Tag: ಧಾರಾವಾಹಿ

  • ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ: ಹೊಸ ಅಧ್ಯಾಯ ಶುರು

    ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ: ಹೊಸ ಅಧ್ಯಾಯ ಶುರು

    ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ (Udho Udho Shri Renuka Yellamma) ಹೊಸ ಅಧ್ಯಾಯ ಶುರುಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವೀಕ್ಷಕರಿಗೆ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಕಥೆಗಳನ್ನು ನೀಡುತ್ತಾ ಬಂದಿದೆ. ಪ್ರಸ್ತುತ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ” ಧಾರಾವಾಹಿ ಪ್ರೇಕ್ಷಕರ ಮನಗೆದ್ದು ಯಶಸ್ಸಿನಿಂದ ಸಾಗುತ್ತಿದೆ. ಇನ್ಮುಂದೆ ವಿಷ್ಣುವಿನ ಮಹಾವತಾರ ಪರಶುರಾಮನ ಕಥೆಯನ್ನು ಹೇಳಲು ಸಜ್ಜಾಗಿದೆ ಸ್ಟಾರ್ ಸುವರ್ಣ.

    ಅಪ್ಪಟ ಕನ್ನಡ ಮಣ್ಣಿನ ಪೌರಾಣಿಕ ಕಥಾವಸ್ತುವನ್ನಿಟ್ಟುಕೊಂಡು ಶುರುವಾದ ಈ ಧಾರಾವಾಹಿ (Kannada Serial) ಆರಂಭದಿಂದಲೂ ಕಿರುತೆರೆಯಲ್ಲಿ ಹೊಸ ಸಂಚಲನ ಮೂಡಿಸುತ್ತಿದೆ. ರೇಣುಕೆ ಹಾಗೂ ಯಲ್ಲಮ್ಮನ ಪಾತ್ರಕ್ಕೆ ಜೀವ ತುಂಬಿದವರು ಅದ್ಭುತವಾಗಿ ನಟಿಸಿ ಅಭಿಮಾನಿಗಳ ಮನಗೆದ್ದು ಮನೆಮಾತಾಗಿದ್ದರು. ಆದ್ರೆ ಇನ್ಮುಂದೆ ಈ ಕಥೆಯು “ಪರಶುರಾಮನ ಅಧ್ಯಾಯ”ವನ್ನು ಹೇಳಲು ತಯಾರಾಗಿದೆ. ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ವಿಷ್ಣುವಿನ ಮಹಾವತಾರ ಪರಶುರಾಮನ ಕಥೆಯನ್ನು ಹೇಳುತ್ತಿರುವ ಹೆಗ್ಗಳಿಕೆ ಸ್ಟಾರ್ ಸುವರ್ಣ ವಾಹಿನಿಗೆ ಸಲ್ಲುತ್ತದೆ.

    ಬಾಲ್ಯದಿಂದಲೂ ಕಷ್ಟಗಳನ್ನೇ ಎದುರಿಸುತ್ತಾ ಬಂದಿರುವ ರೇಣುಕಾ-ಯಲ್ಲಮ್ಮರ ಬಾಳಿನಲ್ಲಿ 10 ವರ್ಷಗಳ ಬಳಿಕ ಏನೆಲ್ಲಾ ಆಗಲಿದೆ? ಪರಶುರಾಮನ ಜನನ, ಬಾಲ್ಯ, ವಿದ್ಯಾಭ್ಯಾಸ ಹೇಗೆಲ್ಲ ಸಾಗಲಿದೆ? ಕಾರಾಗೃಹದಿಂದ ಹೊರ ಬಂದಿರೋ ಯಲ್ಲಮ್ಮನ ಜೀವನದ ದಿಕ್ಕು ಯಾವೆಲ್ಲ ಸವಾಲಿನಿಂದ ಕೂಡಿರಲಿದೆ? ಮೊದಲಿನಂತೆ ರೇಣುಕಾ ಯಲ್ಲಮ್ಮರ ಸ್ನೇಹ ಮುಂದುವರಿಯಲಿದೆಯಾ? ಎಂಬುದೇ ಈ ಧಾರಾವಾಹಿಯ ಮುಂದಿನ ರೋಚಕ ಕಥಾಹಂದರ.

    ಈಗಾಗಲೇ ಹೊಸ ಅಧ್ಯಾಯದ ಚಿತ್ರೀಕರಣ ಶುರುವಾಗಿದ್ದು, ರೇಣುಕೆಯಾಗಿ ವರ್ಷ, ಯಲ್ಲಮ್ಮನ ಪಾತ್ರದಲ್ಲಿ ಮಾನಸ ಅಭಿನಯಿಸುತ್ತಿದ್ದಾರೆ. ಅಮೋಘ ವಿನ್ಯಾಸದ ಸೆಟ್ ಮತ್ತು ಗ್ರಾಫಿಕ್ಸ್‌ನಿಂದ ಪ್ರಸಾರವಾಗುತ್ತಿರುವ ಧಾರಾವಾಹಿಯ ಪ್ರೋಮೋಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ವಿಷ್ಣುವಿನ ಮಹಾವತಾರ ಪರಶುರಾಮನ ಅಧ್ಯಾಯದ ಜೊತೆ, ಹೊಸ ಉತ್ಸಾಹದೊಂದಿಗೆ ಬರ್ತಿದ್ದಾರೆ ರೇಣುಕಾ-ಯಲ್ಲಮ್ಮ.”ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ – ಪರಶುರಾಮ ಅಧ್ಯಾಯ” ಇದೇ ಸೋಮವಾರದಿಂದ ರಾತ್ರಿ 9 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  • ಯಜಮಾನ-ರಾಮಾಚಾರಿ; ವಾರಪೂರ್ತಿ ಒಂದು ಗಂಟೆಯ ಮಹಾಸಂಚಿಕೆ

    ಯಜಮಾನ-ರಾಮಾಚಾರಿ; ವಾರಪೂರ್ತಿ ಒಂದು ಗಂಟೆಯ ಮಹಾಸಂಚಿಕೆ

    ವ್ ಮ್ಯಾರೇಜೂ ಅಲ್ಲದ, ಅರೇಂಜ್ ಮ್ಯಾರೇಜೂ ಅಲ್ಲದ ಪಕ್ಕಾ ಅಗ್ರಿಮೆಂಟ್ ಮ್ಯಾರೇಜ್ ಕತೆಯಲ್ಲಿ ಈಗ ನಾಯಕ ನಿಜವಾಗಲೂ ಯಾರಿಗೆ ‘ಯಜಮಾನ’ ಆಗ್ತಾನೆ ಅನ್ನೋ ಪ್ರಶ್ನೆಯ ಮೇಲೆ ಧಾರಾವಾಹಿ ನಡೀತಿದೆ. ಒಂದುಕಡೆ ರಾಘುವನ್ನ ಅಗ್ರಿಮೆಂಟ್ ಮ್ಯಾರೇಜ್ ಆಗಿರೋ ಆಗರ್ಭ ಶ್ರೀಮಂತೆ ಝಾನ್ಸಿ ತನ್ನ ಪ್ರೀತಿ ಪಡೆಯೋದಕ್ಕೆ, ಎಂತಹ ಕಷ್ಟವನ್ನಾದರೂ ಎದುರಿಸ್ತಾಳೆ. ಇನ್ನೊಂದು ಕಡೆ ಅರೇಂಜ್ ಮ್ಯಾರೇಜ್ ಆಗ್ಬೇಕಾಗಿರೋ ಅನಿತಾಗೆ ಹಸೆಮಣೆ ಮೇಲೆ ಮದುವೆ ನಿಂತಿರೋದು ಆಘಾತವಾಗಿ, ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಇಬ್ಬರಿಗೂ ತಮ್ಮ ‘ಯಜಮಾನ’ ರಾಘುವೇ ಆಗಬೇಕೆಂಬ ಹಠ. ಈ ಸಮಸ್ಯೆಗೆ ಪರಿಹಾರವಾಗಿ ಮನೆಯವರೆಲ್ಲ ಸೇರಿ ಝಾನ್ಸಿ-ಅನಿತಾ ನಡುವೆ ‘ನಾನಾ- ನೀನಾ’ ಸ್ಪರ್ಧೆ ಏರ್ಪಡಿಸಿದ್ದಾರೆ.

