆ ಹಾಕಿ ಗಲಾಟೆ ಕೂಡ ನಡೆಯುತ್ತಿದ್ದವು. ರಾಮಾಯಣ ಅಷ್ಟೊಂದು ಮೋಡಿ ಮಾಡಿತ್ತು. ಇದನ್ನೂ ಓದಿ:ಕಾರವಾರದಲ್ಲಿ ಬದುಕಿದ್ದ ವಿಲಕ್ಷಣ ವ್ಯಕ್ತಿಯ ಕಥೆಯೇ ‘ಟೋಬಿ’ : ಗುಟ್ಟು ರಟ್ಟು
ರಮಾನಂದ್ ಸಾಗರ್ ಅದ್ಯಾವ ಗಳಿಗೆಯಲ್ಲಿ ರಾಮಾಯಣವನ್ನು ನಿರ್ದೇಶಿಸಲು ಮನಸು ಮಾಡಿದರೋ ಏನೊ? ಅವರು ಅಲ್ಲಿವರೆಗೆ ಮಾಡಿದ ಸಿನಿಮಾ ಕೆಲಸಗಳು ಮರೆತು ಹೋದವು. ರಾಮಾಯಣ ಮಾತ್ರ ಅವರಿಗೆ ಕೊನೇವರೆಗೂ ದೇಶವ್ಯಾಪಿ ಮೆರವಣಿಗೆ ಮಾಡಿದವು. ಅದಕ್ಕೆ ಕಾರಣ ಅವರು ಕತೆಯನ್ನು ಹೇಳಿದ ರೀತಿ ಮಾತ್ರ ಅಲ್ಲ, ಪ್ರತಿಯೊಂದು ಪಾತ್ರಕ್ಕೂ ಆಯ್ಕೆ ಮಾಡಿಕೊಂಡಿದ್ದ ಕಲಾವಿದರೂ ಕಾರಣ. ರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಕ್ಲಿಯಾ, ರಾವಣನಾಗಿ ಅರವಿಂದ್ ತ್ರಿವೇದಿ ಹಾಗೂ ಹನುಮಂತನಾಗಿ ಧಾರಾಸಿಂಗ್ ಜೀವ ತುಂಬಿದ್ದರು. ಪೌರಾಣಿಕ ಪಾತ್ರಗಳು ಹೀಗೆ ಇದ್ದಿರಬೇಕೆನ್ನುವಷ್ಟು ಭಕ್ತಿ ಮೂಡಿಸಿದ್ದವು.
ಮೂವತ್ತಾರು ವರ್ಷ. ಆಗ ಈಗಿನಷ್ಟು ತಂತ್ರಜ್ಞಾನ ಬೆಳೆದಿರಲಿಲ್ಲ. ಗ್ರೀನ್ ಮ್ಯಾಟ್, ವಿಎಫ್‌ಎಕ್ಸ್ ಇತ್ಯಾದಿ ಹೆಸರುಗಳೇ ಗೊತ್ತಿರಲಿಲ್ಲ. ಎಲ್ಲವನ್ನೂ ಕ್ಯಾಮೆರಾ ಟೆಕ್ನಿಕ್‌ನಿಂದ ಮಾಡಬೇಕಿತ್ತು. ಅಂಥ ಕ್ಯಾಮೆರಾಮನ್ ಕೂಡ ಇದ್ದರು. ರಾಮಾಯಣದಲ್ಲಿ ಎಂತೆಂಥ ಪವಾಡ ಸದೃಶ್ಯ ದೃಶ್ಯಗಳು ಬರುತ್ತವೆಂದು ಎಲ್ಲರಿಗೂ ಗೊತ್ತು. ಯುದ್ಧ, ಕಲ್ಲಿನಿಂದ ಸೇತುವೆ ಕಟ್ಟುವುದು, ಹನುಮಂತ ಬೆಟ್ಟವನ್ನು ಹೊತ್ತುಕೊಳ್ಳುವುದು, ಲಂಕಾ ದಹನ, ವಾನರ ಸೇನೆಯ ಕದನ ಪ್ರತಿಯೊಂದಕ್ಕೂ ಕ್ಯಾಮೆರಾ ಟೆಕ್ನಿಕ್‌ನಿಂದ ಮಾಡಿದ್ದರು ರಮಾನಂದ್ ಸಾಗರ್.
