Tag: ಧಾರವಾಡ

  • ಕಾಣೆಯಾಗಿದ್ದ ಬಾಲಕ ಕೆರೆಯಲ್ಲಿ ಶವವಾಗಿ ಪತ್ತೆ

    ಕಾಣೆಯಾಗಿದ್ದ ಬಾಲಕ ಕೆರೆಯಲ್ಲಿ ಶವವಾಗಿ ಪತ್ತೆ

    ಧಾರವಾಡ: ಕಾಣೆಯಾಗಿದ್ದ ಬಾಲಕನೋರ್ವ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಧಾರವಾಡ (Dharawada) ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ.

    ನರೇಂದ್ರ (Naredra) ಗ್ರಾಮದ ಮೈಲಾರ ಹುಲಮನಿ (12) ಶವವಾಗಿ ಪತ್ತೆಯಾದ ಬಾಲಕ. ಮಂಗಳವಾರ ಮೈಲಾರ ಮನೆಯಿಂದ ಬಾಲಕ ನಾಪತ್ತೆಯಾಗಿದ್ದ. ಆತನಿಗಾಗಿ ಹುಡುಕಾಟ ಸಹ ನಡೆಸಲಾಗಿತ್ತು. ಆದರೆ, ಇಂದು (ಗುರುವಾರ) ಬೆಳಗಿನಜಾವ ಬಾಲಕ ಮೈಲಾರ, ನರೇಂದ್ರ ಗ್ರಾಮದ ದ್ಯಾಮಡ್ಡಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಇದನ್ನೂ ಓದಿ: ಸುವರ್ಣ ಮಹೋತ್ಸವ ಪ್ರಶಸ್ತಿ ಮೊತ್ತ 50 ಸಾವಿರದಿಂದ 1 ಲಕ್ಷಕ್ಕೆ ಏರಿಕೆ: ಶಿವರಾಜ್ ತಂಗಡಗಿ ಘೋಷಣೆ

    ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಬಳಿಕ ಬಾಲಕನ ಶವವನ್ನು ಹೊರತೆಗೆದು ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ; ಗೋಡೌನ್‌ನಲ್ಲಿ ಶೇಖರಿಸಿಟ್ಟಿದ್ದ ಬಂಡಲ್‌ಗಟ್ಟಲೇ ಸೀರೆ, ಪಂಚೆ ಜಪ್ತಿ

  • ವಕ್ಫ್ ಆಸ್ತಿ ವಿವಾದ – ವರ್ಷದ ಹಿಂದೆಯೇ ಪ್ರಧಾನಿ ಗಮನ ಸೆಳೆಯಲು ಯತ್ನ

    ವಕ್ಫ್ ಆಸ್ತಿ ವಿವಾದ – ವರ್ಷದ ಹಿಂದೆಯೇ ಪ್ರಧಾನಿ ಗಮನ ಸೆಳೆಯಲು ಯತ್ನ

    ಧಾರವಾಡ: ಒಂದು ವರ್ಷದ ಹಿಂದೆಯೇ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ವಿಚಾರವಾಗಿ ಸಾಮಾಜಿಕ ಕಾರ್ಯಕರ್ತರೊಬ್ಬರು ಪ್ರಧಾನಿ ಮೋದಿ (PM Narendra Modi) ಗಮನ ಸೆಳೆಯಲು ಯತ್ನಿಸಿರುವ ಸನ್ನಿವೇಶ ತಡವಾಗಿ ಬೆಳಿಕಿಗೆ ಬಂದಿದೆ.

    ಹೌದು. ಧಾರವಾಡದ (Dharwad) ಉಪ್ಪಿನಬೆಟಗೇರಿ (Uppinbetageri) ಗ್ರಾಮದ ಸಾಮಾಜಿಕ ಕಾರ್ಯಕರ್ತ ಕೃಷ್ಣಪ್ಪ ಬುದ್ನಿ ಎಂಬುವವರು ಕಳೆದ ವರ್ಷ ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಬರುವುದನ್ನು ತಡೆಯುವಂತೆ ಆಗ್ರಹಿಸಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು.ಇದನ್ನೂ ಓದಿ: ಆರ್‌.ಆರ್‌ ನಗರ ದರ್ಶನ್ ನಿವಾಸದ ಬಳಿ ಪೊಲೀಸರ ಬಿಗಿ ಭದ್ರತೆ – ನಾಳೆ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ

    ಉಪ್ಪಿನಬೆಟಗೇರಿ ಗ್ರಾಮದ ಅನೇಕ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಹೆಸರು ಉಲ್ಲೇಖಿಸಲಾಗಿತ್ತು. ಇದಕ್ಕಾಗಿ ರೈತರು ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದಾಗಿ ಕೃಷ್ಣಪ್ಪ ಪ್ರಧಾನಿ ಮೋದಿ ಗಮನಕ್ಕೆ ತರಬೇಕೆಂಬ ನಿಟ್ಟಿನಲ್ಲಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು.

    ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಬರುವುದನ್ನು ತಡೆಯುವಂತೆ ಆಗ್ರಹಿಸಿ ಹಾಗೂ ಯಾವ ಮಾನದಂಡದ ಮೇಲೆ ಹೀಗೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿ ಕೃಷ್ಣಪ್ಪ ಪತ್ರ ಬರೆದಿದ್ದರು. 2023ರ ನ.28ರಂದು ಪ್ರಧಾನಿಗೆ ಪತ್ರ ಕಳುಹಿಸಿದ್ದರು. ಡಿ.2ರಂದು ಪತ್ರ ಪ್ರಧಾನಿ ಕಚೇರಿ ತಲುಪಿದ್ದು, ಡಿ.8ರಂದು ಕೃಷ್ಣಪ್ಪಗೆ ಪಿಎಂ ಕಚೇರಿಯಿಂದ ಕರೆ ಬಂದಿತ್ತು. ಪತ್ರ ಬರೆದು, ದೂರು ಕೊಡುತ್ತಿರುವುದು ನೀವೆನಾ? ಎಂದು ಸಿಬ್ಬಂದಿ ಪ್ರಶ್ನಿಸಿ, ಖಚಿತಪಡಿಸಿಕೊಂಡಿದ್ದರು. ಜೊತೆಗೆ ನಿಮ್ಮ ದೂರು ಪ್ರಧಾನಿಗಳ ಗಮನಕ್ಕೆ ತರುವುದಾಗಿ ಸಿಬ್ಬಂದಿ ತಿಳಿಸಿದ್ದರು.

    ಇದೀಗ ಮತ್ತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ವಿವಾದ ಬುಗಿಲೆದ್ದಿದೆ.ಇದನ್ನೂ ಓದಿ: 2 ದಿನಗಳಿಂದ ನಾಪತ್ತೆಯಾಗಿದ್ದ 50ರ ಮಹಿಳೆಯ ಮೃತದೇಹ 6 ತುಂಡುಗಳಾಗಿ ಪತ್ತೆ

  • ಜಮೀರ್ ಅಹ್ಮದ್ ಎರಡನೇ ಟಿಪ್ಪು, ಔರಂಗಜೇಬ್ ಥರ ಮೆರೆಯುತ್ತಿದ್ದಾರೆ: ಮುತಾಲಿಕ್

    ಜಮೀರ್ ಅಹ್ಮದ್ ಎರಡನೇ ಟಿಪ್ಪು, ಔರಂಗಜೇಬ್ ಥರ ಮೆರೆಯುತ್ತಿದ್ದಾರೆ: ಮುತಾಲಿಕ್

    ಧಾರವಾಡ: ಜಮೀರ್ ಅಹ್ಮದ್ (Zameer Ahmed Khan ) ಎರಡನೇ ಟಿಪ್ಪು, ಔರಂಗಜೇಬ್ ಥರ ಮೆರೆಯುತ್ತಿದ್ದಾರೆ. ತಾಕತ್ ಇದ್ದರೆ ರೈತರ ಜಮೀನು ವಕ್ಫ್ ಬೋರ್ಡ್‌ಗೆ ರಿಜಿಸ್ಟರ್ ಮಾಡಲಿ ನೋಡೋಣ. ಇದು ಜಮೀರ್‌ಗೆ ನಮ್ಮ ಸವಾಲು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿದ್ದಾರೆ.

    ರೈತರ ಪಹಣಿಯಲ್ಲಿ ವಕ್ಫ್ ಹೆಸರು ವಿಚಾರವಾಗಿ ಧಾರವಾಡದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಪ್ರಮೋದ್ ಮುತಾಲಿಕ್ ಕೂಡಾ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ತಾಕತ್ ಇದ್ದರೆ ರೈತರ ಜಮೀನು ವಕ್ಫ್ ಬೋರ್ಡ್‌ಗೆ ರಿಜಿಸ್ಟರ್ ಮಾಡಲಿ ನೋಡೋಣ. ಇದು ಜಮೀರ್‌ಗೆ ನಮ್ಮ ಸವಾಲು. ಮುತವಲ್ಲಿಯಿಂದ ಪತ್ರ ಕೇಳಿದ್ದಾರೆ. ಆತ ಮುಸ್ಲಿಂ ಸಮಾಜ, ಮಸೀದಿಗೆ ಸಂಬಂಧಿಸಿದಾತ. ಈ ಎಲ್ಲದರ ಬಗ್ಗೆ ತನಿಖೆ ಆಗಿ ಕ್ರಮ ಆಗಬೇಕು. ರೈತರಿಗೆ ಮುಕ್ತ ಅವಕಾಶ ಸಿಗಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಒಳಮೀಸಲಾತಿ ಜಾರಿಗೆ ನಾವು ವಿರುದ್ಧವಾಗಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳ ಮಾತು ಸತ್ಯಕ್ಕೆ ದೂರ: ಪರಮೇಶ್ವರ್