    ಝಾನ್ಸಿ ಸರಿಯಾದ ರೀತಿಯಲ್ಲಿ ಆಡಿ ಜಯಿಸಿದರೂ, ಎಲ್ಲರೂ ಸೇರಿ ಪೂರ್ವನಿರ್ಧಾರದಂತೆ, ಸೋತರೂ ಅನಿತಾಳದ್ದೇ ಗೆಲುವು ಎಂದು ತೀರ್ಮಾನಿಸುವುದು ಇಲ್ಲಿಯವರೆಗಿನ ಕತೆ. ದಿನದಿಂದ ದಿನಕ್ಕೆ ಈ ಪಂದ್ಯ ಕುತೂಹಲಕಾರಿಯಾಗಿ ಸಾಗುತ್ತಿದೆ. ಎಷ್ಟೇ ಆದರೂ ಇಡೀ ಕುಟುಂಬ ಅನಿತಾಳ ಬೆಂಬಲಕ್ಕಿದೆ. ರಾಘು ಸೇರಿದಂತೆ ಇನ್ನಿಬ್ಬರಿಗೆ ಮನಸ್ಸಲ್ಲಿ ಝಾನ್ಸಿಯೇ ಗೆಲ್ಲಬೇಕೆಂಬ ಆಸೆಯಿದ್ದರೂ, ಅದನ್ನು ತೋರಿಸಿಕೊಳ್ಳಲು ಅವರ ಪರಿಸ್ಥಿತಿ ಬಿಡುತ್ತಿಲ್ಲ. ಇದೀಗ ಝಾನ್ಸಿಯ ಪ್ರೀತಿಯನ್ನ ಗೆಲ್ಲಿಸೋಕೆ, ಅವಳಿಗೆ ಸಪೋರ್ಟ್ ಸಿಸ್ಟಮ್ ಆಗಿ ಜೊತೆಯಲ್ಲಿ ನಿಲ್ಲೋಕೆ ಕರುನಾಡೇ ಮೆಚ್ಚಿದ, ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಜನ ಮೆಚ್ಚಿದ ಜೋಡಿ ರಾಮಾಚಾರಿ-ಚಾರು ಬರ್ತಿದಾರೆ. ಇದನ್ನೂ ಓದಿ: ಸಿನಿಮಾ ನಿರ್ಮಾಣದತ್ತ ಹೆಜ್ಜೆ ಇಟ್ಟ ಪ್ರಜ್ವಲ್ ದೇವರಾಜ್

    ಯಜಮಾನ-ರಾಮಾಚಾರಿ ಮಹಾಸಂಚಿಕೆ, ಕರುನಾಡಿಗೆ ಮನರಂಜನೆಯ ರಸದೌತಣವನ್ನ ಕೊಡಲು ಸಜ್ಜಾಗಿದೆ. ಎರಡು ಬ್ಯೂಟಿಫುಲ್ ಜೋಡಿಗಳ ಕ್ಯೂಟ್ ರೊಮ್ಯಾನ್ಸ್, ಎರಡು ಪವರ್‌ಫುಲ್ ಹೀರೋಗಳ ಸಖತ್ ಫೈಟ್, ಎರಡು ಹೀರೋಯಿನ್‌ಗಳ ಇಮೋಷನಲ್ ಸೀನ್ಸ್, ವಿಲನ್‌ಗಳ ಅಟ್ಟಹಾಸ, ಅದನ್ನ ಅಡಗಿಸೋ ಒಳ್ಳೆತನ, ನಾನ್-ಸ್ಟಾಪ್ ನಗು, ‘ನಾನಾ-ನೀನಾ’ ಪಂದ್ಯದ ಕುತೂಹಲ… ಹೀಗೆ ಮಹಾಸಂಚಿಕೆ ವಿಶೇಷವಾಗಿ ಮೂಡಿಬರಲಿದೆ. ನಿಜವಾಗ್ಲೂ ಮನೆಯವರ ವೋಟ್ ಪಡೆದು ಮನೆಯ ‘ಸೊಸೆ’ ಪಟ್ಟ ದಕ್ಕಿಸಿಕೊಳ್ಳೋರು ಯಾರು? ‘ಯಜಮಾನ’ನ ಅಸಲಿ ಯಜಮಾನಿ ಆಗೋದ್ಯಾರು? ಮನೆಯಿಂದಾಚೆ ಹೋಗೋರು ಯಾರು ಅನ್ನೋದು ಇಲ್ಲಿ ನಿರ್ಧಾರವಾಗಲಿದೆ. ಯಜಮಾನ-ರಾಮಾಚಾರಿ ವಾರಪೂರ್ತಿ ಒಂದು ಗಂಟೆಯ ಮಹಾಸಂಚಿಕೆ ಸೆಪ್ಟಂಬರ್ 8ರಿಂದ ರಾತ್ರಿ 9:30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.

  • ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿಯ ಸೀರಿಯಲ್ ಫಸ್ಟ್ ಲುಕ್ ಔಟ್

    ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿಯ ಸೀರಿಯಲ್ ಫಸ್ಟ್ ಲುಕ್ ಔಟ್

    ಬಿಜೆಪಿ ನಾಯಕಿ, ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ (Smriti Irani) ಕಿರುತೆರೆಗೆ ವಾಪಸ್ ಆಗಿದ್ದಾರೆ. ಜನಪ್ರಿಯತೆ ತಂದುಕೊಟ್ಟಿದ್ದ `ಕ್ಯೂಂಕಿ ಸಾಸ್ ಭೀ ಕಭಿ ಬಹು ಥೀ’ (Kyunki Saas Bhi Kabhi Bahu Thi) ಸೀಸನ್ 2ರ ಧಾರಾವಾಹಿ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.ಇದನ್ನೂ ಓದಿ: Shivamogga | ದೆವ್ವ ಬಿಡಿಸುತ್ತೇನೆಂದು ಚಿತ್ರಹಿಂಸೆ – ಮಹಿಳೆ ಸಾವು

    ಧಾರಾವಾಹಿ ಶುರುವಾಗಿ ಈಗಾಗಲೇ 25 ವರ್ಷ ತುಂಬಿದ್ದು, ಈಗ 2ನೇ ಸೀಸನ್‌ಗೆ ಸಿದ್ಧತೆ ನಡೆಯುತ್ತಿದೆ. ಮಾಜಿ ಸಚಿವೆ ಸ್ಮೃತಿ ಇರಾನಿ ಅವರ, ಸೀರಿಯಲ್‌ನಲ್ಲಿನ ಪಾತ್ರ `ತುಳಸಿ’ ಫಸ್ಟ್ ಲುಕ್ ರಿಲೀಸ್ ಆಗಿದೆ.

    ಫಸ್ಟ್ ಲುಕ್‌ನಲ್ಲಿ ಸ್ಮೃತಿ ಮೆರೂನ್ ಸೀರೆಯಲ್ಲಿ ಕಾಣಿಸಿಕೊಂಡಿದ್ದು, ದೊಡ್ಡದಾದ ಕೆಂಪು ಬಿಂದಿ, ಮಂಗಳಸೂತ್ರ ಹಾಗೂ ಆಭರಣಗಳಿಂದ ಅಲಂಕಾರಗೊಂಡಿದ್ದಾರೆ. 2014ರಲ್ಲಿಯೇ ಸ್ಮೃತಿ ಅವರು ಸೀರಿಯಲ್‌ಗೆ ಮರಳಬೇಕಿತ್ತು. ಆದರೆ ಸಂಸತ್ತಿನಲ್ಲಿ ಕ್ಯಾಬಿನೆಟ್ ಸಚಿವೆಯಾಗಿ ಸೇವೆ ಸಲ್ಲಿಸಬೇಕಾಗಿದ್ದ ಕಾರಣದಿಂದ ವಾಪಸ್ಸಾಗಲು ಸಾಧ್ಯವಾಗಿರಲಿಲ್ಲ. ಆದರೆ ಸೆಟ್ ಎಲ್ಲವೂ ಸಿದ್ಧವಾಗಿತ್ತು. ಪ್ರಮಾಣವಚನ ಸ್ವೀಕರಿಸಬೇಕು ಎಂದು ಪ್ರಧಾನಿ ಕಚೇರಿಯಿಂದ ಕರೆಬಂದಿತ್ತು ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.ಇದನ್ನೂ ಓದಿ: ನಮಗೆ ಕುಡಿಯೋಕೆ ನೀರು ಕೊಡಿ: ಸಿಎಂಗೆ ವಿದ್ಯಾರ್ಥಿನಿ ಪತ್ರ

