Tag: ಧಾರವಾಡ

  • ಬಿಹಾರ ಚುನಾವಣೆಗಾಗಿ ಕೇಂದ್ರ ಜನಗಣತಿಗೆ ಮುಂದಾಗಿದೆ: ಸಂತೋಷ್ ಲಾಡ್

    ಬಿಹಾರ ಚುನಾವಣೆಗಾಗಿ ಕೇಂದ್ರ ಜನಗಣತಿಗೆ ಮುಂದಾಗಿದೆ: ಸಂತೋಷ್ ಲಾಡ್

    ಧಾರವಾಡ: ಕಳೆದ 5 ವರ್ಷಗಳಿಂದ ಜನಗಣತಿ ಆಗಬೇಕು ಎಂದು ರಾಹುಲ್ ಗಾಂಧಿ (Rahul Gandhi) ಒತ್ತಾಯಿಸುತ್ತಲೇ ಬಂದಿದ್ದರೂ ಕೇಂದ್ರ ಸರ್ಕಾರ ಮಾಡಿರಲಿಲ್ಲ. ಈಗ ಬಿಹಾರ ಚುನಾವಣೆ ಬಂದಿರುವುದರಿಂದ ಹೊಸದು ಏನಾದರೊಂದು ಮಾಡಬೇಕು ಎಂದು ಕೇಂದ್ರ ಸರ್ಕಾರ ಈಗ ಜನಗಣತಿ, ಜಾತಿ ಜನಗಣತಿಯನ್ನು ಮುಂದೆ ತಂದಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ (Santhosh Lad) ಹೇಳಿದರು.

    ಧಾರವಾಡದಲ್ಲಿ (Dharwad) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲು ಕೇಂದ್ರದವರು ಜನಗಣತಿ (Caste Census) ಮಾಡುವುದಿಲ್ಲ ಎಂದು ಹೇಳಿದ್ದರು. ರಾಜ್ಯ ಸರ್ಕಾರ ಜಾತಿ ಜನಗಣತಿ ಮಾಡಿದಾಗ ಅದಕ್ಕೆ ಕೇಂದ್ರದವರು ಟಿಪ್ಪಣಿ ಕೊಡುತ್ತಿದ್ದರು. ನಾವು ಹಿಂದುಳಿದ ಜಾತಿಗಳಿಗೆ 54 ಪ್ಯಾರಾ ಮೀಟರ್ ಸೆಟ್ ಮಾಡಿದ್ದೇವೆ. ಓಬಿಸಿಯವರು ಎಷ್ಟು ಜನ ಇದ್ದಾರೆ ಎಂದು ಬಿಜೆಪಿಯವರು ಕೇಳುತ್ತಿದ್ದರು. ಈಗ ಬಿಹಾರ ಚುನಾವಣೆ (Bihar Election) ಬಂದಿರುವುದರಿಂದ ಏನಾದರೊಂದು ಚರ್ಚೆಗೆ ತರಬೇಕು ಎಂದು ಜನಗಣತಿ ತಂದು ಕಾಂಗ್ರೆಸ್ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದ್ದಾರೆ ಕಿಡಿಕಾರಿದರು. ಇದನ್ನೂ ಓದಿ: ಜನಗಣತಿಯೊಂದಿಗೆ ಜಾತಿ ಗಣತಿ ಮೋದಿ ಅವರ ದಿಟ್ಟ ನಿರ್ಧಾರ: ಹೆಚ್‌ಡಿಕೆ

    ಕೇಂದ್ರದಲ್ಲಿ ಬಿಜೆಪಿ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಇದೆ. ಅಲ್ಲಿ ಅವರು ಗಣತಿ ಮಾಡಲಿ. ಇಲ್ಲಿ ನಾವು ಮಾಡುತ್ತೇವೆ. ರಾಜ್ಯ ಸರ್ಕಾರಕ್ಕೆ ಗಣತಿ ಮಾಡಬೇಡಿ ಎಂದು ಹೇಳುವ ಅಧಿಕಾರ ಇಲ್ಲ. ನಾವು ಗಣತಿ ಮಾಡಬೇಕು ಎಂದು ಉದ್ದೇಶಿಸಿದ್ದೆವು ಆ ಪ್ರಕಾರ ಮಾಡಿದ್ದೇವೆ. ಕೇಂದ್ರದವರು ಈಗ ಗಣತಿ ಮಾಡಲು ಮುಂದೆ ಬಂದಿದ್ದಾರೆ ಮಾಡಲಿ. ರಾಹುಲ್ ಗಾಂಧಿ ಅವರು ಮೊದಲಿನಿಂದಲೂ ಓಬಿಸಿ ಬಗ್ಗೆ ಮಾತನಾಡಿದ್ದಾರೆ. ಇದು ರಾಹುಲ್ ಗಾಂಧಿ ಅವರಿಗೆ ಸಿಕ್ಕ ಜಯ ಎಂದು ನಾನು ಭಾವಿಸುತ್ತೇನೆ ಎಂದರು. ಇದನ್ನೂ ಓದಿ: ಕೇಂದ್ರದ ಜಾತಿ ಜನಗಣತಿ ನಿರ್ಧಾರವನ್ನ ಸ್ವಾಗತ ಮಾಡ್ತೇನೆ: ರಾಹುಲ್ ಗಾಂಧಿ

    ಓಬಿಸಿ ಯಾರು ಎಂದು ಹೇಗೆ ಕಂಡು ಹಿಡಿಯುತ್ತಾರೆ. ಕೇಂದ್ರ ಸರ್ಕಾರ ಇದನ್ನು ಕಂಡು ಹಿಡಿಯುತ್ತಾ? ಓಬಿಸಿ ಎನ್ನುವುದು ಸ್ಟೇಟ್ ಸಬ್ಜೆಕ್ಟ್ ಆಗುತ್ತದೆ. ಕೇಂದ್ರಕ್ಕೆ ಓಬಿಸಿ ಬಗ್ಗೆ ಮಾಹಿತಿ ಇಲ್ಲ. ಇಲ್ಲಿ ಇರುವ ಓಬಿಸಿ ಮಹಾರಾಷ್ಟ್ರದಲ್ಲಿ (Maharashtra) ಬೇರೆ ಇರುತ್ತಾರೆ. ನಾವು ಪ್ಯಾರಾಮೀಟರ್ ಫಿಕ್ಸ್ ಮಾಡಿ ಮಾಡಿದ್ದೇವೆ. ಅದಕ್ಕೆ ಬಿಜೆಪಿಯವರು ವಿರುದ್ಧವಾಗಿ ಹೋಗುತ್ತಾರೆ ಎಂದು ನಾವು ಏನೂ ಮಾಡಲು ಆಗೋದಿಲ್ಲ. ಕೇಂದ್ರ ಸರ್ಕಾರ ಏಕೆ ವಿರುದ್ಧ ಹೋಗುತ್ತಿದೆಯೋ ಗೊತ್ತಿಲ್ಲ. ನಾವು ಮಾಡಿರುವ ಗಣತಿ ಸಮರ್ಪಕವಾಗಿದೆ. ಬೇಕಾದರೆ ಅವರು ಚೆಕ್ ಮಾಡಲಿ. ಸಲಹೆ ಕೊಡಲಿ ಎಂದು ಹೇಳಿದರು. ಇದನ್ನೂ ಓದಿ: ಮಧ್ಯರಾತ್ರಿ ಸುದ್ದಿಗೋಷ್ಠಿ- ಪಾಕ್‌ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ


    ತಮಿಳುನಾಡಿನಲ್ಲಿ (TamilNadu) ಗಣತಿ ಮಾಡಿ 69% ಮೀಸಲಾತಿ ತೆಗೆದುಕೊಂಡಿದ್ದಾರೆ. ಮೊನ್ನೆ ಬಿಹಾರದವರು ಮಾಡಿ ಕೇಂದ್ರಕ್ಕೆ ಕಳುಹಿಸಿದ್ದಾರೆ. ಬಿಜೆಪಿಯವರದ್ದು ಈಗ ಒನ್, ಟು, ತ್ರಿ ಆಲ್ ಇಂಡಿಯಾ ಫ್ರೀ ಎಂಬಂತೆ ನಿಲುವು ಇದೆ. ರಾಜ್ಯ ಸರ್ಕಾರಕ್ಕೆ ಗಣತಿ ಮಾಡಬೇಡಿ ಎಂದು ಹೇಳುವ ಅಧಿಕಾರ ಕೇಂದ್ರಕ್ಕೆ ಇಲ್ಲ. ನನ್ನ ಪ್ರಕಾರ ಗಣತಿ ಮಾಡುವ ಅಧಿಕಾರ ಎಲ್ಲ ರಾಜ್ಯಗಳಿಗೂ ಇದೆ ಎಂದರು.

  • ಬೈಕ್ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರು ಅಂದರ್ – 5 ಬೈಕ್ ವಶಕ್ಕೆ

    ಬೈಕ್ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರು ಅಂದರ್ – 5 ಬೈಕ್ ವಶಕ್ಕೆ

    ಧಾರವಾಡ: ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ಧಾರವಾಡ (Dharwad) ಉಪನಗರ ಠಾಣೆ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 3 ಲಕ್ಷ ರೂ. ಮೌಲ್ಯದ ಒಟ್ಟು 5 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

    ಇತ್ತೀಚೆಗೆ ಧಾರವಾಡದಲ್ಲಿ ಬೈಕ್ ಕಳ್ಳತನ ಜೋರಾಗಿಯೇ ನಡೆದಿತ್ತು. ಕಳ್ಳರ ಮೇಲೆ ನಿಗಾವಹಿಸಿದ್ದ ಪೊಲೀಸರು ಕಳ್ಳರ ಪತ್ತೆಗಾಗಿ ತೆರೆಮರೆಯಲ್ಲಿಯೇ ಕಸರತ್ತು ನಡೆಸಿದ್ದರು. ಇದನ್ನೂ ಓದಿ: ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ ವೇ ಸ್ವಚ್ಛಗೊಳಿಸುತ್ತಿದ್ದಾಗ ಪಿಕಪ್ ಡಿಕ್ಕಿ – 6 ಮಂದಿ ಸ್ವಚ್ಛತಾ ಸಿಬ್ಬಂದಿ ಸಾವು

    ಎಸಿಪಿ ಪ್ರಶಾಂತ ಸಿದ್ದನಗೌಡರ ಮಾರ್ಗದರ್ಶನದಲ್ಲಿ ಸಿಪಿಐ ದಯಾನಂದ ಶೇಗುಣಸಿ, ಪಿಎಸ್‌ಐ ರುದ್ರಪ್ಪ ಗುಡದರಿ, ವಿ.ಐ.ಬಳ್ಳಾರಿ, ಸಿಬ್ಬಂದಿ ದಯಾನಂದ, ಮುಸ್ತಫಾ ಬೀಳಗಿ, ನಾಗರಾಜ ವಡ್ಡಪ್ಪಗೋಳ, ಪ್ರದೀಪ ಕುಂದಗೋಳ, ಹನುಮಂತ ಜಟ್ಟಣ್ಣವರ ಸೇರಿ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಿಗರೇಟ್‌ ಸೇದಬೇಡಿ ಎಂದಿದ್ದಕ್ಕೆ ಅನ್ಯ ಕೋಮಿನ ಯುವಕರಿಂದ ಆರ್‌ಎಸ್ಎಸ್ ಮುಖಂಡ, ಕುಟುಂಬದ ಮೇಲೆ ಹಲ್ಲೆ

    ಸಿಗರೇಟ್‌ ಸೇದಬೇಡಿ ಎಂದಿದ್ದಕ್ಕೆ ಅನ್ಯ ಕೋಮಿನ ಯುವಕರಿಂದ ಆರ್‌ಎಸ್ಎಸ್ ಮುಖಂಡ, ಕುಟುಂಬದ ಮೇಲೆ ಹಲ್ಲೆ

    ಧಾರವಾಡ: ಕ್ಷುಲ್ಲಕ ಕಾರಣಕ್ಕಾಗಿ ಅನ್ಯಕೋಮಿನ ನಾಲ್ವರು ಯುವಕರು ಆರ್‌ಎಸ್‌ಎಸ್ (RSS) ಮುಖಂಡ ಶಿರೀಶ್‌ ಬಳ್ಳಾರಿ ಹಾಗೂ ಅವರ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿರುವ ಘಟನೆ ಧಾರವಾಡದ (Dharwad) ಗಾಂಧಿಚೌಕ್ ಬಳಿ ನಡೆದಿದೆ.

