Tag: ಧಾರವಾಡ

  • ಪೊಲೀಸ್ ಮನೆಗೇ ನುಗ್ಗಲು ಯತ್ನಿಸಿ, ಸಿಕ್ಕಿ ಬಿದ್ದು ಒದೆ ತಿಂದ ಕಳ್ಳರು

    ಪೊಲೀಸ್ ಮನೆಗೇ ನುಗ್ಗಲು ಯತ್ನಿಸಿ, ಸಿಕ್ಕಿ ಬಿದ್ದು ಒದೆ ತಿಂದ ಕಳ್ಳರು

    ಧಾರವಾಡ: ಇಬ್ಬರು ಕಳ್ಳರು (Thieves) ಕಳ್ಳತನ ಮಾಡಲೆಂದು ಪೊಲೀಸ್ (Police) ಒಬ್ಬರ ಮನೆಗೆ ನುಗ್ಗಲು ಯತ್ನಿಸಿ, ಕೊನೆಗೆ ಪೊಲೀಸರ ಅತಿಥಿಯಾದ ಘಟನೆ ಧಾರವಾಡದ (Dharwad) ಸಾಧುನವರ ಎಸ್ಟೇಟ್‌ನಲ್ಲಿ ನಡೆದಿದೆ.

    ಧಾರವಾಡದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಕೆಲಸ ಮಾಡುತ್ತಿರುವ ಬಸವರಾಜ ಬಳಿಗೇರ ಅವರ ಮನೆಗೆ ಕಳ್ಳರು ತಡ ರಾತ್ರಿ ನುಗ್ಗಲು ಯತ್ನಿಸಿದ್ದರು. ಬಳಿಗೇರ ಅವರ ಮನೆ ಸಾಧುನವರ ಎಸ್ಟೇಟ್‌ನ ಬೆಟಗೇರಿ ಬಿಲ್ಡಿಂಗ್‌ನಲ್ಲಿದ್ದು, ಅವರ ಮನೆಗೆ ಇಬ್ಬರು ಕಳ್ಳರು ರಾತ್ರೋರಾತ್ರಿ ನುಗ್ಗಲು ಹೊಂಚು ಹಾಕಿ ಕುಳಿತುಕೊಂಡಿದ್ದರು.

    ಈ ವೇಳೆ ಕಳ್ಳರ ಸಪ್ಪಳ ಕೇಳಿದ ಬಳಿಗೇರ ಹಾಗೂ ಅವರ ಪುತ್ರ, ಮೊದಲು ಮನೆಯ ಬಾಗಿಲು ತೆರೆದು ನೋಡಿದ್ದಾರೆ. ಆಗ ಯಾರೂ ಅವರ ಕಣ್ಣಿಗೆ ಕಾಣಿಸಿಕೊಂಡಿರಲಿಲ್ಲ. ನಂತರ ಎರಡನೇ ಬಾರಿ ಕಳ್ಳರು ಪಿಸುಗುಡುತ್ತಿದ್ದುದನ್ನು ಕೇಳಿದ ಮನೆಯವರು ಒಬ್ಬ ಕಳ್ಳನನ್ನು ಹಿಡಿದಿದ್ದಾರೆ. ಆನಂತರ 112 ಸಹಾಯವಾಣಿಗೆ ಕರೆ ಮಾಡಿದ ಬಳಿಗೇರ ಪೊಲೀಸರ ಸಹಾಯದಿಂದ ಮತ್ತೊಬ್ಬ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: RSS ಕಾರ್ಯಕರ್ತರ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ: 10 ಮಂದಿ ಅರೆಸ್ಟ್‌

    POLICE JEEP

    ಈ ಇಬ್ಬರೂ ಕಳ್ಳರನ್ನು ಹಿಡಿಯುವಾಗ ಒಬ್ಬ ಕಳ್ಳ ಎಎಸ್‌ಐ ಬಳಿಗೇರ ಅವರ ಮೂಗಿಗೆ ಪರಚಿದ್ದಾನೆ. ವಾಸು ಮಾದರ ಹಾಗೂ ಮೃತ್ಯುಂಜಯ ಮರೆಪ್ಪನವರ ಬಂಧಿತ ಕಳ್ಳರಾಗಿದ್ದು, ಈ ಇಬ್ಬರೂ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದವರು ಎಂದು ತಿಳಿದು ಬಂದಿದೆ. ಸದ್ಯ ಇಬ್ಬರನ್ನೂ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಜಿಂಕೆ ಮಾಂಸ ಮಾರಾಟ ಆರೋಪಿ ವಿಚಾರಣೆ ವೇಳೆ ಸಾವು

    Live Tv
    [brid partner=56869869 player=32851 video=960834 autoplay=true]

  • ಧಾರವಾಡ ಪೇಡಾ, ಪ್ರಹ್ಲಾದ್ ಜೋಶಿಯನ್ನು ಹಾಡಿ ಹೊಗಳಿದ ಅಶ್ವಿನಿ ವೈಷ್ಣವ್

    ಧಾರವಾಡ ಪೇಡಾ, ಪ್ರಹ್ಲಾದ್ ಜೋಶಿಯನ್ನು ಹಾಡಿ ಹೊಗಳಿದ ಅಶ್ವಿನಿ ವೈಷ್ಣವ್

    ಧಾರವಾಡ: ನವೀಕೃತ ಧಾರವಾಡದ ರೈಲು ನಿಲ್ದಾಣ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೇಂದ್ರ ರೇಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw),  ಧಾರವಾಡ ಪೇಡಾವನ್ನು (Dharwad Peda) ಹಾಡಿ ಹೊಗಳಿದರು. ಅದರ ಜೊತೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರನ್ನೂ ವೈಷ್ಣವ್ ಕೊಂಡಾಡಿದ ಪ್ರಸಂಗ ನಡೆಯಿತು.

    ಪೇಡಾ ನಗರದ ಜನರಿಗೆ ನಮಸ್ಕಾರ ಎಂದ ಸಚಿವ ವೈಷ್ಣವ್ ಅವರು, ಧಾರವಾಡ ಪೇಡಾ ತಿನ್ನಬೇಕು ಎಂದು ಹೇಳಿ ನಸು ನಕ್ಕರು. ಇಲ್ಲಿ ಜೋಶಿ ಅವರು ಇದ್ದಾರೆ, ಅದರ ಜೊತೆಗೆ ಪೇಡಾನೂ ಇದೆ. ವಂದೇ ಭಾರತ್ ರೈಲು ನಿಮಗೆ ಕೊಡಲೇ ಬೇಕು. ಯಾಕಂದ್ರೆ ನಮಗೆ ಪೇಡಾ ಸಿಕ್ಕಿದೆ ಎಂದು ನುಡಿದರು.