ಇಷ್ಟು ವರ್ಷಗಳ ನಂತರ ಅದೇ ಬೆಸ್ಟ್ ಎನ್ನುವಂತಿದೆ. ಹೀಗಾಗಿಯೇ ರಾಮಾಯಣ ಮರು ಪ್ರಸಾರ ಆಗುತ್ತಿದೆ. ಶಮೋರೋ ಚಾನೆಲ್‌ನಲ್ಲಿ ಜುಲೈ 3ರಿಂದ ದಿಬ್ಬಣ ಹೊರಡಲಿದೆ. ಏಕಾಏಕಿ ಈಗ್ಯಾಕೆ ರಾಮಾಯಣ ಮರು ಪ್ರಸಾರ ಮಾಡುತ್ತಿದ್ದಾರೆ? ಏನಿದರ ಹಿಂದಿನ ಉದ್ದೇಶ? ಪ್ರಶ್ನೆ ಏಳುವುದು ಸಹಜ. ಉತ್ತರ ಇಲ್ಲಿದೆ. ಇತ್ತೀಚೆಗೆ ತೆರೆ ಕಂಡ ಪ್ರಭಾಸ್ (Prabhas) ಅಭಿನಯದ ಆದಿಪುರುಷ್ ಯಾವ ಪರಿ ಉಗಿಸಿಕೊಂಡಿತೆಂದು ಎಲ್ಲರಿಗೂ ಗೊತ್ತು. ಐದು ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಆದಿಪುರುಷ್ ಇಡೀ ರಾಮಾಯಣದ ಕತೆ ಹಾಗೂ ಪಾತ್ರಗಳನ್ನು ವಿರೂಪಗೊಳಿಸಿತು. ರಾಮನ ಸೆಟ್ ಪ್ರಾಪರ್ಟಿಯಂಥ ಮುಖ, ರಾವಣನ ವಿಕಾರ ಹೇರ್ ಕಟ್, ಸಂಭಾಷಣೆ, ಹಾಲಿವುಡ್ ಹನುಮಂತ ಎಲ್ಲವೂ ನೆಗಪಾಟಲಿಗೆ ಈಡಾದವು. ಅದಕ್ಕೆ ಉತ್ತರವಾಗಿ ರಮಾನಂದ್ ಸಾಗರ್ (Ramanand Sagar) ರಾಮಾಯಣ ಪ್ರಸಾರ ಆಗುತ್ತಿದೆ ಎಂದು ಹೇಳಲಾಗುತ್ತಿದೆ.
ಐದು ನೂರು ಕೋಟಿ ಕಾಸು ಸುರಿದರೂ ಆದಿಪುರುಷ್ ಬಂಡವಾಳವನ್ನೂ ಬಾಚಿಕೊಳ್ಳಲಿಲ್ಲ. ಪ್ರಭಾಸ್‌ಗೆ ಹೆಚ್ಚು ಕಮ್ಮಿ ನೂರರಿಂದ ನೂರೈವತ್ತು ಕೋಟಿ ಗಂಟು ಮಡಗಿದ್ದಾರೆ. ಆದರೆ ಅವರ ಕಾಲ್‌ಶೀಟ್ ಕೇವಲ ಅರವತ್ತು ದಿನ. ಅಂದರೆ ಗ್ರೀನ್ ಮ್ಯಾಟ್ ಹಾಗೂ ಡ್ಯೂಪ್ ಬಳಸಿ ರಾಮನ ಪಾತ್ರದ ದೃಶ್ಯಗಳನ್ನು ಶೂಟ್ ಮಾಡಿದ್ದಾರೆ ನಿರ್ದೇಶಕ ಓಂರೌತ್. ಕಾರ್ಟೂನ್‌ನಂತಿರುವ ಗ್ರಾಫಿಕ್ಸ್, ಮಾಸ್ ಮಸಾಲಾ ಡೈಲಾಗ್ಸ್ ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಚಿತ್ರಕತೆ ಆವರಿಸಿಕೊಳ್ಳಬೇಕಿದ್ದ ಭಕ್ತಿಭಾವವೇ ಮಾಯ. ಇದೆಲ್ಲ ಸೇರಿ ಆದಿಪುರುಷ್‌ಗೆ ಇಡೀ ವಿಶ್ವವೇ ಮಹಾ ಮಂಗಳಾರತಿ ಮಾಡುವಂತಾಯಿತು. ನೆನಪಿರಲಿ, ಆ ರಾಮಾಯಣ ಧಾರಾವಾಹಿ ಒಂಬತ್ತು ಲಕ್ಷದಲ್ಲಿ ನಿರ್ಮಾಣವಾಗಿತ್ತು.
ತೀರಾ ಕಮ್ಮಿ ಬಜೆಟ್‌ನಲ್ಲಿ ನಿರ್ಮಾಣವಾದ ಆ ರಾಮಾಯಣ ದೂರದರ್ಶನಕ್ಕೆ ನಲವತ್ತು ಲಕ್ಷ ಲಾಭ ತಂದು ಕೊಟ್ಟಿತು. ಸುಮಾರು ಅರವತ್ತು ಕೋಟಿ ಜನರು ಇದನ್ನು ನೋಡಿದ್ದರು. ರಾಮನಾಗಿದ್ದ ಅರುಣ್ ಗೋವಿಲ್ ಹಾಗೂ ಸೀತೆ ಪಾತ್ರದ ದೀಪಿಕಾ ಚಿಕ್ಲಿಯಾ ನಿಜಕ್ಕೂ ಅಭಿನವ ರಾಮ-ಸೀತೆಯಾಗಿ ಭಾರತಿಯರ ಮುಂದೆ ನಿಂತರು. ಅರುಣ್ ಮತ್ತು ದೀಪಿಕಾ ಎಲ್ಲೇ ಹೋದರೂ ಜನರು ಅವರ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಿದ್ದರು. ಕೊರೋನಾ ನಂತರ ಅರುಣ್ ಗೋವಿಲ್ ವಿಮಾನ ನಿಲ್ದಾಣದಲ್ಲಿ ನಿಂತಾಗ ವಯಸ್ಸಾದ ಮಹಿಳೆ ‘ನೀನೇ ರಾಮ’ ಎಂದು ಕಾಲು ಮುಗಿದಿದ್ದು ಯಾರೂ ಮರೆತಿಲ್ಲ. ಅದು ರಾಮಾಯಣದ ನಿಜವಾದ ಗೆಲುವು, ಸಾಧನೆ.