    ಸಿಗರೇಟು (Cigarette) ಸೇದುತ್ತಿದ್ದ ನಾಲ್ವರಿಗೆ ಶಿರೀಶ್‌ ಅವರು ಬುದ್ಧಿವಾದ ಹೇಳಿದ್ದಾರೆ. ಈ ವಿಚಾರವನ್ನೇ ಮುಂದಿಟ್ಟುಕೊಂಡ ನಾಲ್ವರು ಶಿರೀಶ್ ಅವರ ಮನೆಯೊಳಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಮಗು ಇದೆ ಬಿಟ್ಟು ಬಿಡಿ ಅಂದ್ರೂ ಶೂಟ್‌ ಮಾಡಿದ್ರು – ಬಿಕ್ಕಿಬಿಕ್ಕಿ ಅತ್ತ ಸುಜಾತ

    ಶಿರೀಶ್ ಅಷ್ಟೇ ಅಲ್ಲದೇ ಅವರ ಕುಟುಂಬಸ್ಥರ ಮೇಲೂ ಯುವಕರು ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಲ್ಲೆ ಮಾಡಿದ ನಂತರ ನಾಲ್ವರು ನಾಪತ್ತೆಯಾಗಿದ್ದಾರೆ.

    ಈ ಸಂಬಂಧ ದೂರು ಪಡೆದಿರುವ ಧಾರವಾಡ ಶಹರ ಠಾಣೆ ಪೊಲೀಸರು ನಾಪತ್ತೆಯಾಗಿರುವ ಯುವಕರ ಪತ್ತೆಗೆ ಬಲೆ ಬೀಸಿದ್ದು ಇಬ್ಬರನ್ನು ಬಂಧಿಸಿದ್ದಾರೆ.

  • ಧಾರವಾಡದಲ್ಲಿಯೂ ಜನಿವಾರ ಜಟಾಪಟಿ – ಹುರಕಡ್ಲಿ ಕಾಲೇಜಿನಲ್ಲಿ ಜನಿವಾರ ಕತ್ತರಿಸಿ ಸಿಇಟಿ ಬರೆಸಿದ ಸಿಬ್ಬಂದಿ

    ಧಾರವಾಡದಲ್ಲಿಯೂ ಜನಿವಾರ ಜಟಾಪಟಿ – ಹುರಕಡ್ಲಿ ಕಾಲೇಜಿನಲ್ಲಿ ಜನಿವಾರ ಕತ್ತರಿಸಿ ಸಿಇಟಿ ಬರೆಸಿದ ಸಿಬ್ಬಂದಿ

    ಧಾರವಾಡ: ಶಿವಮೊಗ್ಗ, ಬೀದರ್ ಬಳಿಕ ಇದೀಗ ಧಾರವಾಡದಲ್ಲಿಯೂ (Dharwad) ಜನಿವಾರ ಕತ್ತರಿಸಿ ಸಿಇಟಿ ಪರೀಕ್ಷೆಗೆ ಅವಕಾಶ ಕೊಟ್ಟಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡ ಜಿಲ್ಲೆಯ ಹುರಕಡ್ಲಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

    ಧಾರವಾಡ ನಗರದ ಜೆಎಸ್‌ಎಸ್ (JSS) ಕಾಲೇಜಿನ ವಿದ್ಯಾರ್ಥಿ ನಂದನ್ ಏರಿ ಸಿಇಟಿ ಪರೀಕ್ಷೆ (CET Exam) ಬರೆಯಲು ಹೋಗಿದ್ದ. ವಿದ್ಯಾರ್ಥಿಗಳ ತಪಾಸಣೆ ಮಾಡುವಾಗ ಪರೀಕ್ಷಾ ಕೇಂದ್ರದ ಸಿಬ್ಬಂದಿಯೊಬ್ಬರು ನಂದನ್ ಎಂಬ ಅಭ್ಯರ್ಥಿ ಹಾಕಿಕೊಂಡಿದ್ದ ಜನಿವಾರವನ್ನು ಗಮನಿಸಿದ್ದರು. ಆಗ ಜನಿವಾರ ಹಾಕಿಕೊಂಡು ಪರೀಕ್ಷಾ ಕೇಂದ್ರದೊಳಗೆ ಹೋಗುವಂತಿಲ್ಲ ಎಂದು ತಡೆದಿದ್ದರು. ಅದಕ್ಕೆ ವಿದ್ಯಾರ್ಥಿ ನಾನು ಬ್ಯಾಗಿನೊಳಗೆ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದ. ಆದರೆ ಅದಕ್ಕೂ ಅವಕಾಶ ನೀಡದೇ ಅದಕ್ಕೆ ಸಮಯವಿಲ್ಲ ಎಂದು ಜನಿವಾರವನ್ನು ಕತ್ತರಿಸಿದ್ದರು. ಅದನ್ನು ಹಾಗೇ ಬ್ಯಾಗ್‌ನಲ್ಲಿಟ್ಟುಕೊಂಡಿದ್ದ ನಂದನ್ ಗಾಬರಿಗೊಳಗಾಗಿದ್ದ. ಇದನ್ನೂ ಓದಿ: PUBLiC TV ವಿದ್ಯಾಪೀಠ | ವಿದ್ಯಾರ್ಥಿಗಳಿಗೆ ಸ್ಪಾಟ್‌ನಲ್ಲೇ ಸಿಗಲಿದೆ ಸರ್ಪ್ರೈಸ್‌ ಗಿಫ್ಟ್‌ – ತಪ್ಪದೇ ಬನ್ನಿ…

    ಮಾಧ್ಯಮಗಳಲ್ಲಿ ಕಳೆದೆರಡು ದಿನಗಳಿಂದ ಬರುತ್ತಿದ್ದ ಶಿವಮೊಗ್ಗ, ಬೀದರ್ ಜನಿವಾರದ ಸುದ್ದಿಗಳನ್ನು ಗಮನಿಸಿದ್ದ ಹುಡುಗ ತನಗಾಗಿದ್ದರ ಕುರಿತು ತನ್ನ ತಂದೆಗೆ ತಿಳಿಸಿದ್ದಾನೆ. ಇದನ್ನು ತಿಳಿದ ತಂದೆ ಆಕ್ರೋಶಗೊಂಡಿದ್ದು, ಇದೇ ಕಾರಣದಿಂದ ಮಗನಿಗೆ ಸರಿಯಾಗಿ ಪರೀಕ್ಷೆ ಬರೆಯಲು ಆಗಿಲ್ಲ ಎಂದು ಕಿಡಿಕಾರಿದ್ದಾರೆ.

