Tag: ಧಾರವಾಡ

  • ಬೊಜ್ಜು ಕರಗಿಸಬೇಕು ಅಂತ ಸೈಕಲ್ ಏರಿದ ಪೊಲೀಸ್ ಅಧಿಕಾರಿ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ

    ಬೊಜ್ಜು ಕರಗಿಸಬೇಕು ಅಂತ ಸೈಕಲ್ ಏರಿದ ಪೊಲೀಸ್ ಅಧಿಕಾರಿ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ

    ಧಾರವಾಡ: ದೇಹದ ತೂಕವನ್ನು ಇಳಿಸಬೇಕು ಎಂದು ನಿರ್ಧರಿಸಿದ್ದ ಪೊಲೀಸ್ ಅಧಿಕಾರಿಯೊಬ್ಬರು ಇದೀಗ ಸೈಕಲಿಂಗ್‌ನಲ್ಲಿ ಹೊಸ ಸಾಧನೆ ಮಾಡಿದ್ದಾರೆ. ಮೊದ ಮೊದಲು ಸಣ್ಣ ಪ್ರಮಾಣದಲ್ಲಿ ಸೈಕಲಿಂಗ್ ಜಾಥಾ ಮಾಡುತ್ತಿದ್ದ ಇವರು, ಇದೀಗ ಭಾರತದ ತುತ್ತ ತುದಿಯಿಂದ ಕೊನೆಯವರೆಗೂ ಸೈಕಲ್ ಏರಿ ಜಾಗೃತಿ ಮೂಡಿಸಿದ್ದಾರೆ.

    ಹೌದು, ಹುಬ್ಬಳ್ಳಿಯ ಹೆಸ್ಕಾಂನ ಇನ್ಸ್‌ಪೆಕ್ಟರ್ ಆಗಿರುವ ಮುರುಗೇಶ್ ಚನ್ನಣ್ಣವರ ಇಂತಹದ್ದೊಂದು ಸಾಧನೆ ಮಾಡಿದ್ದಾರೆ. ಸೇ ನೋ ಡ್ರಗ್ಸ್ ಎನ್ನುತ್ತ ಯುವಕರಿಗೆ ಜಾಗೃತಿ ಮೂಡಿಸುವ ಮೂಲಕ ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಸೈಕಲ್ ಏರಿ ಕೇವಲ 22 ದಿನಗಳಲ್ಲಿ ಜಾಥಾವನ್ನು ಅಂತ್ಯಗೊಳಿಸಿದ್ದಾರೆ.

     

    ಕೆ2ಕೆ ಎನ್ನುವ ಜಾಥಾ ಇದಾಗಿದ್ದು, ಯುವ ಜನರಲ್ಲಿ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 2021 ರ ಡಿಸೆಂಬರ್ ತಿಂಗಳಲ್ಲಿ ಇದು ಆರಂಭವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 9 ರಾಜ್ಯಗಳ ಮುಖಾಂತರ ಸುಮಾರು 3,649 ಕಿ.ಮೀ ಸೈಕಲ್ ಯಾತ್ರೆ ನಡೆಸಿದ್ದರು. 42 ರಿಂದ 49 ವಯಸ್ಸಿನೊಳಗಿನ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರಲ್ಲದೇ ಈ ಹಿಂದೆ ಲೋಹ ಪುರುಷ ಗೌರವಕ್ಕೂ ಇವರು ಪಾತ್ರರಾಗಿದ್ದಾರೆ. ಇದನ್ನೂ ಓದಿ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನಿರಂತರ ಪ್ರಯತ್ನ ಮಾಡುತ್ತೇವೆ: ಕಾಗೇರಿ ಹಾರಿಕೆ ಉತ್ತರ

    ಇದು ಯಾರು ಬೇಕಾದರೂ ಮಾಡುವ ಜಾಥಾವಂತೂ ಅಲ್ಲವೇ ಅಲ್ಲ. ಅದು ಮೊದಲೇ ಚಳಿ ಇರುವ ಪ್ರದೇಶವಾಗಿದ್ದು, ಅಲ್ಲಿ ಇವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಏನೇ ಆದರೂ ಜಾಗೃತಿಯ ಸಲುವಾಗಿ ಸೈಕಲ್ ಏರಿದ್ದ ಮುರುಗೇಶ್ ಚನ್ನಣ್ಣವರ ಕೇವಲ 22 ದಿನದಲ್ಲಿ ತಮ್ಮ ಜಾಥಾ ಅಂತ್ಯಗೊಳಿಸಿ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಭಾಜನರಾಗಿದ್ದಾರೆ. ಇವರ ಈ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

     

    ಮೊದಲಿನಿಂದಲೂ ಸೈಕಲ್ ಮೇಲೆ ಹೆಚ್ಚು ಒಲವು ಹೊಂದಿದ್ದ ಮುರುಗೇಶ್ ಈಗಾಗಲೇ ಹಲವು ರಾಷ್ಟ್ರೀಯ ಸೈಕಲ್ ಜಾಥಾಗಳಲ್ಲಿ ಭಾಗಿಯಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: ಸಂಗೀತ ಮಾಂತ್ರಿಕ ಇಳಯರಾಜರನ್ನು ರಾಜ್ಯಸಭೆಗೆ ಸ್ವಾಗತಿಸಿದ ಪ್ರಲ್ಹಾದ್ ಜೋಶಿ