  • ʻಲಕ್ಷ್ಮೀ ನಿವಾಸʼದಿಂದ ಹೊರನಡೆದ ಶ್ವೇತಾ

    ʻಲಕ್ಷ್ಮೀ ನಿವಾಸʼದಿಂದ ಹೊರನಡೆದ ಶ್ವೇತಾ

    ಕನ್ನಡದ ಹೆಸರಾಂತ ʻಲಕ್ಷ್ಮೀ ನಿವಾಸʼ ಧಾರಾವಾಹಿಯಿಂದ (Lakshmi Nivasa Serial) ನಟಿ ಶ್ವೇತಾ ಹೊರನಡೆದಿದ್ದಾರೆ. ಲಕ್ಷ್ಮಿ ಪಾತ್ರದಲ್ಲಿ ಕಾಣಿಸ್ಕೊಂಡಿದ್ದ ಶ್ವೇತಾ ಧಾರಾವಾಹಿಗೆ ಕಳೆ ತಂದಿದ್ದರು. ಕಳೆದ ಒಂದು ತಿಂಗಳಿಂದ ಪ್ರಸಾರವಾಗುತ್ತಿದ್ದ ಸಂಚಿಕೆಗಳಲ್ಲೂ ಶ್ವೇತಾ ಕಾಣಿಸಿಕೊಂಡಿರಲಿಲ್ಲ. ಇದೀಗ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಧಾರಾವಾಹಿ ತಂಡ ಘೋಷಿಸುವ ಮೊದಲೇ ʻಲಕ್ಷ್ಮೀ ನಿವಾಸʼದಿಂದ ಹೊರಬಂದ ವಿಚಾರ ಅವರೇ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

    ಸುಮಾರು 1 ವರ್ಷದಿಂದ ʻಲಕ್ಷ್ಮೀ ನಿವಾಸʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು. ಒಂದು ಗಂಟೆಗಳ ಕಾಲ ಪ್ರಸಾರವಾಗುತ್ತಿದ್ದ ಸುದೀರ್ಘ ಧಾರಾವಾಹಿ (Kannada Serial) ಇದಾಗಿದ್ದು ಬಹಳ ವರ್ಷಗಳ ಬಳಿಕ ಶ್ವೇತಾ ಕನ್ನಡಕ್ಕೆ ವಾಪಸ್ಸಾಗಿದ್ರು. ಇದನ್ನೂ ಓದಿ: ಯುವ ಗಾಯಕಿ ಅಖಿಲಾ ಪಜಿಮಣ್ಣು ಬಾಳಲ್ಲಿ ಬಿರುಗಾಳಿ – ವಿವಾಹ ವಿಚ್ಛೇದನಕ್ಕೆ ಅರ್ಜಿ

    ಚೆನೈನಲ್ಲಿ ಕುಟುಂಬದೊಂದಿಗೆ ವಾಸವಿರುದ ಶ್ವೇತಾ (Actress Shweta) ಶೂಟಿಂಗ್ ಇದ್ದಾಗ ಮಾತ್ರ ಬೆಂಗಳೂರಿಗೆ ಬರುತ್ತಿದ್ದರು. ಇದೀಗ ತಾಯಿಯ ಅನಾರೋಗ್ಯದ ಕಾರಣ ಕೊಟ್ಟು ಧಾರಾವಾಹಿಯಿಂದ ಹೊರಬಂದಿರೋದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರುಕ್ಮಿಣಿ ಸೆಲ್ಫಿ `ಟೈಗರ್’ ಪ್ರಿಂಟ್ ಶರ್ಟ್ ಸೀಕ್ರೆಟ್ ರಿವೀಲ್! ಜೂ.ಎನ್‌ಟಿಆರ್‌ಗೆ ನಾಯಕಿ?

    ʻಚೈತ್ರದ ಪ್ರೇಮಾಂಜಲಿʼ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತವಾದ ತಮಿಳಿನ ವಿನೋದಿನಿ ಕನ್ನಡದಲ್ಲಿ ಶ್ವೇತಾ ಹೆಸರಿನಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಮೂಲ ತಮಿಳುನಾಡಿನವರಾಗಿದ್ದರೂ ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಪ್ರೀತಿ ಗಳಿಸಿದವರು ಶ್ವೇತಾ. ʻಗೆಜ್ಜೆನಾದʼ, ʻಲಕ್ಷ್ಮಿ ಮಹಾಲಕ್ಷ್ಮಿʼ, ʻಕರ್ಪೂರದ ಗೊಂಬೆʼ ಸೇರಿ ಹಲವು ಸಿನಿಮಾಗಳಲ್ಲಿ ಇವರ ಅಭಿನಯ ಮರೆಯುವಂತಿಲ್ಲ.

    ಬಹು ವರ್ಷಗಳ ಬಳಿಕ ʻಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಲೀಡ್‌ರೋಲ್‌ನಲ್ಲಿ ಅಭಿನಯಿಸೋ ಮೂಲಕ ಕಮ್‌ಬ್ಯಾಕ್ ಆಗಿದ್ದರು. ಇದೀಗ ವೈಯಕ್ತಿಕ ಕಾರಣ ಹೇಳಿ ಬ್ರೇಕ್ ತೆಗೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಮತ್ತೆ ಮರಳುತ್ತಾರಾ? ಅಲ್ಲಿಯವರೆಗೂ ಧಾರಾವಾಹಿಯಲ್ಲಿ ಲಕ್ಷ್ಮಿ ಪಾತ್ರವನ್ನ ಹೊರಗಿಟ್ಟು ಚಿತ್ರೀಕರಣ ಮಾಡಲಾಗುತ್ತಾ? ಶ್ವೇತಾ ಪಾತ್ರವನ್ನ ಬೇರೆಯವರು ರಿಪ್ಲೇಸ್ ಮಾಡೋದಾಗಿದ್ರೆ ಯಾರು ಮಾಡಲಿದ್ದಾರೆ? ಅನ್ನೋದು ಸಸ್ಪೆನ್ಸ್‌ ಆಗಿ ಉಳಿದಿದೆ. ಇದನ್ನೂ ಓದಿ: ಮೋಹದ ಬಣ್ಣ ನೀಲಿ: ಯೋಗರಾಜ್ ಭಟ್ಟರ ಹೊಸ ಪ್ರಯೋಗ

    ಶ್ವೇತಾ ಹೇಳಿದ್ದೇನು ?
    ವೈಯಕ್ತಿಕ ಕಾರಣ ಹಾಗೂ ತಾಯಿಯ ಅನಾರೋಗ್ಯದಿಂದಾಗಿ ʻಲಕ್ಷ್ಮೀ ನಿವಾಸʼ ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡಿದ್ದೇನೆ. ನನ್ನನ್ನು ಪ್ರೀತಿಯಿಂದ ಒಪ್ಪಿಕೊಂಡಿದ್ದಕ್ಕಾಗಿ ಕರ್ನಾಟಕ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ. ಧಾರಾವಾಹಿ ಸೆಟ್‌ನಲ್ಲಿ ಹಲವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅದ್ಭುತ ಪ್ರೀತಿ ಕೊಡುವ ಕನ್ನಡಿಗರಿಗೆ ನನ್ನನ್ನು ರೀ ಎಂಟ್ರಿ ಮಾಡಿಸಿರೋದಕ್ಕೆ ಜೀ ಕನ್ನಡ ವಾಹಿನಿ ಧನ್ಯವಾದ ಹೇಳುತ್ತೇನೆ. ಮತ್ತೆ ಸಿಗುತ್ತೇನೆ. ಇದನ್ನೂ ಓದಿ: ಮಹಿಳೆಗೆ ಕಾರು ಡಿಕ್ಕಿ ಹೊಡೆದಿದ್ದಕ್ಕೆ ಕ್ಷಮೆ ಕೇಳಿದ ಯುವ ರಾಜ್‌ಕುಮಾರ್