    ಈ ಕುರಿತು ನಂದನ್ ತಂದೆ ವಿವೇಕ ಮಾತನಾಡಿ, ಪರೀಕ್ಷೆಗೆ ಹೋದಾಗ ಪೊಲೀಸರು ಆತನನ್ನು ಹಿಡಿದುಕೊಂಡು ಜನಿವಾರ ತೆಗೆದರೆ ಮಾತ್ರ ಒಳಗೆ ಬಿಡುತ್ತೇನೆ ಎಂದಿದ್ದಾರೆ. ಇದು ಬ್ರಾಹ್ಮಣ ಸಮಾಜಕ್ಕೆ ಮಾಡಿದ ಅಪಮಾನ. ನಾವು ಜನಿವಾರ ತೆಗೆಯುವುದು ಸತ್ತಾಗ ಮಾತ್ರ, ಇನ್ಯಾವುದೇ ಸಮಯದಲ್ಲಿಯೂ ನಾವು ತೆಗೆಯಲ್ಲ. ಕೆಲವರು ರುದ್ರಾಕ್ಷಿ, ಕಾಶಿ ದಾರ ತೆಗೆದಿದ್ದಾರೆ. ಈ ರೀತಿ ನಮ್ಮ ಮೇಲೆ ನಡೆದಿದ್ದು ದೊಡ್ಡ ಘಟನೆ. ಮಾರನೇ ದಿನ ಆತ ನಮಗೆ ಹೇಳಿದ್ದಾನೆ. ನಾವು ನಮ್ಮ ಸಮಾಜದ ಜನರಿಗೆ ಹೇಳಿದ್ದೇನೆ. ಇದಕ್ಕೆ ನಾವು ಪ್ರತಿಭಟನೆ ಮಾಡುತ್ತೇವೆ. ಇದು ನನ್ನ ಮಗನ ಮೇಲೆ ಪರಿಣಾಮ ಬೀರಿದೆ. ಆತ ಪರೀಕ್ಷೆ ಕೂಡಾ ಸರಿಯಾಗಿ ಬರೆದಿಲ್ಲ, ಮಾನಸಿಕವಾಗಿ ಆತ ಕುಗ್ಗಿದ್ದಾನೆ. ಅಭ್ಯಾಸ ಬಿಟ್ಟು ಬೇರೆ ಕಡೆ ಆತನ ಮನಸ್ಸು ಡೈವರ್ಟ್ ಆಗದಿರಲಿ ಎಂದು ನಾವು ಇದನ್ನು ಹೊರಗೆ ಹಾಕಿಲ್ಲ. ಈಗ ಹೇಳುತ್ತಿದ್ದೇವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.ಇದನ್ನೂ ಓದಿ: ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಡಿಕೆಶಿ ಭೇಟಿ – ಧರ್ಮಾಧಿಕಾರಿಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಸಿಎಂ

  • ಮೋದಿ ಇನ್ನೊಂದು ವರ್ಷವಷ್ಟೇ ಪ್ರಧಾನಿಯಾಗಿರುತ್ತಾರೆ: ಸಂತೋಷ್ ಲಾಡ್

    ಮೋದಿ ಇನ್ನೊಂದು ವರ್ಷವಷ್ಟೇ ಪ್ರಧಾನಿಯಾಗಿರುತ್ತಾರೆ: ಸಂತೋಷ್ ಲಾಡ್

    ಧಾರವಾಡ: ನನಗಿರುವ ಮಾಹಿತಿ ಪ್ರಕಾರ ನರೇಂದ್ರ ಮೋದಿ (Narendra Modi) ಅವರು ಇನ್ನೊಂದು ವರ್ಷ ಮಾತ್ರ ಪ್ರಧಾನಿಯಾಗಿರುತ್ತಾರೆ. ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ತಿರುಗೇಟು ನೀಡಿದರು.

    ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಸ್ವ ಪಕ್ಷದವರೇ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿಕೆಗೆ ಕೌಂಟರ್ ನೀಡಿದರು. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ – ಹಿಂದೂಗಳ ಮನೆಗೆ ಬೆಂಕಿ, ಯವತಿಯರಿಗೆ ಲೈಂಗಿಕ ಕಿರುಕುಳ

    ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಯಾರೂ ಪ್ರಯತ್ನ ನಡೆಸುತ್ತಿಲ್ಲ. ಯತ್ನಾಳ್ ಅವರು ಯಾಕೆ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಆ ಬಗ್ಗೆ ಅವರನ್ನೇ ಕೇಳಬೇಕು. ಆದರೂ ಯತ್ನಾಳ್ ಅವರು ನಮ್ಮ ಸಿಎಂ ಬಗ್ಗೆ ಗೌರವ ಪೂರ್ವಕವಾಗಿ ಮಾತನಾಡಿದ್ದಾರೆ. ಅದು ನನಗೆ ಖುಷಿ ತಂದಿದೆ ಎಂದರು. ಇದನ್ನೂ ಓದಿ: KGF 3 ಮೇಲಿನ ನಿಮ್ಮ ನಿರೀಕ್ಷೆಯನ್ನು ಸುಳ್ಳು ಮಾಡಲ್ಲ- ಗುಡ್‌ ನ್ಯೂಸ್ ಕೊಟ್ಟ ಹೊಂಬಾಳೆ ಸಂಸ್ಥೆ

