Tag: ಧಾರಾವಾಹಿ ನಟಿ

  • ಬಾತ್‍ರೂಮಿನಲ್ಲಿಯೇ ಧಾರಾವಾಹಿ ನಟಿ ನೇಣಿಗೆ ಶರಣು!

    ಬಾತ್‍ರೂಮಿನಲ್ಲಿಯೇ ಧಾರಾವಾಹಿ ನಟಿ ನೇಣಿಗೆ ಶರಣು!

    ಹೈದರಾಬಾದ್: ಇತ್ತೀಚೆಗೆ ಸೀರಿಯಲ್ ನಟ-ನಟಿಯರು ಆತ್ಮಹತ್ಯೆಯ ಮೊರೆ ಹೋಗುತ್ತಿರುವುದು ಹೆಚ್ಚಾಗುತ್ತಿದೆ. ಇದೇ ಸಾಲಿಗೆ ಇದೀಗ ತೆಲುಗಿನ ಧಾರಾವಾಹಿ ನಟಿ ಕೂಡ ಸೇರಿದ್ದಾರೆ.

    ಹೌದು. ತೆಲುಗಿನ ಸೀರಿಯಲ್ ಗಳಲ್ಲಿ ಅಭಿನಯಿಸುತ್ತಿದ್ದ ಶ್ರಾವಣಿ ಅವರು ಹೈದಾರಾಬಾದ್ ನ ಮಧುರಾನಗರದಲ್ಲಿರುವ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಘಟನೆ ಮಂಗಳವಾರ ರಾತ್ರಿ ನಡೆದಿದೆ.

    ನಿನ್ನೆ ರಾತ್ರಿ ಶ್ರಾವಣಿ ಬಾತ್ ರೂಮಿಗೆ ತೆರಳಿದ್ದಾಳೆ. ಹೀಗೆ ಹೋದವಳು ಕೆಲ ಹೊತ್ತಾದರೂ ವಾಪಸ್ ಬರದಿದ್ದರಿಂದ ಅನುಮಾನಗೊಂಡ ಪೋಷಕರು ಬಾತ್ ರೂಮ್ ಬಾಗಿಲು ಒಡೆದಿದ್ದಾರೆ. ಈ ವೇಳೆ ಶ್ರಾವಣಿ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಕುಟುಂಬದವರು ನಟಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ನಟಿಯ ಪೋಷಕರು ತಿಳಿಸಿದ್ದಾರೆ.

    ಕಳೆದ 8 ವರ್ಷಗಳಿಂದ ಶ್ರಾವಣಿ ತೆಲುಗಿನ ಧಾರಾವಾಹಿಗಳಲ್ಲಿ ನಟನೆ ಮಾಡುತ್ತಿದ್ದರು. ಪ್ರಸ್ತುತ ಈಕೆ ಮಾನಸು ಮಮತಾ, ಮೌನ ರಾಗಂ ಧಾರಾವಾಹಿಗಳಲ್ಲಿ ಹಾಗೂ ಇತರೆ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರು.

    ಈ ಮಧ್ಯೆ ಕೆಲ ವರ್ಷಗಳ ಹಿಂದೆ ಕಾಕಿನಾಡದ ಗೊಲ್ಲಾಪ್ರೊಲುವಿನ ದೇವರಾಜು ರೆಡ್ಡಿ ಎಂಬಾತನ ಪರಿಚಯವಾಗಿದೆ. ತನಗೆ ಪೋಷಕರು ಇಲ್ಲ ಎಂದು ಹೇಳಿಕೊಂಡಿರುವ ಈತ ಕೆಲ ದಿನಗಳ ಬಳಿಕ ಶ್ರಾವಣಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇದರಿಂದ ನೊಂದ ನಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

    ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರಾವಣಿ ಪೋಷಕರು ಎಸ್‍ಆರ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