  • ಜನಪ್ರಿಯ ವಾಹಿನಿಯಲ್ಲಿ ಧಾರಾವಾಹಿ ಆಯ್ತು ರೇಣುಕಾಸ್ವಾಮಿ ಮರ್ಡರ್

    ಜನಪ್ರಿಯ ವಾಹಿನಿಯಲ್ಲಿ ಧಾರಾವಾಹಿ ಆಯ್ತು ರೇಣುಕಾಸ್ವಾಮಿ ಮರ್ಡರ್

    ಟ ದರ್ಶನ್‍ ಮರ್ಡರ್ ಮಾಡಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಹತ್ಯೆಯ ಕಥೆಯನ್ನೇ ಹೋಲುವಂಥ ಧಾರಾವಾಹಿಯನ್ನು ಕಲರ್ಸ್ ಕನ್ನಡ ವಾಹಿನಿಯು ನಿರ್ಮಿಸಿದೆ. ಹೌದು, ನಿನ್ನೆ  ಶಾಂತಂ ಪಾಪಂ ಸರಣಿಯಲ್ಲಿ ಪ್ರಸಾರವಾದ ‘ಡೇರ್ ಡೆವಿಲ್ ದೇವದಾಸ್’ ಬಹುತೇಕ ರೇಣುಕಾಸ್ವಾಮಿ ಮರ್ಡರ್ ಕಥೆಯನ್ನೇ ಹೋಲುತ್ತದೆ ಎನ್ನುವ ಅಭಿಪ್ರಾಯವನ್ನು ಅನೇಕ ನೋಡುಗರ ವ್ಯಕ್ತ ಪಡಿಸಿದ್ದಾರೆ. ಹಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಭಾರೀ ಚರ್ಚೆ ನಡೆದಿದೆ.

    ಸ್ನೇಹಿತೆ ಪವಿತ್ರಾ ಗೌಡಗಾಗಿ ದರ್ಶನ್ ರೇಣುಕಾಸ್ವಾಮಿ ಕೊಲ್ಲಿಸಿದ್ದಾರೆ ಎನ್ನುವ ಆರೋಪ ಹೊತ್ತಿದ್ದಾರೆ. ಈಗಾಗಲೇ ದರ್ಶನ್ ಜೈಲು ಪಾಲಾಗಿದ್ದಾರೆ. ದರ್ಶನ್ ಅಂಡ್ ಗ್ಯಾಂಗ್‍ ಹೇಗೆಲ್ಲ ರೇಣುಕಾಸ್ವಾಮಿಯನ್ನು ಕೊಂದಿತು ಎನ್ನುವ ವಿಚಾರಗಳನ್ನು ತನಿಖಾಧಿಕಾರಿಗಳು ಕೋರ್ಟ್ ಗೆ ಸಲ್ಲಿಸಿದ್ದಾರೆ. ಕೊಲೆಯಾದ ಶೆಡ್‍, ಅದಕ್ಕೂ ಮುನ್ನ ಪಾರ್ಟಿ.. ರೇಣುಕಾಸ್ವಾಮಿಯನ್ನು ಖೆಡ್ಡಾಗೆ ಕೆಡವಿದ್ದು ಹೇಗೆ ಎನ್ನುವ ಕುರಿತಂತೆ ಎಳೆ ಎಳೆಯಾಗಿ ತನಿಖಾಧಿಕಾರಿಗಳು ಬಿಡಿಸಿಟ್ಟಿದ್ದಾರೆ. ಕಲರ್ಸ್ ವಾಹಿನಿಯಲ್ಲಿ ಪ್ರಸಾರ ಕಂಡ ಕಥೆಯೂ ಹೀಗೆಯೇ ಇದೆ.

    ಶಾಂತಂ ಪಾಪಂ ಸರಣಿಯಲ್ಲಿ ಪ್ರಸಾರ ಕಂಡ ‘ಡೇರ್ ಡೆವಿಲ್ ದೇವದಾಸ್’ ಕಥೆ ಶುರುವಾಗೋದು ನಟಿಯ ಸಲುವಾಗಿ ಅಣ್ಣ ಒಂದು ಕೊಲೆ ಮಾಡಿಸಿದ್ದಾನೆ ಎನ್ನುವ ಮೂಲಕ. ದೇವ ದೊಡ್ಡ ಉದ್ಯಮಿ. ಶ್ರೀಮಂತ. ಅವನಿಗೆ ಪುಟ್ಟದೊಂದು ಸಂಸಾರವಿದೆ. ಮುದ್ದಿನಂತೆ ಹೆಂಡ್ತಿ ಮತ್ತು ಮಗ. ಈ ದೇವನ ಬಾಳಲ್ಲಿ ನಟಿಯೊಬ್ಬಳ ಪ್ರವೇಶವಾಗುತ್ತದೆ. ನಟಿಯ ಪ್ರವೇಶದ ನಂತರ ಕಟ್ಟಿಕೊಂಡ ಹೆಂಡ್ತಿಗೆ ಸಾಕಷ್ಟು ಟಾರ್ಚರ್ ಕೊಡೋಕೆ ಶುರು ಮಾಡ್ತಾನೆ. ನಟಿಯ ಸಲುವಾಗಿ ಆತ ಏನು ಮಾಡೋಕು ರೆಡಿ ಆಗ್ತಾನೆ.

    ನಟಿಗೆ ಹಿಂಸೆ ಕೊಡುತ್ತಿದ್ದ ವಿಚಾರ ದೇವನಿಗೆ ಗೊತ್ತಾಗುತ್ತದೆ. ಜೊತೆಗೆ ನಟಿಯು ಕೂಡ ಈ ವಿಚಾರವನ್ನು ದೇವನ ಜೊತೆ ಹಂಚಿಕೊಳ್ಳುತ್ತಾಳೆ. ತನ್ನ ಸಹಾಯಕರನ್ನು ಗುಂಪು ಮಾಡಿಕೊಂಡು ನಟಿಗೆ ಅಶ್ಲೀಲ ಕಾಮೆಂಟ್ ಮಾಡ್ತಿದ್ದವನನ್ನು ಹಿಡಿದು ಹಾಕ್ತಾರೆ. ಶೆಡ್‍ಗೆ ಕರೆಯಿಸಿಕೊಂಡು ಕೊಡಬಾರದ ಹಿಂಸೆ ಕೊಟ್ಟು ಸಾಯಿಸ್ತಾರೆ. ಕೊನೆಗೆ ಶ್ರೀಮಂತ ಉದ್ಯಮಿ ಜೈಲು ಪಾಲಾಗ್ತಾನೆ. ಹೀಗೆ ಕಥೆಯನ್ನು ಅದು ಹೊಂದಿದೆ. ಈ ಕಥೆಗೂ ದರ್ಶನ್ ಪ್ರಕರಣಕ್ಕೂ ಸಾಮ್ಯತೆಯನ್ನು ನೋಡುಗರ ಕಲ್ಪಿಸುತ್ತಿದ್ದಾರೆ.

    ಮೊನ್ನೆಯಿಂದಲೂ ಈ ಧಾರಾವಾಹಿಯ ಪ್ರೊಮೋ ಸಾಕಷ್ಟು ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಅನೇಕರು ದರ್ಶನ್ ಪ್ರಕರಣವನ್ನೇ ನೆನಪಿಸಿಕೊಂಡಿದ್ದರು. ಆದರೆ, ವಾಹಿನಿಯು ಮಾತ್ರ ಕಥೆಯ ವಿಚಾರವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಜೊತೆಗೆ ಇದೊಂದು ಕಾಲ್ಪನಿಗೆ ಕಥೆ ಅನ್ನುವಂತೆ ಪ್ರಸಾರ ಮಾಡಲಾಗಿದೆ.

  • ಅಯೋಧ್ಯೆಯಲ್ಲಿ ‘ಕನ್ಯಾದಾನ’ ಧಾರಾವಾಹಿ ಶೂಟಿಂಗ್

    ಅಯೋಧ್ಯೆಯಲ್ಲಿ ‘ಕನ್ಯಾದಾನ’ ಧಾರಾವಾಹಿ ಶೂಟಿಂಗ್

    ಮನರಂಜನೆಯ ಮಹಾರಾಜ ಅಂತಾನೇ ಮನೆಮಾತಾಗಿರುವ ಉದಯ ಟಿವಿ ಸಮಾಜಮುಖಿ ಧಾರಾವಾಹಿಗಳಿಂದ ವೀಕ್ಷಕರನ್ನ ಮನರಂಜಿಸುತ್ತಲೇ ಬಂದಿದೆ. ಸೀರಿಯಲ್‌ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸೂಪರ್‌ ಹಿಟ್‌ ಧಾರಾವಾಹಿ (Serial) ಉದಯ ವಾಹಿನಿಯ ‘ಕನ್ಯಾದಾನ’ (Kanyadaan). ತನ್ನ ಐದು ಜನ ಹೆಣ್ಣುಮಕ್ಕಳ ಜೀವನ ನೆಮ್ಮದಿದಾಯಕವಾಗಿರಬೇಕು ಅಂತ ಪರಿತಪಿಸೋ ತಂದೆಯ ಭಾವನಾತ್ಮಕ ಹೋರಾಟದ ಕಥೆ ಈಗಾಗಲೇ ಕನ್ನಡಿಗರ ಮನ ಗೆದ್ದಿದೆ.

