Tag: ಧಾರವಾಡ

  • ಕರ್ನಾಟಕ ವಿವಿಯಲ್ಲಿದ್ದ ಉಗಾಂಡ ದೇಶದ ವಿದ್ಯಾರ್ಥಿ ನಾಪತ್ತೆ

    ಕರ್ನಾಟಕ ವಿವಿಯಲ್ಲಿದ್ದ ಉಗಾಂಡ ದೇಶದ ವಿದ್ಯಾರ್ಥಿ ನಾಪತ್ತೆ

    ಧಾರವಾಡ: ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ (Karnataka University) ಸಂಶೋಧನಾ ವಿದ್ಯಾರ್ಥಿ (Student) ಉಗಾಂಡ (Uganda) ದೇಶದ ವಿದ್ಯಾರ್ಥಿಯೊಬ್ಬ ಹೇಳದೇ ಕೇಳದೇ ಎಲ್ಲೋ ಹೋಗಿ ಬಿಟ್ಟಿದ್ದಾನೆ. ಈಗ ಆತನಿಗಾಗಿ ಕರ್ನಾಟಕ ವಿವಿ ಆಡಳಿತ ಮಂಡಳಿ ಶೋಧ ನಡೆಸುತ್ತಿದೆ.

    ವಿಶ್ವವಿದ್ಯಾಲಯದ ಭೀಮಾ ವಸತಿ ನಿಲಯದಲ್ಲಿದ್ದ ಉಗಾಂಡಾದ ಜೋಯೆಲ್ ಕನ್ಯನಾ ಎಂಬ ವಿದ್ಯಾರ್ಥಿ ಸಂಶೋಧನಾ ವಿದ್ಯಾರ್ಥಿಯಾಗಿ ವಿದ್ಯಾಭ್ಯಾಸ ಮಾಡುತ್ತಿದ್ದ. ತತ್ವಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಮಾಡುತ್ತಿದ್ದ ಈತ, ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಾಪತ್ತೆಯಾಗಿದ್ದು, ಆತನ ಶೋಧ ಕಾರ್ಯಕ್ಕೆ ಕರ್ನಾಟಕ ವಿವಿ ಆಡಳಿತ ಮಂಡಳಿ ಉಗಾಂಡ ಸರ್ಕಾರಕ್ಕೂ ಪತ್ರ ಬರೆದಿದೆ. ಅಲ್ಲದೇ ಹುಬ್ಬಳ್ಳಿ, ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಿಗೂ ದೂರು ನೀಡಲಾಗಿದೆ.

    ಕವಿವಿಯ ಭೀಮಾ ವಸತಿ ನಿಲಯದಲ್ಲಿದ್ದ ಈ ಜೋಯೆಲ್, ಲಾಕ್‍ಡೌನ್ ಅವಧಿಯಲ್ಲೂ ವಸತಿ ನಿಲಯದಲ್ಲಿದ್ದುಕೊಂಡೇ ಓದುತ್ತಿದ್ದ. ಆದರೆ, ಕಳೆದ ಡಿಸೆಂಬರ್ ತಿಂಗಳಿನಲ್ಲಿ ತನ್ನ ಕೊಠಡಿಗೆ ಬೀಗ ಹಾಕಿಕೊಂಡು ಹೋಗಿರುವ ಈತ ಮರಳಿ ಬಂದೇ ಇಲ್ಲ. ಪಿಎಚ್.ಡಿ ಕುರಿತು ಮಾರ್ಗದರ್ಶನ ನೀಡುತ್ತಿದ್ದ ಶಿಕ್ಷಕರಿಗೂ ಈತ ಭೇಟಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮೇನಲ್ಲಿ ತನಿಖೆ ನಡೆಸಿದಾಗ ಅವರು ನಾಪತ್ತೆ ಆಗಿರುವುದು ತಿಳಿಸಿದೆ. ಹೀಗಾಗಿ ಜುಲೈನಲ್ಲಿ ಆತನ ಪತ್ತೆಗಾಗಿ ಉಗಾಂಡ ಸರ್ಕಾರ ಹಾಗೂ ಹುಬ್ಬಳ್ಳಿ, ಧಾರವಾಡ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ. ಇದೀಗ ಉಂಗಾಂಡ ಹೈಕಮಿಷನರ್‌ಗೂ ದೂರು ನೀಡಲಾಗಿದೆ. ಇದನ್ನೂ ಓದಿ: ಪಿಒಕೆ ಮರಳಿ ಪಡೆದಾಗಲೇ ನಮ್ಮ ಸಂಕಲ್ಪ ಪೂರ್ಣಗೊಳ್ಳುತ್ತದೆ: ರಾಜನಾಥ್ ಸಿಂಗ್

    ತತ್ವಶಾಸ್ತ್ರ ವಿಷಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಜೋಯೆಲ್, ಭೀಮಾ ವಸತಿ ನಿಲಯದ 6ನೇ ನಂಬರ್ ಕೊಠಡಿಯಲ್ಲಿ ಉಳಿದುಕೊಂಡಿದ್ದ. ತಾನು ಹಾಸ್ಟೆಲ್ ಬಿಟ್ಟು ಹೋಗುವಾಗ ತನ್ನ ಕೊಠಡಿಗೆ ಬೀಗ ಹಾಕಿಕೊಂಡು ಹೋಗಿದ್ದು, ಬೀಗ ಕೈಯನ್ನೂ ತನ್ನ ಜೊತೆಗೆ ತೆಗೆದುಕೊಂಡು ಹೋಗಿದ್ದಾನೆ. ಆತ ಹೋದಾಗಿನಿಂದ ಯಾರೂ ಕೂಡ ಆ ಕೊಠಡಿಯ ಬೀಗ ತೆಗೆದು ನೋಡಿಲ್ಲ. ಇನ್ನು ಇಲ್ಲಿ ಇದ್ದಾಗ ಈ ವಿದ್ಯಾರ್ಥಿಯ ಪಾಸ್‍ಪೋರ್ಟ್ ವೀಸಾ ಕೂಡಾ ಮುಗಿದಿತ್ತು. ಹೀಗಾಗಿ ಅವನಿಗೆ ವೀಸಾ ಅವಧಿ ವಿಸ್ತರಣೆ ಮಾಡಿಕೊಳ್ಳಲು ಮಾಹಿತಿ ನೀಡಲಾಗಿತ್ತು. ಅಷ್ಟರಲ್ಲೇ ಈತ ವೀಸಾ ವಿಸ್ತರಣೆ ಮಾಡದೇ ಹೇಳದೇ ಕೇಳದೇ ಹೋಗಿದ್ದಾನೆ. ಇದನ್ನೂ ಓದಿ: ಪ್ರೀ ವೆಡ್ಡಿಂಗ್ ಫೋಟೋ ಶೂಟ್‍ಗೆ ಬೈಕ್ ಸ್ಟಂಟ್ ಮಾಡಿದ ಜೋಡಿಗಳು