    ಇವರ ಈ ಸೈಕಲ್ ಕ್ರೇಜ್‌ಗೆ ಮನಸೋತಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಹ ಧಾರವಾಡಕ್ಕೆ ಬಂದಾಗಲೆಲ್ಲ ಇವರ ಮನೆಗೆ ಬಂದು ಸೈಕಲ್ ಜಾಥಾ ಬಗ್ಗೆ ಮತ್ತು ಇಬ್ಬರು ಸಹ ಬರ್ಲಿನ್‌ನಲ್ಲಿ ನಡೆಯುವ ಮ್ಯಾರಥಾನ್‌ನಲ್ಲಿ ಭಾಗವಹಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರಂತೆ. ಹೀಗಾಗಿಯೇ ಅವರ ಅಕಾಲಿಕ ಮರಣದಿಂದ ಮುರುಗೇಶ್ ಈ ಬುಕ್ ಆಫ್ ರೆಕಾರ್ಡ್ ಅನ್ನು ಪುನೀತ್‌ಗೆ ಸಮರ್ಪಿಸಿದ್ದು, ಮುಂದೊಂದು ದಿನ ಬರ್ಲಿನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಅವರ ಆಸೆಯನ್ನು ನಾನು ಪೂರ್ತಿಯಾಗಿಸುತ್ತೇನೆ ಎಂಬ ಆಸೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮೋತ್ಸವ ಜನಪರ ಉತ್ಸವ ಅಲ್ಲ, ಅಸ್ತಿತ್ವ ತೋರ್ಪಡಿಕೆಯ ಉತ್ಸವ: ಹಾಲಪ್ಪ ಆಚಾರ್

    ಸಿದ್ದರಾಮೋತ್ಸವ ಜನಪರ ಉತ್ಸವ ಅಲ್ಲ, ಅಸ್ತಿತ್ವ ತೋರ್ಪಡಿಕೆಯ ಉತ್ಸವ: ಹಾಲಪ್ಪ ಆಚಾರ್

    ಧಾರವಾಡ: ಸಿದ್ದರಾಮೋತ್ಸವ ಅದೊಂದು ಜನಪರವಲ್ಲದ ಉತ್ಸವ. ತಮ್ಮ ಅಸ್ತಿತ್ವಕ್ಕಾಗಿ ಈ ಉತ್ಸವ ಮಾಡಿಕೊಳ್ಳುತ್ತಿದ್ದಾರೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಸಿದ್ದರಾಮೋತ್ಸವದಿಂದ ಜನರಿಗೆ ಯಾವುದೇ ಲಾಭವಿಲ್ಲ. ಅವರು ತಮ್ಮ ಅಸ್ತಿತ್ವ ತೋರಿಸುವುದಕ್ಕಾಗಿ ಈ ಉತ್ಸವ ಮಾಡುತ್ತಿದ್ದಾರೆ. ಇದರಿಂದ ಬಿಜೆಪಿಗೆ ಯಾವುದೇ ಹಿನ್ನಡೆಯಾಗುವುದಿಲ್ಲ ಎಂದರು.

    Siddaramaiah

    ಆರ್‌ಎಸ್‌ಎಸ್ ಒಂದು ಸುಳ್ಳು ಸಂಘ ಎಂಬ ಹೇಳಿಕೆ ಕೊಟ್ಟ ಪ್ರೊ.ಕೆ.ಎಸ್ ಭಗವಾನ್ ಅವರಿಗೆ ತಿರುಗೇಟು ನೀಡಿದ ಸಚಿವರು, ಒಬ್ಬ ವ್ಯಕ್ತಿಯ ಬೆಳವಣಿಗೆ ಸಹಿಸಲಾರದ ವ್ಯಕ್ತಿ, ಬಾಯಿಗೆ ಬಂದಂತೆ ಮಾತನಾಡುವುದು ಹಾಗೂ ತಮ್ಮ ವ್ಯಕ್ತಿತ್ವ, ವಿಚಾರಗಳನ್ನು ಹೊರ ಹಾಕುವ ಕೆಲಸ ಮಾಡುತ್ತಾನೆ. ಅದಕ್ಕೆ ಹೆಚ್ಚು ಒತ್ತು ಕೊಡುವ ಅವಶ್ಯಕತೆ ಇಲ್ಲ ಎಂದರು. ಇದನ್ನೂ ಓದಿ: ನಾನು ಆದಿಚುಂಚನಗಿರಿ ಮಠದ ಸ್ವಾಮೀಜಿಗಳ ಶಿಷ್ಯ- ಬಿಜೆಪಿಗರಿಗೆ ಜಮೀರ್ ಟಾಂಗ್

    ಸಿಎಂ ದೆಹಲಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಷ್ಟ್ರಪತಿಗಳ ಅಧಿಕಾರ ಸ್ವೀಕಾರ ಸಮಾರಂಭಕ್ಕಾಗಿ ಸಿಎಂ ದೆಹಲಿಗೆ ಹೋಗಿದ್ದಾರೆ. ಸಂಪುಟ ವಿಸ್ತರಣೆಗೆ ಹೋಗಿಲ್ಲ. ಆ ಪ್ರಸಂಗ ಬಂದರೆ ದೆಹಲಿ ವರಿಷ್ಠರೇ ಸಿಎಂ ಅವರನ್ನು ಕರೆಯುತ್ತಾರೆ ಎಂದರು.

