Tag: ಧಾರವಾಡ

  • ಹನಿಟ್ರ‍್ಯಾಪ್ ಪ್ರಕರಣ ಸಿಬಿಐಗೆ ಕೊಡುವ ಅಗತ್ಯವಿಲ್ಲ: ವಿನಯ್ ಕುಲಕರ್ಣಿ

    ಹನಿಟ್ರ‍್ಯಾಪ್ ಪ್ರಕರಣ ಸಿಬಿಐಗೆ ಕೊಡುವ ಅಗತ್ಯವಿಲ್ಲ: ವಿನಯ್ ಕುಲಕರ್ಣಿ

    ಧಾರವಾಡ/ಬೆಳಗಾವಿ: ಹನಿಟ್ರ‍್ಯಾಪ್ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುವ ಅಗತ್ಯವೇ ಇಲ್ಲ. ನಮ್ಮಲ್ಲೇ ಉತ್ತಮ ಅಧಿಕಾರಿಗಳಿದ್ದಾರೆ ಎಂದು ಶಾಸಕ ವಿನಯ್ ಕುಲಕರ್ಣಿ (Vinay Kulakarni) ಹೇಳಿದರು.

    ಬೆಳಗಾವಿಯ (Belagavi) ಕಿತ್ತೂರಿನಲ್ಲಿ (Kittur) ಮಾತನಾಡಿದ ಅವರು, ನಮ್ಮ ರಾಜ್ಯದಲ್ಲೇ ಹನಿಟ್ರ‍್ಯಾಪ್ ಪ್ರಕರಣವನ್ನು ಬೇಧಿಸುವಂತಹ ದಕ್ಷ ಅಧಿಕಾರಿಗಳಿದ್ದಾರೆ. ಹನಿಟ್ರ‍್ಯಾಪ್ ಮಾಡುವುದು ರಾಜಕಾರಣದಲ್ಲಿ ಅತ್ಯಂತ ಕೀಳುಮಟ್ಟದ ಕೆಲಸ. ಅದನ್ನು ಎಂದಿಗೂ ಮಾಡಬಾರದು ಎಂದರು. ಇದನ್ನೂ ಓದಿ: ಸಾಕು ನಾಯಿ ದಾಳಿ – ಮಹಿಳೆಯ ಮುಖಕ್ಕೆ ಬಿತ್ತು 20 ಸ್ಟಿಚ್

    ಫೋನ್ ಕದ್ದಾಲಿಕೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರೇ ಹೆಚ್ಚು ಫೋನ್ ಕದ್ದಾಲಿಕೆ ಮಾಡುತ್ತಾರೆ. ಇಂದಿಗೂ ಬಿಜೆಪಿಯರು ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ. ಆರ್.ಅಶೋಕ್ (R Ashok) ಅವರ ಫೋನ್ ಕದ್ದಾಲಿಕೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಪ್ರವಾಸದಲ್ಲಿದ್ದೆ ಎಂದು ತಿಳಿಸಿದರು. ಇದನ್ನೂ ಓದಿ: ಹನಿಟ್ರ್ಯಾಪ್‌ ಕೇಸ್‌ – ಪರಮೇಶ್ವರ್‌ಗೆ ದೂರು ನೀಡದೇ ಮನವಿ ಕೊಟ್ಟ ರಾಜಣ್ಣ

    ಡಿ.ಕೆ.ಶಿವಕುಮಾರ್ (D K Shivakumar) ಅವರು ಸಂವಿಧಾನದ ಪರ ಇದ್ದವರು. ಅವರು ಸಂವಿಧಾನಕ್ಕೆ ಎಂದಿಗೂ ವಿರುದ್ಧ ಇಲ್ಲ. ಗಾಂಧಿ ಕಾರ್ಯಕ್ರಮದಲ್ಲಿ ಅವರು ಏನು ಮಾತನಾಡಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಅಂತವರು ಸಂವಿಧಾನ ಬದಲಿಸುವ ಮಾತು ಹೇಳುತ್ತಾರಾ? ಅದು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ರೀಲ್ಸ್ ವಿವಾದ: ನಮಗೆ ಪೊಲೀಸರ ದಿಕ್ಕು ತಪ್ಪಿಸೋ ಉದ್ದೇಶವಿಲ್ಲ ಎಂದ ವಿನಯ್ ಗೌಡ

    ಶಾಸಕರಿಗೆ ಅನುದಾನದ ಕೊರತೆ ವಿಚಾರವಾಗಿ ಮಾತನಾಡಿ, ಬಜೆಟ್‌ನಲ್ಲಿ ಸ್ಪೆಷಲ್ ಗ್ರ‍್ಯಾಂಟ್ ಏನೂ ನಮಗೆ ಬಂದಿಲ್ಲ. ಇದನ್ನು ಸಿಎಂ ಜೊತೆ ನಾವು ಮಾತನಾಡುತ್ತೇವೆ. ಅವರೂ ಸಹ ನಮಗೆ ಹೆಚ್ಚು ಅನುದಾನ ಕೊಡುವ ಮಾತು ಹೇಳಿದ್ದಾರೆ. ನಮ್ಮ ಕಿತ್ತೂರು ಕರ್ನಾಟಕ ಭಾಗದ ಶಾಸಕರಿಗೆ ಹೆಚ್ಚಿನ ಅನುದಾನದ ಭರವಸೆ ಇದೆ. ಹೈದರಾಬಾದ್ ಕರ್ನಾಟಕದವರಿಗೆ 5 ಸಾವಿರ ಕೋಟಿ ರೂ. ಕೊಟ್ಟಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ರೀಲ್ಸ್ ಮಾಡಿದ ಜಾಗದಲ್ಲಿ ವಿನಯ್‌, ರಜತ್‌ರನ್ನು ಸ್ಥಳ ಮಹಜರಿಗೆ ಕರೆತಂದ ಪೊಲೀಸರು

