Tag: ಧಾರವಾಡ

  • ಧಾರವಾಡದಲ್ಲಿ ಮರಕ್ಕೆ ಕ್ರೂಸರ್ ಡಿಕ್ಕಿ – 7 ಮಂದಿ ಸಾವು

    ಧಾರವಾಡದಲ್ಲಿ ಮರಕ್ಕೆ ಕ್ರೂಸರ್ ಡಿಕ್ಕಿ – 7 ಮಂದಿ ಸಾವು

    ಧಾರವಾಡ: ರಾಜ್ಯದಲ್ಲಿ ಒಂದು ಕಡೆ ಮಳೆಯ ಅಬ್ಬರದಿಂದಾಗಿ ಅನಾಹುತಗಳು ಸಂಭವಿಸುತ್ತಿದ್ದರೆ ಇನ್ನೊಂದು ಕಡೆ ಇವತ್ತು ಎರಡು ಭೀಕರ ಅಪಘಾತಗಳು ಸಂಭವಿಸಿದೆ.

    ಧಾರವಾಡದ ಬಾಡಾ ಗ್ರಾಮದ ಬಳಿ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಮರಕ್ಕೆ ಕ್ರೂಸರ್ ಡಿಕ್ಕಿ ಹೊಡೆದು ಮೂವರು ಮಕ್ಕಳು ಸೇರಿ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಮಂಕಿಪಾಕ್ಸ್ ಎಚ್ಚರಿಕೆ – ಅಂತರಾಷ್ಟ್ರೀಯ ಪ್ರವೇಶ ಕೇಂದ್ರಗಳಲ್ಲಿ ಕಣ್ಗಾವಲು

    ACCIDENT (1)

    ಇಂದು ನಡೆಯಬೇಕಿದ್ದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮನಸೂರ ಗ್ರಾಮದಿಂದ ಬೆನಕನಟ್ಟಿಗೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಈ ಅನಾಹುತ ಸಂಭವಿಸಿದೆ. ಮೃತರನ್ನು ಮಹೇಶ್ವರಯ್ಯ (11), ಅನನ್ಯ (14), ಹರೀಶ್ (12), ಶಿಲ್ಪಾ (34), ನೀಲವ್ವ(60), ಮಧುಶ್ರೀ (20) ಹಾಗೂ ಶಂಭುಲಿಂಗಯ್ಯ (35) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಸೆಕ್ಸ್‌ನಿಂದಲೂ ಹರಡಬಹುದು ಮಂಕಿಪಾಕ್ಸ್- ತಜ್ಞರಿಂದ ಎಚ್ಚರಿಕೆ

    ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಬೆನ್ನಲ್ಲೇ ಕ್ರೂಸರ್ ಚಾಲಕ ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಕೇಂದ್ರ ಕಾರಾಗೃಹದಲ್ಲಿ ವೀರ ಸಾವರ್ಕರ್ ಪುಸ್ತಕ ಇಡಲು ಹೈಕೋರ್ಟ್ ನ್ಯಾಯಮೂರ್ತಿ ಸೂಚನೆ

    ಕೇಂದ್ರ ಕಾರಾಗೃಹದಲ್ಲಿ ವೀರ ಸಾವರ್ಕರ್ ಪುಸ್ತಕ ಇಡಲು ಹೈಕೋರ್ಟ್ ನ್ಯಾಯಮೂರ್ತಿ ಸೂಚನೆ

    ಧಾರವಾಡ: ಧಾರವಾಡ ಕೇಂದ್ರ ಕಾರಾಗೃಹಕ್ಕೆ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಧ್ಯಕ್ಷರಾದ ನ್ಯಾಯಮೂರ್ತಿ ಬಿ.ವೀರಪ್ಪ ಭೇಟಿ ನೀಡಿದರು.

    ಈ ವೇಳೆ ಜೈಲಿನ ಗ್ರಂಥಾಲಯಕ್ಕೆ ಭೇಟಿ ನೀಡಿದ ಅವರು, ವೀರ ಸಾವರ್ಕರ್ ಪುಸ್ತಕ ಇಟ್ಟಿದ್ದಿರಾ ಎಂದು ಕೇಳಿದರು. ಈ ಬಗ್ಗೆ ಜೈಲು ಸಿಬ್ಬಂದಿಯೂ ಇಲ್ಲ ಎಂದಿದ್ದಕ್ಕೆ, ನ್ಯಾಯಮೂರ್ತಿ ಅವರು ವೀರ  ಸಾವರ್ಕರ್ ಅವರ ಕುರಿತಾದ ಪುಸ್ತಕ ಇಡಲು ಸೂಚನೆ ನೀಡಿದರು.