    ನಾವು ನಿಮಗೆ ಪಕ್ಕಾ ರೈಲು ಕೊಡುತ್ತೇವೆ. ಮೋದಿ ಅವರ ಬಳಿ ಹೋಗಿ ವಂದೇ ಭಾರತ್ ತಂದಿದ್ದೇವೆ. ಈಗ ಪೇಡಾ ಕೊಡಿ ಎಂದು ಕೇಳುತ್ತೇವೆ. ಇಲ್ಲಿ ಜೋಶಿ ಅವರಿಂದ ಬಹಳ ಅಭಿವೃದ್ಧಿ ಕೆಲಸ ಆಗಿದೆ. ಪೇಡಾ ತಿನ್ನಿಸಿ ಅವರು ಇದನ್ನು ತಂದಿದ್ದಾರೆ ಎಂದು ಹಾಸ್ಯವಾಡಿದರು. ಇದನ್ನೂ ಓದಿ: ವಾಜಪೇಯಿ ನಿರ್ಮಾಣ ಮಾಡಿದ ರಸ್ತೆಯಲ್ಲಿ ಭಾರತ ಜೋಡೋ ಮಾಡ್ತಿದ್ದಾರೆ: ಕಟೀಲ್ ಕಿಡಿ

    ಈ ವೇಳೆ ಹುಬ್ಬಳ್ಳಿ ದೆಹಲಿ ನಿಜಾಮುದ್ದೀನ್ ರೈಲಿಗೆ ಸವಾಯಿ ಗಂಧರ್ವ ಎಂಬ ಹೆಸರು ಇಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬೇಡಿಕೆ ಇಟ್ಟರು. ಅವರ ಬೇಡಿಕೆಯನ್ನೂ ಈಡೇರಿಸುತ್ತೇನೆ ಎಂದು ವೈಷ್ಣವ್ ಭರವಸೆ ನೀಡಿದರು. ಇದನ್ನೂ ಓದಿ: ಜಿಂಕೆ ಮೇಲೆ ಕೋತಿ ಸವಾರಿ- ಐಐಟಿ ಮದ್ರಾಸ್‌ನಲ್ಲಿ ಅಪರೂಪದ ದೃಶ್ಯ ಸೆರೆ

    Live Tv
    [brid partner=56869869 player=32851 video=960834 autoplay=true]

  • ಟೈರ್ ಬ್ಲಾಸ್ಟ್ ಆಗಿ ಬಸ್ ಪಲ್ಟಿ- ಚಾಲಕ ಸಾವು, 25 ಪ್ರಯಾಣಿಕರಿಗೆ ಗಾಯ

    ಟೈರ್ ಬ್ಲಾಸ್ಟ್ ಆಗಿ ಬಸ್ ಪಲ್ಟಿ- ಚಾಲಕ ಸಾವು, 25 ಪ್ರಯಾಣಿಕರಿಗೆ ಗಾಯ

    ಹುಬ್ಬಳ್ಳಿ: ಟೈರ್ ಬ್ಲಾಸ್ಟ್ (Tire Blast) ಆದ ಪರಿಣಾಮ ಬಸ್ (Bus) ಪಲ್ಟಿಯಾಗಿ ಚಾಲಕ (Driver) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಬಸ್‌ನಲ್ಲಿ ಸಿಲುಕಿ ಹೊರಬರಲಾಗದೆ ಪ್ರಯಾಣಿಕರು (Passengers) ಪರದಾಡಿದ ಘಟನೆ ಧಾರವಾಡ (Dharwad) ಜಿಲ್ಲೆಯಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಲಕ್ಷ್ಮೇಶ್ವರದಿಂದ ಹುಬ್ಬಳ್ಳಿಗೆ ಸಾಗುತ್ತಿದ್ದ ಬಸ್ ಶೆರೆವಾಡ ಸಮೀಪ ಏಕಾಏಕಿ ಮುಂದಿನ ಟೈರ್ ಸ್ಫೋಟಗೊಂಡಿದೆ. ಇದರಿಂದ ಬಸ್ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾಗಿದೆ. ಘಟನೆಯಿಂದ ಚಾಲಕ ರವೀಂದ್ರ ಬಿಂಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಬಸ್ ಪಲ್ಟಿಯಾದ ವೇಳೆ ಬಸ್ಸಿನ ಸೀಟು, ಕಿಟಕಿ ಹಾಗೂ ಬಿಡಿ ಭಾಗಗಳ ನಡುವೆ ಪ್ರಯಾಣಿಕರು ಸಿಲುಕಿ ಪರದಾಡಿದ್ದಾರೆ. ನಮ್ಮನ್ನು ಎಬ್ಬಿಸಿ ಎಂದು ಗಾಯಾಳುಗಳು ಅಂಗಲಾಚಿದ್ದು, ಕೂಡಲೇ ಸುದ್ದಿ ತಿಳಿದ ಸ್ಥಳೀಯರು ಜೆಸಿಬಿ ತಂದು ಬಸ್ ಎತ್ತಿದ್ದಾರೆ. ಇದನ್ನೂ ಓದಿ: ಕಾರು ಮಾಲೀಕರೇ ಹುಷಾರ್ – ಮೈಸೂರಿನಲ್ಲಿ ಶುರುವಾಗಿದೆ ಕಳ್ಳರ ಹಾವಳಿ

    ಅವಘಡದಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪ್ಲಾಗಾ ನದಿಯಲ್ಲಿ ತೇಲುತ್ತಿದ್ದ 317 ಮೊಬೈಲ್ ವಶ

    Live Tv
    [brid partner=56869869 player=32851 video=960834 autoplay=true]

  • ಸೀಗೆ ಹುಣ್ಣಿಮೆ ದಿನ ಪುನೀತ್ ರಾಜ್‌ಕುಮಾರ್ ಫೋಟೋ ಇಟ್ಟು ಹೊಲದ ಪೂಜೆ ಮಾಡಿದ ರೈತ

    ಸೀಗೆ ಹುಣ್ಣಿಮೆ ದಿನ ಪುನೀತ್ ರಾಜ್‌ಕುಮಾರ್ ಫೋಟೋ ಇಟ್ಟು ಹೊಲದ ಪೂಜೆ ಮಾಡಿದ ರೈತ

    ಧಾರವಾಡ: ಸೀಗೆ ಹುಣ್ಣಿಮೆ (Seege Hunnime) ಬಂದರೆ ಸಾಕು ರೈತರ ಕುಟುಂಬ ಎಲ್ಲ ಹೊಲಕ್ಕೆ ಹೋಗಿ ಹೊಲಕ್ಕೆ ಪೂಜೆ ಮಾಡಿ ನಮಿಸುತ್ತಾರೆ. ಅದೇ ರೀತಿ ಇಂದು ಸೀಗೆ ಹುಣ್ಣಿಮೆ ಇರುವ ಕಾರಣ ಧಾರವಾಡ (Dharwada) ಜಿಲ್ಲೆಯ ಅಣ್ಣಿಗೇರಿ ತಾಲೂಕಿ ರೈತರೊಬ್ಬರು ಪುನೀತ್ ರಾಜ್‌ಕುಮಾರ್ (Puneeth Rajkumar)  ಭಾವಚಿತ್ರ ಇಟ್ಟು ಹೊಲದಲ್ಲಿ ಪೂಜೆ ಮಾಡಿದ್ದಾರೆ.

