ಧಾರವಾಡ: ಧಾರವಾಡ ಕರ್ನಾಟಕ ವಿವಿ ಬಳಿಯ ಶ್ರೀನಗರ ವೃತ್ತದಲ್ಲಿ ರಾತ್ರೋರಾತ್ರಿ ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಆದರೆ ಮಧ್ಯಾಹ್ನ ಸ್ಥಳಕ್ಕೆ ಬಂದ ಪಾಲಿಕೆ ಅಧಿಕಾರಿಗಳು, ಪೊಲೀಸರ ಸಮ್ಮುಖದಲ್ಲಿ ಬಸವಣ್ಣನ ಮೂರ್ತಿ ತೆರವು ಗೊಳಿಸಿದರು.
ಈ ವಿಚಾರವಾಗಿ ಸ್ಥಳೀಯ ಶಾಸಕ ಅರವಿಂದ ಬೆಲ್ಲದ್ ಮಾತನಾಡಿದ್ದು, ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ವಿಚಾರ ಸ್ಥಳೀಯರು ತಿಳಿಸಿದ್ದಾರೆ. ಆದರೆ ಪಾಲಿಕೆಯಿಂದ ತೆರವು ಮಾಡಿದ ವಿಚಾರ ತಿಳಿದಿರಲಿಲ್ಲ. ಹೀಗಾಗಿ ಅದರ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ತಮಿಳುನಾಡು ಬಿಜೆಪಿ ನಾಯಕ ಕೆ ಅಣ್ಣಾಮಲೈಗೆ ವೈ ಶ್ರೇಣಿ ಭದ್ರತೆ
ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅಗಲಿ ಐದು ತಿಂಗಳು ಕಳೆದರೂ, ಅವರನ್ನು ಆರಾಧಿಸುವವರ ಸಂಖ್ಯೆ ಇಳಿದಿಲ್ಲ. ತಮ್ಮ ನೆಚ್ಚಿನ ನಟನನ್ನು ನಾನಾ ರೀತಿಯಲ್ಲಿ ನೆನಪಿಸುವಂತಹ ಕೆಲಸಗಳನ್ನು ಅವರ ಅಭಿಮಾನಿಗಳು ಮಾಡುತ್ತಿದ್ದಾರೆ. ರಕ್ತದಾನ, ಅಂಗಾಂಗ ದಾನ, ನೇತ್ರದಾನ ಹಾಗೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತಲೇ ಅಪ್ಪು ಅವರನ್ನು ಜೀವಂತವಾಗಿರಿಸುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇದೆ. ಈಗ ಮತ್ತೊಂದು ಹೊಸ ಕೆಲಸ ಮಾಡುವ ಮೂಲಕ ಅಪ್ಪುವನ್ನು ಕೃಷಿಕರು ಕೂಡ ತಮ್ಮದೇ ಮನೆಮಗ ಎನ್ನುವಂತೆ ಅಪ್ಪಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ ಮಗುವಿನ ನೆರವಿಗೆ ಬಂದ ರೈಲ್ವೆ ಅಧಿಕಾರಿಗಳು
ಯುಗಾದಿ ಹಬ್ಬದ ಹಿನ್ನೆಲೆ ರೈತರೆಲ್ಲರೂ ಭೂತಾಯಿಗೆ ಪೂಜೆ ಸಲ್ಲಿಸಿ ಕೃಷಿ ಚಟುವಟಿಕೆ ಆರಂಭ ಮಾಡುವುದು ವಾಡಿಕೆ. ಭೂತಾಯಿಯ ಪೂಜೆಯ ಜತೆ ಜತೆಗೆ ತಮ್ಮಿಷ್ಟದ ದೇವರನ್ನೂ ಈ ಸಂದರ್ಭದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಅದರಂತೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ರೈತನೋರ್ವ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಚಟುವಟಿಕೆ ಆರಂಭಿಸಿದ್ದಾನೆ.
ರೈತ ಅಶೋಕ ಕುರಿ ಇಂದು ತನ್ನ ಹೊಲದಲ್ಲಿ ಪುನೀತ್ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ ಕೃಷಿ ಚಟುವಟಿಕೆ ಆರಂಭಿಸಿದ್ದು, ಪುನೀತ್ ರಾಜ್ ಕುಮಾರ್ ಅವರನ್ನು ಉತ್ತಿಲ್ಲ, ಬಿತ್ತಿದ್ದೇವೆ ಎನ್ನುವ ಸಾಲುಗಳನ್ನು ಸಾರ್ಥಕಗೊಳಿಸಿದ್ದಾನೆ. ಸಾಮಾನ್ಯವಾಗಿ ಎಲ್ಲರೂ ಯುಗಾದಿ ದಿನದಂದು ಹೊಸ ವರ್ಷಾಚರಣೆಯ ಸಡಗರದಲ್ಲಿರುತ್ತಾರೆ. ಇಂಥದ್ದೊಂದು ಸಡಗರಕ್ಕೆ ಅಪ್ಪು ಅವರನ್ನು ಸಾಕ್ಷಿಗೊಳಿಸಿದ್ದಾರೆ ಅಶೋಕ ಕುರಿ. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ, ಭಗವಂತ್ ಮಾನ್, ಕೇಜ್ರಿವಾಲ್
ಈ ರೈತ ಪುನೀತ್ ರಾಜಕುಮಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ, ಗೌರವ ಸಲ್ಲಿಸಿ ಹೊಸ ವರ್ಷಾವನ್ನು ಬರಮಾಡಿಕೊಂಡಿದ್ದಾರೆ.
ಧಾರವಾಡ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೊಟ್ಟಿರುವ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆಯನ್ನು ಕೊಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉತ್ತರಕೊಟ್ಟರು.