    ಮೋದಿ ಅವರು ಮುಂದಿನ ವರ್ಷ ಪಿಎಂ ಆಗಿ ಇರುವುದಿಲ್ಲ. ಇದನ್ನು ಬಿಜೆಪಿಯವರು ಯಾರೂ ಹೇಳಿಕೊಳ್ಳುತ್ತಿಲ್ಲ. ಆದರೆ, ಅಲ್ಲಲ್ಲಿ ಸ್ವಲ್ಪ ಬಾಯಿ ಬಿಡುತ್ತಿದ್ದಾರೆ. ಮೊನ್ನೆಯಷ್ಟೇ ಪಿಯೂಷ್ ಗೋಯಲ್ ಮಾತನಾಡಿ, ಸ್ಕಿಲ್ ಇಂಡಿಯಾ, ಸ್ಕಿಲ್ ಡೆವಲಪ್ ಆಗಿಲ್ಲ ಎಂದಿದ್ದಾರೆ. ಮೋದಿ ಅವರ ವಿರುದ್ಧ ನನಗೆ ವೈಯಕ್ತಿಕ ದ್ವೇಷ ಇಲ್ಲ. ಈ ದೇಶದಲ್ಲಿ ಕಾಂಗ್ರೆಸ್, ಬಿಜೆಪಿ ಎರಡೂ ಇರಬೇಕು. ಮೋದಿ ಅವರು 11 ವರ್ಷದಿಂದ ಪ್ರಧಾನಿಯಾಗಿದ್ದಾರೆ. ದೇಶದಲ್ಲಿ ಏನೂ ಬೆಳವಣಿಗೆ ಆಗಿಲ್ಲ. ಹೀಗಾಗಿ ನಿತಿನ್ ಗಡ್ಕರಿ ಪಿಎಂ ಆಗಲಿ ಎಂದು ಅವರ ಪಕ್ಷದವರೇ ಅಪೇಕ್ಷಿಸುತ್ತಿದ್ದಾರೆ. ಅವರಿಗೂ ಒಂದು ಅವಕಾಶ ಸಿಗಬೇಕು ಎಂದು ಹೇಳಿದರು.

  • ಅಯೋಧ್ಯೆ ರಾಮನ ಮೂರ್ತಿ ಸೃಷ್ಟಿಕರ್ತ ಅರುಣ್ ಯೋಗಿರಾಜ್ ಧಾರವಾಡಕ್ಕೆ ಭೇಟಿ

    ಅಯೋಧ್ಯೆ ರಾಮನ ಮೂರ್ತಿ ಸೃಷ್ಟಿಕರ್ತ ಅರುಣ್ ಯೋಗಿರಾಜ್ ಧಾರವಾಡಕ್ಕೆ ಭೇಟಿ

    ಧಾರವಾಡ: ಅಯೋಧ್ಯೆಯಲ್ಲಿ ಹಸನ್ಮುಖಿಯಾಗಿ ನಿಂತಿರುವ ಬಾಲಕ ಶ್ರೀರಾಮಚಂದ್ರನ ಮೂರ್ತಿಯ ಸೃಷ್ಟಿಕರ್ತ, ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ಅವರು ಧಾರವಾಡಕ್ಕೆ ಭೇಟಿ ನೀಡಿದ್ದರು.

    ಹನುಮ ಜಯಂತಿಯಂದೇ ಧಾರವಾಡಕ್ಕೆ ಭೇಟಿ ಕೊಟ್ಟ ಅರುಣ್ ಯೋಗಿರಾಜ್ ಅವರನ್ನು ಭೇಟಿ ಮಾಡಲು ನೂರಾರು ಜನ ಆಗಮಿಸಿದ್ದರು. ಇದನ್ನೂ ಓದಿ: ಶಿರೋಮಣಿ ಅಕಾಲಿ ದಳ ಅಧ್ಯಕ್ಷರಾಗಿ ಸುಖಬೀರ್ ಸಿಂಗ್ ಬಾದಲ್ ಮರು ಆಯ್ಕೆ

    ಅಥಣಿಗೆ ಹೊರಟಿದ್ದ ಅರುಣ್ ಯೋಗಿರಾಜ್ ಅವರು ಮಾರ್ಗ ಮಧ್ಯೆ ಧಾರವಾಡದ ಬಿಜೆಪಿ ಮುಖಂಡೆ ಸವಿತಾ ಅಮರಶೆಟ್ಟಿ ಅವರ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಯೋಗಿರಾಜ್ ಅವರನ್ನು ನೋಡಲು ನೂರಾರು ಜನ ಆಗಮಿಸಿದ್ದರು. ಇದನ್ನೂ ಓದಿ: Mumbai Attack| ರಾಣಾ ವಿರುದ್ಧ ಸಾಕ್ಷಿ ನುಡಿಯಲಿದ್ದಾರೆ ನಿಗೂಢ ವ್ಯಕ್ತಿಗಳು!

    ಅಖಿಲ ಭಾರತ ವಿಶ್ವಕರ್ಮ ಛಾತ್ರಾ ಯುವ ಸಂಘ, ವಿಶ್ವಕರ್ಮ ಸಮಾಜ ಹಾಗೂ ಸಾಂಸ್ಕೃತಿಕ ಸಂಘಟನೆಗಳಿಂದ ಅರುಣ್ ಯೋಗಿರಾಜ್ ಅವರಿಗೆ ಸನ್ಮಾನ ನಡೆಯಿತು.

  • ಧಾರವಾಡದಲ್ಲಿ ಗಾಳಿ ಸಹಿತ ಮಳೆ – ಆಂಜನೇಯ ದೇವಸ್ಥಾನದ ಮೇಲೆ ಬಿದ್ದ ಮರ

    ಧಾರವಾಡದಲ್ಲಿ ಗಾಳಿ ಸಹಿತ ಮಳೆ – ಆಂಜನೇಯ ದೇವಸ್ಥಾನದ ಮೇಲೆ ಬಿದ್ದ ಮರ

    ಧಾರವಾಡ: ನಗರದಲ್ಲಿ ಭಾರೀ ಗಾಳಿ ಸಹಿತ ಮಳೆಗೆ ಆಂಜನೇಯನ ದೇವಸ್ಥಾನದ (Anjaneya Temple) ಮೇಲೆ ಮರ ಬಿದ್ದ ಘಟನೆ ನಡೆದಿದೆ.

    ಧಾರವಾಡ (Dharwad) ಹೊರವಲಯದ ಹೊಯ್ಸಳನಗರದಲ್ಲಿ ಈ ಘಟನೆ ನಡೆದಿದ್ದು, ಹನುಮಜಯಂತಿ ಮುನ್ನಾ ದಿನವೇ ಆಂಜನೇಯನ ದೇವಸ್ಥಾನದ ಮೇಲೆ ಮರ ಬಿದ್ದಿದೆ. ಇದನ್ನೂ ಓದಿ: ಜಾತಿಗಣತಿ ವರದಿ ಸೀಲ್ ಓಪನ್… ಕ್ಯಾಬಿನೆಟ್‌ನಲ್ಲಿ ಮಂಡನೆ; ಮುಂದಿನ‌ ಕ್ಯಾಬಿನೆಟ್‌ಗೆ ಕ್ಲೈಮ್ಯಾಕ್ಸ್..!

