ಧಾರವಾಡ: ಮೇ 11ಕ್ಕೆ ಸಂಜೆ ಸಭಾಪತಿ ಸ್ಥಾನಕ್ಕೆ ಹಾಗೂ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವೆ ಎಂದು ಸಭಾಪತಿ ಹೊರಟ್ಟಿ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಸೇರುವುದು ಇಲ್ಲಿಯವರೆಗೂ ಯಾವುದೇ ಅಧಿಕೃತವಾಗಿಲ್ಲ. ಭಾರತ ಸರ್ಕಾರದ ಗೃಹ ಮಂತ್ರಿಗಳನ್ನ ಭೇಟಿಯಾಗಿದ್ದೆನೆ. ಮಾತುಕತೆಗಳು ಸಹಜವಾಗಿ ಬರುತ್ತವೆ, ಸಭಾಪತಿ ಆಗಿರುವುದರಿಂದ ಬೇರೆ ಪಕ್ಷದ ಬಗ್ಗೆ ಮಾತಾಡಲು ಬರಲ್ಲ. ಮೇ11 ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ರಾಜೀನಾಮೆ ನೀಡಿ ಮುಂದಿನ ನಡೆ ತಿಳಿಸುತ್ತೆನೆ ಎಂದರು.
ಅಮಿತ್ ಶಾ ಅವರು ನನ್ನ ಬಗ್ಗೆ ಕೇಳಿದ್ದರು, ಒಳ್ಳೆ ಹೆಸರು ಇಟ್ಟುಕೊಂಡಿದ್ದೀರಿ ಎಂದು ಹೇಳಿದರು. ಅವರನ್ನು ಭೇಟಿಯಾಗಿದ್ದು ಖುಷಿಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅಮಿತ್ ಶಾ ಭೇಟಿ – ಹೊರಟ್ಟಿ ಬಿಜೆಪಿಗೆ ಸೇರ್ಪಡೆ
ಪರಿಷತ್ ಚುನಾವಣೆ ಟಿಕೆಟ್ ವಿಚಾರವಾಗಿ ಯಾವುದೇ ಚರ್ಚೆಯಾಗಿಲ್ಲ. ಮೇ 11ರವರೆಗೂ ಯಾವುದೇ ರಾಜಕೀಯದ ಬಗ್ಗೆ ಮಾತನಾಡಲ್ಲ ಎಂದ ಅವರು, ಬಿಜೆಪಿ ಪಕ್ಷಕ್ಕೆ ಸೇರಿದ ಮೇಲೆ ಟಿಕೆಟ್ ವಿಚಾರ ಮಾಡುವೆ, ರಾಜೀನಾಮೆ ನೀಡಿ ಮುಂದಿನ ನಡೆ ಹೇಳುವೆ ಎಂದರು.
ಧಾರವಾಡ: ಆಸ್ತಿಗಾಗಿ ಹೆತ್ತ ತಾಯಿಯನ್ನೆ ಕ್ರೂರಿ ಮಗನೊಬ್ಬ ಹತ್ಯೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ನಡೆದಿದೆ.
ಶಾಂತವ್ವ ಕಲ್ಲಪ್ಪ ಅಣ್ಣಿಗೇರಿ(65) ವೃದ್ಧೆಯೇ ಹತ್ಯೆಯಾದ ದುರ್ದೈವಿ. ಬಸವರಾಜ್ ಕಲ್ಲಪ್ಪ ಅಣ್ಣಿಗೇರಿ ತಾಯಿಯನ್ನೆ ಕೊಲೆ ಮಾಡಿದ ಮಗ. ಬಸವರಾಜ್ ಕ್ರೂರ ಕೃತ್ಯ ಸ್ಥಳೀಯರಿಗೆ ತಿಳಿದುಬಂದ ತಕ್ಷಣ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಪರಿಣಾಮ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸಿಐಡಿ ಕಚೇರಿಗೆ ಹೊಸಬಟ್ಟೆ ಸಮೇತ ಆಗಮಿಸಿದ ಆರೋಪಿ ಸದ್ದಾಂ ಫ್ಯಾಮಿಲಿ
ಕಾರಣವೇನು?