    ಹಲವು ಕಾರ್ಯಕ್ರಮ ಕೂಡ ಇಲ್ಲಿ ಮುಂದೂಡಲಾಗಿದೆ. ಇದು ಅನುದಾನದ ಕೊರತೆ ಎಂದು ನಮಗನಿಸುತ್ತಿದೆ. ಕಿತ್ತೂರು ಕರ್ನಾಟಕ ಭಾಗದ ಶಾಸಕರಿಗಾಗಿ 8 ಸಾವಿರ ಕೋಟಿ ರೂ. ಇಟ್ಟುಕೊಂಡಿದ್ದು, ನಾನು ಎಲ್ಲಾ ಬ್ಯಾಲನ್ಸ್ ಮಾಡಿ ಕೊಡುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಧಾರವಾಡಕ್ಕೆ (Dharwada) ಪ್ರತ್ಯೇಕ ಪಾಲಿಕೆ ಮಾಡಿರುವುದರಿಂದ ನಾನು ನೂರು ಕೋಟಿ ರೂ. ಅನುದಾನ ಕೊಡಲು ಕೇಳಿದ್ದೇನೆ. ಸಿಎಂ 200 ಕೋಟಿ ರೂ. ಕೊಡಬಹುದು ಎಂದರು. ಇದನ್ನೂ ಓದಿ: ಡಿಕೆಶಿ ಪ್ರತಿಕೃತಿ ಸುಟ್ಟು 200ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

  • ವಿದ್ಯಾಕಾಶಿ ಧಾರವಾಡಕ್ಕೆ ವರುಣನ ಸ್ಪರ್ಶ – ಮೊದಲ ಮಳೆಗೆ ಕಾಮಣ್ಣನ ಕಣ್ಣೀರು ಎಂದ ಜನ

    ವಿದ್ಯಾಕಾಶಿ ಧಾರವಾಡಕ್ಕೆ ವರುಣನ ಸ್ಪರ್ಶ – ಮೊದಲ ಮಳೆಗೆ ಕಾಮಣ್ಣನ ಕಣ್ಣೀರು ಎಂದ ಜನ

    ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ (Dharwad) ವರ್ಷದ ಮೊದಲ ಮಳೆ ಸುರಿದಿದೆ. ಆ ಮೂಲಕ ಬಿಸಿಲಿನಿಂದ ಕಂಗೆಟ್ಟಿದ ಜನತೆಗೆ ಮಳೆರಾಯ ಕೊಂಚ ತಂಪೆರೆದಿದ್ದಾನೆ.

    ಧಾರವಾಡದಲ್ಲಿ ಮಂಗಳವಾರ ತಡರಾತ್ರಿ ಸುಮಾರು ಅರ್ಧ ಗಂಟೆಗಳ ಕಾಲ ಮಳೆಯಾಗಿದೆ. ಹೋಳಿ ಹುಣ್ಣಿಮೆ ನಂತರ ಮಳೆರಾಯನ ಆಗಮನವಾಗುವುದು ಸಹಜ. ಅದೇ ರೀತಿ ಮಂಗಳವಾರ ತಡರಾತ್ರಿ ಧಾರವಾಡಕ್ಕೆ ಮಳೆರಾಯನ ಆಗಮನವಾಗಿದೆ. ಇದನ್ನೂ ಓದಿ: ದಿನದ ಖರ್ಚಿಗೆ 5,000 ರೂ.ಗೆ ಡಿಮ್ಯಾಂಡ್‌ – ಪತ್ನಿಯಿಂದ ನಿತ್ಯ ಕಿರುಕುಳ, ಠಾಣೆ ಮೆಟ್ಟಿಲೇರಿದ ಟೆಕ್ಕಿ ಪತಿ

    ಜನರು ಈ ಮಳೆಯನ್ನು ಕಾಮಣ್ಣ ಕಣ್ಣೀರು ಎಂದು ನಂಬುತ್ತಾರೆ. ಕಾಮಣ್ಣನ ದಹನದ 5 ದಿನಗಳಲ್ಲಿ ಮಳೆ ಬಂದರೆ ಅದು ಕಾಮಣ್ಣನ ಕಣ್ಣೀರು ಎಂದು ಇಲ್ಲಿನ ಜನರು ಭಾವಿಸುತ್ತಾರೆ. ಇದನ್ನೂ ಓದಿ: ಭೂಮಿಗೆ ಸುನಿತಾ ವಿಲಿಯಮ್ಸ್ ಇಳಿದಾಯ್ತು ಮುಂದೇನು? 45 ದಿನಗಳ ರಿಹ್ಯಾಬಿಲಿಟೇಶನ್‌ನಲ್ಲಿ ಏನಿರುತ್ತೆ?

  • ಧಾರವಾಡದ ಉಪ್ಪಿನಕಾಯಿ ಅಜ್ಜಿಗೆ ನಾರಿ ನಾರಾಯಣಿ ಗೌರವ

    ಧಾರವಾಡದ ಉಪ್ಪಿನಕಾಯಿ ಅಜ್ಜಿಗೆ ನಾರಿ ನಾರಾಯಣಿ ಗೌರವ

    ವಯಸ್ಸು 80. ಆದರೆ ದುಡಿಯುವ ಛಲ ಮಾತ್ರ ಯುವಜನರನ್ನು ನಾಚಿಸುವಂತೆ ಇದೆ. ತನ್ನ ಜೀವನ ನಡೆಸಲು ಉಪ್ಪಿನಕಾಯಿ ವ್ಯವಹಾರ ಆರಂಭಿಸಿದ ಧಾರವಾಡದ ಅಜ್ಜಿ ಈಗ ತನ್ನಂತೆ ಕಷ್ಟದಲ್ಲಿರುವ ಮಹಿಳೆಯರ ಬದುಕಿಗೂ ಹೊಸ ಬೆಳಕು ನೀಡಿದ್ದಾರೆ.

    ಧಾರವಾಡ ನಗರದ ಸಿಲ್ವರ್‌ ಆರ್ಚರ್ಡ್ ನಿವಾಸಿಯಾಗಿರುವ ಜಯಶೀಲಾ ಅವರಿಗೆ ಈಗ 80 ವರ್ಷ. 20 ವರ್ಷಗಳ ಹಿಂದೆ ಇವರು ಉಪ್ಪಿನಕಾಯಿ ವ್ಯಾಪಾರ ಶುರು ಮಾಡಿದರು. ಅಜ್ಜಿ ಉಪ್ಪಿನಕಾಯಿ ಟೇಸ್ಟ್ ಇಡೀ ಧಾರವಾಡದಲ್ಲಿ ಫೇಮಸ್ ಆಯ್ತು. ಅದೆಷ್ಟರ ಮಟ್ಟಿಗೆ ಕ್ಲಿಕ್ ಆಯ್ತು ಅಂದ್ರೆ ಎಲ್ಲರೂ ʼಉಪ್ಪಿನಕಾಯಿ ಅಜ್ಜಿʼ ಎಂದೇ ಕರೆಯಲು ಆರಂಭಿಸಿದರು. ಪ್ರತಿ ವರ್ಷ 60 ಟನ್ ಮಾವಿನಕಾಯಿ, 30 ಟನ್ ನಿಂಬೆಕಾಯಿಯ ಉಪ್ಪಿನಕಾಯಿಯನ್ನು ಇವರು ತಯಾರಿ ಮಾಡುತ್ತಾರೆ.