    ಬೇಬಿ ಬೆಟ್ಟದಲ್ಲಿ ಮತ್ತೆ ಗಣಿಗಾರಿಕೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಲ್ಲಿನ ಜನ ಅದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗಣಿಗಾರಿಕೆ ನಿಲ್ಲಿಸಲಾಗಿದೆ. ಆದರೆ, ತಜ್ಞರು ಬಂದು ಅಲ್ಲಿ ಪರೀಕ್ಷೆ ಮಾಡಲಿದ್ದಾರೆ. ಆಮೇಲೆ ಗಣಿಗಾರಿಕೆ ಮಾಡಬೇಕೋ ಬೇಡವೋ ಎಂದು ತೀರ್ಮಾನಿಸಲಾಗುತ್ತದೆ ಎಂದರು. ಇದನ್ನೂ ಓದಿ: ಚುನಾವಣೆ ವರ್ಷ ಇದು, ಏನೇ ಮಾಡಿದರೂ ಪಕ್ಷಕ್ಕೆ ಲಾಭ: ಕೆ.ಎನ್ ರಾಜಣ್ಣ

    Live Tv
    [brid partner=56869869 player=32851 video=960834 autoplay=true]

  • ವಾಹನ ತೊಳೆಯಲು ಹೋಗಿ ನೀರು ಪಾಲಾದ ತಂದೆ, ಮಗ

    ವಾಹನ ತೊಳೆಯಲು ಹೋಗಿ ನೀರು ಪಾಲಾದ ತಂದೆ, ಮಗ

    ಧಾರವಾಡ: ವಾಹನ ತೊಳೆಯಲೆಂದು ಹೋದ ತಂದೆ, ಮಗ ಇಬ್ಬರೂ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ನಡೆದಿದೆ.

    crime

    ಗದಿಗೆಪ್ಪ ಅಂಗಡಿ(43) ಹಾಗೂ ರವಿ ಅಂಗಡಿ(14) ಮೃತ ದುರ್ದೈವಿಗಳಾಗಿದ್ದಾರೆ. ಟಂಟಂ ವಾಹನವನ್ನು ತೊಳೆಯಲೆಂದು ತಂದೆ, ಮಗ ಇಬ್ಬರೂ ಕೆರೆಗೆ ಹೋಗಿದ್ದರು. ಈ ವೇಳೆ ಮಗ ಕೆರೆಯಲ್ಲಿ ಸಿಲುಕಿ ಮುಳುಗುತ್ತಿದ್ದ. ಆತನನ್ನು ಉಳಿಸಲು ಹೋಗಿ ತಂದೆ ಕೂಡ ನೀರು ಪಾಲಾಗಿದ್ದಾನೆ. ಸ್ಥಳೀಯರಿಗೆ ಈ ವಿಷಯ ಗೊತ್ತಾದ ಕೂಡಲೇ ಇಬ್ಬರನ್ನು ಹೊರಗಡೆ ತೆಗೆದಿದ್ದಾರೆ. ಆದರೆ ಅಷ್ಟರಲ್ಲಿ ಗದಿಗೆಪ್ಪ ಅಸುನೀಗಿದ್ದ. ಮಗ ರವಿ ನಿತ್ರಾಣ ಸ್ಥಿತಿ ತಲುಪಿದ್ದ. ಆತನನ್ನು ಕೂಡಲೇ ಅಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ರವಿ ಕೂಡ ಅಸುನೀಗಿದ್ದಾನೆ. ಇದನ್ನೂ ಓದಿ: 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ, ಈಗ ಋಣ ತೀರಿಸುವ ಸಮಯ ಬಂದಿದೆ: ರಮೇಶ್ ಕುಮಾರ್

    ಗದಿಗೆಪ್ಪ ಚಿಕ್ಕ ಟಂಟಂ ಇಟ್ಟುಕೊಂಡು ಬಾಡಿಗೆ ನಡೆಸುತ್ತಿದ್ದ. ಇದೇ ಆತನ ಕುಟುಂಬಕ್ಕೆ ಆಸರೆಯಾಗಿತ್ತು. ಆದರೆ ಇದೀಗ ಈ ವಾಹನದ ಮಾಲೀಕನೇ ಧಾರುಣವಾಗಿ ಸಾವನ್ನಪ್ಪಿದ್ದು, ಇಡೀ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಇನ್ನು ಬಾಳಿ ಬದುಕಬೇಕಾದ ರವಿ ಉದಯಕ್ಕೂ ಮುನ್ನವೇ ಅಸ್ತಂಗತನಾಗಿದ್ದಾನೆ. ಗ್ರಾಮಸ್ಥರು ಎರಡೂ ಶವಗಳನ್ನು ಧಾರವಾಡ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಪೊಲೀಸರ ಸಹಕಾರದೊಂದಿಗೆ ತೆಗೆದುಕೊಂಡು ಬಂದಿದ್ದರು. ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿದ್ಯುತ್ ಕಂಬಕ್ಕೆ ಕಟ್ಟಿ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ – ರಸ್ತೆಯಲ್ಲೇ ಧರಧರನೇ ಎಳೆದಾಡಿದ

    Live Tv
    [brid partner=56869869 player=32851 video=960834 autoplay=true]

  • ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕೆರೆ ನೀರು ಪಾಲಾದ ಯುವಕ

    ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕೆರೆ ನೀರು ಪಾಲಾದ ಯುವಕ

    ಹುಬ್ಬಳ್ಳಿ: ನೀರಸಾಗರ ಜಲಾಶಯದಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಯುವಕನೊಬ್ಬ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ನಡೆದಿದೆ.

