Tag: ಧಾರವಾಡ

  • ಕಾಂಗ್ರೆಸ್ ಕೃತ್ಯಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ: ಸೂಲಿಬೆಲೆ

    ಕಾಂಗ್ರೆಸ್ ಕೃತ್ಯಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ: ಸೂಲಿಬೆಲೆ

    ಧಾರವಾಡ: ಕಾಂಗ್ರೆಸ್ ಕಾರ್ಯಕರ್ತರು ವೀರ ಸಾವರ್ಕರ್ ಅವರ ಭಾವಚಿತ್ರ ಸುಟ್ಟ ಪ್ರಕರಣಕ್ಕೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಕಾಂಗ್ರೆಸ್‍ನವರ ಈ ವರ್ತನೆ ಹೊಸದೇನಲ್ಲ ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

    ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಾವರ್ಕರ್ ಮತ್ತು ರಾಷ್ಟ್ರಭಕ್ತರನ್ನು ಅವಮಾನಿಸುವ ಪ್ರಕ್ರಿಯೆ ಕಾಂಗ್ರೆಸ್‍ನಲ್ಲಿ ಯಾವಾಗಲೂ ಇದೆ. ದುರದೃಷ್ಟ ಎಂದರೆ ನಾವು ಧಾರವಾಡಕ್ಕೆ ಬಂದಾಗಲೇ ಹೀಗೆ ಆಗಿದೆ. ಧಾರವಾಡ ತಿಲಕರು ಬಂದು ಹೋದ ಜಾಗ. ಆಲೂರು ವೆಂಕಟರಾಯರು ತಿಲಕ್ ಅವರ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿದ ಜಾಗ. ಕರ್ನಾಟಕದ ಏಕೀಕರಣ ಚಿಂತನೆಯ ಬೀಜ ಹಾಕಿದ ಜಾಗ. ಈ ಇತಿಹಾಸಕ್ಕೆ ದೊಡ್ಡ ಗೌರವ ಕೊಟ್ಟು ಧಾರವಾಡಕ್ಕೆ ಬಂದಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಮುಂಬೈ ಪೊಲೀಸರಿಗೆ ಮತ್ತೆ ದಾಳಿ ಬೆದರಿಕೆ – ಆತಂಕ ಸೃಷ್ಟಿಸಿದ ಪಾಕ್ ಸಂದೇಶ

    ಕಾಂಗ್ರೆಸ್‍ನವರು ಇಂತಹ ಇತಿಹಾಸವನ್ನು ತುಚ್ಛವಾಗಿ ತೋರಿಸುತ್ತಿದ್ದಾರೆ. ಇತಿಹಾಸ ಪುರುಷರನ್ನು ಅವಮಾನಿಸುತ್ತಿದ್ದಾರೆ. ಇದು ಖಂಡನೀಯ. ಇದು ಕಾಂಗ್ರೆಸ್‍ಗೆ ಒಳ್ಳೆಯದಲ್ಲ. ನಾವು ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿದ್ದೇವೆ. ಇಂತಹ ಸಮಯದಲ್ಲಿ ಸಾವರ್ಕರ್‌ಗೆ ಅವಮಾನ ಮಾಡುತ್ತಿದ್ದಾರೆ. ಕಾಂಗ್ರೆಸ್‍ನ ಹಿರಿಯರು ತಿದ್ದಿ ಬುದ್ದಿ ಹೇಳಬೇಕಾದ ಅಗತ್ಯವಿದೆ. ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆದಿದ್ದನ್ನು ನಾವೂ ಸಮರ್ಥಿಸಿಕೊಳ್ಳುವುದಿಲ್ಲ. ಆದರೆ, ಸಾವರ್ಕರ್ ಅವರ ಭಾವಚಿತ್ರದ ಮೇಲೆ ಮೊಟ್ಟೆ ಒಡೆದಾಗ ಸಿದ್ದರಾಮಯ್ಯ ಮೌನವಾಗಿದ್ದಾರೆ. ಇದು ಬಹಳ ದುರದೃಷ್ಟಕರ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮೊಟ್ಟೆ ಎಸೆದ ಪ್ರಕರಣ : ಸಂಪತ್ ಯಾರು ಅಂತ ನಮಗೆ ಗೊತ್ತಿಲ್ಲ: ಕೆ.ಜಿ. ಬೋಪಯ್ಯ

    Live Tv
    [brid partner=56869869 player=32851 video=960834 autoplay=true]

  • ಸಾವರ್ಕರ್, ಗೃಹ ಸಚಿವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಕಾಂಗ್ರೆಸ್

    ಸಾವರ್ಕರ್, ಗೃಹ ಸಚಿವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಕಾಂಗ್ರೆಸ್

    ಧಾರವಾಡ: ವಿ.ಡಿ ಸಾವರ್ಕರ್ ಅವರ ಭಾವಚಿತ್ರದ ವಿವಾದ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ಧಾರವಾಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿ.ಡಿ ಸಾವರ್ಕರ್ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅಪಮಾನ ಮಾಡಿದ್ದಾರೆ.

    ಪ್ರತಿಭಟನೆ ನೆಪದಲ್ಲಿ ಸಾವರ್ಕರ್ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಮೊಟ್ಟೆ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಾವರ್ಕರ್ ಅವರ ಭಾವಚಿತ್ರವನ್ನು ಬೂಟುಗಾಲಿನಿಂದ ತುಳಿದು ಅಪಮಾನ ಮಾಡಿ, ಧಿಕ್ಕಾರ ಕೂಗಿದ್ದಾರೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಕರ್ತವ್ಯ ಲೋಪ ಆರೋಪ – 1,500 ಪುಟಗಳ ದಾಖಲೆ ಸಲ್ಲಿಸಿದ ಸಾ.ರಾ.ಮಹೇಶ್

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಕೊಡಗಿನ ಮಳೆಹಾನಿ ಪ್ರದೇಶಗಳ ಭೇಟಿಗೆ ತೆರಳಿದ್ದ ಸಂದರ್ಭದಲ್ಲಿ ಹಿಂದೂಪರ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದರು. ಇದಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಿ, ರಾತ್ರಿಯೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಘಟನೆ ಸಂಬಂಧ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಆಕ್ರೋಶ ಮುಂದುವರಿಸಿದ್ದು, ಬಿಜೆಪಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

