Tag: ಧಾರವಾಡ

  • ಉಪಚುನಾವಣೆಯಲ್ಲಿ ಸೋತಿದ್ದೇವೆ, ಇವಿಎಂ ಹ್ಯಾಕ್ ಮಾಡಿದ್ದಾರೆ ಎನ್ನಲ್ಲ: ಜೋಶಿ

    ಉಪಚುನಾವಣೆಯಲ್ಲಿ ಸೋತಿದ್ದೇವೆ, ಇವಿಎಂ ಹ್ಯಾಕ್ ಮಾಡಿದ್ದಾರೆ ಎನ್ನಲ್ಲ: ಜೋಶಿ

    ಧಾರವಾಡ: ಮೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ (By Election) ನಾವು ಸೋಲು ಕಂಡಿದ್ದೇವೆ. ಸಹಜವಾಗಿ ಆಡಳಿತ ಪಕ್ಷದ ಅಭ್ಯರ್ಥಿಗಳು ಉಪಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಾರೆ. ಈಗ ನಾವು ಸೋತಿದ್ದೇವೆ ಎಂದು ಕಾಂಗ್ರೆಸ್‌ನವರ ರೀತಿ ಇವಿಎಂ (EVM) ಹ್ಯಾಕ್ ಆಗಿದೆ ಎನ್ನುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಹೇಳಿದರು.

    ಈ ಕುರಿತು ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಶಿಗ್ಗಾಂವಿಯಲ್ಲಿ (Shiggaon) ನಾವು ಗೆಲ್ಲುತ್ತೇವೆ ಎಂಬ ಭರವಸೆ ಇತ್ತು. ಆದರೆ ಅಲ್ಲಿ ಏನು ತಪ್ಪಾಗಿದೆ ಎಂಬುದರ ಬಗ್ಗೆ ಪರಾಮರ್ಶೆ ಮಾಡುತ್ತೇವೆ. ಉಪಚುನಾವಣೆಯಲ್ಲಿ ಜನ ಸಹಜವಾಗಿಯೇ ಆಡಳಿತ ಪಕ್ಷದ ಪರವಾಗಿ ಇರುತ್ತಾರೆ. ಆಡಳಿತ ಪಕ್ಷದ ಅಭ್ಯರ್ಥಿಯೇ ಗೆದ್ದರೆ ಅನುಕೂಲ ಎಂಬುದು ಸಾಮಾನ್ಯ. ಶಿಗ್ಗಾಂವಿಯಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಕಾಂಗ್ರೆಸ್‌ನಿಂದ ಹಣ ಹಂಚಿಕೆಯಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಇವಿಎಂನಲ್ಲಿ ಅಡ್ಜಸ್ಟ್‌ಮೆಂಟ್‌, Give & Take Policy ಮಾಡ್ತಿದ್ದಾರೆ: ಸತೀಶ್‌ ಜಾರಕಿಹೊಳಿ

    ಶಿಗ್ಗಾಂವಿಯಲ್ಲಿ 2-3 ಪಂಚಾಯ್ತಿಗೆ ಒಬ್ಬೊಬ್ಬ ಸಚಿವರನ್ನು ನೇಮಕ ಮಾಡಲಾಗಿತ್ತು. ಜನ ತೀರ್ಮಾನ ಮಾಡಿದ್ದರೆ ನಾವು ಗೆಲ್ಲಬಹುದಿತ್ತು. ಇತ್ತೀಚಿಗೆ ಎಲ್ಲಾ ಉಪಚುನಾವಣೆಗಳಲ್ಲಿ ನಾವು ಗೆದ್ದಿದ್ದೇವೆ. ಇಡೀ ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚುತ್ತಿದೆ. ಮಹಾರಾಷ್ಟ್ರದಲ್ಲಿ ವಿಪಕ್ಷ ಆಗಲು ಸಹ ಕಾಂಗ್ರೆಸ್‌ಗೆ ಅವಕಾಶ ಇಲ್ಲದಂತಾಗಿದೆ. ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ನವರು ಜೆಎಂಎಂ ಜೊತೆ ಹೋಗಿದ್ದರು. ಎರೆದುಕೊಳ್ಳುವವರ ಪಕ್ಕ ಹೋಗಿ ಡೊಗ್ಗಿ ನಿಲ್ಲಲು ಕಾಂಗ್ರೆಸ್‌ನವರು ಹೋಗಿದ್ದರು. ಅಲ್ಲಿ ಜೆಎಂಎಂ ಹತ್ತು ಸೀಟು ಗೆದ್ದಿದೆ. ಕಾಂಗ್ರೆಸ್ ಯಾರನ್ನು ಹಿಡಿದುಕೊಳ್ಳುತ್ತದೆಯೋ ಅವರನ್ನು ಮುಳುಗಿಸುತ್ತದೆ. ಎಸ್‌ಪಿ ಪಕ್ಷವನ್ನು ಮುಳುಗಿಸಿದರು. ಶರದ್ ಪವಾರ್ ಹಾಗೂ ಉದ್ಧವ್ ಠಾಕ್ರೆಯನ್ನು ಮುಳುಗಿಸಿದರು. ಮತ್ತೊಮ್ಮೆ ರಾಹುಲ್ ಗಾಂಧಿ ಲಾಂಚಿಂಗ್ ಫೇಲ್ ಆಗಿದೆ. 21ನೇ ಸಲ ರಾಹುಲ್ ಗಾಂಧಿ ಲಾಂಚ್ ಆಗಿದ್ದರು. ಹೊಸ ಹೊಸ ಎಂಜಿನ್ ಹಾಕಿ ಹಾರಿಸಿದ್ದರು. ಆದರೆ ಆ ವಿಮಾನ ಕೆಳಗೆ ಬೀಳುತ್ತಿದೆ. ಮತ್ತೊಮ್ಮೆ ರಾಹುಲ್ ಗಾಂಧಿ ವಿಫಲ ನಾಯಕರಾಗಿ ಹೊರ ಹೊಮ್ಮಿದ್ದಾರೆ ಎಂದರು. ಇದನ್ನೂ ಓದಿ: ಜನರಿಗಾಗಿ ದುಡಿಯುವ ನಮ್ಮ ಸಂಕಲ್ಪಕ್ಕೆ ಚುನಾವಣಾ ಫಲಿತಾಂಶ ಇನ್ನಷ್ಟು ಬಲ ನೀಡಿದೆ: ಸಿಎಂ

    ವಕ್ಫ್ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ. ಈಗ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೂ ವಕ್ಫ್ ಮುಂದುವರೆಸುತ್ತದೆಯಾ? ಏನೇ ಆದರೂ ವಕ್ಫ್ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಅಭಿವೃದ್ಧಿ ಕಾರ್ಯ, ಗ್ಯಾರಂಟಿ ಯೋಜನೆ, ಟೀಂ ವರ್ಕ್ ಗೆಲುವಿಗೆ ಸಹಕಾರಿಯಾಗಿದೆ – ಅನ್ನಪೂರ್ಣ ತುಕಾರಾಂ

  • ತಂದೆಯನ್ನೇ ಕಲ್ಲಿನಿಂದ ಜಜ್ಜಿ ಕೊಂದ ಮಗ ಜೈಲುಪಾಲು

    ತಂದೆಯನ್ನೇ ಕಲ್ಲಿನಿಂದ ಜಜ್ಜಿ ಕೊಂದ ಮಗ ಜೈಲುಪಾಲು

    ಧಾರವಾಡ: ಮಗನ ದುರಾಸೆಗೆ ತಂದೆಯೋರ್ವ ತನ್ನ ಮಗನಿಂದಲೇ ಬರ್ಬರವಾಗಿ ಹತ್ಯೆಗೀಡಾದ ಘಟನೆ ಧಾರವಾಡ (Dharawada) ಜಿಲ್ಲೆಯಲ್ಲಿ ನಡೆದಿದೆ.