    Live Tv
    [brid partner=56869869 player=32851 video=960834 autoplay=true]

  • ಮಸೀದಿಗಳ ಧ್ವನಿವರ್ಧಕಕ್ಕೆ ಸರ್ಕಾರ ಅನುಮತಿ ಕೊಟ್ಟಿದ್ದು ಸರಿಯಲ್ಲ – ಮುತಾಲಿಕ್ ಕಿಡಿ

    ಮಸೀದಿಗಳ ಧ್ವನಿವರ್ಧಕಕ್ಕೆ ಸರ್ಕಾರ ಅನುಮತಿ ಕೊಟ್ಟಿದ್ದು ಸರಿಯಲ್ಲ – ಮುತಾಲಿಕ್ ಕಿಡಿ

    ಧಾರವಾಡ: ಪ್ರಾರ್ಥನಾ ಮಂದಿರಗಳ ಲೌಡ್ ಸ್ಪೀಕರ್‌ಗೆ (Loudspeaker) ಸರ್ಕಾರ ಅನುಮತಿ‌ ನೀಡಿದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್ (Pramod Muthalik) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ‌.

    ಈ ಬಗ್ಗೆ ಮಾತನಾಡಿದ ಅವರು, ಸರ್ಕಾರ ಈ ಕೂಡಲೇ ಅನುಮತಿ ವಾಪಸ್ ಪಡೆಯಬೇಕು. 15 ವರ್ಷಗಳ ಹಿಂದೆಯೇ ಧ್ವನಿವರ್ಧಕದ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಹೇಳಿತ್ತು. ಹೋರಾಟ ಮಾಡಿ ಹೇಳಿದರೂ ಕ್ರಮ ಆಗಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಂದೂಗಳು ಒಟ್ಟಾಗಿರಬೇಕೆಂಬುದು ಸಾವರ್ಕರ್ ಕನಸಾಗಿತ್ತು – ಮೊಮ್ಮಗ ಸಾತ್ಯಕಿ ಸಾವರ್ಕರ್

    mosque-loudspeakers
    ಸಾಂದರ್ಭಿಕ ಚಿತ್ರ

    ಧ್ವನಿವರ್ಧಕಗಳ ತೊಂದರೆ, ಕಿರಿಕಿರಿ ನಿಂತಿಲ್ಲ. ಈಗ ಯಾವ ಅನುಮತಿ? ಹೇಗೆ ಕೊಟ್ಟಿದ್ದೀರಿ? ಮೈಕ್ ಅವಶ್ಯಕತೆ ಇಲ್ಲವೇ ಇಲ್ಲ. ಕಾನೂನು ಉಲ್ಲಂಘಿಸಿ ಮಸೀದಿಗಳಲ್ಲಿ ಮೈಕ್ ಬಳಕೆ ಆಗುತ್ತಿದೆ. ಮಂದಿರದ ಶಬ್ದದಿಂದ ಯಾರಿಗೂ ತೊಂದರೆ ಇಲ್ಲ. ನಿತ್ಯ ಐದು ಬಾರಿ ಮಂದಿರಗಳಲ್ಲಿ ಪೂಜೆ ಇರುವುದಿಲ್ಲ. ತ್ರಿಕಾಲ ಪೂಜೆ ಇದ್ದರೂ ಮೈಕ್ ಇರುವುದಿಲ್ಲ. ಬೆಳಗ್ಗೆ 6ರ ನಂತರ ಸುಪ್ರಭಾತಕ್ಕೆ ಮಾತ್ರ ಧ್ವನಿವರ್ಧಕ ಇರುತ್ತೆ ಎಂದು ತಿಳಿಸಿದ್ದಾರೆ.

    ಮಸೀದಿಗಳಲ್ಲಿ (Mosque) ಬೆಳಗ್ಗೆ 5ಕ್ಕೆ ಪ್ರಾರ್ಥನೆ ಪ್ರಾರಂಭ ಆಗುತ್ತದೆ. ಇದರಿಂದ ಆಸ್ಪತ್ರೆ, ಶಿಕ್ಷಣಕ್ಕೆ ತೊಂದರೆ ಆಗಿತ್ತು. ಆಗ ಜನ ಕೋರ್ಟ್‌ಗೆ ಹೋಗಿದ್ದರು. ಈಗ ಅನುಮತಿ ನೀಡಲಾಗಿದೆ ಅಂತಾ ಸರ್ಕಾರ ಹೇಳಿದೆ. ಒಂದೊಂದು ಮಸೀದಿಗೂ 4 ಧ್ವನಿವರ್ಧಕ ಇರುತ್ತವೆ. ಅವುಗಳಿಗೆಲ್ಲ ಅನುಮತಿ ಇರುತ್ತಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮೌನವೇಕೆ? – BJPಯಿಂದ ಸೇ-ಸಿದ್ದು ಪೋಸ್ಟರ್ ರಿಲೀಸ್

    ಈ ಅನುಮತಿ ವಾಪಸ್‌ ಪಡೆಯಬೇಕು, ಇಲ್ಲವೇ ಉಳಿದೆಲ್ಲ ಸ್ಪೀಕರ್ ತೆಗೆಯಿಸಿ ಒಂದೇ ಇಡಬೇಕು. ಇದಕ್ಕಾಗಿ ವಿಶೇಷ ಪೊಲೀಸ ಪಡೆ ರಚಿಸಬೇಕು. ಇಲ್ಲದೇ ಹೋದಲ್ಲಿ ಇದೊಂದು ಕಣ್ಣೊರೆಸುವ ತಂತ್ರ ಆಗುತ್ತೆ. ಈ ನಾಟಕ ಸರ್ಕಾರ ನಿಲ್ಲಿಸಬೇಕು. ಕಠಿಣ ಕ್ರಮ‌ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜಗಳ ಬಿಡಿಸಲು ಹೋದ ವ್ಯಕ್ತಿಯೇ ಕುಸಿದು ಬಿದ್ದು ಸಾವು

    ಜಗಳ ಬಿಡಿಸಲು ಹೋದ ವ್ಯಕ್ತಿಯೇ ಕುಸಿದು ಬಿದ್ದು ಸಾವು

    ಧಾರವಾಡ: ಇಬ್ಬರ ಜಗಳದಲ್ಲಿ (Conflict) ಮೂರನೇ ವ್ಯಕ್ತಿ ಬಲಿಯಾದ ಘಟನೆ ಧಾರವಾಡ (Dharwad) ಹೊಸ ಬಸ್ ನಿಲ್ದಾಣದ ಎದುರಿನ ಹೋಟೆಲ್‌ನಲ್ಲಿ ನಡೆದಿದೆ.

