Tag: ಧಾರವಾಡ

  • ರಾಷ್ಟ್ರಪತಿ ಮುರ್ಮುಗೆ ಕೌದಿ, ರೇಷ್ಮೆ ಸೀರೆ ಗಿಫ್ಟ್ ಕೊಟ್ರು ಸುಧಾ ಮೂರ್ತಿ

    ರಾಷ್ಟ್ರಪತಿ ಮುರ್ಮುಗೆ ಕೌದಿ, ರೇಷ್ಮೆ ಸೀರೆ ಗಿಫ್ಟ್ ಕೊಟ್ರು ಸುಧಾ ಮೂರ್ತಿ

    ಧಾರವಾಡ: ವಿದ್ಯಾಕಾಶಿ ಧಾರವಾಡ (Dharwad) ಕ್ಕೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಆವರು ಆಗಮಿಸಿದ್ದರು. ಐಐಐಟಿ ಉದ್ಘಾಟನೆ ಮಾಡಿದ ರಾಷ್ಟ್ರಪತಿ ಮುರ್ಮು ಅವರಿಗೆ ಸುಧಾ ಮೂರ್ತಿಯವರು ಕೌದಿ ಕೊಟ್ಟು ಗೌರವಿಸಿದ್ದಾರೆ.

    ವೇದಿಕೆ ಮೇಲೆ ರಾಷ್ಟ್ರಪತಿ (President) ಅವರಿಗೆ ಸ್ವಾಗತಿಸಿಕೊಂಡ ಸುಧಾ ಮೂರ್ತಿ ಅವರು, ಕೌದಿ ಜೊತೆ ರೇಷ್ಮೆ ಸೀರೆ ಕೂಡಾ ಕೊಟ್ಟಿದ್ದಾರೆ. ಇದನ್ನೂ ಓದಿ: ಡಿಸೆಂಬರ್‌ನಲ್ಲಿ ಮೋದಿಯವರಿಂದ್ಲೇ ಧಾರವಾಡ IIT ಕ್ಯಾಂಪಸ್‌ ಉದ್ಘಾಟನೆ – ಜೋಶಿ

    ರಾಯಚೂರಿನ ಮೂರು ಸಾವಿರ ದೇವದಾಸಿಯರು ಈ ಕೌದಿಯನ್ನ ತಯಾರು ಮಾಡಿದ್ದಾರೆ. ಇವರನ್ನು ಸಮಾಜಕ್ಕೆ ಮರಳಿ ತರುವಲ್ಲಿ ಸುಧಾ ಮೂರ್ತಿ (SudhaMurthy) ಸಾಕಷ್ಟು ಪ್ರಯತ್ನ ಮಾಡಿದ್ದರು. ಅದಕ್ಕೆ ಆ ದೇವದಾಸಿಯರು ಇವರಿಗೆ ತಾವು ತಯಾರಿಸಿದ ಕೌದಿಯನ್ನ ಕೊಟ್ಟಿದ್ದರು. ಆ ಕೌದಿ ಮೇಲೆಯೇ ಸುಧಾ ಮೂರ್ತಿ ಅವರು ಹಿಂದಿಯಲ್ಲಿ 3 ಹಜಾರ್ ಟಾಕೆ ಹಾಗೂ ಇಂಗ್ಲೀಷ್ ನಲ್ಲಿ 3 thousand stitchs ಎಂದು ಪುಸ್ತಕ ಬರೆದಿದ್ರು. ಆ ಪುಸ್ತಕ (Book) ಕೂಡಾ ಸುಧಾ ಮೂರ್ತಿ ಇವತ್ತು ರಾಷ್ಟ್ರಪತಿಗೆ ನೀಡಿದರು. ರಾಷ್ಟ್ರಪತಿ ಕೂಡಾ ಇವರ ಈ ಗಿಫ್ಟ್ ನೋಡಿ ಸಂತಸ ಪಟ್ಟರು ಎಂದು ಸ್ವತಃ ಸುಧಾ ಮೂರ್ತಿ ಅವರೇ ಹೇಳಿದ್ದಾರೆ.

    ರಾಷ್ಟ್ರಪತಿಗೆ ಮಧ್ಯಾಹ್ನ ಊಟದಲ್ಲಿ ಉತ್ತರ ಕರ್ನಾಟಕ (Uttara Karnataka) ದ ಬಿಳಿ ರೊಟ್ಟಿ, ಮೆಂತಿ ರೊಟ್ಟಿ, ಗೋಧಿ ಪಾಯಸ ಸೇರಿ ಹಲವು ಬಗೆಯ ಊಟ ತಯಾರು ಮಾಡಿದರು. ಆದರೆ ರಾಷ್ಟ್ರಪತಿ ಅವರು ಏನು ಊಟ ಮಾಡಿದ್ದಾರೆ ಅಂತಾ ನಮಗೆ ಗೊತ್ತಿಲ್ಲ ಎಂದು ಸುಧಾ ಮೂರ್ತಿ ಹೇಳಿದರು. ಇದನ್ನೂ ಓದಿ: ಮೈಸೂರು ಸಿಲ್ಕ್‌ ಸೀರೆ ಧರಿಸಿ ದಸರಾಗೆ ಚಾಲನೆ ನೀಡಿದ ದ್ರೌಪದಿ ಮುರ್ಮು

    ರಾಷ್ಟ್ರಪತಿಗೆ ಕೊಟ್ಟ ಕೌದಿಯನ್ನೇ ಸುಧಾ ಮೂರ್ತಿ ಅವರು ರಾಜ್ಯಪಾಲ ಗೆಹ್ಲೋಟ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಗೂ ಕೊಟ್ಟಿದ್ದಾರೆ. ವೇದಿಕೆಯಲ್ಲಿ ರಾಷ್ಟ್ರಪತಿ ಬರುವ ಮೊದಲೇ ಈ ಮೂವರಿಗೆ ಸುಧಾ ಮೂರ್ತಿ ಈ ಕೌದಿ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬ್ಯಾನರ್ ಎಡವಟ್ಟು – ದೇಶದ ಮೊದಲ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಎಂದು ಬರೆಸಿದ ಶಾಸಕರು

    ಬ್ಯಾನರ್ ಎಡವಟ್ಟು – ದೇಶದ ಮೊದಲ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಎಂದು ಬರೆಸಿದ ಶಾಸಕರು

    ಧಾರವಾಡ: ದೇಶದ ಮೊದಲ ಮಹಿಳಾ ರಾಷ್ಟ್ರಪತಿ (President) ಯಾರು ಎಂದು ಎಲ್ಲರಿಗೆ ಗೊತ್ತಿರುವ ವಿಚಾರ. ಆದರೆ ಧಾರವಾಡದ ಶಾಸಕರೊಬ್ಬರು ದೇಶದ ಮೊದಲ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಸ್ವಾಗತ ಎಂದು ಬ್ಯಾನರ್‌ನಲ್ಲಿ ಹಾಕಿಕೊಂಡು ಎಡವಟ್ಟು ಮಾಡಿದ್ದಾರೆ.