    ಅಡಿವೆಪ್ಪ ತಡಕೋಡ (57) ಎಂಬ ನವಲಗುಂದ ತಾಲೂಕಿನ ತಲೆಮೊರಬ ಗ್ರಾಮದ ನಿವಾಸಿ ನ.13 ರಂದು ತನ್ನ ಮನೆಯ ಪಕ್ಕದ ಶೆಡ್‌ನಲ್ಲಿ ಮಲಗಿದ ಜಾಗದಲ್ಲೇ ಬರ್ಬರವಾಗಿ ಹತ್ಯೆಗೀಡಾಗಿದ್ದ. ಅಡಿವೆಪ್ಪನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಆತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬೆಳಗಾಗುವಷ್ಟರಲ್ಲಿ ಅಡಿವೆಪ್ಪ ಹೆಣವಾಗಿದ್ದನ್ನು ಕಂಡು ಆತನ ಮನೆಯವರು ಕಕ್ಕಾಬಿಕ್ಕಿಯಾಗಿದ್ದರು. ಆದರೆ, ಅಡಿವೆಪ್ಪನ ಮಗ ಶಿವಯೋಗಿ ತನಗೇನೂ ಸಂಬಂಧವಿಲ್ಲ, ಅಮಾಯಕ ಎನ್ನುವ ರೀತಿಯಲ್ಲಿ ಮನೆಯ ಕಟ್ಟೆಯ ಮೇಲೆ ಕುಳಿತುಕೊಂಡಿದ್ದ. ಇದನ್ನೂ ಓದಿ: ಗುಜರಾತ್‌ | ನಕಲಿ ವೈದ್ಯರಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ – ಆಹ್ವಾನ ಪತ್ರಿಕೆಯಲ್ಲಿ ಪೊಲೀಸ್ ಕಮಿಷನರ್‌ ಹೆಸರು!

    ಶಿವಯೋಗಿ ಅದೇ ಗ್ರಾಮದಲ್ಲಿ ಅಕ್ರಮ ಸಂಬಂಧವೊಂದನ್ನು ಇಟ್ಟುಕೊಂಡಿದ್ದ. ಇದಕ್ಕೆ ಅಡಿವೆಪ್ಪ ವಿರೋಧ ವ್ಯಕ್ತಪಡಿಸಿ ತನ್ನ ಮಗನ ಜೀವನ ಚೆನ್ನಾಗಿರಲಿ ಎಂದು ಕನ್ಯೆ ನೋಡುವ ಶಾಸ್ತ್ರ ಕೂಡ ಇಟ್ಟುಕೊಂಡಿದ್ದ. ಅಡಿವೆಪ್ಪನ ಹತ್ಯೆಯಾಗುವ ಹಿಂದಿನ ರಾತ್ರಿ ಇದೇ ವಿಷಯಕ್ಕೆ ಮನೆಯಲ್ಲಿ ಮಗನೊಂದಿಗೆ ಜಗಳ ಕೂಡ ನಡೆದಿತ್ತಂತೆ. ಅದಾದ ಬಳಿಕ ಅಡಿವೆಪ್ಪ ತನ್ನ ಮನೆಯ ಪಕ್ಕವೇ ಇದ್ದ ಶೆಡ್‌ನಲ್ಲಿ ಮಲಗಿಕೊಂಡಿದ್ದ. ಎಲ್ಲಿ ತನ್ನ ಅಕ್ರಮ ಸಂಬಂಧಕ್ಕೆ ತಂದೆ ಮುಳುವಾಗುತ್ತಾನೋ ಎಂದು ಮಗನೇ ತನ್ನ ತಂದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದರೆ, ಈ ಬಗ್ಗೆ ಪೊಲೀಸರು ಇನ್ನೂ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ವಕ್ಫ್ ವಿರುದ್ಧ ಬಿಜೆಪಿ ಹೋರಾಟಕ್ಕೆ ಮುಹೂರ್ತ; ನ.21, 22ರಂದು ರಾಜ್ಯಾದ್ಯಂತ ಪ್ರತಿಭಟನೆ: ಅಶ್ವಥ್‌ ನಾರಾಯಣ್

    ಅಡಿವೆಪ್ಪನ ಹತ್ಯೆಯಾದ ನಂತರ ಇಡೀ ತಲೆಮೊರಬ ಗ್ರಾಮದ ತುಂಬೆಲ್ಲ ಸ್ಮಶಾನ ಮೌನ ಆವರಿಸಿತ್ತು. ಆದರೆ, ಅಡಿವೆಪ್ಪನನ್ನು ಹತ್ಯೆ ಮಾಡಿದ ಶಿವಯೋಗಿ ಮಾತ್ರ ತನಗೇನೂ ಸಂಬಂಧ ಇಲ್ಲ ಎನ್ನುವ ರೀತಿ ಇದ್ದ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ್ದ ಖಾಕಿ ಪಡೆ ಎಲ್ಲ ಕೆಲಸ ಮುಗಿಸಿದ ನಂತರ ಶಿವಯೋಗಿಯನ್ನು ತಮ್ಮ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದು ಎಂಬ ಸತ್ಯಾಂಶವನ್ನು ಹೊರ ಹಾಕಿದ್ದಾನೆ. ಸದ್ಯ ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಬೆಂಗಳೂರಿನ ಸಮಸ್ಯೆಗಳನ್ನ ಪರಿಹರಿಸೋವರೆಗೂ ನಾನು ವಿರಮಿಸೋದಿಲ್ಲ: ಡಿಕೆಶಿ

  • ಪಹಣಿಯಲ್ಲಿ ‘ವಕ್ಫ್’ ಬೋರ್ಡ್ ಹೆಸರು ರದ್ದು- ನಿರಾಳರಾದ ರೈತರು

    ಪಹಣಿಯಲ್ಲಿ ‘ವಕ್ಫ್’ ಬೋರ್ಡ್ ಹೆಸರು ರದ್ದು- ನಿರಾಳರಾದ ರೈತರು

    ಧಾರವಾಡ: ಉಪ್ಪಿನ ಬೇಟಗೇರಿ ಗ್ರಾಮದಲ್ಲಿ ಉಂಟಾಗಿದ್ದ ವಕ್ಫ್ (Waqf) ಆಸ್ತಿ ಸಂಬಂಧಿತ ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದೆ. ಜವಳಗಿ, ಮಸೂತಿ ಹಾಗೂ ಹುಟಗಿ ಎಂಬ ರೈತ ಕುಟುಂಬಗಳ ಪಹಣಿ  ಕಾಲಂ ನಂ.11ರಲ್ಲಿ ನಮೂದಾಗಿದ್ದ ಸದರಿ ಆಸ್ತಿ ವಕ್ಫ್ ಆಸ್ತಿಗೆ ಒಳಪಟ್ಟಿದೆ ಎಂಬುದು ಈಗ ತೆರವಾಗಿದೆ.