    ಅಣ್ಣಿಗೇರಿ ಪಟ್ಟಣದ ಅಶೋಕ್ ಕುರಿ ಸೀಗೆ ಹುಣ್ಣಿಮೆ ಹಿನ್ನೆಲೆ ಪುನೀತ್ ರಾಜ್‍ಕುಮಾರ್ ಭಾವಚಿತ್ರ ಇಟ್ಟು ಹೊಲಕ್ಕೆ ಪೂಜೆ ಮಾಡಿದ್ದಾರೆ. ಅಶೋಕ್ ಕುರಿ ಅವರ ಹೊಲದಲ್ಲಿ ಇರುವ ಬನ್ನಿ ಮರದ ಕಳಗೆ ಉತ್ತರದ ಕರ್ನಾಟಕ ಶೈಲಿಯ ಅಡುಗೆ ಮಾಡಿ ಎಡೆ ಇಟ್ಟು ಅದರ ನಡುವೆ ಪುನೀತ್ ಭಾವಚಿತ್ರ ಇಟ್ಟು ಪೂಜಿಸಿದ್ದಾರೆ. ಇದನ್ನೂ ಓದಿ: ಗಂಧದ ಗುಡಿಯಲ್ಲಿ ಚಂದದ ನೋಟ: ನೀವು ಇರಬೇಕಿತ್ತು ಎಂದು ಕಣ್ಣೀರಾಕಿದ ಫ್ಯಾನ್ಸ್

    ಇನ್ನೊಂದೆಡೆ ಇಂದು ಪುನೀತ್ ರಾಜ್‍ಕುಮಾರ್ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ (Gandhada Gudi) ಟ್ರೇಲರ್ (Trailer) ಬಿಡುಗಡೆ ಆಗಿದೆ. ಅಪ್ಪು ಈ ಡಾಕ್ಯುಮೆಂಟರಿ ಮಾದರಿಯ ಸಿನಿಮಾದ ಬಗ್ಗೆ ಅಷ್ಟೊಂದು ಕನಸು ಯಾಕೆ ಕಂಡಿದ್ದರು ಎನ್ನುವುದಕ್ಕೆ ಟ್ರೈಲರ್‌ನಲ್ಲಿ ತೋರಿಸಿದ ಒಂದೊಂದು ಫ್ರೇಮೂ ಸಾಕ್ಷಿಯಾಗಿವೆ. ಗಂಧದ ಗುಡಿಯಲ್ಲಿ ಏನಿಲ್ಲ, ಎಲ್ಲವೂ ಇದೆ. ಬೆಟ್ಟ, ಗುಡ್ಡ, ನದಿ, ಹಳ್ಳ, ಕೊಳ್ಳ, ಅರಣ್ಯ, ಕಾಡು ಪ್ರಾಣಿಗಳು, ಕಾಡಂಚಿನ ಜನರು, ದೇವರು, ದೈವ ಎಲ್ಲವನ್ನೂ ಒಂದೇ ಉಸಿರಿಗೆ ಹಿಡಿದಿಟ್ಟಿದ್ದಾರೆ ಪುನೀತ್ ರಾಜ್‍ಕುಮಾರ್. ರಾತ್ರಿ ಅವರು ಕಾಡಿನೊಳಗೆ ನುಗ್ಗಿದಾಗ ನಾವೇ ಭಯಪಡುವಷ್ಟು ಸುಂದರವಾಗಿ ಸೆರೆ ಹಿಡಿದಿದ್ದಾರೆ ಆ ರಾತ್ರಿಯನ್ನು. ಸಮುದ್ರದಾಳಕ್ಕೆ ಅಪ್ಪು ಜಿಗಿದಾಗ ಇಲ್ಲಿ ನಾವೇ ಒದ್ದೆಯಾಗುವಂತೆ ಸಿನಿಮಾಟೋಗ್ರಫಿ ಇದೆ. ಇದನ್ನೂ ಓದಿ: `ಗಂಧದಗುಡಿ’ ಟ್ರೈಲರ್‌ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

    Live Tv
    [brid partner=56869869 player=32851 video=960834 autoplay=true]

  • ಜಿಲ್ಲೆಯಿಂದ ಬಹಿಷ್ಕಾರ ಹಾಕಲು ನಾನೇನು ಉಗ್ರನೇ: ವಿನಯ್‌ ಕುಲಕರ್ಣಿ

    ಜಿಲ್ಲೆಯಿಂದ ಬಹಿಷ್ಕಾರ ಹಾಕಲು ನಾನೇನು ಉಗ್ರನೇ: ವಿನಯ್‌ ಕುಲಕರ್ಣಿ

    ಬೆಳಗಾವಿ: ನಾನೊಬ್ಬ ರಾಜಕಾರಣಿ ಅಷ್ಟೇ ಅಲ್ಲ, ನಾನೊಬ್ಬ ರೈತ, ನನ್ನ ಫಾರ್ಮ್‌ನಲ್ಲಿ ಐದು ಸಾವಿರ ಜಾನುವಾರುಗಳಿವೆ. ನನ್ನ ಮಕ್ಕಳಿಗಿಂತ ಹೆಚ್ಚು ಕಾಳಜಿಯಿಂದ ನಾನು ಅವುಗಳನ್ನು ಸಾಕಿದ್ದೇನೆ ಎಂದು ಧಾರಾವಾಡದ (Dharwad) ತಮ್ಮ ಫಾರ್ಮ್‌ನಲ್ಲಿರುವ ಹಸುಗಳನ್ನು ನೆನೆದು ಮಾಜಿ ಸಚಿವ ವಿನಯ್‌ ಕುಲಕರ್ಣಿ (Vinay Kulkarni) ಭಾವುಕರಾದರು.

    ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ನನ್ನ ಮಕ್ಕಳಿಗಿಂತ ಹೆಚ್ಚು ಕಾಳಜಿಯಿಂದ ನಾನು ಹಸುಗಳನ್ನು ಸಾಕಿದ್ದೇನೆ. ಧಾರವಾಡದಲ್ಲಿದ್ದಾಗ ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಫಾರ್ಮ್‌ಗೆ ಹೋಗುತ್ತಿದ್ದೆ. ಬೆಂಗಳೂರು ಪ್ರವಾಸದಲ್ಲಿದ್ದಾಗ ಮಾತ್ರ ನನ್ನ ಫಾರ್ಮ್‌ಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಧಾರವಾಡದಲ್ಲಿದ್ದಾಗ ಪ್ರತಿದಿನ ತಪ್ಪದೇ ಫಾರ್ಮ್‌ಗೆ ಹೋಗಿ ಹಸುಗಳ ಆರೈಕೆ ಮಾಡ್ತಿದ್ದೆ. ಇಷ್ಟು ದಿನ ಫಾರ್ಮ್‌ಗೆ ಹೋಗದೇ ಇರುವುದು ತುಂಬಾ ನೋವು ತರಿಸಿದೆ ಎಂದು ಭಾವುಕರಾದರು.

    ಇದಲ್ಲದೇ ರಾಜ್ಯ, ಜಿಲ್ಲೆಯಿಂದ ಬಹಿಷ್ಕಾರ ಹಾಕಲು ನಾನೇನು ಉಗ್ರನಾ? ಸದ್ಯ ಜಾನುವಾರುಗಳನ್ನು ನನ್ನ 22 ವರ್ಷದ ಪುತ್ರಿ ನೋಡಿಕೊಳ್ಳುತ್ತಿದ್ದಾಳೆ. ಎರಡು, ಮೂರು ಹಸು ಕಟ್ಟಿದ ರೈತರೇ ಒಂದು ದಿನ ಮನೆ ಬಿಟ್ಟು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅಂತಹದ್ರಲ್ಲಿ ಸಾವಿರಾರು ಹಸುಗಳನ್ನು ಕಟ್ಟಿದ ನಾನು ಮನೆಗೆ ಹೋಗದಿದ್ದರೇ ಮುಖ ಪ್ರಾಣಿಗಳ ಕಥೆ ಏನಾಗಬೇಕು ಎಂದು ತನ್ನ ಫಾರ್ಮ್‌ನಲ್ಲಿರುವ ಜಾನುವಾರುಗಳನ್ನು ನೆನೆದು ಬಾವುಕರಾದರು‌. ಇದನ್ನೂ ಓದಿ: ಹಣ ನೀಡಲಿಲ್ಲವೆಂದು ವೃದ್ಧ ತಂದೆಯನ್ನೇ ಕೊಲೆ ಮಾಡಿದ ಪಾಪಿ ಮಗ- ತಾಯಿ ಸ್ಥಿತಿ ಗಂಭೀರ

    ಯೋಗೇಶ್‌ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ದೇಶದ ಕಾನೂನಿಗೆ ಗೌರವಿಸುತ್ತೇನೆ. ಕಾನೂನು ಹೋರಾಟ ಮುಂದುವರಿಸುತ್ತೇನೆ. ಬರುವ ದಿನಗಳಲ್ಲಿ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡುವ ವಿಶ್ವಾಸವಿದೆ‌. ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ‌. ವಿನಯ್ ಕುಲಕರ್ಣಿ ಕ್ಷೇತ್ರ ಬದಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಧಾರವಾಡ ಪ್ರವೇಶಕ್ಕೆ ‌ಅನುಮತಿ ಸಿಗದಿದ್ದರೂ ಹೊರಗೆ ಇದ್ದೇ ಕಣಕ್ಕಿಳಿಯುತ್ತೇನೆ. ಯಾವುದೇ ಕಾರಣಕ್ಕೂ ಧಾರವಾಡ ಗ್ರಾಮೀಣ ಕ್ಷೇತ್ರ ಬದಲಿಸುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: `ಕೆಲವೇ ಕ್ಷಣಗಳಲ್ಲಿ ವಿಧಾನಸೌಧ ಬ್ಲಾಸ್ಟ್’ – ಬೆದರಿಕೆ ಕರೆ ಮಾಡಿದ್ದ ಟೆಕ್ಕಿ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ಯುವತಿಯ ಪ್ರೀತಿಯ ಜಾಲದಲ್ಲಿ ಬೀಳಿಸಲಾಗುತ್ತೆ, ಬನಶಂಕರಿ ಮಸೀದಿ ಕೆಳಗಡೆ ಮತಾಂತರ – ಮುತಾಲಿಕ್

    ಯುವತಿಯ ಪ್ರೀತಿಯ ಜಾಲದಲ್ಲಿ ಬೀಳಿಸಲಾಗುತ್ತೆ, ಬನಶಂಕರಿ ಮಸೀದಿ ಕೆಳಗಡೆ ಮತಾಂತರ – ಮುತಾಲಿಕ್

    ಧಾರವಾಡ: ಶ್ರೀಧರ್ ಗಂಗಾಧರ್ ಎನ್ನುವ ಯುವಕನನ್ನು ಹುಬ್ಬಳ್ಳಿಗೆ (Hubballi) ತಂದು ಯುವತಿಯ ಪ್ರೀತಿಯ ಜಾಲದಲ್ಲಿ ಬೀಳಿಸಿ, ಅವನನ್ನು ಮತಾಂತರ ಮಾಡುವ ಪ್ರಕ್ರಿಯೆ ನಡೆದಿದೆ ಎಂದು ಪ್ರಮೋದ್ ಮುತಾಲಿಕ್ (Pramod Muthalik) ಆರೋಪಿಸಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಮಂಡ್ಯ ಮೂಲದ ಶ್ರೀಧರ್ ಗಂಗಾಧರ್ ಎಂಬಾತನನ್ನು ಮತಾಂತರ (Conversion) ಮಾಡಲು ವ್ಯವಸ್ಥಿತವಾಗಿ ಎಲ್ಲಾ ರೀತಿಯ ಯೋಜನೆಯೂ ಇಸ್ಲಾಂ ಕಡೆಯಿಂದಲೇ ನಡೆದಿತ್ತು. ಅವರ ಪ್ಲ್ಯಾನ್ ಪ್ರಕಾರವಾಗಿಯೇ ಅವನಿಗೆ ಇಸ್ಲಾಂನ ಎಲ್ಲ ಪ್ರಕ್ರಿಯೆ ಮಾಡಲಾಗಿದೆ. ಗೋ ಮಾಂಸ ತಿನ್ನಿಸಿದ್ದಾರೆ. ಶಸ್ತ್ರಚಿಕಿತ್ಸೆ ಸಹ ಆಗಿದೆ. ಎಲ್ಲ ರೀತಿಯದ್ದು ಆಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಆತ ಶ್ರೀಧರ್ ಗಂಗಾಧರ್ ಇರುವವನು ಇಂದು ಸಲ್ಮಾನ್ ಆಗಿದ್ದಾನೆ ಎಂದು ಕಿಡಿಕಾರಿದರು.