    ಈ ವೇಳೆ ಅಧಿಕಾರಿಗಳ ಮೇಲೆ ಕಿಡಿಕಾರಿದ ಅವರು, ರಾಜ್ಯ ಸರ್ಕಾರಕ್ಕೆ ಕೂಡಾ ಎಚ್ಚರಿಕೆ ನೀಡಿದರು. ಇವತ್ತು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಿದ್ದೇವೆ. ರೈತ ಸಂಘ, ಭಾರತೀಯ ಕಿಸಾನ್ ಸಂಘ, ದಲಿತ ಸಂಘಟನೆಗಳು ಬೆಂಬಲ ಕೊಟ್ಟಿವೆ. ಹಿಂದೂ ಸಂಘಟನೆಗಳು, ಬಿಜೆಪಿಯ ಮಾಜಿ ಶಾಸಕರು ಭಾಗವಹಿಸಿದ್ದರು. ತಹಸೀಲ್ದಾರ್ ಮಾಡಿದ ತಪ್ಪು ತಿದ್ದುಪಡಿಗೆ ಆಗ್ರಹಿಸಿದ್ದೇವೆ. ರೈತರನ್ನು ನಾಲ್ಕು ವರ್ಷದಿಂದ ಓಡಾಡಿಸಿದ್ದಾರೆ. ತಹಸೀಲ್ದಾರ್ ಕಚೇರಿ-ವಕ್ಫ್ ಬೋರ್ಡ್ ಕಚೇರಿ ಮಧ್ಯೆ ಓಡಾಡಿಸಿದ್ದಾರೆ ಎಂದರು. ಇದನ್ನೂ ಓದಿ: ಜಯನಗರ ಕ್ಷೇತ್ರಕ್ಕೆ ಅನುದಾನ ನೀಡದ್ದನ್ನ ಮತ್ತೆ ಸಮರ್ಥಿಸಿಕೊಂಡ ಡಿಸಿಎಂ

    ನೆಲದ ಮೇಲೆ ಕುಳಿತು ಪ್ರತಿಭಟಿಸುವವರೆಗೂ ಇವರು ಎಚ್ಚರಗೊಳ್ಳುವುದಿಲ್ಲವಾ? ಯಾರಿಗೆ ಅನ್ಯಾಯವಾಗಿದೆ ಇವರಿಗೆ ಗೊತ್ತಾಗುವುದಿಲ್ಲವಾ? ಎಸಿ, ಡಿಸಿ, ತಹಸೀಲ್ದಾರ್ ಇರೋದು ಏತಕ್ಕೆ ಎಂದ ಅವರು, ಧಾರವಾಡದ (Dharawada) ಎಸಿ ರೈತರ ಜೊತೆ ಉದ್ಧಟತನದಿಂದ ಮಾತನಾಡಿದ್ದಾರೆ. ರೈತರ ಬಗ್ಗೆ ಮಾತನಾಡುವಷ್ಟು ಧೈರ್ಯ ಬಂತಾ? ರೈತರನ್ನು ಓಡಾಡಿಸುವಷ್ಟು ಧೈರ್ಯ ಬಂತಾ? ಎಂದು ಕಿಡಿಕಾರಿದರು. ಇದನ್ನೂ ಓದಿ: ಜಯನಗರ ಕ್ಷೇತ್ರಕ್ಕೆ ಅನುದಾನ ನೀಡದ್ದನ್ನ ಮತ್ತೆ ಸಮರ್ಥಿಸಿಕೊಂಡ ಡಿಸಿಎಂ

  • ಮೀಸಲು ಪಡೆಯ ಹೆಡ್‌ಕಾನ್‌ಸ್ಟೇಬಲ್ ಹೃದಯಾಘಾತದಿಂದ ಸಾವು

    ಮೀಸಲು ಪಡೆಯ ಹೆಡ್‌ಕಾನ್‌ಸ್ಟೇಬಲ್ ಹೃದಯಾಘಾತದಿಂದ ಸಾವು

    ಧಾರವಾಡ: ಮೀಸಲು ಪಡೆಯ ಹೆಡ್‌ಕಾನ್‌ಸ್ಟೇಬಲ್ (Headconstable) ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡ ಶಹರ ಸಶಸ್ತ್ರ ಮೀಸಲು ಪಡೆಯ ಹೆಡ್‌ಕಾನ್‌ಸ್ಟೇಬಲ್ ಭೀಮಣ್ಣ ಸತ್ಯಪ್ಪನವರ (56) ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ. ರಾತ್ರಿ ಧಾರವಾಡ (Dharawada) ಜಿಲ್ಲಾಡಳಿತದ ಎಲೆಕ್ಷನ್ ಸೆಲ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಭೀಮಣ್ಣ ಬೆಳಗ್ಗೆ ಮನೆಗೆ ಹೋದಾಗ ಹೃದಯಾಘಾತವಾಗಿದೆ. ಇದನ್ನೂ ಓದಿ: ಬುಧವಾರ ಜಮೀರ್ ಜೊತೆ ತೆರಳಿ ನಾಮಪತ್ರ ವಾಪಸ್ ಪಡೆಯುತ್ತೇನೆ: ಅಜ್ಜಂಪೀರ್ ಖಾದ್ರಿ

