Tag: ಧಾರವಾಡ

  • ಮಿಸ್ ಧಾರವಾಡ ವರ್ಷಿಣಿ ಈಗ ಮಿಸ್ ಊರ್ವಶಿ

    ಮಿಸ್ ಧಾರವಾಡ ವರ್ಷಿಣಿ ಈಗ ಮಿಸ್ ಊರ್ವಶಿ

    ಧಾರವಾಡ: ವಿದ್ಯಾಕಾಶಿಯ ಸುಂದರಿ ಮಿಸ್ ಧಾರವಾಡ (Dharwad) ವರ್ಷಿಣಿ ರಾಮಡಗಿ(Varshini Ramadagi) ಈಗ ಮಿಸ್ ಊರ್ವಶಿ(Miss Urvashi) ಎನ್ನುವ ಅತ್ಯಾಕರ್ಷಕ ಕಿರೀಟ ಧರಿಸುವುದರೊಂದಿಗೆ ದೇಶದ ನವ ಸುಂದರಿಯ ಪಟ್ಟ ಅಲಂಕರಿದ್ದಾರೆ.

    ಈಗಷ್ಟೇ 20 ಈ ನವತರುಣಿಯಾಗಿರುವ ವರ್ಷಿಣಿ(Varshini), ಧಾರವಾಡದ ಕೆಸಿಡಿ ಕಾಲೇಜ್‍ನಲ್ಲಿ ಟ್ರಾವೆಲ್ ಆ್ಯಂಡ್ ಟೂರಿಸಂ ಕೋರ್ಸ್‍ನಲ್ಲಿ(Travel and Tourism Course) 2ನೇ ವರ್ಷದಲ್ಲಿ ಓದುತ್ತಿದ್ದಾರೆ. ಇತ್ತೀಚೆಗೆ ಜೈಪುರದಲ್ಲಿ(Jaipura) ಮಿಸ್ ಇಂಟರ್ ಕ್ವಾಂಟಿನೇಂಟಲ್ ಹಾಗೂ ಎಲೀಟ್ ಫೌಂಡೇಶನ್ ಆಯೋಜಿಸಿದ್ದ ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ (Beauty Pageants) ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಅಲ್ಲದೇ ಅಲ್ಲಿ ವಿನ್ನರ್ ಆಗಿ ಹೊರಹೊಮ್ಮುವ ಮೂಲಕ ಮಿಸ್ ಊರ್ವಶಿ ಕಿರೀಟವನ್ನು(Crown) ಮುಡಿಗೇರಿಸಿಕೊಂಡಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಸೀಟ್ ಬೆಲ್ಟ್ ಕಡ್ಡಾಯ – ಧರಿಸದಿದ್ದರೆ 1,000ರೂ. ದಂಡ

    ಇತ್ತೀಚೆಗೆ ಕರ್ನಾಟಕದಲ್ಲಿ ಆಡಿಷನ್(Audition) ನಡೆಸಿ ಕರ್ನಾಟಕದಿಂದ ವರ್ಷಿಣಿ ಈ ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಒಟ್ಟು 25 ರಾಜ್ಯಗಳಿಂದ 18 ರಿಂದ 25 ವರ್ಷದೊಳಗಿನ 25 ಮಾಡೆಲ್‍ಗಳು(Models) ಈ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದರು. ಈ ಮೂಲಕ ಮಿಸ್ ಊರ್ವಶಿ ಕಿರೀಟವನ್ನು ಕರ್ನಾಟಕಕ್ಕೆ(Karnataka) ತಂದು ಕೊಡುವುದರ ಜೊತೆಗೆ ಮುಂದೆ ನಡೆಯುವ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ(International Computation) ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇದನ್ನೂ ಓದಿ: 5.47 ಕೋಟಿ ಮೌಲ್ಯದ 2.43 ಲಕ್ಷ ಎಣ್ಣೆ ಬಾಟ್ಲಿಗಳ ಮೇಲೆ ಹರಿಯಿತು ರೋಡ್ ರೋಲರ್!

    ವಿದ್ಯಾಭ್ಯಾಸದ ಜೊತೆಗೆ ಸೌಂದರ್ಯ ಸ್ಪರ್ಧೆಯಲ್ಲಿ ಮೊದಲಿನಿಂದಲೂ ತನ್ನ ಪ್ರತಿಭೆ ತೋರಿಸುವಲ್ಲಿ ಪರಿಣಿತರಾಗಿರುವ ವರ್ಷಿಣಿ ಈಗಾಗಲೇ ಎರಡು ಸಲ ಮಿಸ್ ಧಾರವಾಡ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೇ ಧಾರವಾಡ ಗ್ಲ್ಯಾಮ್ ಬ್ಯೂಟಿ ಆಗಿಯೂ ವಿಜೇತರಾಗಿದ್ದರು. 2019ರಲ್ಲಿ ಮಿಸ್ ಕರ್ನಾಟಕ ಫೈನಲಿಸ್ಟ್ ಆಗಿದ್ದರು. ಸದ್ಯ ಈ ಕಿರೀಟ ಗೆದ್ದ ನಂತರ ಸಂತಸ ವ್ಯಕ್ತಪಡಿಸಿದ ವರ್ಷಿಣಿ, ಮುಂದೆ ಯಾವುದೇ ಸೌಂದರ್ಯ ಸ್ಪರ್ಧೆ ಇದ್ದರೆ ಭಾಗವಹಿಸಿ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಜಕಾಲುವೆ ಒತ್ತುವರಿ ಹಿಂದೆ IT ಕಂಪನಿಗಳ ಕೈವಾಡವೂ ಇದೆ: ಸಂತೋಷ್ ಹೆಗ್ಡೆ