  • ಒಂದಲ್ಲ, ಎರಡಲ್ಲ ಬರೋಬ್ಬರಿಗೆ 12 ಸೀರಿಯಲ್ ನಟಿಯರಿಗೆ ಡ್ರಗ್ಸ್ ಲಿಂಕ್

    ಒಂದಲ್ಲ, ಎರಡಲ್ಲ ಬರೋಬ್ಬರಿಗೆ 12 ಸೀರಿಯಲ್ ನಟಿಯರಿಗೆ ಡ್ರಗ್ಸ್ ಲಿಂಕ್

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದು, ದಂಧೆಯಲ್ಲಿ ಕೇವಲ ಸಿನಿಮಾ ತಾರೆಯರು ಮಾತ್ರವಲ್ಲದೇ ಸೀರಿಯಲ್ ನಟಿಯರಿಗೂ ಡ್ರಗ್ಸ್ ಲಿಂಕ್ ಇರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ತನಿಖೆ ವೇಳೆ ಸಾಕಷ್ಟು ಮಾಹಿತಿ ಲಭಿಸಿದೆ. ಇದರ ಅನ್ವಯ ಕೆಲ ಸ್ಯಾಂಡಲ್‍ವುಡ್ ನಟಿಯರಿಗೂ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಇತ್ತ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ಡ್ರಗ್ ಪೆಡ್ಲರ್ ಕಾರ್ತಿಕ್ ರಾಜ್ ವಿಚಾರಣೆ ವೇಳೆ ಮಹತ್ವದ ಮಾಹಿತಿ ಹೊರ ಬಂದಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿರುವ ರಾಹುಲ್ ಸಂಜನಾಗೆ ಪರಿಚಯವಾಗಿದ್ದು ಹೇಗೆ?

    ಡ್ರಗ್ಸ್ ದಂಧೆ ನಡೆಸುತ್ತಿದ್ದ ಆರೋಪಿಗಳೊಂದಿಗೆ ಸುಮಾರು 12 ಮಂದಿ ಧಾರಾವಾಹಿ ನಟಿಯರು ನಂಟು ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ 12 ಮಂದಿ ನಟಿಯರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡುವ ಸಾಧ್ಯತೆ ಇದೆ. ಇದನ್ನೂ ಓದಿ: ಡ್ರಗ್ಸ್ ನಶೆ- ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್ ಸಿಸಿಬಿ ವಶಕ್ಕೆ

    ಕಳೆದ 12 ವರ್ಷಗಳಿಂದ ಕಾರ್ತಿಕ್ ರಾಜ್ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದ, ಆದರೆ ಮೂರು ವರ್ಷಗಳಿಂದ ಈತ ದಂಧೆಯಲ್ಲಿ ಎಕ್ಸ್ಪರ್ಟ್ ಆಗಿದ್ದ ಎಂಬ ಬಗ್ಗೆ ಸಿಸಿಬಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ನಟಿ ರಾಗಿಣಿ ಅವರಿಗೆ ನೋಟಿಸ್ ನೀಡಲಾಗಿದೆ. ರಾಗಿಣಿ ಅವರ ವಿಚಾರಣೆಯ ಬಳಿಕ ಬೇರೆ ಬೇರೆ ನಟ-ನಟಿಯರಿಗೆ ನೋಟಿಸ್ ನೀಡಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಒಮ್ಮೆಯೇ ಎಲ್ಲರಿಗೂ ನೋಟಿಸ್ ಜಾರಿ ಮಾಡಿದರೆ ತನಿಖೆಗೆ ಬೇಕಾದ ಮಾಹಿತಿ ಸಿಗುವುದು ಕಷ್ಟ. ಒಬ್ಬೊಬ್ಬರ ವಿಚಾರಣೆಯ ವೇಳೆ ಸಿಗುವ ಮಾಹಿತಿಯನ್ನು ಆಧಾರಿಸಿ ತನಿಖೆ ನಡೆಸಿದರೆ ಮತ್ತಷ್ಟು ವಿಚಾರಗಳು ಬಹಿರಂಗವಾಗುವ ಕಾರಣ ಹಂತ ಹಂತವಾಗಿ ನೋಟಿಸ್ ನೀಡಲು ಮುಂದಾಗಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ವಿಚಾರಣೆಗೆ ಹಾಜರಾಗದಿರಲು ಪೊಲೀಸರಿಗೆ ರಾಗಿಣಿ ನೀಡಿದ ಕಾರಣ

