Tag: ಧಾರವಾಡ

  • ಲವ್ ಕೇಸರಿ ಶಬ್ದ ಚೆನ್ನಾಗಿದೆ: ಪ್ರಮೋದ್ ಮುತಾಲಿಕ್

    ಲವ್ ಕೇಸರಿ ಶಬ್ದ ಚೆನ್ನಾಗಿದೆ: ಪ್ರಮೋದ್ ಮುತಾಲಿಕ್

    ಧಾರವಾಡ: ಲವ್ ಕೇಸರಿ ನಮ್ಮ ರಾಜ್ಯದ ಅಭಿಯಾನವಲ್ಲ. ಆದರೆ ಲವ್ ಕೇಸರಿ ಶಬ್ದ ಚೆನ್ನಾಗಿದೆ ಎಂದು ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದರು.

    ತಲ್ವಾರ್‌ನಿಂದ ಕೊಚ್ಚಿ ಹಾಕುತ್ತೇವೆ ಎಂಬ ರಾಯಚೂರು ಸಂಘಟನೆಯ ಹೇಳಿಕೆ ತಪ್ಪು. ಅದನ್ನು ನಾವು ಒಪ್ಪುವುದಿಲ್ಲ. ಆ ಹೇಳಿಕೆ ಸರಿಯಲ್ಲ ಎಂದ ಮುತಾಲಿಕ್, ಆದರೆ ಲವ್ ಕೇಸರಿ ಸರಿಯಾಗಿದೆ ಎಂದರು. ಇದನ್ನೂ ಓದಿ: ಈಶ್ವರಪ್ಪ ವಜಾಗೊಳಿಸಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಿ: ಪ್ರಿಯಾಂಕ್ ಖರ್ಗೆ

    ಕಳೆದ 15 ವರ್ಷಗಳಿಂದ ಲವ್ ಜಿಹಾದ್ ವಿರುದ್ಧ ಹೋರಾಡುತ್ತಿದ್ದೇವೆ. ನೂರಕ್ಕೆ ನೂರರಷ್ಟು ಲವ್ ಜಿಹಾದ್ ಇದೆ. ಕೇರಳದಲ್ಲೇ 4,000 ಜನ ಲವ್ ಜಿಹಾದ್‌ಗೆ ಬಲಿಯಾಗಿದ್ದಾರೆ. ಎರಡುವರೆ ಸಾವಿರ ಕ್ರಿಶ್ಚಿಯನ್ ಹುಡುಗಿಯರು ಲವ್ ಜಿಹಾದ್ ನಲ್ಲಿದ್ದಾರೆ. ಅದು ಈಗ ಸುಪ್ರಿಂಕೋರ್ಟ್ನಲ್ಲಿದೆ ಎಂದರು.

    ಲವ್ ಜಿಹಾದ್ ವಿಚಾರವಾಗಿ ಮೂರು ರಾಜ್ಯಗಳಲ್ಲಿ ಕಾನೂನು ರಚನೆಯಾಗಿದೆ. ಉತ್ತರಪ್ರದೇಶ, ಮಧ್ಯಪ್ರದೇಶ, ಹರಿಯಾಣದಲ್ಲಿ ಕಾನೂನು ಆಗಿದೆ. ಕರ್ನಾಟದಲ್ಲಿಯೂ ಲವ್ ಜಿಹಾದ್ ವಿರುದ್ಧ ಕಾನೂನು ಆಗಬೇಕು ಎಂದರು.

    ರಸ್ತೆ ಹೆಸರು ಬದಲಾಗಬೇಕು:
    ಈ ವೇಳೆ ರಸ್ತೆ ಹೆಸರು ಬದಲಾವಣೆ ವಿಚಾರವಾಗಿ ಮಾತನಾಡಿದ ಮುತಾಲಿಕ್, ಬೆಂಗಳೂರು ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಬ್ರಿಟಿಷರ ಹೆಸರುಗಳಿವೆ. ಅವೆಲ್ಲವನ್ನೂ ಬದಲಾಯಿಸಬೇಕು ಎಂದರು. ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡಲ್ಲ: ಬೊಮ್ಮಾಯಿ

    ವಿಕ್ಟೋರಿಯಾ ರಾಣಿ ಹೆಸರಿವೆ, ಕಬ್ಬನ್ ಪಾರ್ಕ್ ಇದೆ. ಆ ಬ್ರಿಟಿಷರು ಹೋದರೂ ಕಬ್ಬನ್, ವಿಕ್ಟೋರಿಯಾ ಇಲ್ಲೇ ಇದ್ದಾರೆ. ಅವರ ಹೆಸರುಗಳು ಯಾಕೆ? ಕನ್ನಡ ಹೋರಾಟಗಾರರು, ಸಾಹಿತಿ, ಕವಿಗಳ ಹೆಸರಿಡಲಿ ಎಂದರು. ಅವರು ಇಲ್ಲಿಂದ ಹೋಗಿ 75 ವರ್ಷ ಆಗಿ ಹೋಯ್ತಲ್ಲ? ಸ್ವಾಭಿಮಾನ ಇಲ್ಲವಾ? ಘಜ್ನಿ, ಘೋರಿ, ಟಿಪ್ಪು ಸುಲ್ತಾನ್‌ವರೆಗೆ ಹೆಸರು ಬದಲಾಗಬೇಕು. ಕನ್ನಡ ಸಾಹಿತಿ, ಹೋರಾಟಗಾರರ ಹೆಸರಿಡಬೇಕು. ಅದಕ್ಕೆ ನಮ್ಮ ಬೆಂಬಲ ಇದೆ ಎಂದು ಮುತಾಲಿಕ್ ಹೇಳಿದರು.

