Tag: ಧಾರವಾಡ

  • ರಾಜಸ್ಥಾನದ ಹಿಂದೂ ವ್ಯಕ್ತಿ ಕೊಲೆ ಅತ್ಯಂತ ಹೇಯವಾದದ್ದು: ಮುತಾಲಿಕ್

    ರಾಜಸ್ಥಾನದ ಹಿಂದೂ ವ್ಯಕ್ತಿ ಕೊಲೆ ಅತ್ಯಂತ ಹೇಯವಾದದ್ದು: ಮುತಾಲಿಕ್

    ಧಾರವಾಡ: ರಾಜಸ್ಥಾನದ ಹಿಂದೂ ವ್ಯಕ್ತಿ ಕೊಲೆ ಅತ್ಯಂತ ಹೇಯವಾದ ನೀಚ, ರಾಕ್ಷಸ ಕೃತ್ಯವಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಕಿಡಿಗೇಡಿ ಮುಸ್ಲಿಮರ ಅತಿಯಾದ ಪ್ರವೃತ್ತಿ ನಿರ್ಮಾಣ ಆಗುತ್ತಿದೆ. ಐಸಿಸಿಯಲ್ಲಿ ತಾಲಿಬಾನಿ ಈ ರೀತಿ ಗುಂಡು ಹೊಡೆಯುವುದು ಮಾಡುತ್ತಿದ್ದರು. ಅದೇ ಮಾದರಿಯಲ್ಲಿ ನಮ್ಮ ದೇಶದಲ್ಲಿ ಪ್ರಾರಂಭವಾಗಿದ್ದು, ಈ ಘಟನೆ ಅತ್ಯಂತ ಗಂಭೀರ ವಿಚಾರವಾಗಿದೆ ಎಂದರು.

    ಇದನ್ನು ಹಿಂದೂ ಸಮಾಜ, ಸರ್ಕಾರ, ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲದೇ ಇದನ್ನು ಹದ್ದುಬಸ್ತಿನಲ್ಲಿ ಇಟ್ಟು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ, ಇದೇ ಮಾನಸಿಕತೆ ಮುಂದುವರೆಯಲಿದೆ ಎಂದ ಅವರು, ಮೋದಿ ಅವರ ಮೇಲೂ ಇದೇ ಮಾದರಿಯಲ್ಲಿ ಕೊಲೆ ಮಾಡ್ತೆವೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಲಿ ಎಂದು ಹೇಳಿದರು. ಇದನ್ನೂ ಓದಿ: ಟೈಲರ್ ಕೊಲೆಗಡುಕರನ್ನು ಗುಂಡಿಟ್ಟು ಹತ್ಯೆ ಮಾಡ್ಬೇಕು: ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ

    ಕೊಲೆ ಮಾಡಿದವರ ಮೇಲೆ ಐಪಿಸಿ ಸೆಕ್ಷನ್ ಹಾಕದೇ ಭಯೋತ್ಪಾದಕ ಸೆಕ್ಷನ್ ಹಾಕಬೇಕು. ಕೊಲೆಗಡುಕರು ಹೊರಗೆ ಬರಬಾರದು, ಅಷ್ಟೇ ಅಲ್ಲ, ಒಂದೇ ತಿಂಗಳಲ್ಲಿ ವಾದ ವಿವಾದ ಮಾಡಿ ಗಲ್ಲು ಶಿಕ್ಷೆ ಕೊಡಬೇಕು ಎಂದರು. ಇದನ್ನೂ ಓದಿ: ಉದಯಪುರ ಹತ್ಯೆ: ಆರೋಪಿಗಳಿಗೆ ಪಾಕ್ ಮೂಲದ ಉಗ್ರ ಸಂಘಟನೆ ಜೊತೆ ನಂಟು

    ನಾವೇ ಕೊಂದಿದ್ದೆವೆ, ಇನ್ನು ಕೊಲ್ತೆವೆ ಎಂದು ಕೊಲೆ ಮಾಡಿದವರು ಹೇಳಿದ್ದಾರೆ. ಈ ಹೇಳಿಕೆಯೊಂದೇ ಘಟನೆಗೆ ಮುಖ್ಯ ಸಾಕ್ಷಿಯಾಗಿದ್ದು, ಇನ್ನೂ ತನಿಖೆಯ ಅವಶ್ಯಕತೆಯಿಲ್ಲ. ಇದರ ಒಂದು ಆಧಾರ ಮೇಲೆ ಕೊಲೆಗಡುಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಇಲ್ಲವೇ ಬೀದಿ ಬೀದಿಯಲ್ಲಿ ಹುಚ್ಚು ನಾಯಿಗೆ ಹೊಡೆದಂತೆ ಎನ್‍ಕೌಂಟರ್ ಮಾಡಿ, ಅದಾಗಲೇ ಈ ರೀತಿ ಮಾನಸಿಕತೆ ಹೋಗಲಿದೆ ಎಂದು ಕಿಡಿಕಾರಿದರು.

    ಇವರಿಗೆ ಕಾನೂನು, ಸರ್ಕಾರ, ಹಿಂದೂ ಸಮಾಜದ ಭಯವಿಲ್ಲ. ಹೀಗಾಗಿ ಈ ರೀತಿ ರಾಕ್ಷಸ ಮಾನಸಿಕತೆ ಪ್ರವೃತ್ತಿ ನಡೆಯುತ್ತಿದೆ. ಆ ಟೇಲರ್‍ನನ್ನು ಮೋಸದಿಂದ ಕೊಲೆ ಮಾಡಿದ್ದಾರೆ ಎಂದು ವಿರೋಧಿಸಿದರು.

    ಕಾಂಗ್ರೆಸ್ ಹಾಗೂ ಜೆಡಿಎಸ್‍ನವರು ಬಾಯಿ ಬಿಡಬೇಕು. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಕಲ್ಲಂಗಡಿ ಒಡೆದಂತ ಸಂದರ್ಭದಲ್ಲಿ ಮುಸ್ಲಿಂ ಪರವಾಗಿ ನಿಂತಿದ್ದರು. ಆದರೆ ಇವತ್ತು ರುಂಡ ಕತ್ತಿರಿಸಿದವರ ಬಗ್ಗೆ ಏನ್ ಹೇಳ್ತಿರಿ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್, ಜೆಡಿಎಸ್‍ನವರ ಜೊತೆಗೆ ಬುದ್ಧಿ ಈ ಘಟನೆಗೆ ಸಂಬಂಧಿಸಿ ಮಾತನಾಡಬೇಕು. ಅವರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಬೇಕು ಎಂದರು.