    ತಮ್ಮ ಜಮೀನು ಪಹಣಿಯಲ್ಲಿ ನಮೂದಾಗಿದ್ದ ವಕ್ಫ್ ಹೆಸರನ್ನು ಕಂಡು ರೈತರು ಆತಂಕ ಪಟ್ಟಿದ್ದರು. ಪಹಣಿಯಲ್ಲಿನ ವಕ್ಫ್ ಆಸ್ತಿ ಎಂಬ ಪದವನ್ನು ತೆಗೆಯಬೇಕು ಎಂದು ಆಗ್ರಹಿಸಿ ಗ್ರಾಮದ ರೈತರು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ನೇತೃತ್ವದಲ್ಲಿ ದೊಡ್ಡಮಟ್ಟದ ಹೋರಾಟ ಕೂಡ ನಡೆಸಿದ್ದರು. ಪಹಣಿಯಲ್ಲಿ ನಮೂದಾಗಿದ್ದ ವಕ್ಫ್ ಹೆಸರನ್ನು ತೆರವುಗೊಳಿಸುವಂತೆ ತಹಶೀಲ್ದಾರ್‌ಗೆ ಗಡುವು ನೀಡಿದ್ದರು. ಇದೀಗ ರೈತರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಇದನ್ನೂ ಓದಿ: ಆನೇಕಲ್| ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು – ಚಾಲಕ ಪಾರು

    ಉಪ್ಪಿನ ಬೆಟಗೇರಿ ಗ್ರಾಮದ ಒಟ್ಟು 6 ಪಹಣಿಗಳಲ್ಲಿ ತಪ್ಪಾಗಿ ವಕ್ಫ್ ಬೋರ್ಡ್ ಹೆಸರು ಬಂದಿದೆ ಅನ್ನೋದು ಇತ್ತೀಚೆಗೆ ತಹಶೀಲ್ದಾರ್ ನಡೆಸಿದ ಸಭೆಯಲ್ಲಿ ಸಾಬೀತಾಗಿತ್ತು. ವಕ್ಫ್ ಬೋರ್ಡ್ ಅಧಿಕಾರಿಗಳಿಗೆ ಸೂಕ್ತ ದಾಖಲೆ ತರುವಂತೆ ತಹಶೀಲ್ದಾರ್ ಹೇಳಿದ್ದರು. ಆದರೆ ಸೂಕ್ತ ದಾಖಲೆ ಇಲ್ಲದೇ ಇರೋ ಹಿನ್ನೆಲೆಯಲ್ಲಿ, ಇದು 1965ರಲ್ಲಿ ಸರ್ವೆ ನಂ. ಬ್ಲಾಕ್‌ಗಳಾಗಿ ಪರಿವರ್ತನೆಯಾದಾಗ ಅದನ್ನು ನವೀಕರಣ ಮಾಡಿಕೊಳ್ಳದೇ ವಕ್ಫ್ ಬೋರ್ಡ್ ತಪ್ಪಾಗಿ ಪಹಣಿಯಲ್ಲಿ ನಮೂದು ಮಾಡಿದೆ ಅನ್ನೋದು ಸಾಬೀತಾಗಿತ್ತು. ಹೀಗಾಗಿ ರೈತರ ಪಹಣಿಯಲ್ಲಿದ್ದ ವಕ್ಫ್ ಭಾರ ಇಳಿಸಿದ್ದಾರೆ. ಇದನ್ನೂ ಓದಿ: ಬಿಡಿಎ ಭರ್ಜರಿ ಬೇಟೆ – ನಾಗರಬಾವಿ ಬಡಾವಣೆಯಲ್ಲಿ 60 ಕೋಟಿ ಮೌಲ್ಯದ ಆಸ್ತಿ ಜಪ್ತಿ

  • 39 ಸಾವಿರ ಕೋಟಿ ಅನುದಾನದಲ್ಲಿ ಕರ್ನಾಟಕದಲ್ಲಿ ರೈಲ್ವೆ ಕೆಲಸ ಆರಂಭ: ಸೋಮಣ್ಣ

    39 ಸಾವಿರ ಕೋಟಿ ಅನುದಾನದಲ್ಲಿ ಕರ್ನಾಟಕದಲ್ಲಿ ರೈಲ್ವೆ ಕೆಲಸ ಆರಂಭ: ಸೋಮಣ್ಣ

    – ಸಿದ್ದರಾಮಯ್ಯರನ್ನು ಯಾರಾದ್ರೂ ಮುಟ್ಟೋಕೆ ಆಗುತ್ತಾ?

    ಬೆಳಗಾವಿ: ಬೆಂಗಳೂರಿಗೆ ನೀಡಿದಷ್ಟು ಬೆಳಗಾವಿಗೂ (Belagavi) ಹೆಚ್ಚಿನ ಆದ್ಯತೆ ಕೊಡುತ್ತೇವೆ. ಬೆಳಗಾವಿ ಸೇರಿ ರಾಜ್ಯಾದ್ಯಂತ 39 ಸಾವಿರ ಕೋಟಿ ರೂ. ಅನುದಾನದಲ್ಲಿ ರೈಲ್ವೆ ಕಾಮಗಾರಿಗಳ (Railway Works) ಕೆಲಸ ಆರಂಭಿಸಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ (Somanna) ತಿಳಿಸಿದರು.

    ಬೆಳಗಾವಿ-ಧಾರವಾಡ (Belagavi-Dharawada) ನೇರ ರೈಲ್ವೆ ಮಾರ್ಗ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿ-ಧಾರವಾಡ ಹೊಸ ರೈಲು ಮಾರ್ಗ ದಿ. ಸುರೇಶ್‌ ಅಂಗಡಿ (Suresh Angadi) ಅವರ ಕನಸಾಗಿದೆ. ರೈಲು ಹಳಿ ನಿರ್ಮಾಣಕ್ಕೆ ಒಟ್ಟು 888 ಎಕರೆ ಜಮೀನು ಬೇಕಾಗುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ 660 ಎಕರೆ, ಧಾರವಾಡದಲ್ಲಿ 228 ಎಕರೆ ಜಮೀನು ಬೇಕು. 446 ಎಕರೆ ಜಮೀನನ್ನು ಮುಂದಿನ ತಿಂಗಳು ಹಸ್ತಾಂತರ ಮಾಡುವ ಬಗ್ಗೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ‌ ಮಾರ್ಗ ಸುಮಾರು 73 ಕಿ.ಮೀ. ವ್ಯಾಪ್ತಿ ಹೊಂದಿದ್ದು, ಧಾರವಾಡದ ಕ್ಯಾರಕೊಪ್ಪದಿಂದ ಬೆಳಗಾವಿ ದೇಸೂರದವರೆಗೆ ರೈಲು ಹಳಿ ಮಾಡುವ ಗುರಿ ಇದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಅಭಿವೃದ್ಧಿ ಮಾಡಬಹುದು. ಜಿಲ್ಲಾಧಿಕಾರಿಗಳು ಒಂದು ವರ್ಷದ ಕೆಲಸವನ್ನು ಒಂದು ತಿಂಗಳಲ್ಲಿ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿಕೊಂಡ್ರಾ ಯೋಗೇಶ್ವರ್‌?