    ಪೊಲೀಸ್ ಮೂಲಗಳ ಮಾಹಿತಿಯ ಅನ್ವಯ ಇಂದು ಖ್ಯಾತ ಧಾರಾವಾಹಿ ನಟಿಯೊಬ್ಬರಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ಕಾರ್ತಿಕ್ ರಾಜ್ ಹೇಳಿಕೆ ಆಧರಿಸಿ ನೋಟಿಸ್ ನೀಡಲಾಗುತ್ತಿದ್ದು, ಕಾರ್ತಿಕ್ ರಾಜ್ ಬಳಿ ಇದ್ದ ಮೊಬೈಲ್ ಫೋನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನೊಂದಿಗೆ ಸಂಪರ್ಕ ಹೊಂದಿದ್ದ ನಟ-ನಟಿಯರು, ಮೊಬೈಲ್ ಚಾಟ್ ಸೇರಿದಂತೆ ಫೋಟೋ ಹಾಗೂ ವಿಡಿಯೋಗಳ ಪರಿಶೀಲನೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

  • ಪ್ರೀತಿಸಿ ಮದ್ವೆಯಾಗಿದ್ದ ಕಿರುತೆರೆ ನಟಿಯ ಪತಿ ಆತ್ಮಹತ್ಯೆ

    ಪ್ರೀತಿಸಿ ಮದ್ವೆಯಾಗಿದ್ದ ಕಿರುತೆರೆ ನಟಿಯ ಪತಿ ಆತ್ಮಹತ್ಯೆ

    ಚೆನ್ನೈ: ಪ್ರೀತಿಸಿ ಮದುವೆಯಾಗಿದ್ದ ಧಾರಾವಾಹಿ ಖ್ಯಾತಿಯ ನಟಿಯೊಬ್ಬರ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೆರಂಬೂರ್ ನಲ್ಲಿ ನಡೆದಿದೆ.

    ನಟಿ ರೇಖಾ ಪತಿ ಗೋಪಿನಾಥ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಟಿ ರೇಖಾ ತಮಿಳಿನ ಧಾರಾವಾಹಿಯಲ್ಲಿ ತುಂಬಾ ಜನಪ್ರಿಯತೆ ಪಡೆದುಕೊಂಡಿದ್ದಾರೆ. ರೇಖಾ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ಕೆಲವು ಟಿವಿ ಕಾರ್ಯಕ್ರಮಗಳನ್ನು ಕೂಡ ನಡೆಸಿಕೊಟ್ಟಿದ್ದಾರೆ.

    ಕೆಲವು ವರ್ಷಗಳ ಹಿಂದೆ ರೇಖಾ ಮತ್ತು ಗೋಪಿನಾಥ್ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ವಿವಾಹದ ನಂತರ ರೇಖಾಗೆ ತನ್ನ ಪತಿ ಗೋಪಿನಾಥ್ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ತಿಳಿದಿದೆ. ಇದರಿಂದ ಪ್ರತಿದಿನ ಮನೆಯಲ್ಲಿ ಪತಿ-ಪತ್ನಿ ಇಬ್ಬರು ಜಗಳ ಮಾಡುತ್ತಿದ್ದರು.