    ಈ ಅಜ್ಜಿ ಈಗ ಉಪ್ಪಿನಕಾಯಿ ಫ್ಯಾಕ್ಟರಿಯನ್ನು ತೆರೆದು 15 ಬಡ ಮಹಿಳೆಯರಿಗೆ ಉದ್ಯೋಗವನ್ನು ನೀಡಿದ್ದಾರೆ. ಆರಂಭದಲ್ಲಿ ಅಜ್ಜಿ ಉಪ್ಪಿನಕಾಯಿ ವ್ಯಾಪಾರಕ್ಕೆ ಮನೆಯವರು ವಿರೋಧ ಮಾಡಿದರೂ ಈಗ ಅಜ್ಜಿಗೆ ಭರ್ಜರಿ ಬೆಂಬಲ ನೀಡುತ್ತಿದ್ದಾರೆ. ಈ ಸಾಧಕಿ ಅಜ್ಜಿಗೆ ನಾರಿ ನಾರಾಯಣಿ ಪ್ರಶಸ್ತಿ ನೀಡಲು ಪಬ್ಲಿಕ್ ಟಿವಿ ಹರ್ಷಿಸುತ್ತಿದೆ.

    ನಾರಿ ನಾರಾಯಣಿ, ಬೆಂಗಳೂರು, ಪಬ್ಲಿಕ್‌ ಟಿವಿ, ಮಹಿಳಾ ದಿನಾಚರಣೆ, ಉಪ್ಪಿನಕಾಯಿ, ಧಾರವಾಡ, ಜಯಶೀಲಾ

  • ಸಿಲಿಂಡರ್ ಸ್ಫೋಟ ಪ್ರಕರಣ – ಗಾಯಾಳು ಸಾವು

    ಸಿಲಿಂಡರ್ ಸ್ಫೋಟ ಪ್ರಕರಣ – ಗಾಯಾಳು ಸಾವು

    ಹುಬ್ಬಳ್ಳಿ: ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ರಾಜಸ್ಥಾನ (Rajasthan) ಜೋಧ್‌ಪುರದ (Jodhpur) ಸುಭಾಶ್ ಮೋಹನರಾಮ್ (26) ಮೃತ ದುರ್ದೈವಿ. ಹುಬ್ಬಳಿಯ ಗಾಮನಗಟ್ಟಿ ಕೈಗಾರಿಕಾ ಪ್ರದೇಶದ ಫಾರ್ಮ್‌ಹೌಸ್‌ನಲ್ಲಿ ಅಡುಗೆ ಅನಿಲ ಸೋರಿಕೆಯಿಂದಾದ ಸ್ಫೋಟದಲ್ಲಿ ಸುಭಾಶ್ ಗಂಭೀರ ಗಾಯಗೊಂಡಿದ್ದರು. ಇದನ್ನೂ ಓದಿ: ತುಮಕೂರು | ಮನೆ ಮುಂದಿದ್ದ ನಾಯಿಯನ್ನು ಹೊತ್ತೊಯ್ದ ಚಿರತೆ – ಭಯಭೀತರಾದ ಗ್ರಾಮಸ್ಥರು

    ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಭಾಶ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

    ಘಟನೆಯಲ್ಲಿ ಗಾಯಗೊಂಡಿದ್ದ ಇನ್ನಿಬ್ಬರನ್ನು ಸುಭಾಶ್ ಕಡೆಯವರು ರಾಜಸ್ಥಾನದ ತಮ್ಮ ಊರಿಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಜನ ಸಾಮಾನ್ಯರ ಬಳಿ ಫಟಾಫಟ್ ವಸೂಲಿ – ಸರ್ಕಾರಿ ಇಲಾಖೆಗಳಿಂದಲೇ 8,000 ಕೋಟಿ ವಿದ್ಯುತ್‌ ಬಿಲ್‌ ಬಾಕಿ!

  • ಅಯೋಧ್ಯೆಗೆ ತೆರಳಿದ್ದ ಕಾರಿನ ಗ್ಲಾಸ್ ಒಡೆದು ಕಳ್ಳತನ – 10 ಮೊಬೈಲ್, 20,000 ರೂ. ದೋಚಿದ ಖದೀಮರು

    ಅಯೋಧ್ಯೆಗೆ ತೆರಳಿದ್ದ ಕಾರಿನ ಗ್ಲಾಸ್ ಒಡೆದು ಕಳ್ಳತನ – 10 ಮೊಬೈಲ್, 20,000 ರೂ. ದೋಚಿದ ಖದೀಮರು

    ಲಕ್ನೋ: ಅಯೋಧ್ಯೆಗೆ (Ayodhya) ತೆರಳಿದ್ದ ಧಾರವಾಡದ 2 ಕುಟುಂಬಗಳ ಕಾರಿನ ಗ್ಲಾಸ್ ಒಡೆದು ಬ್ಯಾಗ್ (Bag), ಮೊಬೈಲ್ (Mobile) ಹಾಗೂ 20,000 ರೂ. ಕಳ್ಳತನ ಮಾಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿ ನಡೆದಿದೆ.

    ಧಾರವಾಡ ಶೆಟ್ಟರ್ ಕಾಲೋನಿಯ ಅರುಣಕುಮಾರ ಬಡಿಗೇರ ಹಾಗೂ ಮಾಳಮಡ್ಡಿಯ ಬಸವರಾಜ್ ಕೊಟ್ಯಾಳ್ ಎಂಬುವವರ ಕುಟುಂಬದವರು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ತೆರಳಿದ್ದರು. ಶಾಹಿ ಸ್ನಾನ ಮುಗಿಸಿ ಅಯೋಧ್ಯೆಗೆ ಹೋಗಿದ್ದರು. ಕುಟುಂಬಸ್ಥರು ಶನಿವಾರ ರಾತ್ರಿ ಅಯೋಧ್ಯೆಯಲ್ಲಿ ಕಾರು ಪಾರ್ಕಿಂಗ್ ಮಾಡಿ ದರ್ಶನಕ್ಕೆ ಹೋಗಿದ್ದರು. ಇದನ್ನೂ ಓದಿ : ಸ್ಥಳೀಯ ಚುನಾವಣೆಯಿಂದ ಲೋಕಸಭಾ ಚುನಾವಣೆವರೆಗೂ ಸಿದ್ದರಾಮಯ್ಯ ಬೇಕು: ಡಿಕೆಶಿ