ಬಸವರಾಜ್ ನಿತ್ಯವೂ ‘ಆಸ್ತಿಯನ್ನು ನನಗೆ ಕೊಡು’ ಎಂದು ಶಾಂತವ್ವನನ್ನು ಪೀಡಿಸಿ ಕಿರುಕುಳ ನೀಡುತ್ತಿದ್ದ. ಇದಕ್ಕೆ ಶಾಂತವ್ವ ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ ಸೋಮವಾರ(ಇಂದು) ಬಸವರಾಜ್ ಮತ್ತೆ ಆಸ್ತಿಗಾಗಿ ಪೀಡಿಸಿದ್ದು, ಶಾಂತವ್ವನನ್ನು ಹೊಡೆಯಲು ಮುಂದಾಗಿದ್ದಾನೆ. ಈ ವೇಳೆ ಅಲ್ಲೇ ಇದ್ದ ದೊಣ್ಣೆಯಿಂದ ಶಾಂತವ್ವನನ್ನು ಹೊಡೆದಿದ್ದಾನೆ. ಪರಿಣಾಮ ಆಕೆ ಮೃತಪಟ್ಟಿದ್ದಾಳೆ.
ಧಾರವಾಡ: ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದಂತೆ ಭೂಮಿ ಕಳೆದುಕೊಂಡ ಸಂತ್ರಸ್ತ ಮಹಿಳೆಯೊಬ್ಬರು ತನಗೆ ಪರಿಹಾರ ನೀಡುವಂತೆ ಕೆಐಎಡಿಬಿ ಅಧಿಕಾರಿಗೆ ಕಾಲಿಗೆ ಬಿದ್ದು ಕಣ್ಣೀರು ಹಾಕಿದ ಪ್ರಸಂಗ ಧಾರವಾಡದಲ್ಲಿ ನಡೆದಿದೆ.
ಇಟಿಗಟ್ಟಿ ಗ್ರಾಮದ ಅಕ್ಕವ್ವ ಲಕ್ಕಪ್ಪನವರ ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದಂತೆ ಭೂಮಿ ಕಳೆದುಕೊಂಡು ಅಸಹಾಯಕಳಾಗಿ ಅಧಿಕಾರಿ ಕಾಲಿಗೆ ಬಿದ್ದಿದ್ದಾರೆ. ಗಾಮನಗಟ್ಟಿ ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದಂತೆ ಅಕ್ಕವ್ವ ಅವರಿಗೆ ಸೇರಿದ ಒಂದು ಎಕರೆ ಜಮೀನನ್ನು ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡಿತ್ತು. ಇದರಲ್ಲಿ ಅಕ್ಕವ್ವಳಿಗೆ 55 ಲಕ್ಷ ಪರಿಹಾರ ಬರಬೇಕಿದೆ. ಆದರೆ, ಈ ಹಣ ಅಧಿಕಾರಿಗಳ ಅಚಾತುರ್ಯದಿಂದ ಆಕೆಯ ಕೈ ಸೇರಿಲ್ಲ. ಇದರಿಂದ ದಿಕ್ಕು ತೋಚದ ಅಕ್ಕವ್ವ ಕೆಐಎಡಿಬಿ ಕಚೇರಿಗೆ ಬಂದು ಅಧಿಕಾರಿ ಕಾಲಿಗೆ ಬಿದ್ದು ತನಗೆ ಬರಬೇಕಾದ ಪರಿಹಾರವನ್ನು ನೀಡುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ದಾಳಿ ಸಂತ್ರಸ್ತೆಯಿಂದ ಡೈಯಿಂಗ್ ಡಿಕ್ಲರೇಶನ್ ಪಡೆದ ಪೊಲೀಸರು
ಅಕ್ಕವ್ವಳಿಗೆ ಸೇರಬೇಕಾದ ಪರಿಹಾರ ಮೊತ್ತವನ್ನು ಕೆಐಎಡಿಬಿ ಅಧಿಕಾರಿಗಳು ಆಕೆಯ ಸಹೋದರನ ಅಕೌಂಟ್‍ಗೆ ನೆಫ್ಟ್ ಮಾಡಿದ್ದಾರೆ. ದಾಖಲೆಗಳಲ್ಲಿ ಅಕ್ಕವ್ವ ಅವರ ಸಹಿ ಇದೆ. ಆದರೆ, ಆಕೆ ಕಚೇರಿಗೆ ಬರದೇ ಇದ್ದರೂ ನಕಲಿ ಸಹಿ ಸೃಷ್ಟಿಸಿ ಆಕೆಯ ಸಹೋದರನ ಅಕೌಂಟ್‍ಗೆ ಹಣ ವರ್ಗಾವಣೆ ಮಾಡಿದ್ದಾರೆ. ಇದೇ ವಿಷಯವನ್ನು ಕೇಳಲು ಬಂದ ಅಕ್ಕವ್ವಳಿಗೆ ಅಧಿಕಾರಿಗಳು ಉಡಾಫೆ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು, ಆದರೆ ಈಗ….: ಆ್ಯಸಿಡ್ ಸಂತ್ರಸ್ತೆ ತಾಯಿ ಅಳಲು
ಅಕ್ಕವ್ವರ ಸಹೋದರನ ಬ್ಯಾಂಕ್ ಖಾತೆಗೆ ಅಧಿಕಾರಿಗಳು ಒಟ್ಟು 4 ಕೋಟಿ 8 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಅಕ್ಕವ್ವ ಅವರಿಗೆ 55 ಲಕ್ಷ ಪರಿಹಾರ ಬರಬೇಕಿದೆ. ಅಕ್ಕವ್ವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡದ ಅಧಿಕಾರಿಗಳು ಆಕೆಯ ಸಹೋದರನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದನ್ನು ನೋಡಿದರೆ ಇದರಲ್ಲಿ ಗೋಲ್‍ಮಾಲ್ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಧಾರವಾಡ: ಬೀದಿ ನಾಯಿಗಳು ದಾಳಿ ನಡೆಸಿದ ಪರಿಣಾಮ 12 ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಧಾರವಾಡ ಹೊರವಲಯದ ನವಲೂರು ರೈಲ್ವೆ ಗೇಟ್ ಬಳಿ ನಡೆದಿದೆ.