    ಮಾಜಿ ಯೋಧರಾಗಿದ್ದ ಭೀಮಣ್ಣ ಸೇನೆಯ ಸೇವೆಯ ಬಳಿಕ ಪೊಲೀಸ್ ಇಲಾಖೆ ಸೇರಿದ್ದರು. ಇವರು 2016ರಲ್ಲಿ ಪೊಲೀಸ್ ಸೇವೆಗೆ ಭರ್ತಿಯಾಗಿದ್ದರು. ಇದನ್ನೂ ಓದಿ: ದೇಶಕ್ಕೆ ಕತ್ತಲ ರಾತ್ರಿಯ ರಾಜಕಾರಣ ಪರಿಚಯಿಸಿದ್ದೇ ಕಾಂಗ್ರೆಸ್: ಬೊಮ್ಮಾಯಿ

  • ಜಮೀನುಗಳು ವಕ್ಫ್ ಆಸ್ತಿಗೆ ಜೋಡಣೆ – ಧಾರವಾಡದಲ್ಲೂ ರೈತರ ಪರದಾಟ

    ಜಮೀನುಗಳು ವಕ್ಫ್ ಆಸ್ತಿಗೆ ಜೋಡಣೆ – ಧಾರವಾಡದಲ್ಲೂ ರೈತರ ಪರದಾಟ

    ಧಾರವಾಡ: ಪಿತ್ರಾರ್ಜಿತವಾಗಿ ಉಳುಮೆ ಮಾಡುತ್ತ ಬಂದಿರುವ ರೈತರ ಜಮೀನುಗಳು ಇದೀಗ ವಕ್ಫ್ ಆಸ್ತಿಗೆ (Waqf Land) ಒಳಪಡುತ್ತಿವೆ. ಧಾರವಾಡ (Dharawada) ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಅನೇಕ ರೈತರ ಜಮೀನುಗಳು ವಕ್ಫ್ ಆಸ್ತಿಗೆ ಒಳಪಟ್ಟಿರುವುದಾಗಿ ಪಹಣಿ ಪತ್ರದಲ್ಲಿ ನಮೂದಾಗಿದ್ದು, ಇದರ ತಿದ್ದುಪಡಿಗಾಗಿ ರೈತರು ಪರದಾಡುತ್ತಿದ್ದಾರೆ. ಇತ್ತೀಚೆಗೆ ವಿಜಯಪುರದಲ್ಲಿ ವಕ್ಫ್‌ ಮಂಡಳಿ ರೈತರಿಗೆ ನೋಟಿಸ್‌ ನೀಡಿದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.

    ತಮ್ಮ ಜಮೀನನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವ ಈ ರೈತರೆಲ್ಲ ಉಪ್ಪಿನ ಬೆಟಗೇರಿ ಗ್ರಾಮದವರು. 3 ಎಕರೆ, 5 ಎಕರೆ ಹಾಗೂ 20 ಎಕರೆ ಹೊಲಗಳ ಪಹಣಿ ಪತ್ರದಲ್ಲಿ 2021, 2022 ಹಾಗೂ 2023 ರಲ್ಲಿ ರೈತರ ಜಮೀನುಗಳು ವಕ್ಫ್ ಆಸ್ತಿಗೆ ಒಳಪಟ್ಟಿವೆ ಎಂದು ನಮೂದಾಗಿದೆ. ಇದೇ ಪಹಣಿ ಪತ್ರದಲ್ಲಿ 2018, 2019ರಲ್ಲಿ ತೆಗೆದು ನೋಡಿದಾಗ ಅದರಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿಲ್ಲ. 2021, 2022ರಲ್ಲಿ ಈ ರೀತಿ ಪಹಣಿ ಪತ್ರದ ಋಣಗಳು ಕಾಲಂನಲ್ಲಿ ವಕ್ಫ್ ಆಸ್ತಿಗೆ ಜಮೀನು ಒಳಪಟ್ಟಿದೆ ಎಂದು ನಮೂದಾಗಿದೆ. ಇದನ್ನೂ ಓದಿ: ಇದು ರಾಜ್ಯದ ಭವಿಷ್ಯ ರೂಪಿಸುವ ಉಪಚುನಾವಣೆ, ನಿಖಿಲ್ ಗೆಲ್ಲಿಸಿ ಬದಲಾವಣೆಗೆ ಮುಂದಾಗಬೇಕು: ಯದುವೀರ್ ಒಡೆಯರ್

    ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ (Betageri) ಗ್ರಾಮದ ಜವಳಗಿ, ಮಸೂತಿ ಹಾಗೂ ಹುಟಗಿ ಎಂಬ ಕುಟುಂಬಕ್ಕೆ ಸೇರಿದ ಜಮೀನುಗಳು ಪಿತ್ರಾರ್ಜಿತವಾಗಿದ್ದು, ಅವುಗಳನ್ನು ಈ ರೈತರು ಯಾರಿಂದಲೂ ದಾನವಾಗಿ ಪಡೆದಿಲ್ಲ ಆದರೂ ಇವರ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿಗೆ ಈ ಜಮೀನು ಒಳಪಟ್ಟಿದೆ ಎಂದು ನಮೂದಾಗಿದ್ದು, ಅದನ್ನು ತೆಗೆದು ಹಾಕಲು ರೈತರು ವಕ್ಫ್ ಕಚೇರಿ, ತಹಶೀಲ್ದಾರ್ ಕಚೇರಿಗೆ ಅಲೆದಾಡಿದರೂ ಅಧಿಕಾರಿಗಳು ಮಾತ್ರ ಯಾವುದಕ್ಕೂ ಸ್ಪಂದನೆ ನೀಡಲಿಲ್ಲ. ಇದನ್ನೂ ಓದಿ: ಸಂಡೂರು| ಅಭ್ಯರ್ಥಿ ಪರ ಪ್ರಚಾರದಿಂದ ಕಾಂಗ್ರೆಸ್‌ ಶಾಸಕರು ದೂರ ದೂರ