    ಕಿರಣ್ ರಜಪೂತ(22) ಮೃತ ಯುವಕನಾಗಿದ್ದಾನೆ. ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ ನಿವಾಸಿಯಾಗಿರುವ ಕಿರಣ್, ಭಾನುವಾರ ತನ್ನ ಗೆಳೆಯರೊಡನೆ ಪ್ರವಾಸಕ್ಕೆಂದು ಹೋಗಿದ್ದ. ಜಲಾಶಯದ ದಡದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವ ವೇಳೆಯಲ್ಲಿ ನೀರಿನ ರಭಸ ಹೆಚ್ಚಾಗಿದ್ದರಿಂದ ಕಿರಣ್ ಕೊಚ್ಚಿ ಹೋಗಿದ್ದಾನೆ. ಇದನ್ನೂ ಓದಿ: ವರದಾ, ತುಂಗಭದ್ರಾ ನದಿಯಲ್ಲಿ ಹೆಚ್ಚಿದ ನೀರು – ಮೆಕ್ಕೆಜೋಳ ಸೇರಿ ವಿವಿಧ ಬೆಳೆ ಜಲಾವೃತ

     ಕಳೆದ 24 ಗಂಟೆಯಿಂದ ಕಿರಣ್‍ಗಾಗಿ ಹುಡುಕಾಟ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿಗೆ ಇದೀಗ ಮೃತದೇಹ ಪತ್ತೆಯಾಗಿದ್ದು, ಕಿರಣ್ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಉಕ್ಕಿ ಹರಿಯುವ ತುಂಗಭದ್ರಾ ನದಿಯಲ್ಲಿ ಪ್ರವಾಸಿಗರ ಮೋಜುಮಸ್ತಿ – ಮಿತಿಮೀರಿದ ಹುಚ್ಚಾಟ

    Live Tv
    [brid partner=56869869 player=32851 video=960834 autoplay=true]

  • ಗ್ರಾಹಕನ ಜೊತೆ ನಿರ್ಲಕ್ಷ್ಯ – SBI ಬ್ಯಾಂಕ್‌ಗೆ 1.10 ಲಕ್ಷ ರೂ. ದಂಡ

    ಗ್ರಾಹಕನ ಜೊತೆ ನಿರ್ಲಕ್ಷ್ಯ – SBI ಬ್ಯಾಂಕ್‌ಗೆ 1.10 ಲಕ್ಷ ರೂ. ದಂಡ

    ಧಾರವಾಡ: ಗ್ರಾಹಕರ ಜೊತೆ ನಿರ್ಲಕ್ಷ್ಮ ತೋರಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‍ಬಿಐ)ಗೆ 1 ಲಕ್ಷದ 10 ಸಾವಿರ ರೂ. ದಂಡವನ್ನು ಧಾರವಾಡದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ವಿಧಿಸಿದೆ.

    ಸಾಲದ ಬಾಕಿ ಅಥವಾ ಬೇರೆ ಯಾವುದೇ ರೀತಿಯ ಹಣ ಕೊಡುವುದು ಬಾಕಿ ಇರದಿದ್ದರೂ ಗ್ರಾಹಕರೊಬ್ಬರಿಗೆ ನಿಮ್ಮ ಹೆಸರಿನಲ್ಲಿ ನಮ್ಮ ಬ್ಯಾಂಕಿನಲ್ಲಿ ಸಾಲದ ಬಾಕಿ ಇದೆ. ನೀವು ಸುಸ್ತಿ ಬಾಕಿದಾರರಾಗಿದ್ದೀರಿ ಎಂದು ಧಾರವಾಡದ ಎಚ್.ಡಿ.ಎಮ್.ಸಿ ಮತ್ತು ಹುಬ್ಬಳ್ಳಿ ಕೇಶ್ವಾಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಿಂದ ನೋಟಿಸ್ ಕಳಿಸಲಾಗಿತ್ತು. ಇದನ್ನೂ ಓದಿ: ಪಾಪ, ಅವರಿಗೆ ದುಡ್ಡು ವಾಪಸ್ ಕೊಟ್ಟು ಕಳಿಸಿದ್ದೀವಿ: ಸಿದ್ದರಾಮಯ್ಯ 

    ಧಾರವಾಡದ ಯಾದಗಿರಿ ಚಾಳಿನ ಕರುಣಾಕರ ಶೆಟ್ಟಿ ಅವರಿಗೆ ಹಲವಾರು ಬಾರಿ ನೋಟಿಸ್ ಕೊಡಲಾಗಿತ್ತು. ಇದರಿಂದ ತನ್ನ ಗೌರವಕ್ಕೆ ಚ್ಯುತಿ ಬಂದಿದೆ ಮತ್ತು ತನಗೆ ಬ್ಯಾಂಕಿನವರಿಂದ ಸೇವಾ ನ್ಯೂನ್ಯತೆ ಆಗಿದೆ ಎಂದು ಬ್ಯಾಂಕ್ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಕರುಣಾಕರ ಶೆಟ್ಟಿ ಧಾರವಾಡದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.