    ಅವರೊಬ್ಬ ಸ್ವಾತಂತ್ರ್ಯ ಹೋರಾಟಗಾರ, ಅವರ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಇದರ ಜೊತೆಗೆ ರಾಮಾಯಣ, ಮಹಾಭಾರತ, ಬೈಬಲ್ ಹಾಗೂ ಕುರಾನ್‍ಗಳನ್ನು ಇಡಲು ಸೂಚಿಸಿದರು. ಇದನ್ನೂ ಓದಿ: ಕಾರಿನೊಂದಿಗೆ ಕೊಚ್ಚಿ ಹೋಗುತ್ತಿದ್ದ ನಾಲ್ವರು ಅದೃಷ್ಟವಶಾತ್ ಬಚಾವ್

    ಇನ್ನು ಮಹಿಳಾ ಕಾರಾಗೃಹಕ್ಕೂ ಭೇಟಿ ನೀಡಿದ ನ್ಯಾಯಮೂರ್ತಿ, ಅಲ್ಲಿರುವ ಮಹಿಳಾ ಕೈದಿ ಜೊತೆ ಇರುವ ಮಗು ಬಗ್ಗೆ ವಿಚಾರಣೆ ಮಾಡಿದರು. ಮಗು ಯಾಕೆ ಇಲ್ಲಿ ಇರಬೇಕು ಎಂದು ಪ್ರಶ್ನೆ ಮಾಡಿದ ಅವರು, ಮಗುವಿಗೆ ಶಾಲೆಗೆ ಕಳಿಸುವಂತೆ ಜೈಲು ಅಧೀಕ್ಷಕರಿಗೆ ಹೇಳಿದರು. ನಂತರ ಮಗುವನ್ನು ಮಾತನಾಡಿಸಿದ ನ್ಯಾಯಮೂರ್ತಿ, ಮುಂದೆ ಏನು ಆಗ್ತಿಯಾ, ಅಮ್ಮಾ ಇಲ್ಲೆ ಇರ್ತಾರೆ, ನೀನು ಚೆನ್ನಾಗಿ ಓದು ಎಂದರು. ಇದನ್ನೂ ಓದಿ: ಜ್ಞಾನವಾಪಿ ಕೇಸ್ ವಾರಣಾಸಿ ಕೋರ್ಟ್‍ಗೆ ವರ್ಗಾವಣೆ – ವಾದ, ಪ್ರತಿವಾದ ಹೇಗಿತ್ತು?

  • ಬಸ್‍ನಲ್ಲಿ ಕೊಡೆ ಹಿಡಿದು ಕುಳಿತ ಪ್ರಯಾಣಿಕರು

    ಬಸ್‍ನಲ್ಲಿ ಕೊಡೆ ಹಿಡಿದು ಕುಳಿತ ಪ್ರಯಾಣಿಕರು

    ಧಾರವಾಡ: ರಾಜ್ಯದಲ್ಲೇ ಮಳೆ ಅಬ್ಬರ ಜೋರಾಗಿದ್ದು, ಎಲ್ಲೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಸೊರುತಿದ್ದ ಬಸ್‍ನಲ್ಲಿ ಪ್ರಯಾಣಿಕರು ಕೊಡೆ ಹಿಡಿದು ಕುಳಿತ ಘಟನೆ ನಡೆದಿದೆ.

    ಧಾರವಾಡ ತಾಲೂಕಿನ ನಾಗಲಾವಿ ಗ್ರಾಮಕ್ಕೆ ಹೋಗುವ ಬಸ್‍ನ್ನು ಹತ್ತಿದ ಪ್ರಯಾಣಿಕರು, ಮಳೆ ನೀರಿಗೆ ಹೆದರಿದ್ದಾರೆ. ಯಾಕೆಂದರೆ ಬಸ್ ಸಂಪೂರ್ಣ ಸೊರುತ್ತಿತ್ತು. ಈ ಹಿನ್ನೆಲೆಯಲ್ಲಿ ಬಸ್‍ನಲ್ಲಿದ್ದ ಪ್ರಯಾಣಿಕರೆಲ್ಲರೂ ಛತ್ರಿ ಹಿಡಿದು ಕುಳಿತುಕೊಳ್ಳಬೇಕಾಯಿತು. ಇನ್ನೂ ಬಸ್ ಸೀಟ್‍ಗಳು ಕೂಡ ನೀರಿನಿಂದ ತೊಯ್ದಿದ್ದರಿಂದ ಕೆಲ ಪ್ರಯಾಣಿಕರು ಚಾಲಕನ ಪಕ್ಕದ ಎಂಜಿನ್ ಮೇಲೆ ಕುಳಿತುಕೊಂಡಿದ್ದರು.

    ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆಯು ಮಳೆ ಮುಂದುವರಿಯುವ ಸಾಧ್ಯತೆಯ ಮುನ್ಸೂಚನೆ ನೀಡಿದ ಹಿನ್ನೆಲೆ ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಜನ ಹಾಗೂ ಜಾನುವಾರುಗಳ ಸುರಕ್ಷತೆಗೆ ಸಾರ್ವಜನಿಕರು ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು. ಇದನ್ನೂ ಓದಿ: ಪೆಗಾಸಸ್ ಮೂಲಕ ಗೂಢಚರ್ಯೆ – ಅಂತಿಮ ವರದಿ ಸಲ್ಲಿಕೆಗೆ ಕಾಲಾವಕಾಶ ವಿಸ್ತರಣೆ