    ನಾಳೆ ಧಾರವಾಡಕ್ಕೆ (Dharwada) ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತಿದ್ದಾರೆ. ಇಡಗಟ್ಟಿ ಹಾಗೂ ತಡಸಿನಕೊಪ್ಪ ಗ್ರಾಮದ ಹತ್ತಿರ ನಿರ್ಮಾಣಗೊಂಡಿರುವ ಐಐಟಿ (IIT) ಉದ್ಘಾಟನಾ ಕಾರ್ಯಕ್ರಮಕ್ಕೆ ದ್ರೌಪದಿ ಮುರ್ಮು ಬರುತ್ತಿದ್ದಾರೆ. ಈ ಹಿನ್ನೆಲೆ ಧಾರವಾಡ ಶಾಸಕ ಅರವಿಂದ ಬೆಲ್ಲದ್ (Arvind Bellad) ರಾಷ್ಟ್ರಪತಿಗೆ ಸ್ವಾಗತ ಕೋರಿ ಬ್ಯಾನರ್ ಹಾಕಿದ್ದು, ಅದರಲ್ಲಿ ಎಡವಟ್ಟು ಮಾಡಿದ್ದಾರೆ. ದೇಶದ ಮೊಲದ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸ್ವಾಗತ ಎಂದು ಬರೆಸಿದ್ದಾರೆ. ಇದನ್ನೂ ಓದಿ: ಆ ಭಾಗ್ಯ ಈ ಭಾಗ್ಯ ಅಂತಾ ರಾಜ್ಯಕ್ಕೆ ದೌರ್ಭಾಗ್ಯ ಕೊಟ್ಟರು: ಸಿದ್ದುಗೆ ಬೊಮ್ಮಾಯಿ ಟಾಂಗ್‌

    ಮುರ್ಮು ಅವರು ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಅಲ್ಲ. ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ (Pratibha Patil). ಇದೀಗ ಬ್ಯಾನರ್‌ನಲ್ಲಿ ತಪ್ಪಾಗಿ ಹಾಕಿರುವುದರಿಂದಾಗಿ ಶಾಸಕರಿಗೆ ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಯಾರೆಂದು ಗೊತ್ತಿಲ್ಲ ಎಂದು ಜನರೇ ವ್ಯಂಗ್ಯವಾಡುತ್ತಿದ್ದಾರೆ. ಇದನ್ನೂ ಓದಿ: ಅವರೆಲ್ಲಾ ಸಿಎಂ ಆಗಿದ್ದಾಗ ಬೀಗರ ಊಟ, ಮದುವೆಗೆ ಬರ್ತಿದ್ರು, ಬೊಮ್ಮಾಯಿ ಅಭಿವೃದ್ಧಿ ಕೆಲಸಕ್ಕೆ ಬರ್ತಿದ್ದಾರೆ: ಪ್ರತಾಪ್ ಸಿಂಹ

    Live Tv
    [brid partner=56869869 player=32851 video=960834 autoplay=true]

  • ಮತಾಂತರ ಪ್ರಕರಣ: ಹಿಂದೂ ಯುವಕನಿಗೆ ಬಲವಂತದ ಖತ್ನಾ ಮಾಡಲಾಗಿದೆ: ಮುತಾಲಿಕ್ ಕಿಡಿ

    ಮತಾಂತರ ಪ್ರಕರಣ: ಹಿಂದೂ ಯುವಕನಿಗೆ ಬಲವಂತದ ಖತ್ನಾ ಮಾಡಲಾಗಿದೆ: ಮುತಾಲಿಕ್ ಕಿಡಿ

    ಧಾರವಾಡ: ಮಂಡ್ಯ (Mandya) ಮೂಲದ ಶ್ರೀಧರ್‌ಗೆ ಬಲವಂತದ ಖತ್ನಾ (ಮುಂಜಿ) ಮಾಡಿ ಮತಾಂತರ (Conversion) ಮಾಡಲಾಗಿದೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

    ಧಾರವಾಡದಲ್ಲಿ ಘಟನೆ ಖಂಡಿಸಿ ಮಾತನಾಡಿದ ಅವರು, ಮತಾಂತರ ಘಟನೆಯನ್ನು ಶ್ರೀರಾಮ ಸೇನೆ ಖಂಡಿಸುತ್ತದೆ. ಆತ ಹುಡುಗಿಯನ್ನು ಭೇಟಿಯಾಗಲು ಬಂದಿದ್ದನೋ ಏನೋ ಗೊತ್ತಿಲ್ಲ. ಆತನಿಗೆ ಬಲವಂತದ ಖತ್ನಾ ಮಾಡಲಾಗಿದೆ. ಆತನ ಕೈಯಲ್ಲಿ ಪಿಸ್ತೂಲು ನೀಡಿ ಫೋಟೋ ತೆಗೆದಿದ್ದಾರೆ. 35 ಸಾವಿರ ಹಣವನ್ನು ಖಾತೆಗೆ ಹಾಕಿದ್ದಾರೆ. ಆತನೇ ಇದೀಗ ದೂರು ನೀಡಿದ್ದಾನೆ ಎಂದು ಹೇಳಿದರು.‌ ಇದನ್ನೂ ಓದಿ: ಬಲವಂತವಾಗಿ ಮತಾಂತರಕ್ಕೆ ಯತ್ನ – 11 ಮಂದಿಯ ವಿರುದ್ಧ ಎಫ್‍ಐಆರ್