ಪ್ರಥಮ ನೀರಲಕಟ್ಟಿ (12) ಸಾವಿಗೀಡಾದ ದುರ್ದೈವಿ. ಶಾಲೆ ರಜೆ ಇದ್ದ ಕಾರಣ ಧಾರವಾಡ ಜಿಲ್ಲೆಯ ದುಮ್ಮವಾಡ ಗ್ರಾಮದಿಂದ ನವಲೂರಿಗೆ ಬಾಲಕ ಬಂದಿದ್ದನು. ತನ್ನ ಅಜ್ಜನಿಗೆ ಊಟ ಕೊಡಲೆಂದು ತೋಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ನಾಯಿಗಳ ಹಿಂಡು ಬಾಲಕನ ಮೇಲೆ ದಾಳಿ ನಡೆಸಿದೆ. ಇದನ್ನೂ ಓದಿ: ಹಿಂದಿಯನ್ನ ರಾಷ್ಟ್ರೀಯ ಭಾಷೆಯನ್ನಾಗಿ ಮಾಡಿದ್ರೆ ತಪ್ಪೇನಿಲ್ಲ: ಮುರುಗೇಶ್ ನಿರಾಣಿ
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಬಾಲಕ ಅಸುನೀಗಿದ್ದಾನೆ. ಈ ಹಿಂದೆ ಇದೇ ಜಾಗದಲ್ಲಿ ಓರ್ವ ಯುವಕ ನಾಯಿಗಳ ದಾಳಿಗೆ ಬಲಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಇದನ್ನೂ ಓದಿ: ಕಾಂಗ್ರೆಸ್ ಭಾಷಾವಾರು ಪ್ರಾಂತ್ಯಗಳನ್ನು ರಚಿಸಿರುವುದನ್ನು ನೆನಪಿಸಬಯಸುತ್ತೇನೆ: ಡಿಕೆಶಿ
ಬಾಲಕ ಇನ್ನೂ 17 ವರ್ಷದವನಾಗಿದ್ದು, ತಂದೆಯ ಜೊತೆ ಕಳೆದ ನಾಲ್ಕು ದಿನಗಳ ಹಿಂದೆ ಕೂಡಾ ಜಗಳ ಮಾಡಿದ್ದ. ಆದರೂ ತಂದೆ ಕುಡಿದು ಬಂದು ಗಲಾಟೆ ಆರಂಭಿಸಿದಾಗ ತನ್ನ ಮನೆ ಎದುರಿನಲ್ಲಿಯೇ ಮಗ ಕೊಡಲಿಯಿಂದ ಕೊಚ್ಚಿ ಹತ್ಯೆಗೈದಿದ್ದಾನೆ. ಸದ್ಯ ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ ಇನ್ನೂ ಮುಗಿದಿಲ್ಲ, ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿ: ಉದ್ಧವ್ ಠಾಕ್ರೆ
ಧಾರವಾಡ: ಮೋಹನ್ ಲಿಂಬಿಕಾಯಿಯಷ್ಟು ರಾಜಕೀಯ ಜ್ಞಾನ ನನಗೆ ಇಲ್ಲ, ಆ ಬಗ್ಗೆ ನಾನು ಏನು ಮಾತನಾಡುವುದಿಲ್ಲ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ನನಗೆ ಬಿಜೆಪಿಗೆ ಯಾರು ಕರೆದಿದ್ದಾರೆ, ಯಾರು ಬಿಟ್ಟಿದ್ದಾರೆ ಎನ್ನುವುದು ಈಗ ಯಾಕೆ, ಚುನಾವಣೆ ಬರಲಿ, ಬಂದಾಗ ಎಲ್ಲವೂ ಗೊತ್ತಾಗುತ್ತದೆ. ನನಗೆ ಬಿಜೆಪಿಗೆ ಕರೆದವರು ಸುಮ್ಮನೆ ಕುಳಿತಿದ್ದೇಕೆ ಎಂದು ನನಗೂ ಗೊತ್ತಿಲ್ಲ, ಬೇರೆ ವಿಷಯ ಇದ್ದರೇ ಹೇಳಿ, ಆ ವಿಷಯ ಯಾಕೆ ಎಂದಿದ್ದಾರೆ. ಇದನ್ನೂ ಓದಿ:ಏಕರೂಪ ನಾಗರಿಕ ಸಂಹಿತೆಯು ಅಲ್ಪಸಂಖ್ಯಾತರ ವಿರೋಧಿ ಕ್ರಮ: ಮುಸ್ಲಿಂ ಕಾನೂನು ಮಂಡಳಿ