    POLICE JEEP

    ಘಟನೆಗೆ ಸಂಬಂಧಿಸಿ ಶ್ರೀಧರ್ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ (Police Station) ದೂರು ದಾಖಲಿಸಿದ್ದಾನೆ. ದೂರಿನಲ್ಲಿ ಅವನಿಗೆ ಒತ್ತಾಯ ಮಾಡಿ ಇದನ್ನೆಲ್ಲ ಮಾಡಿದ್ದಾರೆ ಎನ್ನುವುದನ್ನು ತಿಳಿಸಿದ್ದಾನೆ. ಅಷ್ಟೇ ಅಲ್ಲದೇ ಬೆಂಗಳೂರಿನ ಬನಶಂಕರಿಯಲ್ಲಿರುವ ಮಸೀದಿಯ 11 ಜನರ ಮೇಲೆ ಕೇಸ್ ಆಗಿದೆ. ಈ ಹಿನ್ನೆಲೆಯಲ್ಲಿ ಕೆಲವರನ್ನು ಬಂಧಿಸಲಾಗಿದೆ. ಅದರಲ್ಲಿ ಕಾಂಗ್ರೆಸ್ ಮಾಜಿ ಕಾರ್ಪೋರೇಟರ್ ಕೂಡ ಭಾಗಿಯಾಗಿದ್ದಾನೆ ಎನ್ನುವುದು ಬಹಿರಂಗ ಆಗಿದೆ ಎಂದರು.

    ಕಾಂಗ್ರೆಸ್ ಮತಾಂತರಕ್ಕೆ ಹೇಗೆ ವ್ಯವಸ್ಥಿತವಾಗಿ ಇದಕ್ಕೆ ಕುಮಕ್ಕು ಕೊಡುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದೆ. ಇದಕ್ಕೆಲ್ಲಾ ಅವರೇ ಜವಾಬ್ದಾರಿಯಾಗಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸೇರಿ ಕ್ರಿಶ್ಚಿಯನರಿಗೆ ಹೇಗೆ ಇಡೀ ದೇಶದಲ್ಲಿ ಮತಾಂತರಕ್ಕೆ ಕುಮ್ಮಕ್ಕು ಕೊಡ್ತಿದ್ದಾರೋ, ಅದೇ ಮಾದರಿಯಲ್ಲಿ ಮುಸ್ಲಿಂ ತುಷ್ಠೀಕರಣ, ಮತಾಂತರಕ್ಕೆ ಕಾಂಗ್ರೆಸ್ ಕೂಡ ಜವಾಬ್ದಾರಿ ಹಾಗೂ ಹೊಣೆಯಾಗಿದೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಬಂಧನ ಆಗಿದೆ. ಈ ಕೂಡಲೇ ಅವನನ್ನು ಕೂಡಲೇ ಕಾಂಗ್ರೆಸ್ ಅಮಾನತು ಮಾಡಬೇಕು. ಇಲ್ಲದಿದ್ರೆ ಇದರ ಹಿಂದೆ ನೀವು ಇದ್ದೀರಿ ಎನ್ನುವುದು ಖಚಿತವಾಗುತ್ತದೆ ಎಂದು ಹೇಳಿದರು.

    Congress

    ಬನಶಂಕರಿ ಮಸೀದಿಯ ಕೆಳಗೆ ಅಂಡರ್ ಗ್ರೌಂಡ್ ಇದೆ ಅನ್ನೋದು ಬಹಿರಂಗ ಆಗುತ್ತಿದೆ. ಇನ್ನು ಅದರಲ್ಲಿ 50 ರಿಂದ 60 ಜನ ಮತಾಂತರಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲಿ ಅನೇಕರು ಹಿಂದೂ ಯುವಕರೇ ಆಗಿದ್ದಾರೆ ಎನ್ನುವುದನ್ನು ಆತ ಬಹಿರಂಗ ಪಡಿಸಿದ್ದಾನೆ. ಸರ್ಕಾರ ಮತಾಂತರ ಕಾಯ್ದೆ ನಿಷೇಧ ಅಡಿಯಲ್ಲಿ ಬಂಧನ ಮಾಡಬೇಕು. ಅದೇ ಕಾಯ್ದೆಯಡಿ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕು, ಶೀಘ್ರವಾಗಿ ಆಗಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ರಾಹುಲ್ ಗಾಂಧಿ ತಲೆ ರೈಲ್ವೇ ಹಳಿ ಇದ್ದಂತೆ: ಸಿ.ಸಿ ಪಾಟೀಲ್ ವ್ಯಂಗ್ಯ

    ಈ ಹಿಂದಿರುವ ಶಕ್ತಿ ಮುಲ್ಲಾ, ಮೌಲ್ವಿಗಳು, ಮದರಸಾಗಳು ಮಸೀದಿಗಳು ಯಾವ್ಯಾವ ಇದಾವೆ ಎಲ್ಲವೂ ತನಿಖೆಯಾಗಬೇಕು. ನಾನು ಶೀಘ್ರದಲ್ಲೇ ಗೃಹಮಂತ್ರಿಗಳನ್ನು ಭೇಟಿಯಾಗಿ ನನ್ನ ಬಳಿ ಇರುವ ದಾಖಲೆ ಕೊಡುತ್ತೇನೆ ಎಂದ ಅವರು ಕೇರಳದಲ್ಲಿ 40% ಹಿಂದುಗಳು ಉಳಿದಿದ್ದಾರೆ, 60% ಹಿಂದುಗಳು ಹಾಗಾದ್ರೆ ಎಲ್ಲಿ ಹೋದ್ರು, ಅವರನ್ನ ಮತಾಂತರ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಮುಖೇಶ್ ಅಂಬಾನಿ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದ ಆರೋಪಿ ಬಂಧನ

    Live Tv
    [brid partner=56869869 player=32851 video=960834 autoplay=true]

  • ದಸರಾ ಪೆಂಡಾಲ್ ಸೌಂಡ್ ಸಿಸ್ಟಮ್ ವಯರ್ ಕಿತ್ತು ದರ್ಪ ಮೆರೆದ KAS ಅಧಿಕಾರಿ

    ದಸರಾ ಪೆಂಡಾಲ್ ಸೌಂಡ್ ಸಿಸ್ಟಮ್ ವಯರ್ ಕಿತ್ತು ದರ್ಪ ಮೆರೆದ KAS ಅಧಿಕಾರಿ

    ಧಾರವಾಡ: ಕೆಎಎಸ್ ಅಧಿಕಾರಿಯೊಬ್ಬರು (KAS Officer) ಪೆಂಡಾಲ್‌ನಲ್ಲಿ ಸೌಂಡ್ ಸಿಸ್ಟಮ್ (Sound System) ವಯರ್ ಕಿತ್ತು ಹಾಕಿದ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.