    ಸರ್ಕಾರ (Government) ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಮತಾಂತರ ಕಾಯ್ದೆ ಅಡಿ ಕೇಸ್ ದಾಖಲಾಗಬೇಕು. ಈ ಪ್ರಕರಣದ ಹಿಂದೆ 11 ಜನರಷ್ಟೇ ಇಲ್ಲ. ಮಸೀದಿ, ಮದರಸಾ ಕೆಲಸ ಮಾಡುತ್ತಿವೆ. ಸರಿಯಾಗಿ ತನಿಖೆ ಮಾಡಬೇಕು. ಅಂದಾಗ ಮಾತ್ರ ಇಂತಹ ಪ್ರಕರಣಗಳು ಹೊರಗೆ ಬರುತ್ತವೆ. ಈ ಬಗ್ಗೆ ನಾನು ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಪತ್ರ ಬರೆದು ಮಾಹಿತಿ ತಿಳಿಸುತ್ತೇನೆ. ಯಾವ ಯಾವ ಮಸೀದಿಗಳಲ್ಲಿ ಮತಾಂತರ ನಡೆಯುತ್ತಿವೆ ಅನ್ನೋ ಮಾಹಿತಿ ಕೊಡುತ್ತೇನೆ ಎಂದರು. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆ, ಬಾಲಕಿಯರ ಕಿಡ್ನಾಪ್- ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ಮದುವೆ

    Live Tv
    [brid partner=56869869 player=32851 video=960834 autoplay=true]

  • ಎಸ್‌ಡಿಪಿಐ ಮೂಲಕ ಕಾಂಗ್ರೆಸ್‌ನ ವೋಟ್ ಬ್ಯಾಂಕ್ ಒಡೆದು ಬಿಜೆಪಿ ಲಾಭ ಪಡೆಯುತ್ತಿದೆ: ಮುತಾಲಿಕ್

    ಎಸ್‌ಡಿಪಿಐ ಮೂಲಕ ಕಾಂಗ್ರೆಸ್‌ನ ವೋಟ್ ಬ್ಯಾಂಕ್ ಒಡೆದು ಬಿಜೆಪಿ ಲಾಭ ಪಡೆಯುತ್ತಿದೆ: ಮುತಾಲಿಕ್

    ಧಾರವಾಡ: ಕಳೆದ ಹಲವಾರು ವರ್ಷದಿಂದ ಎಸ್‌ಡಿಪಿಐ (SDPI) ಹಾಗೂ ಪಿಎಫ್‌ಐ (PFI) ಬ್ಯಾನ್ ಮಾಡಬೇಕು ಎಂದು ಆಗ್ರಹ ಮಾಡುತ್ತಿದ್ದೇವೆ. ಸಾಕಷ್ಟು ಗಲಭೆ ಹಾಗೂ ಕೊಲೆಗಳಲ್ಲಿ ಪಿಎಫ್‌ಐ ಹಾಗೂ ಎಸ್‌ಡಿಪಿಐ ಎರಡೂ ಸಂಸ್ಥೆಗಳು ಭಾಗಿಯಾಗಿರುವ ಸಾಕ್ಷಿ ಸಿಕ್ಕಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿದರು.

    ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಈಗಲೂ ಇವರನ್ನು ಬ್ಯಾನ್ ಮಾಡಲು ಮೀನಾಮೇಷ ಎಣಿಸುತ್ತಿವೆ. ಈಗ ಪಿಎಫ್‌ಐ ಪ್ರಮುಖರ ಮೇಲೆ ದಾಳಿ ನಡೆದಿವೆ. 8 ಜಿಲ್ಲೆಯ ಕಚೇರಿ ಮೇಲೆ ದಾಳಿ ನಡೆದಿವೆ. ಕೆಲವು ದಾಖಲೆ ಹಣ ಸಿಕ್ಕಿದೆ ಎಂದು ಸುದ್ದಿಯಾಗಿದೆ. ಇವರದು ಹಿಜಬ್‌ನಲ್ಲಿಯೂ ಕೈವಾಡ ಇದೆ ಎಂದು ಹೇಳಿದರು.

    ಪ್ರವೀಣ್ ನೆಟ್ಟಾರು ಹಾಗೂ ಹರ್ಷನ ಕೊಲೆಯಲ್ಲಿ ಇವರು ಭಾಗಿಯಾಗಿದ್ದಾರೆ. ಇವರ ಸಂಘಟನೆ ಉಲ್ಲೇಖ ಎಫ್‌ಐಆರ್‌ನಲ್ಲಿದೆ. ಇವರನ್ನು ಯಾಕೆ ಬ್ಯಾನ್ ಮಾಡಿಲ್ಲ? ಈ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದರು.

    ಬಿಹಾರದಲ್ಲಿ ಸಿಕ್ಕಿಕೊಂಡವರು ಮುಸ್ಲಿಂ ರಾಷ್ಟ್ರ ಮಾಡಲು ಹೊರಟವರು. ಶಾಹಿನ್ ಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೋಟಿಗಟ್ಟಲೆ ಹಣ ಕೊಟ್ಟವರು ಇವರೇ! ಸಮಾಜ ಕಂಟಕ ನಡೆಸಿದವರ ಬ್ಯಾನ್ ಯಾಕೆ ಮಾಡ್ತಿಲ್ಲ? ನಾವು ಮುಂದಿನ ತಿಂಗಳು ಇವರ ಬಗ್ಗೆ ದಾಖಲೆ ಸಹಿತ ಬಹಿರಂಗ ಗೊಳಿಸಿ ಆಂದೋಲನ ಮಾಡುತ್ತೇವೆ. ಪಿಎಫ್‌ಐ, ಎಸ್‌ಡಿಪಿಐ ದೇಶದ್ರೋಹ ಚಟುವಟಿಕೆಗಳನ್ನು ಮಾಡಿದ್ದು ನಿಶ್ಚಿತ ಎಂದರು.