    ಜನವರಿ, ಫೆಬ್ರುವರಿಯಲ್ಲಿ ಭೂಸ್ವಾಧೀನಪಡಿಸಿಕೊಂಡು ಕಾಮಗಾರಿ ಆರಂಭಿಸುತ್ತೇವೆ. ಬೆಳಗಾವಿ ಧಾರವಾಡ ರೈಲು ಮಾರ್ಗವನ್ನು 18 ರಿಂದ 20 ತಿಂಗಳಲ್ಲಿ ಕೆಲಸ ಮುಗಿಸಲಾಗುವುದು. ಜಿಲ್ಲಾಧಿಕಾರಿಗಳು ಜೊತೆ ಸೇರಿಕೊಂಡು ಕೆಲಸ ಮಾಡುವಂತೆ ನಮ್ಮ ಅಧಿಕಾರಿಗಳಿಗೆ ತಿಳಿಸುತ್ತೇನೆ. ಇನ್ನು ರಾಜ್ಯದಲ್ಲಿ 11 ಯೋಜನೆಗಳು ಬಾಕಿ ಇದ್ದವು. ಅದರಲ್ಲಿ 9 ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ. 39 ಸಾವಿರ ಕೋಟಿ ಅನುದಾನ ಒದಗಿಸಿದ್ದೇವೆ. ಐವತ್ತು ವರ್ಷದಲ್ಲಿ ಆಗದೇ ಇರುವ ಕೆಲಸಗಳು ಈ ಹತ್ತು ವರ್ಷದಲ್ಲಿ ಮಾಡಿದ್ದೇವೆ ಎಂದು ಸೋಮಣ್ಣ ಸ್ಪಷ್ಟಪಡಿಸಿದರು.

    ಧಾರವಾಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಜೊತೆಗೂ ಮಾತಾಡಿದ್ದೇನೆ. 950 ಕೋಟಿ ರೂ. ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಜಂಟಿ ಸರ್ವೇ, ಗಡಿ ನಿಗದಿಯಾಗಿದೆ. ಸ್ಟೇಶನ್ ಗಳನ್ನು ಎಲ್ಲೆಲ್ಲಿ ನಿರ್ಮಿಸಬೇಕು ಎಂಬ ಬಗ್ಗೆಯೂ ಚರ್ಚಿಸಲಾಗಿದೆ. ಬೆಳಗಾವಿಯ ತಾಲೂಕಿನ ಕೆಕೆಕೊಪ್ಪ, ಬಡಾಲ ಅಂಕಲಗಿ, ನಾಗೇನಟ್ಟಿ, ನಂದಿಹಳ್ಳಿ, ಗರ್ಲಗುಂಜಿ ಸೇರಿ ಮತ್ತಿತರ ಗ್ರಾಮಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಮೀನು ತೆಗೆದುಕೊಳ್ಳುವ ಕೆಲಸ‌ ಡಿಸಿ ಮಾಡಿದ್ದಾರೆ. ಅಲ್ಲದೇ ಬೆಳಗಾವಿ ಹೃದಯ ಭಾಗದಲ್ಲಿ 11ನೇ ಕ್ರಾಸ್ ನಲ್ಲಿ‌ 6 ಆರ್‌.ಒ.ಬಿ ಮತ್ತು ಆರ್.ಯು.ಬಿ. ತೆರೆಯಲು ನಿರ್ಧರಿಸಲಾಗಿದ್ದು, ಒಟ್ಟಾರೆ ಬೆಳಗಾವಿಗೆ ಪ್ರಧಾನಿ ಮೋದಿ ದೊಡ್ಡ ಕೊಡುಗೆ ಕೊಟ್ಟಿದ್ದಾರೆ ಎಂದು ಸೋಮಣ್ಣ ಹೇಳಿದರು.

     

    ರಾಯಚೂರು, ಯಾದಗಿರಿ, ಕುಡಚಿ ಸೇರಿ ಹಲವು ಕಡೆ ಕೆಲಸ ಆರಂಭಿಸಿದ್ದೇವೆ‌. ಯೋಜನೆಗಳನ್ನು ರೂಪಿಸಲು ಜಾಗ ಬೇಕು. ನೀವು ಜಾಗ ಕೊಟ್ಟರೆ ನಾವು ಕೆಲಸ ಮಾಡುತ್ತೇವೆ. ಜಾಗ ಸಿಗಲಿಲ್ಲ ಎಂದರೆ ಯೋಜನೆ ಯೋಜನಗೆಳಾಗಿ ಉಳಿಯುತ್ತವೆ. ಅವಶ್ಯಕತೆ ಇರುವ ಕೆಲಸಗಳಿಗೆ ಆದ್ಯತೆ ಕೊಡುತ್ತೇನೆ. ಲೋಕಾಪೂರ ರಾಮದುರ್ಗ ರೈಲು, ಸವದತ್ತಿ ಯಲ್ಲಮ್ಮಗುಡ್ಡ ರೈಲು ಯೋಜನೆ ಕುರಿತು ಪರಿಶೀಲಿಸುತ್ತೇವೆ ಎಂದರು.

    ಮುಟ್ಟೋಕೆ ಆಗುತ್ತಾ?
    ಸಿದ್ದರಾಮಯ್ಯರನ್ನು (Siddaramaiah) ಯಾರಾದ್ರೂ ಮುಟ್ಟೋಕೆ ಆಗುತ್ತಾ? ಯಾರಾದ್ರು ಸಿಎಂ ಅವರನ್ನು ಮುಟ್ಟಿದ್ರೆ ಪೊಲೀಸರು ಕೇಸ್ ಹಾಕುತ್ತಾರೆ ಎಂದು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸೋಮಣ್ಣ (Somanna) ವ್ಯಂಗ್ಯವಾಡಿದರು. ನನನ್ನು ಮುಟ್ಟಿದ್ರೆ ರಾಜ್ಯದ ಜನ ಸುಮ್ನೆ ಬಿಡಲ್ಲ ಎಂಬ ಸಿಎಂ ಹೇಳಿಕೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ, ಸಿದ್ದರಾಮಯ್ಯ ಅನುಭವಿ ರಾಜಕಾರಣಿ. ಅವರು ಏನ್ ಮಾತಾಡ್ತಾರೆ ಎನ್ನುವುದು ಅವರಿಗೆ ಬಿಡುತ್ತೇನೆ. ಅವರನ್ನು ಯಾರು ಮುಟ್ಟುವುದು ಬೇಡ. ಸಾಮಾನ್ಯ ಜನರ ಭಾವನೆಗೆ ತದ್ವಿರುದ್ಧವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ರಾಜ್ಯ ಸರ್ಕಾರದ ಕಾರ್ಯ ವೈಖರಿ ಸರಿಯಿಲ್ಲ ಎಂದು ದೂರಿದರು.