ಕಳೆದ ಸ್ವಲ್ಪ ದಿನ ಹಿಂದೆಯಷ್ಟೇ ಬಿಜೆಪಿ ಮುಖಂಡ ಮೋಹನ್ ಲಿಂಬಿಕಾಯಿ, ಹೊರಟ್ಟಿ ಬಿಜೆಪಿ ಸೇರಲ್ಲ. ಅಲ್ಲದೇ ಅವರಿಗೆ ಯಾರೂ ಕೂಡಾ ನಮ್ಮ ಪಕ್ಷಕ್ಕೆ ಆಹ್ವಾನ ನೀಡಿಲ್ಲ ಎಂದು ಹೇಳಿದರು. ಸದ್ಯ ಹೊರಟ್ಟಿ ಆ ಬಗ್ಗೆ ಈಗ ಏನೂ ಬೇಡ ಎಂದು ಹೇಳುವ ಮೂಲಕ ಜಾರಿಕೊಂಡರು. ಇದನ್ನೂ ಓದಿ: ಹನುಮಾನ್ ಚಾಲೀಸಾ ವಿಚಾರದಲ್ಲಿ ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ: ಸಂಜಯ್ ರಾವತ್
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮ ವಿಚಾರವಾಗಿ ಮಾತನಾಡಿದ ಅವರು, ಈಗಲಾದರೂ ಸತ್ಯ ಹೊರಬರುತ್ತದೆ ಎಂಬ ಆಶಾಭಾವನೆ ಬಂದಿದೆ. ಪ್ರಕರಣದಲ್ಲಿ ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವ ನಾಗರಾಜ್ ವಿಚಾರಣೆ ನಡೆದಿದೆ. ಈಗ ಅವರನ್ನು ಕರೆಸಿದ್ದಾರೆ. ಆ ವಿಚಾರಣೆಯ ಫಲಿತಾಂಶ ಬರಲಿ ಎಂದರು.
ಫಲಿತಾಂಶ ಬರುವವರೆಗೂ ನಾವೇನು ಹೇಳುವುದಕ್ಕೆ ಆಗುವುದಿಲ್ಲ, ಮೇಲ್ನೋಟಕ್ಕೆ ಆರೋಪ ಕಂಡು ಬಂದಾಗ ವಿಚಾರಣೆಗೆ ಕರೆದಿರುತ್ತಾರೆ. ಇಂಥವೆಲ್ಲ ಬಹಳ ದಿನಗಳಿಂದ ನಡೆದಿದ್ದವು, ಇನ್ನು ಮುಂದೆ ನಡೆಯಬಾರದು, ಸರ್ಕಾರ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ನಡು ರಸ್ತೆಯಲ್ಲಿ ಜಡೆ ಜಗಳ – ಎರಡು ಗುಂಪಿನ ವಿದ್ಯಾರ್ಥಿನಿಯರ ಜಗಳ ಬಿಡಿಸಲು ಜನ ಹರಸಾಹಸ
ನಂಬಿಕೆ ಎನ್ನುವುದು ಮುಖ್ಯ, ತನಿಖೆ ಮಾಡುವವರು ಸರಿಯಾದ ರೀತಿಯ ತನಿಖೆ ಮಾಡಬೇಕು. ಇಲ್ಲದೇ ಹೋದಲ್ಲಿ ನಾಳೆ ಅವರ ಮೇಲೂ ಬರುತ್ತದೆ. ಪರೀಕ್ಷೆ ಎಂದರೆ ಎಷ್ಟೋ ಜನ ಜೀವ ತ್ಯಾಗ ಮಾಡಿ ಓದಿರುತ್ತಾರೆ. ಅಂಥವರಿಗೆ ಏನೂ ಮಾಡಬಾರದು, ತಪ್ಪು ಮಾಡಿದವರು ಒಂದಲ್ಲ ಒಂದು ದಿನ ಸಿಗುತ್ತಾರೆ. ಯಾವುದೇ ವ್ಯಕ್ತಿ ಇರಲಿ, ನಂಬಿಕೆ ಎನ್ನುವುದು ಮುಖ್ಯ, ಆ ನಂಬಿಕೆಗೆ ದ್ರೋಹ ಮಾಡುವುದು ಸರಿಯಲ್ಲ. ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಧಾರವಾಡ: ಅಂತ್ಯಸಂಸ್ಕಾರಕ್ಕೆ ಜಾಗ ಸಿಗದೇ ಕುಟುಂಬಸ್ಥರು ಪರದಾಡಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಅಜ್ಜಿ ಯಲ್ಲಮ್ಮ ಮಂಟೂರ ಸಾವನ್ನಪ್ಪಿದ್ದಾರೆ. ಅವರ ಅಂತ್ಯಕ್ರಿಯೆ ಮಾಡಲು ಕುಟುಂಬದವರು ಮುಂದಾಗಿದ್ದರು. ಈ ವೇಳೆ ಗ್ರಾಮದಲ್ಲಿ ಮೊದಲಿನಿಂದಲೂ ಅಂತ್ಯಕ್ರಿಯೆ ಮಾಡುವ ಜಾಗದಲ್ಲಿ ಅಜ್ಜಿಯನ್ನು ಮಣ್ಣು ಮಾಡಲು ಮುಂದಾದಾಗ, ಇದೇ ಗ್ರಾಮದ ಕಲ್ಲಯ್ಯಾ ಮತ್ತು ಕಲ್ಲಪ್ಪ ತಳವಾರ ವಿರೋಧ ಮಾಡಿದ್ದಾರೆ.
ಅಲ್ಲದೇ ಆ ಜಾಗ ಖರೀದಿ ಮಾಡಿರುವುದಾಗಿ ಹೇಳಿದ್ದಾರೆ. ಹೀಗಾಗಿ ಸ್ಥಳಕ್ಕೆ ನವಲಗುಂದ ತಹಶಿಲ್ದಾರ್ ಕಚೇರಿ ಸಿಬ್ಬಂದಿ ಬಂದು ಸಮಸ್ಯೆ ಬಗೆಹರಿಸಲು ಮುಂದಾದಾಗ, ರುದ್ರಗೌಡ, ಹಿರೇಗೌಡ್ರ ತಮ್ಮ ಹೊಲದಲ್ಲಿ ಅಂತ್ಯಕ್ರಿಯೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾರೆ. ನಂತರ ಅಜ್ಜಿಯ ಕುಟುಂಬದವರು ಅಂತ್ಯಕ್ರಿಯೆ ಮಾಡಿದ್ದಾರೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ಎಂಟ್ರಿ – 14 ದಿನಗಳ ಕಸ್ಟಡಿಗೆ ಒಳಗಾದ ಸಂಸದೆ, ಶಾಸಕ ದಂಪತಿ
ರುದ್ರಗೌಡರ ಹೊಲವನ್ನೇ ಸರ್ಕಾರ ಸ್ಮಶಾನಕ್ಕೆ ಪಡೆದುಕೊಳ್ಳಲು ಮುಂದಾಗಿದೆ. ಅಜ್ಜಿಯ ಸಾವಿಗೆ ಜಾಗನೇ ಸಿಗದೆ ಇದ್ದಾಗ, ಗ್ರಾಮದ ಒಬ್ಬರು ಮುಂದೆ ಬಂದು ಜಮೀನು ಕೊಟ್ಟಿದ್ದಾರೆ. ಇಡೀ ಗ್ರಾಮಸ್ಥರಿಗೆ ಈಗ ಸ್ಮಶಾನ ಸಿಕ್ಕಂತೆ ಆಗಿದೆ ಎಂದು ಜನ ಎಲ್ಲ ಮಾತನಾಡಿಕೊಂಡರು.
ಧಾರವಾಡ: ನುಗ್ಗಿಕೇರಿ ಕಲ್ಲಂಗಡಿ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್ ದೊರಕಿದ್ದು, ಶ್ರೀರಾಮ ಸೇನೆಯ ಬಂಧಿತ ಕಾರ್ಯಕರ್ತ ಮಹಾಲಿಂಗ ಐಗಳಿ ಧಾರವಾಡ ಗ್ರಾಮೀಣ ಠಾಣೆಗೆ ಪ್ರತಿ ದೂರು ದಾಖಲಿಸಿದ್ದಾರೆ.