    ಈ ವೇಳೆ ಖದೀಮರು ಕಾರಿನ ಕಿಟಕಿ ಗಾಜು ಒಡೆದು ಬ್ಯಾಗ್, 10 ಮೊಬೈಲ್, 20,000 ರೂ., ಎಟಿಎಂ ಕಾರ್ಡ್ ಸೇರಿ ಬಟ್ಟೆ ಕಳ್ಳತನ ಮಾಡಿದ್ದಾರೆ. ಶ್ರೀರಾಮನ ದರ್ಶನ ಮುಗಿಸಿ ಬಂದು ನೋಡಿದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ. ಇದರಿಂದ 2 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದೆ. ಇದನ್ನೂ ಓದಿ : ಹುಟ್ಟುಹಬ್ಬದ ದಿನವೇ ನಟ ದರ್ಶನ್ ಬ್ಯಾನರ್ ತೆರವು – ಫ್ಯಾನ್ಸ್‌ಗೆ ಶಾಕ್

    ನಮಗೆ ಆದಂತೆ ಬೇರೆ ಜನರಿಗೆ ಆಗದಿರಲಿ. ರಾಜ್ಯದಿಂದ ಹಲವು ಜನರು ಈಗಲೂ ಕುಂಭಮೇಳಕ್ಕೆ ಹೋಗುತ್ತಿದ್ದಾರೆ. ಹೀಗಾಗಿ ಅವರ ಬ್ಯಾಗ್, ಮೊಬೈಲ್ ಹಾಗೂ ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳಲಿ ಎಂದು ಎಚ್ಚರಿಕೆ ವಹಿಸುವಂತೆ ಕುಟುಂಬಗಳು ಮನವಿ ಮಾಡಿದ್ದಾರೆ.

  • MUDA Scam – 10 ದಿನ ಸಿಎಂ ಪತ್ನಿ, ಬೈರತಿ ಸುರೇಶ್‌ಗೆ ರಿಲೀಫ್‌

    MUDA Scam – 10 ದಿನ ಸಿಎಂ ಪತ್ನಿ, ಬೈರತಿ ಸುರೇಶ್‌ಗೆ ರಿಲೀಫ್‌

    ಧಾರವಾಡ: ಮುಡಾ ಅಕ್ರಮಕ್ಕೆ (MUDA Scam) ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ (Parvathi) ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ (Byrathi Suresh) ಅವರಿಗೆ ಧಾರವಾಡ ಹೈಕೋರ್ಟ್‌ (Dharwad High Court) ತಾತ್ಕಾಲಿಕ ರಿಲೀಫ್‌ ನೀಡಿದೆ.

    ಇಂದು ಅರ್ಜಿ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್‌ ನ್ಯಾ. ನಾಗಪ್ರಸನ್ನ ಅವರು 10 ದಿನಗಳ ಕಾಲ ಸಿಎಂ ಪತ್ನಿ ಮತ್ತು ಬೈರತಿ ಸುರೇಶ್‌ ಅವರಿಗೆ ಹಾಜರಾತಿಯಿಂದ ವಿನಾಯಿತಿ ನೀಡಿ ಆದೇಶ ಪ್ರಕಟಿಸಿದರು.

    ಫೆಬ್ರವರಿ 20ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದ್ದು ಅಲ್ಲಿಯವರೆಗೆ ಇಬ್ಬರಿಗೂ ಮಧ್ಯಂತರ ರಕ್ಷಣೆ ಮುಂದುವರಿಯಲಿದೆ.

    ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್‌ಗೆ ಹೈಕೋರ್ಟ್ ಮಧ್ಯಂತರ ರಕ್ಷಣೆ ಮುಂದುವರಿದಿದೆ.. ಇಬ್ಬರಿಗೂ ಜಾರಿಯಾಗಿದ್ದ ಸಮನ್ಸ್ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ನಾಗಪ್ರಸನ್ನ ಪೀಠ, ಫೆಬ್ರವರಿ 10ಕ್ಕೆ ವಿಚಾರಣೆ ಮುಂದೂಡಿದೆ.

    ಮೊದಲು ಸಚಿವ ಬೈರತಿ ಸುರೇಶ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿವಿ ನಾಗೇಶ್, ಬೈರತಿ ಸುರೇಶ್ 2023ರ ಜೂನ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಇಡಿ ಪ್ರಶ್ನಾವಳಿಯಲ್ಲಿ ಅಪ್ಪ, ತಾತ, ಮಕ್ಕಳು, ಮೊಮ್ಮಕ್ಕಳ ಮಾಹಿತಿ ಎಲ್ಲಾ ನೀಡಿ ಎಂದು ಸಮನ್ಸ್ ಮಾಡಿದೆ. ಎಲ್ಲರ ಮಾಹಿತಿಯನ್ನು ಬ್ಯಾಂಕ್ ಡಿಟೈಲ್ಸ್ ಕೊಡಬೇಕೆಂದು ಇಡಿ ಕೇಳುತ್ತಿದೆ. ಸುರೇಶ್ ಗೂ ಈ ಪ್ರಕರಣ ಯಾವುದೇ ಸಂಬಂಧ ಇಲ್ಲ. ಪ್ರಕರಣದಲ್ಲಿ ಅವರು ಆರೋಪಿಯೂ ಅಲ್ಲ, ಆದರೂ ಕೂಡ ಇಡಿ ಸಮನ್ಸ್ ನೀಡಿದೆ.. ಹೀಗಾಗಿ ಕೋರ್ಟ್ ಗೆ ಬಂದಿದ್ದೇವೆ ಎಂದು ವಾದ ಮಂಡಿಸಿದರು.