    ರಾಜಕಾಲುವೆ ಒತ್ತುವರಿ ಹಿಂದೆ IT ಕಂಪನಿಗಳ ಕೈವಾಡವೂ ಇದೆ: ಸಂತೋಷ್ ಹೆಗ್ಡೆ

    ಧಾರವಾಡ: ಬೆಂಗಳೂರಿನ (Bengaluru) ರಾಜಕಾಲುವೆ ಒತ್ತುವರಿಯ ಹಿಂದೆ ಐಟಿ ಕಂಪನಿಗಳ ಕೈವಾಡವೂ ಇದೆ, ಆಗರ್ಭ ಶ್ರೀಮಂತರ ಕಟ್ಟಡದಿಂದಲೂ ಒತ್ತುವರಿಯಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ (Santosh Hegde) ಗಂಭೀರ ಆರೋಪ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ರಾಜಕಾಲುವೆ (Rajakaluve) ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿಂದು ಮಾತನಾಡಿದ ಅವರು, ಬೆಂಗಳೂರಿನಲ್ಲಿ ಜನಸಂಖ್ಯೆ ಜಾಸ್ತಿಯಾದಂತೆ ಬಡಾವಣೆಗಳೂ ಜಾಸ್ತಿಯಾಗ್ತಿವೆ. ಸುಭಾಷ್‌ನಗರ ಬಸ್ ನಿಲ್ದಾಣ ಕೆರೆಯಾಗಿತ್ತು, ಸಂಪಂಗಿಯಲ್ಲಿ ಕ್ರೀಡಾಂಗಣ ಮಾಡಿದ್ದಾರೆ. ಅಕ್ಕಿ ತಿಮ್ಮನ ಹಳ್ಳಿಯಲ್ಲಿ ಹಾಕಿ ಕ್ರೀಡಾಂಗಣ (stadium) ಮಾಡಿದ್ದಾರೆ. ಎಲ್ಲ ಕೆರೆಗಳನ್ನು ಬಿಡಿಎ ಮುಖಾಂತರ ಲಾಭಕ್ಕಾಗಿ ಬಳಕೆ ಮಾಡಿದ್ದಾರೆ. ಇದರಲ್ಲಿ ಜನರ ಹಾಗೂ ಅಧಿಕಾರದಲ್ಲಿ ಇದ್ದವರ, ಇಲ್ಲದವರ ದುರಾಸೆಯೂ ಇದೆ. ಐಟಿ (IT) ಕಂಪನಿಗಳ ಕೈವಾಡವೂ ಇದೆ. ಆಗರ್ಭ ಶ್ರೀಮಂತರ ಕಟ್ಟಡಗಳಿಂದಲೂ ಒತ್ತುವರಿಯಾಗಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ವಿದ್ಯುತ್ ತಂತಿ ಸರಿಪಡಿಸಲು ಹೋಗಿ ಲೈನ್‍ಮ್ಯಾನ್ ಸಾವು

    ಎರಡು ವರದಿ ಕೊಟ್ಟಿದ್ದೇನೆ: ಬಹಳ ಹಿಂದೆಯೇ ನಾನು ರಾಜಕಾಲುವೆ ಒತ್ತುವರಿ ಬಗ್ಗೆ ಎರಡು ವರದಿ ಕೊಟ್ಟಿದ್ದೇನೆ. ಎನ್‌ಜಿಟಿ (NGT) (ರಾಷ್ಟ್ರೀಯ ಹಸಿರು ನ್ಯಾಯಮಂಡಳಿ) ಹಾಗೂ ಸರ್ಕಾರಕ್ಕೆ ವರದಿ ಕೊಟ್ಟಿದ್ದೇನೆ. ಮಹಾರಾಜರು (King) ಹಿಂದೆ ಮಳೆ ನೀರು ಸಂಗ್ರಹಿಸುವ ಉದ್ದೇಶದಿಂದ ನೂರಾರು ಕೆರೆ ಕಟ್ಟಿದ್ರು. ಮಳೆ ಬಂದಾಗ ಅಲ್ಲಿಗೇ ನೀರು ಹರಿದು ಹೋಗುತ್ತಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಲೋಕಾಯುಕ್ತಕ್ಕೆ ಮತ್ತೆ ಬಲ ಬಂದಿದ್ದು, ಭ್ರಷ್ಟಾಚಾರಿಗಳಿಗೆ ನಡುಕ ಹುಟ್ಟಿದೆ: ನ್ಯಾ.ಸಂತೋಷ್‌ ಹೆಗ್ಡೆ

    ಬೆಂಗಳೂರಿನಲ್ಲಿ ಸುಮಾರು 200 ಕೆರೆಗಳಿದ್ದವು. ಭಾಷಾವಾರು ಪ್ರಾಂತ್ಯ ಆದಾಗ ಬೆಂಗಳೂರು ರಾಜಧಾನಿ ಆಯಿತು. ಅಗ ಇಲ್ಲಿ ದಿಢೀರ್ ಜನಸಂಖ್ಯೆ (Population) ಹೆಚ್ಚಾಯ್ತು. ಆದರೆ ಸರ್ಕಾರ ಯೋಜನೆ ಮಾಡಿ ಜಾಗ ಕೊಡೋದನ್ನು ಬಿಟ್ಟು ರಾಜಕಾಲುವೆ ಒತ್ತುವರಿ ಮಾಡಲು ಅವಕಾಶ ಮಾಡಿಕೊಡ್ತು. ನೀರು ಹೋಗುವ ರಾಜಕಾಲುವೆ ಈಗ ಅಲ್ಲಿ ಇಲ್ಲಾ, ಈಗ ಮಳೆ ಬಂದರೆ ನೀರು ಹೋಗಲೂ ಜಾಗ ಇಲ್ಲಾ, ಎಲ್ಲಾ ಒತ್ತುವರಿ ಮಾಡಿ ಮನೆ ಕಟ್ಟಿದ್ದಾರೆ. ಕೆಲವರು ತಮ್ಮ ಲಾಭಕ್ಕಾಗಿ ಒತ್ತುವರಿ ಮಾಡಿದ್ದೂ ಇದೆ ಎಂದು ಆರೋಪಿಸಿದ್ದಾರೆ.