ಕನ್ನಡದ ಪಾಪ್ಯುಲರ್ ಧಾರಾವಾಹಿಗಳಲ್ಲಿ (Serial) ಒಂದಾದ ‘ಜೊತೆ ಜೊತೆಯಲಿ’ (Jothe Jotheyali) ಕೊನೆಗೂ ತನ್ನ ಶೂಟಿಂಗ್ (Shooting) ಮುಗಿಸಿದೆ. ಭಾನುವಾರ ಕೊನೆ ಕಂತಿನ ಚಿತ್ರೀಕರಣ ಮಾಡಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ತಾವು ಕೊನೆ ದಿನದ ಶೂಟಿಂಗ್ ಮುಗಿಸಿರುವುದಾಗಿ ನಟಿ ಮೇಘಾ ಶೆಟ್ಟಿ (Megha Shetty) ಹೇಳಿಕೊಂಡಿದ್ಧಾರೆ. ಅದೊಂದು ಭಾವುಕ ಕ್ಷಣವೂ ಆಗಿತ್ತು ಎಂದು ಮಾತನಾಡಿದ್ದಾರೆ.
ಕಳೆದ ವಾರವಷ್ಟೇ ಧಾರಾವಾಹಿ ಮುಕ್ತಾಯವಾಗುತ್ತಿರುವ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ನ್ಯೂಸ್ ಬ್ರೇಕ್ ಮಾಡಿತ್ತು. ಅದಕ್ಕೆ ಕಾರಣವನ್ನೂ ನಿಖರವಾಗಿ ನೀಡಿತ್ತು. ಧಾರಾವಾಹಿ ತಂಡದ ಸದಸ್ಯರ ಅನಿಸಿಕೆಯನ್ನೂ ಪ್ರಕಟಿಸಿತ್ತು. ಕೊನೆಗೂ ಅದು ನಿಜವಾಗಿದೆ. ಭಾನುವಾರ ಕೊನೆಯ ಎಪಿಸೋಡ್ ನ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ ಎಂದು ಧಾರಾವಾಹಿ ತಂಡವೂ ಖಚಿತ ಪಡಿಸಿದೆ. ಇದನ್ನೂ ಓದಿ:7 ತಿಂಗಳ ಬಳಿಕ ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ ಧ್ರುವ ಸರ್ಜಾ
ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಮನೆ ಮನ ತಲುಪಿದ್ದನಟ ಅನಿರುದ್ಧ, ಧಾರಾವಾಹಿ ತಂಡಕ್ಕೆ ಸಹಕಾರ ನೀಡಲಿಲ್ಲ ಎಂದು ದೊಡ್ಡ ಸುದ್ದಿ ಆಗಿತ್ತು. ಬಹಿರಂಗವಾಗಿಯೂ ಅನಿರುದ್ಧ ಹಾಗೂ ಧಾರಾವಾಹಿಯ ನಿರ್ಮಾಪಕ ಆರೂರು ಜಗದೀಶ್ ಈ ಕುರಿತು ಮಾತನಾಡಿದ್ದರು. ಅನಿರುದ್ಧ (Aniruddha) ಅವರನ್ನು ಧಾರಾವಾಹಿಯಿಂದ ಕೈ ಬಿಡಲಾಯಿತು. ನಂತರ ಹರೀಶ್ ರಾಜ್ ಆ ಪಾತ್ರವನ್ನು ಮುಂದುವರೆಸಿದರು. ಇದೀಗ ಮತ್ತೆ ಕಲಾವಿದರ ಕಾರಣದಿಂದಾಗಿಯೇ ಧಾರಾವಾಹಿ ನಿಲ್ಲಿಸಬೇಕಾದ ಸ್ಥಿತಿ ಬಂದಿತ್ತು.
ಧಾರಾವಾಹಿ ತಂಡದ ಕೆಲವು ಸದಸ್ಯರೇ ಹೇಳಿಕೊಂಡಂತೆ ಪ್ರಮುಖ ಪಾತ್ರ ಮಾಡುತ್ತಿದ್ದ ಕಲಾವಿದೆಯು ಡೇಟ್ ಕೊಡದೇ ಇರುವ ಕಾರಣದಿಂದಾಗಿ ಧಾರಾವಾಹಿ ನಿಲ್ಲಿಸಬೇಕಾಗಿ ಬಂದಿದೆ. ಪ್ರಮುಖ ಪಾತ್ರ ಮಾಡುತ್ತಿದ್ದ ನಟಿ ಅಸಹಕಾರದಿಂದ ಪಾಪ್ಯುಲರ್ ಧಾರಾವಾಹಿಯೊಂದು ಅಕಾಲಿಕವಾಗಿ ನಿಂತಿದೆ. ಅಂದುಕೊಂಡಂತೆ ಆಗಿದ್ದರೆ ಈ ಧಾರಾವಾಹಿ 1000 ಕಂತುಗಳನ್ನು ಕಾಣಬೇಕಿತ್ತು. ಆದರೆ, ಟಾರ್ಗೆಟ್ ಮುಟ್ಟುವಲ್ಲಿ ವಿಫಲವಾಗಿದೆ.