ಸಿದ್ದರಾಮಯ್ಯ ಶಿರವಸ್ತ್ರವನ್ನು ಹಿಜಬ್‍ಗೆ ಹೋಲಿಸಿದ್ದಾರೆ ಎಂದು ಎಲ್ಲಕಡೆ ವಿವಾದ ಸೃಷ್ಟಿಯಾಗಿದೆ. ಈ ಕುರಿತು ಪ್ರತಿಕ್ರಿಯೆ ಕೊಡಲು ಇಷ್ಟಪಡದ ಡಿಕೆಶಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಸಿದ್ದರಾಮಯ್ಯ ಅವರು ಏನ್ ಮಾತಾಡಿದ್ದಾರೆ ಅದಕ್ಕೆ ಅವರೇ ಉತ್ತರ ಕೊಡ್ತಾರೆ. ಸಿದ್ದರಾಮಯ್ಯ ಅವರಿಗೆ ಧರ್ಮಗುರುಗಳ ಬಗ್ಗೆ ಗೌರವವಿದೆ. ಈ ಹಿಂದೆ ಸಿಎಂ ಆಗಿದ್ದಾಗ ಹಲವು ಧರ್ಮಗುರುಗಳಿಗೆ ಸಹಾಯ ಮಾಡಿದ್ದಾರೆ. ಅವರು ಈಗಾಗಲೇ ಟ್ವೀಟ್ ಮಾಡಿದ್ದಾರೆ, ಅವರೇ ಉತ್ತರ ಕೊಡ್ತಾರೆ ಎಂದರು. ಇದನ್ನೂ ಓದಿ: ಹಿಜಬ್ ವಿವಾದ ಸೃಷ್ಟಿ ಮಾಡಿದ್ದು ಕಾಂಗ್ರೆಸ್, ದೇಶದ್ರೋಹಿ PFI, SDPI ಸಂಘಟನೆಗಳು: ಎಂ.ಪಿ.ರೇಣುಕಾಚಾರ್ಯ
ನ್ಯಾಯಾಲಯದ ತೀರ್ಪನ್ನು ಸರಿಯಲ್ಲ ಅಂತಾ ಹೇಳಲ್ಲ. ಕೋರ್ಟ್ ತೀರ್ಪನ್ನು ಪಾಲನೆ ಮಾಡಬೇಕು. ಸ್ವಾಮೀಜಿಗಳ ಶಿರವಸ್ತ್ರದ ಬಗ್ಗೆ ಸಿದ್ದರಾಮಯ್ಯ ಕೊಟ್ಟ ಹೇಳಿಕೆಗೆ ಅವರೇ ಉತ್ತರ ಕೊಡ್ತಾರೆ. ಅವರಿಗೆ ಎಲ್ಲ ಧರ್ಮ, ಸ್ವಾಮಿಗಳ ಮೇಲೆ ಗೌರವವಿದೆ. ಅವರು ಸಿಎಂ ಆಗಿದ್ದಾಗ ಎಲ್ಲ ಧರ್ಮಗಳಿಗೂ ಬೇಕಾದಷ್ಟು ಸಹಾಯ ಮಾಡಿದ್ದಾರೆ. ಅವರು ಏನು ಮಾತಾಡಿದ್ದಾರೋ ಅದಕ್ಕೆ ಅವರೇ ಉತ್ತರ ಕೊಡ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನವೇ ಬೈಬಲ್, ಕುರಾನ್, ಭಗವದ್ಗೀತೆ. ಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಹಿಜಬ್ ವಿಚಾರವಾಗಿ ಕೆಲವರು ಸುಪ್ರೀಂಕೋರ್ಟ್‍ಗೆ ಹೋಗಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ ಅದಕ್ಕೆ ಹೋಗಿದ್ದಾರೆ. ಈಗಾಗಲೇ ಹೈಕೋರ್ಟ್ ತೀರ್ಪು ಇರೋದ್ರಿಂದ ಪಾಲಿಸಬೇಕು ಎಂದು ತಿಳಿಸಿದರು.
ಹಿಜಬ್ ಧರಿಸಿದ್ರೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಅನುಮತಿ ನಿರಾಕರಣೆ ಸುತ್ತೋಲೆ ವಿಚಾರವಾಗಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳಿಗೆ ಬುದ್ಧಿವಾದ ಹೇಳಬೇಕು. ಧರ್ಮಗುರುಗಳೊಂದಿಗೆ ಮಾತನಾಡಬೇಕು. ವಿದ್ಯಾರ್ಥಿಗಳ ಭವಿಷ್ಯ ಮುಖ್ಯ. ಯಾರು-ಯಾವ ಕಾಲದಲ್ಲಿ ಏನ್ ಮಾಡ್ಬೇಕು. ಹೇಗೆ ಮಾಡ್ಬೇಕೋ ಮಾಡಿದ್ದಾರೆ ಎಂದು ಉತ್ತರಿಸಿದರು. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ನಾಡಿನ ಮಠಾಧೀಶರ ಕ್ಷಮೆ ಕೇಳಬೇಕು: ಅಭಿನವ ಮಂಜುನಾಥ ಶ್ರೀ
ವಿದ್ಯಾಭ್ಯಾಸ ಬಹಳ ಮುಖ್ಯ. ಹಿಜಬ್ ವಿಚಾರದಲ್ಲಿ ಮಕ್ಕಳಲ್ಲಿ ಮನವರಿಕೆ ಮಾಡಬೇಕು. ತಂದೆ-ತಾಯಿಗಳು, ಗುರುಗಳು ಮಕ್ಕಳ ಮನವೊಲಿಸಬೇಕು. ಗುರುಗಳು ಹೇಳಿದರೆ ಮಕ್ಕಳು ಕೇಳ್ತಾರೆ. ಕಾಂಗ್ರೆಸ್ ಪಕ್ಷ ಸಂವಿಧಾನದಲ್ಲಿ ಇರುವ ವಿಚಾರಗಳಿಗೆ ಬೆಲೆ ಕೊಡುತ್ತೆ ಎಂದು ವಿವರಿಸಿದರು.