    ಈ ಹಿಂದೆಯೂ ಬೆಂಗಳೂರಿನಲ್ಲಿ ಮಳೆಯಾಗಿದೆ. ಹಿಂದೆ ಕೆರೆ ನೀರು ಹೋಗಲು ಒಂದು ಸಿಸ್ಟಮ್ ಇತ್ತು. ಹಿಂದೆ ಬೆಂಗಳೂರಿಗೆ ಗಾರ್ಡನ್ ಸಿಟಿ, ಏರ್ ಕಂಡೊಷನ್ ಸಿಟಿ ಅಂತಿದ್ರು, 70ರ ದಶಕವರೆಗೆ ಆರ್ಮಿ ಅವರಿಗೆ ಫ್ಯಾನ್ ಇರಲಿಲ್ಲ, ಅಷ್ಟು ತಣ್ಣನೆಯ ಗಾಳಿ ಇತ್ತು. ಇವತ್ತು ಬಿಸಿಲು ಜಾಸ್ತಿಯಾಗಿದೆ, ಕೆರೆ ಇಲ್ಲದಂತಾಗಿದೆ. ಇದೆಲ್ಲವೂ ಮನುಷ್ಯನ ದುರಾಸೆಯ ಪ್ರತಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ವಜ್ರಕುಮಾರ್ ಇನ್ನಿಲ್ಲ

    ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ವಜ್ರಕುಮಾರ್ ಇನ್ನಿಲ್ಲ

    ಧಾರವಾಡ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ಡಾ. ನ. ವಜ್ರಕುಮಾರ ಇಂದು ಬೆಳಗ್ಗಿನ ಜಾವ ಧಾರವಾಡದ ನಿವಾಸದಲ್ಲಿ ನಿಧನ ಹೊಂದಿದರು.

    ಧಾರವಾಡ ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿಯೂ ಆಗಿದ್ದ ವಜ್ರಕುಮಾರ, ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಎಸ್‍ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡಾ ನಡೆದಿತ್ತು. ಇಂದು ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವಿದ್ಯಾಗಿರಿ ಜೆ ಎಸ್ ಎಸ್ ಕ್ಯಾಂಪಸ್‍ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ರಷ್ಯಾದ ತೈಲ ಸಂಸ್ಥೆ ಅಧ್ಯಕ್ಷ ಆಸ್ಪತ್ರೆಯ ಕಿಟಕಿಯಿಂದ ಬಿದ್ದು ಸಾವು

    ನಂತರ ಇಲ್ಲಿಂದ ವಜ್ರಕುಮಾರ ಅವರ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆಯ ಯರ್ಮಾಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ವಜ್ರಕುಮಾರ ಅವರು ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಮಹಾ ವಿದ್ಯಾಲಯಗಳ ಆಡಳಿತ ಮಂಡಳಿಯ ಸದಸ್ಯ ಕೂಡಾ ಆಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಹೊಲಿಗೆಯನ್ನೇ ಸ್ವ-ಉದ್ಯೋಗ ಮಾಡಿಕೊಳ್ಳುವ ಮಹಿಳೆಯರಿಗೆ ಮುದ್ರಾ ಲೋನ್: ಜೋಶಿ

    ಹೊಲಿಗೆಯನ್ನೇ ಸ್ವ-ಉದ್ಯೋಗ ಮಾಡಿಕೊಳ್ಳುವ ಮಹಿಳೆಯರಿಗೆ ಮುದ್ರಾ ಲೋನ್: ಜೋಶಿ

    ಧಾರವಾಡ: ಹೊಲಿಗೆಯನ್ನೇ ಸ್ವ-ಉದ್ಯೋಗ ಮಾಡಿಕೊಳ್ಳಲು ಬಯಸುವ ಮಹಿಳೆಯರಿಗೆ ಮುದ್ರಾ ಯೋಜನೆಯಡಿ ಸಾಲ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

    ಧಾರವಾಡದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಉಚಿತ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರಿಗೆ ಅನುಕೂಲವಾಗುವಂತೆ ಉಚಿತ ವೃತ್ತಿಪರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಗ್ರಾಮ ವಿಕಾಸ ಸೊಸೈಟಿ ಅSಖ ಅನುದಾನದಡಿಯಲ್ಲಿ ಹಮ್ಮಿಕೊಂಡಿತ್ತು. ಇದೇ ವೇಳೆ ತರಬೇತಿ ಪಡೆದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿತರಿಸಿದರು. ಇದನ್ನೂ ಓದಿ: ಬೆಂಗಳೂರಿಗೆ ಇನ್ಮುಂದೆ ಸಾಂಪ್ರದಾಯಿಕ ವೈದ್ಯ ಪದ್ಧತಿ ಹಬ್ ಆಗೋ ಅವಕಾಶ- ಯೋಗಿ ಆದಿತ್ಯನಾಥ್

    ಈ ವೇಳೆ ಮಾತಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಮಹಿಳೆಯರು ಬದುಕು ಕಟ್ಟಿಕೊಳ್ಳಲು ಧಾರವಾಡ ಜಿಲ್ಲೆಯಲ್ಲಿ ಉಚಿತ ಕೌಶಲ್ಯ ಅಭಿವೃದ್ಧಿ ಕಾರ್ಮಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ಮೋದಿಯವರ ಆಶಯದಂತೆ ಗ್ರಾಮೀಣ ವಿಕಾಸಕ್ಕಾಗಿ ಹಲವು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನ ನಡೆಸಲಾಗ್ತಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 4 ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರಗಳನ್ನ ಪ್ರಾರಂಭಿಸಲಾಗಿದ್ದು, 1200 ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

    ಈ ತರಬೇತಿ ಪಡೆದ ಮಹಿಳೆಯರು, ಸ್ವ ಉದ್ಯೋಗ ಕೈಗೊಳ್ಳಲು ಮುಂದಾದರೆ, ಅವರೆಲ್ಲರಿಗೂ ಮುದ್ರಾ ಯೋಜನೆಯಡಿ ಸಾಲ ನೀಡಲು ಸಹ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ತರಬೇತಿ ಕೇಂದ್ರಗಳಲ್ಲಿರುವ ವ್ಯವಸ್ಥೆಗಳನ್ನ ಜೋಶಿ ಪರಿಶೀಲಿಸಿದರು.