ಆರೂರು ಜಗದೀಶ್ (Aroor jagadish) ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಕನ್ನಡದ ಹೆಸರಾಂತ ಧಾರಾವಾಹಿ (Serial) ‘ಜೊತೆ ಜೊತೆಯಲಿ’ (Jothe Jotheyali) ಈ ತಿಂಗಳು ಹೊತ್ತಿಗೆ ನಿಲ್ಲುತ್ತಾ? ಇಂಥದ್ದೊಂದು ಆಘಾತಕಾರಿ ಸುದ್ದಿ ಕಿರುತೆರೆ ವಲಯದಿಂದ ಬಂದಿದೆ. ಅನಿರುದ್ಧ ಕಾರಣಕ್ಕಾಗಿ ಸಾಕಷ್ಟು ಸುದ್ದಿಯಾಗಿದ್ದ ಈ ಧಾರಾವಾಹಿ ಮತ್ತೆ ಕಲಾವಿದರ ಕಾರಣದಿಂದಾಗಿಯೇ ಆಟ ನಿಲ್ಲಿಸುತ್ತಿದೆ (Ending) ಎನ್ನುವುದು ವಿಷಾದಕರ. ಧಾರಾವಾಹಿಯ ಪ್ರಮುಖ ಪಾತ್ರಧಾರಿ ಡೇಟ್ ಕೊಡದೇ ಇರುವ ಕಾರಣದಿಂದಾಗಿಯೇ ಸೀರಿಯಲ್ ನಿಲ್ಲಿಸುತ್ತಿರುವುದಾಗಿ ತಂಡದ ಸದಸ್ಯರು ಬಾಯ್ಬಿಟ್ಟಿದ್ದಾರೆ.
ಧಾರಾವಾಹಿಯ ಪ್ರಮುಖ ಮಹಿಳಾ ಪಾತ್ರಧಾರಿ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರಂತೆ. ಅವರು ಶೂಟಿಂಗ್ ಗೆ ಡೇಟ್ ಕೊಡಲು ಸಖತ್ ಕಿರಿಕ್ ಮಾಡುತ್ತಾರಂತೆ. ಈ ಧಾರಾವಾಹಿಯಿಂದಲೇ ಫೇಮಸ್ ಆಗಿರುವ ನಟಿ, ಅದೇ ಧಾರಾವಾಹಿಯನ್ನು ಮುಗಿಸುತ್ತಿರುವುದು ನಿಜಕ್ಕೂ ನೋವಿನ ಸಂಗತಿ ಎನ್ನುತ್ತಾರೆ ಜೊತೆ ಜೊತೆಯಲಿ ಧಾರಾವಾಹಿ ತಂಡದ ಸದಸ್ಯರು. ಇದನ್ನೂ ಓದಿ:ರಾಣಾ ದಗ್ಗುಭಾಟಿ ಪತ್ನಿ ಪ್ರೆಗ್ನೆಂಟ್? ಮಿಹಿಕಾ ಬಜಾಜ್ ಪ್ರತಿಕ್ರಿಯೆ
ಈ ಹಿಂದೆ ಅನಿರುದ್ಧ(Aniruddha) ಕೂಡ ಜೊತೆ ಜೊತೆಯಲಿ ಟೀಮ್ ಜೊತೆ ಅಸಹಕಾರ ತೋರಿದ್ದರು ಎನ್ನುವ ಕಾರಣಕ್ಕಾಗಿ ಟೆಲಿವಿಷನ್ ಅಸೋಸಿಯೇಷನ್ ನ ನಿರ್ಮಾಪಕರ ವಿಭಾಗ, ಅನಿರುದ್ಧ ವಿರುದ್ದ ಕಠಿಣ ಕ್ರಮ ತಗೆದುಕೊಂಡಿತ್ತು. ಆನಂತರ ಅದು ಸುಖಾಂತ್ಯವಾಗಿತ್ತು. ಇದೀಗ ಪ್ರಧಾನ ಪಾತ್ರಧಾರಿ ಕೂಡ ಅದೇ ಹಾದಿಯನ್ನೇ ಹಿಡಿದಿದ್ದಾರೆ ಎನ್ನುವುದು ಕಿರುತೆರೆ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಪಬ್ಲಿಕ್ ಟಿವಿ ಡಿಜಟಲ್ ಜೊತೆ ಮಾತನಾಡಿದ ಜೊತೆ ಜೊತೆಯಲಿ ಟೀಮ್ ಮತ್ತೋರ್ವ ಸದಸ್ಯರೊಬ್ಬರು ಧಾರಾವಾಹಿ ನಿಲ್ಲಿಸುತ್ತಿರುವುದು ನಿಜ ಎಂದು ಒಪ್ಪಿಕೊಂಡರು. ಆದರೆ, ಉಳಿದ ವಿಚಾರದ ಬಗ್ಗೆ ಮಾತನಾಡಲು ಇಷ್ಟಪಡಲಿಲ್ಲ. ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದರು, ಹೆಚ್ಚು ಪ್ರೇಕ್ಷಕರನ್ನು ಹೊಂದಿದ್ದರೂ ಕಲಾವಿದರ ಅಸಹಕಾರ ಜೊತೆ ಜೊತೆಯಲಿ ಧಾರಾವಾಹಿಯನ್ನೇ ಬಲಿ ತಗೆದುಕೊಂಡಿತು ಎಂದು ಹೇಳುವುದನ್ನು ಅವರು ಮರೆಯಲಿಲ್ಲ.