ಧಾರವಾಡ ಹೊರವಲಯದ ನುಗ್ಗಿಕೇರೆ ಆಂಜನೇಯನ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಏ.9ರಂದು ನುಗ್ಗಿಕೇರಿಯಲ್ಲಿ ಕಲ್ಲಂಗಡಿ ಪ್ರಕರಣ ನಡೆದಿತ್ತು. ಆ ವೇಳೆ ನಬೀಸಾಬ್ ಇರಲಿಲ್ಲ ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.
ದೂರಿನಲ್ಲಿ ಏನಿದೆ?: ಅಂದು ನಾವು ದೇವರ ದರ್ಶನ ಬಳಿಕ ಕಲ್ಲಂಗಡಿ ತಿನ್ನಲು ಹೋಗಿದ್ದೆವು. ಆಗ ಕಲ್ಲಂಗಡಿ ಮಾರುವವನು ಉಗುಳಿ ಕೊಡುತ್ತಿದ್ದ. ಈ ರೀತಿ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದ. ಇದಕ್ಕೆ ನಾವು ಅಕ್ಷೇಪ ವ್ಯಕ್ತಪಡಿಸಿದೆವು. ಆಗ ನಮಗೆ ಚಾಕು ತೋರಿಸಿ ಕಲ್ಲಂಗಡಿ ಕೂಯ್ದಂತೆ ನಿಮ್ಮನ್ನು ಕೊಯ್ತಿನಿ ಎಂದು ಕೊಲೆ ಬೆದರಿಕೆ ಹಾಕಿದ್ದ.
ಇದರಿಂದಾಗಿ ಅಲ್ಲಿ ನೆರೆದಿದ್ದ ಜನರು ಗುಂಪುಗುಡಿ ಅವನಿಗೆ ಬುದ್ಧಿ ಹೇಳಲು ಪ್ರಯತ್ನಿಸಿದರು. ಆದರೆ ಅವನು ಹಾಗೂ ಅವನ ಜೊತೆಗಿದ್ದವರು ದೊಡ್ಡ ರಾದ್ಧಂತ ಮಾಡಿದರು. ಜೊತೆಗೆ ಮೈಲಾರಪ್ಪನನ್ನು ಆ ವ್ಯಕ್ತಿ ನೂಕಿದ್ದನು. ಇದರಿಂದಾಗಿ ಮೈಲಾರಪ್ಪ ಕಲ್ಲಂಗಡಿ ತಳ್ಳುಗಾಡಿ ಮೇಲೆ ಬಿದ್ದಿದ್ದ. ಇದನ್ನೂ ಓದಿ: ಹಿಂದೂಯೇತರ ಅಂಗಡಿಯಲ್ಲಿದ್ದ ಕಲ್ಲಂಗಡಿ, ತೆಂಗಿನಕಾಯಿ ಒಡೆದುಹಾಕಿದ ಶ್ರೀರಾಮಸೇನೆ ಕಾರ್ಯಕರ್ತರು
ಈ ರೀತಿ ಮಾಡಿದ ವ್ಯಕ್ತಿ ಬಿಳಿ ಶರ್ಟ್, ಕಪ್ಪು ಬೂದಿ ಬಣ್ಣದ ಪ್ಯಾಂಟ್ ಧರಿಸಿದ್ದನು. ಆದರೆ ಮರುದಿನ ಪೊಲೀಸರು ನಮ್ಮನ್ನು ಬಂಧಿಸಲು ಬಂದಾಗಲೇ ನಬೀಸಾಬ್ ನಮ್ಮ ಮೇಲೆ ದೂರು ದಾಖಲಿಸಿದ್ದಾನೆ ಎಂದು ತಿಳಿಯಿತು. ಆದರೆ ಆ ಸಮಯದಲ್ಲಿ ನಬೀಸಾಬ್ ಘಟನೆ ನಡೆದ ಸ್ಥಳದಲ್ಲಿ ಇರಲಿಲ್ಲ. ಘಟನೆಯಲ್ಲಿ ಭಾಗಿಯಾದ ನಿಜವಾದ ವ್ಯಕ್ತಿ ಬೇರೆ ಇದ್ದಾನೆ ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ. ಇದನ್ನೂ ಓದಿ: ಹಿಂದೂಯೇತರನ ಅಂಗಡಿ ಧ್ವಂಸ ಪ್ರಕರಣ- ಶ್ರೀರಾಮಸೇನೆಯ ನಾಲ್ವರ ಬಂಧನ
ಧಾರವಾಡ: ನೀವು ಪೊಲಿಸರಿಗೆ ಫ್ರೀ ಹ್ಯಾಂಡ್ ಕೊಡಿ, ಆಗ ಇಂತಹ ಯಾವ ಘಟನೆಯೂ ನಡೆಯಲ್ಲ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದರು.