    ಇತ್ತ ಸಿಎಂ ಪತ್ನಿ ಪಾರ್ವತಿ ಪರ ವಾದ ಮಂಡಿಸಿದ ಸಂದೇಶ್ ಚೌಟ, ಪ್ರಕರಣದಲ್ಲಿ ಸೈಟ್‌ಗಳನ್ನು ವಾಪಸ್ ಮಾಡಲಾಗಿದೆ. ಅಕ್ರಮ ಹಣ ವಗಾರ್ವಣೆ ಪ್ರಶ್ನೆಯೇ ಬರುವುದಿಲ್ಲ. ಅಕ್ರಮ ಹಣದ ಗಳಿಕೆಯಿದ್ದರೆ ಮಾತ್ರ ಇಡಿಗೆ ಅಧಿಕಾರವಿದೆ. ಆಗ ಮಾತ್ರ ಇಡಿ ಸರ್ಚ್ ಮತ್ತು ಸೀಜ್ ಮಾಡಬಹುದು. ಆದರೆ ನಟೇಶ್ ಪ್ರಕರಣದಲ್ಲಿ ಇಡಿಯ ದಾಳಿ ಮತ್ತು ಸೀಜ್ ರದ್ದುಪಡಿಸಿದೆ. ಇಡಿ ಕಾನೂನು ಉಲ್ಲಂಘಿಸಿದೆ ಎಂದು ಹೈಕೋರ್ಟ್ ನಮ್ಮ ಪರ ತೀರ್ಪು ನೀಡಿದೆ ಎಂದು ವಾದ ಮಂಡಿಸಿದರು.

    ಇಡಿ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ನೀಡಿದ ಕೋರ್ಟ್ ವಿಚಾರಣೆಯನ್ನು ಫೆಬ್ರವರಿ 10ಕ್ಕೆ ಮುಂದೂಡಿತು.

     

    ಏನಿದು ಕೇಸ್?
    ಸಿಎಂ ವಿರುದ್ಧದ ಮುಡಾ ಹಗರಣ ಪ್ರಕರಣದಲ್ಲಿ ಇಡಿ ಮೇಜರ್ ಟ್ವಿಸ್ಟ್ ನೀಡಿತ್ತು. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ (BM Parvathi) ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಮಾಡಿತ್ತು. ಇಡಿ ಬೆಂಗಳೂರು ವಲಯ ಕಚೇರಿಯ ಸಹಾಯಕ ನಿರ್ದೇಶಕ ವಿ. ಮುರಳಿಕೃಷ್ಣನ್ ಅವರು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಮಾಡಿದ್ದರು. ಇಡಿ ಸಮನ್ಸ್ ಪ್ರಶ್ನಿಸಿ ಸಿಎಂ ಪತ್ನಿ ಹಾಗೂ ಬೈರತಿ ಸುರೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.

  • ಇನ್‌ಸ್ಟಾಗ್ರಾಂ ಪ್ರೀತಿ ತಂದ ಫಜೀತಿ – ಪತಿ ಬಿಟ್ಟು ಬಂದಿದ್ದ ಗೃಹಿಣಿ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ

    ಇನ್‌ಸ್ಟಾಗ್ರಾಂ ಪ್ರೀತಿ ತಂದ ಫಜೀತಿ – ಪತಿ ಬಿಟ್ಟು ಬಂದಿದ್ದ ಗೃಹಿಣಿ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ

    – ಸ್ಪರ್ಧಾತ್ಮಕ ಪರೀಕ್ಷೆ ಓದುತ್ತೇನೆಂದು ಬಾಡಿಗೆ ಮನೆಯಲ್ಲಿದ್ದ ಮಹಿಳೆ

    ಧಾರವಾಡ: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನೊಂದಿಗೆ ಪ್ರೀತಿಗೆ ಬಿದ್ದ ಗೃಹಿಣಿ ತನ್ನ ಪತಿ ಬಿಟ್ಟು ಬಂದು ವರ್ಷದ ಬಳಿಕ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಧಾರವಾಡದ ಶ್ರೀನಗರ 1ನೇ ಕ್ರಾಸ್‌ನ ಮನೆಯಲ್ಲಿ ಘಟನೆ ನಡೆದಿದ್ದು, ಶ್ವೇತಾ ಗುದಗಾಪುರ (24) ನೇಣಿಗೆ ಶರಣಾದ ಗೃಹಿಣಿ.

    ರಾಮದುರ್ಗ ಮೂಲದ ಶ್ವೇತಾ ಪತಿಯನ್ನು ಬಿಟ್ಟು ಧಾರವಾಡಕ್ಕೆ ಬಂದು ಕಳೆದ ಒಂದು ವರ್ಷದಿಂದ ವಾಸವಾಗಿದ್ದರು. ರಾಮದುರ್ಗದ ವಿಶ್ವನಾಥ ಜೊತೆಗೆ ಐದು ವರ್ಷದ ಹಿಂದೆ ವಿವಾಹವಾಗಿತ್ತು. ಆದರೆ ಎರಡು ವರ್ಷದಿಂದ ಪತಿಯಿಂದ ದೂರವಾಗಿದ್ದರು.

    ಇನ್‌ಸ್ಟ್ರಾಗ್ರಾಮ್ ಪ್ರೀತಿಗೆ ಶ್ವೇತ ಮರುಳಾಗಿದ್ದರು. ಧಾರವಾಡ ಮೂಲದ ಯುವಕನೊಂದಿಗೆ ಪ್ರೀತಿಗೆ ಬಿದ್ದಿದ್ದರು. ಬಳಿಕ ಪತಿಗೆ ಡೈವರ್ಸ್ ನೋಟಿಸ್ ಕಳುಹಿಸಿದ್ದರು. ಇನ್‌ಸ್ಟ್ರಾಗ್ರಾಮ್‌ನಲ್ಲಿ ಈಕೆಗೆ ಯುವಕ ಪರಿಚಯವಾಗಿದ್ದ. ಯುವಕನೊಂದಿಗಿನ ಪರಿಚಯ ಪ್ರೀತಿಗೆ ತಿರುಗಿತ್ತು.

    ಯುವಕನ ನಂಬಿ ಪತಿ ಬಿಟ್ಟು ಶ್ವೇತಾ ಬಂದಿದ್ದರು. ಧಾರವಾಡದ ಬಾಡಿಗೆ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗೆ ಓದಿಕೊಳ್ಳೋದಾಗಿ ಬಾಡಿಗೆ ಮನೆಯಲ್ಲಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ರಾಜಕಾರಣಿಗಳು ಭಾಗಿ, ತನಿಖೆ ಸರಿಯಾಗಿ ನಡೆಯುತ್ತಿಲ್ಲ, ಸಿಬಿಐಗೆ ಮುಡಾ ಕೇಸ್‌ ನೀಡಿ – ಜ.27ಕ್ಕೆ ಮುಂದಿನ ವಿಚಾರಣೆ

    ರಾಜಕಾರಣಿಗಳು ಭಾಗಿ, ತನಿಖೆ ಸರಿಯಾಗಿ ನಡೆಯುತ್ತಿಲ್ಲ, ಸಿಬಿಐಗೆ ಮುಡಾ ಕೇಸ್‌ ನೀಡಿ – ಜ.27ಕ್ಕೆ ಮುಂದಿನ ವಿಚಾರಣೆ

    – ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಅರ್ಜಿ
    – ಲೋಕಾಯುಕ್ತ ತನಿಖೆಗೆ ತಡೆ ನೀಡದ ಹೈಕೋರ್ಟ್‌

    ಧಾರವಾಡ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣದ (MUDA Scam) ತನಿಖೆಯನ್ನು ಸಿಬಿಐಗೆ (CBI) ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ (High Court)  ಧಾರವಾಡ ಪೀಠ ಜ.27ಕ್ಕೆ ಮುಂದೂಡಿದೆ.