    ಇತ್ತೀಚೆಗೆ ದಂಪತಿಯ ಮಧ್ಯೆ ಇದೇ ವಿಚಾರಕ್ಕೆ ವಾಗ್ವಾದ ನಡೆದಿದೆ. ಇದರಿಂದ ಬೇಸರಗೊಂಡ ಗೋಪಿನಾಥ್ ಮನೆಯಿಂದ ಹೊರ ಹೋಗಿದ್ದರು. ಆದರೆ ರಜೆ ಇದ್ದರೂ ಕೂಡ ತನ್ನ ಕಚೇರಿಯನ್ನು ತೆರೆದು, ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಮರುದಿನ ನೌಕರರು ಕಚೇರಿಗೆ ಬಂದಾಗ ಗೋಪಿನಾಥ್ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.

    ತಕ್ಷಣ ಅವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಆರ್ಥಿಕ ಸಮಸ್ಯೆಯ ಜೊತೆಗೆ ಪತ್ನಿ ರೇಖಾ ಜೊತೆಗಿನ ಮನಸ್ತಾಪದಿಂದ ಗೋಪಿನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

  • ಭೀಕರ ರಸ್ತೆ ಅಪಘಾತದಲ್ಲಿ ಮಹಾನದಿ ಧಾರಾವಾಹಿಯ ನಟಿ ರಚನಾ ಸಾವು

    ಭೀಕರ ರಸ್ತೆ ಅಪಘಾತದಲ್ಲಿ ಮಹಾನದಿ ಧಾರಾವಾಹಿಯ ನಟಿ ರಚನಾ ಸಾವು

    ಬೆಂಗಳೂರು: ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಧಾರವಾಹಿಯ ನಟ, ನಟಿ ಸಾವನ್ನಪ್ಪಿರುವ ಘಟನೆ ನೆಲಮಂಗಲ ಸಮೀಪದ ಸೋಲೂರು ಬಳಿ ನಡೆದಿದೆ.

    ಕಿರುತೆರೆ ನಟಿ ರಚನಾ(23) ಹಾಗೂ ಜೀವನ್(25) ಮೃತ ದುರ್ದೈವಿಗಳು. ತಡರಾತ್ರಿ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಟಾಟಾ ಸಫಾರಿ ಕಾರು ರಸ್ತೆಬದಿ ನಿಂತಿದ್ದ ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ. ನಟ ಕಾರ್ತಿಕ್ ಹುಟ್ಟು ಹಬ್ಬದ ನಿಮಿತ್ತ ಕುಕ್ಕೆ ಸುಬ್ರಮಣ್ಯ ದೇವರ ದರ್ಶನಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.

    ಹೆದ್ದಾರಿಯಲ್ಲಿ ಬಸ್ ಬಂತೆಂದು ಎಡಭಾಗಕ್ಕೆ ಕಾರನ್ನು ಚಲಾಯಿಸಿ ನಿಂತಿದ್ದ ಕ್ಯಾಂಟರ್ ಗೆ ಸಫಾರಿ ಕಾರು ಡಿಕ್ಕಿ ಹೊಡೆದಿದ್ದಾಗಿ ಗಾಯಾಳುಗಳು ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ.

    ಘಟನೆಯಲ್ಲಿ ಬಿಎಸ್ ರಂಜಿತ್, ಉತ್ತಮ್, ಹೊನ್ನೇಶ್, ಕಾರ್ತಿಕ್, ಮತಗತು ಎರಿಕ್ ಸಹ ನಟರಿಗೆ ಗಾಯಗಳಾಗಿದ್ದು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ದೇಹಗಳನ್ನ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಮೃತ ಕಿರುತೆರೆ ನಟಿ ರಚನಾ ತ್ರಿವೇಣಿ ಸಂಗಮ, ಮಧುಬಾಲ, ಮಹಾನದಿ ಧಾರವಾಹಿಯಲ್ಲಿ ನಟಿಸಿದ್ದು, ಮಹಾನದಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.

    ಘಟನೆ ಸಂಬಂಧ ಮಾಗಡಿಯ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.