    ಧಾರವಾಡ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಬಂದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಪ್ರತಿಕೃತಿಯನ್ನೂ ದಹಿಸಿದರು. ಈ ವೇಳೆ ವೀರ ಸಾವರ್ಕರ್ ಅವರ ಭಾವಚಿತ್ರವನ್ನೂ ಸುಟ್ಟು, ಅದರ ಮೇಲೆ ಮೊಟ್ಟೆ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗಾಂಧಿ ಭಾವಚಿತ್ರಕ್ಕೆ ಹಾನಿ – ರಾಹುಲ್‌ ಗಾಂಧಿ ಕಚೇರಿ ಸಿಬ್ಬಂದಿ ಸೇರಿ 4 ಮಂದಿ ಅರೆಸ್ಟ್‌

    ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಸಾವರ್ಕರ್ ಭಾವ ಚಿತ್ರ ಸುಟ್ಟಿದ್ದು ನಾನು ನೋಡಿಲ್ಲ ಎಂದಿದ್ದಾರೆ. ಅಲ್ಲದೇ ನಮ್ಮ ಕಾರ್ಯಕರ್ತರು ಅದನ್ನು ಮಾಡಿಲ್ಲ, ಬಿಜೆಪಿ ಕಾರ್ಯಕರ್ತರೇ ಅದನ್ನ ಮಾಡಿರಬೇಕು, ಅಂತಹ ಸಂಸ್ಕೃತಿ ನಮ್ಮದಲ್ಲ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಧಾರವಾಡ ಕಾಲೇಜಿನಲ್ಲಿ ಹೇಯಕೃತ್ಯ- ಆಡಳಿತ ಮಂಡಳಿ ಅಧ್ಯಕ್ಷನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ

    ಧಾರವಾಡ ಕಾಲೇಜಿನಲ್ಲಿ ಹೇಯಕೃತ್ಯ- ಆಡಳಿತ ಮಂಡಳಿ ಅಧ್ಯಕ್ಷನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ

    ಧಾರವಾಡ: ವಿದ್ಯಾಕಾಶಿ ಅಂತಾನೇ ಫೇಮಸ್. ಆದರೆ ಈ ವಿದ್ಯಾನಗರಿಯ ಕಾಲೇಜೊಂದರಲ್ಲಿ ಹೇಯ ಕೃತ್ಯವೊಂದು ನಡೆದಿದೆ. ಈ ಹೇಯ ಕೃತ್ಯದಿಂದ ಧಾರವಾಡ ಖ್ಯಾತಿಗೆ ಮಸಿ ಬಳಿದಂತಾಗಿದೆ.

    ಹೌದು. ಧಾರವಾಡದ ವಿಶ್ವೇಶ್ವರಯ್ಯ ವಿಜ್ಞಾನ ಪಿಯು ಕಾಲೇಜ್‍ನಲ್ಲಿ ವಿದ್ಯಾರ್ಜನೆ ಮಾಡುವ ಜಾಗದಲ್ಲಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ಶೋಷಣೆ ಮಾಡುತ್ತಿರೋ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷನ ವಿರುದ್ಧವೇ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿರೋದು ತಲೆತಗ್ಗಿಸುವ ವಿಚಾರವಾಗಿದೆ.

    ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿಯರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ಯಡವಣ್ಣವರ ಹಾಗೂ ಪ್ರಾಚಾರ್ಯ ಮಹದೇವ ಕುರವತ್ತಿಗೌಡರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೇ ಸಂಸ್ಥೆಯ ಅಧ್ಯಕ್ಷ ಬಸವರಾಜ್ ಪರಾರಿಯಾಗಿದ್ದು, ಪ್ರಾಚಾರ್ಯ ಮಹದೇವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಕಾಲೇಜ್ ಎದುರು ಜಮಾಯಿಸಿದ ಎಬಿವಿಪಿ ಕಾರ್ಯಕರ್ತರು, ಪ್ರತಿಭಟನೆ ಸಹ ನಡೆಸಿ, ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಿಶ್ವೇಶ್ವರಯ್ಯ ಪಿಯು ವಿಜ್ಞಾನ ಕಾಲೇಜ್‍ನ ಅಧ್ಯಕ್ಷನ ವರ್ತನೆಯ ಬಗ್ಗೆ ನೊಂದ ವಿದ್ಯಾರ್ಥಿನಿ ಎಫ್‍ಐಆರ್‍ನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ವಿದ್ಯಾರ್ಥಿನಿಯನ್ನು ಪುಸಲಾಯಿಸಿ ದಾಂಡೇಲಿಗೆ ಕರೆದುಕೊಂಡು ಹೋಗಿ ಜ್ಯೂಸ್ ಅಂತಾ ಹೇಳಿ ಬಿಯರ್ ಕುಡಿಸಿ, ಆಕೆ ನಿದ್ದೆಗೆ ಜಾರಿದಾಗ ದೈಹಿಕ ಸಂಪರ್ಕ ಮಾಡಿದ್ದಾನಂತೆ. ಇಂತಹ ನೀಚ ಕೃತ್ಯದಿಂದ ಬೇಸತ್ತ ವಿದ್ಯಾರ್ಥಿನಿಯ ನೋವು ಕೇಳಬೇಕಾದ ಪ್ರಾಚಾರ್ಯನೇ ಕಾಮುಕ ಅಧ್ಯಕ್ಷನ ಜೊತೆ ವಿದ್ಯಾರ್ಥಿನಿಯರನ್ನು ಕಳುಹಿಸಿ ಕೊಡುತ್ತಿದ್ದ ಎನ್ನಲಾಗಿದೆ.

    ವಿಶ್ವೇಶ್ವರಯ್ಯ ಕಾಲೇಜ್‍ನ ವಿದ್ಯಾರ್ಥಿಗಳು ಮತ್ತು ಪಾಲಕರು ಡಿಡಿಪಿಯು ಕಚೇರಿಗೆ ಕೂಡಾ ದೂರು ನೀಡಿದ್ದು, ಕಾಲೇಜ್‍ನ್ನು ಸರ್ಕಾರ ವಶಕ್ಕೆ ಪಡೆಯಬೇಕೆಂಬ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರಭಾರ ಡಿಡಿಪಿಯು ಮಾತನಾಡಿ, ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳುವುದಾಗಿದೆ ತಿಳಿಸಿದ್ದಾರೆ. ಇದನ್ನೂ ಓದಿ: ಮಲಗಿದ್ದ ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ಬರ್ಬರ ಹತ್ಯೆಗೈದ ಮಗ