  • ದೇವಸ್ಥಾನ ಆವರಣದಲ್ಲಿ ಮುಸ್ಲಿಂ ವ್ಯಾಪಾರಿ ಇದ್ದರೂ, ಯಾವ ವೇಷದಲ್ಲಿರಬೇಕು: ಶಾಸಕ ಬೆಲ್ಲದ್

    ದೇವಸ್ಥಾನ ಆವರಣದಲ್ಲಿ ಮುಸ್ಲಿಂ ವ್ಯಾಪಾರಿ ಇದ್ದರೂ, ಯಾವ ವೇಷದಲ್ಲಿರಬೇಕು: ಶಾಸಕ ಬೆಲ್ಲದ್

    ಧಾರವಾಡ: ದೇವಸ್ಥಾನ ಆವರಣದಲ್ಲಿ ಮುಸ್ಲಿಂ ವ್ಯಾಪಾರಿ ಇದ್ದರೂ ಯಾವ ರೀತಿ ವೇಷದಲ್ಲಿರಬೇಕು, ತಲೆ ಮೇಲೆ ಟೋಪಿ ಹಾಕಿ, ಗಡ್ಡ ಬಿಟ್ಟುಕೊಂಡು, ಮೀಸೆ ಬೋಳಿಸಿಕೊಂಡು, ಪಾಯಿಜಾಮ ಹಾಕಿಕೊಂಡಾಗ ಹಿಂದೂ ಭಕ್ತರ ಮನಸಿನಲ್ಲಿ ಇವರಿಗ್ಯಾಕೆ ವ್ಯಾಪಾರಕ್ಕೆ ಅವಕಾಶ ಕೊಡಬೇಕು ಅನಿಸುತ್ತದೆ ಎಂದು ಶಾಸಕ ಅರವಿಂದ್‌ ಬೆಲ್ಲದ್ ಹೇಳಿದರು.

    ಧಾರವಾಡ ನುಗ್ಗಿಕೇರಿ ಧರ್ಮ ವ್ಯಾಪಾರ ಗಲಾಟೆ ವಿಚಾರವಾಗಿ ಮಾತನಾಡಿದ ಅವರು, ಕಲ್ಲಂಗಡಿ ಒಡೆದ ಘಟನೆ ನಡೆಯಬಾರದಿತ್ತು, ಆದರೆ ಇದು ಯಾಕೆ ಆಗುತ್ತಿದೆ ಎನ್ನುವುದರ ಕುರಿತು ವಿಚಾರ ಮಾಡಬೇಕಿದೆ ಎಂದರು.

    ಘಟನೆ ನಡೆಯಲು ಕಾರಣವಾದ ವಿಷಯಗಳ ಬಗ್ಗೆ ನೋಡಬೇಕಿದೆ. ಹೈಕೋರ್ಟ್ ಹಿಜಬ್ ಕುರಿತು ಶಾಲೆಗಳಲ್ಲಿ ಸಮವಸ್ತ್ರ ಧರಿಸಬೇಕು ಎಂದು ತೀರ್ಪು ನೀಡಿತ್ತು. ಇದನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳು ಅಂಗಡಿ ಬಂದ್ ಮಾಡಿದ್ದವು. ಆಗಲೇ ಅವರಿಗೆ ಕಾನೂನಿನ ಬಗ್ಗೆ ಕಾಳಜಿ ಹಾಗೂ ಗೌರವ ಇಲ್ಲ ಎನ್ನುವುದು ಗೊತ್ತಾಗಿದೆ ಎಂದ ಅವರು, ತಲೆ ಒಡೆದಾಗ ಇಲ್ಲದ ಕಾಳಜಿ, ಕಲ್ಲಂಗಡಿ ಒಡೆದಾಗ ಏಕೆ ಎಂದು ಸಿಟಿ ರವಿ ಹೇಳಿದ್ದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.

    ಮುಸ್ಲಿಂ ಸಮಾಜದ ನಾಯಕರು ಮೊದಲು ವಿಚಾರ ಮಾಡಬೇಕಿದೆ. ಇಲ್ಲದೇ ಹೋದಲ್ಲಿ ಆ್ಯಕ್ಷನ್‍ಗೆ-ರಿಯಾಕ್ಷನ್ ಆಗುತ್ತಾ ಹೋಗುತ್ತದೆ ಎಂದ ಅವರು, ನುಗ್ಗಿಕೇರಿ ಖಾಸಗಿ ದೇವಸ್ಥಾನವಾಗಿದೆ. ಅಲ್ಲಿ ಯಾರ ಅಂಗಡಿ ಇರಬೇಕು ಎನ್ನುವುದು ಆಡಳಿತ ಮಂಡಳಿಗೆ ಬಿಟ್ಟ ವಿಷಯವಾಗಿದೆ. ಅದು ಹಿಂದೂ ದೇವಸ್ಥಾನ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬೆಳಗಾವಿ ಬಿಜೆಪಿಯಲ್ಲಿನ ಭಿನ್ನಮತ ಶಮನಕ್ಕೆ ಮುಂದಾದ ಅರುಣ್ ಸಿಂಗ್, ಬಿಎಸ್‍ವೈ

    ಒಂದು ಕಡೆ ಕಾನೂನು ವಿರೋಧಿಸುತ್ತಾರೆ. ಮತ್ತೊಂದೆಡೆ ನಮ್ಮ ದೇವಸ್ಥಾನಕ್ಕೆ ವ್ಯಾಪಾರಕ್ಕೆ ಬರುತ್ತಾರೆ. ಸಮಾಜದಲ್ಲಿ ಈಗ ಎರಡೂ ಕಡೆ ವಿಚಾರ ಮಾಡಬೇಕಿದೆ ಎಂದ ಅವರು, ಒಂದೇ ಕಡೆಯಿಂದ ಚಪ್ಪಾಳೆ ಆಗೋದಿಲ್ಲ, ಎರಡು ಕೈ ಸೇರಿಸಿಯೇ ಚಪ್ಪಾಳೆ ಆಗಬೇಕು, ಹಾಗಂತ ನಾನು ಗಲಾಟೆ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ ಎಂದರು.