    ಲೋಕಾಯುಕ್ತ ತನಿಖೆಯಿಂದ (Lokayukta Enquiry) ಸತ್ಯಾಂಶ ಪ್ರಕಟವಾಗುವುದಿಲ್ಲ. ಹೀಗಾಗಿ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಹೈಕೋರ್ಟ್‌ನಲ್ಲಿ ದೂರು ಸಲ್ಲಿಸಿದ್ದರು.

    ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಲೋಕಾಯುಕ್ತ ಪೊಲೀಸರಲ್ಲಿ ತನಿಖಾ ವರದಿ ಎಲ್ಲಿ ಎಂದು ಕೇಳಿದರು. ಇದಕ್ಕೆ ಲೋಕಾ ಪರ ವಕೀಲರು ತನಿಖಾ ವರದಿ ಪೂರ್ಣಗೊಂಡಿಲ್ಲ ಎಂದು ಹೇಳಿದರು. ಈ ವೇಳೆ ನಾಗಪ್ರಸನ್ನ ಅವರು ಜ.26ರ ಸಂಜೆಯ ಒಳಗಡೆ ಎಷ್ಟು ತನಿಖೆ ನಡೆದಿದೆಯೋ ಅಷ್ಟು ತನಿಖಾ ವರದಿಯನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕೆಂದು ಸೂಚಿಸಿ ವಿಚಾರಣೆಯನ್ನು ಜ.27ಕ್ಕೆ ಮುಂದೂಡಿದರು. ಅಷ್ಟೇ ಅಲ್ಲದೇ ಲೋಕಾಯುಕ್ತ ತನಿಖೆಗೆ ತಡೆ ನೀಡುವುದಿಲ್ಲ. ತನಿಖೆ ಮುಂದುವರಿಯಲಿ ಎಂದು ಸೂಚಿಸಿದರು.

    ಇಂದು ವಿಚಾರಣೆಗೆ ಸ್ನೇಹಮಯಿ ಕೃಷ್ಣ ಪರ ಮಣಿಂದರ್ ಸಿಂಗ್, ಸಿದ್ದರಾಮಯ್ಯ ಪರ ರವಿಕುಮಾರ ವರ್ಮಾ ಕುಮಾರ್‌, ವಿಡಿಯೋ ಕಾನ್ಫರೆನ್ಸ್‌ ಮೂಲಕ ಅಭಿಷೇಕ್‌ ಮನು ಸಿಂಘ್ವಿ, ಕಪಿಲ್‌ ಸಿಬಲ್‌ ಹಾಜರಾಗಿದ್ದರು. ಮುಡಾ ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಇಂದು ಕೋರ್ಟ್‌ ಹಾಲ್‌ ವಕೀಲರಿಂದ ಕಿಕ್ಕಿರಿದು ತುಂಬಿತ್ತು.

     ಮಣಿದರ್‌ ಸಿಂಗ್‌ ವಾದ ಏನಿತ್ತು?
    ರಾಜಕಾರಣಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಪೊಲೀಸರು ತನಿಖೆಯನ್ನು ಪಾರದರ್ಶಕವಾಗಿ ಮಾಡಲು ಸಾಧ್ಯವಿಲ್ಲ. ಲೋಕಾಯುಕ್ತದ ತನಿಖೆ ಮೇಲೆ ಸ್ಪಷ್ಟ ನಂಬಿಕೆ ಇಲ್ಲ. ಈಗಾಗಲೇ ಪರಿವರ್ತನೆ ಆಗಿದ್ದ ಭೂಮಿಯನ್ನು ಮತ್ತೆ ಕೃಷಿ ಭೂಮಿ ಮಾಡಿದ್ದಾರೆ. ಕೃಷಿ ಭೂಮಿಯನ್ನು ವಾಪಸ್‌ ಮುಡಾ ತೆಗೆದುಕೊಂಡಿದೆ.

    ವಿಜಯನಗರದ ಡೆವಲಪ್ಮೆಂಟ್ ಏರಿಯಾದಲ್ಲಿ 14 ಸೈಟ್‌ಗಳನ್ನು ಸಿಎಂ ಪತ್ನಿ ಪಾರ್ವತಿ ಅವರಿಗೆ ನೀಡಲಾಗಿದೆ. ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಸಂಪೂರ್ಣ ಅಪರಾಧ ಬೆಳಕಿಗೆ ಬಂದಿದೆ. ಪಾರ್ವತಿಯವರು ಈ ಪ್ರಕರಣ ತನಿಖೆ ಆರಂಭವಾಗುತ್ತಿದ್ದಂತೆ ಸೈಟ್‌ಗಳನ್ನು ಮರಳಿಸಿದ್ದಾರೆ. ಡಿವೈಎಸ್‌ಪಿ ಫೈಲ್‌ಗಳನ್ನು ಎತ್ತಿಕೊಂಡಿದ್ದಾರೆ. ಐಎಎಸ್ ಅಧಿಕಾರಿ ಮುಡಾಗೆ ಹೋಗಿ ದಾಖಲೆ ಎತ್ತಿಕೊಂದು ಹೋಗುರುವ ಬಗ್ಗೆಯೂ ತನಿಖೆ ಮಾಡಿಲ್ಲ ಎಂದು ವಾದಿಸಿದರು.