    ಇಂತಹ ನೀಚ ಕೃತ್ಯದಿಂದ ಇಲ್ಲಿಗೆ ಕಲಿಯಲು ಬಂದಿರೋ ಹೆಣ್ಣು ಮಕ್ಕಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸದ್ಯಕ್ಕೆ ಆಯಾಕಾಲೇಜ್‍ಗಳಲ್ಲಿ ವಿದ್ಯಾರ್ಥಿನಿಯರ ದೂರು ಕೇಳೋಕೆ ಅಂತಾನೇ ಮಹಿಳಾ ಸೆಲ್ ಕಡ್ಡಾಯವಾಗಿ ಮಾಡಬೇಕು. ಆದರೆ ಆ ಕಾರ್ಯ ಧಾರವಾಡದಲ್ಲಿ ಆಗದೇ ಇರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ

    Live Tv
    [brid partner=56869869 player=32851 video=960834 autoplay=true]

  • ನಾನು ಉತ್ಸವ ಮಾಡೋಕೆ ಹೋಗಿಲ್ಲ- ಸಚಿವರು ಕಾಣೆಯಾಗಿದ್ದಾರೆ ಎಂದ ಕಾಂಗ್ರೆಸ್‌ಗೆ ಬಿ.ಸಿ ಪಾಟೀಲ್ ಟಾಂಗ್

    ನಾನು ಉತ್ಸವ ಮಾಡೋಕೆ ಹೋಗಿಲ್ಲ- ಸಚಿವರು ಕಾಣೆಯಾಗಿದ್ದಾರೆ ಎಂದ ಕಾಂಗ್ರೆಸ್‌ಗೆ ಬಿ.ಸಿ ಪಾಟೀಲ್ ಟಾಂಗ್

    ಧಾರವಾಡ: ನಾನು ಯಾವುದೇ ಶಿವಕುಮಾರ ಉತ್ಸವ, ಸಿದ್ದರಾಮೋತ್ಸವ ಮಾಡಲು ಹೋಗಿರಲಿಲ್ಲ. ಗ್ಲೋಬಲ್ ಸಮಿತಿ ಸಭೆಗೆ ಹೋಗಿದ್ದೆ. ಅಲ್ಲಿ ಕೃಷಿಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳನ್ನು ಮಾಡಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿಕೆ ನೀಡಿದರು.

    ಕೃಷಿ ಸಚಿವರು ಕಾಣೆಯಾಗಿದ್ದಾರೆ, ಅವರನ್ನು ಹುಡುಕಿಕೊಡಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ್ದಕ್ಕೆ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಪಾಟೀಲ್, ಆರ್ಗಾನಿಕ್ ಬಯೋಫ್ಯಾಕ್ಟ್ಸ್‌ನಲ್ಲಿ ಗ್ಲೋಬಲ್ ಸಮಿತಿ ಸಭೆಗೆ ನಾನು ಹೋಗಿದ್ದೆ. ಸಭೆಗೆ ಹೋಗಿದ್ದರೂ ಅಧಿಕಾರಿಗಳೊಂದಿಗೆ ನಾನು ನಿರಂತರವಾಗಿ ಸಂಪರ್ಕದಲ್ಲಿದ್ದೆ. ಕಾಂಗ್ರೆಸ್‌ನವರಿಗೆ ಟೀಕೆ ಮಾಡುವುದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಡಿಕೆಶಿ ಭೇಟಿಗೆ ಬಂದ ಮಧ್ಯಪ್ರದೇಶದ ಮಹಿಳೆ ಕಣ್ಣೀರು

    ಕಾಂಗ್ರೆಸ್‌ನವರ ಹಾಗೆ ಉತ್ಸವ ಮಾಡಿಕೊಳ್ಳುತ್ತಾ ಹೋದರೆ ಜನ ಮೆಚ್ಚುವುದಿಲ್ಲ. ನಾವು ಜನಪರ ಕೆಲಸಗಳನ್ನು ಮಾಡಿ ಜನರ ಬಳಿ ಹೋಗುತ್ತೇವೆ. ಕಾಂಗ್ರೆಸ್‌ನವರ ಹಾಗೆ ಉತ್ಸವಗಳನ್ನು ನಾವು ಮಾಡುವುದಿಲ್ಲ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಗಟ್ಟಿಯಾಯ್ತು ಡಿಕೆ, ಸಿದ್ದು ಜೋಡಿ- ಪರಸ್ಪರ ಟೋಪಿ ಹಾಕಿಕೊಂಡ ನಾಯಕರು

    ನಮ್ಮ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ರೈತರಿಗೆ ಡೀಸೆಲ್ ಸಬ್ಸಿಡಿ, ವಿದ್ಯಾನಿಧಿ ಕೊಡುವ ಕೆಲಸ ಮಾಡಿದೆ. ಜನರು ಉತ್ಸವ ನೋಡಿ ಸಂತೋಷ ಪಡಬಹುದು, ಆದರೆ ಅವರು ಕೆಲಸ ಮಾಡುವವರ ಕೈ ಮಾತ್ರ ಹಿಡಿಯುತ್ತಾರೆ ಎಂದು ಬಿ.ಸಿ ಪಾಟೀಲ್ ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ರಕ್ತ ಚೆಲ್ಲಿದ ಇರಾನಿ ಜನ – ಧಾರವಾಡದಲ್ಲಿ ವಿಶಿಷ್ಟವಾಗಿ ಮೊಹರಂ ಆಚರಣೆ

    ರಕ್ತ ಚೆಲ್ಲಿದ ಇರಾನಿ ಜನ – ಧಾರವಾಡದಲ್ಲಿ ವಿಶಿಷ್ಟವಾಗಿ ಮೊಹರಂ ಆಚರಣೆ

    ಧಾರವಾಡ: ಭಾವೈಕ್ಯತೆ ಹಾಗೂ ತ್ಯಾಗದ ಪ್ರತೀಕ ಈ ಮೊಹರಂ ಹಬ್ಬ. ಹಸೇನ್ ಹುಸೇನ್‌ರ ತ್ಯಾಗವನ್ನು ನೆನಪಿಸುವ ಹಬ್ಬವೂ ಹೌದು. ಅದರಲ್ಲೂ ಧಾರವಾಡದಲ್ಲಿ ನಡೆಯುವ ಈ ವಿಶಿಷ್ಟ ಆಚರಣೆ ಗಮನಸೆಳೆದಂತೆ ಭಯವೂ ಹುಟ್ಟಿಸಿದೆ.