    ಎಂಟುನೂರು ಸಂಚಿಕೆಗಳನ್ನ ಪೂರೈಸುವ ಹಂತದಲ್ಲಿರುವ, ಕನ್ನಡಿಗರ ಮನೆಮಾತಾಗಿರುವ ಕನ್ಯಾದಾನ ಮಹಿಳೆಯರ ದೈನಂದಿನ ಜೀವನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ವಿಭಿನ್ನ ಪ್ರಯೋಗಗಳ ಮೂಲಕ ಸಂಚಿಕೆಗಳಲ್ಲಿ ಹೊಸತನ ತರುವ ಪ್ರಯತ್ನದಲ್ಲಿ ಕನ್ಯಾದಾನ ಧಾರಾವಾಹಿಯು ಕಿರುತೆರೆ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿದೆ. ಮುಖ್ಯ ಭೂಮಿಕೆಯ ಕಲಾವಿದರಷ್ಟೇ ಅಲ್ಲದೇ ಬೆಳ್ಳಿತೆರೆಯ ಜನಪ್ರಿಯ ಕಲಾವಿದರೂ ಸಹ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಮನರಂಜನೆ ನೀಡಿದ ನಿದರ್ಶನಗಳು ಹಲವಾರು. ಈ ಹಿಂದೆ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಸುಧಾರಾಣಿಯವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಧಾರಾವಾಹಿಗೆ ಮೆರುಗು ನೀಡಿದ್ದರು. ಅದೇ ರೀತಿ ಇತ್ತೀಚಿನ ಸಂಚಿಕೆಗಳಲ್ಲಿ “ಗಾಳಿಪಟ” ಹಾರಿಸಿ ಮಿಂಚಿದ್ದ ನಟಿ ನೀತು ಸಹ ಬಹುಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಈಗ ಶ್ರೀರಾಮನವಮಿಯ ಪ್ರಯುಕ್ತ ವಿಶೇಷ ಸಂಚಿಕೆಗಳು ಬಹು ಸೊಗಸಾಗಿ ಪ್ರಸಾರವಾಗಲಿದ್ದು ವೀಕ್ಷಕರು ಇದೇ ಏಪ್ರಿಲ್ 15ರಿಂದ ಈ ಅಪರೂಪದ ಸಂಚಿಕೆಗಳನ್ನ ವೀಕ್ಷಿಸಬಹುದು.

    ಕನ್ನಡ ಧಾರಾವಾಹಿ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಐತಿಹಾಸಿಕ ಅಯೋಧ್ಯೆಯಲ್ಲಿ (Ayodhya) ವಿಶೇಷ ಸಂಚಿಕೆಗಳನ್ನ ಚಿತ್ರೀಕರಣ ಮಾಡಿರುವ ಹೆಗ್ಗಳಿಕೆ ಉದಯ ಟಿವಿಯ ʼಕನ್ಯಾದಾನʼ ತಂಡಕ್ಕೆ ಸಂದಿದೆ. ಇತ್ತೀಚೆಗಷ್ಟೇ ವಿಶ್ವಪ್ರಸಿದ್ಧ ಅಯೋಧ್ಯೆಯ ರಾಮಮಂದಿರಕ್ಕೆ ತೆರಳಿದ ʼಕನ್ಯಾದಾನʼ ತಂಡವು ತನ್ನ ಪ್ರೇಕ್ಷಕರಿಗೆ ಮೈನವೀರೇಳಿಸುವಂತಹ ವಿಶೇಷ ಸಂಚಿಕೆಗಳನ್ನ ಹೊತ್ತು ತಂದಿದೆ. ಶ್ರೀರಾಮಚಂದ್ರನ ಸನ್ನಿಧಿಯಲ್ಲಿ ಧಾರಾವಾಹಿಯ ಪ್ರಮುಖ ಪಾತ್ರಗಳು ಪ್ರೇಮವೆಂಬ ಜೀವನ್ಮುಖಿಯತ್ತ ತಮ್ಮನ್ನು ತಾವು ಹೇಗೆ ಕಂಡುಕೊಳ್ಳುತ್ತವೆ ಎಂಬುದು ವಿಶೇಷ! ʼಕನ್ಯಾದಾನʼದ ಕುಟುಂಬಗಳಲ್ಲಿ ಅಶ್ವತ್ಥನ ಹೆಣ್ಣುಮಕ್ಕಳ ಸಂಸಾರಗಳು ಶ್ರೀರಾಮನವಮಿಯ ವಿಶೇಷ ಸಂದರ್ಭದಲ್ಲಿ ಎದುರಾಗುವ ಅಗ್ನಿಪರೀಕ್ಷೆಗಳನ್ನ ಶ್ರೀರಾಮನ ಕೃಪೆಯಿಂದ ಹೇಗೆ ಮೆಟ್ಟಿ ನಿಲ್ಲುತ್ತವೆ ಎಂಬುದು ವಿಶೇಷ ಸಂಚಿಕೆಗಳ ತಿರುಳಾಗಿದೆ. ಹಾಗೆಯೇ ಅಯೋಧ್ಯೆಯ ಬಾಲರಾಮನ ದರ್ಶನದಿಂದ ಕಾರ್ತಿಕ್‌ನ ದಾಂಪತ್ಯದಲ್ಲಿ ಉಂಟಾಗುವ ಸಕಾರಾತ್ಮಕ ಬದಲಾವಣೆಗಳು ಹಾಗೂ ಆತನ ತಂಗಿಯ ಬಾಳಲ್ಲಿರುವ ಗೊಂದಲಗಳಿಗೆ ಅಂತಿಮವಾಗಿ ತೆರೆ ಬೀಳುವ ಸನ್ನಿವೇಶಗಳು ಎದುರಾಗುತ್ತವೆ.

    ಕನ್ಯಾದಾನ ಧಾರಾವಾಹಿಯಲ್ಲಿನ ಪಾತ್ರಗಳು ಮದುವೆಯ ನಂತರ ಪ್ರತಿ ಹೆಣ್ಣುಮಗಳಿಗೆ ಬದುಕಿನ ಪರೀಕ್ಷೆಗಳನ್ನು ಎದುರಿಸಲು ಮನೋಸ್ಥೈರ್ಯ ತುಂಬುತ್ತವೆ. ಈ ಧಾರಾವಾಹಿಯಲ್ಲಿ ಬರುವ ಪ್ರತಿಯೊಂದು ಪಾತ್ರವೂ ನಿಜಜೀವನದಲ್ಲಿ ನೋಡುಗರಿಗೆ ತುಂಬಾ ಹತ್ತಿರವಾಗಿರುವುದರಿಂದ ಮನರಂಜನೆಯ ಜೊತೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನೂ ನೀಡುತ್ತದೆ.

     

    ಕನ್ಯಾದಾನ ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ಸಂಜೆ 6 ಗಂಟೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.