    ಆಂಜನೇಯನ ದೇವಸ್ಥಾನದ ಪಕ್ಕದಲ್ಲೇ ನಿಲ್ಲಿಸಿದ ಆಟೊ ಕೂಡ ಜಖಂ ಆಗಿದೆ. ಮಳೆ, ಗಾಳಿಗೆ ಬುಡ ಸಮೇತ ಮರ ಉರುಳಿ ಬಿದ್ದಿದೆ. ಇದನ್ನೂ ಓದಿ: ಮೈಸೂರು | ಮನೆ ಹಿಂಬಾಗಿಲಿನ ಬೀಗ ಮುರಿದು 22 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ನಗದು ಕಳ್ಳತನ

    ನಾಳೆ (ಏ.12) ಈ ದೇವಸ್ಥಾನದಲ್ಲಿ ಹನುಮಜಯಂತಿ ಕಾರ್ಯಕ್ರಮ ನಡೆಯಬೇಕಿತ್ತು. ಹನುಮಜಯಂತಿ ಮುನ್ನಾ ದಿನವೇ ಈ ಅವಘಡ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮರ ಬಿದ್ದಿದ್ದರಿಂದ ದೇವಸ್ಥಾನದ ಹಿಂಭಾಗ ಮಾತ್ರ ಸ್ವಲ್ಪ ಡ್ಯಾಮೇಜ್ ಆಗಿದೆ. ಸದ್ಯ ಮರ ತೆರವುಗೊಳಿಸಿ ಶನಿವಾರ ಪೂಜೆಗೆ ದೇವಸ್ಥಾನವನ್ನು ಸಿದ್ಧಗೊಳಿಸುತ್ತಿದ್ದಾರೆ. ಇದನ್ನೂ ಓದಿ: ಪ್ರಮೋದಾದೇವಿ ಒಡೆಯರ್‌ಗೆ ನಮ್ಮ ಗ್ರಾಮ ರಿಜಿಸ್ಟರ್‌ ಮಾಡಿಕೊಡಬೇಡಿ: ಡಿಸಿಗೆ ಗ್ರಾಮಸ್ಥರ ಮನವಿ

  • ಹುಬ್ಬಳ್ಳಿ, ಧಾರವಾಡದಲ್ಲಿ ಗುಡುಗು ಸಹಿತ ಭಾರೀ ಮಳೆ – ಸಿಡಿಲು ಬಡಿದು ವೃದ್ಧ ಸಾವು

    ಹುಬ್ಬಳ್ಳಿ, ಧಾರವಾಡದಲ್ಲಿ ಗುಡುಗು ಸಹಿತ ಭಾರೀ ಮಳೆ – ಸಿಡಿಲು ಬಡಿದು ವೃದ್ಧ ಸಾವು

    ಹುಬ್ಬಳ್ಳಿ/ಧಾರವಾಡ: ಬಿಸಿಲಿನ ಝಳದಿಂದ ಕಂಗೆಟ್ಟಿದ್ದ ಹುಬ್ಬಳ್ಳಿ-ಧಾರವಾಡದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ನಗರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

    ಧಾರವಾಡದಲ್ಲಿ (Dharwad) ಸತತ ಒಂದು ಗಂಟೆಗಳ ಕಾಲ ಧಾರಾಕಾರವಾಗಿ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮುಂಗಾರು ಬಿತ್ತನೆಗೆ ಭೂಮಿ ಸಜ್ಜು ಮಾಡಿಕೊಳ್ಳಲು ಈ ಮಳೆ ಸಹಾಯಕವಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿತ್ತು. ಇಂದು ಧಾರಾಕಾರವಾಗಿ ಮಳೆಯಾಗಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ: ಬಿರುಗಾಳಿಗೆ ಉರುಳಿ ಬಿದ್ದ ಮರ – 6 ಕ್ಕೂ ಹೆಚ್ಚು ಮಂದಿ ಸಾವು

    ಇನ್ನು ಭಾರೀ ಮಳೆಯ ಹಿನ್ನೆಲೆ ಸಿಡಿಲು ಬಡಿದು ಮೇಕೆ ಮೇಯಿಸಲು ಹೋಗಿದ್ದ ವೃದ್ಧ ಸಾವನ್ನಪ್ಪಿದ್ದಾರೆ. ಧಾರವಾಡ ತಾಲೂಕಿನ ಮುಗದ ಗ್ರಾಮದ ಹೊಲದಲ್ಲಿ ಘಟನೆ ನಡೆದಿದೆ. ರಸೂಲಸಾಬ್ ಚಾಂದವಾಲೆ (62) ಮೃತ ದುರ್ದೈವಿ. ಸಂಜೆ ಮೇಕೆ ಮೇಯಿಸಿಕೊಂಡು ವಾಪಸ್ ಮುಗದ ಗ್ರಾಮಕ್ಕೆ ಬರುವಾಗ ಸಿಡಿಲು ಬಡಿದಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ಮಹಾಭಾರತದಲ್ಲಿ ಜಯಗಳಿಸಿದ್ದು ಕೃಷ್ಣಾರ್ಜುನರೇ ಹೊರತು ಶಕುನಿ, ದೃತರಾಷ್ಟ್ರರಲ್ಲ: ಯತ್ನಾಳ್‌

    ಹುಬ್ಬಳ್ಳಿಯ ನವನಗರ, ವಿದ್ಯಾನಗರ, ದೇಶಪಾಂಡೆ ನಗರದಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಕೇಶ್ವಾಪುರದ ಕೆಲವು ಕಡೆ ಸಣ್ಣ ಪ್ರಮಾಣದ ಆಲಿಕಲ್ಲು ಸಹಿತ ಮಳೆಯಾಗಿದ್ದು, ಮಳೆ ಹಿನ್ನೆಲೆ ಹುಬ್ಬಳ್ಳಿ ನಗರದ ವಿದ್ಯುತ್ ಕಡಿತಗೊಂಡಿದೆ. ಸತತ ಎರಡು ಗಂಟೆಗಳ ಕಾಲ ಸುರಿದ ಭಾರಿ ಮಳೆಗೆ ಚರಂಡಿ ತುಂಬಿ ಕೊಳಚೆ ನೀರು ಮುಖ್ಯ ರಸ್ತೆಗೆ ಹರಿದಿದೆ. ಅಲ್ಲದೇ ಪ್ರಮುಖ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಇದನ್ನೂ ಓದಿ: ದೆಹಲಿಗೆ ಹೋಗುವ ಮುನ್ನ ಸಿಎಂ, ಡಿಸಿಎಂ ಮೀಟಿಂಗ್