     

  • ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಹತ್ಯೆ

    ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಹತ್ಯೆ

    ಧಾರವಾಡ: ಜಿಲ್ಲೆಯ ನವಲಗುಂದ (Navalagunda) ತಾಲೂಕಿನ ತಲೆಮೊರಬ ಗ್ರಾಮದಲ್ಲಿ ವ್ಯಕ್ತಿಯೋರ್ವನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ಅಡಿವೆಪ್ಪ ತಡಕೋಡ (57) ಮೃತ ದುರ್ದೈವಿ. ಕಾಳು ಶೇಖರಿಸಿಟ್ಟಿದ್ದ ಮನೆಯಲ್ಲಿ ಅಡಿವೆಪ್ಪ ಮಲಗಿಕೊಂಡಿದ್ದ ಈ ವೇಳೆ ದುಷ್ಕರ್ಮಿಗಳು ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದ ಆರೋಪಿಗಳು ಯಾರು ಎಂಬ ಮಾಹಿತಿ ಇನ್ನು ತಿಳಿದು ಬಂದಿಲ್ಲ. ಇದನ್ನೂ ಓದಿ: ಬೀದರ್‌ನಲ್ಲಿ ಚಿತ್ರಾನ್ನ ತಿಂದು ವಸತಿ ಶಾಲೆಯ 50 ಮಕ್ಕಳು ಅಸ್ವಸ್ಥ

    ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ನವಲಗುಂದ ಠಾಣೆ ಪೊಲೀಸರು ಹಾಗೂ ಶ್ವಾನ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಕಾರು ಪಲ್ಟಿ – ಇಬ್ಬರು ಮಕ್ಕಳು, ಚಾಲಕನಿಗೆ ಗಂಭೀರ ಗಾಯ

  • ಲೋಕಾ ದಾಳಿ| ಕೆಐಎಡಿಬಿ ಅಧಿಕಾರಿ ಮನೆಯಲ್ಲಿ 2.34 ಕೋಟಿ ಆಸ್ತಿ ಪತ್ತೆ

    ಲೋಕಾ ದಾಳಿ| ಕೆಐಎಡಿಬಿ ಅಧಿಕಾರಿ ಮನೆಯಲ್ಲಿ 2.34 ಕೋಟಿ ಆಸ್ತಿ ಪತ್ತೆ

    ಧಾರವಾಡ: ಲೋಕಾಯುಕ್ತ ಪೊಲೀಸರು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಎಇಇ ಗೋವಿಂದ ಭಜಂತ್ರಿ ಮನೆ ಮೇಲೆ ಇಂದು (ಮಂಗಳವಾರ) ದಾಳಿ ನಡೆಸಿದ್ದರು. ಈ ವೇಳೆ ಅಧಿಕಾರಿ ಬಳಿ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

    ಬೆಳಗ್ಗೆಯಿಂದ ನಡೆದ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆಯಲ್ಲಿ 2.34 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಧಾರವಾಡ (Dharawada) ನಿವಾಸ ಸೇರಿ ಒಟ್ಟು 7 ಕಡೆ ಪರಿಶೀಲನೆ ನಡೆಸಿದ ಅಧಿಕಾರಿಗಳು 2.34 ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ. ಇದನ್ನೂ ಓದಿ: ಗಗನಯಾತ್ರಿ ಸುನಿತಾ ವಿಲಿಯಮ್ಸ್​ ಆರೋಗ್ಯ ಕ್ಷೀಣ

    ಇದರಲ್ಲಿ 1.85 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 57 ಲಕ್ಷ ರೂ. ಮೌಲ್ಯದ ಸೈಟ್, 1.2 ಕೋಟಿ ರೂ. ಮೌಲ್ಯದ ಮನೆ, 7 ಎಕರೆ ಜಮೀನು ಇರುವ ಸ್ಥಿರಾಸ್ತಿ, 41.11 ಲಕ್ಷ ರೂ. ನಗದು ಸಹಿತ 94.22 ಲಕ್ಷ ರೂ. ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. 27.11 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ, 20 ಲಕ್ಷ ರೂ. ಮೌಲ್ಯದ ಎರಡು ವಾಹನಗಳು ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಇದನ್ನೂ ಓದಿ: Ballari | ಬಿಸಿ ಊಟ ಸೇವಿಸಿ 45 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

  • ಬೆಳ್ಳಂಬೆಳಗ್ಗೆ ಧಾರವಾಡದಲ್ಲಿ ಲೋಕಾ ಶಾಕ್- ಕೆಐಎಡಿಬಿ AEE ಮನೆಗೆ ದಾಳಿ

    ಬೆಳ್ಳಂಬೆಳಗ್ಗೆ ಧಾರವಾಡದಲ್ಲಿ ಲೋಕಾ ಶಾಕ್- ಕೆಐಎಡಿಬಿ AEE ಮನೆಗೆ ದಾಳಿ

    ಧಾರವಾಡ: ಲೋಕಾಯುಕ್ತ ಪೊಲೀಸರು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(KIADB) ಎಇಇ (AEE) ಗೋವಿಂದಪ್ಪ ಭಜಂತ್ರಿಗೆ ಲೋಕಾಯುಕ್ತ ಪೊಲೀಸರು ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ. ಧಾರವಾಡದ (Dharawada) ಗಾಂಧಿನಗರದಲ್ಲಿರುವ ಗೋವಿಂದಪ್ಪ ನಿವಾಸದ ಮೇಲೆ ಲೋಕಾಯುಕ್ತ ಡಿವೈಎಸ್‌ಪಿ ವೆಂಕನಗೌಡ ಪಾಟೀಲ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

    ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ಗೋವಿಂದಪ್ಪ ಅವರಿಗೆ ಸೇರಿದ ಧಾರವಾಡ ಗಾಂಧಿನಗರದಲ್ಲಿರುವ ಮನೆ, ತೇಜಸ್ವಿನಗರದಲ್ಲಿರುವ ಅಳಿಯನ ಮನೆ, ಸವದತ್ತಿ ತಾಲೂಕಿನ ಹೂಲಿ, ಉಗರಗೋಳ ಫಾರ್ಮ್‌ಹೌಸ್, ನರಗುಂದದಲ್ಲಿರುವ ಅವರ ಸಹೋದರನ ಮನೆ ಮತ್ತು ಲಕಮನಹಳ್ಳಿಯಲ್ಲಿರುವ ಕೆಐಎಡಿಬಿ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಆರೋಪಿ ಸಾವು ಕೇಸ್ – ಸಬ್ ಇನ್‌ಸ್ಪೆಕ್ಟರ್, ಹೆಡ್ ಕಾನ್‌ಸ್ಟೇಬಲ್ ಅಮಾನತು

    ಗಾಂಧಿನಗರದಲ್ಲಿರುವ (Gandhinagara) ಗೋವಿಂದಪ್ಪ ಅವರ ನಿವಾಸದ ಮುಂದೆ ಇದ್ದ ಅವರ ಕಾರುಗಳಲ್ಲಿ ಕೂಡ ಲೋಕಾಯುಕ್ತ ಪೊಲೀಸರು ಇಂಚಿಂಚು ತಪಾಸಣೆ ನಡೆಸಿದ್ದಾರೆ. ಅಲ್ಲದೇ ಅವರ ಆಸ್ತಿಗೆ ಸಂಬಂಧಿಸಿದ ಎಲ್ಲಾ ದಾಖಲೆ ಪತ್ರಗಳನ್ನು ಪರಿಶೀಲನೆ ಮಾಡಿದ್ದಾರೆ. ಗೋವಿಂದಪ್ಪಗೆ ಸಂಬಂಧಿಸಿದ ಒಟ್ಟು ಆರು ಕಡೆಗಳಲ್ಲಿ ಲೋಕಾಯುಕ್ತರು ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ. ಇದನ್ನೂ ಓದಿ: ಜಾರ್ಖಂಡ್ ವಿಧಾನಸಭೆಗೆ ನಾಳೆ ಮೊದಲ ಹಂತದ ಚುನಾವಣೆ – 15 ಜಿಲ್ಲೆಗಳ 42 ಸ್ಥಾನಗಳಿಗೆ ಮತದಾನ

  • ಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್ – ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ

    ಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್ – ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ

    ದಾವಣಗೆರೆ/ಧಾರವಾಡ: ಇಂದು ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

    ದಾವಣಗೆರೆಯ ಶಕ್ತಿನಗರದ 3ನೇ ಕ್ರಾಸ್‌ನಲ್ಲಿರುವ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಸಹಾಯಕ ನಿರ್ದೇಶಕ ಕಮಲ್ ರಾಜ್ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.