    ಮಳೆಯಿಂದಾಗಿ ನಾವಳ್ಳಿ ಅಣ್ಣಿಗೇರಿ ರಸ್ತೆ ಸಂಪರ್ಕ ಕಡಿತವಾಗಿದ್ದುಮ ಹಳ್ಳಗಳು ತುಂಬಿ ಹರಿಯುತ್ತಿವೆ. ಹಳ್ಳದ ಅಕ್ಕ-ಪಕ್ಕ ಇರುವ ಜನತೆಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಕಂದಾಯ ಅಧಿಕಾರಿಗಳು ಹೊಲಗಳಿಗೆ ಹೋಗದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪೊಲೀಸರ ಮುಂದೆ ಶರಣಾಗಲು ಹೆಚ್ಚಿನ ಸಮಯ ಕೇಳಿದ ಸಿಧು

  • ಕಿರಾಣಿ ಅಂಗಡಿ ನಡೆಸುತ್ತಿದ್ದ ಮಹಾಂತೇಶ್ ರಾಯರ್ ಪುತ್ರಿ ಬೆಳಗಾವಿಗೆ ಟಾಪ್

    ಕಿರಾಣಿ ಅಂಗಡಿ ನಡೆಸುತ್ತಿದ್ದ ಮಹಾಂತೇಶ್ ರಾಯರ್ ಪುತ್ರಿ ಬೆಳಗಾವಿಗೆ ಟಾಪ್

    ಬೆಳಗಾವಿ: ಕಿರಾಣಿ ಅಂಗಡಿಯಿಂದ ಜೀವನ ನಡೆಸುತ್ತಿದ್ದ ಮಹಾಂತೇಶ್ ರಾಯರ್ ಅವರ ಪುತ್ರಿಯೊಬ್ಬಳು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಪ್ರತಿಶತ ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

    ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದ ನಿವಾಸಿಗಳಾದ ಮಹಾಂತೇಶ ರಾಯರ್ ಹಾಗೂ ಭಾರತೀ ರಾಯರ್ ಅವರ ಪುತ್ರಿ ಸಹನಾ ಮಹಾಂತೇಶ ರಾಯರ್ 10ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಪೋಷಕರು ಹಾಗೂ ಶಾಲೆಯ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇದನ್ನೂ ಓದಿ: ಔಟ್‌ ಆಫ್‌ ಔಟ್‌ – ಚಿಕ್ಕಬಳ್ಳಾಪುರದ ಒಂದೇ ಶಾಲೆಯ ಮೂವರು ರಾಜ್ಯಕ್ಕೆ ಪ್ರಥಮ

    ಸತ್ತಿಗೇರಿ ಗ್ರಾಮದ ಸಹನಾ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಈಕೆ ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿ ಗ್ರಾಮೀಣ ಭಾಗದ ಜನರ ಆರೋಗ್ಯ ಕಾಪಾಡಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದಾರೆ. ಸಹನಾ ತಂದೆ ಜೀವನ ನಿರ್ವಹಣೆಗಾಗಿ ಕಿರಾಣಿ ಅಂಗಡಿ ನಡೆಸಿ ಕುಟುಂಬ ಸಾಗಿಸುತ್ತಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಸಹನಾ, ಕೋವಿಡ್-19 ಸಂಕಷ್ಟದಿಂದ ತರಗತಿ ಸಮರ್ಪಕವಾಗಿ ನಡೆಯಲಿಲ್ಲ. ಆನ್‌ಲೈನ್ ತರಗತಿಗೆ ಹಾಜರಾಗಲು ನೆಟ್‌ವರ್ಕ್ ಸಮಸ್ಯೆಯೂ ಕಾಡುತಲಿತ್ತು. ಆದರೂ, ಎದೆಗುಂದದೆ ಆತ್ಮವಿಶ್ವಾಸದಿಂದ ಓದು ಮುಂದುವರಿಸಿದೆ. ನನ್ನ ಶಿಕ್ಷಕರು ಮತ್ತು ಪೋಷಕರು ಸಾಕಷ್ಟು ಪ್ರೋತ್ಸಾಹ ನೀಡಿದರು. ಅವರ ನಿರೀಕ್ಷೆಯಂತೆ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದಿದ್ದಾರೆ.

    9ನೇ ತರಗತಿ ವಾರ್ಷಿಕ ಪರೀಕ್ಷೆ ಮುಗಿಯುತ್ತಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದೆ. ಶಿಕ್ಷಕರ ಪಾಠವನ್ನು ಏಕಾಗ್ರತೆಯಿಂದ ಆಲಿಸುತ್ತಿದ್ದೆ. ನಿತ್ಯ ಮನೆಗೆಲಸ ಮಾಡುತ್ತಲೇ 8 ತಾಸು ಓದುತ್ತಿದ್ದೆ. ಸತತ ಪರಿಶ್ರಮಕ್ಕೆ ಈಗ ಫಲ ಸಿಕ್ಕಿದೆ ಎಂದು ಸಂತಸ ಹಚ್ಚಿಕೊಂಡಿದ್ದಾರೆ. ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿಯಲ್ಲಿ ಔಟ್ ಆಫ್ ಔಟ್ ತೆಗೆದ ಬೆಂಗಳೂರಿನ ವಿದ್ಯಾರ್ಥಿಗಳು