ಹುಬ್ಬಳ್ಳಿ ಗಲಾಟೆ ವಿಚಾರ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಾಸಕಾಂಗ, ಕಾರ್ಯಾಂಗಕ್ಕೆ ಕೈ ಹಾಕಿದ್ರೆ ಇದೆಲ್ಲ ಆಗುತ್ತದೆ. ಶಾಸಕರು ಹಾಗೂ ಸಚಿವರುಗಳು ತಮಗೇ ಬೇಕಾದ ಪೊಲೀಸ್ ಅಧಿಕಾರಿಗಳನ್ನು ಹಾಕಿಕೊಳ್ಳುತ್ತಾರೆ. ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆಯಾಗಿದೆ. ಆದರೆ ಲಕ್ಷಾಂತರ ರೂಪಾಯಿ ಪಡೆದುಕೊಂಡು ಹಾಕಿಕೊಳ್ಳುತ್ತಾರೆ. ಹಾಗೆ ಬಂದವನ ನಿಷ್ಠೆ ಯಾರಿಗೆ ಇರುತ್ತೆ?. ತನಗೆ ತಂದವರಿಗೆ ಸೆಲ್ಯೂಟ್ ಹೊಡಿತಾ ಇರುತ್ತಾರೆ. ಅಂತಹ ಇನ್ಸ್‍ಪೆಕ್ಟರ್ ಕಮಿಷನರ್ ಮಾತು ಕೇಳ್ತಾನಾ ಎಂದು ಪ್ರಶ್ನಿಸಿದರು.
ಎಂಎಲ್‍ಎ, ಮಿನಿಸ್ಟರ್ ಮನೆ ಕಾಯುತ್ತಾ ಇರುತ್ತಾರೆ. ಇದು ಗಮನ ಬೇರೆ ಸೆಳೆಯುವ ಯತ್ನ. ಸರ್ಕಾರದಲ್ಲಿ ಭ್ರಷ್ಟಾಚಾರ ನಡೀತಾ ಇದೆ. ಇಂತಹುದು ಆದಾಗ ಜನ ಇದನ್ನೇ ಮಾತನಾಡುತ್ತಾರೆ. ಅದನ್ನು ಮರೆತು ಬಿಡ್ತಾರೆ. ಜೋಡಣೆ ಮಾಡುವುದು ಇವರಿಗೆ ಗೊತ್ತಿಲ್ಲ. ವಿಭಜನೆ ಮಾಡುತ್ತಿದ್ದಾರೆ. ಜನರ ಮುಗ್ಧತೆ, ಒಳ್ಳೆತನವೇ ಇವರಿಗೆ ಬಂಡವಾಳ ಆಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ- ಹಲಾಲ್ ಪ್ರಚೋದಿತ ಘಟನೆಯೇ? – ಸಿ.ಟಿ.ರವಿ
ಹುಬ್ಬಳ್ಳಿ ಘಟನೆ ತಡೆಯೋಕೆ ಆಗ್ತಿರಲಿಲ್ಲವಾ ಎಂದು ಪ್ರಶ್ನಿಸಿದ ಅವರು, ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಿ ನೀವು. ಆಗ ಯಾವ ಇಂತಹ ಘಟನೆ ಆಗೋದಿಲ್ಲ. ಪ್ರಚೋದನಕಾರಿ ಹೇಳಿಕೆ ಕೊಡುತ್ತಾರೆ. ಆ ಮೂಲಕ ಎತ್ತಿ ಕಟ್ಟುತ್ತಾರೆ. ಯಡಿಯೂರಪ್ಪ ಹೇಳಿದಂತೆ ನಾವೆಲ್ಲ ಒಂದೇ ತಾಯಿ ಮಕ್ಕಳು. ಒಂದೂವರೆ ವರ್ಷದ ಹಿಂದೆ ಇದೆಲ್ಲ ಇರಲಿಲ್ಲ. ಸರ್ಕಾರಕ್ಕೆ ಸಮಾಜಘಾತುಕ ಶಕ್ತಿಗಳ ಮೇಲಿನ ಹಿಡಿತ ತಪ್ಪಿದೆ ಎಂದು ಭಾಸ್ಕರ್ ರಾವ್ ಕಿಡಿಕಾರಿದರು.