ಧಾರವಾಡ: ಸಂವಿಧಾನದ ಬಗ್ಗೆ ಅದ್ಭುತವಾಗಿ ಮಾತನಾಡುವ ಸಿದ್ದರಾಮಯ್ಯನವರೇ ಈ ರೀತಿ ಹೇಳಿಕೆ ನೀಡಬಾರದು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರು ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ಅವರು, ಸಂವಿಧಾನದ ಬಗ್ಗೆ ಅದ್ಭುತವಾಗಿ ಮಾತನಾಡುವ ಸಿದ್ದರಾಮಯ್ಯನವರೇ ಈ ರೀತಿ ಹೇಳಿಕೆ ನೀಡಬಾರದು. ಮಠಾಧೀಶರದ್ದೂ ಒಂದು ಡ್ರೇಸ್ ಕೋಡ್ ಇದೆ. ಅದು ಅವರ ಸಂಪ್ರದಾಯ. ಆ ಸಂಪ್ರದಾಯವನ್ನು ಹಿಜಬ್‍ಗೆ ಹೋಲಿಕೆ ಮಾಡುವುದು ಎಷ್ಟು ಸರಿ? ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರು ಯಾವ ಅರ್ಥದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಶಾಲೆಯಲ್ಲಿ ಬೇಧ, ಭಾವ ಇರಬಾರದು. ಎಲ್ಲರೂ ಸಮನಾಗಿರಲಿ ಎಂದು ಸಮವಸ್ತ್ರ ಪದ್ಧತಿ ಮಾಡಲಾಗಿದೆ. ಇದರ ಉದ್ದೇಶ ಅರ್ಥವಾಗದೇ ರಾಜಕೀಯವಾಗಿ ಈ ರೀತಿ ಮಾತನಾಡಬಾರದು. ಎಲ್ಲವನ್ನೂ ಅಳೆದು ತೂಗಿ ನ್ಯಾಯಾಲಯ ತೀರ್ಪು ಕೊಟ್ಟಿದೆ. ನ್ಯಾಯಾಲಯದ ತೀರ್ಪನ್ನು ಗೌರವಿಸುವುದಿಲ್ಲ ಅಂದರೆ ಹೇಗೆ? ಎಂದು ಕಿಡಿಕಾರಿದರು. ಇದನ್ನೂ ಓದಿ: ದೆಹಲಿಯಿಂದ ಕರೆ ಬರುವ ನಿರೀಕ್ಷೆಯಿದೆ: ಬೊಮ್ಮಾಯಿ
ಹಿಂದೂಯೇತರ ವ್ಯಾಪಾರ ನಿರ್ಬಂಧ ವಿಚಾರವಾಗಿ ಮಾತನಾಡಿದ ಹಾಲಪ್ಪ, ಆಯಾ ಧಾರ್ಮಿಕ ಸ್ಥಳದಲ್ಲಿ ಅನ್ಯ ಧರ್ಮೀಯರಿಗೆ ಅವಕಾಶ ಇಲ್ಲ ಎಂದು ಕಾಂಗ್ರೆಸ್‍ನವರೇ ಹೇಳಿದ್ದಾರೆ. ಅದು ನಾವು ಮಾಡಿದ್ದಲ್ಲ. ಆದರೆ, ಬೇರೆ ಕಡೆ ಹೋಗಿ ಅನವಶ್ಯಕವಾಗಿ ಅಡೆತಡೆ ಮಾಡಿದರೆ ನಮ್ಮ ಸರ್ಕಾರ ಸಹಿಸುವುದಿಲ್ಲ. ಇಷ್ಟು ವರ್ಷದಿಂದ ಎಲ್ಲರೂ ಸೌಹಾರ್ದಯುತವಾಗಿದ್ದೇವೆ. ಎಲ್ಲರೂ ಒಟ್ಟಾಗಿ ಬಾಳುವುದು ನಮ್ಮ ಸಂವಿಧಾನದಲ್ಲಿದೆ. ಯಾರ ಹಕ್ಕನ್ನು ಯಾರೂ ಕಸಿದುಕೊಳ್ಳಲು ಆಗುವುದಿಲ್ಲ ಎಂದರು. ಇದನ್ನೂ ಓದಿ: ಹಿಜಬ್ ವಿದ್ಯಾರ್ಥಿನಿಯರಿಗೆ ಶಾಕ್ – ಎಸ್‌ಎಸ್‌ಎಲ್‌ಸಿ ಪರಿಕ್ಷೆಗೆ ಸಮವಸ್ತ್ರ ಕಡ್ಡಾಯ
ಧಾರವಾಡ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೇಟಾ ಹಾಗೂ ಹಿಜಬ್‍ಗೆ ಹೊಸಲಿಸುವಂತದ್ದು ಸರಿಯಲ್ಲ, ಮಾತನಾಡುವಾಗ ಕಾಮನಸೆನ್ಸ್ ಬೇಕು. ಸಂತರ ಪರಂಪರೆ ಪ್ರಶ್ನೆ ಮಾಡಿದ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ಮಾಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಕ್ಷಮೆ ಕೇಳುವಂತೆ ಆಗ್ರಹಿಸಿದರು. ಹಿಜಬ್ ಬಗ್ಗೆ ನ್ಯಾಯಾಲಯದ ತೀರ್ಪು ಬಂದಿದೆ. ಅದರ ಬಗ್ಗೆ ಮಾತನಾಡುವಾಗ ವಿಚಾರ ಮಾಡಬೇಕು. ಇದು ಅವಮಾನಕರ ಹೇಳಿಕೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸಂತರ ಪರಂಪರೆ ಪ್ರಶ್ನೆ ಮಾಡಿದ್ದು ಅಪರಾಧ. ಇದು ಕೀಳು ಮಟ್ಟದ ಹೇಳಿಕೆಯಾಗಿದೆ. ಸಿಎಂ ಆದವರು ನೀವು, ಜವಾಬ್ದಾರಿ ಸ್ಥಾನದಲ್ಲಿ ಇದ್ದವರು. ಇದು ಹಿಂದೂ ಸಮಾಜ ಅಪಮಾನ ಮಾಡುವಂತದ್ದು. ಸಿದ್ಧರಾಮಯ್ಯನವರು ಕ್ಷಮೆ ಕೇಳಬೇಕು, ವಕೀಲರೂ ಆದವರು, ಕೋರ್ಟ್ ಹಿಜಬ್ ಬ್ಯಾನ್ ಮಾಡಿಲ್ಲ. ಕ್ಲಾಸ್ ರೂಮ್‍ನಲ್ಲಿ ಹಾಕಿಕೊಳ್ಳಲು ಅವಕಾಶ ನೀಡಿಲ್ಲ. ಸಿದ್ದರಾಮಯ್ಯ ರಾಜಕೀಯ ಅಂತ್ಯ ಬಂದಿದೆ, ಹಿಂದೂ ಸಮಾಜ ನಿಮ್ಮನ್ನು ಮೂಲೆಗುಂಪು ಮಾಡುತ್ತೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನನಗೆ ವಯಸ್ಸಾಯ್ತು ಅಂತ ಕಾಲೆಳೆಯುತ್ತಾರೆ ಅದಕ್ಕೆ ವಾರಕ್ಕೊಮ್ಮೆ ಶೇವ್ ಮಾಡಿಸ್ತೀನಿ: ಸಿದ್ದರಾಮಯ್ಯ
ನಿಮಗೆ ಹಿಂದೂಗಳು ಮತ ಹಾಕುವುದಿಲ್ಲ, ಮುಸ್ಲಿಂ ರೇ ಕೋರ್ಟಗೆ ಹೋಗಿದ್ದು, ಅವರಿಗೆ ನ್ಯಾಯಾಲಯ ಸ್ಪಷ್ಟನೆ ಕೊಟ್ಟಿದೆ. ಮಠದ ಪರಂಪರೆಗೆ ಅವಮಾನ ಮಾಡಿದ್ದು ಸರಿಯಲ್ಲ ಎಂದು ಮುತಾಲಿಕ್ ಹೇಳಿದರು. ಇದನ್ನೂ ಓದಿ: ಗ್ರಾಮದ ಜಾತ್ರೆಯಲ್ಲಿ ನೃತ್ಯ ಮಾಡಿ ರಂಜಿಸಿದ ಸಿದ್ದರಾಮಯ್ಯ
ಸಿದ್ದರಾಮಯ್ಯ ಹೇಳಿದ್ದೇನು?: ಹಿಜಬ್ ವಿವಾದಕ್ಕೆ ಬಿಜೆಪಿಯೇ ಕಾರಣ. ಹಿಂದೂ ಹೆಣ್ಣು ಮಕ್ಕಳು ತಲೆಯ ಮೇಲೆ ಬಟ್ಟೆ ಹಾಕಿ ಕೊಳ್ಳಲ್ವಾ? ಹಾಗೆಯೇ ಮುಸ್ಲಿಂ ಹೆಣ್ಣು ಮಕ್ಕಳೂ ಒಂದು ದುಪ್ಪಟ್ಟ ಹಾಕಿ ಕೊಳ್ಳುತ್ತಾರೆ ಅಂದರೆ ಅದರಲ್ಲಿ ತಪ್ಪೇನಿದೆ?. ಸ್ವಾಮೀಜಿಗಳೂ ತಲೆಯ ಮೇಲೆ ಬಟ್ಟೆ ಹಾಕುತ್ತಾರೆ ಅದನ್ನು ನೀವು ಪ್ರಶ್ನೆ ಮಾಡುತ್ತೀರಾ? ಇಂತಹ ವಿವಾದಗಳನ್ನು ಸೃಷ್ಟಿಸಿ ಅದನ್ನು ಅರಗಿಸಿ ಕೊಳ್ಳುತ್ತೇವೆ ಎಂದು ಬಿಜೆಪಿ ಅಂದುಕೊಂಡಿದೆ. ಆದರೆ, ಜನ ಬುದ್ದಿವಂತರು. ಜನರಿಗೆ ಬಿಜೆಪಿಯ ತಂತ್ರ ಅರ್ಥವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸ್ವಾಮೀಜಿಯವರೂ ತಲೆಯ ಮೇಲೆ ಬಟ್ಟೆ ಹಾಕ್ತಾರೆ ಅದನ್ನೇಕೆ ಪ್ರಶ್ನಿಸುತ್ತೀರಾ?: ಹಿಜಬ್ ಬೆಂಬಲಿಸಿದ ಸಿದ್ದು
ಸಂಘ ಪರಿವಾರದವರು ಅಲ್ಪ ಸಂಖ್ಯಾತರನ್ನು ಕೊಲೆ ಮಾಡಿದರೆ ಅವರಿಗೆ ಕಡಿಮೆ ಪರಿಹಾರ ಹಣ ಕೊಡ್ತಾರೆ. ಅದೇ ಮುಸ್ಲಿಮರು ಹಿಂದೂಗಳನ್ನು ಕೊಲೆ ಮಾಡಿದರೆ ಜಾಸ್ತಿ ಪರಿಹಾರ ಕೊಡ್ತಾರೆ. ಇಂತಹ ತಾರತಮ್ಯ ಏಕೆ? ಇಂತಹ ವರ್ತನೆಯಿಂದ ಮತ ಕ್ರೂಢೀಕರಣ ಆಗುತ್ತದೆ ಎಂಬ ಬಿಜೆಪಿ ಲೆಕ್ಕಾಚಾರ ಉಲ್ಟಾ ಆಗುತ್ತೆ ನೋಡಿ ಎಂದು ಹೇಳಿದ್ದಾರೆ.