  • ಯುಗಾದಿ, ರಾಮನವಮಿ ಹಲಾಲ್ ಮುಕ್ತ ಆಗಲಿ: ಪ್ರಮೋದ್ ಮುತಾಲಿಕ್

    ಯುಗಾದಿ, ರಾಮನವಮಿ ಹಲಾಲ್ ಮುಕ್ತ ಆಗಲಿ: ಪ್ರಮೋದ್ ಮುತಾಲಿಕ್

    ಧಾರವಾಡ: ನಾಡಿನ ಜನತೆ ಈಗ ಯುಗಾದಿ ಹಬ್ಬದ (Ugadi Festival) ಸಂಭ್ರಮದಲ್ಲಿದ್ದಾರೆ. ಮುಂದೆ ಶ್ರೀರಾಮ ನವಮಿ ಕೂಡ ಬರಲಿದೆ. ಈ ಎರಡೂ ಹಬ್ಬಗಳು ಹಲಾಲ್ ಮುಕ್ತವಾಗಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Mutalik) ಹೇಳಿದರು.

    ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಹಲಾಲ್ ಎಂಬುದು ಇಸ್ಲಾಂಗೆ ಸಂಬಂಧಿಸಿದ್ದು. ಅದು ಹಿಂದೂಗಳಿಗೆ ಸಂಬಂಧಿಸಿದ್ದಲ್ಲ. ಅವರು ಹಲಾಲ್ ಮಾಡಿಕೊಂಡರೆ ಅದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಅದನ್ನು ಹಿಂದೂಗಳ ಮೇಲೆ ಹೇರುವುದನ್ನು ನಾವು ಒಪ್ಪುವುದಿಲ್ಲ. ಇಸ್ಲಾಂನವರು ಹಲಾಲ್ ಮೂಲಕ ವ್ಯಾಪಾರ ಮಾಡುತ್ತಾರೆ. ಕುಂಕುಮ, ಅರಿಶಿನ, ತೆಂಗಿನಕಾಯಿ, ತಾಳಿ ಇವೆಲ್ಲವನ್ನು ಹಲಾಲ್ ಮೂಲಕ ಮಾರಾಟ ಮಾಡುತ್ತಾರೆ. ಅಂತವರ ಬಳಿ ಹಿಂದೂಗಳು ವ್ಯಾಪಾರ ಮಾಡಬಾರದು ಎಂದರು. ಇದನ್ನೂ ಓದಿ: ಮಳೆಗೆ ವಿದ್ಯುತ್ ಲೈನ್ ಮೇಲೆ ಬಿದ್ದ ಮರ – ಮೊಸಳೆಗಳಿರುವ ನದಿಯಲ್ಲಿ 2 ದಿನ ಕಾರ್ಯಾಚರಣೆ ನಡೆಸಿ ವಿದ್ಯುತ್ ಪೂರೈಸಿದ ಹೆಸ್ಕಾಂ ಸಿಬ್ಬಂದಿ

    ಹಿಂದೂಗಳು ಶುದ್ಧ ಮತ್ತು ಪವಿತ್ರವಾಗಿರುವ ವಸ್ತುಗಳನ್ನು ಖರೀದಿ ಮಾಡಿ ದೇವರಿಗೆ ಸಮರ್ಪಿಸಬೇಕು. ಗೋ ಹಂತಕರ, ಭಕ್ಷಕರ ಜೊತೆ ವ್ಯಾಪಾರ ಮಾಡಿ ಯುಗಾದಿಯನ್ನು ಹಲಾಲ್ ಮಾಡಬಾರದು. ಮುಸ್ಲಿಂ ವ್ಯಾಪಾರಿಗಳು ವಸ್ತುಗಳ ಮೇಲೆ ಉಗುಳಿ ಹೇಸಿಗೆ ಮಾಡುತ್ತಾರೆ. ಅಂತವರ ಬಳಿ ನಾವು ಯಾಕೆ ವ್ಯಾಪಾರ ಮಾಡಬೇಕು? ಅಂತದನ್ನು ತೆಗೆದುಕೊಂಡು ನೈವೇದ್ಯ ಮಾಡಿ, ಪೂಜೆ ಮಾಡುವುದು ಸರಿಯಲ್ಲ. ಇದು ಶಾಸ್ತ್ರದ ವಿರುದ್ಧವಾದದ್ದು. ನಮ್ಮ ದೇವರನ್ನು ನಂಬದೇ ಇರುವವರ ಜೊತೆ ನಾವು ವ್ಯಾಪಾರ ಮಾಡಬಾರದು ಎಂದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ದು ವಿಜಯೇಂದ್ರ & ಡಿಕೆಶಿ, ಹನಿಟ್ರ್ಯಾಪ್‌ ಕೇಸ್‌ನಲ್ಲೂ ಇದೇ ಟೀಂ ಇದೆ – ಯತ್ನಾಳ್‌ ಬಾಂಬ್‌

    ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರ ಉಚ್ಚಾಟನೆಯ ಕುರಿತು ಪ್ರತಿಕ್ರಿಯಿಸಿ, ಉಚ್ಚಾಟನೆ ಪ್ರಕ್ರಿಯೆಯನ್ನು ಬಿಜೆಪಿ ವರಿಷ್ಠರು ಮರು ಪರಿಶೀಲಿಸಬೇಕು. ಇದು ಪಕ್ಷದ ಆಂತರಿಕ ವಿಚಾರ. ಇಡೀ ದೇಶದಲ್ಲಿ ಇರುವ ಬಿಜೆಪಿಯು ಹಿಂದುತ್ವದ ಪಕ್ಷ. ಆದರೆ, ಸದ್ಯ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆ ದುರದೃಷ್ಟಕರ ಎಂದರು. ಇದನ್ನೂ ಓದಿ: ದೆಹಲಿಯಲ್ಲಿ ತಾಪಮಾನ ಇಳಿಕೆ – 2 ದಿನದಲ್ಲಿ 7 ಡಿಗ್ರಿ ಇಳಿಕೆ