    ಮುಸ್ಲಿಂ ಸಮಾಜದ ನಾಯಕರು ತಪ್ಪು ಆದಾಗ ತಪ್ಪು ಎಂದು ಹೇಳಬೇಕಿದೆ, ಹುಚ್ಚು ಹುಡುಗರು ಹೋಗಿ ದೇವಸ್ಥಾನದಲ್ಲಿ ಹಾಗೆ ಮಾಡಿದ್ದಾರೆ. ಅದಕ್ಕೆ ಪ್ರಚೋದನೆ ಆಗಿದ್ದೇನು ಅದನ್ನು ನೋಡಬೇಕು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಪಿಎಸ್‍ಐ ನೇಮಕಾತಿ ಅಕ್ರಮ ವಿಚಾರ – 7ನೇ ರ‍್ಯಾಂಕ್ ಪಡೆದಿದ್ದ ಕಲಬುರಗಿ ಅಭ್ಯರ್ಥಿ ಸಿಐಡಿ ವಶಕ್ಕೆ

  • ಹಿಂದೂಯೇತರನ ಅಂಗಡಿ ಧ್ವಂಸ ಪ್ರಕರಣ- ಶ್ರೀರಾಮಸೇನೆಯ ನಾಲ್ವರ ಬಂಧನ

    ಹಿಂದೂಯೇತರನ ಅಂಗಡಿ ಧ್ವಂಸ ಪ್ರಕರಣ- ಶ್ರೀರಾಮಸೇನೆಯ ನಾಲ್ವರ ಬಂಧನ

    ಧಾರವಾಡ: ಹಿಂದೂತೇರನ ಅಂಗಡಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶ್ರೀರಾಮ ಸೇನೆಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹಿಂದೂಯೇತರ ಅಂಗಡಿಯಲ್ಲಿದ್ದ ಕಲ್ಲಂಗಡಿ, ತೆಂಗಿನಕಾಯಿ ಒಡೆದುಹಾಕಿದ ಶ್ರೀರಾಮಸೇನೆ ಕಾರ್ಯಕರ್ತರು

    ಮೈಲಾರಪ್ಪ ಗುಡ್ಡಪ್ಪನವರ, ಮಹಾಲಿಂಗ ಐಗಳಿ, ಚಿದಾನಂದ ಕಲಾಲ ಹಾಗೂ ಕುಮಾರ ಕಟ್ಟಿಮನಿ ಬಂಧಿತರು. ನಬಿಸಾಬ್ ಮಾಲೀಕತ್ವದ ಕಲ್ಲಂಗಡಿ ಹಣ್ಣಿನಂಗಡಿ ಧ್ವಂಸ ಮಾಡಲಾಗಿತ್ತು. ಗಲಾಟೆ ಸಂಬಂಧ ನಬಿಸಾಬ್ ಅವರು ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ದೂರು ಸ್ವೀಕರಿಸಿರುವ ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.

    ನಡೆದಿದ್ದೇನು.?
    ಧಾರವಾಡ ಹೊರವಲಯದ ನುಗ್ಗಿಕೇರೆ ಆಂಜನೇಯನ ದೇವಸ್ಥಾನಕ್ಕೆ ಶನಿವಾರ ಸಾವಿರಾರು ಭಕ್ತರು ಬಂದು ದರ್ಶನ ಪಡೆಯುತ್ತಾರೆ. ದೇವಸ್ಥಾನದ ಬಳಿ 4 ಹಿಂದೂಯೇತರ ಅಂಗಡಿಗಳಿದ್ದು, ಕಳೆದ 15 ದಿನಗಳ ಹಿಂದೆ ಶ್ರೀರಾಮ ಸೇನೆಯ ಕಾರ್ಯಕರ್ತರು ದೇವಸ್ಥಾನದ ಬಳಿ ಬಂದು ಪ್ರತಿಭಟನೆ ಮಾಡಿದ್ದರು. ಈ ವೇಳೆ ಹಿಂದೂಯೇತರ ಅಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಮನವಿ ಮಾಡಿದ್ದರು. ಶನಿವಾರ ಹಿಂದೂಯೇತರ ಅಂಗಡಿಗಳು ಮುಚ್ಚದೇ ಇದ್ದಿದ್ದರಿಂದ ಶ್ರೀರಾಮ ಸೇನೆ ಕಾರ್ಯಕರ್ತರು ಸ್ಥಳಕ್ಕೆ ಬಂದು ಅಂಗಡಿಗಳಲ್ಲಿದ್ದ ಕಲ್ಲಂಗಡಿ ಹಣ್ಣು ಹಾಗೂ ತೆಂಗಿನಕಾಯಿಗಳನ್ನು ಒಡೆದು ಹಾಕಿದ್ದರು.

  • ರಾಜ್ಯದ ಕೆಲವೆಡೆ ಗುಡುಗು ಸಹಿತ ಭಾರೀ ಮಳೆ, ಹಾನಿ

    ರಾಜ್ಯದ ಕೆಲವೆಡೆ ಗುಡುಗು ಸಹಿತ ಭಾರೀ ಮಳೆ, ಹಾನಿ

    ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ.

    ಹುಬ್ಬಳ್ಳಿಯ ಕುಂದಗೋಳ ತಾಲೂಕಿನ ಸಿದ್ಯಾವನೂರು ಗ್ರಾಮದಲ್ಲಿ ಭಾರೀ ಮಳೆ ಲಕ್ಷಾಂತರ ರೂಪಾಯಿ ಮೌಲ್ಯದ 14 ಕುರಿ, ಒಂದು ಕುದುರೆ ಸಾವನ್ನಪ್ಪಿದೆ. ಹಾವೇರಿ ಜಿಲ್ಲೆಯ ಕಾಗಿನೆಲೆ, ಮುಳಥಳ್ಳಿ, ತಡಸ ಸೇರಿ ಹಲವೆಡೆ ಭಾರೀ ಮಳೆಯಾಗಿದೆ. ತಡಸ ಗ್ರಾಮದಲ್ಲಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ಇದನ್ನೂ ಓದಿ: ನಿಷೇಧದ ನಡುವೆಯೂ ಶೋಭಾಯಾತ್ರೆ- ಎಸ್‍ಪಿ ವಾರ್ನಿಂಗ್‍ನಿಂದ ಜಾಗ ಖಾಲಿ ಮಾಡಿದ ಮುತಾಲಿಕ್

    ವಿಜಯಪುರದ ಬಬಲೇಶ್ವರ ತಾಲೂಕಿನ ಯಕ್ಕುಂಡಿ ಗ್ರಾಮ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ಮುದ್ದೇಬಿಹಾಳ ತಾಲೂಕಿನ ಗೆದ್ದಲಮರಿ ಗ್ರಾಮದಲ್ಲಿ ಸಿಡಿಲು ಬಡಿದು 2 ಎತ್ತುಗಳು ಮೃತಪಟ್ಟಿವೆ. ಇನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಾಟಾಪುರದಲ್ಲಿ ಸಿಡಿಲು ಬಡಿದು ಲಕ್ಷ್ಮಣ ಗುಡಿಗೆರಿ ಎಂಬವರು ಸಾವನ್ನಪ್ಪಿದ್ದಾರೆ.