ಧಾರವಾಡ: ಮುಸ್ಲಿಮರಿಗೆ ಜಾತ್ರೆಗಳಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ನಾನು ಹೇಳುತ್ತಲೇ ಬಂದಿದ್ದೇನೆ ಎಂದು ಶ್ರೀರಾಮ ಸೇನೆ ಸಂಘಟನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರ ಕುರಿತು ಮಾತನಾಡಿದ ಅವರು, ಮುಸ್ಲಿಮರ ಮಾನಸಿಕತೆ ತಿದ್ದಬೇಕಾದರೆ ಅವರಿಗೆ ಆರ್ಥಿಕ ಬಹಿಷ್ಕಾರ ಹಾಕಿದರೆ ಮಾತ್ರ ಸಾಧ್ಯ. ನಮಗೆ ದೇಶ ಹಾಗೂ ಹಿಂದುತ್ವ ಉಳಿಸಬೇಕಾಗಿದೆ, ನಾವು ಈ ದೇಶ ಕಳೆದುಕೊಳ್ಳಲು ತಯಾರಿಲ್ಲ. ನಮ್ಮ ಸಂವಿಧಾನದ ಮೇಲೆ ಮುಸ್ಲಿಮರು ಬೆಲೆ ಕೊಡ್ತಿಲ್ಲ, ಕಾನೂನಿಗೆ ಬೆಲೆ ಕೊಡ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಆಂಡ್ರಾಯ್ಡ್ ಬಳಕೆದಾರಿಗೆ ಮೋಸ ಮಾಡಿ ಸಿಕ್ಕಿಬಿದ್ದ ಗೂಗಲ್
ವ್ಯಾಪಾರದ ಬಹಿಷ್ಕಾರ ಅಹಿಂಸಾತ್ಮಕ ಶಸ್ತ್ರವು ಉಡುಪಿ ದೇವಸ್ಥಾನ ಮಂಡಳಿಯ ಒಳ್ಳೆಯ ನಿರ್ಣಯವಾಗಿದೆ. ಅದನ್ನ ನಾನು ಸ್ವಾಗತ ಮಾಡುತ್ತೇನೆ, ಅಭಿನಂದನೆ ಮಾಡುತ್ತೇನೆ. ಚುನಾವಣೆಗೆ ಹಾಗೂ ಈ ವಿವಾದಕ್ಕೆ ಸಂಬಂಧವಿಲ್ಲ. ಇದು ಬಹಳ ದಿನದಿಂದ ನಡೆದು ಬಂದಿರುವ ರೀತಿ ಎಂದ ಅವರು, ಮಸೀದಿಯ ಕಾಂಪ್ಲೆಕ್ಸ್‍ಗಳಲ್ಲಿ ಹಿಂದೂಗಳಿಗೆ ವ್ಯಾಪಾರಕ್ಕೆ ಬಾಡಿಗೆ ಕೊಡಲ್ಲ. ಈ ರೀತಿ ಬಹಳ ಉದಾಹರಣೆ ಇವೆ ಎಂದು ವಿವರಿಸಿದರು.
ಬಾಂಗ್ಲಾದಲ್ಲಿ ದೇವಸ್ಥಾನ ಒಡೆದು ಹಾಕಿದ್ದಾರೆ. ನಾವು ಆ ರೀತಿ ಮಸೀದಿ ಹಾಗೂ ಚರ್ಚ್ ಒಡೆದಿಲ್ಲ. ನಮ್ಮ ಹಿಂದೂ ಸಮಾಜ ಉಳಿಯಬೇಕು. ಸಂವಿಧಾನ ಉಳಿಯಬೇಕು ಎಂಬ ಉದ್ದೇಶದಿಂದ ಈ ನಿರ್ಣಯ ಕೈಗೊಂಡಿದೆ. 32 ವರ್ಷದ ಹಿಂದೆ ನೀಲಕಂಠ ನ್ಯಾಯಮೂರ್ತಿಗೆ ಕಾಶ್ಮೀರದಲ್ಲಿ ಹೊಡೆದು ಹಾಕಿದರು. ಈಗ ಮತ್ತೇ ಮಧುರೈನ ಒಬ್ಬ ಮುಸ್ಲಿಂ ಸಂಘಟನೆಯವನು ನ್ಯಾಯಾಧೀಶರನ್ನ ಕೊಲ್ತೆವೆ ಎಂದು ಹೇಳ್ತಾನೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ರಾಜ್ಯಾದ್ಯಂತ ಎಎಪಿ ಸದಸ್ಯತ್ವ ಅಭಿಯಾನಕ್ಕೆ ಪೃಥ್ವಿ ರೆಡ್ಡಿ ಚಾಲನೆ
32 ವರ್ಷದ ಹಿಂದಿನ ಮಾನಸಿಕತೆ, ಈಗಿನ ಮಾನಸಿಕತೆ ಒಂದೇ ಇದೆ. ನಾವು ಎಲ್ಲರೂ ಈ ಹಿಡಿತವನ್ನು ದೇಶ ಉಳಿಸುವುದಕ್ಕೆ ಮಾಡಬೇಕಿದೆ. ಇದು ಬರಿ ಮಂಗಳೂರು ಶಿವಮೊಗ್ಗ ಅಲ್ಲಾ, ಇಡೀ ದೇಶಾದ್ಯಂತ ನಡೆಸಬೇಕು ಎಂದು ಶಾಪತ ಮಾಡಿದರು.