    ಬಾಗಲಕೋಟೆಗೆ ಇಂದಿರಾ ಟಾಪ್: ಬಾಗಲಕೋಟೆ ತಾಲೂಕಿನ ಚಿಕ್ಕಸಂಶಿ ಗ್ರಾಮದ ವಿದ್ಯಾರ್ಥಿನಿ ಇಂದಿರಾ ನ್ಯಾಮಗೌಡರ್ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಮಂಗಳೂರು ಜಿಲ್ಲೆಯ ಮೂಡಬಿದರೆ ಆಳ್ವಾಸ್‌ನ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿನಿ ಈ ಸಾಧನೆ ಮಾಡಿದ್ದು, ಪೋಷಕರು ಹಾಗೂ ಶಾಲಾ ಶಿಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

  • ಶ್ರೀರಂಗಪಟ್ಟಣದ ಆಂಜನೇಯ ದೇವಾಲಯ ಮಸೀದಿಯಾಗಿದೆ: ಮುತಾಲಿಕ್

    ಶ್ರೀರಂಗಪಟ್ಟಣದ ಆಂಜನೇಯ ದೇವಾಲಯ ಮಸೀದಿಯಾಗಿದೆ: ಮುತಾಲಿಕ್

    ಧಾರವಾಡ: ಶ್ರೀರಂಗಪಟ್ಟಣದ ಆಂಜನೇಯನ ದೇವಸ್ಥಾನ ಮಸೀದಿಯಾಗಿ ಪರಿವರ್ತನೆಯಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಅದು ಪ್ರಾಚ್ಯ ಇಲಾಖೆಯ ಕಟ್ಟಡ. ಅಲ್ಲಿ ಬೋರ್ಡ್ ಕೂಡಾ ಇದೆ. ಅಲ್ಲಿ ಆಂಜನೇಯ ದೇವಸ್ಥಾನ ಪ್ರತಿಷ್ಠಾಪನೆ ಮಾಡಬೇಕೆಂಬ ಒತ್ತಡ ಕೂಡಾ ಬಂದಿದೆ. ಅಲ್ಲಿ ನಡೆದಿರುವ ವಾದ ನೂರಕ್ಕೆ ನೂರು ಸತ್ಯ ಎಂದರು. ಇದನ್ನೂ ಓದಿ: ದಿವ್ಯಾಂಗರಿಗೆ ಸರ್ಕಾರದ ಸೌಲಭ್ಯ ತಲುಪಿಸುವಲ್ಲಿ ಸಾರ್ವಜನಿಕರ ಪಾತ್ರ ಮುಖ್ಯ: ರಾಜ್ಯಪಾಲ

    ಈ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ವಿಚಾರ ಮಂಚ್ ಹೋರಾಟ ಮಾಡುತ್ತಿದೆ. ಅದಕ್ಕೆ ನಾನು ಬೆಂಬಲ ಕೊಡುತ್ತೇನೆ. ಆಂಜನೇಯ ದೇವಾಲಯ ಪ್ರತಿಷ್ಠಾಪನೆಗೆ ಜಿಲ್ಲಾಧಿಕಾರಿ ಹಾಗೂ ಮುಸ್ಲಿಂ ಸಮಾಜ ಅವಕಾಶ ಮಾಡಿ ಕೊಡಬೇಕು. ಈ ವಿಚಾರದಲ್ಲಿ ಸಂಘರ್ಷ ಆಗದೇ ಸೌಹಾರ್ದ ಶಾಂತ ರೀತಿಯಲ್ಲಿ ಬಗೆಹರಿಸಬೇಕು ಎಂದು ವಿನಂತಿಸಿಕೊಂಡರು.

    ಪಠ್ಯದಲ್ಲಿ ಹೆಡಗೆವಾರ್ ಸ್ವಾಗತಾರ್ಹ:
    ಪಠ್ಯ ಪುಸ್ತಕದಲ್ಲಿ ಆರ್‌ಎಸ್‌ಎಸ್ ಹೆಡಗೆವಾರ್ ಇವರ ವಿಚಾರ ಧಾರೆ ಮುದ್ರಿಸಿದ್ದು ಸ್ವಾಗತಾರ್ಹ. ಇದು ವಿರೋಧಾತ್ಮಕ ಪ್ರಕ್ರಿಯೆ ಅಲ್ಲ, ಇದು ರಾಷ್ಟ್ರೀಯ ವಾದ. ದೇಶ ಭಕ್ತಿಯ ಹಿನ್ನೆಲೆಯಲ್ಲಿ ಆದ ಘಟನೆ. ಇದನ್ನು ನಾನು ಸ್ವಾಗತ ಮಾಡುತ್ತೇನೆ. ಇದನ್ನು ವಿರೋಧ ಮಾಡುವ ಅವಶ್ಯಕತೆ ಇಲ್ಲ ಎಂದರು. ಇದನ್ನೂ ಓದಿ: ಮೇ 19ಕ್ಕೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ

    Pramod Muthalik (3)

    ಇಲ್ಲಿವರೆಗೆ ನಾಸ್ತಿಕವಾದ, ಅರಾಷ್ಟ್ರೀಯತೆ, ಮುಸ್ಲಿಂ ಗುಲಾಮಿ ರಾಜರ ವೈಭವಿಕರಣ ಪಠ್ಯ ಪುಸ್ತಕದಲ್ಲಿತ್ತು. ಟಿಪ್ಪು, ಔರಂಗಜೇಬ, ಅಕ್ಬರನ ಪಾಠ ಸಾಕು. ಈಗ ಹೆಡಗೆವಾರ್, ಭಗತಸಿಂಗ್, ಸಾವರಕರ್, ರಾಯಣ್ಣ, ಚನ್ನಮ್ಮರಂತವರ ಬಗ್ಗೆ ಹಾಕುತ್ತಿರುವದು ಒಳ್ಳೆಯ ವಿಚಾರ ಎಂದರು.

  • ದತ್ತಪೀಠದಲ್ಲಿ ಗೋ ಮಾಂಸದೂಟ ಮಾಡುತ್ತಾರೆ: ಮುತಾಲಿಕ್ ಕಿಡಿ

    ದತ್ತಪೀಠದಲ್ಲಿ ಗೋ ಮಾಂಸದೂಟ ಮಾಡುತ್ತಾರೆ: ಮುತಾಲಿಕ್ ಕಿಡಿ

    ಧಾರವಾಡ: ಚಿಕ್ಕಮಗಳೂರಿನ ದತ್ತಪೀಠದಲ್ಲಿ ಮಾಂಸದೂಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ದತ್ತಪೀಠ ಅಪವಿತ್ರ ಮಾಡಿದ್ದಾರೆ. ಇದನ್ನು ಖಂಡಿಸುತ್ತೇನೆ ಎಂದು ಕಿಡಿಕಾರಿದರು.

    ಈ ಬಗ್ಗೆ ವೀಡಿಯೋ ಒಂದರಲ್ಲಿ ಮಾತನಾಡಿದ ಮುತಾಲಿಕ್, ಮುಜರಾಯಿ ಮತ್ತು ಪೊಲೀಸ್ ಇಲಾಖೆ ಕತ್ತೆ ಕಾಯುತ್ತಿದೆಯಾ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಅಲ್ಲಿ ಗೋ ಮಾಂಸದೂಟ ಮಾಡುತ್ತಾರೆ. ನಾವು ಹೋಮ-ಹವನ ಮಾಡುವ ಪವಿತ್ರ ಕ್ಷೇತ್ರ ಅದು. ಅಂತಹ ಕ್ಷೇತ್ರದಲ್ಲಿ ಗಲೀಜು ಮಾಡಿದ್ದಾರೆ. ಅಲ್ಲಿ ಮಾಂಸದೂಟ ನಿಷೇಧ ಇದೆ. ಆದರೂ ಅಲ್ಲಿ ಮುಸ್ಲಿಮರು ಮಾಂಸದೂಟ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಮೇಲೆ ಮಸಿ ಎರಚಿದ ಕೈ ಕಾರ್ಯಕರ್ತರು

    ಇದು ಅಕ್ಷಮ್ಯ ಅಪರಾಧ. ನಾನು ಅವರಿಗೆ ಬೈಯೊದಿಲ್ಲ. ಮುಜರಾಯಿ ಮತ್ತು ಪೊಲೀಸ್ ಇಲಾಖೆ ಮೇಲೆ ಜಿಲ್ಲಾಧಿಕಾರಿ ತನಿಖೆ ಮಾಡಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಶ್ರೀರಾಮ ಸೇನೆಯವರು ಅಲ್ಲಿ ಗೋಮೂತ್ರದಿಂದ ಶುದ್ಧೀಕರಣ ಮಾಡುತ್ತೇವೆ. ಕ್ರಮ ಕೈಗೊಳ್ಳದಿದ್ದಲ್ಲಿ ನಾವು ಇಂತಹ ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡುವುದಿಲ್ಲ. ದತ್ತಪೀಠದಲ್ಲಿ ಅವರಿಗೆ ಪ್ರವೇಶ ಕೊಡುವುದಿಲ್ಲ ಎಂದರು.

