Tag: ಧಾರವಾಡ

  • ಕುಕ್ಕರ್ ಪಾಲಿಟಿಕ್ಸ್ ಶುರು- ಕಲಘಟಗಿ ಕ್ಷೇತ್ರದಲ್ಲಿ ಕೈ ನಾಯಕನಿಂದ ಗಿಫ್ಟ್ ಹಂಚಿಕೆ

    ಕುಕ್ಕರ್ ಪಾಲಿಟಿಕ್ಸ್ ಶುರು- ಕಲಘಟಗಿ ಕ್ಷೇತ್ರದಲ್ಲಿ ಕೈ ನಾಯಕನಿಂದ ಗಿಫ್ಟ್ ಹಂಚಿಕೆ

    ಧಾರವಾಡ: ಚುನಾವಣೆ (Election) ಗೂ ಮುನ್ನವೇ ಧಾರವಾಡ ಜಿಲ್ಲೆಯಲ್ಲಿ ಕುಕ್ಕರ್ ರಾಜಕೀಯ (Cooker Politics) ಬಲುಜೋರಾಗಿ ನಡೆಯುತ್ತಿದೆ.

    ಚುನಾವಣೆ ಇನ್ನೂ ಆರು ತಿಂಗಳು ಇರುವ ಮುನ್ನವೇ ಕಲಘಟಗಿ ವಿಧಾನ ಸಭಾ ಕ್ಷೇತ್ರ (Kalagatagi Vidhanasabha Constituency) ದ ಜನರಿಗೆ ಬಂಪರ್ ಗಿಫ್ಟ್ ಆಮಿಷ ಒಡ್ಡಲಾಗಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾಗರಾಜ್ ಛಬ್ಬಿಯವರು ಟಿಕೆಟ್ ಫಿಕ್ಸ್ ಆಗದೆಯೇ ಚುನಾವಣೆ ರಣಕಳಹೆ ಮೊಳಗಿಸಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಅಧಿಕಾರಕ್ಕೆ ಬಂದರೆ ಪ್ರಮುಖ ಸಮಾಜಕ್ಕೊಬ್ಬ ಡಿಸಿಎಂ: ಶಾಸಕ ವೆಂಕಟರಾವ್ ನಾಡಗೌಡ

    ಎಐಸಿಸಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಡಿಕೆ ಶಿವಕುಮಾರ್ (DK Shivakumar) ಪರಮ ಆಪ್ತವಾಗಿರುವ ನಾಗರಾಜ್ ಛಬ್ಬಿ ಅವರು ಕಲಘಟಗಿ ಟಿಕೆಟ್ ಗಾಗಿ ಮಾಜಿ ಶಾಸಕ ಸಂತೋಷ್ ಲಾಡ್ (Santhosh Lad0 ಗೆ ಪ್ರಬಲ ಪೈಪೋಟಿ ನೀಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗರಾಜ್ ಛಬ್ಬಿ ಮತ್ತು ಕುಟುಂಬಸ್ಥರು ಕಲಘಟಗಿ ಕ್ಷೇತ್ರದ ಎಲ್ಲಾ ಮನೆಗಳಿಗೆ 80 ಸಾವಿರ ಕುಕ್ಕರ್ ಹಂಚಿಕೆ ಮಾಡಲು ಮುಂದಾಗಿರುವುದು ಬೆಳಕಿಗೆ ಬಂದಿದೆ.

    ಕಲಘಟಗಿ ತಾಲೂಕಿನ ಹಿರೇ ಹೊನ್ನಳ್ಳಿ ಗ್ರಾಮದಿಂದ ಕುಕ್ಕರ್ ಹಂಚಿಕೆ ಕಾರ್ಯ ಈಗಾಗಲೇ ಆರಂಭ ಮಾಡಿದ್ದಾರೆ. ಈ ಮೂಲಕ ಚುನಾವಣೆ ಘೋಷಣೆಗೂ ಮುನ್ನವೇ ಕುಕ್ಕರ್ ರಾಜಕೀಯ ತೀವ್ರ ಕುತೂಹಲ ಕೆರಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • 150 ವರ್ಷಗಳ ಬಳಿಕ ಧಾರವಾಡಕ್ಕೆ ಭೇಟಿ ನೀಡಿದ ಕನ್ನಡ ನಿಘಂಟು ತಜ್ಞ ಕಿಟೆಲ್ ಕುಟುಂಬ

    150 ವರ್ಷಗಳ ಬಳಿಕ ಧಾರವಾಡಕ್ಕೆ ಭೇಟಿ ನೀಡಿದ ಕನ್ನಡ ನಿಘಂಟು ತಜ್ಞ ಕಿಟೆಲ್ ಕುಟುಂಬ

    ಧಾರವಾಡ: ಕನ್ನಡ ನಿಘಂಟು (Kannada Dictionary) ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದ ರೆವರೆಂಡ್ ಫರ್ಡಿನೆಂಡ್ ಕಿಟೆಲ್ (Ferdinand Kittel) ಅವರ ಕುಟುಂಬ 150 ವರ್ಷಗಳ ಬಳಿಕ ಕರ್ನಾಟಕಕ್ಕೆ ಭೇಟಿ ನೀಡಿದೆ. ಅದರಲ್ಲೂ ವಿದ್ಯಾಕಾಶಿ ಧಾರವಾಡಕ್ಕೆ (Dharwad) ಕಿಟೆಲ್ ಕುಟುಂಬಸ್ಥರು ಭೇಟಿ ನೀಡಿದ್ದಾರೆ.

    ಸುದೀರ್ಘ ಅವಧಿಯ ಬಳಿಕ ಜರ್ಮನಿಯಿಂದ ಕರ್ನಾಟಕಕ್ಕೆ ಕಿಟೆಲ್‌ರ ಕುಟುಂಬ ಭೇಟಿ ನೀಡಿದ್ದು ವಿಶೇಷವಾಗಿತ್ತು. ಕಿಟೆಲ್ ಅವರ ಮರಿಮೊಮ್ಮಗಳಾದ ಅಲ್ಮುತ್ ಬರ್ಬೋರ್ ಎಲಿನೋರ್ ಮಯರ್, ಗಿರಿಮೊಮ್ಮಗ ಈವ್ಸ್ ಪ್ಯಾಟ್ರಿಕ್ ಹಾಗೂ ಅವರ ಸ್ನೇಹಿತ ಜಾನ್ ಫೆಡ್ರಿಕ್ ಧಾರವಾಡಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಕರೆಂಟ್‌ ತಗುಲಿ ಕಾಮಗಾರಿ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಬಲಿ – ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ

    ಧಾರವಾಡದಲ್ಲಿರುವ ಕಿಟೆಲ್ ಹೆಸರಿನ ಕಾಲೇಜು ಹಾಗೂ ಕಿಟೆಲ್‌ರು ನೆಲೆಸಿದ್ದ ಜಾಗಗಳನ್ನು ಅವರು ವೀಕ್ಷಣೆ ಮಾಡಿದರು. ಕಿಟೆಲ್‌ರ 200ನೇ ಜನ್ಮ ದಿನಾಚರಣೆಯನ್ನು ಧಾರವಾಡದಲ್ಲೇ ಆಯೋಜಿಸಲು ಕುಟುಂಬ ನಿರ್ಧರಿಸಿದೆ. ಅಲ್ಲದೇ ಕಿಟೆಲ್‌ರು ಬಳಸಿದ ಕೆಲವೊಂದಿಷ್ಟು ವಸ್ತುಗಳನ್ನು ಮ್ಯೂಸಿಯಂಗೆ ಕೊಡಲು ಈ ಕುಟುಂಬ ನಿರ್ಧರಿಸಿದೆ. ಇದನ್ನೂ ಓದಿ: ಅಪ್ರಾಪ್ತ ಬಾಲಕಿ ರೇಪ್‌ಕೇಸ್ – ಪ್ರಕರಣ ಭೇದಿಸಿದ ತನಿಖಾ ತಂಡಕ್ಕೆ 1 ಲಕ್ಷ ಬಹುಮಾನ

    Live Tv
    [brid partner=56869869 player=32851 video=960834 autoplay=true]

  • ಬಾರೋ ಅಂದಿದ್ದಕ್ಕೆ ಪತ್ನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪತಿ – 17 ಜೋಡಿಗಳನ್ನು ಒಂದುಗೂಡಿಸಿದ ಕೋರ್ಟ್

    ಬಾರೋ ಅಂದಿದ್ದಕ್ಕೆ ಪತ್ನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪತಿ – 17 ಜೋಡಿಗಳನ್ನು ಒಂದುಗೂಡಿಸಿದ ಕೋರ್ಟ್

    ಧಾರವಾಡ: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಇದೆ. ಆದರೆ ಧಾರವಾಡದ ನ್ಯಾಯಾಲಯದಲ್ಲಿ ಇಂದು ವಿಚ್ಛೇದನಕ್ಕೆ ಬಂದಿದ್ದ ಕೇಸ್ ನೋಡಿದರೆನೇ ವಿಚಿತ್ರ ಎನಿಸುತ್ತದೆ. ಏಕೆಂದರೆ ಪತ್ನಿ ತನ್ನ ಪತಿಗೆ ಬಾರೋ ಎಂದಿದ್ದಕ್ಕೆ ಪತಿರಾಯ ನ್ಯಾಯಾಲಯದ ಮೇಟ್ಟಿಲು ಏರಿದರೆ, ಮತ್ತೊಂದು ಪ್ರಕರಣದಲ್ಲಿ ಪತ್ನಿ ಪತಿಯ ಪೆನ್ ಡ್ರೈವ್ ತೆಗೆದುಕೊಂಡಿದ್ದಕ್ಕೆ ವಿಚ್ಛೇದನಕ್ಕೆ ಅರ್ಜಿ ಬಂದಿತ್ತು. ಇದೀಗ ಈ ಪ್ರಕರಣಗಳನ್ನು ನ್ಯಾಯಾಲಯ ಲೋಕ್ ಅದಾಲತ್‍ನಲ್ಲಿ (Lok Adalat) ತೆಗೆದುಕೊಂಡು ಇತ್ಯರ್ಥ ಮಾಡಿದೆ.

    ಧಾರವಾಡ (Dharwad) ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‍ನಲ್ಲಿ ಇಂದು ವಿಚ್ಛೇದನಕ್ಕೆ ಬಂದಿದ್ದ ಪ್ರಕರಣಗಳನ್ನು ತೆಗೆದುಕೊಂಡಿದ್ದರು. ಈ ವೇಳೆ ಕೆಲ ಗಂಡ ಹೆಂಡತಿಯರು ವಿಚ್ಛೇದನ ಬೇಡ ಎಂದು ಒಪ್ಪಿಕೊಂಡರೆ, ಕೆಲವರು ನ್ಯಾಯಾಲಯದ ಮುಂದೆ ತಮ್ಮ ಒಪ್ಪಿಗೆ ಸೂಚಿಸಲೇ ಇಲ್ಲ. ಅದರಲ್ಲೂ ಒಂದು ಜೋಡಿಯಂತೂ ಪೆನ್ ಡ್ರೈವ್ ವಿಚಾರಕ್ಕೆ ವಿಚ್ಛೇದನ ಹಾಕಿಕೊಂಡಿದ್ದರು. ಪತ್ನಿ ತನ್ನ ಪತಿಯ ಪೆನ್ ಡ್ರೈವ್ ತೆಗೆದುಕೊಂಡಿದ್ದಾಳಂತೆ. ಅದಕ್ಕೆ ಪತಿ ಅದನ್ನು ಕೊಟ್ಟರೆ ಮಾತ್ರ ನಾನು ರಾಜಿಯಾಗುತ್ತೇನೆ ಅಂತ ನಿಂತಿದ್ದ. ಇದನ್ನೂ ಓದಿ: ಮೃತ ತಂದೆಯನ್ನು ಬದುಕಿಸಲು ಮಗುವನ್ನು ಅಪಹರಿಸಿ ನರ ಬಲಿ ಕೊಡಲು ಸಿದ್ಧವಾದ್ಲು

    ಮತ್ತೊಂದು ಜೋಡಿ ಪ್ರಕರಣದಲ್ಲಿ ಪತ್ನಿ ತನ್ನ ಪತಿಗೆ ಬಾರೋ ಎಂದು ಕರೆದ್ದಾಳಂತೆ. ಅದಕ್ಕೆ ಇಬ್ಬರೂ ವಿಚ್ಛೇದನಕ್ಕೆ ಬಂದಿದ್ದರು. ನ್ಯಾಯಾಧೀಶರು ಇವತ್ತು ಇಂತಹ 37 ಕೇಸ್‍ಗಳನ್ನು ಲೋಕ ಅದಾಲತ್‍ನಲ್ಲಿ ತೆಗೆದುಕೊಂಡು 17 ಕೇಸ್ ಇತ್ಯರ್ಥ ಮಾಡಿದೆ. ಇನ್ನು ಕೆಲ ಪತಿ ಹಾಗೂ ಪತ್ನಿ ನ್ಯಾಯಾಲಯದ ಮಾತು ಕೇಳದೇ ಇರುವುದರಿಂದ ಅವರಿಗೆ ಮತ್ತೆ ಮುಂದಿನ ದಿನಾಂಕಕ್ಕೆ ಹಾಜರಾಗಲು ಹೇಳಲಾಗಿದೆ. ಮತ್ತೆ ಕೆಲವರಿಗೆ ಸ್ವಲ್ಪ ದಿನ ಒಂದೇ ಕಡೆ ಇರುವಂತೆ ಸೂಚನೆ ಕೊಟ್ಟು ಕಳುಹಿಸಲಾಗಿದೆ. ಇದನ್ನೂ ಓದಿ: ಬೆಳಗಾವಿ ಲಾಕಪ್‌ಡೆತ್ ಕೇಸ್: ಪೊಲೀಸರಿಂದ್ಲೇ ಚಿತ್ರಹಿಂಸೆ – ಮೃತನ ಪುತ್ರಿ ಆರೋಪ