    Live Tv

  • ಹೊಟ್ಟೆ ಹರಿದುಕೊಂಡಿದ್ದ ಕೋತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

    ಹೊಟ್ಟೆ ಹರಿದುಕೊಂಡಿದ್ದ ಕೋತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

    ಧಾರವಾಡ: ಫ್ಲೈ ಓವರ್ ಮೇಲಿಂದ ಬಿದ್ದು ಹೊಟ್ಟೆ ಹರಿದುಕೊಂಡಿದ್ದ ಕೋತಿಗೆ ಧಾರವಾಡದಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

    ಧಾರವಾಡ ಹೊರವಲಯದ ನವಲೂರು ರೈಲ್ವೆ ನಿಲ್ದಾಣದ ಬಳಿಯ ಫ್ಲೈ ಓವರ್ ಮೇಲಿಂದ ಬಿದ್ದಿದ್ದ ಕೋತಿಗೆ ಹೊಟ್ಟೆಗೆ ಬಲವಾದ ಪೆಟ್ಟಾಗಿತ್ತು. ಇದರಿಂದ ಕೋತಿಯ ಹೊಟ್ಟೆಯಿಂದ ಕರಳುಗಳು ಹೊರಗೆ ಬಂದು ತೀವ್ರ ರಕ್ತಸ್ರಾವವಾಗಿ, ಕೋತಿ ನಿತ್ರಾಣ ಸ್ಥಿತಿ ಗಂಭೀರವಾಗಿತ್ತು. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ವನ್ಯಜೀವಿ ಸಂರಕ್ಷಕ ಸೋಮಶೇಖರ್ ಚನ್ನಶೆಟ್ಟಿ ಹಾಗೂ ತಂಡದವರು ಆ ಕೋತಿಯನ್ನು ಹಿಡಿದುಕೊಂಡು ಪಶು ವೈದ್ಯ ಡಾ.ವಿನೀತ ಅವರ ಬಳಿ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ಅಪಘಾತ- 7 ಮಂದಿ ದುರ್ಮರಣ

    ಡಾ.ವಿನೀತ ಅವರು ಆ ಕೋತಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ 15 ಹೊಲಿಗೆಯನ್ನು ಹಾಕಿದ್ದಾರೆ. ಯಶಸ್ವಿ ಶಸ್ತ್ರ ಚಿಕಿತ್ಸೆ ನಂತರ ಆ ಕೋತಿಯನ್ನು ಅರಣ್ಯ ಇಲಾಖೆಯ ಕೊಠಡಿಯಲ್ಲಿ ಆರೈಕೆ ಮಾಡಲಾಗುತ್ತಿದೆ. ಸದ್ಯ ಕೋತಿ ನೀರು ಕುಡಿಯುತಿದ್ದು, ಇನ್ನು ಮೂರು ದಿನಗಳ ಕಾಲ ತೀವ್ರ ನಿಗಾ ವಹಿಸಲಾಗಿದೆ. ಇದನ್ನೂ ಓದಿ: ದೇವರಿಗಾಗಿ ದೇವರಿಂದ್ಲೇ ಹುಡುಕಾಟ- ಹುತ್ತದಲ್ಲಿ ಸಿಕ್ಕೇ ಬಿಡ್ತು 200 ವರ್ಷದ ಹಿಂದಿನ ವಿಗ್ರಹ

    Live Tv

  • BJP, RSS ನಾಯಕರು ತಮ್ಮ ಮಕ್ಕಳನ್ನು ಯಾಕೆ ಅಗ್ನಿಪಥ್ ಯೋಜನೆಯಡಿ ಸೈನ್ಯಕ್ಕೆ ಸೇರಿಸುತ್ತಿಲ್ಲ: ರೈತ ಮುಖಂಡರ ಕಿಡಿ

    BJP, RSS ನಾಯಕರು ತಮ್ಮ ಮಕ್ಕಳನ್ನು ಯಾಕೆ ಅಗ್ನಿಪಥ್ ಯೋಜನೆಯಡಿ ಸೈನ್ಯಕ್ಕೆ ಸೇರಿಸುತ್ತಿಲ್ಲ: ರೈತ ಮುಖಂಡರ ಕಿಡಿ

    ಧಾರವಾಡ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆಗೆ ಸೇನೆ ಸೇರ ಬಯಸುವ ಅಭ್ಯರ್ಥಿಗಳಿಂದ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇದೀಗ ಈ ಯೋಜನೆಗೆ ರೈತ ಮುಖಂಡರೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡರು ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದರು. ಅಗ್ನಿಪಥ್ ಯೋಜನೆ ಮೂಲಕ ಸೇನೆಗೆ ಅಭ್ಯರ್ಥಿಗಳನ್ನು ಸೇರಿಸಿಕೊಂಡು ಕೇವಲ ಎರಡೂವರೆ ವರ್ಷಗಳ ಕಾಲ ಮಾತ್ರ ಅವರನ್ನು ಬಳಸಿಕೊಂಡು, ನಂತರ ಅವರನ್ನು ಸೇನೆಯಿಂದ ಕೈಬಿಡುವುದು ಯಾವ ನ್ಯಾಯ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಹಳ್ಳದಲ್ಲಿ ತೇಲಿ ಬಂದ ಏಳು ಭ್ರೂಣಗಳ ಮೃತದೇಹ 

    ಈ ಯೋಜನೆ ಯುವಕರನ್ನು ದಾರಿ ತಪ್ಪಿಸುವ ಯೋಜನೆಯಾಗಿದೆ. ಕೂಡಲೇ ಈ ಯೋಜನೆಯನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಅಗ್ನಿಪಥ್ ಯೋಜನೆ ಒಳ್ಳೆಯ ಯೋಜನೆ ಎಂದು ಅದನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ ಹಾಗೂ ಆರ್‌ಎಸ್‍ಎಸ್ ನಾಯಕರು ತಮ್ಮ ಮಕ್ಕಳನ್ನು ಯಾಕೆ ಈ ಯೋಜನೆಯಡಿ ಸೈನ್ಯಕ್ಕೆ ಸೇರಿಸುತ್ತಿಲ್ಲ ಎಂದು ಕಿಡಿಕಾರಿದರು.