ಸ್ಥಳಕ್ಕೆ ಧಾರವಾಡ ಹಾಗೂ ಬೇಲೂರು ಕೈಗಾರಿಕಾ ಪ್ರದೇಶ ಸೇರಿದಂತೆ ಒಟ್ಟು ಮೂರು ಅಗ್ನಿಶಾಮಕ ಭೇಟಿ ನೀಡಿದ್ದು, ಬೆಂಕಿ ನಂದಿಸಲು ಪ್ರಯತ್ನ ನಡೆಸಿವೆ. ಗೋಡಾನ್‍ನಲ್ಲಿ ಹತ್ತಿಗಳನ್ನು ಇಡಲಾಗಿತ್ತು. ಆದರೆ ಈ ವೇಳೆ ಏಕಾಎಕಿ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಧಾರವಾಡ ಗರಗ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ವಿಜೃಂಭಣೆಯಿಂದ ನಡೆದ ಐತಿಹಾಸಿಕ ಶರಣಬಸವೇಶ್ವರರ 200ನೇ ಜಾತ್ರಾ ಮಹೋತ್ಸವ
ಧಾರವಾಡ: ಸಿದ್ದರಾಮಯ್ಯ ಅವರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡುವುದಿಲ್ಲ ಎಂದಿದ್ದಾರೆ. ಅವರಿಗೆ ಹಿಂದಿ ಬರುವುದಿಲ್ಲ, ಹೀಗಾಗಿ ಸಿನಿಮಾ ನೋಡುವುದಿಲ್ಲ ಅಂತಾರೆ. ಬೇರೆ ಸಿನಿಮಾ ನೋಡೋಕೆ ಹೋಗುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ಮಾಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರೋಧದಿಂದಲೇ ಸಿನಿಮಾ ಜನಪ್ರಿಯ ಆಗಿದೆ. ಸಿದ್ದರಾಮಯ್ಯ ಸಿನಿಮಾ ನೋಡುವುದಿಲ್ಲ ಎಂದಿದ್ದಾರೆ. ಅವರಿಗೆ ಹಿಂದಿ ಬರುವುದಿಲ್ಲ ಹೀಗಾಗಿ ಸಿನಿಮಾ ನೋಡಲ್ಲ ಎನ್ನುತ್ತಿದ್ದಾರೆ. ಬೇರೆ ಸಿನಿಮಾ ನೋಡಲು ಹೋಗುತ್ತಾರೆ. ಈ ಸಿನಿಮಾಗೆ ಇಂಗ್ಲೀಷ್ ಸಬ್ ಟೈಟಲ್ ಇದೆ. ಇಂಗ್ಲೀಷ್ ಬರೋಲ್ವಾ? ನಿಮಗೆ ಪಕ್ಕದಲ್ಲಿ ಓರ್ವ ಅನುವಾದಕರನ್ನು ಕುಳ್ಳಿರಿಸಿಕೊಂಡು ನೋಡಿ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಪ್ಲೇಸ್‍ನಲ್ಲಿ ಪೊಲೀಸ್‍ಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಬೆಂಗಳೂರಿನಲ್ಲಿ ಕಾಶ್ಮೀರಿ ಪಂಡಿತರ ಸರ್ವೆ ಈಗ ಆಗಿದೆ ಅಂತಾ ಮಾಹಿತಿ ಬಂದಿದೆ. ಅವರು ಬಯಸಿದಲ್ಲಿ ವಸತಿ ಕಲ್ಪಸಿ ಕೊಡುವುದು ಸರ್ಕಾರದ ಕರ್ತವ್ಯವಾಗಿದೆ. ಕಾಂಗ್ರೆಸ್ ಪಕ್ಷ ತುಷ್ಟೀಕರಣದ ರಾಜಕಾರಣ ಮಾಡುತ್ತ ಬಂದಿದೆ. ಕಾಶ್ಮೀರ ಫೈಲ್ಸ್‌ಗೆ ವಿರೋಧ ಮಾಡೋದಕ್ಕೆ ಇದೇ ಕಾರಣ. 70 ವರ್ಷದಲ್ಲಿ 58 ವರ್ಷ ಕಾಂಗ್ರೆಸ್ ಆಡಳಿತ ಮಾಡಿತ್ತು. ಆಗ ತುಷ್ಟೀಕರಣ ರಾಜಕಾರಣ, ಆರ್ಟಿಕಲ್ 370, ಕಾಶ್ಮೀರಕ್ಕೆ 35ಎ ಕೊಟ್ಟಿದ್ದರು, ಇದನ್ನೆಲ್ಲ ಕೊಟ್ಟು ಭಾರತದ ಕಾನೂನು ನಡೆಯದಂತೆ ಮಾಡಿದ್ದರು. ಇದನ್ನೆಲ್ಲ ಮುಚ್ಚಿ ಹಾಕಲು ಕಾಶ್ಮೀರ ಫೈಲ್ಸ್ ಸಿನಿಮಾ ವಿರೋಧಿಸುತ್ತಿದ್ದಾರೆ. ಸಮಾಜ ಈಗ ಜಾಗೃತ ಆಗಿದೆ. ಆದರೂ ತುಷ್ಟೀಕರಣ ರಾಜಕಾರಣ ಬಿಡುತ್ತಿಲ್ಲ. ಹಿಂದುಗಳು, ಪಂಡಿತರ ಸರ್ವನಾಶ ಆದರೂ ಇವರಿಗೆ ಚಿಂತೆ ಇಲ್ಲ. ಅವರನ್ನು ಕೊಯ್ದು ಎರಡು ಭಾಗ ಮಾಡಿದರೂ ಅದನ್ನು ಮರಿಯಬೇಕು. ಆದರೆ ನಮಗೆ ಓಟ್ ಸಿಗಬೇಕು. ಇದೇ ಕಾಂಗ್ರೆಸ್ ನೀತಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಶ್ವತ್ಥನಾರಾಯಣ ನಾನು ಅಣ್ಣ-ತಮ್ಮಂದಿರಂತೆ : ಆರ್.ಅಶೋಕ್