    ಇಬ್ಬರು ಸ್ವಲ್ಪ ದಿನಗಳಲ್ಲಿ ಒಂದಾಗಿ ಬಾಳಿದರೆ ಮುಂದೆ ನ್ಯಾಯಾಲಯ ಇವರ ಮದ್ಯದಲ್ಲಿ ಪ್ರವೇಶ ಮಾಡಲ್ಲ. ಹೊಂದಾಣಿಕೆ ಆಗದೇ ಇದ್ದರೆ ಮಾತ್ರ ನ್ಯಾಯಾಲಯ ಮತ್ತೊಂದು ಚಾನ್ಸ್ ಕೊಡಲಿದೆ. ಸದ್ಯ ಒಂದಾದ ಗಂಡ ಹೆಂಡತಿ ಕೂಡ ನ್ಯಾಯಾಲಯದ ಈ ಅದಾಲತ್‍ದಿಂದ ಒಂದಾಗಿ ಸಂತಸ ವ್ಯಕ್ತಪಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿ ಆಡಳಿತ ಪಕ್ಷವೂ ಇಲ್ಲ, ವಿರೋಧ ಪಕ್ಷವೂ ಇಲ್ಲ: ಸಿಎಂ ಇಬ್ರಾಹಿಂ

    ರಾಜ್ಯದಲ್ಲಿ ಆಡಳಿತ ಪಕ್ಷವೂ ಇಲ್ಲ, ವಿರೋಧ ಪಕ್ಷವೂ ಇಲ್ಲ: ಸಿಎಂ ಇಬ್ರಾಹಿಂ

    ಧಾರವಾಡ: ರಾಜ್ಯದಲ್ಲಿ ಆಡಳಿತ ಪಕ್ಷವೂ (Ruling Party) ಇಲ್ಲ, ವಿರೋಧ ಪಕ್ಷವೂ (Opposition Party) ಇಲ್ಲ. ಎರಡೂ ಪಕ್ಷಗಳು ಭ್ರಮನಿರಸವಾಗಿವೆ. ಆಡಳಿತ ಪಕ್ಷಕ್ಕೆ ಸರ್ಕಾರ ಹೇಗೆ ನಡೆಸಬೇಕು ಎಂಬುದು ಗೊತ್ತಿಲ್ಲ. ಕಾಂಗ್ರೆಸ್‌ಗೆ (Congress) ವಿರೋಧ ಪಕ್ಷದಲ್ಲಿ ಹೇಗಿರಬೇಕೆಂಬುದೇ ಗೊತ್ತಿಲ್ಲ. ಕೆಲವರು ಜೈಲಿನಲ್ಲಿದ್ದರೆ, ಇನ್ನೂ ಕೆಲವರು ಬೇಲ್ ಮೇಲೆ ಇದ್ದಾರೆ. 9 ತಿಂಗಳು ಜೈಲಿನಲ್ಲಿದ್ದು ಬಂದವರು ಜಿಲ್ಲೆಯ ಹೊರಗಡೆ ಅದ್ದೂರಿ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ವಿರುದ್ಧ ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ವಾಗ್ದಾಳಿ ನಡೆಸಿದರು.

    ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಆಡಳಿತಾರೂಢ ಹಾಗೂ ವಿರೋಧ ಪಕ್ಷದವರು ಇಬ್ಬರೂ ಭರತನಾಟ್ಯ ಮಾಡುತ್ತಾ ಕುಳಿತವರು. ರಾಹುಲ್ ಗಾಂಧಿ ಭಾರತ್ ಜೋಡೋ ಮಾಡುತ್ತಿದ್ದಾರೆ. ಅದ್ಯಾವ ಕಾರಣಕ್ಕೆ ಅವರು ಅದನ್ನು ಮಾಡುತ್ತಿದ್ದಾರೋ ಅವರಿಗೇ ಗೊತ್ತಿಲ್ಲ. ರಾಹುಲ್ ಗಾಂಧಿ ಮೊದಲು ಡಿಕೆಶಿ, ಸಿದ್ದರಾಮಯ್ಯ ಜೋಡೋ ಮಾಡಬೇಕು. ಕಾಂಗ್ರೆಸ್ ಕೈಕಾಲು ಬಿದ್ದು ಕುಮಾರಸ್ವಾಮಿ ಅವರನ್ನು ಸಿಎಂ ಆಗಿ ಮಾಡಿದ್ರು. ಆದರೆ 14 ತಿಂಗಳು ಸರ್ಕಾರ ನಡೆಯಲು ಬಿಡಲಿಲ್ಲ. ಈ ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಮೇಲಿನವರಿಗೆ ಕಪ್ಪ ಕೊಡಬೇಕು. ಸಿದ್ದರಾಮಯ್ಯನವರು ಹೇಳಲಿ ನೋಡೋಣ, ಅವರ ಸರ್ಕಾರದಲ್ಲಿ ಯರ‍್ಯಾರು ದುಡ್ಡು ಮಾಡಿದ್ದಾರೆ ಅನ್ನೋದನ್ನು ನಾನೇ ಹೇಳ್ತೀನಿ ಎಂದರು.

    ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಹಾಕಿಕೊಳ್ಳಲು ಚಪ್ಪಲಿ ಇರಲಿಲ್ಲ. ಈಗ ಜೋಶಿ ನೂರಾರು ಕೋಟಿಯ ಒಡೆಯ. ಶೆಟ್ಟರ್ ಸಿಕ್ಕಾಪಟ್ಟೆ ಆಸ್ತಿ ಮಾಡಿದ್ದಾರೆ. ಎಸ್.ಆರ್ ಬೊಮ್ಮಾಯಿ ನನ್ನ ಜೊತೆ ಕಾರ್ಯದರ್ಶಿ ಇದ್ದವರು. ಇಂದಿರಾ ಗಾಂಧಿಗಿಂತ ಮೋದಿಗೆ ಹೆಚ್ಚು ಅವಕಾಶ ಸಿಕ್ಕಿದೆ. ಆದರೆ ಅವರು ಬೆಳೆಸಿದ್ದು ಅದಾನಿ ಹಾಗೂ ಅಂಬಾನಿಯನ್ನು. ಬಿಜೆಪಿಯವರು ಎಲ್ಲವನ್ನೂ ಮಾರುತ್ತಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣವನ್ನೂ ಮಾರುತ್ತಾರೆ. ಆದರೆ ಅವರಿಗೆ ಗಿರಾಕಿ ಸಿಕ್ಕಿಲ್ಲ ಎಂದು ಟಾಂಗ್ ನೀಡಿದರು.