    ಇವರು ಹುಬ್ಬಳ್ಳಿಯಲ್ಲಿ ರಾಜ್ಯಾಧ್ಯಕ್ಷರ ಜೊತೆ ಸಭೆ ಮಾಡಿದ್ದಾರೆ. ಎಲ್ಲಾ ಕಡೆ ಚಟುವಟಿಕೆ ನಡೆದಿವೆ. ಅವರಿಗೆ ಯಾವುದೇ ಭಯ ಇಲ್ಲ, ಸೊಕ್ಕಿನವರು, ಇವತ್ತು ಜೈಲಿಗೆ ಹೋಗ್ತಾರೆ. ನಾಳೆ ಮತ್ತೆ ಬೇಲ್ ಸಿಗುತ್ತೆ. ಇವರು ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ಮಾಡಿದ್ದಾರೆ. ಇವರಿಗೆ ಸಂವಿಧಾನ ಬದ್ಧತೆ ಇಲ್ಲ. ಷರಿಯಾ ಆಧಾರದ ಮೇಲೆ ಇವರು ಹೊರಟವರು. ಇವರಿಗೆ ಮಟ್ಟ ಹಾಕಬೇಕು. ಈಗ ನಮ್ಮ ಆಂದೋಲನ ಆರಂಭ ಮಾಡ್ತೆವೆ ಎಂದರು. ಇದನ್ನೂ ಓದಿ: NIA ದಾಳಿಗೆ ಹೆದರಿ ಪರಾರಿ – ಹೊರ ಜಿಲ್ಲೆಯ PFI ನಾಯಕನಿಗೆ ಉಡುಪಿಯಲ್ಲಿ ಹುಡುಕಾಟ

    ಪ್ಯಾರಾ ಮಿಲಿಟರಿ ತರಹ ಇವರದು ಸಮಾಂತರ ಪಡೆ ತಯಾರು ಮಾಡುತ್ತಿದ್ದಾರೆ. ಕೇರಳ ಮೂಲಕ ಆರಂಭವಾದ ಈ ದೇಶ ದ್ರೋಹ ಕ್ಯಾನ್ಸರ್ ಇಡಿ ದೇಶದಲ್ಲಿ ಹರಡಿದೆ. 23 ರಾಜ್ಯಗಳಲ್ಲಿ 2 ಸಂಘಟನೆ ಕೆಲಸ ಮಾಡುತ್ತಿವೆ. ಸಿಎಎ ಯಿಂದ ಹಿಡಿದು ಅಜಾನ್ ವರೆಗೆ ಇವರು ಪ್ರಚೋದನೆ ಕೊಟ್ಟಿದ್ದಾರೆ. ಎಲ್ಲರೂ ಬ್ಯಾನ್ ಮಾಡಿ ಎನ್ನುತ್ತಿದ್ದಾರೆ. ಮುಸ್ಲಿಂ ಲೀಗ್ ಹಾಗೂ ಮುಸ್ಲಿಂ ಸಮಾಜದವರು ಬ್ಯಾನ್ ಮಾಡಿ ಎಂದಿದ್ದಾರೆ ಎಂದು ತಿಳಿಸಿದರು.

    ಕೇರಳ ಸಿಎಂ, ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡಾ ಬ್ಯಾನ್ ಮಾಡಲು ಹೇಳಿದೆ, ಸರ್ಕಾರದಲ್ಲಿ ಇಲ್ಲದ ಸಮಯದಲ್ಲಿ ಬಿಜೆಪಿ ಕೂಡಾ ಬ್ಯಾನ್ ಮಾಡಲು ಹೇಳಿತ್ತು. ಈಗ ನಿಮ್ಮ ಸರ್ಕಾರ ಇರುವ ಸಮಯದಲ್ಲಿ ಬ್ಯಾನ್ ಮಾಡದೇ ರೇಡ್ ಮಾಡುವುದು, ಸೀಜ್ ಮಾಡುವುದು ನಡೆದಿದೆ. ಇದು ಸಂಶಯ ತರುವಂತೆ ಮಾಡಿದೆ ಎಂದು ಕಿಡಿಕಾರಿದರು.

    ಸರ್ಕಾರ ಇವರನ್ನು ಬ್ಯಾನ್ ಮಾಡಲು ಮೀನಾಮೇಷ ಎಣಿಸುತ್ತಿದೆ. ಯಾಕೆ ತಡ ಮಾಡುತ್ತಿದೆ ಎನ್ನುವುದು ಯಕ್ಷ ಪ್ರಶ್ನೆ. ಎಸ್‌ಡಿಪಿಐ ಮೂಲಕ ಕಾಂಗ್ರೆಸ್ ಒಟ್ ಬ್ಯಾಂಕ್ ಒಡೆದು ಬಿಜೆಪಿ ಲಾಭಕ್ಕಾಗಿ ಸಾಕುತ್ತಿದೆ. ಇದು ಬಹಿರಂಗ ಸತ್ಯ. ಎಲ್ಲರೂ ಇದನ್ನೇ ಮಾತನಾಡುತ್ತಿದ್ದಾರೆ. ಬಿಜೆಪಿಯ ಬಿ ಟೀಮ್ ಇದು ಎಂದು ಹೇಳಿದ್ರೂ ಬಿಜೆಪಿಗೆ ಅರ್ಥ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಾಪರೆಡ್ಡಿ ಪಾಳ್ಯದಲ್ಲಿ 5 ಅಂತಸ್ತಿನ ಮನೆ ಉಡೀಸ್

    ನೂರಕ್ಕೆ ನೂರು ಇದರ ಲಾಭ ಬಿಜೆಪಿಗೆ ಸಿಕ್ಕಿದೆ, ಎಸ್‌ಡಿಪಿಐ ಎಲ್ಲೆಲ್ಲಿ ಸ್ಪರ್ಧೆ ಮಾಡಿದೆ, ಅದರ ಲಾಭ ಬಿಜೆಪಿಗೆ ಆಗಿದೆ. ಎಸ್‌ಡಿಪಿಐ ಕೂಡಾ ಸಾಕಷ್ಟು ಕಡೆ ಗೆದ್ದಿದೆ. ಬಿಜೆಪಿಯ ಲಾಭಕ್ಕೆ ಸಮಾಜವನ್ನು ಬಲಿ ಕೊಡಬೇಡಿ, ಹಿಂದೂಗಳಿಗೆ ಬಲಿ ಕೊಡಬೇಡಿ, ಇವರನ್ನು ಪೋಷಿಸಬೇಡಿ ಎಂದು ಮನವಿ ಮಾಡಿದರು.