    ಈ ಎಚ್ಚರಿಕೆಯನ್ನು ಅಲ್ಲಿನ ಜಿಲ್ಲಾಧಿಕಾರಿಗೆ ಕೊಡುತ್ತೇನೆ. ಇದು ಹುಡುಗಾಟಿಕೆ ಅಲ್ಲ. ಅಲ್ಲಿ ತಪ್ಪು ಮಾಡಿದ ಮುಸ್ಲಿಮರ ಮೇಲೂ ಕ್ರಮ ತೆಗೆದುಕೊಳ್ಳಬೇಕು. ಅಲ್ಲಿರುವ ಮುಲ್ಲಾ, ಮೌಲ್ವಿಗಳ ಮೇಲೂ ಕ್ರಮ ತೆಗೆದುಕೊಳ್ಳಬೇಕು. ಮುಜರಾಯಿ ಇಲಾಖೆ ಅಧಿಕಾರಿಗಳ ಮೇಲೂ ಕ್ರಮ ಆಗಬೇಕು. ಕ್ರಮ ತೆಗೆದುಕೊಂಡರೆ ಸರಿ, ಇಲ್ಲದೇ ಹೋದಲ್ಲಿ ನಾವು ಅವರ ಮೇಲೆ ಕೇಸ್ ಹಾಕುತ್ತೇವೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ದರ್ಗಾ ಕೆಡವಿದಾಗ ದೇವಸ್ಥಾನದ ಮಾದರಿ ಪತ್ತೆ – ಅಷ್ಟಮಂಗಲ ಪ್ರಶ್ನೆಗೆ ಮುಂದಾದ ವಿಹೆಚ್‌ಪಿ

     

  • ಸಿಎಂ ಕಾರ್ಯಕ್ರಮಕ್ಕೂ ತಟ್ಟಿತು ಲೋಡ್ ಶೆಡ್ಡಿಂಗ್ ಬಿಸಿ

    ಸಿಎಂ ಕಾರ್ಯಕ್ರಮಕ್ಕೂ ತಟ್ಟಿತು ಲೋಡ್ ಶೆಡ್ಡಿಂಗ್ ಬಿಸಿ

    ಧಾರವಾಡ: ಸಿಎಂ ಹಾಗೂ ಕೇಂದ್ರ ಹಾಗೂ ರಾಜ್ಯ ಸಚಿವರು ಭಾಗವಹಿಸಿದ್ದ ಉಳವಿ ಚನ್ನಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲೂ ವಿದ್ಯುತ್ ವ್ಯತ್ಯಯದ ಬಿಸಿ ಉಂಟಾಗಿದೆ.

    ಧಾರವಾಡದಲ್ಲಿ ಇಂದು ಉಳವಿ ಚನ್ನಬಸವೇಶ್ವರರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮ ಇತ್ತು. ಈ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೇರಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಹಾಲಪ್ಪ ಆಚಾರ್ ಭಾಗವಹಿಸಿದ್ದರು.

    BASAVARAJ BOMMAI

    ಮೊದಲು ರೇಲ್ವೆ ಸ್ಟೇಷನ್ ರಸ್ತೆಯಲ್ಲಿ ಇರುವ ಚನ್ನಬಸವೇಶ್ವರ ಪುತ್ಥಳಿ ಅನಾವರಣ ಮಾಡಿದ ಸಿಎಂ, ಅಲ್ಲಿಂದ ಚನ್ನಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿದರು. ವೇದಿಕೆ ಕಾರ್ಯಕ್ರಮ ಆರಂಭವಾದ ಕೆಲವೇ ಕ್ಷಣಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಇದನ್ನೂ ಓದಿ: ನಾವು ಕರ್ನಾಟಕದ ಕನ್ನಡಿಗರಲ್ಲ, ಗೋವಾ ಕನ್ನಡಿಗರು: ಸಿದ್ದಣ್ಣ ಮೇಟಿ

    ಪ್ರತಿದಿನ ಧಾರವಾಡ ನಗರದ ಈ ದೇವಸ್ಥಾನದ ಬಡಾವಣೆಗಳ ಬಳಿ ಲೋಡ್ ಶೆಡ್ಡಿಂಗ್ ಉಂಟಾಗುತ್ತದೆ. ಆದರೆ ಸಿಎಂ ಕಾರ್ಯಕ್ರಮ ಇದ್ದರೂ, ಭಾನುವಾರವೂ ಕೂಡಾ ವಿದ್ಯುತ್ ಕಡಿತಗೊಂಡಿದೆ. ಹಲವು ಚರ್ಚೆಗಳಿಗೆ ಕಾರಣವಾಯಿತು. ಸದ್ಯ ವಿದ್ಯುತ್ ಇಲಾಖೆ ಸಿಎಂ ಕಾರ್ಯಕ್ರಮಕ್ಕೂ ವಿದ್ಯುತ್ ಲೋಡ್ ಶೆಡ್ಡಿಂಗ್ ಬಿಸಿ ತಟ್ಟಿದ್ದು ಇಲ್ಲಿ ಚರ್ಚೆಯ ವಿಷಯವಾಗಿದೆ. ಇದನ್ನೂ ಓದಿ: ದಕ್ಷ, ಜನಪರ ಆಡಳಿತವನ್ನು ಸರ್ಕಾರ ಮಾಡ್ತಿದೆ, ಆಡಳಿತ ವಿರೋಧಿಗಳಿಗೆ ಅದೇ ಉತ್ತರ: ಬೊಮ್ಮಾಯಿ