    ಯತ್ನಾಳ್ ಅವರು ಹಿಂದುತ್ವದ ಗಟ್ಟಿ ಧ್ವನಿ. ಅವರ ಉಚ್ಚಾಟನೆಯಿಂದ ರಾಜ್ಯದಲ್ಲಿ ಎಲ್ಲೋ ಒಂದು ಕಡೆ ನೋವು, ವೇದನೆ ಇದೆ. ನಮ್ಮ ಸಂಘಟನೆ ಕೂಡ ಕೇಂದ್ರದ ಪದಾಧಿಕಾರಿಗಳಿಗೆ ಈ ಕುರಿತು ಆಗ್ರಹ ಮಾಡುತ್ತೇವೆ. ಹಿಂದುತ್ವದ ವಿಚಾರ ಬೆಳೆಸಲು ಅವಕಾಶ ಮಾಡಿ ಕೊಡಬೇಕು. ಈಗ ಹಿಂದುತ್ವವನ್ನು ತಮ್ಮ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರು. ಇದನ್ನೂ ಓದಿ: ತುಂಬಾ ಬೇಗ ಬ್ಯಾಟಿಂಗ್‌ಗೆ ಬಂದ್ರಿ – ಆರ್‌ಸಿಬಿ ವಿರುದ್ಧ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಧೋನಿ ಕಾಲೆಳೆದ ಸೆಹ್ವಾಗ್

    ಯತ್ನಾಳ್ ನಿಜವಾದ ಹಿಂದುತ್ವವಾದಿ. ಅವರು ಹೊಸ ಪಕ್ಷ ಮಾಡುವಾಗ ನಮಗೆ ಆಹ್ವಾನ ನೀಡಿದರೆ ಅದನ್ನು ನಮ್ಮ ಸಂಘಟನೆ ಪದಾಧಿಕಾರಿಗಳ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ, ಅದಕ್ಕಿಂತ ಪೂರ್ವದಲ್ಲಿ ಯತ್ನಾಳ್ ಅವರ ಉಚ್ಚಾಟನೆಯನ್ನು ಬಿಜೆಪಿ ಮರು ಪರಿಶೀಲಿಸಬೇಕು. ಅವರನ್ನು ಪಕ್ಷದೊಳಗೆ ಕರೆದುಕೊಂಡು ಬಂದು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಪಕ್ಷದಲ್ಲಿ ತಪ್ಪು ಒಪ್ಪು ಏನೆಂದು ವರಿಷ್ಠರೇ ನಿರ್ಧಾರ ಮಾಡಲಿ. ಬಿಜೆಪಿಯನ್ನು ನಾವು ಹಿಂದುತ್ವದ ಪಕ್ಷ ಎನ್ನುತ್ತಿದ್ದೇವೆ. ಹಿಂದುತ್ವದ ವಿಚಾರಧಾರೆ ಹಾಳಾಗದಂತೆ ನೋಡಿಕೊಳ್ಳಲು ಯತ್ನಾಳ್ ಅವರನ್ನು ಪಕ್ಷದ ಒಳಗಡೆ ಕರೆದುಕೊಂಡು ಬರಬೇಕು. ಈ ಸಂಬAಧ ಕೇಂದ್ರಕ್ಕೆ ನಾವು ಮನವಿ ಮಾಡಿಕೊಳ್ಳುತ್ತೇವೆ ಎಂದರು.

  • ಧಾರವಾಡ | ಮಳೆ, ಗಾಳಿಗೆ ಗೋಡೆ ಕುಸಿದು ಇಬ್ಬರು ಕೂಲಿ ಕಾರ್ಮಿಕರು ದುರ್ಮರಣ – ಓರ್ವ ಗಂಭೀರ

    ಧಾರವಾಡ | ಮಳೆ, ಗಾಳಿಗೆ ಗೋಡೆ ಕುಸಿದು ಇಬ್ಬರು ಕೂಲಿ ಕಾರ್ಮಿಕರು ದುರ್ಮರಣ – ಓರ್ವ ಗಂಭೀರ

    ಹುಬ್ಬಳ್ಳಿ/ಧಾರವಾಡ: ಮಳೆ-ಗಾಳಿಗೆ (Rain) ನಿರ್ಮಾಣ ಹಂತದ ಕಾರ್ಖಾನೆ ಗೋಡೆ ಕುಸಿದು ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನಪ್ಪಿ, ಓರ್ವ ಗಂಭೀರ ಗಾಯಗೊಂಡ ಘಟನೆ ಧಾರವಾಡ (Dharwad) ಜಿಲ್ಲೆಯ ಕಲಘಟಗಿ ತಾಲೂಕಿನ ಕಾಡನಕೊಪ್ಪ ಗ್ರಾಮದ ಹೊರವಲಯದಲ್ಲಿ ನಡೆದಿದೆ.

    ಹಳೇ ಹುಬ್ಬಳ್ಳಿಯ ಧಾರವಾಡ ಪ್ಲಾಟ್ ನಿವಾಸಿ ದಾವೂದ್ ಸವಣೂರು (52), ನೂರಾಣಿ ಪ್ಲಾಟ್ ನಿವಾಸಿ ರಫಿಕ್‌ಸಾಬ್ ಚನ್ನಾಪುರ (50) ಮೃತ ಕಾರ್ಮಿಕರು. ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದ ಮಹಾಂತೇಶ ಚವರಗುಡ್ಡ ಎಂಬವರಿಗೆ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಮೋದಿ ಹೆಸ್ರಲ್ಲಿ 32 ಲಕ್ಷ ಗಿಫ್ಟ್ ಕಿಟ್ ಕೊಡೋದು ಮುಸ್ಲಿಂ ಓಲೈಕೆ ಅಲ್ವಾ? – ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ನಿರ್ಮಾಣ ಆಗುತ್ತಿರುವ ಕಟ್ಟಡದ ಗಾರೆ ಕೆಲಸಕ್ಕೆ ಕೂಲಿ ಕಾರ್ಮಿಕರು ತೆರಳಿದ್ದರು. ಮಳೆ, ಗಾಳಿ ಜೋರಾಗಿ ಬೀಸಿದ್ದರಿಂದ ಗೋಡೆಯ ಬಳಿ ನಿಂತಿದ್ದರು. ಗಾಳಿ ರಭಸಕ್ಕೆ ಗೋಡೆ ಕುಸಿದು ಕೆಳಗೆ ಸಿಲುಕಿ ಸಾವು ಸಂಭವಿಸಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಂಡ್ಯ ಜನರು ಛತ್ರಿ ಹೇಳಿಕೆ; ಡಿಕೆಶಿ ಜನರ ಕ್ಷಮೆ ಕೇಳಬೇಕು – ಅನ್ನದಾನಿ