    Live Tv
    [brid partner=56869869 player=32851 video=960834 autoplay=true]

  • ಶ್ವಾನಕ್ಕೆ ಶ್ವಾನದಿಂದಲೇ ರಕ್ತದಾನ

    ಶ್ವಾನಕ್ಕೆ ಶ್ವಾನದಿಂದಲೇ ರಕ್ತದಾನ

    ಧಾರವಾಡ: ಕೃಷಿ ಮೇಳದಲ್ಲಿ(Krishi Mela) ಶ್ವಾನವೊಂದಕ್ಕೆ ಶ್ವಾನವೇ(Dog) ರಕ್ತದಾನ(Blood Donation) ಮಾಡಿ ಸುದ್ದಿಯಾಗಿದೆ.

    ಧಾರವಾಡ(Dharawada) ಕೃಷಿ ಮೇಳಕ್ಕೆ ಆಗಮಿಸಿರುವ ಡಾಗ್ ಸ್ಕ್ವಾಡ್ ʼಮಾಯಾʼಗೆ ಅನಾರೋಗ್ಯ ಹಿನ್ನೆಲೆಯಲ್ಲಿ ರಕ್ತದ ಅವಶ್ಯಕತೆ ಇತ್ತು. ಈ ಹಿನ್ನೆಲೆಯಲ್ಲಿ ರೆಸ್ಕ್ಯೂ ಟೀಂ ಸದಸ್ಯರಾಗಿರುವ ಸೋಮು ಅವರ ಜರ್ಮನ್ ಶೆಫರ್ಡ್ ʼಚಾರ್ಲಿʼ ರಕ್ತ ನೀಡಿದೆ. ಇದನ್ನೂ ಓದಿ: ಮಗಳ ನಿಶ್ಚಿತಾರ್ಥದ ಊಟಕ್ಕೆ ಮನೆಯಲ್ಲಿ ಸಾಕಿದ್ದ ಹಸುವೇ ಬಲಿ

    ಕೃಷಿ ವಿಶ್ವವಿದ್ಯಾಲಯ ವೈದ್ಯಕೀಯ ಸಿಬ್ಬಂದಿ ಯಶಸ್ವಿಯಾಗಿ ರಕ್ತದಾನ ಮಾಡಿಸಿದ್ದಾರೆ. ಎರಡನೇ ಬಾರಿ ರಕ್ತದಾನ ಮಾಡುವ ಮೂಲಕ ಚಾರ್ಲಿ ಗಮನ ಸೆಳೆದಿದೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯಾರ್ಥಿಗಳಲ್ಲಿ ಗಣಿತ ಕಲಿಕೆ ಉತ್ತೇಜಿಸಲು ಬಹುಮಾನ ಘೋಷಿಸಿದ ಜೋಶಿ

    ವಿದ್ಯಾರ್ಥಿಗಳಲ್ಲಿ ಗಣಿತ ಕಲಿಕೆ ಉತ್ತೇಜಿಸಲು ಬಹುಮಾನ ಘೋಷಿಸಿದ ಜೋಶಿ

    ಧಾರವಾಡ: ಮಕ್ಕಳಲ್ಲಿ ಗಣಿತ(Mathematics) ಕುರಿತು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಗಣಿತ ಮೇಳ ವಿಭಿನ್ನ, ವಿಶಿಷ್ಠವಾದದ್ದು. ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಸ್ಪರ್ಧೆ ಕೂಡಾ ಆಯೋಜಿಸಬೇಕು. ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗೆ 25 ಸಾವಿರ ರೂಪಾಯಿ, ದ್ವಿತೀಯ ಸ್ಥಾನ 15 ಸಾವಿರ ಮತ್ತು ತೃತೀಯ ಸ್ಥಾನ ಪಡೆಯುವ ವಿದ್ಯಾರ್ಥಿಗೆ ವೈಯಕ್ತಿಕವಾಗಿ ಬಹುಮಾನ ನೀಡುತ್ತೇನೆ ಎಂದು ಸಚಿವ ಪ್ರಹ್ಲಾದ್‌ ಜೋಶಿ(Pralhad Joshi) ಘೋಷಿಸಿದರು.

    ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ 72ನೇ ಜನ್ಮದಿನದ ಅಂಗವಾಗಿ ನಗರದ ಕರ್ಷ ಜ್ಞಾನ ಫೌಂಡೇಶನ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕೆ.ಇ. ಬೋರ್ಡ್ ಸಂಸ್ಥೆ ಜಂಟಿಯಾಗಿ ಇಲ್ಲಿನ ಕರ್ನಾಟಕ ಪ್ರೌಢಶಾಲೆಯಲ್ಲಿ ಆಯೋಜಿಸಿರುವ ಎರಡು ದಿನಗಳ ಮೋಜಿನೊಂದಿಗೆ ಗಣಿತ ಕಲಿಕೆ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಇದನ್ನೂ ಓದಿ: ಮೋದಿ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ – 2,500 ಯೂನಿಟ್ ರಕ್ತ ಸಂಗ್ರಹ

    ನಿತ್ಯ ಬದುಕಿನ ಭಾಗವಾಗಿರುವ ಗಣಿತದ ಕುರಿತು ಆಸಕ್ತಿ ಮೂಡಿಸುವ ಅಗತ್ಯವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯಪಟ್ಟರು. ಭಾರತೀಯ ವೇದ, ಪುರಾಣಗಳಲ್ಲಿ ಗಣಿತದ ಉಲ್ಲೇಖವಿದ್ದು, ಗಣಿತ ಶಾಸ್ತ್ರಕ್ಕೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಜಗತ್ತಿಗೆ ಸೊನ್ನೆ ಪರಿಚಯಿಸಿದ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ. ಭಾಸ್ಕರಾಚಾರ್ಯರಿಂದ ಹಿಡಿದು ಇತ್ತೀಚಿಗಿನ ಶ್ರೀನಿವಾಸ ರಾಮಾನುಜನ್ ಸೇರಿದಂತೆ ಅನೇಕ ಗಣಿತ ಶಾಸ್ತ್ರಜ್ಞರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಆದರೆ ಬದಲಾದ ಸಂದರ್ಭದಲ್ಲಿ ಗಣಿತ ಕಬ್ಬಿಣದ ಕಡಲೆ ಎಂದು ವಿದ್ಯಾರ್ಥಿಗಳು ಭಾವಿಸುತ್ತಿದ್ದು, ಆ ಭಯ ತೊಡೆದು ಗಣಿತದಲ್ಲಿ ಆಸಕ್ತಿ ಮೂಡಿಸಲು ಈ ಮೇಳ ಆಯೋಜಿಸಿರುವುದು ಅಭಿನಂದನೀಯ ಕಾರ್ಯ ಎಂದರು.