  • ಕಾಳಿ ಸ್ವಾಮಿಗೆ ಮಸಿ ಬಳೆದಿದ್ದು ಅಕ್ಷಮ್ಯ ಅಪರಾಧ: ಮುತಾಲಿಕ್

    ಕಾಳಿ ಸ್ವಾಮಿಗೆ ಮಸಿ ಬಳೆದಿದ್ದು ಅಕ್ಷಮ್ಯ ಅಪರಾಧ: ಮುತಾಲಿಕ್

    ಧಾರವಾಡ: ಕಾಳಿ ಸ್ವಾಮೀಜಿ ಕನ್ನಡ ವಿರೋಧಿಯಾಗಿ ಮಾತನಾಡಿಲ್ಲ. ನಾನು ಅವರ ಜೊತೆ ಮಾತನಾಡಿದ್ದೇನೆ, ಕಾಳಿ ಸ್ವಾಮೀಜಿ ಕೆಂಪೇಗೌಡರಿಗೆ ಹಾಗೂ ಕುವೆಂಪು ಅವರಿಗೆ ಬೈದಿದ್ದಾರೆ ಎನ್ನಲಾಗಿದೆ, ಆದರೆ ಅವರು ಯಾವ ಸಂದರ್ಭದಲ್ಲೂ ಬೈದಿಲ್ಲ, ಈ ಸಂಬಂಧ ಏನಾದರೂ ದಾಖಲೆಗಳಿದ್ದರೆ ಬಿಡುಗಡೆ ಮಾಡಬೇಕಿತ್ತು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಕಾಳಿ ಸ್ವಾಮೀಜಿಗೆ ಮಸಿ ಬಳೆದು ಅವರ ಮೇಲೆ ದಾಳಿ ಮಾಡಿದವರ ದಾಖಲೆಗಳಿದ್ದರೆ ಬಿಡುಗಡೆ ಮಾಡಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಸನ್ಯಾಸಿಗಳ ಮೇಲೆ ಹಲ್ಲೆ ಮಾಡುವುದು ಅಕ್ಷಮ್ಯ ಅಪರಾಧ ಎಂದಿದ್ದಾರೆ. ಇದನ್ನೂ ಓದಿ: ರಮ್ಯಾಗೆ ಕೋಪ ಇದ್ರೆ ಬೈಯಲಿ ಆದ್ರೆ ಟ್ವೀಟ್‍ನಲ್ಲಿ ಬೇಡ: ನಲಪಾಡ್

    ಕಾಳಿ ಸ್ವಾಮೀಜಿ ಏನಾದರೂ ತಪ್ಪು ಮಾಡಿದ್ದರೆ ಕೇಸ್ ಹಾಕಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಖಾವಿಧಾರಿಗಳಿಗೆ ಮಸಿ ಬಳೆಯುವುದು ಸರಿಯಲ್ಲ. ಇದನ್ನು ಶ್ರೀರಾಮ ಸೇನೆ ಖಂಡಿಸುತ್ತದೆ. ಸ್ವಾಮೀಜಿ ಮೇಲೆ ದಾಳಿ ಮಾಡಿದವರು ಕೂಡಲೇ ಕ್ಷಮೆ ಕೇಳಬೇಕು. ಸರ್ಕಾರ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಇವತ್ತು ಕಾಳಿ ಸ್ವಾಮೀಜಿ ಮೇಲೆ ಈ ರೀತಿ ಹಲ್ಲೆ ನಡೆಯುತ್ತದೆ. ನಾಳೆ ಮತ್ತೊಬ್ಬರ ಮೇಲೆ ನಡೆಯುತ್ತದೆ. ಇದನ್ನು ಸರ್ಕಾರ ಹದ್ದು ಬಸ್ತಿನಲ್ಲಿಡಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಸಿ ಬಳಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ: ಕಾಳಿಸ್ವಾಮಿ

  • ಉತ್ತರ ಕರ್ನಾಟಕದಲ್ಲಿ ನಾಲ್ಕು ದಿನ ಗುಡುಗು ಗಾಳಿ ಸಹಿತ ಮಳೆ: ಹವಾಮಾನ ಇಲಾಖೆ

    ಉತ್ತರ ಕರ್ನಾಟಕದಲ್ಲಿ ನಾಲ್ಕು ದಿನ ಗುಡುಗು ಗಾಳಿ ಸಹಿತ ಮಳೆ: ಹವಾಮಾನ ಇಲಾಖೆ

    ಧಾರವಾಡ: ಉತ್ತರ ಕರ್ನಾಟಕದಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಗುಡುಗು, ಗಾಳಿ ಸಹಿತ ಮಳೆ ಬಿಳಲಿದೆ ಎಂದು ಧಾರವಾಡ ಕೃಷಿ ವಿವಿ ಹವಾಮಾನ ಕೇಂದ್ರದ ಮುಖ್ಯಸ್ಥ ಡಾ.ಆರ್.ಎಚ್.ಪಾಟೀಲ್ ಹೇಳಿದ್ದಾರೆ.