    ಶ್ರೀಸಾಯಿ ಎಂಬ ಹೋಟೆಲ್‌ನಲ್ಲಿ (Hotel) ಈ ಘಟನೆ ನಡೆದಿದೆ.  ರಾಮಲಿಂಗಪ್ಪ ಎಂಬಾತ ಜಗಳ ಬಿಡಿಸಲು ಬಂದು ಜೀವ ಕಳೆದುಕೊಂಡ ವ್ಯಕ್ತಿ. ರಾಮಲಿಂಗಪ್ಪನ ಏಟು ತಿಂದ ಕೆಲವೇ ಕ್ಷಣಗಳಲ್ಲಿ ಹಠಾತ್ತನೇ ಬಿದ್ದು ಸಾವನ್ನಪ್ಪಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪರಸ್ಪರ ಕಿತ್ತಾಡಿ ಮಕ್ಕಳೊಂದಿಗೆ ಬಾವಿಗೆ ಜಿಗಿದ ಓರಗಿತ್ತಿಯರು – ಗರ್ಭಿಣಿ ಸಾವು

    ಹೋಟೆಲ್‌ಗೆ ಬಂದಿದ್ದ ಎರಡು ಗುಂಪುಗಳ ಮಧ್ಯೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ರಾಮಲಿಂಗಪ್ಪ ಜಗಳ ಬಿಡಿಸಲು ಹೋಗಿದ್ದ. ಈ ವೇಳೆ ರಾಮಲಿಂಗಪ್ಪ ಬುದ್ಧಿವಾದ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಒಂದು ಗುಂಪು ಆತನ ಮೇಲೆ ಹಲ್ಲೆ ನಡೆಸಿದೆ. ಹಲ್ಲೆ ನಡೆದು ಕೆಲವು ಕ್ಷಣಗಳ ನಂತರ ಕುಸಿದು ಬಿದ್ದ ರಾಮಲಿಂಗಪ್ಪ, ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾನೆ. ಸದ್ಯ ಉಪನಗರ ಠಾಣೆ ಪೊಲೀಸರು ಘಟನೆ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಮೂಲಕ ರಾಜ್ಯದಲ್ಲಿ 150 ಕ್ಷೇತ್ರ ಗೆಲ್ಲುತ್ತೇವೆ: ಡಿಕೆಶಿ

    Live Tv
    [brid partner=56869869 player=32851 video=960834 autoplay=true]

  • ಡಿಸೆಂಬರ್‌ವರೆಗೂ ಹಲವರು ಕಾಂಗ್ರೆಸ್‍ಗೆ ಸೇರ್ಪಡೆ ಆಗ್ತಾರೆ: ಜಮೀರ್ ಸ್ಫೋಟಕ ಹೇಳಿಕೆ

    ಡಿಸೆಂಬರ್‌ವರೆಗೂ ಹಲವರು ಕಾಂಗ್ರೆಸ್‍ಗೆ ಸೇರ್ಪಡೆ ಆಗ್ತಾರೆ: ಜಮೀರ್ ಸ್ಫೋಟಕ ಹೇಳಿಕೆ

    ಧಾರವಾಡ: ಡಿಸೆಂಬರ್‌ವರೆಗೂ ರಾಜ್ಯದಲ್ಲಿ ರಾಜಕೀಯ ಬಾಂಬ್ ಬ್ಲಾಸ್ಟ್ ಆಗುತ್ತದೆ. ಹಲವರು ಕಾಂಗ್ರೆಸ್ (Congress) ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ, ಕಾದು ನೋಡಿ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಧಾರವಾಡದಲ್ಲಿ (Dharwad) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ (BJP) ಹಲವು ಮಂದಿ ಗೊಂದಲದಲ್ಲಿದ್ದಾರೆ, ನವೆಂಬರ್‌ವರೆಗೂ ಕಾದು ನೋಡಿ, ಹಲವರು ಮತ್ತೆ ಕಾಂಗ್ರೆಸ್‍ಗೆ ಬರುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ವೈದ್ಯೆ ಹೆಸರಲ್ಲಿ ಮಹಿಳೆಯರಿಗೆ ಅಶ್ಲೀಲ ಫೋಟೋ – ಆರೋಪಿಗಳು ಅರೆಸ್ಟ್

    ZAMEER

    ಇದೇ ವೇಳೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರಿಗೆ ನನ್ನ ಅರ್ಹತೆ ಗೊತ್ತಿರಲಿಲ್ವಾ? ರಾಜ್ಯದಲ್ಲಿ 123 ಸ್ಥಾನ ಗೆಲ್ಲುತ್ತೇನೆ ಎನ್ನುವ ಅವರು ಮೊದಲು 59 ಸೀಟು ಗೆದ್ದು ತೋರಿಸಲಿ. ಜಮೀರ್ ಅಹ್ಮದ್ ಖಾನ್ ಅವರನ್ನು ಯಾರು ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದ್ದಾರೆ.