    ರಾಜಕೀಯ ಎಂದರೆ ತಿರಸ್ಕೃತ ಎನ್ನುವ ಭಾವನೆ ಬಲವಾಗುತ್ತಿರುವ ಸಂದರ್ಭದಲ್ಲಿ, ಆ ವ್ಯವಸ್ಥೆಯಲ್ಲಿ ಪುನರಪಿ ವಿಶ್ವಾಸ ಮೂಡುವಂತೆ ಮಾಡಿದ, ಪ್ರತಿಯೊಂದರಲ್ಲೂ ಭಾರತೀಯ ಭಾವನೆಯನ್ನು ಉದ್ದೀಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಹಲವು ರೀತಿಯ ಸಾಮಾಜಿಕ ಕಾರ್ಯಗಳ ಮೂಲಕ ದೇಶಾದ್ಯಂತ ಆಚರಿಸಲಾಗುತ್ತಿದೆ. ಆದರೆ ಇಲ್ಲಿ ಗಣಿತವನ್ನು ಮಕ್ಕಳಿಗೆ ಸುಲಭವಾಗಿಸುವ ಮತ್ತು ಅರ್ಥೈಸುವ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯ ಸುರೇಶ ಬೇದರೆ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ವಕೀಲ ಅರುಣ ಜೋಶಿ, ವಿನಾಯಕ ಜೋಶಿ, ಸಂಯೋಜಕಿ ಸುಮಂಗಲಾ ದಾಂಡೇವಾಲೆ, ಮಯೂರ ದಾಂಡೇವಾಲೆ ಸೇರಿದಂತೆ ಧಾರವಾಡ ಶಹರ ಮತ್ತು ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಭಾಗವಹಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸ್ಪಾದಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ – ಕಾಂಗ್ರೆಸ್ ಮುಖಂಡನ ಬಂಧನ

    ಸ್ಪಾದಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ – ಕಾಂಗ್ರೆಸ್ ಮುಖಂಡನ ಬಂಧನ

    ಧಾರವಾಡ: ತನ್ನದೇ ಸ್ಪಾದಲ್ಲಿ (Spa) ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಕಾಂಗ್ರೆಸ್ ಮುಖಂಡನಿಗೆ(Congress leader) ಯುವತಿ(Young Women) ಸ್ನೇಹಿತರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಹೌದು, ಧಾರವಾಡದ ಕಾಂಗ್ರೆಸ್ ಮುಖಂಡ ಮನೋಜ್‍ ಕರ್ಜಗಿ(Manoj Karjagi) ಎಂಬಾತ ಸಿದ್ದರಾಮಯ್ಯ (Siddaramaiah) ಸರ್ಕಾರದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕ ಆಗಿದ್ದ. ಈತ ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಅವರ ಪರಮ ಆಪ್ತ. ಕರ್ಜಗಿ ವೃತ್ತಿಯಿಂದ ಧಾರವಾಡದ (Darwad) ವಿದ್ಯಾಗಿರಿ ಬಡಾವಣೆಯಲ್ಲಿ ಲೇಮೋಸ್ ಯುನಿಸೆಕ್ಸ್ ಸಲೂನ್ ಆ್ಯಂಡ್ ಸ್ಪಾ ನಡೆಸುತ್ತಿದ್ದಾನೆ. ಇದನ್ನೂ ಓದಿ: ನನ್ನ ನೋಡಿ ಬೊಗಳುತ್ತೆ – ನಾಯಿಯನ್ನು ಅಟ್ಟಾಡಿಸಿಕೊಂಡು ಗುಂಡಿಕ್ಕಿ ಕೊಂದ

    ಭಾನುವಾರ (Sunday) ಮಧ್ಯಾಹ್ನ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಬ್ಯೂಟಿಷಿಯನ್ (Beautician) ಜೊತೆ ಸ್ಪಾ ಕ್ಲೀನ್ ಆಗಿ ಇಟ್ಟಿಲ್ಲ ಎಂಬ ವಿಚಾರವಾಗಿ ಕಿರಿಕ್ ಮಾಡಿದ್ದಾನೆ. ಬಳಿಕ ಆಕೆಯನ್ನು ತಬ್ಬಿಕೊಂಡು ಮುತ್ತು ಕೊಡಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲಿಂದ ಕೂಗಾಡುತ್ತಾ ಹೊರ ಬಂದ ಯುವತಿ, ತನ್ನ ಸ್ನೇಹಿತರನ್ನು (Friends) ಅಲ್ಲಿಗೆ ಕರೆಯಿಸಿಕೊಂಡಿದ್ದಾಳೆ. ಆಗ ಸ್ಪಾಗೆ ಬಂದ ಯುವತಿಯ ಸ್ನೇಹಿತರ ಗುಂಪು ಮನೋಜ್‍ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಯುವತಿಗೆ ಕ್ಷಮೆ ಕೇಳಿ ಎಲ್ಲವೂ ಮುಗಿದಿತ್ತು.