ಅಂದಹಾಗೆ ಈ ಧಾರಾವಾಹಿಯ ಪ್ರಧಾನ ಪಾತ್ರಗಳಲ್ಲಿ ಹರೀಶ್ ರಾಜ್ (Harish Raj) ಹಾಗೂ ಮೇಘಾ ಶೆಟ್ಟಿ (Megha Shetty) ನಟಿಸುತ್ತಿದ್ದಾರೆ. ವಿಜಯಲಕ್ಷ್ಮಿ ಸಿಂಗ್ ಸೇರಿದಂತೆ ಹಲವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
ಆರೂರು ಜಗದೀಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿ ಮುಗಿಯುತ್ತಿದೆಯಾ? ಅಥವಾ ಸೀರಿಯಲ್ (Serial) ನಾಯಕಿ ಮೇಘಾ ಶೆಟ್ಟಿ (Megha Shetty) ಪಾತ್ರ ಮುಕ್ತಾಯ ಆಗುತ್ತಿದೆಯೋ ಗೊತ್ತಿಲ್ಲ. ಆದರೆ, ತಮ್ಮ ಪಾತ್ರವು ಧಾರಾವಾಹಿಯ ಕಥೆಯಲ್ಲಿ ಮುಗಿಯುತ್ತಿರುವ ಕುರಿತು ನಟಿ ಮೇಘಾ ಶೆಟ್ಟಿ ಹಂಚಿಕೊಂಡಿದ್ದಾರೆ. ಒಂದೊಂದು ರೀತಿಯಲ್ಲಿ ಕುಟುಂಬವನ್ನು ತೊರೆದಂತೆ ನೋವು ಆಗುತ್ತಿದೆ ಎಂದು ಅವರು ಹೇಳಿದ್ದಾರೆ.
ಜೊತೆ ಜೊತೆಯಲಿ ಧಾರಾವಾಹಿಯು ಅವರ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಿತ್ತು. ಸತತ ನಾಲ್ಕು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿರುವ ಧಾರಾವಾಹಿಯು ಅಪಾರ ಅಭಿಮಾನಿಗಳನ್ನು ಹೊಂದಿತ್ತು. ಅದರಲ್ಲೂ ಅನಿರುದ್ಧ ಜತ್ಕರ್ ಗೂ ಕೂಡ ದೊಡ್ಡ ಮಟ್ಟದ ಗೆಲುವನ್ನು ತಂದು ಕೊಟ್ಟಿತ್ತು. ಅಂತಹ ಧಾರಾವಾಹಿ ಈಗ ಅಂತಿಮ ದೃಶ್ಯಗಳನ್ನು ಚಿತ್ರೀಕರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಮೇಘಾ ನಿರ್ವಹಿಸುತ್ತಿದ್ದ ಪಾತ್ರವೂ ಕೊನೆಗೊಂಡಿದೆ. ಇದನ್ನೂ ಓದಿ:ಶಾಹಿದ್ ಕಪೂರ್ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್
ಜೊತೆ ಜೊತೆಯಲಿ ಧಾರಾವಾಹಿ ಮುಗಿಯುತ್ತಿದ್ದಂತೆಯೇ ಮೇಘಾ ಶೆಟ್ಟಿ ಸಿನಿಮಾಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಈಗಾಗಲೇ ಅವರು ಗೋಲ್ಡನ್ ಸ್ಟಾರ್ ಗಣೇಶ್ (Ganesh) ನಟನೆಯ ಟ್ರಿಬಲ್ ರೈಡಿಂಗ್ (Triple Riding) ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದಾರೆ. ಅಲ್ಲದೇ, ಧನ್ವೀರ್ ನಟನೆಯ ಕೈವಾ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಆಪರೇಷನ್ ಲಂಡನ್ ಕೆಫೆ ಸಿನಿಮಾದ ಶೂಟಿಂಗ್ ನಲ್ಲೂ ಬ್ಯುಸಿಯಾಗಿದ್ದಾರೆ.
ಕಿರುತೆರೆಯಿಂದ ಆಚೆ ಬರುತ್ತಿದ್ದಂತೆಯೇ ಹಲವಾರು ನಿರ್ದೇಶಕರು ಮೇಘಾರ ಜೊತೆ ಮಾತುಕತೆ ಮಾಡುತ್ತಿದ್ದಾರಂತೆ. ಹಲವು ಸ್ಕ್ರಿಪ್ಟ್ ಗಳನ್ನೂ ಅವರು ಕೇಳಿದ್ದಾರೆ. ಒಂದಷ್ಟು ಒಪ್ಪಿಕೊಂಡಿದ್ದಾರಂತೆ. ಮುಂದಿನ ದಿನಗಳಲ್ಲಿ ಈ ಸಿನಿಮಾಗಳ ಬಗ್ಗೆ ಮಾಹಿತಿ ಸಿಗಬಹುದು.