  • ʻಮೈನಾʼ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಚಿತ್ರತಾರೆ ಭವ್ಯಾ

    ʻಮೈನಾʼ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಚಿತ್ರತಾರೆ ಭವ್ಯಾ

    ದಯ ಟಿವಿಯಲ್ಲಿ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ʻಮೈನಾʼ (Maina) ಧಾರಾವಾಹಿಯಲ್ಲಿ (Serial) 90ರ ದಶಕದ ಬಹುಬೇಡಿಕೆಯ ನಾಯಕಿ, ಚಿತ್ರತಾರೆ ಭವ್ಯಾ (Bhavya) ನಟಿಸುತ್ತಿದ್ದಾರೆ. ಪ್ರೇಮಪರ್ವ, ಪ್ರಳಯಾಂತಕ, ನೀ ಬರೆದ ಕಾದಂಬರಿ, ಕೃಷ್ಣ ನೀ ಬೇಗನೆ ಬಾರೋ, ಕರುಣಾಮಯಿ, ಹೃದಯಗೀತೆ, ಮತ್ತೆ ಹಾಡಿತು ಕೋಗಿಲೆ, ಹೃದಯ ಹಾಡಿತು‌, ಸಾಂಗ್ಲಿಯಾನ ಇತ್ಯಾದಿ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ವಿಷ್ಣುವರ್ಧನ್‌, ಶಂಕರನಾಗ್‌, ಅಂಬರೀಶ್‌, ರವಿಚಂದ್ರನ್ ಮತ್ತಿತರ ದಿಗ್ಗಜ ಕಲಾವಿದರ ಜೊತೆ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ಭವ್ಯಾ, ಟಿವಿ ಧಾರಾವಾಹಿಯಲ್ಲಿ ನಟಿಸುತ್ತಿರುವುದು ಇದೇ ಮೊದಲು.

    ಭವ್ಯಾ ಅವರದು ʻಮೈನಾʼ ಧಾರಾವಾಹಿಯಲ್ಲಿ ಮಹಿಳಾ ಹಾಸ್ಟೆಲ್‌ ಮುಖ್ಯಸ್ಥೆ ಅರುಂಧತಿಯ ಪಾತ್ರ. ಕಟ್ಟುನಿಟ್ಟಾದರೂ ತಾಯಿ ಹೃದಯಿ. ಊರು ಬಿಟ್ಟು ಪರವೂರಿಗೆ ಬಂದಿರುವ ಹೆಣ್ಣುಮಕ್ಕಳೇ ಹೆಚ್ಚಿರುವ ಜಾಗದಲ್ಲಿ ಎಲ್ಲರನ್ನೂ ನಿಯಂತ್ರಿಸುತ್ತ ಎಲ್ಲರ ಸಮಸ್ಯೆಗಳಿಗೂ ಸ್ಪಂದಿಸುತ್ತ ಎಲ್ಲರ ಭಾವನೆಗಳಿಗೂ ಬೆಲೆ ಕೊಡುವ ಅಪರೂಪದ ಪಾತ್ರ. ಮೈನಾ ಜೀವನದಲ್ಲಿ ಹಠಾತ್ತನೆ ಬರುವ ಅನಿರೀಕ್ಷಿತ ತಿರುವು ಕಂಗೆಡಿಸಿದಾಗ ಅವಳಿಗೆ ಆಸರೆಯಾಗಿ ನಿಲ್ಲುತ್ತಾಳೆ ಅರುಂಧತಿ. ಹಾಗೆಯೇ ಇವರ ಮಹಿಳಾ ಹಾಸ್ಟೆಲ್‌ನಲ್ಲಿರುವ ಇತರ ನಾಲ್ಕು ಹೆಣ್ಣುಮಕ್ಕಳೂ ʻಮೈನಾʼ ಧಾರಾವಾಹಿಯ ಮಹತ್ವದ ಪಾತ್ರಗಳಾಗಿ ಬರುತ್ತಾರೆ.

     

    ಮಹಿಳಾ ಹಾಸ್ಟೆಲ್‌ ಈ ಧಾರಾವಾಹಿಯಲ್ಲಿ ಒಂದು ಬಹುಮುಖ್ಯ ಅಂಗವೇ ಆಗಿದೆ.  ʻಮೈನಾʼ ಧಾರಾವಾಹಿ ಪ್ರತಿದಿನ(ಸೋಮವಾರದಿಂದ ಭಾನುವಾರ) ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

  • ಕಿರುತೆರೆ ಲೋಕದಲ್ಲಿ ಮತ್ತೊಂದು ಹೊಸ ಧಾರಾವಾಹಿ: ಕಿರಿಮಗಳ ಹಿರಿ ಜವಾಬ್ದಾರಿ ಕಥೆ ಮೈನಾ

    ಕಿರುತೆರೆ ಲೋಕದಲ್ಲಿ ಮತ್ತೊಂದು ಹೊಸ ಧಾರಾವಾಹಿ: ಕಿರಿಮಗಳ ಹಿರಿ ಜವಾಬ್ದಾರಿ ಕಥೆ ಮೈನಾ

    ದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಮನರಂಜನೆ ಉಣಬಡಿಸುತ್ತಿದೆ. ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ಕನ್ಯಾದಾನ, ಗಂಗೆಗೌರಿ, ಅಣ್ಣತಂಗಿ, ಶಾಂಭವಿ, ಸೇವಂತಿ, ರಾಧಿಕಾ, ಜನನಿ, ಗೌರಿಪುರದ ಗಯ್ಯಾಳಿಗಳು ವೈವಿಧ್ಯಮಯ ನೈಜ ಕತೆಗಳಿಂದ ಜನಮನ ಗೆದ್ದಿವೆ. ಹೊಸ ಧಾರಾವಾಹಿ (Serial) ʼಮೈನಾʼ (Maina) ಈ ಸಾಲಿಗೆ ವಿಶಿಷ್ಟ ಸೇರ್ಪಡೆ. ಫೆಬ್ರುವರಿ 19 ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ ʻಮೈನಾʼ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

    ಮೈಲಾರಕೋಟೆ ಮೈನಾ ಮನೆಗೆ ಕಿರಿಮಗಳು. ಊರಲ್ಲಿ ಅಲೆಮಾರಿ, ಪರರಿಗೆ ಉಪಕಾರಿ. ಚಿಕ್ಕ ಪೆಟ್ಟಿಗೆ ಅಂಗಡಿ ನಡೆಸುತ್ತಿರುವ ನೀತಿವಂತ ಅಪ್ಪ ಮುತ್ತಣ್ಣ, ಅವರಿವರ ಹೊಲದಲ್ಲಿ ಕೂಲಿ ಮಾಡಿ ಸಂಸಾರದ ನೊಗಕ್ಕೆ ಹೆಗಲು ಕೊಟ್ಟಿರುವ ಅಮ್ಮ, ಸೀತೆಯಂಥ ಅಕ್ಕ ರಾಧೆ, ಕಾಲೇಜಿಗೆ ಹೋಗುತ್ತಿರುವ ಅಣ್ಣ.. ಮೈನಾಳ ಪುಟ್ಟ ಗೂಡಲ್ಲಿ ದುಡ್ಡಿಗೆ ಕೊರತೆ; ಪ್ರೀತಿ ವಾತ್ಸಲ್ಯಕ್ಕಲ್ಲ.

    ಅಕ್ಕ ರಾಧೆಗೆ ಮದುವೆ ವಯಸ್ಸು ಮೀರುತ್ತಿದೆ; ಸಂಬಂಧ ಕೂಡಿ ಬರುತ್ತಿಲ್ಲ. ಒಂದೊಂದು ಸಲವೂ ಒಂದೊಂದು ಕಾರಣಕ್ಕೆ ಮದುವೆ ಮುರಿದುಹೋಗುತ್ತಿದೆ. ಕೆಲವೊಂದು ಸಂಬಂಧ ಮುರಿಯಲು ಮೈನಾ ನೆಪವಾಗುತ್ತಾಳೆ. ಕಟ್ಟಕಡೆಯದಾಗಿ, ಜವಾಬ್ದಾರಿ ಹೊರಬೇಕಾದ ಅಣ್ಣನೇ ಕೈ ಕೊಟ್ಟು ಹೋದಾಗ ಕಿರಿಮಗಳಾದ ಮೈನಾ ಅಕ್ಕನ ಮದುವೆಯ ಹಿರಿಯ ಜವಾಬ್ದಾರಿ ಹೊತ್ತು ಪಟ್ಟಣಕ್ಕೆ ಹೊರಡುತ್ತಾಳೆ. ಅಲ್ಲಿಂದ ಅವಳ ಪ್ರಯಾಣ ಅನೂಹ್ಯ ತಿರುವುಗಳನ್ನು ಪಡೆದುಕೊಳ್ಳುತ್ತದೆ.