    Sbi Foundation Day: A Look At The Spectacular Journey Of India'S Largest Lender

    ಈ ಕುರಿತು ವಿಚಾರಣೆ ನಡೆಸಿದ ಆಯೋಗ, ಯಾವುದೇ ರೀತಿಯ ಸಾಲ ಕೊಡುವುದು ಬಾಕಿ ಇರದಿದ್ದರೂ ಗ್ರಾಹಕ ಕರುಣಾಕರ ಶೆಟ್ಟಿಗೆ ಸುಸ್ತಿ ಬಾಕಿದಾರ ಇತ್ಯಾದಿಯಾಗಿ ಹೆಸರಿಸಿ, ಹಲವು ಬಾರಿ ನೋಟಿಸ್ ನೀಡಿರುವುದರಿಂದ ಗ್ರಾಹಕನ ವರ್ಚಸ್ಸಿಗೆ ಕುಂದು ಉಂಟಾಗಿದೆ. ಇದರ ಪರಿಣಾಮವಾಗಿ ಸೇವಾ ನ್ಯೂನ್ಯತೆ ಆಗಿದೆ ಎಂದು ಅಭಿಪ್ರಾಯಪಟ್ಟು ಸ್ಟೇಟ್ ಬ್ಯಾಂಕ್ ಅವರು ದೂರುದಾರ ಕರುಣಾಕರ ಶೆಟ್ಟಿಗೆ 1,10,000 ರೂ. ಪರಿಹಾರ ಕೊಡಬೇಕು ಎಂದು ತೀರ್ಪು ನೀಡಿದೆ. ಇದನ್ನೂ ಓದಿ:  44 ಕಿಮೀ ಸುತ್ತಾಡಿ ಕಾರಿನಲ್ಲಿಯೇ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರು ಅರೆಸ್ಟ್ 

    Live Tv
    [brid partner=56869869 player=32851 video=960834 autoplay=true]

  • ಪ್ರೇಯಸಿಯನ್ನು ಚಾಕುವಿನಿಂದ ಇರಿದು ಪೊಲೀಸರಿಗೆ ಶರಣಾದ

    ಪ್ರೇಯಸಿಯನ್ನು ಚಾಕುವಿನಿಂದ ಇರಿದು ಪೊಲೀಸರಿಗೆ ಶರಣಾದ

    ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಪ್ರೇಯಸಿಯನ್ನು ಚಾಕುವಿನಿಂದ ಇರಿದ ಪ್ರೇಮಿಯೊಬ್ಬ ಪೊಲೀಸರಿಗೆ ಶರಣಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡದಲ್ಲಿ ಮತ್ತೆ ನೆತ್ತರು ಹರಿದಿದ್ದು, ಪ್ರಿಯಕರ ವಿಜಯ್ ಕದಂ ತನ್ನ ಪ್ರೇಯಸಿ ಪದ್ಮಾಳನ್ನು ಚಾಕುವಿನಿಂದ ಇರಿದಿದ್ದಾನೆ. ಆದರೆ ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಈ ನಡುವೆ ಉಪನಗರ ಠಾಣೆಗೆ ವಿಜಯ್ ತಾನೇ ಹೋಗಿ ಶರಣಾಗಿದ್ದಾನೆ.

    ನಡೆದಿದ್ದೇನು?
    ರಾಮಸೇನಾ ಸಂಘಟನೆ ಧಾರವಾಡ ಜಿಲ್ಲಾಧ್ಯಕ್ಷನಾಗಿ ವಿಜಯ್ ಕೆಲಸ ಮಾಡುತ್ತಿದ್ದ. ಪದ್ಮಾ ಮತ್ತು ವಿಜಯ್ ಇಬ್ಬರು ಪ್ರೀತಿಸುತ್ತಿದ್ದು ಕಳೆದ 7 ವರ್ಷಗಳಿಂದ ಇಬ್ಬರು ಸಂಸಾರ ನಡೆಸುತ್ತಿದ್ದರು. ಆದರೆ ಇಬ್ಬರ ಮಧ್ಯೆ ಸಣ್ಣಪುಟ್ಟ ಜಗಳ ನಡೆಯುತ್ತಿತ್ತು. ಇದನ್ನೂ ಓದಿ:  ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡಲು RSS, SDPIನಿಂದ ಸಾಧ್ಯವಿಲ್ಲ: ಪಿಣರಾಯಿ ವಿಜಯನ್ 

    ಈ ಹಿನ್ನೆಲೆ ವಿಜಯ್ ಜಗಳದ ವೀಡಿಯೋ ಸಹ ಮಾಡಿದ್ದು, ಇಬ್ಬರು ವಾದ-ಪ್ರತಿವಾದ ಮಾಡುತ್ತಿರುವುದು ಸೆರೆಯಾಗಿದೆ. ಈ ವೇಳೆ ಪದ್ಮಾ ಕೈ ನರ ಕಟ್ ಮಾಡಿಕೊಳ್ಳುವ ಧಮಕಿ ಹಾಕಿದ್ದು, ಜಗಳ ತಾರಕಕ್ಕೇರಿ ಅದೇ ಚಾಕುದಿಂದ ವಿಜಯ್ ಚುಚ್ಚಿದ್ದಾನೆ.

    ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಪದ್ಮಾಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಪೊಲೀಸರು ರವಾನೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಲಿಸುತಿದ್ದ ಕಾರಿನಲ್ಲೇ ಹೃದಯಾಘಾತ – ಸ್ಥಳದಲ್ಲೇ ಸಾವನ್ನಪ್ಪಿದ ಇಂಜಿನಿಯರ್

    ಚಲಿಸುತಿದ್ದ ಕಾರಿನಲ್ಲೇ ಹೃದಯಾಘಾತ – ಸ್ಥಳದಲ್ಲೇ ಸಾವನ್ನಪ್ಪಿದ ಇಂಜಿನಿಯರ್

    ಧಾರವಾಡ: ಚಲಿಸುತಿದ್ದ ಕಾರಿನಲ್ಲೇ ಇಂಜಿನಿಯರ್‌ಗೆ ಹೃದಯಾಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

    ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಲೋಕನಾಥ್ ಗುತ್ತಲ್ (29) ಮೃತ ಇಂಜಿನಿಯರ್. ಧಾರವಾಡ ಜಿಲ್ಲಾ ಪಂಚಾಯತ್‍ನ ಇಂಜಿನಿಯರ್ ಆಗಿದ್ದ ಲೋಕನಾಥ್, ಕರ್ತವ್ಯದ ಮೇಲೆ ಹುಬ್ಬಳ್ಳಿಯಿಂದ ನವಲಗುಂದಗೆ ಹೊರಟಿದ್ದರು. ಈ ವೇಳೆ ನವಲಗುಂದ ತಾಲೂಕಿನ ಕರ್ಲವಾಡ ಗ್ರಾಮದ ಬಳಿ ಏಕಾಏಕಿ ಹೃದಯಾಘಾತ ಸಂಭವಿಸಿದೆ. ಇದನ್ನೂ ಓದಿ: ಹಿಂದೂ ಬಾಲಕಿಯ ಹೃದಯ ಮುಸ್ಲಿಂ ಯುವಕನಿಗೆ ಕಸಿ

    ಪರಿಣಾಮ ಕಾರ್ ರಸ್ತೆ ಪಕ್ಕ ಹೊಲಕ್ಕೆ ನುಗ್ಗಿದೆ. ಬಳಿಕ ಲೋಕನಾರಥ್‌ ಕಾರಿನಲ್ಲೇ ಜೀವ ಬಿಟ್ಟಿದ್ದಾರೆ. ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ನವಲಗುಂದ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇದನ್ನೂ ಓದಿ: ಮಳೆಯಿಂದಾಗಿ ರಾಜ್ಯದೆಲ್ಲೆಡೆ ತತ್ತರ – ಕರಾವಳಿ, ಮಲೆನಾಡಿನಲ್ಲಿ ಏನಾಗಿದೆ?

    Live Tv
    [brid partner=56869869 player=32851 video=960834 autoplay=true]

  • ವಿದ್ಯಾಕಾಶಿ ಜನರಿಗೆ ದೇವಸ್ಥಾನ ಕಟ್ಟಿಸೋದಾಗಿ ಹೇಳಿ ಹಣ ಪಡೆದಿದ್ದ ಚಂದ್ರಶೇಖರ್ ಗುರೂಜಿ ಹಂತಕ

    ವಿದ್ಯಾಕಾಶಿ ಜನರಿಗೆ ದೇವಸ್ಥಾನ ಕಟ್ಟಿಸೋದಾಗಿ ಹೇಳಿ ಹಣ ಪಡೆದಿದ್ದ ಚಂದ್ರಶೇಖರ್ ಗುರೂಜಿ ಹಂತಕ

    ಧಾರವಾಡ: ಸರಳವಾಸ್ತು ಚಂದ್ರಶೇಖರ್ ಗುರೂಜಿ ಕೊಲೆ ನಡೆದು ಇಂದಿಗೆ ನಾಲ್ಕು ದಿನ ಕಳೆದಿವೆ. ಈಗಾಗಲೇ ಆರೋಪಿಗಳಾದ ಮಹಾಂತೇಶ್ ಹಾಗೂ ಮಂಜುನಾಥ್ ಪೊಲೀಸ್ ಕಸ್ಟಡಿಯಲ್ಲಿದ್ದು, ತನಿಖೆ ಎದುರಿಸುತ್ತಿದ್ದಾರೆ. ಇಷ್ಟರಲ್ಲೇ ಕೊಲೆಗಾರ ಮಂಜುನಾಥ್ ಮರೇವಾಡ ಬಗ್ಗೆ ಇನ್ನು ಹಲವು ಅಂಶ ಬೆಳಕಿಗೆ ಬಂದಿದ್ದು, ಆತ ವಿದ್ಯಾಕಾಶಿ ಧಾರವಾಡದಲ್ಲಿ ಬಿಲ್ಡಿಂಗ್ ಕಟ್ಟುವ ಗುತ್ತಿಗೆ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ.

    ನಗರದ ಸಿದ್ಧಾರೂಢ ಕಾಲೋನಿಯಲ್ಲಿ ಒಡೆಯರ್ ಹಾಗೂ ಹಂಚನಾಳ ಮನೆಗಳನ್ನ ಕಟ್ಟುವ ಗುತ್ತಿಗೆ ಪಡೆದಿದ್ದ ಕೊಲೆಗಾರ ಮಂಜುನಾಥ್ ಮರೇವಾಡ, ಹಂಚಿನಾಳ ಅವರಿಂದ 13 ಲಕ್ಷ ಹಣ ಪಡೆದಿದ್ದಾನೆ. ಆದರೆ ಅವರ ಮನೆಯ 6 ಲಕ್ಷ ರೂ.ಗಷ್ಟೇ ಕೆಲಸ ಮಾಡಿದ್ದಾನೆ. ಅಲ್ಲದೇ ಒಡೆಯರ್ ಎನ್ನುವವರ ಮನೆಯ ಕೆಲಸ ಕೂಡಾ ಅರ್ಧಕ್ಕೆ ನಿಂತಿದೆ. ಇದೇ ಕಾಲೋನಿಯಲ್ಲಿ ಹಲವು ಬಿಲ್ಡಿಂಗ್ ಕೆಲಸ ಮಾಡಿದ್ದಕ್ಕೆ, ಇವನಿಗೆ ಕಾಲೋನಿಯಲ್ಲಿ ಸಿದ್ಧಾರೂಢರ ದೇವಸ್ಥಾನ ಕಟ್ಟುವ ಗುತ್ತಿಗೆ ಕೂಡಾ ನೀಡಲಾಗಿದೆ. ಇದನ್ನೂ ಓದಿ:  ವೀರ ಮದಕರಿ ನಾಯಕ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ – ಪ್ರೋಫೆಸರ್ ಕ್ಷಮೆಯಾಚನೆ 