ಹಿಂದಿಯ ಪ್ರಸಿದ್ಧ ಧಾರಾವಾಹಿ (Serial) ಸೆಟ್ (Set) ನಲ್ಲಿ ಭೀಕರ ಅಗ್ನಿದುರಂತ ಸಂಭವಿಸಿದ್ದು, ಇಡೀ ಸೆಟ್ ಬೆಂಕಿ ಆಹುತಿಯಾಗಿದೆ. ಹಿಂದಿಯ ಗಮ್ ಹೈ ಕಿಸೀಕೆ ಪ್ಯಾರ್ ಮೈ ಧಾರಾವಾಹಿಯ ಚಿತ್ರೀಕರಣ ಮುಂಬೈನ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿತ್ತು. ಈ ಧಾರಾವಾಹಿಗಾಗಿ ದೊಡ್ಡಮಟ್ಟದಲ್ಲಿ ಸೆಟ್ ಹಾಕಲಾಗಿತ್ತು. ಮಾರ್ಚ್ 10ರಂದು ಸೆಟ್ ನಲ್ಲಿದ್ದ ಸಿಲಿಂಡರ್ (Cylinder Blast) ಸ್ಫೋಟವಾಗಿದೆ. ಸುಮಾರು ನಾಲ್ಕು ಗಂಟೆ ಹೊತ್ತಿಗೆ ನಡೆದ ಘಟನೆಯಲ್ಲಿ ಪೂರ್ತಿ ಸೆಟ್ ಬೆಂಕಿಯಲ್ಲಿ ಭಸ್ಮವಾಗಿದೆ.
ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಕಿ ನಂದಿಸುವಂತಹ ಯಾವುದೇ ಉಪಕರಣಗಳು ಸೆಟ್ ನಲ್ಲಿ ಇಲ್ಲದ ಕಾರಣದಿಂದಾಗಿ ವೇಗವಾಗಿ ಬೆಂಕಿ ಆವರಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಫಿಲ್ಮ್ ಸಿಟಿ ನಿರ್ದೇಶಕರ ವಿರುದ್ಧವೂ ಪ್ರಕರಣ ದಾಖಲಾಗಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪೇಂದ್ರ
ಈ ಘಟನೆ ನಡೆದ ಸಂದರ್ಭದಲ್ಲಿ ಮಕ್ಕಳ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಬೆಂಕಿ ಬಿದ್ದ ವಿಷಯ ತಿಳಿಯುತ್ತಿದ್ದಂತೆಯೇ ಕೂಡಲೇ ಮಕ್ಕಳನ್ನು ಅಲಿಂದ ಬಚಾವ್ ಮಾಡಲಾಗಿದೆ. ಪಕ್ಕದಲ್ಲೇ ಮತ್ತೊಂದು ಧಾರಾವಾಹಿಯ ಸೆಟ್ ಕೂಡ ಹಾಕಲಾಗಿತ್ತು. ಅದಕ್ಕೂ ಹಾನಿಯಾಗಿದೆ ಎಂದಿದೆ ಧಾರಾವಾಹಿ ತಂಡ.
ಕನ್ನಡದ ಜನಪ್ರಿಯ ವಾಹಿನಿ ಸ್ಟಾರ್ ಸುವರ್ಣ ಪ್ರೇಕ್ಷಕರಿಗಾಗಿ ಹೊತ್ತು ತರುತ್ತಿದೆ. ಸಾಮಾನ್ಯ ಗೃಹಿಣಿಯ ಅಸಾಮಾನ್ಯ ಕಥೆಯನ್ನು ಹೇಳಲು ಬರುತ್ತಿದ್ದಾರೆ ಅನುಪಮ (Anupama). ವಿಭಿನ್ನ ಕಥಾ ಹಂದರವುಳ್ಳ ನಮ್ಮಲಚ್ಚಿ, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ, ಜೇನುಗೂಡು, ಕಥೆಯೊಂದು ಶುರುವಾಗಿದೆ ಹೀಗೆ ಅನೇಕ ಧಾರಾವಾಹಿಗಳನ್ನು (Serial) ಕನ್ನಡಿಗರಿಗೆ ನೀಡಿರುವ ಸ್ಟಾರ್ ಸುವರ್ಣ ಇದೀಗ ಇಡೀ ದೇಶದ ಹೃದಯ ಗೆದ್ದ ಗೃಹಿಣಿಯ ಕಥೆಯನ್ನು ಹೇಳಲು ಮುಂದಾಗಿದೆ.