    Live Tv
    [brid partner=56869869 player=32851 video=960834 autoplay=true]

  • ಅಗ್ನಿಪಥ್ ದೈಹಿಕ ಪರೀಕ್ಷೆಗೆ ಪದವಿ ಪರೀಕ್ಷೆ ಅಡ್ಡಿ – 20 ದಿನ ಪದವಿ ಪರೀಕ್ಷೆ ಮುಂದೂಡಲು ಆಗ್ರಹ

    ಅಗ್ನಿಪಥ್ ದೈಹಿಕ ಪರೀಕ್ಷೆಗೆ ಪದವಿ ಪರೀಕ್ಷೆ ಅಡ್ಡಿ – 20 ದಿನ ಪದವಿ ಪರೀಕ್ಷೆ ಮುಂದೂಡಲು ಆಗ್ರಹ

    ಧಾರವಾಡ: ಸೆಪ್ಟೆಂಬರ್ 1 ರಿಂದ 20 ರವರೆಗೆ ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಗ್ನಿಪಥ್ ಯೋಜನೆ ಅಡಿಯಲ್ಲಿ ಸೇನಾ ಭರ್ತಿಗಾಗಿ ದೈಹಿಕ ಪರೀಕ್ಷೆ ನಡೆಯಲಿವೆ. ಈ ದೈಹಿಕ ಪರೀಕ್ಷೆಗೆ ಸಾಕಷ್ಟು ವಿದ್ಯಾರ್ಥಿಗಳು ಹೋಗಲು ತಯಾರಿ ನಡೆಸಿದ್ದಾರೆ. ಆದರೆ ಈಗ ಆ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಆರಂಭವಾಗಿದೆ.

    ಧಾರವಾಡ ಕರ್ನಾಟಕ ವಿವಿಯ ಪದವಿ ಪರೀಕ್ಷೆಗಳು ಕೂಡಾ ಇದೇ ಸಮಯದಲ್ಲಿ ಇವೆ. ಈಗಾಗಲೇ ಆಗಸ್ಟ್ 29 ರಿಂದ ಸೆಪ್ಟೆಂಬರ್ 20ರವರೆಗೆ ಕರ್ನಾಟಕ ವಿವಿ ಪರೀಕ್ಷಾ ದಿನಾಂಕ ಘೋಷಣೆ ಮಾಡಿ ಆಗಿದೆ. ಆದರೆ ಇದೇ ಸಮಯದಲ್ಲಿ ಸೇನಾ ಭರ್ತಿಯ ದೈಹಿಕ ಪರೀಕ್ಷೆ ಇವೆ. ಕರ್ನಾಟಕ ವಿವಿ ವ್ಯಾಪ್ತಿಯ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಈಗ ಪದವಿ ಪರೀಕ್ಷೆ ಬರೆಯಬೇಕೋ ಅಥವಾ ಅಗ್ನಿಪಥ್ ದೈಹಿಕ ಪರೀಕ್ಷೆಗೆ ಹೋಗಬೇಕೋ ಎನ್ನುವ ಗೊಂದಲದಲ್ಲಿದ್ದಾರೆ. ಹೀಗಾಗಿ ಕರ್ನಾಟಕ ವಿವಿಯ ಮೌಲ್ಯ ಮಾಪನ ಕುಲಸಚಿವರಿಗೆ ಮನವಿ ಕೊಟ್ಟು ಸೆಪ್ಟೆಂಬರ್ 20ರ ನಂತರ ಪದವಿ ಪರೀಕ್ಷೆ ನಡೆಸಲು ಮನವಿ ಮಾಡಿದ್ದಾರೆ. ಇದನ್ನೂ ಓದಿ: 12 ಸಾವಿರ ರೂ. ಒಳಗಿನ ಚೀನಿ ಫೋನ್‌ಗಳನ್ನು ನಿಷೇಧಿಸಲ್ಲ: ಕೇಂದ್ರ ಸರ್ಕಾರ

    ಕರ್ನಾಟಕ ವಿವಿ ಕೂಡಾ ಈ ಹಿಂದೆ ಇದೇ ವಿಚಾರವಾಗಿ ಕೊಟ್ಟ ಅರ್ಜಿಯನ್ನು ಆಲಿಸಿದೆ. ಆದರೆ 2 ದಿನ ಮಾತ್ರ ಅಗ್ನಿಪಥ್ ದೈಹಿಕ ಪರೀಕ್ಷೆಗೆ ಅವಕಾಶ ಕೊಟ್ಟಿದೆ. ಆದರೆ ದಿನ ಕಳೆದಂತೆ ಹೆಚ್ಚು ಮನವಿ ಬರುತ್ತಿರುವುದರಿಂದ ಸಮಸ್ಯೆ ಆರಂಭವಾಗಿದೆ. ಎರಡು ಅಥವಾ ಮೂರು ದಿನ ಪರೀಕ್ಷೆ ಮುಂದೂಡಬಹುದು. ಆದರೆ 20 ದಿನ ಪರೀಕ್ಷೆ ದಿನಾಂಕ ಬದಲಾವಣೆ ಮಾಡುವುದು ಕಷ್ಟ ಎಂದು ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವ ಕೃಷ್ಣ ಮೂರ್ತಿ ಹೇಳ್ತಾರೆ. ಅದರಲ್ಲಿ ಮತ್ತೆ ಬೇರೆ ಸಮಸ್ಯೆ ಬಂದರೆ ಅದಕ್ಕೂ ನಾವು ಪರೀಕ್ಷೆ ಸಮಯ ಬದಲಾವಣೆ ಮಾಡಬೇಕಾಗಿದ್ದು, ಈ ಬಗ್ಗೆ ಕುಲಪತಿಗಳ ಜೊತೆ ಮಾತನಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಛತ್ತೀಸ್‌ಗಢ ಗ್ರಾಮ ಈಗ ಯೂಟ್ಯೂಬ್ ಹಬ್ – ಬೀದಿ ಬೀದಿಯಲ್ಲೂ ಸಿಗ್ತಾರೆ ಕ್ರಿಯೇಟರ್‌ಗಳು

    Live Tv
    [brid partner=56869869 player=32851 video=960834 autoplay=true]

  • ಪೊಲೀಸರ ಬೆಂಗಾವಲಿನಲ್ಲಿ ಮಠಕ್ಕೆ ವಾಪಸ್ಸಾಗ್ತಿದ್ದೇನೆ: ಮುರುಘಾ ಶ್ರೀ

    ಪೊಲೀಸರ ಬೆಂಗಾವಲಿನಲ್ಲಿ ಮಠಕ್ಕೆ ವಾಪಸ್ಸಾಗ್ತಿದ್ದೇನೆ: ಮುರುಘಾ ಶ್ರೀ

    ಚಿತ್ರದುರ್ಗ: ಪೊಲೀಸರ ಬೆಂಗಾವಲಿನಲ್ಲಿ ಮಠಕ್ಕೆ ವಾಪಸ್ಸಾಗುತ್ತಿದ್ದೇನೆ ಎಂದು ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.

    ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಬಂಧನ ಆಗಿಲ್ಲ. ಚಿತ್ರದುರ್ಗ ಮಠಕ್ಕೆ ವಾಪಸ್ ಆಗುತ್ತಿದ್ದೇನೆ. ಪೊಲಿಸರ ಬೆಂಗಾವಲಿನಲ್ಲಿಯೇ ಮಠದತ್ತ ಹೋಗುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಕಳೆದ ರಾತ್ರಿ ಧಾರವಾಡ ಮಠಕ್ಕೆ ಹೋಗಿದ್ದೆ. ಇದೀಗ ಪೊಲೀಸ್ ಭದ್ರತೆಯೊಂದಿಗೆ ವಾಪಸ್ಸಾಗುತ್ತಿದ್ದೇನೆ. ಪೊಲಿಸರೇ ನನಗೆ ಭದ್ರತೆ ಕೊಟ್ಟಿದ್ದಾರೆ. ಬಂಧನ ಅನ್ನೋದು ಸುಳ್ಳು ಎಂದು ಶ್ರೀಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಮಾಜ ತಿದ್ದುವ ಶ್ರೀಗಳ ಮೇಲೆ ಇಲ್ಲ ಸಲ್ಲದ ಆರೋಪ ಸಲ್ಲದು: ಉಮೇಶ್ ಕತ್ತಿ

    ಇತ್ತ ಶ್ರೀಗಳು ಮಠಕ್ಕೆ ವಾಪಸ್‌ ಆಗುತ್ತಿರುವ ಹಿನ್ನೆಲೆಯಲ್ಲಿ ಮಠದ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಒಟ್ಟಿನಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬರುತ್ತಿದ್ದಂತೆಯೇ ಸುದ್ದಿಗೋಷ್ಠಿ ನಡೆಸಿದ್ದ ಶ್ರೀಗಳು ಬಳಿಕ ಮಠದಲ್ಲಿಯೇ ಏಕಾಂತದಲ್ಲಿದ್ದರು. ತದನಂತರ ಅವರು ಮಠದಿಂದ ತೆರಳಿದ್ದು, ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಇತ್ತ ಮಠದಲ್ಲಿ ಭಕ್ತರು ಮೌನಕ್ಕೆ ಜಾರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮಠ-ಮಂದಿರಗಳಿಗೆ ಹಣ ಕೊಡುವುದನ್ನು ನಿಲ್ಲಿಸಿ: ಪ್ರಮೋದ್ ಮುತಾಲಿಕ್

    ಮಠ-ಮಂದಿರಗಳಿಗೆ ಹಣ ಕೊಡುವುದನ್ನು ನಿಲ್ಲಿಸಿ: ಪ್ರಮೋದ್ ಮುತಾಲಿಕ್

    ಧಾರವಾಡ: ಮಠ-ಮಂದಿರಗಳಿಗೆ ದುಡ್ಡು ಕೊಡುವುದನ್ನು ನಿಲ್ಲಿಸಿ, ಹಿಂದೂ ಸಂಘಟನೆಗಳಿಗೆ ಕೊಡಿ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್ ಮನವಿ ಮಾಡಿದರು.

    ಸಾವರ್ಕರ್ ಕುರಿತ ಪುಸ್ತಕ ಬಿಡುಗಡೆಯಲ್ಲಿ ಮಾತನಾಡಿದ ಅವರು, ಮಠ ಮಂದಿರ ಬಿಟ್ಟು ಹಿಂದೂ ಸಂಘಟನೆಗಳಿಗೆ ಹಣ ಕೊಡಿ. ಹಿಂದೂ ಸಂಘಟನೆಗಳಿಗೆ ಬಲ ಕೊಡಿ. ಆಗ ನಿಮಗೆ ನಾವು ಹಿಂದೂ ರಾಷ್ಟ್ರ ಮಾಡಿ ತೋರಿಸುತ್ತೇವೆ ಎಂದು ಹೇಳಿದರು.

    ಇದೇ ವೇಳೆ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಗೋ ಮಾತೆ, ಮಾತೆ ಎಂದು ಹೇಳುತ್ತಿದ್ದರು. ಅದಕ್ಕಾಗಿ ಗೋ ಹತ್ಯೆ ಕಾನೂನು ತಂದಿದ್ದಾರೆ. ಆದರೂ ಗೋಹತ್ಯೆ ನಡೆಯುತ್ತಿದೆ. ಆದರೆ ಒಂದೂ ಗೋಹತ್ಯೆ ಆಗದಂತೆ ಮಾಡುವ ಶಕ್ತಿ ಹಿಂದೂ ಸಂಘಟನೆಗಳಿಗಿದೆ. ಆದ್ದರಿಂದ ಹಿಂದೂ ಸಂಘಟನೆಗಳಿಗೆ ಸಮಾಜ ಬಲ ಕೊಡಬೇಕು ಎಂದು ತಿಳಿಸಿದರು.