    ಹೀಗಿದ್ದರೂ ತಾನು ಸಾಚಾ ಎಂದು ತೋರಿಸಿಕೊಳ್ಳಲು ಹೋಗಿ ಕಾಂಗ್ರೆಸ್ ಮುಖಂಡ ತಾನೇ ತೋಡಿದ ಖೆಡ್ಡಾದಲ್ಲಿ ತಾನೇ ಬಿದ್ದಿದ್ದಾನೆ. ಗಲಾಟೆ ವೇಳೆ ಆಯನ್ ನದಾಫ್(Ayan Nadaf) ಎಂಬಾತನಿಗೆ ಗಾಯವಾಗಿದ್ದು, ಈತನೊಂದಿಗೆ ಮನೋಜ್‍ ಕರ್ಜಗಿ ನಮ್ಮ ಮೇಲೆ ಗುಂಪೊಂದು ಹಲ್ಲೆ ಮಾಡಿ ಪರಾರಿಯಾಗಿದೆ ಅಂತಾ ಎಂಎಲ್‍ಸಿ(MLC) ಮಾಡಿಸಿ ಚಿಕಿತ್ಸೆ ಪಡೆದುಕೊಂಡಿದ್ದರು. ಘಟನೆಯಲ್ಲಿ ಕರ್ಜಗಿ ಕೈಗೆ ಏಟಾಗಿದ್ದರೆ, ಆಯನ್ ಬೆನ್ನಿಗೆ ಇರಿತ ಆಗಿದೆ. ಕರ್ಜಗಿ ಇತ್ತ ಎಂಎಲ್‍ಸಿ ಮಾಡಿಸುತ್ತಿದ್ದಂತೆಯೇ ವಿದ್ಯಾಗಿರಿ ಠಾಣೆಗೆ ಬಂದ ಯುವತಿ, ಮನೋಜ್‍ ಕರ್ಜಗಿ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸಿದ್ದು, ಸದ್ಯ ಕರ್ಜಗಿಯನ್ನು ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಮತ್ತೊಂದು ಕಡೆ ಅಯಾನ್ ಹಾಗೂ ಕರ್ಜಗಿ ಮೇಲೆ ಹಲ್ಲೆ ಮಾಡಿದವರ ಮೇಲೂ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಈ ಸಂಬಂಧ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಸ್ಮಾರ್ಟ್ ಫೋನ್ ಬಳಕೆದಾರರೇ ಎಚ್ಚರ! – ಎಂಟ್ರಿಕೊಟ್ಟಿದೆ ರಷ್ಯಾದ ಸೋವಾ-5.0 ವೈರಸ್

    Live Tv
    [brid partner=56869869 player=32851 video=960834 autoplay=true]

  • ಧಾರವಾಡದಲ್ಲಿ ಯುವಕನ ಮೇಲೆ ಚಾಕು ಇರಿತ

    ಧಾರವಾಡದಲ್ಲಿ ಯುವಕನ ಮೇಲೆ ಚಾಕು ಇರಿತ

    ಧಾರವಾಡ: ಕ್ಷುಲ್ಲಕ ಕಾರಣಕ್ಕಾಗಿ ಯುವಕನ(Young Man) ಮೇಲೆ ಚಾಕುವಿನಿಂದ ದಾಳಿ ನಡೆಸಿದ ಘಟನೆ ಧಾರವಾಡದಲ್ಲಿ(Dharwad) ನಡೆದಿದೆ.

    ಅಯಾನ್ ನದಾಫ್ ಎಂಬುವವನ ಮೇಲೆಯೇ ಯುವಕರ ಗುಂಪು ಚಾಕುವಿನಿಂದ ದಾಳಿ ನಡೆಸಿದೆ. ಧಾರವಾಡ ತಾಲೂಕಿನ ಬೇಲೂರು ಗ್ರಾಮದ ಬಸವರಾಜ ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ಅಯಾನ್ ಆರೋಪಿಸಿದ್ದಾನೆ. ಧಾರವಾಡದ ಜೆಎಸ್‍ಎಸ್ ಕಾಲೇಜು(JSS College) ಬಳಿ ಈ ಘಟನೆ ಸಂಭವಿಸಿದೆ. ಕ್ಷುಲ್ಲಕ ಕಾರಣಕ್ಕಾಗಿ ಅಯಾನ್ ಎಂಬ ಯುವಕನೊಂದಿಗೆ ಜಗಳ ತೆಗೆದ ಯುವಕರ ಗುಂಪು ಅಯಾನ್ ಎದೆಗೆ ಎರಡು ಬಾರಿ ಹಾಗೂ ಬೆನ್ನಿಗೆ ಒಂದು ಬಾರಿ ಚಾಕುವಿನಿಂದ ದಾಳಿ ನಡೆಸಿದೆ. ಇದನ್ನೂ ಓದಿ: ಶಾಲೆಯಲ್ಲಿ ಬಾಂಬ್ ಸ್ಫೋಟ- ವಿದ್ಯಾರ್ಥಿಗಳ ಸ್ಥಳಾಂತರ

    crime

    ಸದ್ಯ ಗಾಯಗೊಂಡಿರುವ ಅಯಾನ್‍ಗೆ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು,  ಪೊಲೀಸರು(Police) ದಾಳಿ ಮಾಡಿದವರ ಬಂಧನಕ್ಕೆ ಬಲೆ ಬಿಸಿದ್ದಾರೆ. ಇದನ್ನೂ ಓದಿ: ಮೋದಿ ಕಾರ್ಯಕ್ರಮಕ್ಕೆ ಹೋಗಿಬರುತ್ತಿದ್ದ ಬಸ್ ಅಪಘಾತ – 20 ಮಹಿಳೆಯರಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಬಿಆರ್‌ಟಿಎಸ್ ಬಸ್‌ನಲ್ಲಿ ಬೆಂಕಿ – ಹೊಗೆ ನೋಡಿ ಎದ್ನೋ ಬಿದ್ನೋ ಓಡಿದ ಪ್ರಯಾಣಿಕರು

    ಬಿಆರ್‌ಟಿಎಸ್ ಬಸ್‌ನಲ್ಲಿ ಬೆಂಕಿ – ಹೊಗೆ ನೋಡಿ ಎದ್ನೋ ಬಿದ್ನೋ ಓಡಿದ ಪ್ರಯಾಣಿಕರು

    ಧಾರವಾಡ: ಬಿಆರ್‌ಟಿಎಸ್(BRTS) ಚಿಗರಿ ಬಸ್(Bus) ಒಂದರಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿದ್ದು, ಹೊಗೆಯನ್ನು ನೋಡಿದ ಪ್ರಯಾಣಿಕರು(Passengers) ಎದ್ನೋ ಬಿದ್ನೋ ಎಂದು ಬಸ್‌ನಿಂದ ಇಳಿದು ಓಡಿ ಹೋಗಿದ್ದಾರೆ.