     

    HDK

    ರಾಹುಲ್ ಗಾಂಧಿ ಪಾದಯಾತ್ರೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ, ದೇವರ ಆಶೀರ್ವಾದ ಪಾದಯಾತ್ರೆ ಯಶಸ್ವಿಯಾಗಿ ಸಾಗುತ್ತಿದೆ. ಸಿದ್ದು-ಡಿಕೆಶಿ ಮೊದಲಿನಿಂದಲೂ ಒಂದಾಗಿಯೇ ಇದ್ದಾರೆ, ಮಾಧ್ಯಮದವರೇ ಈ ರೀತಿಯಾಗಿ ಬಿಂಬಿಸಿದ್ದು, ಬಿಜೆಪಿ ಅವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಹೀಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ರಾಹುಲ್ ಗಾಂಧಿ (Rahul Gandhi) ಅವರು ಪಾದಯಾತ್ರೆ (Bharat Jodo Yatra) ಮೂಲಕ ಇತಿಹಾಸ ಕ್ರಿಯೇಟ್ ಮಾಡುತ್ತಿದ್ದಾರೆ, ಇಷ್ಟೊಂದು ಜನ ಬರುತ್ತಾರೆ ಅಂತ ನಾವು ಅಂದುಕೊಂಡಿರಲಿಲ್ಲ. ಪಾಂಡವಪುರದಿಂದ ಶ್ರೀರಂಗಪಟ್ಟಣದವರೆಗೂ ನಾನು ನಡೆದೇ, ನನಗೆ ಅಲ್ಲಿಯವರೆಗೂ ನಡೆಯುವುದಕ್ಕೆ ಆಗಿಲ್ಲ, ಅಂಥದ್ದರಲ್ಲಿ ರಾಹುಲ್ ಗಾಂಧಿ ಇಷ್ಟೊಂದು ನಡೆಯುತ್ತಿರುವುದು ನಿಜಕ್ಕೂ ಅಚ್ಚರಿ ಎಂದಿದ್ದಾರೆ.

    ಮುಸ್ಲಿಮರಿಗೆ ಕಾಂಗ್ರೆಸ್‍ನಲ್ಲಿ ಟಿಕೆಟ್ ನೀಡುತ್ತಾರೆ, ಆದರೆ ಅವರನ್ನು ಜನರು ಗೆಲ್ಲಿಸುತ್ತಿಲ್ಲ, ಅವರು ಗೆಲ್ಲಿಸಿದರೆ ಒಳ್ಳೆಯದು. ಓರ್ವ ಸೇವಕ ನಾನು, ಲೀಡರ್ ಆಗುವುದಕ್ಕೆ ಇಷ್ಟ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸರ್ಕಾರ ನಡೆಸುತ್ತೆ; ಬ್ರಹ್ಮಾಂಡ ಗುರೂಜಿ

    ಖರ್ಗೆ ಎಐಸಿಸಿ ಅಧ್ಯಕ್ಷ ಆಗಿರುವುದು ನಮಗೆ ಆನೆಬಲ ಬಂದಂತಾಗಿದೆ, ಕುಮಾರಸ್ವಾಮಿ 57 ಸೀಟ್‍ಗೆ ರೀಚ್ ಆಗಲಿಲ್ಲ, ಮುಂದೆ 1,2,3 ಅಷ್ಟೇ ಅವರು ಗೆಲ್ಲುವುದು ಎಂದು ಕುಮಾರಸ್ವಾಮಿ ಬಗ್ಗೆ ಜಮೀರ್ ವ್ಯಂಗ್ಯವಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    HDK

  • ಸಲಿಂಗಿಯ ಕಾಟದಿಂದ ಬೇಸತ್ತ ಯುವಕ ಆತ್ಮಹತ್ಯೆಗೆ ಶರಣು

    ಸಲಿಂಗಿಯ ಕಾಟದಿಂದ ಬೇಸತ್ತ ಯುವಕ ಆತ್ಮಹತ್ಯೆಗೆ ಶರಣು

    ಧಾರವಾಡ: ದಾವಣಗೆರೆ (Davanagere) ಯ ಬೆನ್ನಲ್ಲೇ ಇದೀಗ ಧಾರವಾಡದಲ್ಲಿಯೂ ಸಲಿಂಗಕಾಮದ ಸುದ್ದಿಯೊಂದು ಹೊರಬಿದ್ದಿದೆ. ಸಲಿಂಗಕಾಮಿಯ ಕಾಟಕ್ಕೆ ಯುವಕನೋರ್ವ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.

    ಯಾಸೀನ್ ರೋಟಿವಾಲೆ ಮೃತ ಯುವಕನಾಗಿದ್ದು, ಈತ ಧಾರವಾಡ ಅತ್ತಿಕೊಳ್ಳದ ನಿವಾಸಿ. ವೃತ್ತಿಯಲ್ಲಿ ಆಟೊ ಡ್ರೈವರ್ ಆಗಿದ್ದ ಇವನು, ಕಳೆದ ಅಕ್ಟೋಬರ್ 12 ರಂದು ತನ್ನ ಮನೆಯಿಂದ ಹೊರ ಹೋಗಿದ್ದ. ನಂತರ ಅಕ್ಟೋಬರ್ 15 ರಂದು ಧಾರವಾಡದ ಕೆಲಗೇರಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

    ಪವನ್ ಬ್ಯಾಳಿ ಎಂಬವನ ಜೊತೆ ಯಾಸೀನ್‍ಗೆ ಗೆಳೆತನವಿತ್ತು. ಆದರೆ ಪವನ್ ಸಲಿಂಗಕಾಮಿ (Homosexual). ಈತನ ಕಾಟಕ್ಕೆ ಯಾಸೀನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಯಾಸೀನ್ ತಂದೆ ರಫೀಕ್ ಆರೋಪ ಮಾಡುತ್ತಿದ್ದಾರೆ. ಯಾಸೀನ್ ಹಾಗೂ ಪವನ್ ಮಧ್ಯೆ ಏಳೆಂಟು ತಿಂಗಳಿನಿಂದ ಗೆಳೆತನ ಇತ್ತು. ಈ ಗೆಳೆತನ ಸಲಿಂಗಕಾಮಕ್ಕೂ ಕಾರಣವಾಗಿತ್ತು. ಅಲ್ಲದೇ ಪವನ್ ಎಲ್ಲರ ಮುಂದೆ ನಾನು ಯಾಸೀನ್‍ನ್ನು ಮದುವೆ (Same Sex Marriage) ಮಾಡಿಕೊಂಡಿದ್ದೇನೆ ಎಂದೂ ಹೇಳಿದ್ದ. ಈ ಗೆಳೆತನ (Friendship) ಮತ್ತೊಂದು ಸ್ವರೂಪ ಪಡೆದುಕೊಂಡಿತ್ತು.