    ಬಿಜೆಪಿಯ (BJP) ಕೆಲವರು ವೀಡಿಯೋದಲ್ಲಿ ಸೆರೆಯಾಗಿದ್ದಾರೆ. ಸದಾನಂದಗೌಡರು ಕೂಡ ವೀಡಿಯೋದಲ್ಲಿ ಸೆರೆ ಸಿಕ್ಕಿದ್ದರು. ಅದನ್ನು ಪ್ರಸಾರ ಮಾಡದಂತೆ ಹೈಕೋರ್ಟ್ ತಡೆಯಾಜ್ಞೆ ತಂದರು. ಆ ವೀಡಿಯೋದಲ್ಲೇನಿದೆ ಎಂದು ನಾನು ಸದಾನಂದ ಗೌಡರನ್ನು ಕೇಳಿದೆ. ಆದರೆ ಅವರು ನಕ್ಕು ಸುಮ್ಮನಾದರು ಎಂದು ಇಬ್ರಾಹಿಂ ಸದಾನಂದಗೌಡರಂತೆ ನಕ್ಕು ಹಾಸ್ಯ ಮಾಡಿದರು. ಗೋಪಾಲಯ್ಯ ನಾನು ಏನೂ ಮಾಡಿಲ್ಲ ಎನ್ನುತ್ತಾನೆ. ಆ ಭಾರ ಇಟ್ಟುಕೊಂಡು ಅವರು ಏನು ಮಾಡಲು ಸಾಧ್ಯ? ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ದೇಶದಲ್ಲಿ ಬಿಕ್ಕಟ್ಟು ಉಂಟಾದಾಗ ಅಣ್ಣ-ತಂಗಿ ವಿದೇಶಕ್ಕೆ ಓಡಿ ಹೋಗ್ತಾರೆ: ರಾಹುಲ್, ಪ್ರಿಯಾಂಕಾಗೆ ಯೋಗಿ ಟಾಂಗ್

    ಈ ಬಾರಿ ನಾವು 123 ಮಿಷನ್ ಹೊಂದಿದ್ದೇವೆ. ನಮಗೆ ಪೂರ್ಣ ಬಹುಮತ ಸಿಗದಿದ್ದರೆ ನಾವು ಇನ್ನೊಬ್ಬರ ಜೊತೆ ಸೇರಿ ಸರ್ಕಾರ ಮಾಡುವುದಿಲ್ಲ. ಯಡಿಯೂರಪ್ಪ ಸಿಎಂ ಆದಾಗ ಲಿಂಗಾಯತರು ಉದ್ಧಾರ ಆಗಿದ್ದಾರಾ? ನನ್ನ ಜೊತೆ ರಾಜಕಾರಣ ಮಾಡಿದ ಶೆಟ್ರು ಸತ್ತು ಹೋದರು. ಈಗ ಇರುವ ಜಗದೀಶ್ ಶೆಟ್ಟರ್ ನಕಲಿ ಎಂದರು. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಇನ್ನೆಂದೂ ಬರುವುದಿಲ್ಲ. ವರುಣಾದಲ್ಲಿ ಮಾತ್ರ ಪ್ರಯಾಸದ ಗೆಲುವು ಸಾಧಿಸಬಹುದು. ಟಿಪ್ಪು ಜಯಂತಿಗೆ ಹುಬ್ಬಳ್ಳಿಯ ಈದ್ಗಾ ಮೈದಾನ ಕೇಳುವುದು ತಪ್ಪು. ನಮ್ಮಲ್ಲಿ ಹಾರ ಹಾಕುವ ಪದ್ಧತಿ ಇಲ್ಲ. ಹಿಂದಿ ಹೇರಿಕೆಯನ್ನು ನಾನು ವಿರೋಧ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಹಿಂದೂ ಪದದ ಅರ್ಥವೇ ಅಶ್ಲೀಲ – ಜಾರಕಿಹೊಳಿ ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್‌

    Live Tv
    [brid partner=56869869 player=32851 video=960834 autoplay=true]

  • ಅಯ್ಯಪ್ಪ ಸ್ವಾಮಿ ಭಕ್ತರಿಗೆ ಗುಡ್‌ನ್ಯೂಸ್‌ – ವಿಜಯಪುರದಿಂದ ಕೊಟ್ಟಾಯಂಗೆ ಹೊಸ ರೈಲು

    ಅಯ್ಯಪ್ಪ ಸ್ವಾಮಿ ಭಕ್ತರಿಗೆ ಗುಡ್‌ನ್ಯೂಸ್‌ – ವಿಜಯಪುರದಿಂದ ಕೊಟ್ಟಾಯಂಗೆ ಹೊಸ ರೈಲು

    ಹುಬ್ಬಳ್ಳಿ: ಹುಬ್ಬಳ್ಳಿ (Hubballi), ಧಾರವಾಡ (Dharwad) ಹಾಗೂ ಉತ್ತರ ಕರ್ನಾಟಕ ಭಾಗದ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅನುಕೂಲ ಕಲ್ಲಿಸಲು ಹೊಸ ರೈಲು (Train) ಸೇವೆ ಸೋಮವಾರದಿಂದ (ನವೆಂಬರ್‌ 7) ಆರಂಭವಾಗಲಿದೆ. ಹುಬ್ಬಳ್ಳಿಯಿಂದ ಶಬರಿಮಲೆಗೆ (Sabarimala Temple) ಪ್ರಯಾಣಿಸಲು ರೈಲು ವ್ಯವಸ್ಥೆ ಕಲ್ಪಿಸುವಂತೆ ಅಯ್ಯಪ್ಪ ಸ್ವಾಮಿ ಭಕ್ತರ ಮನವಿಗೆ ಸ್ಪಂದಿಸಿದ್ದು, ಈ ಸೇವೆ ಆರಂಭಿಸಿರುವುದಾಗಿ ಪ್ರಹ್ಲಾದ್‌ ಜೋಶಿ (Pralhad Joshi) ಅವರು ತಿಳಿಸಿದ್ದಾರೆ.