    ARMY

    ಈ ನಾಯಕರ ಮಕ್ಕಳು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಅಗ್ನಿಪಥ್ ಎಂದು ಈ ದೇಶದ ಯುವ ಜನರ ದಿಕ್ಕು ತಪ್ಪಿಸುವುದನ್ನು ಕೂಡಲೇ ಬಿಡಬೇಕು ಎಂದು ಆಗ್ರಹಿಸಿದರು.

    Live Tv

  • ಪೌರ ಕಾರ್ಮಿಕರನ್ನು ಮನೆಗೆ ಕರೆಯಿಸಿಕೊಂಡ ಕಿಚ್ಚ ಸುದೀಪ್, ಇದು ರಕ್ಕಮ್ಮ ಹಾಡು ಎಫೆಕ್ಟ್

    ಪೌರ ಕಾರ್ಮಿಕರನ್ನು ಮನೆಗೆ ಕರೆಯಿಸಿಕೊಂಡ ಕಿಚ್ಚ ಸುದೀಪ್, ಇದು ರಕ್ಕಮ್ಮ ಹಾಡು ಎಫೆಕ್ಟ್

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ರಕ್ಕಮ್ಮ ಹಾಡು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಭಾರತೀಯ ಸಿನಿಮಾ ರಂಗದ ಅನೇಕ ಕಲಾವಿದರು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರೀಲ್ಸ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡಿನ ತುಣುಕಿಗೆ ಹೆಜ್ಜೆ ಹಾಕಿದವರ ವಿಡಿಯೋ ವೈರಲ್ ಆಗುತ್ತಿವೆ. ಅದರಲ್ಲಿ ಪೌರ ಕಾರ್ಮಿಕರ ವಿಡಿಯೋ ಕೂಡ ಒಂದು. ಧಾರವಾಡದ ಕೆಲ ಪೌರ ಕಾರ್ಮಿಕರು ‘ರಾ ರಾ ರಕ್ಕಮ್ಮ’ ಎಂದು ಕುಣಿದಿದ್ದೇ ತಡ, ಆ ಹಾಡು ಅಸಂಖ್ಯಾತ ನೋಡುಗರ ಮೆಚ್ಚುಗೆಗೆ ಕಾರಣವಾಗಿತ್ತು.

    ಧಾರವಾಡದ ಕೆಲ ಪೌರ ಕಾರ್ಮಿಕರು ಈ ಹಾಡಿಗೆ ಹೆಜ್ಜೆ ಹಾಕಲು ಬರೋಬ್ಬರಿ ಮೂವತ್ತು ಸಾವಿರ ಖರ್ಚು ಮಾಡಿದ್ದರಂತೆ. ಆ ವಿಡಿಯೋವನ್ನು ನೋಡಿದ ಕಿಚ್ಚ ಸುದೀಪ್, ಅಷ್ಟೂ ಪೌರ ಕಾರ್ಮಿಕರನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಉಪಚರಿಸಿದ್ದಾರೆ. ಅಲ್ಲದೇ, ಅವರೊಂದಿಗೆ ಕೆಲ ಹೊತ್ತು ಕಳೆದು, ಫೋಟೋ ತಗೆಸಿಕೊಂಡು ಸಂಭ್ರಮಿಸಿದ್ದಾರೆ. ಕಿಚ್ಚನ ಮನೆಗೆ ಬಂದ ಕಾರ್ಮಿಕರು ಕೂಡ ನೆಚ್ಚಿನ ನಟನನ್ನು ಕಂಡು ಖುಷಿ ಪಟ್ಟಿದ್ದಾರೆ. ಇದನ್ನೂ ಓದಿ:ದಿಗಂತ್ ಬಾಳಲ್ಲಿ ನಡೀತು ಮತ್ತೊಂದು ದುರಂತ

    ಈ ಕುರಿತು ಮಾತನಾಡಿರುವ ಪೌರ ಕಾರ್ಮಿಕರು, ತಾವು ಸುದೀಪ್ ಅವರ ಅಭಿಮಾನಿಗಳು. ವಿಕ್ರಾಂತ್ ರೋಣ ಸಿನಿಮಾ ಯಶಸ್ವಿ ಆಗಲೆಂದು ಮೂವತ್ತು ಸಾವಿರ ರೂಪಾಯಿ ಖರ್ಚು ಮಾಡಿ, ಸೆಟ್ ಹಾಕಿ ಹಾಡನ್ನು ಶೂಟ್ ಮಾಡಿದ್ದೆವು. ಅದನ್ನು ಸುದೀಪ್ ಅವರು ನೋಡಿ, ನಮ್ಮನ್ನು ಮನೆಗೆ ಕರೆಯಿಸಿಕೊಂಡು ಗೌರವಿಸಿದ್ದಾರೆ. ಇದೊಂದು ಮರೆಯಲಾರದ ಕ್ಷಣ ಎಂದು ಹೇಳಿದ್ದಾರೆ. ಸ್ವತಃ ದೇವರನ್ನು ಭೇಟಿ ಮಾಡಿದಷ್ಟು ನಮಗೆಲ್ಲ ಖುಷಿ ಆಗಿದೆ ಎಂದೂ ಅವರು ತಿಳಿಸಿದ್ದಾರೆ.

    Live Tv

  • ಹಳ್ಳಕ್ಕೆ ಸ್ನಾನಕ್ಕೆ ಇಳಿದಾಗ ಪಿಟ್ಸ್ ಬಂದು ವ್ಯಕ್ತಿ ನೀರುಪಾಲು

    ಹಳ್ಳಕ್ಕೆ ಸ್ನಾನಕ್ಕೆ ಇಳಿದಾಗ ಪಿಟ್ಸ್ ಬಂದು ವ್ಯಕ್ತಿ ನೀರುಪಾಲು

    ಧಾರವಾಡ: ಹಳ್ಳಕ್ಕೆ ಸ್ನಾನಕ್ಕೆ ಇಳಿದಾಗ ಪಿಟ್ಸ್ ಬಂದು ವ್ಯಕ್ತಿಯೊಬ್ಬರು ನೀರು ಪಾಲಾದ ಘಟನೆ ನವಲಗುಂದ ತಾಲೂಕಿನ ಯಮನೂರ ಬೆಣ್ಣಿಹಳ್ಳದಲ್ಲಿ ನಡೆದಿದೆ.