    ಹೌದು ಹಸೇನ್ ಹುಸೇನ್‌ರ ತ್ಯಾಗವನ್ನು ನೆನಪಿಸುವುದಕ್ಕೋಸ್ಕರ ಧಾರವಾಡದ ಇರಾನಿ ಸಮುದಾಯದ ಜನ ತಮ್ಮ ರಕ್ತವನ್ನೇ ಚೆಲ್ಲಿದ್ದಾರೆ. ಪ್ರತಿವರ್ಷ ಮೊಹರಂ ಹಬ್ಬದಂದು ಇವರು ತಮ್ಮ ಎದೆಗೆ ಬ್ಲೇಡ್‌ನಿಂದ ಹೊಡೆದುಕೊಳ್ಳುವ ಮೂಲಕ ರಕ್ತ ಚೆಲ್ಲಿ ಮೊಹರಂ ಹಬ್ಬವನ್ನು ಆಚರಿಸಿ, ತ್ಯಾಗದ ಸಂದೇಶ ಸಾರುತ್ತಾರೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಗಟ್ಟಿಯಾಯ್ತು ಡಿಕೆ, ಸಿದ್ದು ಜೋಡಿ- ಪರಸ್ಪರ ಟೋಪಿ ಹಾಕಿಕೊಂಡ ನಾಯಕರು

    ಹಾಗೆಯೇ ಇಂದು ನಡೆದ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಇರಾನಿ ಸಮುದಾಯದ ಜನ ನಗರದ ಜನ್ನತನಗರದಿಂದ ಹೊಸಯಲ್ಲಾಪುರದವರೆಗೆ ಪಾಂಜಾಗಳ ಮೆರವಣಿಗೆ ಮಾಡಿದರು. ಈ ಮೆರವಣಿಗೆಯಲ್ಲಿ ಇವರು ಬ್ಲೇಡ್‌ನಿಂದ ತಮ್ಮ ಎದೆಗೆ ಹೊಡೆದುಕೊಂಡು ರಕ್ತ ಚೆಲ್ಲುವ ಮೂಲಕ ಹಬ್ಬವನ್ನು ಆಚರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಈದ್ಗಾ ಯಾರ ಪಿತ್ರಾರ್ಜಿತ ಆಸ್ತಿಯೂ ಅಲ್ಲ: ಮುತಾಲಿಕ್

    ಈದ್ಗಾ ಯಾರ ಪಿತ್ರಾರ್ಜಿತ ಆಸ್ತಿಯೂ ಅಲ್ಲ: ಮುತಾಲಿಕ್

    ಧಾರವಾಡ: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಇಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿಕೆಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿರುಗೇಟು ನೀಡಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಈದ್ಗಾ ಮೈದಾನ ನಿಮ್ಮ ಆಸ್ತಿನೂ ಅಲ್ಲ, ನಿಮ್ಮ ಪಿತ್ರಾರ್ಜಿತ ಆಸ್ತಿನೂ ಅಲ್ಲ, ವಕ್ಫ್ ಬೋರ್ಡ್‍ಗೆ ಸೇರಿದ್ದೂ ಅಲ್ಲ, ಮುಸ್ಲಿಂ, ಹಿಂದೂಗಳಿಗೆ ಸೇರಿದ್ದೂ ಅಲ್ಲ. ಅದು ಸರ್ಕಾರದ ಜಾಗ, ಸರ್ಕಾರಿ ಜಾಗದಲ್ಲಿ ನೀವು ನಮಾಜ್ ಮಾಡುತ್ತಾ ಬಂದಿದ್ದೀರಿ. ವಿಧಿ ವಿಧಾನದ ಮೂಲಕ ವರ್ಷಕ್ಕೆ 2 ಬಾರಿ ನಮಾಜ್ ಮಾಡುತ್ತಾ ಬಂದಿದ್ದೀರಿ, ಹಾಗಾದರೆ ಗಣೇಶೋತ್ಸವಕ್ಕೆ ನಿಮ್ಮ ವಿರೋಧ ಯಾಕೆ ಎಂದು ಪ್ರಶ್ನಿಸಿದರು.

    ಶಾಸಕ ಜಮೀರ್ ಅಹ್ಮದ್ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ನೀವು ಕೇವಲ ಮುಸ್ಲಿಂ ವೋಟಿನ ಮೇಲೆ ಗೆದ್ದಿಲ್ಲ, ನೀವು ಮುಸ್ಲಿಂರಿಂದ ಮಾತ್ರ ಗೆದ್ದಿಲ್ಲ, ನೀವು ಮುಸ್ಲಿಂ ಶಾಸಕರಲ್ಲ, ನೀವು ಚಾಮರಾಜಪೇಟೆ ಶಾಸಕ, ನಿಮಗೆ ಹಿಂದೂಗಳೂ ವೋಟು ಹಾಕಿದ್ದಾರೆ ನೆನೆಪಿಟ್ಟುಕೊಳ್ಳಿ ಎಂದ ಅವರು, ಇನ್ನೊಮ್ಮೆ ನಿಮ್ಮಿಂದ ಇಂತಹ ಹೇಳಿಕೆ ಬರಬಾರದು. ಈಗ ಹೇಳಿರುವ ಹೇಳಿಕೆಯನ್ನು ನೀವು ವಾಪಸ್ ಪಡೆಯಬೇಕು, ಹಿಂದೂಗಳಿಗೆ ಕ್ಷಮೆ ಕೇಳಬೇಕು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಎಲೆಕ್ಟ್ರಿಕ್ ರಿಕ್ಷಾ ಚಾರ್ಜಿಂಗ್ ವೇಳೆ ವಿದ್ಯುತ್ ಶಾಕ್ – ವ್ಯಕ್ತಿ ಸಾವು

    ಅದೇ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡುತ್ತೇವೆ. ತಾಕತ್ತಿದ್ದರೆ ಅದನ್ನು ವಿರೋಧಿಸಿ. ನಿಮ್ಮ ಈ ಹೇಳಿಕೆಯಿಂದ ಅಶಾಂತಿ ಮತ್ತು ಗಲಭೆ ಸೃಷ್ಟಿ ಮಾಡುತ್ತಿದ್ದೀರಿ. ಮುಂಬರುವ ಚುನಾವಣೆಯಲ್ಲಿ ಜಮೀರ್‍ನನ್ನು ಹಿಂದೂಗಳು ಸೋಲಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಅವಧಿಯಲ್ಲಿ ದೇಶ ಸೋತಿತ್ತು – ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಗೆದ್ದಿದೆ: ಸುನಿಲ್ ಕುಮಾರ್