    ಎಸ್‌ಪಿ ಎಂ.ಎಸ್.ಕೌಲಾಪುರೇ ನೇತೃತ್ವದಲ್ಲಿ ದಾಳಿ ನಡೆದಿದೆ. ಸಿಪಿಐ ಮಧುಸೂಧನ್, ಪ್ರಭು ಸೇರಿದಂತೆ ಹತ್ತಕ್ಕೂ ಹೆಚ್ಚು ಸಿಬ್ಬಂದಿಯಿಂದ ಶೋಧ ಕಾರ್ಯ ನಡೆದಿದೆ. ಮನೆಯ ಪ್ರತಿಯೊಂದು ಕೋಣೆಯನ್ನು ಪರಿಶೀಲನೆ ಮಾಡಿದ್ದಾರೆ.

    ಇತ್ತ, ಧಾರವಾಡದಲ್ಲಿ ಕೆಐಎಡಿಬಿ ಎಇಇ ಗೋವಿಂದಪ್ಪ ಭಜಂತ್ರಿ ನಿವಾಸದ ಮೇಲೆ ದಾಳಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಧಾರವಾಡ ನಗರದ ಗಾಂಧಿನಗರ ಬಡಾವಣೆಯಲ್ಲಿನ ಮನೆ ಮೇಲೆ ಲೋಕಾಯುಕ್ತ ಡಿವೈಎಸ್ಪಿ ವೆಂಕನಗೌಡ ಪಾಟೀಲ ನೇತೃತ್ವದಲ್ಲಿ ದಾಳಿ ನಡೆದಿದೆ. ಆಸ್ತಿ ದಾಖಲೆಗಳ ಪರಿಶೀಲನೆ ಮಾಡಲಾಗಿದೆ.

    ಗೋವಿಂದಪ್ಪ ಭಜಂತ್ರಿಗೆ ಸಂಬಂಧಪಟ್ಟ ಆರು ಕಡೆ ದಾಳಿ ಮಾಡಲಾಗಿದೆ. ಧಾರವಾಡದಲ್ಲಿ ಮೂರು ಕಡೆ, ಸವದತ್ತಿ ತಾಲೂಕಿನಲ್ಲಿ ಎರಡು ಕಡೆ ಹಾಗೂ ನರಗುಂದದಲ್ಲಿ ಒಂದು ಕಡೆ ದಾಳಿ ನಡೆದಿದೆ.

    ಸವದತ್ತಿ ತಾಲೂಕಿನ ಹೂಲಿ ಹಾಗೂ ಉಗರಗೋಳ ಗ್ರಾಮದ ಫಾರ್ಮ್ ಹೌಸ್ ಮೇಲೆ ರೇಡ್ ಮಾಡಲಾಗಿದೆ. ಗೋವಿಂದಪ್ಪ ಕೆಲಸ ಮಾಡುವ ಲಕಮನಹಳ್ಳಿ ಧಾರವಾಡ ಕೆಐಎಡಿಬಿ ಕಚೇರಿಯಲ್ಲಿ ಪರಿಶೀಲನೆ ಮಾಡಿದ್ದಾರೆ. ನರಗುಂದದಲ್ಲಿರೋ ಸಹೋದರನ ಮನೆ ಮೇಲೂ ದಾಳಿ ನಡೆದಿದೆ. ಗೋವಿಂದಪ್ಪನ ಮನೆ ಎದುರು ನಿಲ್ಲಿಸಿದ್ದ ಕಾರುಗಳ ಪರಿಶೀಲನೆ ಮಾಡಲಾಗಿದೆ. ದಾಖಲೆ ಪತ್ರಗಳ ಬಗ್ಗೆ ಪರಿಶೀಲನಾ ವರದಿಯಲ್ಲಿ ನಮೂದಿಸಿಕೊಂಡಿದ್ದಾರೆ.

    ಬೀದರ್‌ನಲ್ಲಿ ಎರಡು ಕಡೆ ಭ್ರಷ್ಟ ಅಧಿಕಾರಿಗೆ ಲೋಕಾಯುಕ್ತ ಪೋಲಿಸರು ಶಾಕ್ ಕೊಟ್ಟಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ರವೀಂದ್ರ ರೊಟ್ಟೆ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ್ದಾರೆ.

  • ಚೋಟಾ ಮುಂಬೈಯಲ್ಲಿ ಬೆಲೆ ನಿಯಂತ್ರಿಸಲು ಅಖಾಡಕ್ಕಿಳಿದ ಕೇಂದ್ರ; ಹುಬ್ಬಳ್ಳಿ- ಧಾರವಾಡದಲ್ಲಿ ಭಾರತ್ ಬ್ರ‍್ಯಾಂಡ್ ಆಹಾರ ಧಾನ್ಯ ಪೂರೈಕೆಗೆ ಚಾಲನೆ

    ಚೋಟಾ ಮುಂಬೈಯಲ್ಲಿ ಬೆಲೆ ನಿಯಂತ್ರಿಸಲು ಅಖಾಡಕ್ಕಿಳಿದ ಕೇಂದ್ರ; ಹುಬ್ಬಳ್ಳಿ- ಧಾರವಾಡದಲ್ಲಿ ಭಾರತ್ ಬ್ರ‍್ಯಾಂಡ್ ಆಹಾರ ಧಾನ್ಯ ಪೂರೈಕೆಗೆ ಚಾಲನೆ

    -ಸ್ವಾತಂತ್ರ್ಯ ನಂತರ ದೇಶದಲ್ಲಿ ಪ್ರಧಾನಿ ಮೋದಿ ಅವರಿಂದ ಐತಿಹಾಸಿಕ ಕ್ರಮ: ಸಚಿವ ಪ್ರಹ್ಲಾದ್ ಜೋಶಿ ಬಣ್ಣನೆ

    -ಹುಬ್ಬಳ್ಳಿಯಿಂದ ಭಾರತ್ ಬ್ರ‍್ಯಾಂಡ್ ಆಹಾರ ಧಾನ್ಯ ಹೊತ್ತು ಸಾಗಿದ 50ಕ್ಕೂ ಹೆಚ್ಚು ಮೊಬೈಲ್ ವಾಹನ

    ಹುಬ್ಬಳ್ಳಿ: ಬೆಲೆ ಏರಿಕೆ ನಿಯಂತ್ರಣ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೈಗೊಂಡ ‘ಗ್ರಾಹಕರಿಗೆ ನೇರ ಆಹಾರ ಧಾನ್ಯ ವಿತರಣೆ’ಗೆ ಕೇಂದ್ರ ಆಹಾರ ಸಚಿವರ ತವರು ಕ್ಷೇತ್ರದಲ್ಲಿ ಇಂದು ಚಾಲನೆ ನೀಡಲಾಯಿತು. ಹುಬ್ಬಳ್ಳಿ (Hubballi) 3,000 ಮಠದ ಮೈದಾನದಲ್ಲಿ ಸೋಮವಾರ ಬೆಳಗ್ಗೆ ಕೇಂದ್ರ ಆಹಾರ ಪೂರೈಕೆ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಆಹಾರ ಧಾನ್ಯ ದಾಸ್ತಾನು ಹೊತ್ತ ಸಂಚಾರಿ ವಾಹನಗಳಿಗೆ ಹಸಿರು ನಿಶಾನೆ ತೋರಿದರು. ಇದನ್ನೂ ಓದಿ: ಮನೆ ಮನೆಗಳಿಂದ ಕಸ ಸಂಗ್ರಹಕ್ಕೆ ಶುಲ್ಕ ವಸೂಲಿ – ರಾಜ್ಯ ಸರ್ಕಾರಕ್ಕೆ ಬಿಬಿಎಂಪಿಯಿಂದ ಪ್ರಸ್ತಾವನೆ