ಮಧ್ಯ ವಯಸ್ಕ ಮಹಿಳೆ ಅನುಪಮ. ಸದಾ ಮನೆಯವರ ಬಗ್ಗೆ ಕಾಳಜಿ, ಕುಟುಂಬದವರ ಇಷ್ಟ-ಕಷ್ಟ, ಬೇಕು-ಬೇಡಗಳನ್ನು ಅರ್ಥ ಮಾಡಿಕೊಂಡು ಮನೆಯ ಗೃಹಲಕ್ಷ್ಮಿಯಂತಿರುವ (Grilahakshmi) ಈಕೆಗೆ ಮದುವೆಯಾಗಿ ಎರಡು ದಶಕಗಳ ಮೇಲಾಗಿದೆ. ತಾಯಿ, ಹೆಂಡತಿ. ಮಗಳು, ಸೊಸೆ ಎಲ್ಲಾ ರೀತಿಯ ಪಾತ್ರಗಳನ್ನು ನಿಭಾಯಿಸುವ ಈಕೆಗೆ 3 ಮಕ್ಕಳು, ಗಂಡನಿಗೆ ಈಕೆ ಓದಿಲ್ಲ, ಹಳೆಯ ಕಾಲದವಳು ಎಂಬ ತಾತ್ಸಾರ. ಮನೆಯಲ್ಲಿ ಏನೇ ತಪ್ಪುಗಳಾದರು ಅತ್ತೆ ದೂಷಿಸುವುದು ಈಕೆಯನ್ನೇ. ಶರವೇಗದಲ್ಲಿ ಬದಲಾಗುತ್ತಿರುವ ಕಾಲ, ಆಧುನಿಕ ಯುಗಕ್ಕೆ ಹೊಂದಿಕೊಂಡಿರುವ ಕುಟುಂಬದಲ್ಲಿ ಅನುಪಮ ಯಾವ ರೀತಿ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು, ಸಂತೋಷ ಕಂಡುಕೊಳ್ಳುತ್ತಾಳೆ ಎಂಬುದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ. ಇದನ್ನೂ ಓದಿ: ಹೃತಿಕ್ ರೋಷನ್- ಸಬಾ ಆಜಾದ್ ಮದುವೆ ನಿಜಾನಾ? ರಾಕೇಶ್ ರೋಷನ್ ಸ್ಪಷ್ಟನೆ
ದೇಶದ ನಂ.1 ಧಾರಾವಾಹಿ ಎಂಬ ಪಟ್ಟವನ್ನು ಅಲಂಕರಿಸಿರುವ “ಅನುಪಮ” ಇದೀಗ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಕನ್ನಡದಲ್ಲಿ ಬರ್ತಿರೋದಕ್ಕೆ ಪ್ರೇಕ್ಷಕರು ಖುಷಿ ಪಡುತ್ತಿದ್ದಾರೆ. ಹೊಚ್ಚ ಹೊಸ ಧಾರಾವಾಹಿ “ಅನುಪಮ” ನಿಮ್ಮ ಮಧ್ಯಾಹ್ನದ ಮನರಂಜನೆಯಲ್ಲಿ ಇದೇ ಮಾರ್ಚ್ 6 ರಿಂದ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗಲಿದೆ. ಬದಲಾದ ಸಮಯದಲ್ಲಿ “ಅನುರಾಗ ಅರಳಿತು” ಮಾರ್ಚ್ 6 ರಿಂದ ಮಧ್ಯಾಹ್ನ 2 ಗಂಟೆಗೆ ಪ್ರಸಾರವಾಗಲಿದೆ.
ಕನ್ನಡ ಕಿರುತೆರೆಯ ಖ್ಯಾತ ನಟ, ನಿರ್ದೇಶಕ ರವಿಕಿರಣ್ (Ravikiran) ಅವರ ಸಹೋದರ ಭಾಸ್ಕರ್ ( Bhaskar) ರವಿವಾರ ತಡರಾತ್ರಿ ನಿಧನ (Passed away) ಹೊಂದಿದ್ದಾರೆ. ಬದುಕು, ಸುಕನ್ಯಾ ಸೇರಿದಂತೆ ಹಲವು ಧಾರಾವಾಹಿಗಳನ್ನು ಭಾಸ್ಕರ್ ನಿರ್ಮಿಸಿದ್ದರು. ರವಿಕಿರಣ್ ಬ್ಯಾನರ್ ನಲ್ಲಿ ಬರುತ್ತಿದ್ದ ಬಹುತೇಕ ಧಾರಾವಾಹಿಗಳಿಗೆ ಭಾಸ್ಕರ್ ನಿರ್ಮಾಪಕರಾಗಿರುತ್ತಿದ್ದರು. ಅಲ್ಲದೇ, ರವಿಕಿರಣ್ ಅವರಿಗೆ ಬೆನ್ನೆಲುಬಾಗಿ ನಿಂತವರು.
ಭಾಸ್ಕರ್ ಕೇವಲ ನಿರ್ಮಾಪಕರು ಮಾತ್ರವಲ್ಲ, ಉದ್ಯಮಿಯೂ ಕೂಡ. ಹಲವಾರು ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಜೊತೆಗೆ ಕರ್ನಾಟಕ ಟೆಲಿವಿಷನ್ ಕ್ಲಬ್ ನ ನಿರ್ದೇಶಕರಾಗಿಯೂ ಅವರು ಟಿವಿ ಉದ್ಯಮದಲ್ಲಿ ಕೆಲಸ ಮಾಡಿದ್ದಾರೆ. ಇವರ ನಿರ್ಮಾಣದಲ್ಲಿ ಮೂಡಿ ಬಂದ ಬದುಕು ಸಾವಿರಕ್ಕೂ ಹೆಚ್ಚು ಕಂತುಗಳಲ್ಲಿ ಪ್ರಸಾರವಾಗಿದೆ. ಸುಕನ್ಯಾ ಕೂಡ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಇದನ್ನೂ ಓದಿ: ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ `ವಜ್ರಕಾಯ’ ನಟಿ ಶುಭ್ರ ಅಯ್ಯಪ್ಪ
ಭಾಸ್ಕರ್ ಪುತ್ರ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದಾರೆ. ತೆಲುಗು ಮತ್ತು ಕನ್ನಡದ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಭಾಸ್ಕರ್ ನಿಧನಕ್ಕೆ ಕಿರುತೆರೆಯ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಟೆಲಿವಿಷನ್ ಉದ್ಯಮದ ನಾನಾ ಸಂಘಟನೆಗಳು ಸಂತಾಪ ವ್ಯಕ್ತಪಡಿಸಿವೆ.