     

  • ಹಸುವಿನ ಕೆಚ್ಚಲು ಕೊಯ್ದ ನೀಚರನ್ನು ಬಂಧಿಸದಿದ್ದರೇ ಜಮೀರ್ ವಿರುದ್ಧ ಹೋರಾಟ: ಮುತಾಲಿಕ್ ಎಚ್ಚರಿಕೆ

    ಹಸುವಿನ ಕೆಚ್ಚಲು ಕೊಯ್ದ ನೀಚರನ್ನು ಬಂಧಿಸದಿದ್ದರೇ ಜಮೀರ್ ವಿರುದ್ಧ ಹೋರಾಟ: ಮುತಾಲಿಕ್ ಎಚ್ಚರಿಕೆ

    ಧಾರವಾಡ: ಇಂದು ಬೆಳಗ್ಗೆ ಚಾಮರಾಜಪೇಟೆಯ (Chamrajpet) ಒಬ್ಬನ ಮಾಲೀಕತ್ವದಲ್ಲಿ ಇದ್ದ ನಾಲ್ಕು ಹಸುವಿನ ಕೆಚ್ಚಲು ಕೊಯ್ದಿದ್ದಾರೆ. ಇದು ನೀಚ ಕೃತ. ಇಸ್ಲಾಮಿಕ್ ಶಕ್ತಿಯ ಪ್ರದರ್ಶನ ಆಗುತ್ತಿದೆ, ರಾಕ್ಷಸ ಕೃತ್ಯಕ್ಕೆ ಇದು ಉದಾಹರಣೆ ಎಂದು ಶ್ರೀರಾಮ ಸೇನೆ (Sri Ram Sena) ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalk) ಕಿಡಿಕಾರಿದ್ದಾರೆ.

    ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಮೀರ್ ಅಹ್ಮದ್ (Zameer Ahmed Khan) ಇದು ನಿಮ್ಮ ಕ್ಷೇತ್ರದಲ್ಲಿ ಆಗಿದೆ. ಇದನ್ನು ತಾವು ಗಂಭೀರವಾಗಿ ತೆಗೆದುಕೊಳ್ಳಬೇಕು. ಹಸು ಹಿಂದೂಗಳಿಗೆ ಅತ್ಯಂತ ಪೂಜ್ಯ ಪ್ರಾಣಿ. ಅದು ಬರೀ ಪ್ರಾಣಿ ಅಲ್ಲಾ, ಅದು ನಮಗೆ ಅನ್ನ ಹಾಕುತ್ತೆ, ಗೊಬ್ಬರ ಕೊಡುತ್ತೆ, ಔಷಧಿ ಕೊಡುತ್ತದೆ. ರೈತರ ಬೆನ್ನೆಲುಬು ಅದು. ಅದರ ಕೆಚ್ಚಲು ಕೊಯ್ದ ನೀಚರನ್ನು ಒದ್ದು ಒಳಗಡೆ ಹಾಕದಿದ್ದರೇ ಶ್ರೀರಾಮ ಸೇನೆಯಿಂದ ಜಮೀರ್ ವಿರುದ್ಧ ರಾಜ್ಯದಲ್ಲಿ ಹೋರಾಟ ಮಾಡುತ್ತೇವೆ, ಇದು ಎಚ್ಚರಿಕೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜಾಮೀನಿಗೆ ಮೇಲ್ಮನವಿ ಬಳಿಕ ದರ್ಶನ್‌ಗೆ ಬೆಂಗಳೂರು ಪೊಲೀಸರಿಂದ ಮತ್ತೊಂದು ಶಾಕ್‌!

    ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಇದೆ. ಕಾನೂನು ಇದ್ದರೂ ಕಾಂಗ್ರೆಸ್‌ನ ಮುಸ್ಲಿಂ ತುಷ್ಟೀಕರಣ ಹಿನ್ನೆಲೆಯಲ್ಲಿ ನಿರಂತರ ಗೋಹತ್ಯೆ ಆಗುತ್ತಿದೆ. ನಿರಂತರ ಕಸಾಯಿ ಖಾನೆಗೆ ಹಸು ಹೋಗುತ್ತಿವೆ. ಇವತ್ತು ಅದನ್ನು ತಡೆಯಬೇಕು. ಇವತ್ತು ಆದ ಘಟನೆ ನೋಡಲು ಆಗುತ್ತಿಲ್ಲ. ಅದು ನಮ್ಮ ತಾಯಿ. ಜಮೀರ್‌ಗೆ ಮಾನಾ ಮರ್ಯಾದೆ ಇದ್ದರೇ ರಾಕ್ಷಸಿ ಕೃತ್ಯ ಮಾಡಿದವರನ್ನು ಒದ್ದು ಒಳಗೆ ಹಾಕಿ. ಇಲ್ಲದಿದ್ದರೇ ಹೋರಾಟಕ್ಕೆ ಸಿದ್ದ ಎಂದು ಸವಾಲು ಹಾಕುತ್ತೇನೆ ಎಂದು ಗುಡುಗಿದರು. ಇದನ್ನೂ ಓದಿ: ಗಂಡುಮಕ್ಕಳು ಮಾತ್ರ ಕೆಟ್ಟವರು, ಹುಡುಗಿಯರು ಏನೇ ಮಾಡಿದ್ರೂ ಲೆಕ್ಕಕ್ಕೆ ಬರಲ್ಲ – ಸಾಯುವ ಮುನ್ನ ಯುವಕ ಮಾಡಿದ್ದ ವೀಡಿಯೋ ವೈರಲ್ 

    ಆಕಳಿನ ಕೆಚ್ಚಲು ಕೊಯ್ದದ್ದನ್ನು ನೋಡಿದರೆ ಮನುಷ್ಯ ನೋಡಿ ಸುಮ್ಮನೆ ಇರಲು ಆಗಲ್ಲ. ಇದನ್ನು ಖಂಡಿಸುತ್ತೇನೆ. ನಿಮ್ಮ ಒಳಗೆ ಇರುವ ಬಾಂಗ್ಲಾದೇಶದವರ ಕುಕೃತ್ಯಕ್ಕೆ ಉತ್ತರ ನೀವೇ ಕೊಡಬೇಕು. ನೀವೇ ಒದ್ದು ಒಳಗೆ ಹಾಕಬೇಕು. ಆ ಕ್ಷೇತ್ರದ ಸಚಿವರು ನೀವು, ಅದು ನಿಮ್ಮ ಜವಾಬ್ದಾರಿ. ಹಿಂದೂ ಜನ ನಿಮಗೆ ವೋಟು ಹಾಕಿದ್ದಾರೆ. ಆ ಹಿಂದೂಗಳಿಗೆ ನ್ಯಾಯ ಒದಗಿಸಬೇಕಾದರೆ ಅವರನ್ನು ಬಂಧಿಸಿ. ನಮ್ಮ ತೇಜಸ್ವಿಗೌಡ ಬೆಳಗ್ಗೆಯಿಂದ ಅಲ್ಲೇ ಇದ್ದಾರೆ. ಪೊಲೀಸರು ಇದನ್ನು ತಡೆಯಬೇಕು ಎಂದು ಹರಿಹಾಯ್ದರು. ಇದನ್ನೂ ಓದಿ: ಹುಟ್ಟುಹಬ್ಬದ ದಿನವೇ ಬಾಲಕ ಬಲಿ – ಟ್ರಕ್‌ ಚಕ್ರ ಹರಿದು ತಲೆ ಛಿದ್ರ