    ಮರಬಸಪ್ಪ ಮಸೂತಿ ಅವರಿಗೆ ಸೇರಿದ 3 ಎಕರೆ 13 ಗುಂಟೆ, ಮಲ್ಲಿಕಾರ್ಜುನ ಹುಟಗಿ ಅವರಿಗೆ ಸೇರಿದ 5 ಎಕರೆ 37 ಗುಂಟೆ ಹಾಗೂ ಜವಳಗಿ ಅವರ ಕುಟುಂಬಕ್ಕೆ ಸೇರಿದ ಒಟ್ಟು 20 ಎಕರೆ ಜಮೀನು ವಕ್ಫ್ ಆಸ್ತಿಗೆ ಒಳಪಟ್ಟಿದೆ ಎಂದು ನಮೂದಾಗಿದೆ. ಪಿತ್ರಾರ್ಜಿತವಾಗಿ ಸಾಗುವಳಿ ಮಾಡುತ್ತ ಬಂದಿರುವ ಆಸ್ತಿ ಇದ್ದಕ್ಕಿದ್ದಂತೆ ವಕ್ಫ್ ಆಸ್ತಿಗೆ ಒಳಪಟ್ಟಿದೆ ಎಂದು ನಮೂದಾಗಿರುವುದರಿಂದ ರೈತರಿಗೆ ಬರಸಿಡಿಲು ಬಡಿದಂತಾಗಿದ್ದು, ರೈತರು ತಮ್ಮ ಜಮೀನು ಉಳಿಸಿಕೊಳ್ಳಲು ಈಗ ಹೋರಾಟ ಮಾಡುವಂತಾಗಿದೆ.  ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಅಬ್ಬರದ ಪ್ರಚಾರ – 10,000 ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದ ಭರತ್ ಬೊಮ್ಮಾಯಿ

  • ಧಾರವಾಡ| ನದಿಯಲ್ಲಿ ಕೊಚ್ಚಿ ಹೋಯ್ತು ಕಾರು- ಮರ ಏರಿದ್ದ ಚಾಲಕನ ರಕ್ಷಣೆ

    ಧಾರವಾಡ| ನದಿಯಲ್ಲಿ ಕೊಚ್ಚಿ ಹೋಯ್ತು ಕಾರು- ಮರ ಏರಿದ್ದ ಚಾಲಕನ ರಕ್ಷಣೆ

    ಧಾರವಾಡ: ತುಂಬಿ ಹರಿಯುತ್ತಿದ್ದ ಶಾಲ್ಮಲಾ ನದಿಗೆ (Shalmala River) ಕಾರು ಸಮೇತ ಸಿಲುಕಿದ್ದ ಚಾಲಕನನ್ನು ರಕ್ಷಿಸುವಲ್ಲಿ ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಸಾರ್ವಜನಿಕರು ಯಶಸ್ವಿಯಾಗಿದ್ದಾರೆ. ಈ ಘಟನೆಯು ಧಾರವಾಡ (Dharawada) ಜಿಲ್ಲೆಯ ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ-ಬೇಗೂರು ನಡುವೆ ಮಂಗಳವಾರ ತಡರಾತ್ರಿ ನಡೆದಿದೆ.

    ಧಾರವಾಡ ತಾಲೂಕಿನ ಪುಡಕಲಕಟ್ಟಿ ಗ್ರಾಮದ ನಾಗರಾಜ ದೇಮಣ್ಣವರ ಬೇಗೂರು ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ನೀರಿನ ರಭಸಕ್ಕೆ ಕಾರು ಸಮೇತ ಕೊಚ್ಚಿ ಹೋಗಿತ್ತು. ಚಾಲಕ ಅಪಾಯಕ್ಕೆ ಸಿಲುಕಿದ್ದು, ಕೊಚ್ಚಿ ಹೋಗುವ ಸಮಯದಲ್ಲಿ ಕಾರಿನಿಂದ ಆತ ಮರವೇರಿದ್ದಾನೆ. ಇದನ್ನೂ ಓದಿ: ಬೆಂಗಳೂರು ಕಟ್ಟಡ ಕುಸಿತ- ಮಾಲೀಕ, ಮಗನ ವಿರುದ್ಧ ಎಫ್‌ಐಆರ್ ದಾಖಲು

    ಇದನ್ನ ಗಮನಿಸಿದ ಸ್ಥಳೀಯರು ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯುವಕನ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ತುಂಗಭದ್ರಾ ನದಿಗೆ 1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ – ಮುಳುಗಡೆ ಹಂತ ತಲುಪಿದ ಕಂಪ್ಲಿ ಸೇತುವೆ

  • ಉಪಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಹೈಕಮಾಂಡ್ ನಿರ್ಣಯವೇ ಅಂತಿಮ: ಸಚಿವ ಲಾಡ್

    ಉಪಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಹೈಕಮಾಂಡ್ ನಿರ್ಣಯವೇ ಅಂತಿಮ: ಸಚಿವ ಲಾಡ್

    ಧಾರವಾಡ: ಶಿಗ್ಗಾಂವಿ, ಸಂಡೂರು (Sandur) ಹಾಗೂ ಚನ್ನಪಟ್ಟಣ ಉಪಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

    ಧಾರವಾಡದಲ್ಲಿ 9Dharawada) ಮಾತನಾಡಿದ ಅವರು, ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಭಾನುವಾರ ಸಿಎಂ ಅವರು ಸಭೆ ಕರೆದು ಸಚಿವರು ಹಾಗೂ ಡಿಸಿಎಂ ಜೊತೆ ಚರ್ಚೆ ಮಾಡಿದ್ದಾರೆ. ನಾವೆಲ್ಲ ನಮ್ಮ ಅಭಿಪ್ರಾಯ ಮಂಡನೆ ಮಾಡಿದ್ದೇವೆ. ಇವತ್ತು ಅಥವಾ ನಾಳೆ ಹೈಕಮಾಂಡ್‌ನಿಂದ ಅಂತಿಮ ತೀರ್ಮಾನ ಬರಲಿದೆ. ಶಿಗ್ಗಾಂವಿ ಟಿಕೆಟ್ ಹಂಚಿಕೆಯಲ್ಲೂ ನಾವು ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಕೊನೆಯದಾಗಿ ಹೈಕಮಾಂಡ್‌ನಿಂದ ಏನು ತೀರ್ಮಾನ ಬರುತ್ತದೋ ಅದುವೇ ಅಂತಿಮ ಎಂದರು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಯೋಗೇಶ್ವರ್‌ ಕಣಕ್ಕ

    ಸಿ.ಪಿ.ಯೋಗೇಶ್ವರ್ ( C P Yogeshwar) ಅವರನ್ನು ಕಾಂಗ್ರೆಸ್‌ಗೆ ಕರೆತರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಆ ಭಾಗದಲ್ಲಿ ನನಗೆ ಜಾಸ್ತಿ ಮಾಹಿತಿ ಇಲ್ಲ. ನಮ್ಮ ಅಧ್ಯಕ್ಷರಿಗೆ ಹಾಗೂ ಸಿಎಂಗೆ ಅಲ್ಲಿ ಹೆಚ್ಚಿನ ಜವಾಬ್ದಾರಿ ಇದೆ. ಹೈಕಮಾಂಡ್ ಜೊತೆ ಮಾತನಾಡಿ ಅವರೇ ಅಂತಿಮ ತೀರ್ಮಾನ ಮಾಡುತ್ತಾರೆ. ಅದರ ಬಗ್ಗೆ ನನಗೆ ಹೆಚ್ಚಿಗೆ ಮಾಹಿತಿ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಮಾಸ್‌ ರೇಪಿಸ್ಟ್‌ ಎಂದ ರಾಹುಲ್‌ಗೆ ರಿಲೀಫ್‌ – ಅರ್ಜಿ ವಜಾ, 25 ಸಾವಿರ ದಂಡ

    ಈ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಚನ್ನಪಟ್ಟಣದಲ್ಲಿ( Channapatna) ಪಾರ್ಲಿಮೆಂಟ್ ಚುನಾವಣೆಯಲ್ಲಿ ನಾವೇ ಲೀಡ್ ಆಗಿದ್ದೇವೆ. ಶಿಗ್ಗಾಂವಿಯಲ್ಲೂ ಲೀಡ್ ಆಗಿದ್ದೇವೆ. ಸಂಡೂರಿನಲ್ಲೂ ಸಹ ಎರಡು ಬಾರಿ ಲೀಡ್ ಆಗಿದ್ದೇವೆ. ಹೀಗಾಗಿ ಮೂರಕ್ಕೆ ಮೂರೂ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಮ್ಮು-ಕಾಶ್ಮೀರದ ಉಗ್ರದಾಳಿಯ ಹೊಣೆ ಹೊತ್ತ ಪಾಕ್ ಟಿಆರ್‌ಎಫ್ ಸಂಘಟನೆ

  • ಧಾರವಾಡ| ಮಳೆಗೆ ತುಂಬಿ ಹರಿಯುತ್ತಿರುವ ಹಳ್ಳಗಳು

    ಧಾರವಾಡ| ಮಳೆಗೆ ತುಂಬಿ ಹರಿಯುತ್ತಿರುವ ಹಳ್ಳಗಳು

    ಧಾರವಾಡ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ತಡ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಳ್ಳಗಳು ತುಂಬಿ ಹರಿಯುತ್ತಿವೆ.