Live Tv
[brid partner=56869869 player=32851 video=960834 autoplay=true]
ಕಿರುತೆರೆ ನಿರ್ಮಾಪಕರ ಸಂಘವು ನಟ ಅನಿರುದ್ಧ ಮೇಲೆ ತಗೆದುಕೊಂಡು ಕ್ರಮದ ಕುರಿತಾಗಿ ಇಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಅನಿರುದ್ಧ, ನಿರ್ದೇಶಕ ಎಸ್.ನಾರಾಯಣ್ ಹಾಗೂ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಹಾಗೂ ಪದಾಧಿಕಾರಿಗಳು ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಈ ಸಭೆಯಲ್ಲಿ ತಾವು ಭಾಗಿ ಆಗುತ್ತಿಲ್ಲವೆಂದು ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿ ಡಿಜಿಟಲ್ ನೊಂದಿಗೆ ಮಾತನಾಡಿದ ಭಾಸ್ಕರ್, ‘ಇದು ಕಿರುತೆರೆಗೆ ಸಂಬಂಧಿಸಿದ ವಿಚಾರ. ವಾಣಿಜ್ಯ ಮಂಡಳಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಈ ಸಮಸ್ಯೆ ಬಗೆಹರಿಯಬೇಕಾಗಿದ್ದು ನಮ್ಮಲ್ಲೇ. ಹಾಗಾಗಿ ವಾಣಿಜ್ಯ ಮಂಡಳಿಗೆ ಹೋಗದಿರಲು ನಿರ್ಧರಿಸಿದ್ದೇವೆ. ಚಿತ್ರೋದ್ಯಮದ ಮಾತೃಸಂಸ್ಥೆಯ ಅಧ್ಯಕ್ಷರಾದ ಭಾ.ಮಾ ಹರೀಶ್ ಅವರು ನಮಗೆ ಕರೆ ಮಾಡಿದ್ದರು. ಜೊತೆಗೆ ಅನಿರುದ್ಧ ಬರುತ್ತಾರೆ ಅಂದರು. ಅನಿರುದ್ಧ ಬರುತ್ತಾರೆ ಅಂದರೆ, ನಾವು ಬರುವುದಿಲ್ಲ ಎಂದು ಹೇಳಿದ್ದೇವೆ’ ಎಂದರು.
ಇಂದು ಸಂಜೆ ನಿರ್ಮಾಪಕರ ಸಂಘದಲ್ಲೇ ಮತ್ತೊಂದು ಸಭೆ ನಡೆಯಲಿದ್ದು, ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರು, ಹಾಲಿ ಅಧ್ಯಕ್ಷರು ಹಾಗೂ ಹಿರಿಯ ನಿರ್ದೇಶಕರು ಈ ವಿಷಯದ ಕುರಿತು ಚರ್ಚಿಸಿ ಒಂದು ತೀರ್ಮಾನಕ್ಕೆ ಬರುವುದಾಗಿಯೂ ಭಾಸ್ಕರ್ ತಿಳಿಸಿದ್ದಾರೆ. ಸಭೆಯಲ್ಲಿ ಬಿ.ಸುರೇಶ್, ಶೇಷಾದ್ರಿ, ಎಸ್.ವಿ. ಶಿವಕುಮಾರ್, ರವಿಕಿರಣ್, ರವಿ ಗರಣಿ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ.
ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ನ ಒಂದು ಅಂಗ ಸಂಸ್ಥೆಯಾಗಿರುವ ಕಿರುತೆರೆ ನಿರ್ಮಾಪಕರ ಸಂಘವು ಯಾವುದೇ ಕಾರಣಕ್ಕೂ ಅನಿರುದ್ಧ ಅವರ ಮಾತನ್ನು ಒಪ್ಪುತ್ತಿಲ್ಲ. ಎರಡು ವರ್ಷಗಳ ಕಾಲ ಯಾವುದೇ ನಿರ್ಮಾಪಕರು ಅನಿರುದ್ಧ ಅವರಿಗೆ ಅವಕಾಶ ಕೊಡುವುದು ಬೇಡ ಎಂದು ಹೊರಡಿಸಿರುವ ಆದೇಶವನ್ನು ವಾಪಸ್ಸು ಪಡೆಯುತ್ತಿಲ್ಲ. ಸಂಧಾನಕ್ಕೂ ಸಿದ್ಧರಾಗಿಲ್ಲ. ಹಾಗಾಗಿ ಅನಿರುದ್ಧ ವಾಣಿಜ್ಯ ಮಂಡಳಿಯ ಕದ ತಟ್ಟಿದ್ದಾರೆ.
Live Tv
[brid partner=56869869 player=32851 video=960834 autoplay=true]