  • ಹೊಸ ವರ್ಷಕ್ಕೆ ಬಂಪರ್ ಕೊಡುಗೆ – ಧಾರವಾಡಕ್ಕೆ ಬಂತು ಪ್ರತ್ಯೇಕ ಪಾಲಿಕೆ

    ಹೊಸ ವರ್ಷಕ್ಕೆ ಬಂಪರ್ ಕೊಡುಗೆ – ಧಾರವಾಡಕ್ಕೆ ಬಂತು ಪ್ರತ್ಯೇಕ ಪಾಲಿಕೆ

    ಬೆಂಗಳೂರು/ ಧಾರವಾಡ: ಹುಬ್ಬಳ್ಳಿ (Hubballi) ಮಹಾನಗರ ಪಾಲಿಕೆಯಿಂದ ಧಾರವಾಡವನ್ನು (Dharwad) ಪ್ರತ್ಯೇಕಿಸಲಾಗಿದೆ. ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ರಚನೆಗೆ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.

    ವಿದ್ಯಾಕಾಶಿ ಧಾರವಾಡ ಹುಬ್ಬಳ್ಳಿಗಿಂತ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಸರ್ಕಾರದಿಂದ ಬರುವ ಭಾಗಶಃ ಅನುದಾನ ಹುಬ್ಬಳ್ಳಿಗೇ ಮೀಸಲಿಡಲಾಗುತ್ತಿದೆ. ಆ ಕಾರಣ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಿ ಧಾರವಾಡವನ್ನೂ ಅಭಿವೃದ್ಧಿ ಮಾಡಬೇಕು ಎಂದು ಧಾರವಾಡದ ಚಿಂತಕರು, ಸಾಹಿತಿಗಳು ಹಾಗೂ ಪಕ್ಷಾತೀತ ಕಾರ್ಯಕರ್ತರು ದಶಕಗಳ ಕಾಲ ಹೋರಾಟ ಮಾಡುತ್ತಲೇ ಬಂದಿದ್ದರು. ಆ ಹೋರಾಟಕ್ಕೆಈಗ ಜಯ ಸಿಕ್ಕಿದೆ.

    ಧಾರವಾಡದಲ್ಲಿ 26 ವಾರ್ಡ್‌ಗಳಿದ್ದು, ಧಾರವಾಡ ಕೂಡ ಹುಬ್ಬಳ್ಳಿಯಂತೆ ಅಭಿವೃದ್ಧಿ ಕಾಣಬೇಕಾದರೆ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಆಗಲೇಬೇಕು ಎಂದು ದಶಕಗಳ ಕಾಲ ಹೋರಾಟ ನಡೆದಿತ್ತು. ಇತ್ತೀಚಿನ ಮೂರು ವರ್ಷಗಳಲ್ಲಿ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈ ಹೋರಾಟದಿಂದಾಗಿ ರಾಜ್ಯ ಸರ್ಕಾರ ಹೊಸ ವರ್ಷಕ್ಕೆ ಬಂಪರ್ ಕೊಡುಗೆ ನೀಡಿದೆ.

    ಗುರುವಾರ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಲು ಒಪ್ಪಿಗೆ ಸೂಚಿಸಲಾಗಿದೆ. ಇದು ಧಾರವಾಡ ಜನರ ಹರ್ಷವನ್ನು ಇಮ್ಮಡಿಗೊಳಿಸಿದೆ.  ಇದನ್ನೂ ಓದಿ: ಹೊಸ ವರ್ಷಕ್ಕೆ ಶಾಕ್‌ – ಜ.5 ರಿಂದ ಬಸ್‌ ಪ್ರಯಾಣ ದರ ಏರಿಕೆ

    ಕ್ಯಾಬಿನೆಟ್ ಸಭೆಯಲ್ಲಿ ಪ್ರತ್ಯೇಕ ಪಾಲಿಕೆ ಘೋಷಣೆಯಾಗುತ್ತಿದ್ದಂತೆ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟಗಾರರು ಧಾರವಾಡದ ಮಹಾನಗರ ಪಾಲಿಕೆ ಕಚೇರಿ ಎದುರು ಜಮಾಯಿಸಿ ವಿಜಯೋತ್ಸವ ಆಚರಿಸಿದರು. ಪರಸ್ಪರ ಧಾರವಾಡ ಪೇಡಾ ತಿನ್ನಿಸಿ ಸಂಭ್ರಮಿಸಿದರು. ಪಟಾಕಿ ಸಿಡಿಸಿ ಹಿರಿಯ ನಾಗರಿಕರು ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿತ್ತು.

    ಇತ್ತೀಚೆಗಷ್ಟೇ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟಗಾರರು ನಿಯೋಗವೊಂದನ್ನು ತೆಗೆದುಕೊಂಡು ಹೋಗಿ ಸಿಎಂ ಸಿದ್ದರಾಮಯ್ಯನವರಿಗೆ ಭೇಟಿಯಾಗಿದ್ದರು. ಶಾಸಕ ವಿನಯ್ ಕುಲಕರ್ಣಿ, ಸಚಿವ ಸಂತೋಷ ಲಾಡ್, ಪ್ರಸಾದ್ ಅಬ್ಬಯ್ಯ ಹಾಗೂ ಅರವಿಂದ ಬೆಲ್ಲದ ಅವರು ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಆಗಲೇಬೇಕು ಎಂದು ಸರ್ಕಾರದ ಮೇಲೆ ಒತ್ತಡ ಕೂಡ ಹಾಕಿದ್ದರು.

    ಈ ಹಿಂದೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಕೂಡ ಪ್ರತ್ಯೇಕ ಪಾಲಿಕೆ ಮಾಡುವ ಸಂಬಂಧ ಸಾಧಕ ಬಾಧಕಗಳ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಈ ಎಲ್ಲ ಬೆಳವಣಿಗೆ ನಂತರ ಇದೀಗ ರಾಜ್ಯ ಸರ್ಕಾರ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಘೋಷಣೆ ಮಾಡಿ ಧಾರವಾಡಕ್ಕೆ ಬಂಪರ್ ಕೊಡುಗೆ ನೀಡಿದೆ.