    ಮೈನಾ ಪಾತ್ರದಲ್ಲಿ ಜನಪ್ರಿಯ ಕಲಾವಿದೆ ವಿಜಯಲಕ್ಷ್ಮಿ ನಟಿಸುತ್ತಿದ್ದಾರೆ.  ನಾಗಾಭರಣ (Nagabharana), ಅಪೂರ್ವ, ಅಂಜಲಿ, ಮಾನಸಿ ಜೋಶಿ, ಸಚಿನ್, ಸಿದ್ದಾರ್ಥ್, ಪ್ರಭಂಜನ, ಸಾಗರ್, ಹರ್ಷಾರ್ಜುನ್, ಯಶಸ್ವಿನಿ, ಆಶಾ, ಅನುಷಾ, ಕು.ತಿಶ್ಯ, ಮಾ.ಅರುಣ್, ಮಾ.ರಣವೀರ್ ಮುಂತಾದವರ ತಾರಾಗಣವಿದೆ. ಚಿತ್ರತಾರೆ ಭವ್ಯ ಅಪರೂಪದ ವಿಶಿಷ್ಟ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಈ ಧಾರಾವಾಹಿಯ ನಿರ್ದೇಶಕರು ಸಂತೋಷ್ ಗೌಡ ಹಾಸನ,  ಛಾಯಾಗ್ರಹಣ ಜಗದೀಶ್ ವಾಲಿ ಹಾಗೂ ದಯಾಕರ್, ಸಂಗೀತ ಮಣಿಕಾಂತ ಕದ್ರಿ, ಸಾಹಿತ್ಯ ಕೆ. ಕಲ್ಯಾಣ್, ಸಂಕಲನ ಪ್ರಕಾಶ ಕಾರಿಂಜ ಅವರದ್ದು.

     

    ಆನಂದ್ ಆಡಿಯೋ ಕಂಪನಿಯ ಸಹಸಂಸ್ಥೆ ʻಕೋಮಲ್ ಎಂಟರ್ಪ್ರೈಸಸ್ʼ ಬ್ಯಾನರ್ ಅಡಿ ಈ ಧಾರಾವಾಹಿ ನಿರ್ಮಾಣವಾಗುತ್ತಿದೆ. ಮಹಿಳೆಯರ ಆತ್ಮಬಲದ ಪ್ರತೀಕವಾಗಿ ʻಮೈನಾʼ ಮೂಡಿಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ ಉದಯ ಟಿವಿ ಕಾರ್ಯಕ್ರಮ ಮುಖ್ಯಸ್ಥರು. ʻಮೈನಾʼ ಧಾರಾವಾಹಿ ಫೆಬ್ರುವರಿ 19 ರಿಂದ ಪ್ರತಿದಿನ (ಸೋಮವಾರದಿಂದ ಭಾನುವಾರ) ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

  • ಅಕ್ಕತಂಗಿಯರ ನಡುವಿನ ವಿಭಿನ್ನ ಕಥೆ ‘ಗಂಗೆ ಗೌರಿ’

    ಅಕ್ಕತಂಗಿಯರ ನಡುವಿನ ವಿಭಿನ್ನ ಕಥೆ ‘ಗಂಗೆ ಗೌರಿ’

    ಹೊಸ ತರಹದ ಮತ್ತು ವಿಭಿನ್ನ ಕಥೆಯ ಮೂಲಕ ವೀಕ್ಷಕರ ಮನಗೆಲ್ಲುವಲ್ಲಿ ಉದಯ ಟಿವಿ ಯಾವಾಗಲೂ ಮುಂದು. ಈಗ ಅಕ್ಕ ತಂಗಿಯರ ಅಪೂರ್ವ ಬಾಂಧವ್ಯದ ಕಥೆ ಹೇಳುವ ʻಗಂಗೆ ಗೌರಿʼ ಧಾರಾವಾಹಿಯ ಮೂಲಕ ಜನರ ಮನರಂಜಿಸಲು ಉದಯ ಟಿವಿ ಸಜ್ಜಾಗಿದೆ.  ಈಗಾಗಲೇ ಕನ್ಯಾದಾನ, ಆನಂದರಾಗ, ಅಣ್ಣತಂಗಿ, ಸೇವಂತಿ, ಜನನಿ, ರಾಧಿಕಾ, ಜನನಿ, ನಯನತಾರಾ, ಗೌರಿಪುರದ ಗಯ್ಯಾಳಿಗಳು ಇತ್ಯಾದಿ ಕೌಟುಂಬಿಕ ಧಾರವಾಹಿಗಳು (Serial) ವೀಕ್ಷಕರ ಮನ ಗೆದ್ದಿವೆ. ಈಗ ʻಗಂಗೆ ಗೌರಿʼ(Gange Gowri) ವಿಶೇಷ ನಿರೂಪಣಾ ಶೈಲಿಯೊಂದಿಗೆ ಟಿವಿ ಮನೋರಂಜನಾ ಲೋಕಕ್ಕೆ ಲಗ್ಗೆ ಇಡಲಿದೆ.

    ಹಸಿರು ಮಲೆನಾಡ ಪುಟ್ಟ ಹಳ್ಳಿಯಲ್ಲಿ ಗಂಗೆ ಗೌರಿ ಎನ್ನುವ ಅಕ್ಕತಂಗಿಯರು. ಯಾರಿಗೂ ಜಗ್ಗದ ಬಗ್ಗದ, ಮಾತಿಗಿಂತ ಏಟೇ ಸರಿ ಎನ್ನುವ ಹುಡುಗಿ ತಂಗಿ ಗಂಗೆಯಾದರೆ, ಮೃದು ಮಾತಲ್ಲೇ ಎಲ್ಲರ ಮನ ಗೆಲ್ಲುವ ಶಾಂತ ಮೃದು ಸ್ವಭಾವದ ಅಕ್ಕ ಗೌರಿ. ಸ್ವಭಾವ ಬೇರೆಯಾದರೂ ಒಬ್ಬರನ್ನೊಬ್ಬರು ಅಗಲಿ ಇರಲಾರದಷ್ಟು ಅನ್ಯೋನ್ಯತೆ. ಇವರ ನಡುವೆ ಹುಡುಗನೊಬ್ಬ ಬಂದರೆ ಏನಾಗಬಹುದು? ಅವರ ಜೀವನದಲ್ಲಿ ಯಾವ ಥರಹದ ಬದಲಾವಣೆಗಳು ಆಗುತ್ತವೆ? ತಂಗಿಗೋಸ್ಕರ ಅಕ್ಕ ಗೌರಿ ಪ್ರೀತಿಯನ್ನು ತ್ಯಾಗ ಮಾಡುತ್ತಾಳಾ ಅಥವಾ ಅಕ್ಕ ಮತ್ತು ಪ್ರೀತಿಯ ನಡುವೆ ಗಂಗೆಯ ಆಯ್ಕೆ ಏನು? ಇವೆಲ್ಲ ಮೀರಿ ದೈವೇಚ್ಛೆ ಏನು? ಎನ್ನುವುದರ ಸುತ್ತ ಕುತೂಹಲ ಭರಿತ ತಿರುವುಗಳ ಕಥಾಹಂದರ ಇದಾಗಿದೆ.

    ಕಳಸದ ಹಸಿರಿನ ನಡುವೆ, ಮಲೆನಾಡ ಸುಂದರ ಹಳ್ಳಿ ಬದುಕಿನ ಹಿನ್ನೆಲೆಯ ಈ ಕಥೆ ನೋಡುಗರ ಮನಗೆಲ್ಲುವುದರಲ್ಲಿ ಸಂದೇಹವೇ ಇಲ್ಲ. ಈಗಾಗಲೇ ಅನೇಕ ಕನ್ನಡ ಅದ್ಭುತ ಸೀರಿಯಲ್ಗಳನ್ನು ನಿರ್ಮಾಣ ಮಾಡಿದ ವೃದ್ಧಿ ಕ್ರಿಯೇಶನ್ ಈ ಧಾರಾವಾಹಿಯ ನಿರ್ಮಾಣದ ಹೊಣೆ ಹೊತ್ತಿದೆ. ಅನುಭವಿ ನಿರ್ದೇಶಕ ವಿನೋದ್ ದೋಂಡಾಳೆ ನಿರ್ದೇಶನದಲ್ಲಿ ಗಂಗೆ ಗೌರಿ ಮೂಡಿಬರುತ್ತಿದೆ.