    ಪವನ್ ಯಾಸೀನ್‍ಗೆ ಪ್ರತಿನಿತ್ಯ ಫೋನ್ ಮಾಡಿ ತನ್ನ ಸಂಪರ್ಕಕ್ಕೆ ಬರುವಂತೆ ಕಿರುಕುಳ ನೀಡುತ್ತಿದ್ದನಂತೆ. ಅಲ್ಲದೇ ಅಕ್ಟೋಬರ್ 12 ರಂದು ಪವನ್, ಯಾಸೀನ್ ಜೊತೆಯೇ ಇದ್ದ ಎಂಬುದು ಯಾಸೀನ್ ಪೋಷಕರ ಆರೋಪವಾಗಿದೆ. ಪವನ್ ನೀಡುತ್ತಿದ್ದ ಈ ಕಿರುಕುಳದಿಂದಲೇ ಬೇಸತ್ತು ಯಾಸೀನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಯಾಸೀನ್ ತಂದೆ ರಫೀಕ್ ವಿದ್ಯಾಗಿರಿ ಠಾಣೆ (Vidyagiri Police Station) ಯಲ್ಲಿ ದೂರು ನೀಡಿದ್ದು, ಸದ್ಯ ಪವನ್‍ನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಯುವತಿಯರಿಬ್ಬರ ನಡುವೆ ಪ್ರೇಮಾಂಕುರ- ಬೇರೆಯವಳೊಂದಿಗೆ ಮಾತಾಡಿದ್ದಕ್ಕೆ ರೇಡಿಯಂ ಕಟರ್‌ನಿಂದ ಹಲ್ಲೆಗೈದ್ಳು!

    ಯಾಸೀನ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪವನ್ ಹಾಗೂ ಈತನ ಮಧ್ಯೆ ಜಗಳ ಕೂಡ ಆಗಿತ್ತು. ಇದರಿಂದ ಬೇಸತ್ತ ಯಾಸೀನ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಲ್ಲದೇ ಸಾಯುವ ಮುನ್ನ ತನ್ನ ತಂದೆಗೂ ಕರೆ ಮಾಡಿ, ಪವನ್ ಕಿರುಕುಳದ ಬಗ್ಗೆ ಹೇಳಿದ್ದ. ತನ್ನ ಸ್ನೇಹಿತರಿಗೂ ಮೆಸೇಜ್ ಮಾಡಿದ್ದ ಯಾಸೀನ್, ತನ್ನ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮನವಿ ಮಾಡಿದ್ದ.

    ಸದ್ಯ ಸಲಿಂಗಕಾಮಿಯ ಕಾಟಕ್ಕೆ ಬೇಸತ್ತ ಯುವಕನೋರ್ವ ತನ್ನ ಜೀವವನ್ನೇ ಕಳೆದುಕೊಂಡಿದ್ದು ವಿಪರ್ಯಾಸವೇ ಸರಿ. ಈ ರೀತಿಯ ಕಾಟ ನೀಡಿದ ಸಲಿಂಗಕಾಮಿಯನ್ನು ಪೊಲೀಸರು ಕಂಬಿ ಹಿಂದೆ ತಳ್ಳಿದ್ದು, ಈ ಪ್ರಕರಣದ ಸಂಬಂಧ ಇನ್ನೂ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಅಕ್ರಮ ಸಂಬಂಧ ಹೊಂದಿದ್ದವಳನ್ನೇ ಕೊಂದ – ಜೈಲಿನಲ್ಲಿ ತಾನೂ ನೇಣಿಗೆ ಶರಣಾದ

    ಅಕ್ರಮ ಸಂಬಂಧ ಹೊಂದಿದ್ದವಳನ್ನೇ ಕೊಂದ – ಜೈಲಿನಲ್ಲಿ ತಾನೂ ನೇಣಿಗೆ ಶರಣಾದ

    ಧಾರವಾಡ: ಕಳೆದ ವಾರವಷ್ಟೇ ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಜೈಲು ಸೇರಿದ್ದ ಆರೋಪಿಯೊಬ್ಬ ಇದೀಗ ತಾನೂ ಕೂಡ ಜೈಲಿನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ವಿದ್ಯಾಕಾಶಿ ಧಾರವಾಡ (Dharwad) ನಗರದಲ್ಲಿ ಕಳೆದ ಅಕ್ಟೋಬರ್ 14 ರಂದು ಸವಿತಾ ಕಿತ್ತೂರ ಎಂಬ ಮಹಿಳೆಯ ಕೊಲೆ ನಡೆದಿತ್ತು. ಧಾರವಾಡ ಜಿಲ್ಲಾ ಆಸ್ಪತ್ರೆ ಬಳಿ ಸವಿತಾಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಘಟನೆ ನಡೆದ ಎರಡು ದಿನದ ನಂತರ ಧಾರವಾಡ ಉಪನಗರ ಠಾಣೆಯ ಪೊಲೀಸರು ಆರೋಪಿ ಆನಂದ್ ದುದನಿಯನ್ನು ಬಂಧಿಸಿ, ಜೈಲಿಗೆ ಅಟ್ಟಿದ್ದರು. ಇದೀಗ ಆನಂದ್ ಕೂಡ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ನ.1ರಂದು ನಟ ಪುನೀತ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ: ಸಿಎಂ ಬೊಮ್ಮಾಯಿ

    ಧಾರವಾಡ ನೆಹರೂನಗರದ ಸವಿತಾ ಜೊತೆ ಈ ಅಕ್ರಮ ಸಂಬಂಧ ಹೊಂದಿದ್ದ ಆನಂದ್, ಇದೇ ಕಾರಣಕ್ಕೆ ಸವಿತಾಳನ್ನು ಕೊಲೆ ಮಾಡಿದ್ದ. ಕೊಲೆಯ ನಂತರ ಪರಾರಿಯಾಗಿದ್ದ ಆನಂದ್ ಅನ್ನು ಕೇವಲ ನಾಲ್ಕು ದಿನಗಳ ಹಿಂದಷ್ಟೇ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ ಬುಧವಾರ ತಡ ರಾತ್ರಿ ಜೈಲಿನ ಶೌಚಾಲಯದಲ್ಲಿ ಬೆಡ್‍ಶೀಟ್ ತುಂಡಿನಿಂದ ನೇಣು ಹಾಕಿಕೊಂಡಿದ್ದಾನೆ. ನಾಲ್ಕನೇ ನಂಬರ್ ಸೆಲ್‍ನಲ್ಲಿದ್ದ ಆರೋಪಿ ತಡರಾತ್ರಿ ನೇಣು ಹಾಕಿಕೊಂಡಾಗ ಜೈಲಿನ ಸಿಬ್ಬಂದಿ ಕೂಡ ಅಲ್ಲಿಂದ ದೂರ ಇದ್ದರು. ಈತ ಬಿದ್ದ ಶಬ್ದ ಕೇಳಿಸಿಕೊಂಡು ತಕ್ಷಣ ಆತನನ್ನು ಸಿಬ್ಬಂದಿ ಆಸ್ಪತ್ರೆಗೆ ರವಾನೆ ಮಾಡಿದರು. ಆದರೂ ಆತ ಬದುಕುಳಿಯಲಿಲ್ಲ.