    ನಗರದ ರಾಜ್ ನಗರದಲ್ಲಿ ದುರ್ಗಾ ದೇವಿ ಉತ್ಸವದ ಹಿನ್ನೆಲೆ ಪೆಂಡಾಲ್ ಹಾಕಲಾಗಿತ್ತು. ಈ ವೇಳೆ ಸೌಂಡ್ ಸಿಸ್ಟಂ ಹಚ್ಚಿದ್ದಕ್ಕೆ ಅಬಕಾರಿ ಇಲಾಖೆಯ ಪ್ರೊಬೆಷನರಿ ಡಿಸಿಯಾದ ಶಾರದಾ ಕೊಳಕರ್ ಅವರು ಅಡ್ಡಿಪಡಿಸಿದ್ದಾರೆ.

    ಶಾರದಾ ಕೊಳಕರ್ ಕೂಡಾ ರಾಜನಗರದಲ್ಲೇ ವಾಸವಾಗಿದ್ದು, ಬಡಾವಣೆಯಲ್ಲಿ ಹಾಕಲಾಗಿದ್ದ ಪೆಂಡಾಲ್‌ನಲ್ಲಿ ಸೌಂಡ್ ಸಿಸ್ಟಮ್ ಹಚ್ಚಿದ್ದ ವಯರ್ ಕಿತ್ತು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ದಸರಾಕ್ಕೆಂದು ಊರಿಗೆ ಬರುತ್ತಿದ್ದಾಗ ಬೈಕ್ ಅಪಘಾತ- ಇಬ್ಬರು ಸ್ಥಳದಲ್ಲೇ ಸಾವು

    ವಯರ್ ಕಿತ್ತು ಹಾಕುವ ಸಮಯದಲ್ಲಿ ಅಲ್ಲೇ ಇದ್ದ ಕೆಲವರು ವೀಡಿಯೋ ಕೂಡಾ ಮಾಡಿದ್ದಾರೆ. ಕೇಬಲ್ ಕಿತ್ತು ಹಾಕಿದ ಶಾರದಾ ಮೇಲೆ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಗಳು ಕೇಳಿ ಬರುತ್ತಿದೆ. ಇದನ್ನೂ ಓದಿ: ಚುನಾವಣೆ ವೇಳೆ ಉಚಿತ ಕೊಡುಗೆ ಆಫರ್ – ಪಕ್ಷಗಳಿಗೆ ಶಾಕ್, ಆಯೋಗದ ನಿರ್ಧಾರಕ್ಕೆ ವಿಪಕ್ಷಗಳು ಕಿಡಿ

    ಧಾರವಾಡ ಉಪನಗರ ಠಾಣೆಗೆ ಆಗಮಿಸಿದ ಸ್ಥಳೀಯರು, ಹಬ್ಬಕ್ಕೆ ಶಾರದಾ ಅವರು ಅಡ್ಡಿ ಪಡಿಸಿದ್ದಾರೆ. ಪದೇ ಪದೇ ಈ ರೀತಿ ಮಾಡಿರುವ ಅವರು, ಸರ್ಕಾರಿ ಅಧಿಕಾರಿ ಎಂದು ನಮ್ಮ ಮೇಲೆ ದರ್ಪ ತೊರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಯುಗಾದಿ ಕೊನೆಯವರೆಗೂ ಅಂಗಾಂಗ ಕಾಯಿಲೆಗಳು ಹೆಚ್ಚಾಗುತ್ತವೆ: ಕೋಡಿಮಠದ ಶ್ರೀ ಭವಿಷ್ಯ

    ಯುಗಾದಿ ಕೊನೆಯವರೆಗೂ ಅಂಗಾಂಗ ಕಾಯಿಲೆಗಳು ಹೆಚ್ಚಾಗುತ್ತವೆ: ಕೋಡಿಮಠದ ಶ್ರೀ ಭವಿಷ್ಯ

    – ಚುನಾವಣೆ, ಸರ್ಕಾರದ ಬಗ್ಗೆ ಶ್ರೀಗಳು ಹೇಳಿದ್ದೇನು..?

    ಧಾರವಾಡ: ಆಶ್ವಿಜ ಕೊನೆಯಿಂದ ಯುಗಾದಿ (Yugadi) ಕೊನೆಯವರೆಗೂ ಅಂಗಾಂಗ ಕಾಯಿಲೆಗಳು ಹೆಚ್ಚಾಗುತ್ತವೆ. ಪಾರ್ಶ್ವವಾಯು, ಹೃದಯಾಘಾತ ಈ ಕಾಯಿಲೆ ಹೆಚ್ಚಾಗಿ ಜನ ಸಾಯುತ್ತಾರೆ. ಮೂರು ತಿಂಗಳಲ್ಲಿ ಈ ಕಾಯಿಲೆ ಹೆಚ್ಚಾಗಲಿದೆ ಎಂದು ಕೋಡಿಮಠ (KodiMutt) ದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಹೊರಗಡೆ ಹೋಗುವಾಗ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಹೋಗುವುದು ಒಳ್ಳೆಯದು. ಅದು ಸಂರಕ್ಷಣೆಯಾಗುತ್ತದೆ. ಪ್ರಾರಂಭದಲ್ಲೇ ನಾನು ಮಳೆ (Rain), ಗಾಳಿ, ಗುಡುಗು ಇದೆ ಎಂದು ಹೇಳಿದ್ದೆ. ಬೆಂಕಿಯಿಂದ ಕಾಟ, ಮತಾಂಧತೆ ಹೆಚ್ಚಳ, ಸಾವು-ನೋವುಗಳಾಗುತ್ತವೆ. ಜನ ಅಶಾಂತಿಯಿಂದ ಇರುತ್ತಾರೆ. ಭೂಮಿ ನಡುಗುತ್ತದೆ, ಕುಸಿಯುತ್ತದೆ ರೋಗ ಹೆಚ್ಚಾಗುತ್ತವೆ ಎಂದು ಹೇಳಿದ್ದೆ. ಅದರಂತೆ ಇನ್ನೂ ಮುಂದೆ ಮಳೆಯಾಗುವ ಲಕ್ಷಣ ಇದೆ ಎಂದರು.

    ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣ ಇದೆ. ಮಳೆಯಿಂದ, ರೋಗದಿಂದ ಹಾಗೂ ಭೂಮಿಯಿಂದ ತೊಂದರೆಯಾಗುತ್ತದೆ. ವಿಶೇಷವಾಗಿ ಹಿಂದೆ ಹೇಳಿದಂತೆ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ. ಈಗಲೂ ಅಂತಹ ಪರಿಸ್ಥಿತಿದೆ. ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ. ಭೂಮಿಯಲ್ಲಿ ಇರುವಂತೆ ವಿಷಜಂತು, ಪ್ರಾಣಿಗಳು ಹೊರಬಂದು ಜನರಿಗೆ ತೊಂದರೆ ಕೊಡುವ ಪ್ರಸಂಗ ಬಹಳ ಇದೆ. ಹಾಗಾಗಿ ಪ್ರಕೃತಿ ಅಲ್ಲೋಲ ಕಲ್ಲೋಲ ಆಗುವ ಪ್ರಸಂಗ ಹೆಚ್ಚಿದೆ ಎಂದು ತಿಳಿಸಿದರು.

    ಈ ಸಂವತ್ಸರದ ಕಡೆವರೆಗೂ ಈ ತೊಂದರೆ ಇದೆ. ಅಚ್ಚರಿಯ ಅವಘಡ ಕಾದಿದೆ ಎಂದು ಈ ಹಿಂದೆ ಹೇಳಿದ್ದೆ. ಅದೂ ಆಗುತ್ತದೆ ಕಾದು ನೋಡಿ. ಬೆಂಕಿಯಿಂದ ಹೆಚ್ಚು ಸಮಸ್ಯೆ ಇದೆ. ಅಪಮೃತ್ಯು ಹೆಚ್ಚಿದೆ. ಅಶಾಂತಿಯಾಗಿ ಕಲಹಗಳು ಹೆಚ್ಚಾಗುತ್ತವೆ. ಒಂದೆಡೆ ಪ್ರಕೃತಿ ವಿಕೋಪ, ಮತಾಂಧತೆ ಹೆಚ್ಚಾಗಿ ಅಶಾಂತಿ, ಕಲಹಗಳು ಹೆಚ್ಚಾಗಿ ಜನಮನವನ್ನು ಶಾಂತಿ ಕದಡುವ ಕೆಲಸ ಆಗುತ್ತದೆ ಎಂದರು. ಇದನ್ನೂ ಓದಿ: ದಸರಾ ಹಬ್ಬಕ್ಕೆ ಬೋನಸ್ ಕೊಡಲಿಲ್ಲವೆಂದು ಗ್ರಾಮ ಪಂಚಾಯತ್ ಕಚೇರಿಗೆ ಚಪ್ಪಲಿ ಹಾರ ಹಾಕಿದ ನೌಕರ

    ಇನ್ನೊಂದು ವರ್ಷದಲ್ಲಿ ಕೊರೊನಾ (Corona Virus) ಹೋಗುತ್ತದೆ. ಬಳ್ಳಾರಿಯಲ್ಲಿ ಈ ಬಗ್ಗೆ ಹೇಳಿದ್ದೆ. ಕೊರೊನಾ ಹೋಗುತ್ತದೆ. ಹೋಗುವಾಗ ಜಗತ್ತಿಗೆ ವಿಪರೀತ ಕ್ಷಾಮ ಕೊಟ್ಟು ಹೋಗುತ್ತದೆ. ದುಃಖ ಕೊಟ್ಟು ಹೋಗುತ್ತದೆ, ಕುಡಿಯಲು ನೀರು ಇಲ್ಲದಂತೆ ಮಾಡುತ್ತದೆ. ಅಂತಹ ಪ್ರಸಂಗ ಇದೆ. ಕೊರೊನಾ ಈ ವರ್ಷದಲ್ಲಿ ಬಿಡುಗಡೆಯಾಗತ್ತದೆ. ಭವಿಷ್ಯದಲ್ಲಿ ಜಗತ್ತಿನ ಇತಿಹಾಸದಲ್ಲೇ ಇಂತಹ ರೋಗ ಬಂದಿಲ್ಲ. ಜನ ಕಷ್ಟ ಬಂದಾಗ ಮಾತ್ರ ದೇವರು, ಮಠ ಮಂದಿರ ಎನ್ನುತ್ತಾರೆ. ಆದರೆ ಈ ಕೊರೊನಾ ಮೊದಲು ಬಂದಿದ್ದೇ ದೇವರ ಮೇಲೆ. ಮೊದಲು ಮಠ, ಮಾನ್ಯಗಳ ಮೇಲೆ ಬಂತು ಆ ಮೇಲೆ ಮನುಷ್ಯರ ಮೇಲೆ ಬಂತು. ಜನವರಿವರೆಗೂ ಕೊರೊನಾ ಹೆಚ್ಚು ಹರಡುವ ಕಾಲವಿದೆ. ಇದು ಮತ್ತೊಂದು ರೂಪವಾಗುವ ಲಕ್ಷಣವೂ ಇದೆ. ಬಹಳ ಕಷ್ಟ ಕೊಟ್ಟು ಹೋಗುತ್ತದೆ ಎಂದು ಸ್ವಾಮೀಜಿ ನುಡಿದರು.

    ಇದೇ ವೇಳೆ ರಾಜಕೀಯ ಭವಿಷ್ಯ ಬಗ್ಗೆ ಮಾತನಾಡಿ, ಎಲ್ಲರಿಗೂ ಒಳ್ಳೆಯದಾಗಲಿ. ಈಗ ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಚುನಾವಣೆ ಕಾಲದಲ್ಲಿ ಹೇಳುತ್ತೇನೆ. ರಾಜಕೀಯ (Politics) ಬದಲಾವಣೆ ಬಗ್ಗೆ ಏನೂ ಹೇಳಲು ಹೋಗೋದಿಲ್ಲ ಎಂದು ಹೇಳಿ ಸ್ವಾಮೀಜಿ ನಸುನಕ್ಕರು. ಶುಭನಾಮ ಸಂವತ್ಸರ ಅಶುಭವನ್ನು ಕೊಟ್ಟು ಹೋಗುತ್ತದೆ. ಇದು ಶುಭ ಆಗೋದಿಲ್ಲ. ಅಶುಭವಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಬೆಲ್ಲದ್ ಮನೆ ಬಳಿಯಿದ್ದ ಬಾವಿ ನಾಪತ್ತೆ- ಪೊಲೀಸರಿಗೆ ದೂರು ನೀಡಿದ ಕಾಂಗ್ರೆಸ್ ಮುಖಂಡ