    ಉತ್ತರ ಕರ್ನಾಟಕ ಭಾಗದಲ್ಲಿ ಗುಡುಗು, ಸಿಡಿಲು, ರಭಸದ ಗಾಳಿ ಮಳೆ ಇರಲಿದ್ದು, ಮಳೆಗಿಂತ ಜಾಸ್ತಿ ಗಾಳಿ ಅನಾಹುತವೇ ಹೆಚ್ಚಾಗುವ ಸಾಧ್ಯತೆ ಇದೆ ಎಂದಿರುವ ಅವರು, ಸಂಜೆ ವೇಳೆಗೆ ಅಲ್ಲಲ್ಲಿ ಬಿರುಗಾಳಿ ಮಳೆ ಹೆಚ್ಚಾಗಲಿದೆ ಎಂದಿದ್ದಾರೆ. ಇದನ್ನೂ ಓದಿ:  WHO ಡೇಟಾ, ಕಾಂಗ್ರೆಸ್ ಬೇಟಾ ಎರಡೂ ತಪ್ಪು: ಬಿಜೆಪಿ ಆರೋಪ 

    ಸೂಚನೆ: ಮರಗಳ ಕೆಳಗೆ ವಾಹನಗಳು ನಿಲ್ಲಿಸಬಾರದು, ಇಂತಹುದೇ ಸ್ಥಳದಲ್ಲಿ ಗಾಳಿ, ಸಿಡಿಲು ಬರುತ್ತೆ ಅಂತಾ ಹೇಳಲಾಗದು ಎಂದಿರುವ ಪಾಟೀಲ್, ಸುಂಟರಗಾಳಿ, ಗುಡುಗು, ಸಿಡಿಲು ಪ್ರಾದೇಶಿಕವಾಗಿ ಬಹಳ ಬರಲಿವೆ. ಮುಂದಿನ ನಾಲ್ಕೈದು ದಿನ ಹೆಚ್ಚಿನ ಅನಾಹುತಗಳ ಸಾಧ್ಯತೆ ಇದೆ. ಮರಗಳ ಕೆಳಗೆ ಜನ ನಿಲ್ಲುವುದು, ವಾಹನ ನಿಲ್ಲಿಸುವುದು ಬೇಡ. ಈ ಕುರಿತು ಜನ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದ್ದಾರೆ.

  • ಮಣ್ಣಿನಲ್ಲಿ ಹಂಪಿ ಕಲಾಕೃತಿ ರಚಿಸಿದ ವಿದ್ಯಾರ್ಥಿ

    ಮಣ್ಣಿನಲ್ಲಿ ಹಂಪಿ ಕಲಾಕೃತಿ ರಚಿಸಿದ ವಿದ್ಯಾರ್ಥಿ

    ಧಾರವಾಡ: ವಿಶ್ವವಿಖ್ಯಾತ ಹಂಪಿಯ ರಥದ ಮಾದರಿಯನ್ನು ವಿದ್ಯಾರ್ಥಿಯೋರ್ವ ಮಣ್ಣಿನಲ್ಲಿ ಕಲಾಕೃತಿಯನ್ನಾಗಿ ಸೃಷ್ಟಿಸಿದ್ದಾನೆ.

    Dharawada

    ಧಾರವಾಡ ಕೆಲಗೇರಿ ನಿವಾಸಿಯಾದ ವಿನಾಯಕ ಹಿರೇಮಠ ಈ ಕಲಾ ನೈಪುಣ್ಯತೆ ಮೆರೆದಿದ್ದು, ಇವನ ಈ ಕಾಲಕೃತಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೆಂಡ್ ಆಗಿದೆ. ಈ ಹಿನ್ನೆಲೆ ಈತನ ಕಲಾ ಪ್ರತಿಭೆಯನ್ನು ಶ್ಲಾಘಿಸಿ ಡಿಡಿ ಕಟ್ಟೆ ಎಂಬ ಸಾಹಿತ್ಯ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಇದನ್ನೂ ಓದಿ:  ಡ್ರೋನ್ ಮುಖಾಂತರ ಶಸ್ತ್ರಾಸ್ತ್ರಗಳನ್ನು ಪಡೆದ 4 ಖಲಿಸ್ತಾನಿ ಭಯೋತ್ಪಾದಕರ ಬಂಧನ

    Dharawada

    ಧಾರವಾಡದ ಕೆಲಗೇರಿಯಲ್ಲಿನ ಡಿಡಿ ಕಟ್ಟೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಡಾ. ಹ.ವೆಂ. ಕಾಖಂಡಿಕಿ, ಹರ್ಷ ಡಂಬಳ ಹಾಗೂ ರಾಧಿಕಾ ಕಾಖಂಡಿಕಿ ಅವರು ವಿನಾಯಕರನ್ನು ಬಳಗದ ವತಿಯಿಂದ ಸನ್ಮಾನಿಸಿ ಆಶೀರ್ವಾದಿಸಿದರು. ಇದನ್ನೂ ಓದಿ: ಮಡಿಲಲ್ಲಿ ತಂಗಿಯನ್ನುಟ್ಟುಕೊಂಡು ತರಗತಿಗೆ ಹಾಜರಾಗಿದ್ದ ಬಾಲಕಿಗೆ ಬೋರ್ಡಿಂಗ್ ಸ್ಕೂಲ್‍ನಲ್ಲಿ ಫ್ರೀ ಸೀಟ್