    Live Tv
    [brid partner=56869869 player=32851 video=960834 autoplay=true]

  • SDPI – PFI ಸಂಘಟನೆಯವರು ಕಂಡರೆ ನುಗ್ಗಿ ಹೊಡೆಯುತ್ತೇವೆ: ಕುಲಕರ್ಣಿ

    SDPI – PFI ಸಂಘಟನೆಯವರು ಕಂಡರೆ ನುಗ್ಗಿ ಹೊಡೆಯುತ್ತೇವೆ: ಕುಲಕರ್ಣಿ

    ಧಾರವಾಡ: ದೇಶದಲ್ಲಿ ಕರ್ನಾಟಕವೂ ಸೇರಿ ಹಲವು ರಾಜ್ಯಗಳಲ್ಲಿ ನಡೆದ ಹಿಂದೂ ಕಾರ್ಯಕರ್ತರ ಕೊಲೆಯಲ್ಲಿ ಬಹುತೇಕ ಪಿಎಫ್‍ಐ ಹಾಗೂ ಎಸ್‍ಡಿಪಿಐ ಸಂಘಟನೆಗಳ ಕೈವಾಡವೇ ಇದೆ. ಆದ್ದರಿಂದ ಈ ಸಂಘಟನೆಗಳನ್ನು ಬ್ಯಾನ್ ಮಾಡದೇ ಹೋದಲ್ಲಿ ಆ ಸಂಘಟನೆಗಳ ಕಾರ್ಯಕರ್ತರನ್ನು ನಾವೇ ನುಗ್ಗಿ ಹೊಡೆಯಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘಟನೆಗಳು ಅಶಾಂತಿ ಸೃಷ್ಟಿಸುವುದರ ಜೊತೆಗೆ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮೋದಿ ಮುಂದೆ ರಾಹುಲ್ ಗಾಂಧಿ ಜೀರೋ: ರೇಣುಕಾಚಾರ್ಯ

    ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆಗಳನ್ನು ಕೂಡಲೇ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.  ಇದನ್ನೂ ಓದಿ: ಪತ್ನಿ ಸಂಬಂಧಿ ಜೊತೆ ಲವ್ವಿ-ಡವ್ವಿ, ವೇಶ್ಯೆ ಪ್ರೀತಿಗೆ ಬಿದ್ದು ಆದ ಸೈಕೋ ಕಿಲ್ಲರ್ – ಮಂಡ್ಯದಲ್ಲೊಂದು ಮರ್ಡರ್ ಮಿಸ್ಟ್ರಿ

    ಈ ಎರಡೂ ಸಂಘಟನೆಯವರು ಭಾರತವನ್ನು 2047ಕ್ಕೆ ಇಸ್ಲಾಮೀಕರಣಗೊಳಿಸುವ ಉದ್ದೇಶ ಹೊಂದಿದ್ದಾರೆ. ಕೇರಳ ರಾಜ್ಯದ ಮುಖ್ಯಮಂತ್ರಿ ಪೀಣರಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಅಚ್ಯುತನ್ ಇಬ್ಬರೂ ಪಿಎಫ್‍ಐ ಹಾಗೂ ಎಸ್‍ಡಿಪಿಐ ಸಂಘಟನೆಗಳನ್ನು ಬ್ಯಾನ್ ಮಾಡುವಂತೆ ಕೇಂದ್ರಕ್ಕೆ ಒತ್ತಾಯ ಮಾಡಿದ್ದಾರೆ. ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಈ ಸಂಘಟನೆಗಳನ್ನು ಬ್ಯಾನ್ ಮಾಡುವಂತೆ ಒತ್ತಾಯ ಮಾಡಿತ್ತು. ಈಗ ಇದೇ ಪಕ್ಷ ಅಧಿಕಾರದಲ್ಲಿದ್ದು, ಈ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಣೇಶ ಕೂರಿಸಲು ಅನುಮತಿ ತೆಗೆದುಕೊಳ್ಳಬೇಡಿ: ಪೊಲೀಸರು, ಸರ್ಕಾರಕ್ಕೆ ಮುತಾಲಿಕ್‌ ಸವಾಲು

    ಗಣೇಶ ಕೂರಿಸಲು ಅನುಮತಿ ತೆಗೆದುಕೊಳ್ಳಬೇಡಿ: ಪೊಲೀಸರು, ಸರ್ಕಾರಕ್ಕೆ ಮುತಾಲಿಕ್‌ ಸವಾಲು

    ಧಾರವಾಡ: ಗಣೇಶ ಕೂರಿಸಲು ಯಾರು ಕೂಡ ಅನುಮತಿ ತೆಗೆದುಕೊಳ್ಳಲು ಹೋಗಬೇಡಿ. ಮೈಕ್‌ ಹಾಕಲು ನಾನು ಸಹ ಅನುಮತಿ ಮೊರೆ ಹೋಗುವುದಿಲ್ಲ ಎಂದು ಪೊಲೀಸರು ಹಾಗೂ ಸರ್ಕಾರಕ್ಕೆ ಶ್ರೀರಾಮ ಸೇನೆ ಸಂಘಟನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಸವಾಲು ಹಾಕಿದ್ದಾರೆ.

    ಗಣೇಶೋತ್ಸವ ಕುರಿತು ಮಾತನಾಡಿದ ಅವರು, ಗಣೇಶೋತ್ಸವ ಧಾರ್ಮಿಕ ಶಾಸ್ತ್ರೋಕ್ತ ವಿಧಿ‌ ವಿಧಾನಗಳ ಪ್ರಕಾರ ನಡೆದುಕೊಂಡು ಬಂದ ಸಂಪ್ರದಾಯ. ಜಾತಿ, ಧರ್ಮ ಬಿಟ್ಟು ಎಲ್ಲರೂ ಆಚರಿಸಿಕೊಂಡು ಬಂದಿದ್ದಾರೆ. ಗಣೇಶೋತ್ಸವಕ್ಕೆ ಕರ್ನಾಟಕದಲ್ಲಿ ಸರ್ಕಾರದಿಂದ ಕಿರಿಕಿರಿಯಾಗುತ್ತಿದೆ. ಯಾಕಾದ್ರು ಗಣಪತಿ‌ ಪ್ರತಿಷ್ಠಾಪನೆ ಮಾಡಬೇಕು ಎನ್ನುವಂತೆ ಆಗಿದೆ. ಸರ್ಕಾರ ನಿರ್ಬಂಧ ಹಾಕಬಾರದು. ಗಣೇಶೋತ್ಸವಕ್ಕೆ ಮುಕ್ತ‌ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹಮಾರೆ ಪಾರ್ಟಿ ಮೆ ಕ್ಯಾ ಚಲ್ ರಹಾಹೈ ಬೊಮ್ಮಾಯಿ ಜೀ?- CMಗೆ ಅಮಿತ್ ಶಾ ಫುಲ್ ಕ್ಲಾಸ್