    ಇದೇ ವೇಳೆ ಜನಸಾಮಾನ್ಯರಿಗೆ ಆಹಾರ ಧಾನ್ಯ ಕಿಟ್ ವಿತರಿಸಿ ಮಾತನಾಡಿ, ಕೇಂದ್ರ ಸರ್ಕಾರ ಯಾವತ್ತೂ ರೈತರ ಮತ್ತು ಕಡುಬಡವರ ಹಿತ ಕಾಯಲು ಬದ್ಧವಾಗಿದೆ ಎಂದು ಹೇಳಿದರು. ಸ್ವಾತಂತ್ರ‍್ಯ ನಂತರ ದೇಶದಲ್ಲಿ ಬೆಲೆ ಏರಿಕೆ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರ ಇದೇ ಪ್ರಥಮ ಬಾರಿಗೆ ಇಂತಹ ಐತಿಹಾಸಿಕ ಕ್ರಮ ಕೈಗೊಂಡಿದೆ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ಅನ್ನಭಾಗ್ಯ ಫಲಾನುಭವಿಗಳಿಗೆ ಸರ್ಕಾರ ಶಾಕ್ – ಕಳೆದೆರಡು ತಿಂಗಳಿಂದ ಸಿಕ್ಕಿಲ್ಲ ಅಕ್ಕಿ ದುಡ್ಡು

    ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣುಗುವುದನ್ನು ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ದೇಶಾದ್ಯಂತ ಗ್ರಾಹಕರಿಗೆ ನೇರ ಆಹಾರ ಧಾನ್ಯ ವಿತರಣೆಗೆ ಮುಂದಾಗಿದೆ. ಈಗಾಗಲೇ ದೆಹಲಿ, ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಭಾರತ್ ಬ್ರ‍್ಯಾಂಡ್ ಅಡಿ ಆಹಾರ ಧಾನ್ಯ ವಿತರಣೆ ಕೈಗೊಂಡಿದ್ದು, ಈಗ ವಾಣಿಜ್ಯ ನಗರಿ ಹುಬ್ಬಳ್ಳಿ – ಧಾರವಾಡ ಅವಳಿ ನಗರಗಳಲ್ಲಿ ವಿತರಣೆ ನಡೆದಿದೆ ಎಂದರು. ಇದನ್ನೂ ಓದಿ: ಭದ್ರತಾ ಪಡೆ, ಉಗ್ರರ ನಡುವೆ ಗುಂಡಿನ ಚಕಮಕಿ – 100ಕ್ಕೆ ಕರೆ ಮಾಡಿ ಬಚಾವ್‌ ಆದ ಚಾರಣಿಗರು

    50ಕ್ಕೂ ಹೆಚ್ಚು ಸಂಚಾರಿ ವಾಹನಗಳಲ್ಲಿ ಪೂರೈಕೆ:
    ಹುಬ್ಬಳ್ಳಿ-ಧಾರವಾಡ ಅವಳಿ ನಗರ ಮತ್ತು ಧಾರವಾಡ (Dharawada) ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ವಾಹನಗಳಲ್ಲಿ ಕಡಿಮೆ ಬೆಲೆಯಲ್ಲಿ ಭಾರತ್ ಬ್ರ‍್ಯಾಂಡ್ (Bharat Brand) ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರು | ಬಿಎಂಟಿಸಿ ಚಾಲಕನ ಮೇಲೆ ಬೈಕ್ ಸವಾರನಿಂದ ಹಲ್ಲೆ

    ಯಾವುದಕ್ಕೆ ಎಷ್ಟು ಬೆಲೆ:
    ಭಾರತ್ ಅಕ್ಕಿ 34 ರೂ., ಭಾರತ್ ಗೋಧಿ ಹಿಟ್ಟು 30 ರೂ., ಭಾರತ್ ಕಡಲೆ ಬೇಳೆ 70 ರೂ. ಮತ್ತು ಭಾರತ್ ಹೆಸರು ಬೇಳೆಯನ್ನು 107 ರೂ. ರಿಯಾಯಿತಿ ದರದಲ್ಲಿ ಜನಸಾಮಾನ್ಯರಿಗೆ ಮೊಬೈಲ್ ವಾಹನಗಳ ಮೂಲಕ ನೇರವಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

    ರೈತರ ಜತೆ ಸಾಮಾನ್ಯ ಜನರ ಹಿತರಕ್ಷಣೆ:
    ಪ್ರಧಾನಿ ಮೋದಿ ಅವರು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಿ ರೈತರ ಹಿತ ರಕ್ಷಣೆ ಜತೆಗೆ ದೇಶಾದ್ಯಂತ ಕಡಿಮೆ ಬೆಲೆಗೆ ಆಹಾರ ಧಾನ್ಯ ಪೂರೈಸಿ ಜನಸಾಮಾನ್ಯರ ಹಿತವನ್ನೂ ಕಾಯುತ್ತಿದೆ ಎಂದರು. ಇದನ್ನೂ ಓದಿ: ಮೈಸೂರಿನ ಸರ್ಕಾರಿ ಶಾಲೆ ಜಾಗ ವಕ್ಫ್ ಆಸ್ತಿ – ಅಭಿನಂದನೆಗಳು ಸರ್ ಎಂದು ಸಿಎಂಗೆ ಪ್ರತಾಪ್ ಸಿಂಹ ಟಾಂಗ್

    ಕಾರ್ಯಕ್ರಮದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginakai), ಮಹಾನಗರ ಪಾಲಿಕೆ ಸದಸ್ಯರು ಮತ್ತು ಪ್ರಮುಖರು ಉಪಸ್ಥಿತರಿದ್ದರು. ಇದನ್ನೂ ಓದಿ: ಪ್ರೇಯಸಿ ತಾಯಿಗಾಗಿ ಚೈನ್ ಕಳ್ಳತನ – ಡ್ಯಾನ್ಸ್ ಮಾಸ್ಟರ್ ಅರೆಸ್ಟ್

  • ರಾಜ್ಯದಲ್ಲಿ ನಿಲ್ಲದ ವಕ್ಫ್ ಅವಾಂತರ – ಹಿಂದೂ ಅಷ್ಟೇ ಅಲ್ಲ, ಮುಸ್ಲಿಮರ ಪಹಣಿಯಲ್ಲೂ ವಕ್ಫ್!

    ರಾಜ್ಯದಲ್ಲಿ ನಿಲ್ಲದ ವಕ್ಫ್ ಅವಾಂತರ – ಹಿಂದೂ ಅಷ್ಟೇ ಅಲ್ಲ, ಮುಸ್ಲಿಮರ ಪಹಣಿಯಲ್ಲೂ ವಕ್ಫ್!

    ಬೆಂಗಳೂರು: ಸದ್ಯ ರಾಜ್ಯದಲ್ಲಿ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ (Waqf Board) ಹೆಸರು ದಾಖಲಾಗಿರುವುದೇ ಸುದ್ದಿ. ಇಲ್ಲಿಯವರೆಗೂ ಇದು ಕೇವಲ ಹಿಂದೂಗಳ ಜಮೀನಿನ ಸಮಸ್ಯೆ ಅಂದುಕೊಳ್ಳಲಾಗಿತ್ತು. ಆದರೆ ಈ ವಕ್ಫ್ ಮುಸ್ಲಿಂರ ಪಹಣಿಯಲ್ಲೂ ಸದ್ದು ಮಾಡುತ್ತಿದೆ.