  • ಹಿಂದೂಯೇತರ ಅಂಗಡಿಯಲ್ಲಿದ್ದ ಕಲ್ಲಂಗಡಿ, ತೆಂಗಿನಕಾಯಿ ಒಡೆದುಹಾಕಿದ ಶ್ರೀರಾಮಸೇನೆ ಕಾರ್ಯಕರ್ತರು

    ಹಿಂದೂಯೇತರ ಅಂಗಡಿಯಲ್ಲಿದ್ದ ಕಲ್ಲಂಗಡಿ, ತೆಂಗಿನಕಾಯಿ ಒಡೆದುಹಾಕಿದ ಶ್ರೀರಾಮಸೇನೆ ಕಾರ್ಯಕರ್ತರು

    ಧಾರವಾಡ: ದೇವಸ್ಥಾನದ ಬಳಿ ಹಿಂದೂಯೇತರ ಅಂಗಡಿಗಳನ್ನು ಬಂದ್ ಮಾಡಿಸಬೇಕೆಂಬ ಚರ್ಚೆ ಕಳೆದ ಒಂದು ತಿಂಗಳಿನಿಂದ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನವೊಂದರ ಬಳಿ ಹಿಂದೂಯೇತರರು ಮಾರಾಟಮಾಡುತ್ತಿದ್ದ ಕಲ್ಲಂಗಡಿ ಹಾಗೂ ತೆಂಗಿನಕಾಯಿಯನ್ನು ಶ್ರೀರಾಮಸೇನೆ ಕಾರ್ಯಕರ್ತರು ಒಡೆದು ಹಾಕಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡ ಹೊರವಲಯದ ನುಗ್ಗಿಕೇರೆ ಆಂಜನೇಯನ ದೇವಸ್ಥಾನಕ್ಕೆ ಶನಿವಾರ ಸಾವಿರಾರು ಭಕ್ತರು ಬಂದು ದರ್ಶನ ಪಡೆಯುತ್ತಾರೆ. ದೇವಸ್ಥಾನದ ಬಳಿ 4 ಹಿಂದೂಯೇತರ ಅಂಗಡಿಗಳಿದ್ದು, ಕಳೆದ 15 ದಿನಗಳ ಹಿಂದೆ ಶ್ರೀರಾಮ ಸೇನೆಯ ಕಾರ್ಯಕರ್ತರು ದೇವಸ್ಥಾನದ ಬಳಿ ಬಂದು ಪ್ರತಿಭಟನೆ ಮಾಡಿದ್ದರು. ಈ ವೇಳೆ ಹಿಂದೂಯೇತರ ಅಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಮನವಿ ಮಾಡಿದ್ದರು. ಶನಿವಾರ ಹಿಂದೂಯೇತರ ಅಂಗಡಿಗಳು ಮುಚ್ಚದೇ ಇದ್ದಿದ್ದರಿಂದ ಶ್ರೀರಾಮ ಸೇನೆ ಕಾರ್ಯಕರ್ತರು ಸ್ಥಳಕ್ಕೆ ಬಂದು ಅಂಗಡಿಗಳಲ್ಲಿದ್ದ ಕಲ್ಲಂಗಡಿ ಹಣ್ಣು ಹಾಗೂ ತೆಂಗಿನಕಾಯಿಗಳನ್ನು ಒಡೆದು ಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮುಕ್ತ ಭಾರತ ಮಾಡೋಕೆ ಯಾರಪ್ಪನ ಕೈಯಲ್ಲೂ ಆಗಲ್ಲ: ನಲಪಾಡ್

    ಘಟನೆಯಿಂದ ನಷ್ಟ ಅನುಭವಿಸಿದ ಹಿಂದೂಯೇತರ ವ್ಯಾಪಾರಿ ನಬಿಸಾಬ್, ನೋಡ ನೋಡುತ್ತಿದ್ದಂತೆಯೇ ಎಲ್ಲಾ ಒಡೆಯುತ್ತ ಬಂದರು. ಅವರು 8-10 ಜನ ಇದ್ದರು. ನಾನೊಬ್ಬನೇ ಇದ್ದಿದ್ದರಿಂದ ಏನೂ ಮಾಡಲಾಗಲಿಲ್ಲ. 6 ಕ್ವಿಂಟಾಲ್ ಕಲ್ಲಂಗಡಿ ಹಣ್ಣು ತೆಗೆದುಕೊಂಡು ಬಂದಿದ್ದೆ. ಅದರಲ್ಲಿ 1 ಕ್ವಿಂಟಾಲ್ ಮಾತ್ರ ಮಾರಾಟವಾಗಿತ್ತು ಎಂದು ಮರುಗಿದರು.

    ನಾನು ಕಳೆದ 15 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇನೆ. ಕಳೆದ ವಾರ ಇಲ್ಲಿ ಮುಸ್ಲಿಮರಿಗೆ ಅಂಗಡಿ ಹಾಕಬೇಡಿ ಎಂದಿದ್ದರು. ಮುಂದಿನ ವಾರವೇ ದೇವಸ್ಥಾನದ ಜಾತ್ರೆ ಇತ್ತು. ಜಾತ್ರೆಯ ಬಳಿಕ ಹಿಂದೂಯೇತರ ಅಂಗಡಿಗಳನ್ನು ಇಲ್ಲಿ ಇಡಬೇಕಾ, ಬೆಡವಾ ಎಂದು ನಿರ್ಧಾರ ಆಗಬೇಕಿತ್ತು. ಅಷ್ಟರಲ್ಲಿ ಈ ಗಲಾಟೆ ನಡೆಸಲಾಗಿದೆ. ಮತ್ತೊಂದು ಕಡೆ ದೇವಸ್ಥಾನದ ಆಡಳಿತ ಮಂಡಳಿ ಎಲ್ಲ ಪರ್ಯಾಯಸ್ಥರ ಸಭೆ ಮಾಡಿ, ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ಎಂದು ತಿಳಿಸಿದರು.

    ಘಟನೆ ಬಗ್ಗೆ ಪ್ರತಿಕ್ರಿಯಿಸಿದ ದೇವಸ್ಥಾನದ ಪರ್ಯಾಯಸ್ಥರು, ಶನಿವಾರ ಯಾವಾಗಲೂ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಹೀಗಾಗಿ ಆ ಕಡೆ ಗಲಾಟೆ ನಡೆದಿರುವ ಬಗ್ಗೆ ಲಕ್ಷ್ಯ ಕೊಡಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಸಭೆ ಮಾಡಿ ಏನಾಗಿದೆ ಎಂದು ಮಾಹಿತಿ ಕೊಡುತ್ತೇನೆ ಎಂದರು. ಇದನ್ನೂ ಓದಿ: ಲವ್ ಜಿಹಾದ್‍ಗೆ ಮುಂದಾದವರ ಮನೆ ಹೊಕ್ಕು ಹೊಡೆಯಬೇಕು: EX MLC ನಾರಾಯಣಸಾ ಭಾಂಡಗೆ

    ಕಳೆದ ತಿಂಗಳು ಈ ವಿಚಾರವಾಗಿ ಮನವಿ ಬಂದಿತ್ತು. ನಾನು ಬಂದು ಇನ್ನೂ ಒಂದು ತಿಂಗಳಾಗಲಿಲ್ಲ. ಮನವಿ ಹಾಗೂ ಗಲಾಟೆ ಬಗ್ಗೆ ಸಭೆ ಕರೆದು ನೋಡುತ್ತೇವೆ. ಅಂಗಡಿಗಳಿಗೆ ಅನುಮತಿ ಕೊಡುವುದು ನಾವೆ. ನಾವು ಅವರಿಂದ ಬಾಡಿಗೆ ತೆಗೆದುಕೊಳ್ಳುವುದಿಲ್ಲ. ಬಡವರು ಎಂದು ಅಂಗಡಿ ನಡೆಸಲು ಕೊಟ್ಟಿದ್ದೇವೆ. ಇಲ್ಲಿರುವ ಶೇ.99 ರಷ್ಟು ವ್ಯಾಪಾರಿಗಳು ಹಿಂದೂಗಳು. ಎಲ್ಲರಿಗೂ ಹೊಟ್ಟೆ ಪಾಡಿದೆ. ನಾವು ಎಲ್ಲರಿಗೂ ಸಹಾಯ ಮಾಡುತ್ತೇವೆ ಎಂದರು.

  • ವಿದ್ಯುತ್ ದರ ಏರಿಕೆ ಖಂಡಿಸಿ ಧಾರವಾಡದಲ್ಲಿ ಪ್ರತಿಭಟನೆ

    ವಿದ್ಯುತ್ ದರ ಏರಿಕೆ ಖಂಡಿಸಿ ಧಾರವಾಡದಲ್ಲಿ ಪ್ರತಿಭಟನೆ

    ಧಾರವಾಡ: ಪೇಡಾ ನಗರಿಯಲ್ಲಿ ವಿದ್ಯುತ್ ದರ ಏರಿಕೆ ಖಂಡಿಸಿ ಎಸ್‍ಯುಸಿಐ ಸಂಘಟನೆ ಕಾರ್ಯಕರ್ತರು ಧಾರವಾಡದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

    ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಕೂಡ ಏರಿಕೆಯಾಗುತ್ತಿದ್ದು, ಇದೀಗ ಸರ್ಕಾರ ವಿದ್ಯುತ್ ದರವನ್ನೂ ಏರಿಕೆ ಮಾಡಿ ಬಡವರಿಗೆ ಗಾಯದ ಮೇಲೆ ಬರೆ ಎಳೆದಿದೆ ಎಂದು ಆರೋಪಿಸಿ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ವಿಗ್ರಹ ಮಾಡೋದು ಹರಾಮ್, ಆದ್ರೇ ಜೀವನೋಪಾಯಕ್ಕೆ ಅದು ಅನಿವಾರ್ಯ: ಉಮರ್ ಷರೀಫ್

    ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ಬೆಲೆ ಏರಿಕೆ ನೀತಿಯನ್ನು ಅನುಸರಿಸಿ ಬಡವರಿಗೆ ನಿತ್ಯ ತೊಂದರೆ ಕೊಡುತ್ತಿದೆ. ತೈಲ ಬೆಲೆ ಏರಿಕೆಯಿಂದಾಗಿ ಮಧ್ಯಮ ವರ್ಗದ ಜನ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಬಡವರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಹಲಾಲ್‌ ಆಯ್ತು ಈಗ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ

    ಇದೀಗ ಗಾಯದ ಮೇಲೆ ಬರೆ ಎಂಬಂತೆ ವಿದ್ಯುತ್ ದರವನ್ನು ಸರ್ಕಾರ ಹೆಚ್ಚಳ ಮಾಡಿದೆ. ಕೂಡಲೇ ಸರ್ಕಾರ ಬೆಲೆ ಏರಿಕೆ ನೀತಿಯನ್ನು ಕೈ ಬಿಟ್ಟು ಬಡವರ ಹಿತ ಕಾಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