    ಕಳೆದ ನಾಲ್ಕು ತಿಂಗಳ ಹಿಂದೆ 5 ಲಕ್ಷಕ್ಕೆ ದೇವಸ್ಥಾನ ಕಟ್ಟಿಸಿ ಕೊಡಬೇಕು ಎಂದು ಗಡುವನ್ನು ನೀಡಿ 50 ಸಾವಿರ ಮುಂಗಡ ಹಣ ಕೂಡಾ ಕೊಡಲಾಗಿದೆ. ಆದರೆ ಈತ ಗುರೂಜಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಈ ಹಣ ಕೊಟ್ಟವರಿಗೆ ದೊಡ್ಡ ಸಂಕಷ್ಟ ಬಂದು ಒದಗಿದೆ. ಅಲ್ಲದೇ ಕೆಲ ಕಾರ್ಮಿಕರ ಸಂಬಳ ಕೂಡಾ ಈತ ನೀಡಬೇಕಾಗಿದ್ದು, ಅದೂ ಕೂಡಾ ಮಂಜುನಾಥ್ ಉಳಿಸಿಕೊಂಡಿದ್ದಾನೆ.

    ಮಂಜುನಾಥ್ ಮರೇವಾಡ ಜೈಲು ಸೇರಿದ ಮೇಲೆ ಯಾವಾಗ ಅವನು ಅಲ್ಲಿಂದ ಬಿಡುಗಡೆಯಾಗಿ ಬಂದು ನಮ್ಮ ಕೆಲಸ ಮುಗಿಸಿಕೊಡಬೇಕು, ಯಾವಾಗ ನಾವು ಆ ಮನೆಯಲ್ಲಿ ಇರಬೇಕು ಎಂದು ಮನೆ ಗುತ್ತಿಗೆ ಕೊಟ್ಟ ಮಾಲೀಕರು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ದೇವಸ್ಥಾನದ ಕೆಲಸ ಕೂಡಾ ಇದೇ ರೀತಿಯಾಗಿದೆ ಎಂಬ ಮಾತುಗಳು ಹೇಳಿ ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮುಸ್ಲಿಮರು ಗೋಮಾಂಸ ತಿಂತಾರೆ, ದತ್ತಾತ್ರೇಯ ಪೀಠಕ್ಕೆ ಅವರಿಗೆ ಪ್ರವೇಶ ಬೇಡ: ಮುತಾಲಿಕ್‌

    ಮುಸ್ಲಿಮರು ಗೋಮಾಂಸ ತಿಂತಾರೆ, ದತ್ತಾತ್ರೇಯ ಪೀಠಕ್ಕೆ ಅವರಿಗೆ ಪ್ರವೇಶ ಬೇಡ: ಮುತಾಲಿಕ್‌

    ಧಾರವಾಡ: ಮುಸ್ಲಿಮರು ಗೋಮಾಂಸ ತಿಂತಾರೆ. ದತ್ತಾತ್ರೇಯ ಪೀಠ ಪ್ರವೇಶಿಸಿ ಅವರು ಅಪವಿತ್ರ ಮಾಡುವುದಕ್ಕೆ ಅವಕಾಶ ಕೊಡಬಾರದು ಎಂದು ಶ್ರೀರಾಮ ಸೇನೆ ಸಂಘಟನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಒತ್ತಾಯಿಸಿದರು.

    ನಗರದಲ್ಲಿ ಮಾತನಾಡಿದ ಅವರು, ನಿನ್ನೆ ಸಂಪುಟ ಸಭೆಯಲ್ಲಿ ದತ್ತಾತ್ರೇಯ ಪೀಠದ ಬಗ್ಗೆ ಒಂದು ನಿರ್ಣಯ ಕೈಗೊಂಡಿದ್ದಾರೆ. ಅದನ್ನು ನಾನು ಸ್ವಾಗತಿಸುತ್ತೇನೆ. ಬಹಳ ವರ್ಷಗಳಿಂದ ಅಲ್ಲಿ ಹಿಂದೂ ಅರ್ಚಕನ ನೇಮಕ ಆಗಬೇಕು ಹಾಗೂ ತ್ರಿಕಾಲ ಪೂಜೆ ಆಗಬೇಕು ಎಂದಿತ್ತು. ಅನಾಥವಾಗಿ ಬಿದ್ದಿದ್ದ ದತ್ತಾತ್ರೇಯ ಪೀಠದ ‌ಪಾದುಕೆ ಪೂಜೆ ಆಗಬೇಕು ಎಂಬ ಬೇಡಿಕೆ ಇತ್ತು. ನಿನ್ನೆ ಅದಕ್ಕೆ ನಿರ್ಣಯ ತೆಗೆದುಕೊಂಡಿದ್ದು ಸ್ವಾಗತಾರ್ಹ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 2023ರ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್‍ಗಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ಹೆಚ್‍ಡಿಕೆ