    ಬೆಲ್ಲದ್ ಮನೆ ಬಳಿಯಿದ್ದ ಬಾವಿ ನಾಪತ್ತೆ- ಪೊಲೀಸರಿಗೆ ದೂರು ನೀಡಿದ ಕಾಂಗ್ರೆಸ್ ಮುಖಂಡ

    ಧಾರವಾಡ: ಶಾಸಕ ಅರವಿಂದ್ ಬೆಲ್ಲದ್ (Arvind Bellad) ಅವರ ಧಾರವಾಡ (Dharwad) ಮನೆ ಮುಂದಿನ ಬಾವಿ (well) ಕಾಣೆಯಾಗಿದ್ದು, ಅದನ್ನು ಹುಡುಕಿಕೊಡುವಂತೆ ಕಾಂಗ್ರೆಸ್ (Congress) ಮುಖಂಡ ನಾಗರಾಜ ಗೌರಿ ಧಾರವಾಡ ಉಪನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

    ಧಾರವಾಡದ ಸರ್ವೇ ನಂಬರ್ 31/1ರಲ್ಲಿ ಸಾರ್ವಜನಿಕ ಬಾವಿ ಇತ್ತು. ಅಲ್ಲಿಯೇ ಶಾಸಕ ಅರವಿಂದ್ ಬೆಲ್ಲದ್ ಅವರ ನಿವಾಸವಿದೆ. ಆದರೆ ಬೆಲ್ಲದ್ ಅವರು ಜೋತಿಷ್ಯ ಕೇಳಿ ಆ ಬಾವಿಯನ್ನು ಮುಚ್ಚಿ ಹಾಕಿದ್ದಾರೆ. ಆ ಬಾವಿ ಮುಚ್ಚಿದರೆ, ನೀವು ಸಿಎಂ ಆಗುತ್ತೀರಿ ಎಂದು ಯಾರೋ ಬೆಲ್ಲದ್ ಅವರಿಗೆ ಭವಿಷ್ಯ ಹೇಳಿದ್ದರಂತೆ, ಹೀಗಾಗಿ ಬೆಲ್ಲದ ಅವರು ಆ ಬಾವಿ ಮುಚ್ಚಿಸಿದ್ದಾರೆ ಎಂದು ಅಲ್ಲಿನ ಅಕ್ಕಪಕ್ಕದ ನಿವಾಸಿಗಳು ಆರೋಪಿಸಿದ್ದಾರೆ ಎಂದು ಗೌರಿ ತಿಳಿಸಿದರು. ಇದನ್ನೂ ಓದಿ: 11ನೇ ಮಹಡಿಯಿಂದ ಲಿಫ್ಟ್ ಕೆಳಗೆ ಬಿದ್ದು ವಿದ್ಯಾರ್ಥಿ ಸಾವು

    Congress

    ಬಾವಿ ಹುಡುಕಿಕೊಡುವಂತೆ ಮಹಾನಗರ ಪಾಲಿಕೆಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಕೆಲವು ವರ್ಷಗಳ ಹಿಂದೆಯೇ ಈ ಬಾವಿಯನ್ನು ಶಾಸಕರು ಮುಚ್ಚಿಸಿದ್ದಾರೆ. ಹೀಗಾಗಿ ಪೊಲೀಸರು ಈ ಬಾವಿಯನ್ನು ಹುಡುಕಿಕೊಡಬೇಕು ಎಂದು ಗೌರಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರ ಆಸ್ತಿ ಪತ್ತೆ ಮಾಡದೇ ಹೋದಲ್ಲಿ ಲೋಕಾಯುಕ್ತಕ್ಕೂ ದೂರು ನೀಡುವುದಾಗಿ ಗೌರಿ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಅಳುವ ಗಂಡಸರನ್ನ ನೋಡಬಾರದು- ಡಿಕೆಶಿ ಕಣ್ಣೀರಿಗೆ ಯತ್ನಾಳ್ ವ್ಯಂಗ್ಯ

    Live Tv
    [brid partner=56869869 player=32851 video=960834 autoplay=true]

  • ಜಾಗಿಂಗ್ ತೆರಳಿದ್ದ ಕುಸ್ತಿಪಟುವಿಗೆ ಹೃದಯಾಘಾತ – ಸ್ನೇಹಿತನೆದುರೇ ಹಾರಿ ಹೋಯಿತು ಪ್ರಾಣಪಕ್ಷಿ

    ಜಾಗಿಂಗ್ ತೆರಳಿದ್ದ ಕುಸ್ತಿಪಟುವಿಗೆ ಹೃದಯಾಘಾತ – ಸ್ನೇಹಿತನೆದುರೇ ಹಾರಿ ಹೋಯಿತು ಪ್ರಾಣಪಕ್ಷಿ

    ಧಾರವಾಡ: ವಾಯುವಿಹಾರಕ್ಕೆಂದು ಹೋಗಿದ್ದ ಕುಸ್ತಿಪಟು (Wrestler) ಒಬ್ಬರಿಗೆ ಹೃದಯಾಘಾತವಾಗಿ (Heart Attack) ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.

    ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ಕುಸ್ತಿಪಟು ಸಂಗಪ್ಪ ಬಳಿಗೇರ ಸಾವನ್ನಪ್ಪಿದ ದುರ್ದೈವಿ. ಇಂದು ಬೆಳಗ್ಗೆ ವಾಯುವಿಹಾರಕ್ಕೆಂದು ತಮ್ಮ ಸ್ನೇಹಿತನೊಂದಿಗೆ ತೆರಳಿದ್ದರು. ಈ ವೇಳೆ ಅವರಿಗೆ ಏಕಾಏಕಿ ಹೃದಯಾಘಾತವಾಗಿ ಕೆಳಗಡೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ವ್ಯಕ್ತಿಗೆ ಚಾಕು ಇರಿತ – ರಕ್ತಸಿಕ್ತ ಪರಿಸ್ಥಿತಿಯಲ್ಲೇ ಠಾಣೆಗೆ ಬಂದ

    ಧಾರವಾಡದ ಮದಿಹಾಳದ ಬಳಿ ಈ ಘಟನೆ ಸಂಭವಿಸಿದ್ದು, ಕುಸಿದು ಬಿದ್ದು ಸಾವನ್ನಪ್ಪಿದ ದೃಶ್ಯ ಶಾಲಾ ಕಟ್ಟಡದ ಮೇಲೆ ಹಾಕಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಂಗಪ್ಪ ಕುಸಿದು ಬಿದ್ದ ತಕ್ಷಣ ಆತನ ಸ್ನೇಹಿತ ಹಾಗೂ ಇತರರು ಸಂಗಪ್ಪನನ್ನು ಮೇಲೆಬ್ಬಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಸಂಗಪ್ಪ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇದನ್ನೂ ಓದಿ: ಪಿಎಫ್‌ಐ ನಂತೆಯೇ RSSನ್ನೂ ಬ್ಯಾನ್‌ ಮಾಡಿ: ಕೇರಳ ವಿಪಕ್ಷಗಳ ಒತ್ತಾಯ

    Live Tv
    [brid partner=56869869 player=32851 video=960834 autoplay=true]