    ಸದ್ಯ ಕಾನೂನಿನ ಪ್ರಕಾರ ಧಾರವಾಡ ಉಪನಗರ ಠಾಣೆಗೆ ಜೈಲು ಅಧೀಕ್ಷಕರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪಂಚನಾಮೆ ಮಾಡಿದ್ದಾರೆ. ಈತ ನರೇಂದ್ರ ಗ್ರಾಮದವನಾಗಿದ್ದ ಎಂದು ತಿಳಿಸಿದ ಜೈಲು ಅಧೀಕ್ಷಕರು, ಮೃತನ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾವೇರಿ ಕೊಳ್ಳದಲ್ಲಿ ಭರ್ಜರಿ ಮಳೆ – ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ನಾಲ್ಕೂವರೆ ಪಟ್ಟು ಅಧಿಕ ನೀರು ಬಿಡುಗಡೆ

    Live Tv
    [brid partner=56869869 player=32851 video=960834 autoplay=true]

  • ನಿವೃತ್ತ ಪ್ರೊಫೆಸರ್‌ಗೆ ಯುವತಿ ಕಾಲ್ – ಅಶ್ಲೀಲ ವೀಡಿಯೋ ಮಾಡಿ 21 ಲಕ್ಷ ನಾಮ ಹಾಕಿದ್ಲು

    ನಿವೃತ್ತ ಪ್ರೊಫೆಸರ್‌ಗೆ ಯುವತಿ ಕಾಲ್ – ಅಶ್ಲೀಲ ವೀಡಿಯೋ ಮಾಡಿ 21 ಲಕ್ಷ ನಾಮ ಹಾಕಿದ್ಲು

    ಧಾರವಾಡ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ತಮ್ಮ ಖಾಸಗಿ ವೀಡಿಯೋಗಳನ್ನು ತೋರಿಸುವ ಮೂಲಕ ಜನರನ್ನು ಮರುಳು ಮಾಡಿ, ಅವರಿಂದ ಹಣ ಕಿತ್ತುಕೊಳ್ಳುವ ಜಾಲ ಹಬ್ಬುತ್ತಲೇ ಇದೆ. ಈಗ ಅದೇ ರೀತಿ ಯುವತಿಯೊಬ್ಬಳು ವೀಡಿಯೋ ಕಾಲ್ (Video Call) ಮುಖಾಂತರ ನಿವೃತ್ತ ಪ್ರೊಫೆಸರ್ (Retired Professor) ಒಬ್ಬರಿಗೆ ತನ್ನ ಖಾಸಗಿ ವೀಡಿಯೋ (Obscene Video) ತೋರಿಸಿ ದೊಡ್ಡ ಮೊಸವನ್ನೇ (Fraud) ಮಾಡಿದ್ದಾಳೆ.

    ಧಾರವಾಡದಲ್ಲಿ (Dharwad) ಇರುವ ನಿವೃತ್ತ ಪ್ರೊಫೆಸರ್ ಒಬ್ಬರಿಗೆ ಬರೋಬ್ಬರಿ 21 ಲಕ್ಷ ರೂ. ಹಣವನ್ನು ಉಂಡೆ ನಾಮ ಹಾಕಿರುವ ಯುವತಿ, ತನ್ನ ಸಹೋದರಿ ಮದುವೆಗೆ ಹಣ ಬೇಕು ಎಂದು ಮೊಬೈಲ್ ಕರೆ ಮಾಡಿ ಬೇಡಿಕೆ ಇಟ್ಟಿದ್ದಳು. ಮೊದಲು ಈ ನಿವೃತ್ತ ಪ್ರೊಫೆಸರ್‌ಗೆ ಮೊಬೈಲ್‌ನಲ್ಲಿ ಮಾತನಾಡುತ್ತ ಪರಿಚಯ ಮಾಡಿಕೊಂಡ ಯುವತಿ, ನಂತರ ಹಣದ ಬೇಡಿಕೆ ಇಟ್ಟಿದ್ದಾಳೆ.

    ಯುವತಿ ಹಣ ಕೇಳಿದಾಗ ನಿವೃತ್ತ ಪ್ರೊಫೆಸರ್ ಹಣ ಕೊಟ್ಟಿರಲಿಲ್ಲ. ಆಗ ವೀಡಿಯೋ ಕಾಲ್ ಮಾಡಿದ ಆ ಯುವತಿ, ಇವರ ಫೋಟೋ ತೆಗೆದುಕೊಂಡು ಅಶ್ಲೀಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾಳೆ. ಮಾರ್ಯಾದೆಗೆ ಅಂಜಿದ ನಿವೃತ್ತ ಪ್ರೊಫೆಸರ್, ಆಕೆ ಕೇಳಿದ್ದಕ್ಕೆ ಹಣ ಕೊಡುತ್ತಾ ಬಂದಿದ್ದಾರೆ. ಇದನ್ನೂ ಓದಿ: ಫಸ್ಟ್‌ ಟೈಂ ಬೆಂಗಳೂರಿನಲ್ಲಿ ಲ್ಯಾಂಡ್‌ ಆಯ್ತು ವಿಶ್ವದ ದೊಡ್ಡ ವಿಮಾನ

    ನಿವೃತ್ತ ಪ್ರೊಫೆಸರ್ 21 ಲಕ್ಷ ರೂ. ಕಳೆದುಕೊಂಡ ಬಳಿಕ ಹುಬ್ಬಳ್ಳಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಅಂಜಲಿ ಶರ್ಮಾ ಎಂಬಾಕೆ ಇವರಿಗೆ ವಿಡಿಯೊ ಕಾಲ್ ಮಾಡಿದ್ರೆ, ಆಕೆಯ ಜೊತೆ ಇದ್ದ ವಿಕ್ರಂ ಸೈಬರ್ ಕ್ರೈಂ ದೆಹಲಿ ಪೊಲೀಸ್ ಎಂದು ಹೆಸರು ಹೇಳಿ ದುಡ್ಡು ಪೀಕಿದ್ದಾನೆ.