    ಮುದ್ದೆಬಿಹಾಳ ಮೂಲದ ವಾಸಿಂ (22) ಮೃತ ವ್ಯಕ್ತಿ. ಇವರು ಯಮನೂರ ಚಾಂಗದೇವ ದರ್ಶನಕ್ಕೆ ಬಂದಿದ್ದ ವೇಳೆ ಅವಘಡ ಸಂಭವಿಸಿದೆ. ತಾಯಿ ಜೊತೆಗೆ ಗೋವಾಕ್ಕೆ ದುಡಿಯಲು ಹೋಗಿದ್ದ ವಾಸಿಂ, ಕುಟುಂಬ ಸಮೇತ ಗೋವಾದಿಂದ ಯಮನೂರ ಚಾಂಗದೇವ ದರ್ಶನಕ್ಕೆ ಬಂದಿದ್ದರು. ಅಂತೆಯೇ ಸ್ನಾನ ಮಾಡಲೆಂದು ಬೆಣ್ಣಿಹಳ್ಳಕ್ಕೆ ಇಳಿದಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ಬುಲ್ಡೋಜರ್ ಸದ್ದು: 14 ಮನೆಗಳು ಸೇರಿದಂತೆ 17 ಟಿನ್ ಶೆಡ್ ತೆರವು

    ದರ್ಶನಕ್ಕೂ ಮೊದಲು ಸ್ನಾನ ಮಾಡಲು ಹಳ್ಳಕ್ಕೆ ಇಳಿದಿದ್ದ ವೇಳೆ ಪಿಟ್ಸ್ ಬಂದು ನೀರುಪಾಲಾಗಿದ್ದಾರೆ. ನವಲಗುಂದ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    Live Tv

  • ಅಗ್ನಿಪಥ್ ಯೋಜನೆ ವಿರುದ್ಧ ಯುವಕರನ್ನು ಕಾಂಗ್ರೆಸ್‍ ಬೇಕೆಂದು ಪ್ರಚೋದಿಸುತ್ತಿದೆ: ಬಿ.ಸಿ.ಪಾಟೀಲ್

    ಅಗ್ನಿಪಥ್ ಯೋಜನೆ ವಿರುದ್ಧ ಯುವಕರನ್ನು ಕಾಂಗ್ರೆಸ್‍ ಬೇಕೆಂದು ಪ್ರಚೋದಿಸುತ್ತಿದೆ: ಬಿ.ಸಿ.ಪಾಟೀಲ್

    ಧಾರವಾಡ: ಅಗ್ನಿಪಥ್ ಯೋಜನೆ ವಿರುದ್ಧ ಕಾಂಗ್ರೆಸ್‍ ಬೇಕೆಂದು ಯುವಕರನ್ನು ಪ್ರಚೋದಿಸುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಆಕ್ರೋಶ ಹೊರಹಾಕಿದರು.

    ಅಗ್ನಿಪಥ್ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಗ್ನಿಪಥ್ ಮಹತ್ತರವಾದ ಯೋಜನೆಯಾಗಿದೆ. ಇಲ್ಲಿ ನಾಲ್ಕು ವರ್ಷದ ಸರ್ವಿಸ್ ಬಳಿಕ ಬೇಕಾದ ನೌಕರಿ ಸೇರಬಹುದು. ಅದರಲ್ಲಿ ಮೀಸಲಾತಿ ಸಹ ಕೂಡುತ್ತಿದ್ದಾರೆ ಎಂದು ವಿವರಿಸಿದರು.

    ಪ್ರತಿಭಟನೆ ಮಾಡುವವರೆಲ್ಲ ಆರ್ಮಿ ಸೇರಬಯಸುವವರು ಅಲ್ವಾ? ಆರ್ಮಿಗೆ ಹೋಗುವ ಉದ್ದೇಶ ದೇಶ ರಕ್ಷಣೆ. ದೇಶ ಪ್ರೇಮ ತೋರಿಸುವವರು ರೈಲ್ವೆಗೆ ಬೆಂಕಿ ಹಾಕ್ತಾರಾ? ಜನರಿಗೆ ತೊಂದರೆ ಕೊಟ್ಟು ದೇಶ ಕಾಯೋಕೆ ಆಗುತ್ತಾ? ಇದೆಲ್ಲವೂ ಕಿಡಿಗೇಡಿಗಳ ಕುತಂತ್ರವಾಗಿದೆ. ಉದ್ದೇಶಪೂರ್ವಕವಾಗಿ ಇದನ್ನುಪ್ರಚೋದಿಸುತ್ತಿದ್ದಾರೆ. ಇದಕ್ಕೆ ಯುವಕರು ಬಲಿಯಾಗಬಾರದು. ಕಾಂಗ್ರೆಸ್ ಪಕ್ಷ ಎಲ್ಲ ಕಡೆ ಅದೇ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಅಗ್ನಿಪಥ್ ಬಗ್ಗೆ ಆಸಕ್ತಿ ಇದ್ದವರು ದೇಶ ಸೇವೆ ಮಾಡಿ ಅಂದ್ರೆ ಇವರಿಗ್ಯಾಕೆ ಇಷ್ಟೊಂದು ಉರಿತಿದೆ:  ಬಿ.ಶ್ರೀರಾಮುಲು

    ರಾಹುಲ್ ಗಾಂಧಿಗೆ ವಿಚಾರಣೆಗೆ ಕರೆದರೆ ಪ್ರತಿಭಟನೆ ಮಾಡಿದ್ರು. ಹಿಂದೆ ಖರ್ಗೆಯವರನ್ನೂ ಇಡಿ ವಿಚಾರಣೆಗೆ ಕರೆದಿತ್ತು. ಆಗ ಒಬ್ಬರೂ ಪ್ರತಿಭಟನೆಗೆ ಬರಲಿಲ್ಲ. ಓರ್ವ ಹಿರಿಯ ದಲಿತ ನಾಯಕ ಖರ್ಗೆ. ಅದೇ ರೀತಿ ರಾಹುಲ್, ಸೋನಿಯಾ ಅವರನ್ನು ಕರೆದು ವಿಚಾರಣೆ ಮಾಡಬಾರದು ಅಂದ್ರೆ ಹೇಗೆ? ಈ ದೇಶದಲ್ಲಿ ನ್ಯಾಯ, ಸಂವಿಧಾನಕ್ಕೆ ಎಲ್ಲರೂ ತಲೆಬಾಗಬೇಕು. ಕರೆಯಬಾರದು ಅಂತಾ ಧಮ್ಕಿ ಹಾಕಿದ್ರೆ ಹೇಗೆ ಎಂದು ಪ್ರಶ್ನಿಸಿದರು.