    ದರ್ಶ್ ಚಂದ್ರಪ್ಪ (Darsh Chandrappa), ಶ್ರೀವಿದ್ಯಾ ಶಾಸ್ತ್ರಿ (Srividya), ದರ್ಶಿನಿ ಗೌಡ (Darshini Gowda), ರೇಣುಕಾ ಬಾಲಿ, ಹೇಮಾ ಬೆಳ್ಳೂರು, ಅಪೂರ್ವ ಭಾರಧ್ವಾಜ್, ರೋಹಿತ್ ಶ್ರೀನಾಥ್, ಅಭಿಜಿತ್, ಲಕ್ಷ್ಮೀ ಸಿದ್ದಯ್ಯ ಅವರಂತಹ ಖ್ಯಾತ ಕಲಾವಿದರ ದಂಡೇ ಈ ಧಾರಾವಾಹಿಯಲ್ಲಿದೆ.

     

    ʻಗಂಗೆ ಗೌರಿʼನಮ್ಮ ಹೆಮ್ಮೆಯ ನಿರ್ಮಾಣ . ಇದು ಬೇರೆ ಸೀರಿಯಲ್ಗಳಿಗಿಂತ ವಿಭಿನ್ನವಾಗಿದೆ. ಮಲೆನಾಡಿನ ಸುಂದರ ತಾಣಗಳಿಗೆ ಹೋಗಿ ಶೂಟ್ ಮಾಡಿಕೊಂಡು ಬಂದಿದ್ದೇವೆ. ಸೀರಿಯಲ್ ನಡುವೆ ಕನ್ನಡ ಭಾವಗೀತೆಗಳನ್ನು ಬಳಸಿದ್ದೇವೆ. ಕನ್ನಡತನ ಇದರಲ್ಲಿ ಎದ್ದು ಕಾಣಿಸುತ್ತೆ. ಖಂಡಿತ ಇದು ನಮ್ಮ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ’ ಎನ್ನುತ್ತಾರೆ ನಿರ್ಮಾಪಕ ವರ್ಧನ್ ಹರಿ ಗಂಗೆ ಗೌರಿ ಇದೇ ಡಿಸೆಂಬರ್‌ 11 ರಿಂದ ಸೋಮವಾರದಿಂದ ಶನಿವಾರ ಸಂಜೆ 6.30ಕ್ಕೆ ಉದಯ ಟಿವಿ ಯಲ್ಲಿ ಪ್ರಸಾರವಾಗಲಿದೆ.

  • ‘ಆಸೆ’ ಧಾರಾವಾಹಿ ನಿರ್ಮಾಣ ಮಾಡಿದ ನಟ ರಮೇಶ್ ಅರವಿಂದ್

    ‘ಆಸೆ’ ಧಾರಾವಾಹಿ ನಿರ್ಮಾಣ ಮಾಡಿದ ನಟ ರಮೇಶ್ ಅರವಿಂದ್

    ನ್ನಡದ ಹೆಸರಾಂತ ನಟ ರಮೇಶ್ ಅರವಿಂದ್ (Ramesh Aravind) ಮತ್ತೆ ಕಿರುತೆರೆಗೆ ಹಾರಿದ್ದಾರೆ. ಈ ಬಾರಿ ಅವರು ಸುವರ್ಣ ವಾಹಿನಿಗಾಗಿ ಧಾರಾವಾಹಿಯನ್ನು (Serial) ನಿರ್ಮಿಸುತ್ತಿದ್ದು, ಈ ಧಾರಾವಾಹಿಗೆ ‘ಆಸೆ’ (Aase) ಎಂದು ಹೆಸರಿಡಲಾಗಿದೆ. ಕಿರುತೆರೆ ವೀಕ್ಷಕರಿಗೆ ಸ್ಟಾರ್ ಸುವರ್ಣ ವಾಹಿನಿಯು ನೂತನವಾದ ಮನಮುಟ್ಟುವ ಮನರಂಜನೆಯ ಧಾರಾವಾಹಿಗಳನ್ನು ನೀಡುತ್ತಲೇ ಆ ಸಾಲಿಗೆ ಆಸೆ ಸೇರ್ಪಡೆ ಆಗಲಿದೆ.

    ಸಾಮಾನ್ಯ ಜನರ ಅಸಾಮಾನ್ಯ ಕಥೆಯಿದು. ಚಿಕ್ಕವನಿದ್ದಾಗ ಗೊತ್ತಿಲ್ಲದೇ ನಡೆದ ಘಟನೆಯಿಂದಾಗಿ ತಾಯಿಯಿಂದ ಪ್ರತಿದಿನ, ಪ್ರತಿಕ್ಷಣ ದೂಷಿಸಲ್ಪಡುತ್ತಿರುವ ಕಥಾನಾಯಕ ಸೂರ್ಯ, ಈತನ ಮಾತು ಸ್ವಲ್ಪ ಒರಟು ಆದರೆ ಮೃದುವಾದ ಮನಸು. ಜೀವನದಲ್ಲಿ ನೊಂದು-ಬೆಂದು ಆಕಾಂಕ್ಷೆಯನ್ನೇ ಕಳೆದುಕೊಂಡಿರುವ ಸೂರ್ಯ ತಂದೆಯ ಮುದ್ದಿನ ಮಗ. ಮತ್ತೊಂದು ಕಡೆ ಬಡತನದ ಬೇಗೆಯಲ್ಲಿ ಬೇಯುತ್ತಿದ್ದರು ಮುಖದಲ್ಲಿ ಸದಾ ಮಂದಹಾಸವನ್ನು ಹೊಂದಿರೋ ಮೀನಾ ಈ ಕತೆಯ ನಾಯಕಿ. ಮನೆಯ ಕಷ್ಟಕ್ಕಾಗಿ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ, ಹೆತ್ತವರಿಗೆ ಸಹಕರಿಸುತ್ತಿರೋ ಮುಗ್ದ ಮನಸಿನ ಕಣ್ಮಣಿ. ತಮ್ಮ-ತಂಗಿಯರ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುತ್ತಿರುವ ತಾಯಿಯ ಎರಡನೇ ರೂಪ ಈ ಮೀನಾ .

    ಒಂದ್ಕಡೆ ಜೀವನದಲ್ಲಿ ಗುರಿ, ಆಸೆಯೇ ಇಲ್ಲದಿರೋ ಹುಡುಗ ಸೂರ್ಯ, ಇನ್ನೊಂದ್ಕಡೆ ಮನೆಯವರ ಖುಷಿಗಾಗಿ ತುಂಬಾ ಆಸೆಯನ್ನು ಇಟ್ಟುಕೊಂಡಿರೋ ಮೀನಾ. ತದ್ವಿರುದ್ದವಾಗಿರುವ ಮೀನಾ ಹಾಗು ಸೂರ್ಯನ ಬದುಕು ಎದುರು ಬದುರಾದ್ರೆ ಮುಂದೇನಾಗುತ್ತೆ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

    ಈ ಧಾರಾವಾಹಿಯಲ್ಲಿ ನಟ, ರಂಗಭೂಮಿ ಕಲಾವಿದರಾದ ಮಂಡ್ಯ ರಮೇಶ್ (Mandya Ramesh) ಅವರು ಮುಖ್ಯ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಜೊತೆಗೆ ನಿನಾದ್, ಪ್ರಿಯಾಂಕಾ, ಸ್ನೇಹಾ, ನಾಗೇಂದ್ರ ಶಾ, ಪ್ರಗತಿ, ನಂದೀಶ್, ಲಕ್ಷ್ಮಿ ಚಂದ್ರಶೇಖರ್ ಸೇರಿದಂತೆ ಇನ್ನು ಅನೇಕ ಪ್ರತಿಭಾನ್ವಿತ ಕಲಾವಿದರು ಈ  ಅಭಿನಯಿಸುತ್ತಿದ್ದಾರೆ. ಈಗಾಗಲೇ ಧಾರಾವಾಹಿಯ ಶೀರ್ಷಿಕೆ ಗೀತೆಯಂತೂ ನೋಡುಗರ ಮನಗೆದ್ದು ಪ್ರಶಂಸೆಗೆ ಪಾತ್ರವಾಗಿದೆ. ಇದೇ ಸೋಮವಾರದಿಂದ ರಾತ್ರಿ 7.30 ಕ್ಕೆ ಧಾರಾವಾಹಿಯ ಪ್ರಸಾರವಾಗಲಿದೆ.