  • ಮುಸ್ಕಾನ್‍ಳನ್ನು ಅಲ್‍ಖೈದಾ ಮುಖ್ಯಸ್ಥ ಬೆಂಬಲಿಸಿರುವುದು ಆತಂಕಕಾರಿ: ಮುತಾಲಿಕ್

    ಮುಸ್ಕಾನ್‍ಳನ್ನು ಅಲ್‍ಖೈದಾ ಮುಖ್ಯಸ್ಥ ಬೆಂಬಲಿಸಿರುವುದು ಆತಂಕಕಾರಿ: ಮುತಾಲಿಕ್

    ಧಾರವಾಡ: ಇವತ್ತು ದೇಶಕ್ಕೆ ಆಫಘಾನಿಸ್ತಾನದ ವಿಡಿಯೋ ಪ್ರಸಾರವಾಗಿದೆ. ಇದು ದೇಶದ ಜನರಿಗೆ ಆತಂಕ ತಂದಿದೆ, ಇದು ಅಪಾಯಕಾರಿ ಬೆಳವಣಿಗೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಅಲ್ ಖೈದಾ ಮುಖ್ಯಸ್ಥ ಮಂಡ್ಯದ ಮುಸ್ಕಾನ್‍ಳನ್ನು ಬೆಂಬಲಿಸಿದ್ದಾನೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎಂದರು.

    ಶಾಲೆಯಲ್ಲಿ ಹಿಜಬ್ ಬ್ಯಾನ್ ಮಾಡಿದ್ದನ್ನು ವಿರೋಧಿಸಿದ್ದು ಅಚ್ಚರಿ ತಂದಿದೆ. ಹಿಜಬ್ ವಿಚಾರ ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಿದೆ ಎಂದ ಅವರು, ಉಗ್ರ ಸಂಘಟನೆಗಳು ಈ ರೀತಿ ಹೇಳಿಕೆಯನ್ನು ಕೊಡುತ್ತಾರೆ ಎಂದರೆ ಇದರ ಹಿಂದೆ ಇಸ್ಲಾಂ ಕೆಲಸ ಮಾಡುತ್ತಿದೆ. ದೇಶದ್ರೋಹಿ ಸಂಘಟನೆ ಕೆಲಸ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.

    muskhan

    ದೇಶದಲ್ಲಿ ಮುಸ್ಲಿಮರಿಗೆ ಸ್ವಾತಂತ್ರವಿದೆ, ಇಲ್ಲಿದ್ದಷ್ಟು ಅನುಕೂಲ ಎಲ್ಲಿಯೂ ಇಲ್ಲ, ಆದರೆ ಇಲ್ಲಿನ ಮುಸ್ಲಿಮರು ದೇಶದ್ರೋಹದ ಕೆಲಸ ಮಾಡುತ್ತಾರೆಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಇದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಆದರೆ ಸರ್ಕಾರ ಇದನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಅಲ್‍ಖೈದಾ ಉಗ್ರ ಸಂಘಟನೆಗೆಳು ನೀಡಿರುವುದು ವಿದ್ಯಾರ್ಥಿನಿಗೆ ಬೆಂಬಲ ಅಲ್ಲ, ಬದಲಿಗೆ ಇದು ಇಸ್ಲಾಂಗೆ ಬೆಂಬಲವಾಗಿದೆ. ಇದನ್ನು ತಡೆಯಬೇಕು, ಅಲ್ ಖೈದಾ ಮುಖ್ಯಸ್ಥನ ವಿಡಿಯೋ ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆ ಆಗಲಿ. ಇದರ ಹಿಂದಿನ ಸಿಎಫ್‍ಐ, ಪಿಎಫ್‍ಐ, ಎಸ್‍ಡಿಎಫ್‍ಐ ಸಂಘಟನೆ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ನಮಗೆ ಮಾನವೀಯತೆಯಲ್ಲಿ ನಂಬಿಕೆ ಇದ್ದರೆ, ಬಿಜೆಪಿ ಮನುವಾದದಲ್ಲಿ ನಂಬಿಕೆ ಇಟ್ಟಿದೆ: ಸಿದ್ದರಾಮಯ್ಯ

    ಈ ಸಂಘಟನೆಗಳನ್ನೆಲ್ಲಾ ಬ್ಯಾನ್ ಮಾಡಬೇಕು, ಇವರೆಲ್ಲ ಅಲ್ಲಿಯವರೆಗೆ ಹೋಗುತ್ತಾರೆ ಅಂದರೇನು, ಈ ವಿಷಯದಲ್ಲಿ ವಿದೇಶಿಯರು ಇದರಲ್ಲಿ ಮೂಗು ತೂರಿಸುವ ಅವಶ್ಯಕತೆ ಇಲ್ಲ. ನಾವು ತಾಲೀಬಾನ್ ಥರಾ ಅಲ್ಲ, ನೀವೆಲ್ಲ ಮಹಿಳೆಯರನ್ನು ಮಶೀನ್ ಥರಾ ನೋಡುತ್ತೀರಿ, ಮಕ್ಕಳನ್ನು ಹೆರುವ ಯಂತ್ರದ ಥರಾ ನೋಡ್ತಾರೆ, ಅಂಥವರು ನಮ್ಮ ದೇಶದಲ್ಲಿ ಮೂಗು ತೂರಿಸೋದು ಬೇಡ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಹಿಂದೂಗಳಂತೆ ಮುಸಲ್ಮಾನರೂ ಪೌರಕಾರ್ಮಿಕರಾಗಿ ದುಡಿಯಲಿ: ಸೊಗಡು ಶಿವಣ್ಣ