    ನಾಳೆ ಯಾರೋ ಒಬ್ಬ ಕೊಲೆ ಮಾಡ್ತಾನೆ. ಅವನನ್ನು ಬಂಧಿಸಬೇಡಿ ಅಂತಾ ಪ್ರತಿಭಟಿಸ್ತಾರಾ? ಕಾಂಗ್ರೆಸ್ ಸರ್ಕಾರ ಇದ್ದಾಗಲೇ ದೂರು ದಾಖಲಾಗಿದೆ. ಇಡಿ ಪ್ರಧಾನಿ ಮಾತು ಕೇಳುತ್ತೆ ಅಂತಾರೆ. ಹಾಗಾದ್ರೆ ಹಿಂದೆ ಪಿಎಂ ಆಗಿದ್ದ ಮನಮೋಹನ್ ಸಿಂಗ್ ಕೇಸ್ ಆಗದಂತೆ ಮಾಡುತ್ತಿದ್ದರಲ್ವಾ? ಇಡಿ ಸ್ವತಂತ್ರವಾದ ಸಂಸ್ಥೆ. ಕಾನೂನುಬದ್ಧವಾಗಿ ಕೆಲಸ ಮಾಡಲು ಬಿಡಬೇಕು ಎಂದು ಕಿಡಿಕಾರಿದರು.

    Live Tv

  • ಯಾರ‍್ರೀ ಆ ಡಿಸಿ?: ಪಿಎಸ್‌ಐಗೆ ಹೊರಟ್ಟಿ ಪ್ರಶ್ನೆ

    ಯಾರ‍್ರೀ ಆ ಡಿಸಿ?: ಪಿಎಸ್‌ಐಗೆ ಹೊರಟ್ಟಿ ಪ್ರಶ್ನೆ

    ಧಾರವಾಡ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡದ ಶಾರದಾ ಹೈಸ್ಕೂಲ್‌ಗೆ ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಹಾಗೂ ಮಹಿಳಾ ಪಿಎಸ್‌ಐ ಕವಿತಾ ಬಂದಿದ್ದು, ಅವರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

    ಚುನಾವಣಾಧಿಕಾರಿ ಮಾಡಿದ ಆದೇಶವನ್ನು ತಮ್ಮ ಬೆಂಬಲಿಗರು ಪಾಲನೆ ಮಾಡುತ್ತಿಲ್ಲ, ಮತಗಟ್ಟೆ ಕೇಂದ್ರದಿಂದ 200 ಮೀಟರ್ ದೂರದಲ್ಲಿರಬೇಕು ಎಂದು ಪಿಎಸ್‌ಐ ಹೇಳುತ್ತಿದ್ದಂತೆ ಹೊರಟ್ಟಿ ಅವರು ಪಿಎಸ್‌ಐ ಕವಿತಾ ಅವರಿಗೆ, ಯಾರ‍್ರೀ ಅವಾ ಡಿಸಿ? ಎಂದು ಆವಾಜ್ ಹಾಕಿದ್ದಾರೆ. ಇದನ್ನೂ ಓದಿ: ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನ – ಶೀಘ್ರವೇ ಕಾಂಗ್ರೆಸ್‌ ಸೇರಲಿದ್ದಾರೆ ಮಾಜಿ ಎಂಎಲ್‌ಸಿ

    1 ಟೇಬಲ್ ಹಾಗೂ 2 ಖುರ್ಚಿಗಳನ್ನು ಹಾಕಿಕೊಂಡು ಕುಳಿತುಕೊಳ್ಳಲು ಅವಕಾಶ ಇದೆ. ಜಾಸ್ತಿ ಜನ ಕುಳಿತುಕೊಳ್ಳುವಂತಿಲ್ಲ ಎಂದು ಡಿಸಿ ಹೇಳಿದ್ದಾರೆ ಎಂದು ಪಿಎಸ್‌ಐ ಹೇಳುತ್ತಿದ್ದಂತೆ ಹೊರಟ್ಟಿ ಯರ‍್ರೀ ಅವಾ ಡಿಸಿ ಎಂದು ಆವಾಜ್ ಹಾಕಿದ್ದಾರೆ. ಇದನ್ನೂ ಓದಿ: ನೋಂದಣಿ ಮಾಡಿಕೊಂಡವರಿಗೆ ಮಾತ್ರ ಯೋಗ ಮಾಡಲು ಅವಕಾಶ: ಪ್ರತಾಪ್ ಸಿಂಹ

    ಕೊನೆಗೆ, ನಿಮ್ಮ ಕಾನೂನು ಪ್ರಕಾರ ನೀವು ಏನು ಮಾಡಬೇಕೋ ಅದನ್ನು ಮಾಡಿ. 1 ಟೇಬಲ್, 2 ಖುರ್ಚಿ ಹಾಕಿಕೊಂಡು ನಮ್ಮವರು ಕುಳಿತುಕೊಳ್ಳುತ್ತಾರೆ ಎಂದು ಹೊರಟ್ಟಿ ಹೇಳಿ ಅಲ್ಲಿಂದ ತೆರಳಿದರು.