    ನಿರಂತರ ತ್ರಿಕಾಲ ಪೂಜೆ ಆದರೆ ಸರ್ವರಿಗೆ ಶಾಂತಿ, ಸಮಾಧಾನ, ಅಭಿವೃದ್ಧಿ ಸಿಗಲಿದೆ ಎಂಬ ನಂಬಿಕೆ ಇದೆ. ಈವರೆಗೆ ಆಗದೆ ಇರುವ ತ್ರಿಕಾಲ ಪೂಜೆಯು ಸರ್ಕಾರ ತೆಗೆದುಕೊಂಡ ನಿರ್ಣಯದಿಂದ ಆಗಬೇಕು. ಮುಸ್ಲಿಮರು ಮುಜಾವರ್‌ನಲ್ಲಿ ಮತ್ತೆ ಬಂದು ಅಪವಿತ್ರ ಮಾಡುವುದು ಬೇಡ. ಅವರು ಗೋಮಾಂಸ ತಿಂತಾರೆ, ದೇವರನ್ನು ನಂಬಲ್ಲ. ನಾಸ್ತಿಕವಾದಿಗಳು, ಅಲ್ಲಾ ಒಬ್ಬನೇ ದೇವರು, ಉಳಿದವರು ಕಾಫಿರ್ ಎನ್ನುವವರಿಗೆ ಅಲ್ಲಿ ಪ್ರವೇಶ ಬೇಡ. ಅವರು ಪ್ರವೇಶ ಮಾಡಿದರೆ ಅಪವಿತ್ರ ಆಗಲಿದೆ ಎಂದು ತಿಳಿಸಿದ್ದಾರೆ.

    ಮುಸ್ಲಿಮರು ನಾಗೇನಹಳ್ಳಿಯಲ್ಲಿರುವ ಬಾಬಾಬುಡನ್‌ಗಿರಿಗೆ ಹೋಗಿ ಪೂಜೆ ಮಾಡಲಿ. ಸರ್ಕಾರ ಅವರ ಜೊತೆ ಸಮಾಲೋಚನೆ ಮಾಡಿ ದಾಖಲೆ ತೋರಿಸಿ. ಮುಸ್ಲಿಮರು ನಾಗೇನಹಳ್ಳಿಯಲ್ಲಿ ಪೂಜೆ ಮಾಡುವಂತೆ ಮಾಡಿ. ಈ ಸಂಬಂಧ ಕೋರ್ಟ್‌ಗೆ ಅರ್ಜಿ ಹಾಕಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋಮಾದಲ್ಲಿರುವ ಮಗನ ಜೀವ ಉಳಿಸಲು ದೇವರ ಮೊರೆ ಹೋದ ತಾಯಿ – ಮಗು ಚೇತರಿಕೆ!

    Live Tv

  • ಕಸ ಎಸೆಯಲು ಹೋದ ಮಹಿಳೆ ಮೇಲೆ ಹಂದಿ ದಾಳಿ

    ಕಸ ಎಸೆಯಲು ಹೋದ ಮಹಿಳೆ ಮೇಲೆ ಹಂದಿ ದಾಳಿ

    ಧಾರವಾಡ: ಕಸ ಎಸೆಯಲೆಂದು ಹೋದಾಗ ಮಹಿಳೆಯೊಬ್ಬರ ಮೇಲೆ ಹಂದಿ ದಾಳಿ ನಡೆಸಿದ ಪರಿಣಾಮ ಕಾಲಿಗೆ ತೀವ್ರ ಗಾಯವಾಗಿರುವ ಘಟನೆ ಧಾರವಾಡ ನಗರದ ಗೌಳಿ ಗಲ್ಲಿಯಲ್ಲಿ ಸಂಭವಿಸಿದೆ.

    ಸಾಂದರ್ಭಿಕ ಚಿತ್ರ

    ಅನಿತಾ ಜಮಾದಾರ ಎಂಬವರು ಕಸ ಎಸೆಯಲೆಂದು ಹೋದಾಗ ಹಂದಿ ಏಕಾಏಕಿ ದಾಳಿ ನಡೆಸಿದೆ. ಇದರಿಂದ ಅವರ ಕೈ ಹಾಗೂ ಕಾಲಿಗೆ ತೀವ್ರ ಪರಿಚಿದ ಗಾಯಗಳಾಗಿವೆ. ಅವರಿಗೆ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಚಿತ್ರದುರ್ಗದಲ್ಲಿ ಹಾರಾಡಿದ ಮಾನವರಹಿತ ಯುದ್ಧ ವಿಮಾನ – DRDO ಪರೀಕ್ಷೆ ಯಶಸ್ವಿ

    ಗೌಳಿ ಗಲ್ಲಿಯಲ್ಲಿ ಹಂದಿಗಳ ಕಾಟ ಜೋರಾಗಿದ್ದು, ಸದ್ಯ ಅನಿತಾ ಅವರ ಮೇಲೆ ಹಂದಿ ದಾಳಿ ನಡೆಸಿದ್ದರಿಂದ ಅಲ್ಲಿನ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೂಡಲೇ ಮಹಾನಗರ ಪಾಲಿಕೆ ಹಂದಿ ಕಾಟಕ್ಕೆ ಮುಕ್ತಿ ನೀಡಬೇಕು ಎಂದು ಜನ ಆಗ್ರಹಿಸಿದ್ದಾರೆ. ಇದನ್ನೂ ಓದಿ: ದೇವೇಗೌಡ್ರು ಇಬ್ಬರ ಮೇಲೆ ಕೈ ಹಾಕ್ಕೊಂಡು ಹೋಗ್ತಾವ್ರೆ… ನಾಲ್ವರ ಮೇಲೆ ಹೋಗೋದು ಹತ್ತಿರದಲ್ಲೇ ಇದೆ: KN ರಾಜಣ್ಣ

    Live Tv