    ಪರಿಸರ ಹಾಗೂ ಶಬ್ದ ಮಾಲಿನ್ಯದ ಬಗ್ಗೆ ವಿಚಾರ ಮಾಡೋಣ. ನಮ್ಮ ಉತ್ಸಾಹಕ್ಕೆ ಭಂಗ ತರುವಂತಹ ಕಾರ್ಯವನ್ನು ವಿರೋಧಿಸುತ್ತೇವೆ. ಎಷ್ಟೊಂದು ಕಡೆ ಅನುಮತಿ ಪಡೆಯಬೇಕು? ವಿದ್ಯುತ್, ಪೆಂಡಾಲ್, ಪೊಲೀಸ್, ಪಾಲಿಕೆ ಹಾಗೂ ಅಗ್ನಿಶಾಮಕ ದಳದ ಅನುಮತಿ ಪಡೆಯಬೇಕು. ಇದಕ್ಕೆಲ್ಲ ಓಡಾಡಬೇಕಾಗಿದೆ. ಇದರ ಮಧ್ಯೆ ಪೊಲೀಸರ ಕಿರಿಕಿರಿ ಹೆಚ್ಚಾಗಿದೆ. ನಮಗೆ ಸ್ವಾತಂತ್ರ್ಯ ಇಲ್ಲಾ? ಈ ರೀತಿ ಕಟ್ಟಪ್ಪಣೆ ಹಾಕಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಈಗಲೇ ಡಿಸಿಗಳ ಸಭೆ ಕರೆದು ಅನುಮತಿ ಕೊಡಿ. ಒಂದೇ ಕಡೆ ಅನುಮತಿ ಪಡೆಯವಂತೆ ಮಾಡಿ. ನಮ್ಮನ್ನು ಸುತ್ತಿಸಿ ಸತಾಯಿಸಬೇಡಿ. ಕಾಂಗ್ರೆಸ್‌ನವರು ಇದ್ದಾಗ ಇದನ್ನೇ ಮಾಡಿದ್ರು. ಈಗ ನೀವು ಅದನ್ನೇ ಮಾಡುತಿದ್ದೀರಿ. ನಿಮ್ಮ ಹರಕು ಬಾಯಿ ಮಾತು ನಮಗೆ ಬೇಡ. ಡಿಜೆ ಹಾಕುವುದು ಬೇಡ ಅಂತಾ ನಾನು ಕೂಡಾ ವಿನಂತಿ ಮಾಡುತ್ತೇನೆ. ನಮಗೆ ಕಿರಿಕಿರಿ ಕೊಟ್ಟರೆ ದೊಡ್ಡ ಆಂದೋಲನ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮಡಿಕೇರಿಯಲ್ಲಿ ಮಧ್ಯರಾತ್ರಿ ಜಲಸ್ಫೋಟ – ಭಾರೀ ಶಬ್ದದೊಂದಿಗೆ ಸಮುದ್ರದಂತೆ ಉಕ್ಕಿ ಬಂದ ಪ್ರವಾಹ

    ಹಿಂದೂ ವ್ಯಾಪಾರಿಗಳ ಕಡೆ ಮಾತ್ರ ವ್ಯಾಪಾರ ಮಾಡಿ. ಹೂವು ,ಹಣ್ಣು ಎಲ್ಲ ಹಿಂದೂಗಳ ಕಡೆ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರಲ್ಲದೇ, ಹಿಂದಿನ ಧಾರವಾಡ ಡಿಸಿ ಪಿಒಪಿ ಗಣೇಶ ರದ್ದು ಮಾಡಿದ್ದರು. ಅದನ್ನ ಈ ಡಿಸಿ ಕೂಡಾ ರದ್ದು ಮಾಡಬೇಕು. ಎಲ್ಲಿಯಾದರೂ ಆ ಮಾದರಿ ಗಣೇಶ ಮೂರ್ತಿ ಮಾರಾಟ ಮಾಡಿದರೆ ನಾವೇ ದಾಳಿ ಮಾಡುತ್ತೇವೆ. ಜನರು ಮೋಸ ಹೋಗಬೇಡಿ, ಪಿಒಪಿ ಗಣಪತಿ ನಿಮಗೆ ಶಾಪ ಕೊಡ್ತಾನೆ. ಮಣ್ಣಿನ ಗಣಪತಿ ಕೂರಿಸುವಂತೆ ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ ರಚನೆ ಜಾರಿಗೆ ತರೋದು ಸರ್ಕಾರಕ್ಕೆ ಬಿಟ್ಟಿದ್ದು: ಟಿ.ಎಸ್. ನಾಗಾಭರಣ

    ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ ರಚನೆ ಜಾರಿಗೆ ತರೋದು ಸರ್ಕಾರಕ್ಕೆ ಬಿಟ್ಟಿದ್ದು: ಟಿ.ಎಸ್. ನಾಗಾಭರಣ

    ಧಾರವಾಡ: ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಯಬೇಕು ಎಂಬ ದೃಷ್ಠಿಯಿಂದ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕವನ್ನು ರಚನೆ ಮಾಡಲಾಗಿದ್ದು, ಇದನ್ನು ಅನುಷ್ಠಾನಕ್ಕೆ ತಂದಿದ್ದೆ ಆದಲ್ಲಿ, ಕನ್ನಡಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಬಹುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಕನ್ನಡದ ಚಳವಳಿಯನ್ನು ಹುಟ್ಟು ಹಾಕಿದ ಧಾರವಾಡ ಜಿಲ್ಲೆಯಲ್ಲೂ ಕನ್ನಡದ ಅನುಷ್ಠಾನ ಅರ್ಧಕ್ಕರ್ಧ ಆಗಿದೆ. ಇದಕ್ಕೆ ಅಧಿಕಾರಿಗಳ ಇಚ್ಛಾಶಕ್ತಿ ಹಾಗೂ ತಾತ್ಸಾರ ಭಾವನೆ ಕಾರಣ ಇರಬಹುದು. ಧಾರವಾಡವನ್ನು ಮಾದರಿ ಮಾಡುವ ಆಸೆ ನನಗಿದೆ. ಇಲ್ಲಿ ಕನ್ನಡದ ಅನುಷ್ಠಾನ ಅಚ್ಚುಕಟ್ಟಾಗಿ ಆಗಬೇಕಿದೆ ಎಂದರು. ಇದನ್ನೂ ಓದಿ: ನಡು ರಸ್ತೆಯಲ್ಲೇ ಜಿ.ಪಂ. ಸದಸ್ಯನಿಗೆ ದೊಣ್ಣೆಯಿಂದ ಹಿಗ್ಗಾಮುಗ್ಗ ಥಳಿಸಿದ್ರು