  • ಜೈಲಿಗಟ್ಟಿದ್ದ ಮಹಿಳೆಗೆ ಚಾಕು ಇರಿದು, ಅಪ್ರಾಪ್ತ ಮಗಳೊಂದಿಗೆ ಆರೋಪಿ ಪರಾರಿ

    ಜೈಲಿಗಟ್ಟಿದ್ದ ಮಹಿಳೆಗೆ ಚಾಕು ಇರಿದು, ಅಪ್ರಾಪ್ತ ಮಗಳೊಂದಿಗೆ ಆರೋಪಿ ಪರಾರಿ

    ಧಾರವಾಡ: ಪೋಕ್ಸೋ ಕೇಸ್‌ನಲ್ಲಿ ಕಳೆದ ವರ್ಷ ಜೈಲು ಸೇರಿದ್ದ ಆರೋಪಿ ಜಾಮೀನಿನ ಮೇಲೆ ಹೊರ ಬಂದು, ಕೇಸ್ ದಾಖಲಿಸಿದ್ದ ಮಹಿಳೆಗೆ ಚಾಕು ಇರಿದಿದ್ದಾನೆ. ಮಾತ್ರವಲ್ಲದೇ ಮಹಿಳೆಯ ಅಪ್ರಾಪ್ತ ಮಗಳನ್ನೂ ಆತ ಹೊತ್ತೊಯ್ದಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಪರಶುರಾಮ್ ಲಮಾಣಿ ಕಳೆದ ವರ್ಷ ಪೋಕ್ಸೋ ಕೇಸ್‌ನಲ್ಲಿ ಜೈಲು ಸೇರಿದ್ದ. ಈ ವರ್ಷ ಏಪ್ರಿಲ್‌ನಲ್ಲಿ ಜಾಮೀನಿನ ಮೇಲೆ ಆತ ಹೊರ ಬಂದಿದ್ದ. ಶುಕ್ರವಾರ ರಾತ್ರಿ ಪರಶುರಾಮ್ ತನ್ನ ಮೇಲೆ ಪೋಕ್ಸೋ ಕೇಸ್ ದಾಖಲಿಸಿದ್ದ ಮಹಿಳೆ ಜೀಜಾಬಾಯಿಗೆ ಚಾಕು ಇರಿದಿದ್ದಾನೆ.

    ಕಳೆದ ವರ್ಷ ಪರಶುರಾಮ್ ಜೀಜಾಬಾಯಿಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ್ದ. ಹೀಗಾಗಿ ಜೀಜಾಬಾಯಿ ಪರಶುರಾಮ್ ಮೇಲೆ ಪೋಕ್ಸೋ ಕೇಸ್ ದಾಖಲಿಸಿದ್ದರು. ಈ ಸೇಡನ್ನು ತೀರಿಸಿಕೊಳ್ಳಲು ಪರಶುರಾಮ್ ಮಹಿಳೆ ಮನೆಗೆ ಹೋಗಿದ್ದು, ಕೃತ್ಯ ಎಸಗಿ ಮಗಳನ್ನೂ ಕರೆದುಕೊಂಡು ಪರಾರಿಯಾಗಿದ್ದಾನೆ. ಇದನ್ನೂ ಓದಿ: ಉತ್ತರ ಪ್ರದೇಶದ ಜೈಲು ನಿಯಮಗಳಲ್ಲಿ ಬದಲಾವಣೆ – ಏನಿದೆ ಹೊಸ ರೂಲ್ಸ್?

    ಪರಶುರಾಮ್ ಹಾಗೂ ಜೀಜಾಬಾಯಿ ಮಗಳ ನಡುವೆ ಪ್ರೇಮವಿತ್ತು. ಮಗಳು ಅಪ್ರಾಪ್ತೆ ಇದ್ದ ಕಾರಣ ಆಕೆಯ ರಕ್ಷಣೆಗೆ ಜೀಜಾಬಾಯಿ ನಿಂತಿದ್ದರು. ಆದರೆ ಜೀಜಾಬಾಯಿಗೆ ಚಾಕು ಇರಿಯಲು ಪರಶುರಾಮ್‌ಗೆ ಮಗಳೂ ಸಾತ್ ನೀಡಿದ್ದಳು ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಎಲ್ಲ ಶಾಸಕರಿಗೆ 50 ಲಕ್ಷ, ಅಡ್ಡ ಮತಕ್ಕೆ ಕಾರಣವೇನು? – ಹಳೇ ಕಥೆ ಬಿಚ್ಚಿಟ್ಟ ಶ್ರೀನಿವಾಸ್ ಗೌಡ

    ಈ ಸಂಬಂಧ ಜೀಜಾಬಾಯಿ ಧಾರವಾಡ ಉಪನಗರ ಠಾಣೆಯಲ್ಲಿ ಪರಶುರಾಮ್ ಮೇಲೆ ದೂರನ್ನು ನೀಡಿದ್ದಾರೆ. ಕೊಲೆ ಪ್ರಯತ್ನ ಹಾಗೂ ಮಗಳನ್ನು ಅಪಹರಣ ಮಾಡಿರುವುದಾಗಿ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2 ತಂಡಗಳನ್ನು ರಚಿಸಿ, ಆರೋಪಿಯನ್ನು ಶೀಘ್ರವೇ ಪತ್ತೆ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತ ಲಾಬುರಾಮ್ ತಿಳಿಸಿದ್ದಾರೆ.

  • ಈಕೆಯ ಸಾಧನೆಗೆ ಶ್ರವಣದೋಷವೂ ಅಡ್ಡಿಯಾಗಿಲ್ಲ – ಟೆಕ್ವಾಂಡೋದಲ್ಲಿ ಭಾರತಕ್ಕೆ 4ನೇ ಸ್ಥಾನ ತಂದುಕೊಟ್ಟ ಯುವತಿ

    ಈಕೆಯ ಸಾಧನೆಗೆ ಶ್ರವಣದೋಷವೂ ಅಡ್ಡಿಯಾಗಿಲ್ಲ – ಟೆಕ್ವಾಂಡೋದಲ್ಲಿ ಭಾರತಕ್ಕೆ 4ನೇ ಸ್ಥಾನ ತಂದುಕೊಟ್ಟ ಯುವತಿ

    ಧಾರವಾಡ/ಬ್ರೆಜಿಲ್: ಯುವತಿಯೊಬ್ಬಳು ಕಿವಿ ಕೇಳಿಸದಿದ್ರೂ ಬ್ರೆಜಿಲ್‍ನ ಟೆಕ್ವಾಂಡೋದಲ್ಲಿ ಭಾರತಕ್ಕೆ 4ನೇ ಸ್ಥಾನ ತಂದುಕೊಟ್ಟಿದ್ದಾಳೆ.

    ಸಾಧನೆ ಮಾಡಿದ ಯುವತಿ ಹೆಸರು ನಿಧಿ ಸುಲಾಖೆ. ಧಾರವಾಡದ ಸರ್ಕಾರಿ ಕಾಲೇಜಿನಲ್ಲಿ ಬಿಕಾಂ ಮಾಡುತ್ತಿರುವ ನಿಧಿಗೆ ಶ್ರವಣದೋಷವಿದೆ. ಈ ಸಮಸ್ಯೆ ಇವಳ ಸಾಧನೆಗೆ ಎಂದೂ ಅಡ್ಡಿಯಾಗಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಬ್ರೆಜಿಲ್‍ನಲ್ಲಿ ನಡೆದ ಟೆಕ್ವಾಂಡೋದಲ್ಲಿ ಈಗ ಈಕೆ ಚಾಂಪಿಯನ್ ಪಟ್ಟ ಮುಡಿಗೇರಿಸಿ ಕೊಂಡಿದ್ದಾಳೆ.