ನೀವು ಮೊದಲು ಸಿನಿಮಾ ನೋಡಿ, ನೋಡಿದ ಬಳಿಕ ತಪ್ಪಾಗಿದೆ ಅಂತಾ ಹೇಳಿ. ಆಗ ಜನ ಕ್ಷಮಿಸುತ್ತಾರೆ. ಕಾಶ್ಮೀರ ದೌರ್ಜನ್ಯ ವೇಳೆ ಬಿಜೆಪಿ ಸರ್ಕಾರ ಇರಲಿಲ್ಲ. ವಿ.ಪಿ. ಸಿಂಗ್ ಸರ್ಕಾರ ಇತ್ತು ಅಲ್ಲಿ. ಮುಫ್ತಿ ಮಹಮ್ಮದ ಸಯೀದ್ ಗೃಹ ಮಂತ್ರಿಯಾಗಿದ್ದರು. ಆಗ ಯಾವುದೇ ಸಂಗತಿ ಹೊರ ಬರುತ್ತಿರಲಿಲ್ಲ. ಆಗ ನಾವು ಸರ್ಕಾರದ ಭಾಗ ಆಗಿರಲಿಲ್ಲ, ಹೊರಗಿನಿಂದ ಬೆಂಬಲ ಕೊಟ್ಟಿದ್ದು. ಆ ಸರ್ಕಾರ ಹಿಂದೂ ವಿರೋಧಿ ಅಂತಾ ಪರಿವರ್ತನೆ ಆಯ್ತು. ಹೀಗಾಗಿ ನಾವು ಬೆಂಬಲ ವಾಪಸ್ ಪಡೆದುಕೊಂಡಿದ್ದು ಎಂದರು. ಇದನ್ನೂ ಓದಿ: ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ, ತಲೆಯನ್ನು ತುಂಬಿಸುತ್ತದೆ: ಪ್ರತಾಪ್‍ಸಿಂಹ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳು ಬೇಕಾಬಿಟ್ಟಿಯಾಗಿ ಸರ್ಕಾರಿ ಬಂಗಲೆಗೆ ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಧಾರವಾಡದಲ್ಲಿ ಹೇಳಿಬರುತ್ತಿದೆ.
ಕುಲಪತಿಗಳು ಸುಖಾಸುಮ್ಮನೆ ಖರ್ಚು ಮಾಡುತ್ತಿದ್ದಾರೆ ಎಂಬುದು ಆರ್‌ಟಿಐ ಮಾಹಿತಿಯನ್ನು ಬಯಲು ಮಾಡಿದೆ. ಈಗ ಇರುವ ಕುಲಪತಿ ಕೆ.ಬಿ.ಗುಡಸಿ ಅವರು ಬಂದು ಒಂದು ವರ್ಷ ಕಳೆಯುತ್ತಾ ಬಂತು. ಆದರೆ ಅಷ್ಟರಲ್ಲೇ ಅವರು ಕರ್ನಾಟಕ ವಿವಿಯ ಬಂಗಲೆಗೆ ಶಿಫ್ಟ್ ಕೂಡಾ ಆಗಿದ್ದಾರೆ. ಇಲ್ಲಿಗೆ ಬಂದ ಮೇಲೆ ಅವರು ಆ ಮನೆಗೆ 11 ಲಕ್ಷ ಖರ್ಚು ಮಾಡಿದ್ದಾರೆ. ಇದನ್ನ ಟೆಂಡರ್ ಕರೆಯದೇ, ತುಂಡು ಗುತ್ತಿಗೆ ನೀಡಿದ್ದಾರೆ. ಹೀಗಾಗಿ 1 ಲಕ್ಷದ ಒಳಗಿನ ಕೆಲಸದ ಮಾಹಿತಿ ನೀಡಲಾಗಿದೆ. ಈ ಕಾಮಗಾರಿಯಲ್ಲಿ ಕಿಟಕಿಯ ಕರ್ಟನ್, ಹೊಸ ಕಾಟು, ತಲೆದಿಂಬು ಸೇರಿ ಹಲವು ಬಿಲ್ ಹಚ್ಚಲಾಗಿದೆ. ಇದನ್ನೂ ಓದಿ: ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಗಮನ ಸೆಳೆದ ಸೀಮಂತ ಕಾರ್ಯ
ಈ ಖರ್ಚು ಮಾಡುವುದಕ್ಕೆ ಏನೂ ಅಭ್ಯಂತರ ಇಲ್ಲ. ಆದರೆ ಇವರು ಬರುವ ಕೆಲವೇ ದಿನಗಳ ಹಿಂದೆ, ಇದೇ ಬಂಗಲೆಗೆ 33 ಲಕ್ಷ ಖರ್ಚು ಮಾಡಿದ್ದಾರೆ. ಅದು ಯಾಕೆ ಅಂತಾ ಗೊತ್ತಾಗಬೇಕು. ಒಟ್ಟು ಒಂದೇ ವರ್ಷದಲ್ಲಿ 45 ಲಕ್ಷ ರೂ. ಈ ಬಂಗಲೆಗೆ ಹೋಗಿದೆ. ಅದರಲ್ಲಿ ಹೊಸ ಬಂಗಲೆಯನ್ನೆ ಕಟ್ಟಬಹುದಾಗಿತ್ತು ಎಂದು ಮಾಜಿ ಸಿಂಡಿಕೇಟ್ ಸದಸ್ಯ ಜಯಂತ್ ಆರೋಪಿಸಿದ್ದಾರೆ.