    ಧಾರವಾಡ (Dharawada) ತಾಲೂಕಿನ ದಾಸನಕೊಪ್ಪ ಗ್ರಾಮದ ಬಳಿ ಸಣ್ಣ ಹಳ್ಳ ತುಂಬಿ ಹರಿಯುತ್ತಿದೆ. ಇದರಿಂದ ಧಾರವಾಡ ಲಕಮಾಪೂರ ರಸ್ತೆ ಕಡಿತವಾಗಿತ್ತು. ಈಗ ನೀರಿನ ಪ್ರಮಾಣ ಕಡಿಮೆಯಾದ ಹಿನ್ನೆಲೆ ಸಂಚಾರ ಆರಂಭಗೊಂಡಿದೆ. ಇದನ್ನೂ ಓದಿ: ಪ್ರತೀಕಾರಕ್ಕೆ ಕೃತ್ಯ ಎಂದು ಪೋಸ್ಟ್‌ – ದೆಹಲಿ ಸ್ಫೋಟಕ್ಕೆ ಖಲಿಸ್ತಾನಿ ನಂಟು, ತನಿಖೆ ಆರಂಭ

    ಹೊಲದ ಬದು ಕೂಡಾ ಕೊಚ್ಚಿ ಹೋಗಿವೆ. ಮತ್ತೊಂದು ಕಡೆ ಬೆಣ್ಣಿ ಹಳ್ಳ ಮತ್ತು ತುಪ್ರಿ ಹಳ್ಳದಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಇದನ್ನೂ ಓದಿ:  ರಾಯಚೂರು| ಸಾರಿಗೆ ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು – ಚಾಲಕ ಪರಾರಿ

  • ಬೆಣ್ಣೆ ಹಳ್ಳ ನೀರಿಗೆ ಸಿಲುಕಿದ ಮೂವರು, 150 ಕುರಿಗಳು- ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣೆ

    ಬೆಣ್ಣೆ ಹಳ್ಳ ನೀರಿಗೆ ಸಿಲುಕಿದ ಮೂವರು, 150 ಕುರಿಗಳು- ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣೆ

    – ಧಾರಾಕಾರ ಮಳೆಗೆ ಬೆಣ್ಣೆ ಹಳ್ಳ ಪ್ರವಾಹ ಪರಿಸ್ಥಿತಿ ನಿರ್ಮಾಣ

    ಹುಬ್ಬಳ್ಳಿ: ಧಾರಾಕಾರ ಮಳೆಗೆ ದೇವನೂರು ಬಳಿಯ ಬೆಣ್ಣೆ ಹಳ್ಳದಲ್ಲಿ (Bennehalla) ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಣ್ಣೆ ಹಳ್ಳದ ನೀರಿಗೆ ಸಿಲುಕಿ ಹಾಕಿಕೊಂಡಿದ್ದ ಮೂವರನ್ನು ಹಾಗೂ 150 ಕುರಿಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಈ ಘಟನೆ ಧಾರವಾಡ (Dharawada) ಜಿಲ್ಲೆಯ ಕುಂದಗೋಳ ತಾಲೂಕಿನ ದೇವನೂರು ಗ್ರಾಮದ ಬಳಿ ನಡೆದಿದೆ.

    ಕುರಿಗಳನ್ನು ಮೇಯಿಸಲು ಹೋದ ಹನುಮಂತ ಬೆನಕನಹಳ್ಳಿ, ಮಂಜಪ್ಪ ಬೆನಕನಹಳ್ಳಿ ಮತ್ತು ಇನ್ನೋರ್ವ ವ್ಯಕ್ತಿ ಸೇರಿ 150 ಕುರಿಗಳು ನೀರಿನ ಪ್ರವಾಹಕ್ಕೆ ಸಿಲುಕಿದ್ದನ್ನು ಕಂಡು ಸ್ಥಳೀಯರು ತಾಲೂಕು ಆಡಳಿತಕ್ಕೆ ಕರೆ ಮಾಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯ ಪ್ರವೃತ್ತವಾಗಿ ರಭಸದಿಂದ ಹರಿಯುತ್ತಿರುವ ನೀರಿನ ಮಧ್ಯೆ ಹಗ್ಗ ಕಟ್ಟಿ ಮೂವರು ವ್ಯಕ್ತಿಗಳು ಮತ್ತು ಕುರಿಗಳ ರಕ್ಷಣೆ ಮಾಡಿದ್ದಾರೆ. ಮತ್ತೊಂದು ಕಡೆ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಹಲವು ಅವಾಂತರಗಳು ಸೃಷ್ಟಿಯಾಗಿದೆ. ಇದನ್ನೂ ಓದಿ: ಅಮಿತ್ ಶಾ ಮಾತು ಕೇಳಿದ್ದೇ ತಪ್ಪಾಯ್ತಾ? – ಈಶ್ವರಪ್ಪ ಬೇಸರ