    ಅಲ್ಲದೇ ನಿಧಿಗೆ ‘ನನಗೆ ಕಿವಿ ಕೇಳಿಸಲ್ಲ’ ಎಂಬ ಭಾವನೆ ಸಹ ಇಲ್ಲ. ಸಾಧನೆ ಮಾಡಬೇಕು ಎಂಬ ಛಲ ಮಾತ್ರ ಇವಳಲ್ಲಿದೆ. ಧಾರವಾಡ ದಾನೇಶ್ವರಿನಗರದ ನಿಧಿ ಹುಟ್ಟಿದಾಗಿನಿಂದ ಶ್ರವಣದೋಷದ ಸಮಸ್ಯೆ ಎದುರಿಸುತ್ತಿದ್ದಾಳೆ. ಇವರ ಪೋಷಕರಿಗೆ ಈ ಮಗು ಬಗ್ಗೆ ಸಾಕಷ್ಟು ಜನ ಬೇರೆ ರೀತಿ ಮಾತನಾಡಿದ್ರು, ತಂದೆಗೆ ಮಾತ್ರ ಮಗಳನ್ನು ಸಾಧಕಿ ಮಾಡಬೇಕು ಎಂಬ ಛಲವಿತ್ತು.

    ನಿಧಿ ಅಥ್ಲೆಟಿಕ್ಸ್‌ನಲ್ಲಿ ಮುಂದೆ ಬರಬೇಕು ಎಂದು ಕೋಚಿಂಗ್ ಕೊಡಿಸಿದ್ದಾರೆ. ಅದೇ ರೀತಿ ಆಕೆ 100 ಹಾಗೂ 200 ಮೀಟರ್ ಓಟದಲ್ಲಿ ಮೆಡಲ್ ಸಹ ತಂದಿದ್ದಳು. ಅಲ್ಲದೇ ಜಾವೆಲಿನ್ ಥ್ರೋನಲ್ಲಿ ಕೂಡಾ ಎತ್ತಿದ ಕೈ. ನಿಧಿ ತಂದೆ ಆಕೆಯ ಸುರಕ್ಷತೆಯನ್ನು ಆಕೆಯೇ ನೋಡಿಕೊಳ್ಳಬೇಕು ಎಂದು ಟೆಕ್ವಾಂಡೋಗೆ ಸೇರಿಸಿದರು. ಕಳೆದ ತಿಂಗಳು ಬ್ರೆಜಿಲ್‍ನಲ್ಲಿ ಶ್ರವಣದೋಷ ಉಳ್ಳವರ ಒಲಂಪಿಕ್ ಇತ್ತು.

    ನಿಧಿ 67 ಕಿಲೋ ವಿಭಾಗದಲ್ಲಿ ಭಾಗವಹಿಸಿದ್ದು, ಭಾರತವನ್ನು ಪ್ರತಿನಿಧಿಸಿದ್ದಳು. ಈ ಮೂಲಕ ನಾಲ್ಕನೇ ಸ್ಥಾನ ಗಿಟ್ಟಿಸಿದ್ದಾಳೆ. ಅಲ್ಲದೇ ಇತ್ತೀಚೆಗೆ ಬ್ರೇಜಿಲ್‍ನಲ್ಲಿ ಮಾರ್ಷಲ್ ಆರ್ಟನ ಟೆಕ್ವಾಂಡೋದಲ್ಲಿ ನಿಧಿ ಭಾರತಕ್ಕೆ ನಾಲ್ಕನೇ ಸ್ಥಾನ ತಂದು ಕೊಟ್ಟಿದ್ದಾಳೆ. ಮೊದಲ ಸ್ಥಾನದಲ್ಲಿ ಟರ್ಕಿ, ಮೆಕ್ಸೊಕೋ ಎರಡನೇ ಸ್ಥಾನದಲ್ಲಿದೆ. ಒಟ್ಟು 70 ರಾಷ್ಟ್ರ ಈ ಕ್ರೀಡೆಯಲ್ಲಿ ಭಾಗವಹಿಸಿದ್ದವು. ಇದನ್ನೂ ಓದಿ: 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ: ಮುತಾಲಿಕ್ 

    ಈ ಸಾಧನೆಗೆ ಸರ್ಕಾರಿ ಕಾಲೇಜ್ ಕೂಡಾ ಹೆಮ್ಮೆಪಟ್ಟಿದೆ. ಅಲ್ಲದೇ ಈ ಹಿಂದೆ ನಿಧಿ ಮಾಡಿದ ಎಲ್ಲ ಸಾಧನೆಗಳನ್ನ ಕೂಡಾ ಇವರ ಗಮನಕ್ಕೆ ಇತ್ತು. ಇದೇ ಕ್ರೀಡಾ ಕೋಟಾದಲ್ಲಿ ನಿಧಿ ಸರ್ಕಾರಿ ಕಾಲೇಜ್ ಪ್ರವೇಶ ಕೂಡಾ ಪಡೆದಿದ್ದಾಳೆ. ಇವಳಿಗೆ ಸರ್ಕಾರದಿಂದ ಸಹಾಯ ಸಿಕ್ಕರೆ, ಆಕೆ ಉಚಿತ ಕೋಚಿಂಗ್ ಪಡೆದು ಇನ್ನೂ ದೊಡ್ಡ ಸಾಧನೆ ಮಾಡಬಲ್ಲಳು ಎಂಬುದು ಕೂಡಾ ಇಲ್ಲಿಯ ಶಿಕ್ಷಕಿಯರ ಆಶಯವಾಗಿದೆ.