    ಅಂದು ಹಿಂದುತ್ವದ ಹೋರಾಟಗಳು ಯಶಸ್ವಿಯಾಗಿದ್ದವು. ಇಂದು ಅದು ಆಗುತ್ತಿಲ್ಲ. ಅವತ್ತು ಶುದ್ಧ, ಚಾರಿತ್ರ್ಯ, ತ್ಯಾಗ, ಬಲಿದಾನದ ನಾಯಕರಿದ್ದರು. ಅದರ ಪರಿಣಾಮದಿಂದ ದುಷ್ಟ ಶಕ್ತಿಗಳ ನಾಶವಾಯಿತು. ಹಿಂದವೀ ಸಮಾಜ ನಿರ್ಮಾಣ ಆಗಿತ್ತು. ಅದಕ್ಕೆ ಛತ್ರಪತಿ ಶಿವಾಜಿ ಮಹಾರಾಜರೇ ಉದಾಹರಣೆಯಾಗಿದ್ದಾರೆ. ಆದರೆ ಇವತ್ತಿನ ನಾಯಕರು ಯಾರು ಎಂದು ಪ್ರಶ್ನಿಸಿದ ಅವರು, ನೀಚ, ನಿರ್ಲಜ್ಜ, ಲೂಟಿಕೋರರಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಗಣೇಶ ಮೂರ್ತಿಯೊಂದಿಗೆ ಸಾವರ್ಕರ್ ಫೋಟೋವನ್ನೂ ಇಡ್ತೀವಿ – ಚಕ್ರವರ್ತಿ ಸೂಲಿಬೆಲೆ

    ಇಂದಿನ ನಾಯಕರು ಈ ದೇಶವನ್ನು ಬರ್ಬಾದ್ ಮಾಡುತ್ತಿದ್ದಾರೆ. ಈ ದೇಶವನ್ನು ಹಾಳು ಮಾಡುತ್ತಿದ್ದಾರೆ. ಅವರು ಇವರು ಅಲ್ಲ, ಎಲ್ಲರೂ ಅವರೇ ಆಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಾವು ಯೋಚನೆ ಮಾಡಬೇಕಿದೆ. ಇವತ್ತು ನಾವು ಯಾವ ರೀತಿ ನಾಯಕರು ಬೇಕು ಅಂತಾ ವಿಚಾರ ಮಾಡಬೇಕಿದೆ. ಶಿವಾಜಿಯಂತಹ ನಾಯಕರು ಬೇಕೋ?, ಅಥವಾ ಲೂಟಿಕೋರರು ಬೇಕೋ? ಅಂತಾ ನಿಶ್ಚಯ ಮಾಡಬೇಕಿದೆ. ಎಲ್ಲರಲ್ಲೂ ಇವತ್ತು ವೇದನೆ ಇದೆ. ಎಲ್ಲೋ ತಪ್ಪುತ್ತಿದ್ದೇವೆ ಎನ್ನುವ ವೇದನೆ ಇದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ವಿದ್ಯುತ್ ಶಾಕ್‍ನಿಂದ ದಂಪತಿ ಸಾವು- ಪತ್ನಿ ಉಳಿಸಲು ಹೋಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದುರ್ಮರಣ

    Live Tv
    [brid partner=56869869 player=32851 video=960834 autoplay=true]

  • ಬಾಂಗ್ಲಾ ಗಡಿಯಲ್ಲಿ ಧಾರವಾಡದ BSF ಯೋಧ ಹೃದಯಾಘಾತದಿಂದ ಸಾವು

    ಬಾಂಗ್ಲಾ ಗಡಿಯಲ್ಲಿ ಧಾರವಾಡದ BSF ಯೋಧ ಹೃದಯಾಘಾತದಿಂದ ಸಾವು

    ಹುಬ್ಬಳ್ಳಿ: ಬಾಂಗ್ಲಾ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬಿಎಸ್‍ಎಫ್ ಯೋಧ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

    ತಾಲೂಕಿನ ರೊಟ್ಟಿಗವಾಡ ಗ್ರಾಮದ ಸೈನಿಕ ಗಂಗಾಧರಯ್ಯ ಹಿರೇಮಠ (49) ಹೃದಯಾಘಾತದಿಂದ ಸಾವನ್ನಪ್ಪಿರುವ ಯೋಧ. ಗಂಗಾಧರಯ್ಯನವರು ಬಿಎಸ್‍ಎಫ್ ಬೆಟಾಲಿಯನ್ 138ರಲ್ಲಿ ಕಳೆದ 28 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಸದ್ಯ ವೆಸ್ಟ್ ಬೆಂಗಾಲದ ಕುಚ್ ಬಿಹಾರ್ ಕರ್ತವ್ಯ ನಿರ್ವಹಿಸುತ್ತಿದ್ದರು. ಶನಿವಾರ ಸಂಜೆ ಕರ್ತವ್ಯದಲ್ಲಿದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ – ಗೋಧಿ ಹಿಟ್ಟು, ಮೈದಾ, ರವೆ ರಫ್ತು ನಿಷೇಧ

    ಇಂದು ರಾತ್ರಿ ಸ್ವಗ್ರಾಮ ರೊಟ್ಟಿಗವಾಡಕ್ಕೆ ಯೋಧನ ಪಾರ್ಥಿವ ಶರೀರ ಆಗಮಿಸುವ ಸಾಧ್ಯತೆಯಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಸಲು ತಾಲೂಕು ಆಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪಕ್ಷ ಇನ್ನಷ್ಟು ಬಲಗೊಳ್ಳಲಿದೆ: ಸಿಎಂ

    Live Tv
    [brid partner=56869869 player=32851 video=960834 autoplay=true]

  • ‘ಜೊತೆ ಜೊತೆಯಲಿ’ ಅನಿರುದ್ಧ ಗಲಾಟೆ ಧಾರವಾಡಕ್ಕೆ ಶಿಫ್ಟ್: ಪ್ರಕರಣ ತಿಳಿಗೊಳಿಸಲು ಸ್ನೇಹಿತರ ಮನವಿ

    ‘ಜೊತೆ ಜೊತೆಯಲಿ’ ಅನಿರುದ್ಧ ಗಲಾಟೆ ಧಾರವಾಡಕ್ಕೆ ಶಿಫ್ಟ್: ಪ್ರಕರಣ ತಿಳಿಗೊಳಿಸಲು ಸ್ನೇಹಿತರ ಮನವಿ

    ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನಿರುದ್ಧ ಅವರೇ ಮುಂದುವರೆಯಬೇಕು ಎನ್ನುವ ಒತ್ತಡ ಈವರೆಗೂ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ವ್ಯಕ್ತವಾಗಿತ್ತು. ಇದೀಗ ಅನಿರುದ್ದ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಮಾಧ್ಯಮ ಗೋಷ್ಠಿ ಮಾಡುವ ಮೂಲಕ ವಾಹಿನಿಗೆ ಮತ್ತು ನಿರ್ಮಾಪಕರ ಮೇಲೆ ಒತ್ತಡ ತರುತ್ತಿದ್ದಾರೆ.