    ಧಾರವಾಡ (Dharwad) ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಂ ಎನ್ನದೇ ಸಣ್ಣಪುಟ್ಟ ರೈತರ ಜಮೀನುಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆದಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಇನ್ನೂ ಹಾವೇರಿ (Haveri) ಜಿಲ್ಲೆಯ ಕಡಕೋಳ ಗ್ರಾಮದ ವಕ್ಫ್ ಗಲಾಟೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಕುಂದಾನಗರಿಗೂ ವಕ್ಫ್ ಕಾಲಿಟ್ಟಿದೆ.

    ಧಾರವಾಡ ಜಿಲ್ಲೆಯ ನವಲಗುಂದ (Navalagund) ಪಟ್ಟಣದ ಮುಸ್ಲಿಂ ಸಮುದಾಯದ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಇದಕ್ಕೂ ಮೊದಲು ಉಪ್ಪಿನಬೆಟಗೇರಿ (UppinBetageri) ಹಾಗೂ ಗರಗ (Garaga) ಗ್ರಾಮಗಳಲ್ಲಿನ 20ಕ್ಕೂ ಹೆಚ್ಚು ರೈತರ ಜಮೀನುಗಳಲ್ಲಿನ ಪಹಣಿ ಪತ್ರದಲ್ಲಿ ವಕ್ಫ್ ಬೋರ್ಡ್ ಹೆಸರು ದಾಖಲಾಗಿರುವುದು ಬಯಲಿಗೆ ಬಂದಿತ್ತು. ಈ ಸಂಬಂಧ ರೈತರು ಪ್ರತಿಭಟನೆ ಮಾಡಿದ ಪರಿಣಾಮ ನ.5ರಂದು ಜಿಲ್ಲೆಯ ತಹಶೀಲ್ದಾರ, ವಕ್ಫ್ ಅಧಿಕಾರಿಗಳು ಮತ್ತು ರೈತರು ಒಟ್ಟಾಗಿ ಸಭೆ ನಡೆಸಲು ಮುಂದಾಗಿದ್ದಾರೆ.ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂನ ಹಳೆಯ ಕ್ರಸ್ಟ್‌ಗೇಟ್‌ ಮಾರಾಟ ಮಾಡಲು ಹುನ್ನಾರ

    ಇನ್ನೂ ನವಲಗುಂದ ತಾಲೂಕಿನ ಮುಸ್ಲಿಂ ಸಮುದಾಯದ ಹುನಗುಂದ ಎಂಬ ಕುಟುಂಬವು 1961ರಲ್ಲಿಯೇ ಖರೀದಿ ಮಾಡಿದ ಜಮೀನಿನ ವಿಚಾರವಾಗಿ ಸಹೋದರರ ಮಧ್ಯೆ ಇತ್ತೀಚೆಗೆ ವ್ಯಾಜ್ಯ ಉಂಟಾಗಿತ್ತು. ಅದರಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಮಾಲೀಕರಿಗೆ ತಿಳಿದು ಬಂದಿದೆ. ಇದರಿಂದಾಗಿ ಆಘಾತಗೊಂಡಿರುವ ಮಾಲೀಕರು ನ್ಯಾಯಾಲಯದಲ್ಲಿ ದಾವೆ ಹೂಡಲು ನಿರ್ಧರಿಸಿದ್ದಾರೆ.

    ಹಾವೇರಿ ಜಿಲ್ಲೆ ಸವಣೂರು ತಾಲೂಕು ಕಡಕೋಳ ಗ್ರಾಮ ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ. ಬುಧವಾರ ರಾತ್ರಿ ಕಡಕೋಳ ಗ್ರಾಮದಲ್ಲಾದ ಗಲಾಟೆಗೆ ಗ್ರಾಮಸ್ಥರು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಕಡಕೋಳದಲ್ಲಿರುವ ಆಂಜನೇಯ ದೇವಸ್ಥಾನವೂ ಸಹ ಮಸೀದಿ ಜಾಗದಲ್ಲಿದೆ ಎಂದು ಮುಸಲ್ಮಾನ ಮುಖಂಡರು ಗ್ರಾಮಸ್ಥರ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಇದರಿಂದ ಗಲಾಟೆಗೆ ಆಗಿದ್ದು, ಗ್ರಾಮಸ್ಥರು ರೊಚ್ಚಿಗೆದ್ದು ಮುಖಂಡರ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.

    ಇನ್ನು ಮಸೀದಿಗೂ ಮೊದಲು ಅಲ್ಲಿ ದೇವಸ್ಥಾನ ಇತ್ತು. ಅದಕ್ಕೆ ಪುರಾವೆಯಾಗಿ ಚತುರ್ಮುಖ ಬ್ರಹ್ಮನ ವಿಗ್ರಹ ಸಿಕ್ಕಿದೆ ಎಂದು ಮುಖಂಡರು ಪ್ರತಿಪಾದಿಸಿದರು. ಇತ್ತ ಶಾಸಕ ರುದ್ರಪ್ಪ ಲಮಾಣಿ ಕಡಕೋಳಕ್ಕೆ ಭೇಟಿ ನೀಡಿದ್ದು, ಪೊಲೀಸರು 32 ಜನರನ್ನು ಬಂಧಿಸುವಾಗ ಎಲ್ಲಿ ಹೋಗಿದ್ರಿ? ಎಂದು ಶಾಸಕನನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

    ಬೆಳಗಾವಿ ಜಿಲ್ಲೆಯ ರೈತರಿಗೂ ವಕ್ಫ್ ಬೋರ್ಡ್ ಶಾಕ್ ತಗುಲಿದೆ. 30 ರೈತರ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂದು ಉಲ್ಲೇಖಿಸಲಾಗಿದೆ. ವಕ್ಫ್ ಬೋರ್ಡ್ ಹೊಡೆತಕ್ಕೆ ದಂಗಾದ ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ 10 ರೈತ ಕುಟುಂಬಗಳು ಹಾಗೂ ಮೂಡಲಗಿ ತಾಲೂಕಿನ 20 ರೈತರ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಲಾಗಿದೆ.

    ಒಟ್ಟಿನಲ್ಲಿ ವಕ್ಫ್ ವಿವಾದ ದಿನೇ ದಿನೇ ರಾಜ್ಯದ ಜಿಲ್ಲೆಗಳಿಗೆ ವ್ಯಾಪಿಸುತ್ತಿದ್ದು, ಇನ್ನಾದರೂ ಸರ್ಕಾರ ಗಮನಹರಿಸಿ ರೈತರ ಸಮಸ್ಯೆಗೆ ಪರಿಹಾರ ಸೂಚಿಸಬೇಕಿದೆ.ಇದನ್ನೂ ಓದಿ: ದೀಪಾವಳಿ ಬಳಿಕ ಜೋರಾಗಲಿದೆ ಶಿಗ್ಗಾಂವಿ ಉಪಸಂಗ್ರಾಮ – ನ.5ಕ್ಕೆ ಭರತ್ ಬೊಮ್ಮಾಯಿ ಪರ ವಿಜಯೇಂದ್ರ ಪ್ರಚಾರ