    ಒಟ್ಟಿನಲ್ಲಿ ತಂದೆ ಕನಸನ್ನು ನನಸು ಮಾಡಲು ನಿಧಿಗೆ ಯಾವುದೇ ಶ್ರವಣದೋಷದ ಅಡ್ಡಿ ಬಂದಿಲ್ಲ. ಅಲ್ಲದೇ ಇಡೀ ಜಗತ್ತಿಗೆ ನಿಧಿ ನಮ್ಮ ಭಾರತ ಏನೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿ ಕೊಟ್ಟಿದ್ದಾಳೆ. ನಿಧಿ ಈ ಸಾಧನೆ ಮಾಡಿ ಬಂದ ಮೇಲೆ ಪ್ರಧಾನಿ ಮೋದಿ ಕೂಡಾ ಶ್ಲಾಘಿಸಿದ್ದಾರೆ. ಇವರ ಜೊತೆ ಮೋದಿ ಫೋಟೋ ತೆಗೆಸಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

  • ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳೋದಾದ್ರೆ ನಿಮ್ಮ ಅಭ್ಯರ್ಥಿಯನ್ನ ಕಣದಿಂದ ಹಿಂದೆ ಸರಿಸಿ: JDSಗೆ ಸಿದ್ದು ಸವಾಲ್

    ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳೋದಾದ್ರೆ ನಿಮ್ಮ ಅಭ್ಯರ್ಥಿಯನ್ನ ಕಣದಿಂದ ಹಿಂದೆ ಸರಿಸಿ: JDSಗೆ ಸಿದ್ದು ಸವಾಲ್

    ಧಾರವಾಡ: ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಜೊತೆ ಜೆಡಿಎಸ್ ಒಪ್ಪಂದ ಅಥವಾ ಹೊಂದಾಣಿಕೆ ಮಾಡಿಕೊಳ್ಳುವುದಾದರೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಸಿ ನಮ್ಮ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಪ್ರತ್ಯುತ್ತರ ನೀಡಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಸಂಧಾನ ಮಾಡಿಕೊಳ್ಳುವಂತೆ ಹೆಚ್‍ಡಿಕೆ ಆಹ್ವಾನ ಮಾಡಿದ್ದಾರೆ ಎಂಬ ಸುದ್ದಿ ಇದೆ. ಜೆಡಿಎಸ್ ಅಭ್ಯರ್ಥಿಯನ್ನು ಕಣದಿಂದ ನಿವೃತ್ತಿ ಮಾಡುವುದೇ ಈಗ ಸಂಧಾನ. ಅವರು ನಮಗೆ ಮತ ಹಾಕಬೇಕು ಅದೇ ಸಂಧಾನ. ಈ ಹಿಂದೆ ದೇವೇಗೌಡರ ವಿರುದ್ಧ ನಾವು ಅಭ್ಯರ್ಥಿಯನ್ನು ಹಾಕಿರಲಿಲ್ಲ, ಅವರು ಈಗ ಯಾಕೆ ಅಭ್ಯರ್ಥಿಯನ್ನು ಹಾಕಿದ್ದಾರೆ. ಬಿಜೆಪಿಯನ್ನು ಸೋಲಿಸುವುದೇ ಗುರಿಯಾದ್ರೆ ಜೆಡಿಎಸ್‍ನವರು ನಮಗೆ ಬೆಂಬಲಕೊಡಲಿ. ನಮ್ಮ ಪಕ್ಷಕ್ಕೆ ಹೈಕಮಾಂಡ್ ಇದೆ, ಅವರ ಪಕ್ಷಕ್ಕೆ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಧೀಮಂತ ಜನ ನಾಯಕ: ಪ್ರಚಾರ ಸಮಯದಲ್ಲಿ ತಂದೆ ಸಾಧನೆಯನ್ನು ಗುಣಗಾನ ಮಾಡಿದ ವಿಜಯೇಂದ್ರ 

    ನಮ್ಮ ಹೈಕಮಾಂಡ್ ಇರೋದು ದೆಹಲಿಯಲ್ಲಿ, ಅವರ ಹೈಕಮಾಂಡ್ ಇರೋದು ಪದ್ಮನಾಭನಗರದಲ್ಲಿ. ರಾಜ್ಯದ ಉಸ್ತುವಾರಿ ಹೇಳಿದಂತೆ ಎರಡನೇ ಅಭ್ಯರ್ಥಿ ಹಾಕಿದ್ದೇವೆ. ಈಗ ಏನೂ ಆಗೋದಿಲ್ಲ, ಏನೇ ಆಗೋದಿದ್ರೂ ಮತದಾನದ ದಿನವೇ ತೀರ್ಮಾನ ಆಗುತ್ತದೆ ಎಂದರು.

    ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಸಾಹಿತಿಗಳು ಅವರ ಫಲಾನುಭವಿಗಳಾಗಿದ್ದರು ಎಂಬ ಅಡ್ಡಂಡ ಸಿ. ಕಾರ್ಯಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಂಡಿತಾರಾಧ್ಯ ಶ್ರೀ ನಮ್ಮ ಫಲಾನುಭವಿನಾ ಎಂದು ಪ್ರಶ್ನಿಸಿದರು. ಪಠ್ಯಕ್ರಮದಲ್ಲಿ ಬಸವಣ್ಣನ ವಿಚಾರವನ್ನು ತಿರುಚಲಾಗಿದೆ. ಅಂಬೇಡ್ಕರ್ ಸೇರಿದಂತೆ ಭಗತ್ ಸಿಂಗ್ ಹಾಗೂ ಕುವೆಂಪು ಅವರ ವಿಚಾರವನ್ನು ತಿರುಚಲಾಗಿದೆ. ಚರಿತ್ರೆಯಲ್ಲಿ ಏನಿದೆಯೋ ಅದನ್ನು ಮುಚ್ಚಿಟ್ಟು ತಿರುಚಲಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ:  ಮಂತ್ರಿ, ಮುಖ್ಯಮಂತ್ರಿ ಯಾವುದನ್ನೂ ತಲೆಯಲ್ಲಿ ಇಟ್ಟುಕೊಂಡು ಕೆಲಸ ಮಾಡ್ತಿಲ್ಲ: ವಿಜಯೇಂದ್ರ

    ಮಕ್ಕಳಿಗೆ ವೈಚಾರಿಕತೆ ತಿಳಿಸಬೇಕು, ಅಂಬೇಡ್ಕರ್ ಸಂವಿಧಾನ ಶಿಲ್ಪಿ ಅನ್ನೋದನ್ನೇ ತೆಗೆದುಹಾಕಲಾಗಿದೆ. ಬಸವಣ್ಣ ವೈದಿಕ ಧರ್ಮದ ವಿರುದ್ಧ ಹೋರಾಡಿದ್ದರು. ಅದನ್ನೂ ತಿರುಚಲಾಗಿದೆ. 10 ದಿನದಲ್ಲಿ ಪಠ್ಯ ಪರಿಷ್ಕರಣೆ ಆಗಬೇಕು ಎಂಬುದಕ್ಕೆ ನನ್ನ ಬೆಂಬಲವೂ ಇದೆ. ರೋಹಿತ್ ಚಕ್ರತೀರ್ಥ ಮಾಡಿರೋದನ್ನು ಸಂಪೂರ್ಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.