  • ಕುಮಾರಸ್ವಾಮಿ ಅವರೇ ತಾಕತ್ ಇದ್ರೆ ನೇರಾ ನೇರ ಚರ್ಚೆಗೆ ಬನ್ನಿ: ಮುತಾಲಿಕ್

    ಕುಮಾರಸ್ವಾಮಿ ಅವರೇ ತಾಕತ್ ಇದ್ರೆ ನೇರಾ ನೇರ ಚರ್ಚೆಗೆ ಬನ್ನಿ: ಮುತಾಲಿಕ್

    ಧಾರವಾಡ: ಹಿಂದೂ ಸಂಘಟನೆಗಳ ಬಗ್ಗೆ ಹಗುರವಾಗಿ ಮಾತನಾಡುವ ಕುಮಾರಸ್ವಾಮಿ ಅವರೇ, ನಿಮಗೆ ತಾಕತ್ ಇದ್ದರೆ ಎದುರು ಬನ್ನಿ, ನಾವು ಏನು ಮಾಡಿದ್ದೇವೆ ಎಂಬುದನ್ನು ನಿಮಗೆ ಹೇಳುತ್ತೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಸವಾಲು ಹಾಕಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರೇ ನೀವು ರಾಜಕೀಯವಾಗಿ ಏನಾದರೂ ಮಾಡಿಕೊಳ್ಳಿ, ಆದರೆ ಹಿಂದೂ ಸಂಘಟನೆಗಳ ಬಗ್ಗೆ ಮಾತನಾಡುವ ನೀವು ಎಸ್‍ಡಿಪಿಐ, ಪಿಎಫ್‍ಐ ಬಗ್ಗೆ ಮಾತನಾಡಿದ್ದೀರಾ? ವೋಟ್ ಬ್ಯಾಂಕ್ ರಾಜಕಾರಣ ನೀವು ಮಾಡುತ್ತಿದ್ದೀರಿ. ಹಿಂದೂ ಸಂಘಟನೆಗಳನ್ನು ಬೈದರೆ ಮುಸ್ಲಿಂ ವೋಟ್ ಬರುತ್ತವೆ ಎಂಬ ಭ್ರಮೆಯಲ್ಲಿದ್ದೀರಿ. ದೇಶಭಕ್ತಿ ಕೆಲಸ ಮಾಡುವವರನ್ನು ನೀವು ಕೆಣಕಬೇಡಿ ಎಂದು ಎಚ್ಚರಿಕೆ ನೀಡಿದರು.

    HDK

    ಹಿಂದೂ ಸಂಘಟನೆಗಳು ತಪ್ಪು ಇವೆ ಎನ್ನುವುದಾದರೆ ಎದುರಿಗೆ ಬನ್ನಿ. ನಾವು ಏನು ಮಾಡಿದ್ದೇವೆ ಅನ್ನುವುದನ್ನು ಹೇಳುತ್ತೇವೆ. ಕುಮಾರಸ್ವಾಮಿ ಅವರೇ ನೀವು ಭ್ರಷ್ಟರಿದ್ದೀರಿ. ನಾವು ದೇಶಕ್ಕಾಗಿ ಹಾಗೂ ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಹಿಂದೂ ಸಂಘಟನೆಗಳು ರಾವಣ ಸೇನೆ ಎಂಬ ನಿಮ್ಮ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಜನ ಮೂರ್ಖರಲ್ಲ: ಡಿಕೆಶಿಗೆ ಬಿಜೆಪಿ ತಿರುಗೇಟು

    ಕುಮಾರಸ್ವಾಮಿ ಅವರೇ ನಿಮ್ಮ ತಂದೆ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಿ ಬರುತ್ತೇನೆ ಎಂದಿದ್ದಾರೆ. ಹಿಂದೂ ಸಮಾಜ ಅವರಿಗೆ ಏನು ತೊಂದರೆ ಕೊಟ್ಟಿದೆ? ಮೊದಲು ನಿಮ್ಮ ತಂದೆಗೆ ಬುದ್ಧಿವಾದ ಹೇಳಿ. ರಾಜಕೀಯವಾಗಿ ನೀವು ಬೇಕಾದ್ದನ್ನು ಮಾತನಾಡಿಕೊಳ್ಳಿ ಆದರೆ, ಹಿಂದೂ ಸಂಘಟನೆಗಳ ಬಗ್ಗೆ ಮಾತನಾಡಿದ್ದು, ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಶ್ರೀರಾಮನ ಹೆಸರಿನಲ್ಲಿ ಅಶಾಂತಿ ಸೃಷ್ಟಿ ಮಾಡಬೇಡಿ: ಹೆಚ್.ಡಿ ಕುಮಾರಸ್ವಾಮಿ

  • ಮೈಕ್ ತೆಗೆಸದಿದ್ದರೆ, ನಾವೂ ಬೆಳಗ್ಗೆ 5ಕ್ಕೆ ಮಂದಿರಗಳಲ್ಲಿ ಈಶ್ವರನ ಭಜನೆ, ಓಂಕಾರ ಹಾಕಿಸುತ್ತೇವೆ: ಮುತಾಲಿಕ್

    ಮೈಕ್ ತೆಗೆಸದಿದ್ದರೆ, ನಾವೂ ಬೆಳಗ್ಗೆ 5ಕ್ಕೆ ಮಂದಿರಗಳಲ್ಲಿ ಈಶ್ವರನ ಭಜನೆ, ಓಂಕಾರ ಹಾಕಿಸುತ್ತೇವೆ: ಮುತಾಲಿಕ್

    ಧಾರವಾಡ: ಮಸೀದಿಗಳಲ್ಲಿ ಹಾಕಿರುವ ಧ್ವನಿವರ್ಧಕ ತೆಗೆಯದಿದ್ದರೆ ನಾವೂ ಬೆಳಗ್ಗೆ 5ಕ್ಕೆ ಮಂದಿರಗಳಲ್ಲಿ ಈಶ್ವರನ ಭಜನೆ, ಓಂಕಾರ ಹಾಕಿಸುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    6 ತಿಂಗಳ ಹಿಂದೆ ನಮ್ಮ ಸಂಘಟನೆಯೂ ಮೈಕ್ ಬಗ್ಗೆ ಮನವಿ ಮಾಡಿತ್ತು. ಸುಪ್ರೀಂಕೋರ್ಟ್ ತೀರ್ಪಿನ ಆಧಾರದ ಮೇಲೆ ನಡೆದುಕೊಳ್ಳಲು ಕೇಳಿದ್ದೇವೆ. ಬೆಳಗ್ಗೆ 5 ಗಂಟೆಗೆ ಲೌಡ್ ಸ್ಪೀಕರ್ ಹಾಕುವುದನ್ನು ತಡೆಯಲು ಮನವಿ ಮಾಡಿದ್ದೆವು. ಮೊದಲು ತಹಸೀಲ್ದಾರರಿಗೆ ಮನವಿ ಮಾಡಿದ್ದೆವು. ಆದರೆ ಎಲ್ಲಿಯೂ ತಹಸೀಲ್ದಾರರು ಕ್ರಮ ಕೈಗೊಳ್ಳಲಿಲ್ಲ. ಧ್ವನಿ ಮಾಲಿನ್ಯ ಆಗುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಗೂ ಮನವಿ ಮಾಡಿದ್ದೆವು. ಆದರೂ ಪ್ರಯೋಜನವಾಗಲಿಲ್ಲ ಎಂದರು. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಎಂದು ಕೂಗುತ್ತ ಗೋರಖ್‍ನಾಥ ದೇವಾಲಯ ಪ್ರವೇಶಿಸಲು ಯತ್ನಿಸಿದ್ದ ಯುವಕ ಬಂಧನ