    ಧಾರವಾಡ(Dharwad) ಜುಬ್ಲಿ ವೃತ್ತದಲ್ಲಿ ಬಸ್ ಅನ್ನು ನಿಲ್ಲಿಸಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಪ್ರಯಾಣಿಕರಿದ್ದ ಬಸ್ ಅನ್ನು ಚಾಲಕ ಕೋರ್ಟ್ ವೃತ್ತದ ಬಿಆರ್‌ಟಿಎಸ್ ಕಾರಿಡಾರ್‌ಗೆ ತೆಗೆದುಕೊಂಡು ಹೋಗಿದ್ದಾರೆ.

    ಹೊಗೆ ಹೆಚ್ಚುತ್ತಿದ್ದಂತೆ ಬಸ್ ಅನ್ನು ನಿಲ್ಲಿಸಿ, ಪ್ರಯಾಣಿಕರು ಅದರಿಂದ ಇಳಿದು ಓಡಿದ್ದಾರೆ. ಬಳಿಕ ಚಾಲಕ ಬಸ್‌ನಲ್ಲಿದ್ದ ಬೆಂಕಿ ನಂದಿಸುವ ಫಾಗ್ ಹೊಡೆದು ಬೆಂಕಿ ನಂದಿಸಲು ಪ್ರಯತ್ನ ಮಾಡಿದ್ದಾರೆ. ಅದೇ ಸಮಯಕ್ಕೆ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಬೆಂಕಿ ನಂದಿಸಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಒಂದು ದೊಡ್ಡ ದುರಂತ ತಪ್ಪಿದಂತಾಗಿದೆ. ಇದನ್ನೂ ಓದಿ: ಮೋದಿ ಹುಟ್ಟುಹಬ್ಬ – ನಾಳೆ ಹುಟ್ಟುವ ಮಕ್ಕಳಿಗೆ ಚಿನ್ನದುಂಗುರ ನೀಡಲಿದೆ ಬಿಜೆಪಿ

    ಘಟನೆಯ ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಬೇಟಿ ನೀಡಿದ ಎಸಿಪಿ ಹಾಗೂ ಉಪನಗರ ಠಾಣೆ ಪೊಲೀಸರು, ಬಸ್ ಅನ್ನು ಡಿಪೋಗೆ ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ರಾಜಕಾಲುವೆ ಒತ್ತುವರಿ – ನಲಪಾಡ್ ಅಕಾಡೆಮಿಗೆ ಬಿಗ್ ರಿಲೀಫ್

    Live Tv
    [brid partner=56869869 player=32851 video=960834 autoplay=true]

  • ಮೂಲಂಗಿ ಮಾರಿ ಜೀವನ ನಡೆಸುತಿದ್ದ ಪತ್ನಿಯನ್ನ ಕುಡಿದ ಅಮಲಿನಲ್ಲಿ ಕೊಲೆ ಮಾಡಿದ ಪತಿ

    ಮೂಲಂಗಿ ಮಾರಿ ಜೀವನ ನಡೆಸುತಿದ್ದ ಪತ್ನಿಯನ್ನ ಕುಡಿದ ಅಮಲಿನಲ್ಲಿ ಕೊಲೆ ಮಾಡಿದ ಪತಿ

    ಧಾರವಾಡ: ಮೂಲಂಗಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಪತ್ನಿಯನ್ನು ಪತಿಯೇ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಧಾರವಾಡದಲ್ಲಿ(Dharwad) ನಡೆದಿದೆ.

    ನಗರದ ಕೋಳಿಕೇರಿ ತೋಟದಲ್ಲಿ ಈ ಕೊಲೆ ನಡೆದಿದ್ದು, ಮಂಜವ್ವ ಪಠಾದ್ (42) ಅವಳನ್ನು ಆಕೆಯ ಪತಿ ಗದಿಗೆಪ್ಪ ಕೊಲೆ ಮಾಡಿದ್ದಾನೆ. ಗದಿಗೆಪ್ಪ ಕುಡಿತದ ಚಟಕ್ಕೆ ಬಿದ್ದಿದ್ದ. ಈ ಹಿನ್ನೆಲೆ ಪತಿ(Husband) ಹಾಗೂ ಪತ್ನಿಯ(Wife) ನಡುವೆ ಆಗಾಗ ಜಗಳ ಆಗುತಿತ್ತು. ಕಳೆದ ರಾತ್ರಿ ಕೂಡಾ ಪತಿ, ಪತ್ನಿ ನಡುವೆ ಜಗಳ ಆಗಿತ್ತು. ಆದರೆ ಇಂದು ಮಂಜವ್ವ ಹೊಲದಲ್ಲಿ ಮೂಲಂಗಿ ತೊಳೆಯುವಾಗ ಗದಿಗೆಪ್ಪ ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಎಷ್ಟೇ ದೊಡ್ಡ ಹುಲಿ ಆದ್ರೂ, ಕಾನೂನಿಗೆ ಒಂದೇ – ಬಿಎಸ್‌ವೈಗೆ ಟಾಂಗ್ ನೀಡಿದ ಯತ್ನಾಳ್

    crime

    ಮಂಜವ್ವ ಪತಿ ಗದಿಗೆಪ್ಪ ಈ ಹಿಂದೆ ಕೂಡಾ ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಹೊಲದ ವಿಚಾರವಾಗಿ ಒಂದು ಕೊಲೆ ಮಾಡಿ ಜೈಲು ಸೇರಿದ್ದ. ಕಳೆದ ನಾಲ್ಕು ವರ್ಷಗಳ ಹಿಂದೆಯಷ್ಟೇ ಈತ ಸೆರೆವಾಸ ಮುಗಿಸಿ ಜೈಲಿನಿಂದ ಹೊರ ಬಂದಿದ್ದ. ಅಲ್ಲದೇ ಮಂಜವ್ವಳ ಸಹೋದರಿ ಕೂಡಾ ಕೆಲ ವರ್ಷಗಳ ಹಿಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ಸದ್ಯ ಶಹರ ಪೊಲೀಸ್ ಠಾಣೆ ಪೊಲೀಸರು ಮಂಜವ್ವಳ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದನ್ನೂ ಓದಿ:  ಮುರುಘಾ ಮಠದಿಂದ ಇಬ್ಬರು ಬಾಲಕರು ನಾಪತ್ತೆ

    Live Tv
    [brid partner=56869869 player=32851 video=960834 autoplay=true]