    ನಿನ್ನೆಯಷ್ಟೇ ಬೆಂಗಳೂರಿನ ಪ್ರಸ್ ಕ್ಲಬ್ ನಲ್ಲಿ ಅನಿರುದ್ಧ ಅವರ ಮಹಿಳಾ ಅಭಿಮಾನಿಗಳು ಮಾಧ್ಯಮಗೋಷ್ಠಿ ಮಾಡಿ, ಅನಿರುದ್ದ ಅವರಿಗೆ ಬೆಂಬಲ ಸೂಚಿಸಿದ್ದರು. ಏಕಾಏಕಿ ಹೀಗೆ ಬ್ಯಾನ್ ಮಾಡುವುದನ್ನು ಸಹಿಸಲ್ಲ ಎಂದು ಹೇಳಿಕೊಂಡಿದ್ದರು. ಅವರ ಜನಪ್ರಿಯತೆಯನ್ನು ಬಳಸಿಕೊಂಡು, ಸೀರಿಯಲ್ ನಿರ್ಮಾಪಕರು ಅನಿರುದ್ಧ ಅವರನ್ನು ದೂರ ಮಾಡಿದ್ದಾರೆ ಎಂದೂ ಆರೋಪಿಸಿದ್ದರು. ಇದೀಗ ಧಾರವಾಡದ ಗೆಳೆಯರು ಕೂಡ ಇಂಥದ್ದೊಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಸಿನಿಮಾ ಆಗಲಿದೆ ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ: ಯಾರಾಗಲಿದ್ದಾರೆ ಹೀರೋಯಿನ್?

    ಅನಿರುದ್ಧ ಮೂಲತಃ ಧಾರವಾಡದವರು. ಅಲ್ಲಿಯೇ ಎಜ್ಯುಕೇಷನ್ ಕೂಡ ಮುಗಿಸಿದ್ದು. ಧಾರವಾಡದ ರಂಗಭೂಮಿಯಿಂದ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟವರು. ಹಾಗಾಗಿ ಧಾರವಾಡದ ಗೆಳೆಯರು ಇಂದು ಒಟ್ಟಾಗಿ ಅನಿರುದ್ಧ ಪರ ಬ್ಯಾಟ್ ಬೀಸಿದ್ದಾರೆ. ನಲವತ್ತು ವರ್ಷಗಳಿಂದ ಸ್ನೇಹಿತರಾಗಿದ್ದವರು, ಯಾವತ್ತೂ ಅವರು ದುರಹಂಕಾರ ತೋರಿಸಿಲ್ಲ. ಹಾಗಾಗಿ ಅನಿರುದ್ಧ ಅವರನ್ನು ವಾಪಸ್ಸು ಧಾರಾವಾಹಿಗೆ ಸೇರಿಸಿಕೊಳ್ಳಿ ಎಂದು ಹೇಳಿದ್ದಾರೆ.

    ಅನಿರುದ್ಧ ಅವರನ್ನು ಸೀರಿಯಲ್ ನಿಂದ ಕೈಬಿಟ್ಟ ವಿಚಾರ ಮತ್ತು ಬ್ಯಾನ್ ಮಾಡಿರುವ ವಿಷಯ ನಮ್ಮ ಎಲ್ಲ ಗೆಳೆಯರಿಗೆ ಬೇಸರವಾಗಿದೆ. ದೊಡ್ಡವರು ಯಾರಾದ್ರು ಈ‌ ವಿಷಯವನ್ನು ಅಲ್ಲೇ‌ ಮುಗಿಸಬೇಕಿತ್ತು. ಅನಿರುದ್ಧ ಅಷ್ಟು ದೊಡ್ಡ ಮಟ್ಟದಲ್ಲಿ ಬೆಳೆದ್ರು ಸಿಂಪಲ್‌ ಆಗಿಯೇ ಇದ್ದಾರೆ. ಹುಬ್ಬಳ್ಳಿ ಧಾರವಾಡ ಪಾಲಿಕೆಯ ರಾಯಭಾರಿ ಆಗಿಯೂ ಅವರು ಧಾರವಾಡಕ್ಕೆ ಬಂದಿದ್ದರು. ಅಂತಹ ವ್ಯಕ್ತಿಗೆ ಅವಮಾನ ಮಾಡಬೇಡಿ ಎಂದು ಗೆಳೆಯರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 5 ಬಾರಿ ಮೈಕ್ ಕೂಗೋದನ್ನು ನಿಲ್ಲಿಸಿ, ನಾನೇ ಡಿಜೆಯನ್ನು ನಿಲ್ಲಿಸುತ್ತೇನೆ: ಮುತಾಲಿಕ್

    5 ಬಾರಿ ಮೈಕ್ ಕೂಗೋದನ್ನು ನಿಲ್ಲಿಸಿ, ನಾನೇ ಡಿಜೆಯನ್ನು ನಿಲ್ಲಿಸುತ್ತೇನೆ: ಮುತಾಲಿಕ್

    ಧಾರವಾಡ: 5 ಬಾರಿ ಮೈಕ್ ಕೂಗೋದನ್ನು ನಿಲ್ಲಿಸಿ, ನಾನೇ ಡಿಜೆಯನ್ನು ನಿಲ್ಲಿಸುತ್ತೇನೆ, ಒಂದೇ ಒಂದು ಡಿಜೆ ಹೊರಗೆ ಬಾರದಂತೆ ನಾನೇ ನೋಡಿಕೊಳ್ಳುತ್ತೇನೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದರು.