    ಇದೀಗ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇವೆ. ಕೊನೆಯ ಎಚ್ಚರಿಕೆಯಾಗಿ ಮನವಿ ಸಲ್ಲಿಸುತ್ತಿದ್ದೇವೆ. ಕೋರ್ಟ್ ಆದೇಶ ಪಾಲಿಸಲು ಮುಸ್ಲಿಂ ಸಮಾಜಕ್ಕೆ ಸರ್ಕಾರ ಹೇಳಬೇಕು. ಅವರ ಪ್ರಾರ್ಥನೆಗೆ ನಮ್ಮ ವಿರೋಧ ಇಲ್ಲ. ಆದರೆ ಧ್ವನಿವರ್ಧಕಗಳ ಬಳಕೆಗೆ ವಿರೋಧ ಇದೆ. ಇದರಿಂದ ಸಾಕಷ್ಟು ಜನರಿಗೆ ತೊಂದರೆಯಾಗುತ್ತಿದೆ ಎಂದರು.

    ಇದರ ಬಗ್ಗೆ ಕೋರ್ಟ್ ಆದೇಶವಿದ್ದರೂ ಅವರು ಪಾಲಿಸುತ್ತಿಲ್ಲ. ಇದರಿಂದ ಲಕ್ಷಾಂತರ ಜನರಿಗೆ ತೊಂದರೆಯಾಗಿದೆ. ರಾತ್ರಿ 10ರಿಂದ ಬೆಳಗ್ಗೆ 6 ಗಂಟೆ ವರೆಗೆ ಧ್ವನಿ ವರ್ಧಕ ಬಳಸುವಂತಿಲ್ಲ. ಕೋರ್ಟ್ ಇದನ್ನು ಸ್ಪಷ್ಟವಾಗಿ ಹೇಳಿದೆ. ನಿಶಬ್ಧ ವಲಯ ಎಂದು ಸರ್ಕಾರ ಗುರುತಿಸಿದ ಜಾಗದಲ್ಲೂ ಕೋರ್ಟ್ ಆದೇಶ ಪಾಲನೆಯಾಗುತ್ತಿಲ್ಲ ಎಂದರು. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ: ವಕ್ಫ್ ಮಂಡಳಿಯ ಸುತ್ತೋಲೆಯಲ್ಲಿ ಏನಿದೆ? ಸುಪ್ರೀಂ ಕೋರ್ಟ್ ಹೇಳಿದ್ದೇನು?

    ಈಗ ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ಧ್ವನಿ ಎತ್ತಿದ್ದಾರೆ. ಇದಕ್ಕೆ ನಾವು ಬೆಂಬಲ ಕೊಡುತ್ತೇವೆ. ಸರ್ಕಾರ ಈ ಲೌಡ್‌ಸ್ಪೀಕರ್ ನಿಲ್ಲಿಸಬೇಕು. ಮಸೀದಿಯಲ್ಲಿ ಮೈಕ್ ನಿಲ್ಲಿಸಲಾಗದ ಸರ್ಕಾರ ಹೇಡಿ ಸರ್ಕಾರ. ನಾವೂ ಇನ್ನು ಬೆಳಗ್ಗೆ 5 ಗಂಟೆಗೆ ಮಂದಿರ, ಮಠಗಳಲ್ಲಿ ಮೈಕ್ ಅಳವಡಿಸಿ ರಾಮ, ಈಶ್ವರನ ಭಜನೆ, ಓಂಕಾರ ಹಾಕುತ್ತೇವೆ ಎಂದರು.

  • ಕ್ರಿಕೆಟ್ ಆಡಲು ಹೋಗಿದ್ದವ ಹೃದಯಾಘಾತದಿಂದ ಸಾವು

    ಕ್ರಿಕೆಟ್ ಆಡಲು ಹೋಗಿದ್ದವ ಹೃದಯಾಘಾತದಿಂದ ಸಾವು

    ಧಾರವಾಡ: ಕ್ರಿಕೆಟ್ ಆಡಿ ವಿಶ್ರಾಂತಿ ಪಡೆಯುವ ವೇಳೆ ಆಟಗಾರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಮುನ್ನಾ ಇರ್ಕಲ್ ಸಾವನ್ನಪ್ಪಿದ ದುರ್ದೈವಿ. ಈತ ಧಾರವಾಡದ ಸಂಗೊಳ್ಳಿ ರಾಯಣ್ಣ ನಿವಾಸಿಯಾಗಿದ್ದು, ಕ್ರಿಕೆಟ್ ಆಡಿ ಕುಳಿತಿದ್ದ ವೇಳೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಅಚ್ಚೇ ದಿನ್ ಕೊಡ್ತೀವಿ ಎಂದ ಕೇಂದ್ರ ನರಕ ದಿನ ತೋರಿಸುತ್ತಿದೆ: ಡಿಕೆಶಿ

    ಕೆಸಿಡಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ಆಡುತ್ತಿದ್ದರು. ಈ ವೇಳೆ ಪಂದ್ಯ ಅಂತ್ಯಗೊಂಡು ರೆಸ್ಟ್‌ಗೆ ಕುಳಿತಾಗ ಲಘು ಹೃದಯಾಘಾತವಾಗಿದೆ.  ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.