ಧಾರವಾಡ: ದೇವಸ್ಥಾನಗಳು ಶಾಂತಿಯ ಪ್ರತೀಕ. ಆದರೆ ದೇವಸ್ಥಾನದ ಮೇಲೆಯೇ ದಾಳಿ ಮಾಡಿದ್ದು ಖಂಡನೀಯ ಎಂದು ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರೋಧ ವ್ಯಕ್ತಪಡಿಸಿದರು.
ಹುಬ್ಬಳ್ಳಿ ಪ್ರಕರಣ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ(ಶನಿವಾರ) ನಡೆದ ಹುಬ್ಬಳ್ಳಿ ಗಲಾಟೆಯನ್ನು ನಾನು ಖಂಡಿಸುತ್ತೇನೆ. ನಿಮ್ಮ ಮೆಕ್ಕಾ, ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ್ದಕ್ಕೆ ಇಷ್ಟು ಆಕ್ರೋಶ ಸರೀನಾ? ಎಂದು ಪ್ರಶ್ನೆ ಕೇಳಿದರು. ನಿಮ್ಮಗೆ ಕಾನೂನಿದೆ, ಠಾಣೆಯಿದೆ, ನ್ಯಾಯಾಲಯವಿದೆ ನೀವು ಅಲ್ಲಿ ನ್ಯಾಯ ಕೇಳಬಹುದು ಎಂದರು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯನ್ನು ಕೆಜಿ ಹಳ್ಳಿ, ಡಿಜೆಹಳ್ಳಿ ಘಟನೆಗೆ ಹೋಲಿಸಿದ ಗೃಹಸಚಿವ
ಇಸ್ಲಾಂ ಎಂದರೆ ಶಾಂತಿ ಸಂದೇಶ ಸಾರುತ್ತದೆ. ಇದು ನಿಮ್ಮ ಶಾಂತಿ ಸಂದೇಶನಾ? ಇದು ಹೇಯ ಹಾಗೂ ಕ್ರೌರ್ಯ ಘಟನೆ. ಇದನ್ನ ಖಂಡನೆ ಮಾಡುತ್ತೇನೆ. ಇದೊಂದು ಪೂರ್ವಯೋಜಿತ ಕೃತ್ಯ. ಅಲ್ಲಿ ಮೂರು ಜನ ಎಂಐಎಂ ಪಾಲಿಕೆ ಸದಸ್ಯ ಇದ್ದಾರೆ. ಪಿಎಫ್‍ಐ ಸದ್ಯಸರೇ ಇದಕ್ಕೆ ಕಾರಣ ಎಂದು ಆರೋಪಿಸಿದರು.
ದೇವಸ್ಥಾನ ಮೇಲೆ ಏಕೆ ದಾಳಿ ಮಾಡಿದ್ದು, ದೇವಸ್ಥಾನ ಶಾಂತಿಯ ಪ್ರತೀಕವಾಗಿದೆ. ಮುಸ್ಲಿಂ ಮುಖಂಡರು ಇದಕ್ಕೆ ಉತ್ತರ ನೀಡಬೇಕು ಎಂದು ಅಗ್ರಹ ಮಾಡಿದರು. ಅಲ್ಲದೆ ದೇವಸ್ಥಾನದ ಮೇಲೆ ದಾಳಿ ಮಾಡಿದ್ದು, ಗಜನಿ ಸಂಸ್ಕೃತಿ, ಔರಂಗಜೇಬನ ಹಾಗೂ ಟಿಪ್ಪು ಸಂಸ್ಕೃತಿ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಪೊಲೀಸ್ ವಾಹನಗಳೇ ಟಾರ್ಗೆಟ್ – ದಿಡ್ಡಿ ಹನುಮಂತ ದೇಗುಲಕ್ಕೂ ಕಲ್ಲೇಟು
ಪೊಲೀಸರ ಮೇಲೆ ಹಲ್ಲೆ ಸರಿಯಲ್ಲ. ಗಡಿಯಲ್ಲಿ ಸೈನಿಕರು ಮಾಡುವ ಕೆಲಸ ಆಂತರಿಕವಾಗಿ ಪೊಲೀಸರು ಮಾಡ್ತಾರೆ. ಈ ಘಟನೆ ನೋಡಿ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ನೆನಪಾಗುತ್ತಿದೆ. ಸರ್ಕಾರ ಇವರನ್ನ ಹದ್ದು ಬಸ್ತಿನಲ್ಲಿ ಇಡಬೇಕು ಎಂದು ಒತ್ತಾಯಿಸಿದರು.