    ಕುಂದಗೋಳ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಿರೇಹರಕುಣಿ ಹಾಗೂ ಶಿಶುನಾಳ ಗ್ರಾಮದ ನಡುವೆ ಸಂಚಾರ ಸ್ಥಗಿತಗೊಂಡಿದೆ. ಸೊಟ್ಟ ಹಳ್ಳದ ನೀರಿನಿಂದಾಗಿ ಗ್ರಾಮಸ್ಥರು ಹಾಗೂ ರೈತರು ಪರದಾಟ ನಡೆಸಿದ್ದಾರೆ. ಶಿಗಿ ಹುಣ್ಣಿಮೆ ಹಿನ್ನೆಲೆ ಜಮೀನಿಗೆ ತೆರಳಬೇಕಿದ್ದ ರೈತರು ಹಳ್ಳದ ದಡದಲ್ಲಿಯೇ ಪೂಜೆ ಸಲ್ಲಿಸಿ ಮರಳಿದ್ದಾರೆ. ಕುಂದಗೋಳ ತಾಲೂಕಿನ ಹಿರೇಹರಕುಣಿ ಹಾಗೂ ಶಿಶುನಾಳ ಗ್ರಾಮದ ನಡುವೆ ಬರುವ ಸೊಟ್ಟ ಹಳ್ಳದಲ್ಲಿ ಮಳೆ ನೀರು ತುಂಬಿ ಬಂದು ಎರಡು ಗ್ರಾಮದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದನ್ನೂ ಓದಿ: Russia – Ukraine War | ರಷ್ಯಾ ಪರ 12,000 ಸೈನಿಕರನ್ನು ಕಳುಹಿಸಿದ ಉತ್ತರ ಕೊರಿಯಾ

  • ಧಾರವಾಡ| ಮಳೆ ಅವಾಂತರ- ಕೊಚ್ಚಿ ಹೋಯ್ತು ನಿರ್ಮಾಣ ಹಂತದಲ್ಲಿದ್ದ ರಸ್ತೆ

    ಧಾರವಾಡ| ಮಳೆ ಅವಾಂತರ- ಕೊಚ್ಚಿ ಹೋಯ್ತು ನಿರ್ಮಾಣ ಹಂತದಲ್ಲಿದ್ದ ರಸ್ತೆ

    ಧಾರವಾಡ: ಮಳೆ ಅವಾಂತರದಿಂದ ನಿರ್ಮಾಣ ಹಂತದಲ್ಲಿರುವ ರಸ್ತೆ ಕೊಚ್ಚಿ ಹೋದ ಘಟನೆ ಹುಬ್ಬಳ್ಳಿ-ಧಾರವಾಡ (Hubballi-Dharawada) ಜಿಲ್ಲೆಯಲ್ಲಿ ನಡೆದಿದೆ.

    ಕಳೆದ ವಾರ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಯರಿಕೊಪ್ಪದ ಬಳಿ ಜಲಾವೃತವಾಗಿತ್ತು. ಆದರೂ ಬೈಪಾಸ್‌ನಲ್ಲಿ ಇನ್ನೂ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಈ ಪರಿಣಾಮ ಹೊಸದಾಗಿ ನಿರ್ಮಿಸಿದ್ದ ರಸ್ತೆ ಸಂಪೂರ್ಣ ಹಾನಿಯಾಗಿದೆ. ಇದನ್ನೂ ಓದಿ: Lokmanya Tilak Express | ಇಂಜಿನ್‌ ಸೇರಿ ಹಳಿತಪ್ಪಿದ 8 ಬೋಗಿಗಳು

    ಅಷ್ಟಪಥ ಬೈಪಾಸ್ ಕಾಮಗಾರಿ ಪ್ರಯುಕ್ತ ನಿರ್ಮಿಸಿದ್ದ ಈ ಹೊಸ ರಸ್ತೆ ಸಂಪೂರ್ಣ ಕಿತ್ತುಹೋಗಿದೆ. ಸಂಪೂರ್ಣವಾಗಿ ನೀರು ನಿಂತಿದ್ದ ಭಾಗದಲ್ಲಿಯೇ ಕುಸಿತ ಆಗಿದ್ದು, ನೀರಿನ ಪ್ರಮಾಣ ನಿಂತರೂ ಹೊಸ ರಸ್ತೆ ನಿಧಾನಕ್ಕೆ ಕುಸಿಯುತ್ತ ಹೋಗಿದೆ. ಮುಂದೆ ಅನಾಹುತ ಆಗದಂತೆ ತಡೆಯಲು ಕಾಮಗಾರಿ ಶುರುವಾದರೂ, ಆಗಾಗ ಮಳೆ ಬಂದು ತೊಂದರೆ ಆಗುತ್ತಿದೆ. ನೀರು ಹರಿಯಲು ಹೊಸ ಮಾರ್ಗ ನಿರ್ಮಾಣ ಕಾಮಗಾರಿ ಆರಂಭ ಮಾಡಲಾಗಿದೆ. ಆದರೆ ನೀರಿನ ರಭಸಕ್ಕೆ ಕಾಮಗಾರಿ ಕೂಡಾ ವಿಳಂಬ ಆಗುತ್ತಿದೆ. ಇದನ್ನೂ ಓದಿ: ಎರಡನೇ ಬಾರಿಗೆ ಹರಿಯಾಣ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್ ಸೈನಿ ಪ್ರಮಾಣವಚನ ಸ್ವೀಕಾರ