    ಕನ್ನಡ ಭಾಷೆ ಮೇಲಾಗುತ್ತಿರುವ ಅನ್ಯಾಯವನ್ನು ತಡೆಗಟ್ಟುವ ಉದ್ದೇಶಕ್ಕಾಗಿ ಕಾನೂನು ಆಯೋಗದ ಸಹಕಾರದೊಂದಿಗೆ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕವನ್ನು ರಚಿಸಿ, ಒಂದು ವಾರದ ಹಿಂದೆ ಕಾನೂನು ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಕೊಟ್ಟಿದ್ದೇವೆ. ಸಿಎಂ ಅವರಿಗೂ ಈ ವಿಧೇಯಕವನ್ನು ನೀಡಲಿದ್ದೇವೆ. ಸರೋಜಿನಿ ಮಹಿಷಿ ವರದಿಯಲ್ಲಿ ಅಂಶಗಳನ್ನೇ ಈ ವಿಧೇಯಕದಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.

    ಎಲ್ಲಾ ವರದಿಗಳಿಗೂ ಕಾನೂನಿನ ಬಲ ಇಲ್ಲ. ವರದಿಗಳಿಗೆ ಬಲ ಬರಬೇಕಾದರೆ ಅವುಗಳು ಕಲಾಪದಲ್ಲಿ ಪಾಸಾಗಬೇಕು. ಧಾರವಾಡದಲ್ಲಿ ಮಾತ್ರ ಕನ್ನಡ ಅರ್ಧಕ್ಕರ್ಧ ಅನುಷ್ಠಾನಗೊಂಡಿಲ್ಲ. ಬೆಂಗಳೂರಿನಲ್ಲೂ ಭಾಷೆಯ ಸಮಸ್ಯೆ ಇದೆ. ಬೆಂಗಳೂರಿನಲ್ಲೂ ಭಾಷೆ ಅರ್ಧಕ್ಕರ್ಧ ಅನುಷ್ಠಾನಗೊಂಡಿದೆ. ಕನ್ನಡದ ಜಾಲತಾಣಗಳ ಮುಖಪುಟ ಮಾತ್ರ ಕನ್ನಡದಲ್ಲಿವೆ. ಕೇಂದ್ರೀಯ ವಿದ್ಯಾಲಯದ ಸಿಬಿಎಸ್‍ಸಿ ಪಠ್ಯಕ್ರಮದಲ್ಲಿ ಕನ್ನಡ ಇಲ್ಲ. ಅವು ತಮ್ಮದೇ ಆದಂತ ತೀರ್ಮಾನಗಳನ್ನು ತೆಗೆದುಕೊಂಡಿವೆ. ಐಚ್ಛಿಕ ವಿಷಯವಾಗಿ ಕನ್ನಡವನ್ನು ತೆಗೆದುಕೊಂಡಿವೆ. ಈ ನೆಲದ ಕಾನೂನನ್ನು ಯಾರೂ ಪಾಲಿಸುತ್ತಿಲ್ಲ ಎಂದು ಕಿಡಿಕಾರಿದರು.

    Live Tv
    [brid partner=56869869 player=32851 video=960834 autoplay=true]

  • ಮೋದಿ, ಯೋಗಿ ಮಾದರಿಯಲ್ಲಿ ಇವರಿಗೆ ಗಟ್ಸ್ ಇಲ್ಲ: ಪ್ರವೀಣ್ ಹತ್ಯೆಗೆ ಮುತಾಲಿಕ್ ಕಿಡಿ

    ಮೋದಿ, ಯೋಗಿ ಮಾದರಿಯಲ್ಲಿ ಇವರಿಗೆ ಗಟ್ಸ್ ಇಲ್ಲ: ಪ್ರವೀಣ್ ಹತ್ಯೆಗೆ ಮುತಾಲಿಕ್ ಕಿಡಿ

    ಧಾರವಾಡ: ಸರ್ಕಾರದ ಹದ್ದಿನ ಕಣ್ಣು ಎಲ್ಲಿದೆ?. ಸರ್ಕಾರದ ಬಿಗಿಯಾದ ಕ್ರಮ ಇಲ್ಲ. ಇದೇ ಕಾರಣಕ್ಕೆ ಇದೆಲ್ಲ ಆಗುತ್ತಿದೆ. ಮೋದಿ ಮತ್ತು ಯೋಗಿ ಮಾದರಿಯಲ್ಲಿ ಗಟ್ಸ್ ಇಲ್ಲ. ಆ ಧೈರ್ಯ, ಮಾನಸಿಕತೆ ಇವರಿಗೆ ಇಲ್ಲ. ಆ ನೈತಿಕತೆಯೂ ಇವರಿಗೆ ಇಲ್ಲ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

    ಬಿಜೆಪಿ ಯುವ ಮುಖಂಡ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈ ಕ್ರೌರ್ಯ ಹದ್ದುಬಸ್ತಿನಲ್ಲಿಡೋ ಕಾರ್ಯ ಸರ್ಕಾರ ಕೂಡಲೇ ಮಾಡಬೇಕು. ಇಲ್ಲದೇ ಹೋದಲ್ಲಿ ಇನ್ನೂ ಸಾಕಷ್ಟು ಹಿಂದೂಗಳ ಬಲಿಯಾಗತ್ತೇ ಅನಿಸುತ್ತಿದೆ. ಸರ್ಕಾರ ಈ ವಿಷಯದಲ್ಲಿ ವಿಫಲ ಆಗುತ್ತಿದೆ. ಕೊಲೆ, ಹಲ್ಲೆ, ಗಲಾಟೆಯಾದಾಗ ಉಗ್ರವಾದ ಹೇಳಿಕೆಗಳು ಬರುತ್ತವೆ. ಆದರೆ ಮುಂದೆ ಏನು ಎಂದು ಪ್ರಶ್ನಿಸಿದರು.