    ಸದ್ಯ ನನಗೆ ಆದ ರೀತಿ ಬೇರೆ ಯಾರಿಗೂ ಆಗದಿರಲಿ, ಅದರಲ್ಲೂ ಯುವಕರು ಇಂತಹ ಬಲೆಗೆ ಬೀಳಬಾರದು ಎಂದು ನಿವೃತ್ತ ಪ್ರೊಫೆಸರ್ ಹೇಳಿದ್ದಾರೆ. ಅಲ್ಲದೇ ದೆಹಲಿ ಸೈಬರ್ ಕ್ರೈಂ ಪೊಲೀಸರಿಗೂ ಈ ಬಗ್ಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೀತಿ ಹೆಸರಿನಲ್ಲಿ ಬಲವಂತದ ಮತಾಂತರ- ಮದುವೆ ಕಥೆ ಕಟ್ಟಿ ಧರ್ಮವನ್ನೇ ಬದಲಿಸಿದ!

    Live Tv
    [brid partner=56869869 player=32851 video=960834 autoplay=true]

  • ಒಂದೇ ವೇದಿಕೆಯಲ್ಲಿ ಬಿಜೆಪಿ ಶಾಸಕ, ನಿವೃತ್ತ ಐಪಿಎಸ್ ಅಧಿಕಾರಿ, ರೌಡಿ ಶೀಟರ್

    ಒಂದೇ ವೇದಿಕೆಯಲ್ಲಿ ಬಿಜೆಪಿ ಶಾಸಕ, ನಿವೃತ್ತ ಐಪಿಎಸ್ ಅಧಿಕಾರಿ, ರೌಡಿ ಶೀಟರ್

    ಧಾರವಾಡ: ಧಾರವಾಡದಲ್ಲಿ ಆಯೋಜಿಸಿದ್ದ ಕವ್ವಾಲಿ ಕಾರ್ಯಕ್ರಮದ (Qawwali programme) ವೇದಿಕೆಯಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ, ರಾಜಕಾರಣಿಗಳು, ರೌಡಿಶೀಟರ್ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದ ವೇಳೆ ನಿವೃತ್ತ ಐಪಿಎಸ್ ಅಧಿಕಾರಿ ಮೇಲೆ ನಿವಾಳಿಸಿ ಹಣ ತೂರಿದ ರೌಡಿ ಶೀಟರ್ ವೀಡಿಯೋ ಕೂಡ ಈಗ ವೈರಲ್ ಆಗುತ್ತಿದೆ.

    ನಿವೃತ್ತ ಐಪಿಎಸ್ ಅಧಿಕಾರಿ, ಎಎಪಿ ಮುಖಂಡ ಭಾಸ್ಕರ್‌ ರಾವ್ (Bhaskar Rao) ಮೇಲೆಯೇ ರೌಡಿ ಶೀಟರ್ ಮುಕ್ತುಂ ಸೊಗಲದ ನಿವಾಳಿಸಿ ಹಣ ತೂರಿದ್ದಾನೆ. ಮುಕ್ತುಂ ಧಾರವಾಡದ (Dharwad) ರೌಡಿ ಶೀಟರ್ ಆಗಿದ್ದು, ಕವ್ವಾಲಿಗೆ ಫಿದಾ ಆಗಿ ಹಣ ತೂರಿದ್ದಾನೆ. ಇದನ್ನೂ ಓದಿ: ಕಾಕ್‍ಪಿಟ್, ಕ್ಯಾಬಿನ್‍ನಲ್ಲಿ ಹೊಗೆ – ಹೈದರಾಬಾದ್‍ನಲ್ಲಿ ಎಮರ್ಜೆನ್ಸಿ ಲ್ಯಾಡಿಂಗ್ ಆದ ಸ್ಪೈಸ್‍ಜೆಟ್ ವಿಮಾನ

    ಈ ವೇಳೆ ಪಕ್ಕದಲ್ಲಿದ್ದ ಭಾಸ್ಕರ್ ರಾವ್ ಅವರ ಮೇಲೂ ನಿವಾಳಿಸಿ ಮುಕ್ತುಂ ಹಣ ತೂರಿದ್ದಾನೆ. ಭಾಸ್ಕರ್‌ ರಾವ್ ಸಹ ಕವ್ವಾಲಿ ಎಂಜಾಯ್ ಮಾಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಧಾರವಾಡ ಶಾಸಕ ಅರವಿಂದ ಬೆಲ್ಲದ ಕೂಡಾ ಭಾಗವಹಿಸಿದ್ದರು. ಈ ವೇಳೆ ಭಾಸ್ಕರ್ ರಾವ್ ಹಾಗೂ ಬೆಲ್ಲದ ಮೇಲೆ ಕೂಡಾ ಕೆಲವರು ನೋಟು ತೂರಿದ್ದಾರೆ. ಇದನ್ನೂ ಓದಿ: ಹಿಜಬ್‌ ಆಯ್ಕೆಯ ವಿಷಯ: ನ್ಯಾ.ಹೇಮಂತ್ ಗುಪ್ತಾ, ನ್ಯಾ. ಧುಲಿಯಾ ಆದೇಶದಲ್ಲಿ ಏನಿದೆ?

    Live Tv
    [brid partner=56869869 player=32851 video=960834 autoplay=true]

  • ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ವ್ಯಕ್ತಿಯನ್ನು ಬಟ್ಟೆಯ ಸಹಾಯದಿಂದ ರಕ್ಷಿಸಿದ ಸ್ಥಳೀಯರು

    ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ವ್ಯಕ್ತಿಯನ್ನು ಬಟ್ಟೆಯ ಸಹಾಯದಿಂದ ರಕ್ಷಿಸಿದ ಸ್ಥಳೀಯರು

    ಹುಬ್ಬಳ್ಳಿ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ (Rain) ಧಾರವಾಡ (Dharwad) ಜಿಲ್ಲೆ ಅಕ್ಷರಶಃ ನಲುಗಿ ಹೋಗಿದೆ. ವರುಣಾರ್ಭಟಕ್ಕೆ ಜಿಲ್ಲೆಯ ನಗರ ಮತ್ತು ಗ್ರಾಮೀಣ ಜನತೆ ಕಂಗಾಲಾಗಿದೆ.