    ಅಯ್ಯಪ್ಪ ಸ್ವಾಮಿ ಭಕ್ತರ (Ayyappa Swamy Devotees) ಕೋರಿಕೆಗೆ ಸ್ಪಂದಿಸಿದ ಪ್ರಹ್ಲಾದ್‌ ಜೋಶಿ (Pralhad Joshi), ಕೇಂದ್ರ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ (Ashwini Vaishnaw) ಅವರ ಗಮನಕ್ಕೆ ಈ ವಿಷಯ ತಂದು, ಸೂಕ್ತ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದ್ದರು. ಪ್ರತಿ ವರ್ಷ ಲಕ್ಷಾಂತರ ಭಕ್ತರು ಉತ್ತರ ಕರ್ನಾಟಕದ ಭಾಗದಿಂದ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ತೆರಳುತ್ತಾರೆ. ಇದರಿಂದ ಹುಬ್ಬಳ್ಳಿ-ಧಾರವಾಡ ಅಷ್ಟೇ ಅಲ್ಲದೇ, ಉತ್ತರ ಕರ್ನಾಟಕ ಭಾಗದ ಎಲ್ಲ ಭಕ್ತರಿಗೂ ರೈಲಿನ ಅನುಕೂಲವಾಗಲಿದೆ. ಇದೆಲ್ಲವನ್ನು ಯೋಚಿಸಿ ವಿಜಯಪುರದಿಂದ ಹುಬ್ಬಳ್ಳಿ ಮಾರ್ಗವಾಗಿ ಶಬರಿಮಲೆ ಹೊಸ ರೈಲು (Train) ಸಂಪರ್ಕ ಕಲ್ಪಿಸುವಂತೆ ಜೋಶಿ ರೈಲ್ವೆ ಸಚಿವರಿಗೆ ಕೋರಿದ್ದರು. ಅದರಂತೆ ವಿಜಯಪುರದಿಂದ ಹುಬ್ಬಳ್ಳಿ ಮಾರ್ಗವಾಗಿ ಕೊಟ್ಟಾಯಂ ವರೆಗೆ ರೈಲು ಸೇವೆ ಆರಂಭಿಸುವಂತೆ ಅಶ್ವಿನಿ ವೈಷ್ಣವ್‌ ಆದೇಶಿಸಿದ್ದಾರೆ. ಇದನ್ನೂ ಓದಿ: ಟೆಕೆಟ್ ದರ ಇಳಿಕೆ – `ಗಂಧದಗುಡಿ’ ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಬಂಪರ್ ಆಫರ್

    ಸಾಂದರ್ಭಿಕ ಚಿತ್ರ

    07385 ಸಂಖ್ಯೆಯ ಸಾಪ್ತಾಹಿಕ ರೈಲು ಸೋಮವಾರ ರಾತ್ರಿ 11 ಗಂಟೆಗೆ ವಿಜಯಪುರದಿಂದ (Vijayapura) ಹೊರಡಲಿದ್ದು, ಬುಧವಾರ ಬೆಳಗಿನ ಜಾವ 2 ಗಂಟೆಗೆ ಕೊಟ್ಟಾಯಂ ತಲುಪಲಿದೆ. ವಿಜಯಪುರ, ಬಸವನ ಬಾಗೇವಾಡಿ, ಬಾಗಲಕೋಟೆ, ಬಾದಾಮಿ, ಹೊಳೆ ಆಲೂರು, ಆಲಮಟ್ಟಿ, ಗದಗ, ಹುಬ್ಬಳ್ಳಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಬಿರೂರು, ಅರಸಿಕೇರೆ, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಇರೋಡ್, ತಿರುಪ್ಪೂರು, ಕೊಯಂಬತ್ತೂರು, ಪಾಲಕ್ಕಾಡ್, ತ್ರಿಶೂರ್‌ ಹಾಗೂ ಎರ್ನಾಕುಲಂ ಮಾರ್ಗವಾಗಿ ರೈಲು ಕೊಟ್ಟಾಯಂ ತಲುಪಲಿದೆ.

    Live Tv
    [brid partner=56869869 player=32851 video=960834 autoplay=true]

  • ನಮ್ಮ ಮೀಸಲಾತಿಗೆ ಕೈ ಹಾಕಬೇಡಿ, ನಾವೂ ಬೀದಿಗಿಳಿಯಬೇಕಾಗುತ್ತೆ: ಇಸ್ಮಾಯಿಲ್ ಎಚ್ಚರಿಕೆ

    ನಮ್ಮ ಮೀಸಲಾತಿಗೆ ಕೈ ಹಾಕಬೇಡಿ, ನಾವೂ ಬೀದಿಗಿಳಿಯಬೇಕಾಗುತ್ತೆ: ಇಸ್ಮಾಯಿಲ್ ಎಚ್ಚರಿಕೆ

    ಧಾರವಾಡ: ಮುಸ್ಲಿಂ (Muslim) ಸಮುದಾಯಕ್ಕೆ ಕೊಟ್ಟಿರುವ ಶೇ.4 ಮೀಸಲಾತಿಯನ್ನು (2A Reservation) ವಾಪಸ್ ಪಡೆದುಕೊಳ್ಳಿ ಎನ್ನುವುದು ಯಾವ ನ್ಯಾಯ? ಮುಸ್ಲಿಂ ಸಮುದಾಯದ ಮೀಸಲಾತಿಗೆ ಕೈ ಹಾಕಬೇಡಿ. ಒಂದು ವೇಳೆ ಹಾಗೆ ಮಾಡಿದ್ದೇ ಆದಲ್ಲಿ ನಾವೂ ಬೀದಿಗಿಳಿಯಬೇಕಾಗುತ್ತದೆ ಎಂದು ಧಾರವಾಡ ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ (Ismail Tamatgar) ಎಚ್ಚರಿಕೆ ನೀಡಿದ್ದಾರೆ.

    ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಪಂಚಮಸಾಲಿ (Panchmasali) ಸಮುದಾಯಕ್ಕೆ 2ಎ ಮೀಸಲಾತಿ ನೀಡಿ ಎಂದು ಹೋರಾಟ ನಡೆಯುತ್ತಿದೆ. ಈ ಹೋರಾಟಕ್ಕೆ ನಮ್ಮ ಬೆಂಬಲವೂ ಇದೆ. ಆದರೆ, ಶಾಸಕರಾದ ಅರವಿಂದ ಬೆಲ್ಲದ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಸ್ಲಿಂ ಸಮುದಾಯಕ್ಕೆ ನೀಡಿರುವ ಶೇ.4 ಮೀಸಲಾತಿಯನ್ನು ಕಡಿತಗೊಳಿಸಿ ನಮಗೆ ನೀಡಿ ಎನ್ನುತ್ತಿದ್ದಾರೆ. ಇದು ಸರಿಯಲ್ಲ. ಈ ರೀತಿ ಹೇಳಿಕೆ ನೀಡಿದರೆ ನಾವೂ ಸಹ ಶೇ.8 ಮೀಸಲಾತಿ ಕೊಡಿ ಎಂದು ಬೀದಿಗಿಳಿಯಬೇಕಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ಬಾಲಕನಿಗೆ ಕರಾಟೆ ಪಂಚ್ ಹೇಳ್ಕೊಟ್ಟ ರಾಹುಲ್

    ಮುಸ್ಲಿಂ ಸಮುದಾಯಕ್ಕೆ ಕೊಟ್ಟಿರುವ ಶೇ.4 ಮೀಸಲಾತಿಯನ್ನು ವಾಪಸ್ ಪಡೆದುಕೊಳ್ಳಿ ಎನ್ನುವುದು ಯಾವ ನ್ಯಾಯ? ಪಂಚಮಸಾಲಿಗೆ 2ಎ ಮೀಸಲಾತಿ ಕೊಟ್ಟಿದ್ದೇ ಆದಲ್ಲಿ ಒಬಿಸಿಗೆ ಕೊಟ್ಟಿರುವ ಮೀಸಲಾತಿ ಕೂಡಾ ಹೋಗುತ್ತದೆ ಎಂದರು.

    ಯತ್ನಾಳ್ ಹಾಗೂ ಬೆಲ್ಲದ ಅವರ ಜೊತೆ ವೇದಿಕೆ ಹಂಚಿಕೊಂಡ ಕಾಂಗ್ರೆಸ್ ಮುಖಂಡರು ಕೂಡಾ ಮುಸ್ಲಿಂ ಮೀಸಲಾತಿ ಬಗೆಗಿನ ತಮ್ಮ ನಿಲುವನ್ನು ಮೊದಲು ಸ್ಪಷ್ಟಪಡಿಸಬೇಕು. ಮುಸ್ಲಿಂ ಸಮಾಜ ಸುಮ್ಮನೆ ಇರುವುದಕ್ಕೆ ನಮ್ಮ ಮೀಸಲಾತಿಯನ್ನು ತೆಗೆಯಿರಿ ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ಇವರ ಹೇಳಿಕೆಗಳು ಇದೇ ರೀತಿ ಮುಂದುವರೆದಿದ್ದೇ ಆದಲ್ಲಿ ನಾವೂ ಬೀದಿಗಿಳಿಯಬೇಕಾಗುತ್ತದೆ. ನಾವು ತೊಂದರೆಯಲ್ಲಿದ್ದೇವೆ. ನಮ್ಮ ತಂಟೆಗೆ ಕೈ ಹಾಕುವ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಕಾಶಿ ಯಾತ್ರೆಗೆ ಬಿಬಿಎಂಪಿ ನೌಕರರು ಸಜ್ಜು

    Live Tv
    [brid partner=56869869 player=32851 video=960834 autoplay=true]

  • ವಕೀಲೆ ಜೊತೆ ಅಸಭ್ಯ ವರ್ತನೆ ಮಾಡಿದ್ದ ಸಿಪಿಐ ಮೇಲೆ ಪ್ರಕರಣ ದಾಖಲು

    ವಕೀಲೆ ಜೊತೆ ಅಸಭ್ಯ ವರ್ತನೆ ಮಾಡಿದ್ದ ಸಿಪಿಐ ಮೇಲೆ ಪ್ರಕರಣ ದಾಖಲು

    ಧಾರವಾಡ: ವಕೀಲೆಯೊಬ್ಬರು (Lawyer) ಠಾಣೆಗೆ ಬಂದಾಗ ಅವರ ಜೊತೆಗೆ ಸಿಪಿಐ (CPI) ಒಬ್ಬರು ಅನುಚಿತ ವರ್ತನೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಧಾರವಾಡದಲ್ಲಿ (Dharwad) ಸಿಪಿಐ ಮೇಲೆ ಪ್ರಕರಣ ದಾಖಲಾಗಿದೆ.‌

    ಧಾರವಾಡ ಗ್ರಾಮೀಣ ಸಿಪಿಐ ಮಂಜುನಾಥ ಕುಸಗಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಹಿಳಾ ವಕೀಲೆ‌ ಒಂದು ಪ್ರಕರಣಕ್ಕೆ ಸಂಬಂಧಿಸಿ ಧಾರವಾಡ ಗ್ರಾಮೀಣ ಠಾಣೆಗೆ ಹೋಗಿದ್ದರು. ಆದರೆ ಈ ವೇಳೆ ವಕೀಲೆಗೆ ಕಣ್ಣು ಹೊಡೆದು, ತನ್ನ ತುಟಿಗೆ ತನ್ನದೇ ಕೈಗೆ ಮುತ್ತು ಕೊಟ್ಟು ವಕೀಲೆಗೆ ಅದನ್ನು ಫ್ಲೈಯಿಂಗ್ ಕಿಸ್ ಮಾಡಿದ್ದರು.‌ ಈ ವೇಳೆ ವಕೀಲೆ ಈ‌ ಬಗ್ಗೆ ಪ್ರಶ್ನೆ ಮಾಡಿದ್ದರೂ ಅದಕ್ಕೆ ಇದು ಮಾಡಿದ್ದು ಏನು ತಪ್ಪು ಎಂದು ಸಿಪಿಐ ಕುಸುಗಲ್ ಪ್ರಶ್ನೆ ಮಾಡಿ ಅನುಚಿತವಾಗಿ ವರ್ತಿಸಿದ್ದ. ಇದನ್ನೂ ಓದಿ: ಭವಾನಿ ಅಕ್ಕ, ಪ್ರಜ್ವಲ್ ರೇವಣ್ಣ ನಶೆಯಲ್ಲಿರ್ತಾರೆ; ಥರ್ಟಿ, ಸಿಕ್ಸ್ಟಿ ಅಲ್ಲ 2 ಬಾಟ್ಲಿ ಕುಡಿತಾರೆ – ಪ್ರೀತಂ ಗೌಡ