ಈ ವಿಷಯ ಇಲ್ಲಿಗೆ ನಿಂತಿಲ್ಲ. ಇದು ರಾಜ್ಯಪಾಲರ ಗಮನಕ್ಕೆ ಕೂಡಾ ತರಲಾವುದು. ಸರ್ಕಾರಿ ದುಡ್ಡು ಅಂದರೆ ಅದು ಜನರ ದುಡ್ಡು. ಅಧಿಕಾರಕ್ಕೆ ಬಂದ ಮೇಲೆ ಹೇಗೆಲ್ಲಾ ಬಳಕೆ ಆಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತವಾಗುತ್ತಿದೆ. ಈ ಹಿಂದೆ ಇದ್ದ ಕುಲಪತಿಗಳೂ ಈ ಬಂಗಲೆಗೆ ಖರ್ಚು ಮಾಡಿದ್ದಾರೆ. ವಾಲಿಕಾರ್ ಕುಲಪತಿ ಆಗಿದ್ದಾಗ 7 ಲಕ್ಷದಷ್ಟು ಖರ್ಚು ಮಾಡಿದ್ದಾರೆ. ಅದರ ನಂತರ ಪ್ರಮೋದ ಗಾಯ್ ಇದ್ದಾಗಲೂ 9 ಲಕ್ಷ ಖರ್ಚು ಮಾಡಿದ್ದಾರೆ. ಇದನ್ನೂ ಓದಿ: ಹಾಲಿವುಡ್ ಖ್ಯಾತ ನಟಿ ಜೊತೆ ಸೆಕ್ಸ್ ಮಾಡಿದ್ದೇನೆ ಎಂಬ ಹೇಳಿಕೆಗೆ 50 ಲಕ್ಷ ಆಫರ್: ಖ್ಯಾತ ನಟ ಬಿಚ್ಚಿಟ್ಟ ರಹಸ್ಯ
ಈ ಲೆಕ್ಕದಂತೆಯೇ ಹೋದರೆ ಈ ಬಂಗಲೆಗೆ 10 ವರ್ಷಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಲಾಗಿದೆ. ಆದರೆ ಸರ್ಕಾರದ ಉನ್ನತ ಶಿಕ್ಷಣ ಸಚಿವರಿಗೆ ಈ ಬಗ್ಗೆ ಕೇಳಿದರೆ, ನನ್ನ ವ್ಯಾಪ್ತಿಗೆ ಬರಲ್ಲ ಎಂದು ಹೇಳುತ್ತಿದ್ದಾರೆ. ಸದ್ಯ ಇದನ್ನ ಸರ್ಕಾರವೇ ಬಗೆಹರಿಸಬೇಕಿದೆ.
ಏಕೆಂದರೆ ಈ ಕಾಮಣ್ಣನ ಮುಖ ಕಳ್ಳತನ ಮಾಡಲು ಬರುತ್ತಾರೆ ಎಂಬುದಕ್ಕೆ ಇದನ್ನು ಕಾವಲು ಕಾಯುತ್ತಾರೆ. ಇನ್ನು ಇಡೀ ರಾತ್ರಿ ಗ್ರಾಮದ ಜನ ಈ ಕಾಮಣ್ಣನ ದರ್ಶನ ಪಡೆಯುತ್ತಾರೆ. ಅಲ್ಲದೇ ತಮ್ಮ ಇಷ್ಟಾರ್ಥಗಳನ್ನು ಕೂಡ ಈ ಕಾಮಣ್ಣ ಎದುರು ಇಡುತ್ತಾರೆ. ನಾಳೆಯ ದಿನ ಬೆಳಗ್ಗೆ ಕಾಮದಹನ ಮಾಡಿ ನಂತರ ರಂಗ ಪಂಚಮಿ ಆಚರಣೆ ಮಾಡುತ್ತಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಮದ್ಯ ಮಾರಾಟ ನಿಷೇಧ
ಜಿಲ್ಲೆಯ ಅಣ್ಣಿಗೇರಿಯಿಂದ ಈ ಕಾಮಣ್ಣ ಮುಖವಾಡ ತಂದು ಇಲ್ಲಿ ಪ್ರತಿಷ್ಠಾಪನೆ ಮಾಡಿದ್ದರು. ಹೀಗಾಗಿ ಅಲ್ಲಿಯ ಜನ ಇದನ್ನ ಕದ್ದು ಹೋಗಬಹುದು ಎನ್ನುವ ಕಾರಣಕ್ಕೆ ತಲ್ವಾರ್, ಮಚ್ಚು, ಕೊಡಲಿ ಹಿಡಿದು ಕಾವಲು ಕಾಯುತ್ತಾರೆ.