    ಮಳೆಯಿಂದ ಹಳ್ಳಗಳು ತುಂಬಿ ಹರಿಯುತ್ತಿದ್ದು, ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ (Drowning) ವ್ಯಕ್ತಿಯನ್ನು ಸ್ಥಳೀಯರೇ ರಕ್ಷಣೆ (Rescue) ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಗಂಜಿಗಟ್ಟಿ ಹಾಗೂ ಬಗಡಗೇರಿ ಗ್ರಾಮದ ಮಧ್ಯೆ ನಡೆದಿದೆ. ಇಂದು ಬೆಳಗ್ಗೆ ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರುವ ಸೇತುವೆ (Bridge) ದಾಟುವಾಗ ವ್ಯಕ್ತಿ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಬಟ್ಟೆಗಳನ್ನು (Clothes) ಜೋಡಿಸಿ, ಹಗ್ಗ ತಯಾರಿಸಿ ಅದರಿಂದ ಆ ವ್ಯಕ್ತಿಯನ್ನು ಕಾಪಾಡಿದ್ದಾರೆ.

    ಈ ಘಟನೆಯಾದ ಬಳಿಕ ಅದೇ ಸೇತುವೆ ಮೇಲೆ ಹಳ್ಳ ದಾಟಲು ಪ್ರಯತ್ನಿಸಿದ ಬೈಕ್ ಸವಾರ ಕೊಚ್ಚಿಹೋಗಿದ್ದಾನೆ. ಇದನ್ನು ಕಂಡ ಸ್ಥಳೀಯರು ಆತನನ್ನು ಕೂಡಾ ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಸಕ್ಕರೆನಾಡಲ್ಲಿ ಮಹಾಕುಂಭ ಮೇಳ ಸಂಭ್ರಮ- 4 ದಿನಗಳ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ

    ಕಳೆದ 2 ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಅನ್ನದಾತರು ಕಂಗಾಲಾಗಿದ್ದಾರೆ. ರಕ್ಕಸ ಮಳೆಗೆ ಶೇಂಗಾ ಬೆಳೆ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಬೆಳೆ ನೀರಿನಲ್ಲಿ ಕೊಚ್ಚಿಹೋದ ಘಟನೆ ಕುಂದಗೋಳ ತಾಲೂಕಿನಲ್ಲಿ ನಡೆದಿದೆ. ಈ ಬಾರಿ ತಾಲೂಕಿನಲ್ಲಿ ಅತಿ ಹೆಚ್ಚು ಶೇಂಗಾ ಬೆಳೆಯಲಾಗಿತ್ತು. ಶೇಂಗಾ ಬೆಳೆ ಕಟಾವು ಮಾಡಿ ರಾಶಿ ಮಾಡುವ ಸಮಯದಲ್ಲಿಯೇ ವಕ್ಕರಿಸಿರುವ ಮಳೆರಾಯ ರೈತರಿಗೆ ವಿಪರೀತ ತೊಂದರೆ ನೀಡುತ್ತಿದ್ದಾನೆ. ಇದನ್ನೂ ಓದಿ: ಹಿಜಬ್‌ ವಿವಾದ – ಗುರುವಾರ ಸುಪ್ರೀಂ ತೀರ್ಪು ಪ್ರಕಟ ಸಾಧ್ಯತೆ

    Live Tv
    [brid partner=56869869 player=32851 video=960834 autoplay=true]

  • ಹುಬ್ಬಳ್ಳಿ-ಧಾರವಾಡದ ಜನತೆಗೆ ಸಿಹಿ ಸುದ್ದಿ – ದೆಹಲಿಗೆ ನಿತ್ಯ ವಿಮಾನ

    ಹುಬ್ಬಳ್ಳಿ-ಧಾರವಾಡದ ಜನತೆಗೆ ಸಿಹಿ ಸುದ್ದಿ – ದೆಹಲಿಗೆ ನಿತ್ಯ ವಿಮಾನ

    ನವದೆಹಲಿ: ಹುಬ್ಬಳ್ಳಿಯಿಂದ (Hubballi) ದೆಹಲಿಗೆ (Delhi) ಪ್ರತಿನಿತ್ಯ ನೇರ ವಿಮಾನ ಸೇವೆ ಪ್ರಾರಂಭಿಸುವ ಕೋರಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಇಂಡಿಗೋ ಏರ್‌ಲೈನ್ಸ್ (Indigo Airlines), ಇದೇ ನವೆಂಬರ್ 14ರಿಂದ ಪ್ರತಿನಿತ್ಯ ಈ ಸೇವೆ ಪ್ರಾರಂಭಿಸುವುದಾಗಿ ಘೋಷಿಸಿದೆ. ಟಿಕೆಟ್ ಬುಕ್ಕಿಂಗ್ ಕೂಡ ಈಗಾಗಲೇ ಪ್ರಾರಂಭವಾಗಿದೆ.

    ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ (Pralhad Joshi) ಹಾಗೂ ಜ್ಯೋತಿರಾಧಿತ್ಯ ಸಿಂಧಿಯಾ ಹಾಗೂ ಹುಬ್ಬಳ್ಳಿ-ಧಾರವಾಡದ ಪ್ರಯಾಣಿಕರ ಮನವಿಯನ್ನು ಪುರಸ್ಕರಿಸಿ ಇಂಡಿಗೋ ಆಡಳಿತ ಮಂಡಳಿ ಸೇವೆ ಆರಂಭಿಸಿದೆ. ಇದನ್ನೂ ಓದಿ: ಹೆಚ್‍ಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

    ದೆಹಲಿಯಿಂದ ಹುಬ್ಬಳ್ಳಿಗೆ ಬೆಳಗ್ಗೆ 10:00 ಗಂಟೆಗೆ ಹೊರಡಲಿದ್ದು ಮಧ್ಯಾಹ್ನ 12:45ಕ್ಕೆ ತಲುಪಲಿದೆ. ಹುಬ್ಬಳ್ಳಿಗೆ ದೆಹಲಿಯಿಂದ 13:15 ಗಂಟೆಗೆ ಹೊರಡಲಿದ್ದು ಸಂಜೆ 15:45ಕ್ಕೆ ಹುಬ್ಬಳ್ಳಿ ತಲುಪಲಿದೆ. ಈ ಬಗ್ಗೆ ಪ್ರಹ್ಲಾದ್ ಜೋಶಿ ಕೂಡಾ ಟ್ವೀಟ್ ಮಾಡಿದ್ದು ಮಾಹಿತಿ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]