    ಇನ್ನುವರೆಗೆ ಯಾವುದೇ ರೀತಿಯ ಕಠಿಣ ಪ್ರಕ್ರಿಯೆ ನಡೆದಿಲ್ಲ. ಇದೇ ಕಾರಣಕ್ಕೆ ಪ್ರವೀಣ್ ಹತ್ಯೆ ಆಗಿದೆ. ಇದು ಕಾನೂನು, ಸರ್ಕಾರದ ವೈಫಲ್ಯ. ಬಿಜೆಪಿಗೆ ಹಿಂದೂಗಳ ಸುರಕ್ಷತೆ ಕಾಳಜಿಯಿದ್ದಲ್ಲಿ ಎಸ್‍ಡಿಪಿಐ, ಪಿಎಫ್‍ಐ ಬ್ಯಾನ್ ಮಾಡಬೇಕು. ಹತ್ಯೆ ಹಿಂದೆ ಕೇರಳದ ಮೂಲ ಅಂತಾ ಹೇಳುತ್ತಿದ್ದಾರೆ. ವಾರದ ಹಿಂದೆ ನಡೆದ ಹತ್ಯೆಗೆ ಸೇಡಿಗೆ ಮಾಡಿದ್ದಾರೆ ಅಂತಾನೂ ಹೇಳುತ್ತಿದ್ದಾರೆ. ಮುಸ್ಲಿಮರು ಮಾಡಿರೋ ಲಕ್ಷಾಂತರ ಕೊಲೆಗಳಿಗೆ ನಾವು ತಿರುಗಿ ಬಿದ್ರೆ ದೇಶದಲ್ಲಿ ಒಬ್ಬನೂ ಮುಸ್ಲಿಂ ಇರಬಾರದು. ಆದರೆ ಆ ಮಾನಸಿಕತೆ ಇರಬಾರದು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಊರಿನ ಯಾರ ಮನೆಯಲ್ಲಿ ಸಮಸ್ಯೆ ಇದ್ರೂ ಸ್ಪಂದಿಸ್ತಿದ್ದ: ಪ್ರವೀಣ್ ಮಾವ ಕಣ್ಣೀರು

    ಕೊಲೆಗೆ ಕೊಲೆಯೇ ಉತ್ತರ ಅಲ್ಲ. ನ್ಯಾಯಕ್ಕೆ ನ್ಯಾಯಾಲಯ ಇದೆ. ಪೊಲೀಸ್ ಠಾಣೆ ಇದೆ. ಸಂವಿಧಾನಬದ್ಧವಾದ ಹೋರಾಟಕ್ಕೆ ಅವಕಾಶ ಇದೆ. ಮುಲ್ಲಾ ಮೌಲ್ವಿಗಳು ಎಸ್‍ಡಿಪಿಐ, ಪಿಎಫ್‍ಐ ಹದ್ದುಬಸ್ತಿನಲ್ಲಿಡಬೇಕು. ಶಾಂತಿ-ಸೌಹಾರ್ದತೆ ಬೇಕಾದರೆ ಹದ್ದುಬಸ್ತಿನಲ್ಲಿಡಿ. ಇಲ್ಲದೇ ಹೋದಲ್ಲಿ ಹಿಂದೂ ಸಮಾಜ ತಿರುಗಿ ಬೀಳುತ್ತೆ. ಸ್ವಯಂ ರಕ್ಷಣೆಗೆ ಹಿಂದೂ ಸಮಾಜ ಸಿದ್ಧವಾಗಬೇಕಿದೆ. ಇಲ್ಲದೇ ಹೋದಲ್ಲಿ ಸರ್ಕಾರ, ಬಿಜೆಪಿ, ಕಾನೂನು ಏನೂ ಮಾಡಲು ಆಗುವುದಿಲ್ಲ ಎಂದು ಮುತಾಲಿಕ್ ಗರಂ ಆದರು.

    ಮೋದಿ ಮತ್ತು ಯೋಗಿ ಮಾದರಿಯಲ್ಲಿ ಗಟ್ಸ್ ಇಲ್ಲ. ಆ ಧೈರ್ಯ, ಮಾನಸಿಕತೆ ಇವರಿಗೆ ಇಲ್ಲ. ಆ ನೈತಿಕತೆಯೂ ಇವರಿಗೆ ಇಲ್ಲ. ಎಲ್ಲೋ ಒಂದು ಕಡೆ ಆತಂಕ, ಭಯ ಇದೆ. ಮುಸ್ಲಿಂ ವೋಟ್‍ಗಾಗಿ ಸ್ವಲ್ಪ ಅಲ್ಲಾಡ್ತಾ ಇದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿಯ ಭದ್ರಕೋಟೆ. ಶಿವಮೊಗ್ಗ ಬಿಜೆಪಿಯ ಭದ್ರ ಕೋಟೆ. ಅವರ ಭದ್ರಕೋಟೆಯಲ್ಲೇ ಹೊಕ್ಕು ಹೊಡಿತಾ ಇದ್ದಾರೆ. ಹಾಗಾದರೆ ಭದ್ರಕೋಟೆ ಛಿದ್ರವಾಗುತ್ತಿದೆಯಲ್ಲ?. ಹಿಂದೂಗಳ ಕೊಲೆಮಾಡಿದರೂ ಏನೂ ಮಾಡಲು ಆಗೋದಿಲ್ಲ ಎಂಬ ಸಂದೇಶ ಕೊಡುತ್ತಿದ್ದಾರೆ ಎಂದು ಹೇಳಿದರು.

    ಎಸ್‍ಡಿಪಿಐ, ಪಿಎಫ್‍ಐ ಬ್ಯಾನ್ ಮಾಡಬೇಕು. ಇಲ್ಲವೇ ಸಿಎಂ ರಾಜೀನಾಮೆ ಕೊಡಬೇಕು. ಇನ್ನೂ ಅದೆಷ್ಟು ಬಲಿ ಕೊಡಬೇಕು ಮಾಡಿದ್ದೀರಿ. ಇದಕ್ಕೆ ಬಿಜೆಪಿಯೇ ಕಾರಣ. ಬ್ಯಾನ್ ಮಾಡದೇ ಇದ್ದುದ್ದಕ್ಕೆ ಈ ಕೊಲೆ ಅಗಿದೆ ಎಂದು ಸಿಡಿಮಿಡಿಗೊಂಡರು.

    Live Tv
    [brid partner=56869869 player=32851 video=960834 autoplay=true]