    ಪ್ರಾರ್ಥನಾ ಮಂದಿರಗಳ ಮೇಲೆ ಹಾಕಿರುವ ಮೈಕ್ ವಿಚಾರವಾಗಿ ಧಾರವಾಡ ಎಸ್‌ಪಿ ಕಚೇರಿ ಎದುರು ಶ್ರೀರಾಮ ಸೇನೆ ಕಾರ್ಯಕರ್ತರು ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಮುತಾಲಿಕ್, ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಸುಪ್ರೀಂ ಕೋರ್ಟ್ 15 ವರ್ಷದ ಹಿಂದೆಯೇ ಆದೇಶ ನೀಡಿದೆ. ಶಬ್ದ ಮಾಲಿನ್ಯ ಆಗಬಾರದು ಅಂತ ಹೇಳಿದ್ರೂ ಇಲ್ಲಿಯವರೆಗೆ ರಾಜ್ಯ ಸರ್ಕಾರ ಆದೇಶ ಜಾರಿ ಮಾಡಿಲ್ಲ ಎಂದರು.

    ಶಬ್ದದ ಪರಿಣಾಮದಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಪ್ರಾರ್ಥನಾ ಮಂದಿರಗಳು ಯಾವುದೇ ಧರ್ಮಕ್ಕೆ ಸೇರಿರಲಿ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಆದರೆ ಸರ್ಕಾರ ನಾಟಕವಾಡುತ್ತಿದೆ. ಇದಕ್ಕಾಗಿಯೇ ನಾವು ನಿರಂತರವಾಗಿ ಹೋರಾಡುತ್ತಿದ್ದೇವೆ. ಸರ್ಕಾರದ ಕಾನೂನು ಜಾರಿ ಮಾಡದಿದ್ದರೆ, ಅವರಿಗೆ ಕುಮ್ಮಕ್ಕು ಕೊಟ್ಟಂತಾಗುತ್ತದೆ ಎಂದರು. ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಮುನ್ನೆಚ್ಚರಿಕಾ ಕ್ರಮ – ಸರ್ಕಾರದ ಸುತ್ತೋಲೆಯಲ್ಲಿ ಏನಿದೆ?

    ಈ ಕಾರಣಕ್ಕೆ ನಾವು ಕಾನೂನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಬೆಳಗ್ಗೆ 5 ಗಂಟೆಯಿಂದ ಮೈಕ್ ಕೂಗುತ್ತಿವೆ. ಇದು ಇನ್ನೂ ನಿಂತಿಲ್ಲ. ನಮ್ಮನ್ಯಾರೂ ಕೇಳೋದಿಲ್ಲ ಎನ್ನುವ ಮನಸ್ಥಿತಿ ದೊಡ್ಡ ಮುಳ್ಳಾಗಿ ಪರಿಣಮಿಸಲಿದೆ. ಸರ್ಕಾರಕ್ಕೆ ಇದು ಗೊತ್ತಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ನಾವು ಮುಂದಿನ ಹೆಜ್ಜೆ ಇಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಮನವಿ ಇಲ್ಲ, ನೇರವಾಗಿ ನುಗ್ಗುವುದೇ. ಅದು ಹೇಗೆ, ಏನು ಎನ್ನುವುದನ್ನು ಮುಂದಿನ ಹೋರಾಟದಲ್ಲಿಯೇ ನಿರ್ಧಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಪೊಲೀಸ್ ಇಲಾಖೆ ಗಣೇಶ ಮಂಡಳಿಯವರಿಗೆ ಡಿಜೆ ನಿಷೇಧಿಸಿದ್ದಾರೆ. ಅವರು ಸುಪ್ರೀಂ ಕೋರ್ಟ್ ಆದೇಶ ತೋರಿಸುತ್ತಾರೆ. ಅದೇ ಆದೇಶ ಪ್ರಾರ್ಥನಾ ಮಂದಿರಗಳ ಮೈಕ್ ಬಗ್ಗೆಯೂ ಹೇಳಿದೆಯಲ್ಲವೇ? ಹಾಗಾದರೆ ಅದನ್ನೇಕೆ ಪಾಲಿಸುತ್ತಿಲ್ಲ? ವರ್ಷಕ್ಕೆ ಒಂದೇ ಬಾರಿ ಡಿಜೆ ಹಚ್ಚಿದರೆ ಅದು ನಿಮ್ಮ ಕಣ್ಣಿಗೆ ಬೀಳುತ್ತದೆ. ಪ್ರತಿ ದಿನ 5 ಬಾರಿ ಮೈಕ್ ಹಚ್ಚೋದು ಕಾಣೋದಿಲ್ವಾ? ಎಂದು ಕಿಡಿ ಕಾರಿದರು. ಇದನ್ನೂ ಓದಿ: ಎಸಿಬಿ ರದ್ದು; ಹೈಕೋರ್ಟ್‌ ಆದೇಶ ಪಾಲಿಸ್ತೀವಿ, ಸುಪ್ರೀಂಗೆ ಹೋಗಲ್ಲ – ಸಿಎಂ

    ನೀವು ಡಿಜೆ ಸೀಜ್ ಮಾಡಿ, ನಾವು ಇದನ್ನು ಸವಾಲಾಗಿ ಸ್ವೀಕರಿಸಿದ್ದೇವೆ. 3 ವರ್ಷದಿಂದ ಕೊರೊನಾದಿಂದಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ವೇಳೆಯಲ್ಲಿ ಎಲ್ಲದಕ್ಕೂ ನಿರ್ಬಂಧ ಏಕೆ? 5 ಬಾರಿ ಮೈಕ್ ಕೂಗೋದನ್ನು ನಿಲ್ಲಿಸಿ, ನಾನೇ ಡಿಜೆಯನ್ನು ನಿಲ್ಲಿಸುತ್ತೇನೆ. ಒಂದು ಡಿಜೆಯೂ ಹೊರಗೆ ಬಾರದಂತೆ ನಾನೇ ನಿಲ್ಲಿಸುತ್ತೇನೆ. ಆದರೆ ವಿನಾಕಾರಣ ಗಣೇಶೋತ್ಸವಕ್ಕೆ ಕಿರಿಕಿರಿ ಮಾಡಬೇಡಿ ಎಂದು ಮನವಿ ಮಾಡಿದರು.

    Live Tv
    [brid partner=56869869 player=32851 video=960834 autoplay=true]