    ಈ ಸಂಬಂಧ ವಕೀಲೆ ದೂರು ಕೊಡಲು ಠಾಣೆಗೆ ಹೋದಾಗ ದೂರು ಪಡೆಯುವುದಕ್ಕೂ ಪೊಲೀಸರು ಹಿಂದೇಟು ಹಾಕಿದ್ದರು. ಪೊಲೀಸರ ವರ್ತನೆ ಖಂಡಿಸಿ ಪ್ರತಿಭಟಿಸಿದ್ದ ಧಾರವಾಡ ವಕೀಲರು, ಎಸ್ಪಿ ಲೋಕೇಶ್ ಜಗಲಾಸರ್ ಅವರಿಗೆ ಮನವಿ ಕೊಟ್ಟು ಕ್ರಮ‌ ಕೈಗೊಳ್ಳಲು ಹೇಳಿದ್ದರು. ಇಲ್ಲದೇ ಹೋದಲ್ಲಿ ಉಗ್ರ ಪ್ರತಿಭಟನೆ ಮಾಡೋ ಎಚ್ಚರಿಕೆ ನೀಡಿದ್ದ ವಕೀಲರು 3 ಗಂಟೆ ಧಾರವಾಡ ಜುಬ್ಲಿ ವೃತ್ತದಲ್ಲಿ ರಸ್ತೆ ತಡೆ ಮಾಡಿದ್ದರು. ಈ ಹಿನ್ನೆಲೆ ಧಾರವಾಡ ಉಪನಗರ ಠಾಣೆಯ ಪೊಲೀಸರು ಈಗ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಪಾದರಕ್ಷೆ ಕಾರ್ಖಾನೆಯಲ್ಲಿ ಅಗ್ನಿ ಅವಘಡ- ಇಬ್ಬರ ದುರ್ಮರಣ

    Live Tv
    [brid partner=56869869 player=32851 video=960834 autoplay=true]

  • ಶಾಸಕ ಬೆಲ್ಲದ್‌ ಹೆಸರಿನಲ್ಲಿ ಡೆತ್‌ನೋಟ್‌ ಬರೆದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

    ಶಾಸಕ ಬೆಲ್ಲದ್‌ ಹೆಸರಿನಲ್ಲಿ ಡೆತ್‌ನೋಟ್‌ ಬರೆದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

    ಧಾರವಾಡ: ಶಾಸಕ ಅರವಿಂದ ಬೆಲ್ಲದ್‌(Arvind Bellad) ಹೆಸರಲ್ಲಿ ಡೆತನೋಟ್(Death Note) ಬರೆದು ಮಹಿಳೆಯೋರ್ವಳು ಆತ್ಮಹತ್ಯೆಗೆ(Suicide) ಯತ್ನಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ಶಕುಂತಲಾ ಮನಸೂರ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಚಿಕಿತ್ಸೆಗೆಗಾಗಿ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ.

    ಕಳೆದ 20 ವರ್ಷಗಳಿಂದ ಶಕುಂತಲಾ ಕರ್ನಾಟಕ ಮಹರ್ಷಿ ವಾಲ್ಮಿಕಿ ಪಂಗಡದಲ್ಲಿ ಕಿರಿಯ ಸಹಾಯಕಿಯಾಗಿ ಕೆಲಸ ಮಾಡುತಿದ್ದಳು. ಅಧಿಕಾರಿ ರವಿ ಬೆಂತೂರ ನಿರ್ದೇಶಕರಾಗಿ ಬಂದ ಮೇಲೆ ಈಕೆಯ ಮೇಲೆ ಲಂಚ‌(Corruption) ಪಡೆದ ಆರೋಪ ಮಾಡಿ ನಾಲ್ಕು ತಿಂಗಳ‌ ಹಿಂದೆ ಕೆಲಸದಿಂದ ತೆಗೆದಿದ್ದರು. ಇದನ್ನೂ ಓದಿ: ನನ್ನ ಭಾಗವಹಿಸುವಿಕೆ ಬಯಸಿದ್ರೆ ರಾಜಕೀಯಕ್ಕೆ ಬರುವೆ – ಕಂಗನಾ ಬಿಗ್ ಸ್ಟೇಟ್‌ಮೆಂಟ್

    ಶನಿವಾರ ಸಚಿವ ಶ್ರೀರಾಮುಲು ಧಾರವಾಡಕ್ಕೆ ಬಂದಾಗ ಮನವಿ ಕೊಡಲು ಶಕುಂತಲಾ ಬಂದಿದ್ದಳು. ಶ್ರೀರಾಮುಲು ಸಿಗದೇ ಇದ್ದಾಗ ಧಾರವಾಡ ಶಾಸಕ ಅರವಿಂದ ಬೆಲ್ಲದ್‌ ಬಳಿ ಮನವಿ ಕೊಡಲು ಹೋಗಿದ್ದಳು.

    ಈ ವೇಳೆ ಶಾಸಕರು ನನಗೆ ಅಪಮಾನ ಮಾಡಿದ್ದಾರೆ. ಲಂಚ ಪಡೆದಿದ್ದೆನೆ ಎಂದು ಶಾಸಕರೇ ನನ್ನನ್ನು ಕೆಲಸದಿಂದ ತೆಗೆಸಿದ್ದಾರೆ ಎಂದು ಆರೋಪ ಮಾಡಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ. ಜನರು ಇದ್ದಾಗ ಲಂಚ‌ ತೆಗೆದುಕೊಂಡಿದ್ದಿಯಾ ಎಂದು ಶಾಸಕರು ನನಗೆ ಅಪಮಾನ ಮಾಡಿದ್ದಾರೆ. ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ ಎಂದು ದೂರಿದ್ದಾಳೆ.

    ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯ ಆರೋಗ್ಯ ಸ್ವಲ್ಪ ಚೇತರಿಕೆ ಕಂಡಿದ್ದು ಚಿಕಿತ್ಸೆ ಮುಂದುವರೆದಿದೆ.

    Live Tv
    [brid partner=56869869 player=32851 video=960834 autoplay=true]

  • ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಖಚಿತ – ಬಿಜೆಪಿಯಿಂದಲ್ಲ: ಮುತಾಲಿಕ್

    ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಖಚಿತ – ಬಿಜೆಪಿಯಿಂದಲ್ಲ: ಮುತಾಲಿಕ್

    ಧಾರವಾಡ: ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ (Karnataka Vidhan Sabha Election) ಸ್ಪರ್ಧಿಸಲು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಸಜ್ಜಾಗಿದ್ದಾರೆ. ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದು ಖಚಿತ. ಬಿಜೆಪಿಯವರು (BJP) ಟಿಕೆಟ್ ಕೊಡಲು ಬಂದರೂ ನಾನು ಪಡೆದುಕೊಳ್ಳುವುದಿಲ್ಲ. ಸ್ವತಂತ್ರನಾಗಿ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ.

    ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಏಳೆಂಟು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವುದಕ್ಕಾಗಿ ಹಿಂದೂ ಕಾರ್ಯಕರ್ತರು ಮನವಿ ಮಾಡಿದ್ದು, ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂಬುದನ್ನು ಶೀಘ್ರವೇ ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಜನಪ್ರತಿನಿಧಿಯಾಗುವವರೆಗೂ ಗುದ್ದಲಿ ಹಿಡಿಯಲ್ಲ- ನಿಖಿಲ್ ಕುಮಾರಸ್ವಾಮಿ ಶಪಥ

    ಬೆಳಗಾವಿ ನಗರದ ಎರಡೂ ಕ್ಷೇತ್ರ, ತೇರದಾಳ, ಜಮಖಂಡಿ, ಕಾರ್ಕಳ, ಉಡುಪಿ, ಶೃಂಗೇರಿ, ಪುತ್ತೂರಿನಿಂದ ಸ್ಪರ್ಧೆ ಮಾಡುವುದಕ್ಕಾಗಿ ಕಾರ್ಯಕರ್ತರು ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರು ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಬರುವ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದು ಖಚಿತ. ಯಾವ ಕ್ಷೇತ್ರ ಎನ್ನುವುದನ್ನು ಶೀಘ್ರ ಬಹಿರಂಗಪಡಿಸುತ್ತೇವೆ. ಬಿಜೆಪಿಯಿಂದ ನನಗೆ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆಯಲಿಲ್ಲ. 2014ರಿಂದಲೂ ನಾನು ಬಿಜೆಪಿ ಮೇಲೆ ಆಸೆ ಇಟ್ಟಿದ್ದೆ. ಆದರೆ, ಅವರು ಸಕಾರಾತ್ಮಕವಾಗಿ ಸ್ಪಂದನೆ ನೀಡಲಿಲ್ಲ. ಇನ್ನು ಮೇಲೆ ಬಿಜೆಪಿಯವರು ಟಿಕೆಟ್ ಕೊಡಲು ಬಂದರೂ ನಾನು ಪಡೆದುಕೊಳ್ಳುವುದಿಲ್ಲ. ಸ್ವತಂತ್ರನಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ತೊಲಗಿಸಬೇಕು ಎಂಬುದೇ ಬಿಜೆಪಿಯವರ ಸಂಕಲ್ಪ: ಸಿದ್ದರಾಮಯ್ಯ

    bjp - congress

    ಹಿಂದೂ ಕಾರ್ಯಕರ್ತರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ನೋಡಿ ಈ ತೀರ್ಮಾನಕ್ಕೆ ಬಂದಿದ್ದೇನೆ. ಕಾರ್ಯಕರ್ತರ ಆಸೆಯೂ ಇದೇ ಆಗಿದೆ. ನಾನು ಕಟ್ಟರ್ ಹಿಂದೂ ಆಗಿರುವುದರಿಂದ ಕಾಂಗ್ರೆಸ್ (Congress), ಜೆಡಿಎಸ್‍ನವರು (JDS) ನನಗೆ ಟಿಕೆಟ್ ಕೊಡುವ ಪ್ರಶ್ನೆಯೇ ಇಲ್ಲ. ನಾನು ಪಕ್ಷವನ್ನೂ ಕಟ್ಟುವುದಿಲ್ಲ. ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ನಾನು ಹಿಂದೂ ತತ್ವ ಸಿದ್ಧಾಂತದ ಮೇಲೆ ಇರುವ ಬಿಜೆಪಿಗೆ ಬೆಂಬಲ ಸೂಚಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೋಟಿ ಕಂಠ ಗಾಯನದಲ್ಲಿ ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ಪ್ರಹ್ಲಾದ್‌ ಜೋಶಿ

    ಕೋಟಿ ಕಂಠ ಗಾಯನದಲ್ಲಿ ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ಪ್ರಹ್ಲಾದ್‌ ಜೋಶಿ

    ಧಾರವಾಡ: ಅರವತ್ತೇಳನೇ ಕನ್ನಡ ರಾಜ್ಯೋತ್ಸವದ(Kannada Rajyotsava) ಅಂಗವಾಗಿ ಹಮ್ಮಿಕೊಂಡಿರುವ ಕೋಟಿ ಕಂಠ ಕನ್ನಡ ಗಾಯನದಲ್ಲಿ ಕೇಂದ್ರ ಸಂಸದೀಯ ಮತ್ತು ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ(Pralhad Joshi) ಕುಣಿದು ಸಂಭ್ರಮಿಸಿದರು. ಕನ್ನಡದ ಕಂಪನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಈ ವಿಶೇಷ ಕಾರ್ಯಕ್ರಮವನ್ನು ಸರ್ಕಾರ ಆಯೋಜಿಸಿದ್ದು, ಜಗತ್ತಿನ ಮೂಲೆ ಮೂಲೆಗಳಲ್ಲಿ ಏಕಕಾಲಕ್ಕೆ ಕನ್ನಡದ ಗಾನ ಮೊಳಗಿಸಿದ್ದಕ್ಕೆ ಕೇಂದ್ರ ಸಚಿವ ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದರು.‌

    ಕರ್ನಾಟಕ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಅನೇಕ ಕಡೆಗಳಲ್ಲಿ ಹಮ್ಮಿಕೊಂಡಿರುವ “ಕೋಟಿ ಕಂಠ ಗಾಯನ” ವಿಶೇಷ ಕಾರ್ಯಕ್ರಮಗಳಲ್ಲಿ ಧಾರವಾಡದಿಂದ ಪ್ರಹ್ಲಾದ್‌ ಜೋಶಿ ಅವರು ಪಾಲ್ಹೊಂಡಿದ್ದರು. ಸಾವಿರಾರು ಯುವ ಕನ್ನಡಿಗ ಮಿತ್ರರೊಂದಿಗೆ ಕ‌ನ್ನಡ ಹಾಡಿಗೆ ಜೋಶಿ ಅವರು ಹೆಜ್ಜೆ ಹಾಕಿದರು. ಈ ಮೂಲಕ ಕನ್ನಡದ ಕಂಪನ್ನ ಹೆಚ್ಚು ಪಸರಿಸುವ ನಿಟ್ಟಿಲ್ಲಿ ಉತ್ಸುಕರಾಗಿದ್ದ ಯುವಕರಿಗೆ ಪ್ರೇರಣೆ ನೀಡಿದರು. ಇದನ್ನೂ ಓದಿ: 67ನೇ ಕನ್ನಡ ರಾಜ್ಯೋತ್ಸವ – ಸುವರ್ಣ ಸೌಧದಲ್ಲಿ ಕೋಟಿ ಕಂಠ ಗಾಯನ

    ಕನ್ನಡ ನಾಡು ನುಡಿಯ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಇದೇ ವೇಳೆ ಸಂದೇಶ ನೀಡಿದ ಕೇಂದ್ರ ಸಚಿವರು ಎಲ್ಲರೂ ಒಟ್ಟಾಗಿ ಕನ್ನಡ ಗಾಯನ ಪ್ರದರ್ಶನ ಮಾಡುವಂತೆ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನೀಲ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ‌

    Live Tv
    [brid partner=56869869 player=32851 video=960834 autoplay=true]